ಫೆಬ್ರವರಿ 2023 ರಲ್ಲಿ ಟಾಟಾ ನೆಕ್ಸಾನ್‌ನಿಂದ ಸೆಗ್ಮೆಂಟ್ ಕಿರೀಟ ಮತ್ತೆ ಕಸಿದುಕೊಂಡ ಮಾರುತಿ ಬ್ರೆಝಾ
ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ರೆನಾಲ್ಟ್ ಕೈಗರ್ ಜನವರಿಯಲ್ಲಿ ಸುಧಾರಿತ ಮಾರಾಟವನ್ನು ದಾಖಲಿಸಿದರೆ ಇತರ ಸಬ್‌ಕಾಪ್ಯಾಂಕ್ಟ್ ಎಸ್‌ಯುವಿಗಳು ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡವು
ಮಾರುತಿ ಅಂತಿಮವಾಗಿ ಫೆಬ್ರವರಿ 2023 ರಲ್ಲಿ ಸಬ್-4m ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ್ದು, ಟಾಟಾ ನೆಕ್ಸಾನ್ ನಂತರದ ಸ್ಥಾನದಲ್ಲಿದೆ. ಹೆಚ್ಚಿನ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಗಳು ತಮ್ಮ ಮಾರಾಟದಲ್ಲಿ ಹಿಂದಿನ ತಿಂಗಳಿಗಿಂತ ಕುಸಿತ ಕಂಡರೂ, ರೆನಾಲ್ಟ್ ಕೈಗರ್ ತಿಂಗಳಿನಿಂದ ತಿಂಗಳ (MoM) ಅಂಕಿಅಂಶಗಳಲ್ಲಿ ಏರಿಕೆಯನ್ನು ಕಂಡಿದೆ.
ಫೆಬ್ರವರಿ 2023 ರಲ್ಲಿ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಮಾರಾಟ ವಿವರ ಇಲ್ಲಿದೆ:
|
ಫೆಬ್ರವರಿ 2023 |
ಜನವರಿ 2023 |
MoM ಬೆಳವಣಿಗೆ |
ಮಾರುಕಟ್ಟೆ ಪಾಲು ಪ್ರಸ್ತುತ(%) |
ಮಾರುಕಟ್ಟೆ ಪಾಲು (% ಕಳೆದ ವರ್ಷ) |
YoY ಮಾರುಕಟ್ಟೆ ಪಾಲು (%) |
ಸರಾಸರಿ ಮಾರಾಟ (6 ತಿಂಗಳುಗಳು) |
ಮಾರುತಿ ಬ್ರೆಝಾ |
15787 |
14359 |
9.94 |
27.53 |
18.85 |
8.68 |
12910 |
ಟಾಟಾ ನೆಕ್ಸಾನ್ |
13914 |
15567 |
-10.61 |
24.27 |
24.97 |
-0.7 |
14477 |
ಹ್ಯುಂಡೈ ವೆನ್ಯು |
9997 |
10738 |
-6.9 |
17.43 |
20.8 |
-3.37 |
10270 |
ಕಿಯಾ ಸೊನೆಟ್ |
9836 |
9261 |
6.2 |
17.15 |
12.53 |
4.62 |
7935 |
ಮಹೀಂದ್ರಾ XUV300 |
3809 |
5390 |
-29.33 |
6.64 |
9.19 |
-2.55 |
5471 |
ನಿಸಾನ್ ಮ್ಯಾಗ್ನೈಟ್ |
2184 |
2803 |
-22.08 |
3.8 |
4.19 |
-0.39 |
2717 |
ರೆನಾಲ್ಟ್ ಕೈಗರ್ |
1802 |
1153 |
56.28 |
3.14 |
4.57 |
-1.43 |
2231 |
ಮುಖ್ಯಾಂಶಗಳು
-
ಈ ವಿಭಾಗದಲ್ಲಿ ಅತ್ಯುತ್ತಮ ಮಾರಾಟ ಕಂಡಿರುವ ಮಾರುತಿ ಬ್ರೆಝಾ ಫೆಬ್ರವರಿಯಲ್ಲಿ ಸುಮಾರು 10 ಪ್ರತಿಶತದಷ್ಟು MoM ಬೆಳವಣಿಗೆಯೊಂದಿಗೆ 15000 ಕ್ಕೂ ಹೆಚ್ಚು ಖರೀದಿದಾರರನ್ನು ಹೊಂದಿರುವ ಏಕೈಕ ಮಾಡೆಲ್ ಆಗಿದೆ.
ಇದನ್ನೂ ಓದಿ: ಪೆಟ್ರೋಲ್ ಮತ್ತು ಡಿಸೇಲ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಮಹೀಂದ್ರಾ XUV400 ಎಷ್ಟು ವೇಗವಾಗಿದೆ ಗೊತ್ತಾ?
-
ಏತನ್ಮಧ್ಯೆ, ಟಾಟಾ ನೆಕ್ಸಾನ್ ಕೇವಲ 10 ಪ್ರತಿಶತದಷ್ಟು ಮಾರಾಟದೊಂದಿಗೆ MoM ಕುಸಿತವನ್ನು ಅನುಭವಿಸುವುದರ ಜೊತೆಗೆ ಈ ಲಿಸ್ಟ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿಯಿತು. ಫೆಬ್ರವರಿ ತಿಂಗಳಲ್ಲಿ ಟಾಟಾ ತನ್ನ ನೆಕ್ಸಾನ್ ಮಾಡೆಲ್‌ಗೆ ಸುಮಾರು 14,000 ಖರೀದಿದಾರರನ್ನು ಪಡೆದಿದೆ.
-
ಅದೇ ರೀತಿ, ಹ್ಯುಂಡೈ ವೆನ್ಯು ಮತ್ತೊಮ್ಮೆ 10,000 ಕ್ಕಿಂತ ಕಡಿಮೆ ಯೂನಿಟ್ ಮಾರಾಟದೊಂದಿಗೆ 6.9 ಪ್ರತಿಶತದಷ್ಟು MoM ಪಡೆದಿದೆ. ಇದು ಪ್ರಸ್ತುತ ಈ ವಿಭಾಗದಲ್ಲಿ 17 ಪ್ರತಿಶತಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ.
ಇದನ್ನೂ ಓದಿ: ಫೆಬ್ರವರಿ 2023 ರಲ್ಲಿ ಮಾರುತಿ ಸುಝುಕಿ ಮಾರಾಟಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದು ಹೇಗೆ ಎಂಬುದರ ಕುರಿತು ತಿಳಿಯಿರಿ
-
ಕಿಯಾ ಸೋನೆಟ್ ಬೇಡಿಕೆಯು ತುಲನಾತ್ಮಕವಾಗಿ ಸ್ಥಿರವಾಗಿದ್ದು ಈ ಫೆಬ್ರವರಿಯಲ್ಲಿ 9,500 ಯೂನಿಟ್‌ಗಳ ಮಾರಾಟವಾಗಿದೆ. ಕಿಯಾ ದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ MoM 6.2 ಪ್ರತಿಶತ ಹೆಚ್ಚಳವನ್ನು ಕಂಡಿದ್ದು ಹ್ಯುಂಡೈನಂತೆಯೇ ಮಾರುಕಟ್ಟೆ ಪಾಲನ್ನು ಹೊಂದಿದೆ.
-
ಮಹೀಂದ್ರಾ XUV300 ಈ ವಿಭಾಗದ ಐದನೇ ಹೆಚ್ಚು ಮಾರಾಟವಾದ ಮಾಡೆಲ್ ಆಗಿದ್ದರೂ ಇದು MoM ಮಾರಾಟದಲ್ಲಿ 29.33 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಇದು ಕಳೆದ ತಿಂಗಳು 3,800 ಯೂನಿಟ್ ಮಾರಾಟಕ್ಕೆ ಸಾಕ್ಷಿಯಾಗಿದೆ.
-
ಈ ನಿಸಾನ್ ಮ್ಯಾಗ್ನೈಟ್ ಸಹ MoM ಮಾರಾಟದಲ್ಲಿ ಕುಸಿತವನ್ನು ಕಂಡಿದ್ದು, ಫೆಬ್ರವರಿಯಲ್ಲಿ ಕೇವಲ 2,184 ಯೂನಿಟ್ ಮಾರಾಟವಾಗುವುದರೊಂದಿಗೆ 22.08 ಪ್ರತಿಶತದಷ್ಟು ಕುಸಿಯಿತು.
-
ರೆನಾಲ್ಟ್ ಕೈಗರ್ MoM ಮಾರಾಟದಲ್ಲಿ 56.28 ಪ್ರತಿಶತದಷ್ಟು ಏರಿಕೆಯನ್ನು ಕಂಡಿದ್ದರೂ, ಫೆಬ್ರವರಿಯಲ್ಲಿ ಈ ವಿಭಾಗದಲ್ಲಿ ಅತ್ಯಂತ ಕಡಿಮೆಯಾದ ಕೇವಲ 1,800 ಖರೀದಿದಾರರನ್ನು ಹೊಂದಿದೆ.
ಇನ್ನಷ್ಟು ಇಲ್ಲಿ ಓದಿ : ಮಾರುತಿ ಬ್ರೆಝಾ ಆನ್ ರೋಡ್ ಬೆಲೆ