• English
  • Login / Register

ಬಿಡುಗಡೆಗೆ ಮುಂಚಿತವಾಗಿಯೇ Maruti e Vitaraದ ಮತ್ತೊಂದು ಟೀಸರ್‌ ಔಟ್‌

ಮಾರುತಿ ಇ vitara ಗಾಗಿ shreyash ಮೂಲಕ ಜನವರಿ 04, 2025 07:01 am ರಂದು ಪ್ರಕಟಿಸಲಾಗಿದೆ

  • 7 Views
  • ಕಾಮೆಂಟ್‌ ಅನ್ನು ಬರೆಯಿರಿ

ಇತ್ತೀಚಿನ ಟೀಸರ್ ನಮಗೆ ಅದರ ಮುಂಭಾಗ ಮತ್ತು ಹಿಂಭಾಗದ ಎಲ್ಇಡಿ ಲೈಟಿಂಗ್ ಸೆಟಪ್‌ನ ಒಂದು ನೋಟವನ್ನು ನೀಡುತ್ತದೆ, ಇದರೊಂದಿಗೆ ನಾವು ಅದರ ಸೆಂಟರ್ ಕನ್ಸೋಲ್‌ನ ಒಂದು ನೋಟವನ್ನು ಸಹ  ಪಡೆದುಕೊಂಡಿದ್ದೇವೆ

Maruti e Vitara Teased Again Ahead Of Auto Expo 2025 Debut

  • ಭಾರತದಲ್ಲಿ ಇ ವಿಟಾರಾವು ಮಾರುತಿಯ ಮೊದಲ EV ಆಗಿರುತ್ತದೆ.

  • ಇ ವಿಟಾರಾವು ಮಾರುತಿಯ ಹೊಸ ಹಾರ್ಟೆಕ್ಟ್-ಇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಇದನ್ನು ವಿಶೇಷವಾಗಿ ಇವಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

  • ಜಾಗತಿಕವಾಗಿ, ಸುಜುಕಿ ಇ ವಿಟಾರಾವನ್ನು 49 ಕಿ.ವ್ಯಾಟ್‌ ಮತ್ತು 61 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

  • ಭಾರತದಲ್ಲಿ ಇದು ಫ್ರಂಟ್-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಆವೃತ್ತಿಗಳನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

  • ಅನಾವರಣಗೊಂಡ ನಂತರ ಶೀಘ್ರದಲ್ಲೇ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ, ಇದರ ಬೆಲೆ ರೂ 22 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು. 

ಭಾರತ-ಸ್ಪೆಕ್ ಮಾರುತಿ ಇ ವಿಟಾರಾದ ಉತ್ಪಾದನೆ-ಸಿದ್ಧ ಆವೃತ್ತಿಯು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಪ್ರದರ್ಶನವಾಗಲು ಸಿದ್ಧವಾಗಿದೆ. ಎಕ್ಸ್‌ಪೋದಲ್ಲಿ ಅದರ ಪ್ರದರ್ಶನದ ಮುಂಚಿತವಾಗಿ ಮಾರುತಿ ತನ್ನ ಎಲೆಕ್ಟ್ರಿಕ್ ಎಸ್‌ಯುವಿಯ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಇದು ನಮಗೆ ಅದರ ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ನ ವಿನ್ಯಾಸದ ಒಂದು ನೋಟವನ್ನು ನೀಡುತ್ತದೆ. ಇ ವಿಟಾರಾ ಭಾರತದ ನಂ. 1 ಕಾರು ಉತ್ಪಾದನಾ ಕಂಪೆನಿಯಾದ ಮಾರುತಿಯ ಕಾರುಗಳ ಪಟ್ಟಿಯಲ್ಲಿ ಮೊದಲ EV ಆಗಿರುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು ಮತ್ತು ಇದು ವಿಶೇಷವಾಗಿ EVಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ಹೊಸ ಹಾರ್ಟೆಕ್ಟ್-ಇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಟೀಸರ್‌ನಲ್ಲಿ ಏನಿದೆ?

Maruti e Vitara Teased Again Ahead Of Auto Expo 2025 Debut

ಟೀಸರ್ ನಮಗೆ ಅದರ ಎಕ್ಸ್‌ಟೀರಿಯರ್‌ ವಿನ್ಯಾಸದ ಒಂದು ನೋಟವನ್ನು ನೀಡುತ್ತದೆ, ಮುಂಭಾಗದಲ್ಲಿ Y-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳನ್ನು ಪ್ರದರ್ಶಿಸುತ್ತದೆ ಮತ್ತು ಹಿಂಭಾಗದಲ್ಲಿ 3-ಪೀಸ್ ಲೈಟಿಂಗ್ ಅಂಶಗಳೊಂದಿಗೆ ಎಲ್ಇಡಿ ಟೈಲ್ ಲೈಟ್‌ಗಳನ್ನು ಸಂಪರ್ಕಿಸಲಾಗಿದೆ. ಸ್ಪಷ್ಟವಾಗಿ ಗೋಚರಿಸದಿದ್ದರೂ, ಟೀಸರ್ ಇದು ದಪ್ಪನಾದ ಮುಂಭಾಗದ ಬಂಪರ್ ಅನ್ನು ಹೊಂದಿದೆ ಎಂದು ಸೂಚಿಸುತ್ತದೆ. ಅದು ಫಾಗ್‌ ಲ್ಯಾಂಪ್‌ಗಳನ್ನು ಸಹ ಸಂಯೋಜಿಸುತ್ತದೆ.

ಇತ್ತೀಚಿನ ಟೀಸರ್‌ನಲ್ಲಿ ನಾವು ಇ-ವಿಟಾರಾ ಕ್ಯಾಬಿನ್‌ನ ಒಂದು ನೋಟವನ್ನು ಪಡೆದುಕೊಂಡಿದ್ದೇವೆ, ಇದು ವಿಭಿನ್ನ ಭೂಪ್ರದೇಶದ ಮೋಡ್‌ಗಳಿಗೆ ರೋಟರಿ ಡಯಲ್ ಕಂಟ್ರೋಲ್‌ ಅನ್ನು ಒಳಗೊಂಡಿರುವ ಲೋವರ್‌-ಸೆಂಟರ್‌ ಕನ್ಸೋಲ್ ಅನ್ನು ತೋರಿಸುತ್ತದೆ (ಇಲ್ಲಿ ಸಂಕ್ಷಿಪ್ತವಾಗಿ ಕಂಡುಬರುವ 'ಸ್ನೋ' ಮೋಡ್‌ನಿಂದ ಸ್ಪಷ್ಟವಾಗಿದೆ), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗಾಗಿ ಬಟನ್ ಸಹ ಇದೆ. ಇದು ಇ-ವಿಟಾರಾದ ಜಾಗತಿಕ-ಸ್ಪೆಕ್ ಆವೃತ್ತಿಯಲ್ಲಿ ಕಂಡುಬರುವಂತೆಯೇ ಕಾಣುತ್ತದೆ.

 ಇದನ್ನೂ ಓದಿ: Hyundai Creta ಇವಿ ಬುಕಿಂಗ್‌ಗಳು ಪ್ರಾರಂಭ, ವೇರಿಯೆಂಟ್‌-ವಾರು ಪವರ್‌ಟ್ರೇನ್ ಮತ್ತು ಬಣ್ಣ ಆಯ್ಕೆಗಳು ವಿವರ

ಕ್ಯಾಬಿನ್ ಮತ್ತು ನಿರೀಕ್ಷಿತ ಫೀಚರ್‌ಗಳು

Maruti eVX Revealed Globally As The Suzuki e Vitara, India Launch Soon

ಮಾರುತಿ ಇನ್ನೂ ಇ ವಿಟಾರಾದ ಒಳಭಾಗವನ್ನು ಸ್ಪಷ್ಟವಾಗಿ ಬಹಿರಂಗಪಡಿಸದಿದ್ದರೂ, ಜಾಗತಿಕ-ಸ್ಪೆಕ್ ಸುಜುಕಿ ಮೊಡೆಲ್‌ ಕಪ್ಪು ಮತ್ತು ಕಂದು ಡ್ಯುಯಲ್‌-ಟೋನ್ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಸ್ಟೀರಿಂಗ್ ವೀಲ್ ಹೊಸ 2-ಸ್ಪೋಕ್ ಯುನಿಟ್ ಆಗಿದ್ದು, ಪ್ರೀಮಿಯಂ ನೋಟಕ್ಕಾಗಿ ಎಸಿ ವೆಂಟ್‌ಗಳನ್ನು ಲಂಬವಾಗಿ ಜೋಡಿಸಲಾಗಿದೆ ಮತ್ತು ಕ್ರೋಮ್‌ನಿಂದ ಆವೃತವಾಗಿದೆ. ಕ್ಯಾಬಿನ್‌ನ ಒಳಗಿನ ಪ್ರಮುಖ ಮುಖ್ಯಾಂಶವೆಂದರೆ ಅದರ ಡ್ಯುಯಲ್-ಸ್ಕ್ರೀನ್ ಸೆಟಪ್ (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಡ್ರೈವರ್‌ನ ಡಿಸ್‌ಪ್ಲೇಗಾಗಿ).

ಇದು ಆಟೋಮ್ಯಾಟಿಕ್‌ ಎಸಿ, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳನ್ನು ಪಡೆಯುವ ನಿರೀಕ್ಷೆಯಿದೆ. ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಬಹುದು. ಇತ್ತೀಚಿನ ಕೆಲವು ಸ್ಪೈಶಾಟ್‌ಗಳ ಆಧಾರದ ಮೇಲೆ ಇ ವಿಟಾರಾ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಬರಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಈ ಸುರಕ್ಷತಾ ಫೀಚರ್‌ ಅನ್ನು ಪಡೆದ ಮಾರುತಿ ಸುಜುಕಿಯ ಮೊದಲ ಕಾರು ಇ ವಿಟಾರಾ ಆಗಿರುತ್ತದೆ ಎಂಬುದನ್ನು ಗಮನಿಸಿ.

ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್

ಜಾಗತಿಕವಾಗಿ, ಇ-ವಿಟಾರಾವು 49 ಕಿ.ವ್ಯಾಟ್‌ ಮತ್ತು 61 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ. ವಿಶೇಷಣಗಳು ಈ ಕೆಳಗಿನಂತಿವೆ:

ವೇರಿಯೆಂಟ್‌

FWD (ಫ್ರಂಟ್-ವೀಲ್-ಡ್ರೈವ್)

FWD (ಫ್ರಂಟ್-ವೀಲ್-ಡ್ರೈವ್)

AWD (ಆಲ್-ವೀಲ್-ಡ್ರೈವ್)

ಬ್ಯಾಟರಿ ಪ್ಯಾಕ್‌

49 ಕಿ.ವ್ಯಾಟ್‌

61  ಕಿ.ವ್ಯಾಟ್‌

61  ಕಿ.ವ್ಯಾಟ್‌

ಪವರ್‌

144 ಪಿಎಸ್‌

174 ಪಿಎಸ್‌

184 ಪಿಎಸ್‌

ಟಾರ್ಕ್‌

189 ಎನ್‌ಎಮ್‌

189 ಎನ್‌ಎಮ್‌

300 ಎನ್‌ಎಮ್‌

 ಇದು ವಿದೇಶದಲ್ಲಿ ಎಫ್‌ಡಬ್ಲ್ಯೂಡಿ ಮತ್ತು ಎಡಬ್ಲ್ಯೂಡಿ ಆವೃತ್ತಿಗಳೊಂದಿಗೆ ಬರುತ್ತಿರುವಾಗ, ಮಾರುತಿಯ ಕಾರುಗಳಲ್ಲಿ ಗ್ರ್ಯಾಂಡ್ ವಿಟಾರಾ ಈಗಾಗಲೇ ಎಡಬ್ಲ್ಯೂಡಿ ಅನ್ನು ಒಳಗೊಂಡಿರುವುದರಿಂದ ಎರಡೂ ಆಯ್ಕೆಗಳನ್ನು ಭಾರತದಲ್ಲಿಯೂ ಸಹ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಸುಜುಕಿಯು ಇ ವಿಟಾರಾಗೆ ನಿಖರವಾದ ಡ್ರೈವಿಂಗ್‌ ರೇಂಜ್‌ ಅನ್ನು ಬಹಿರಂಗಪಡಿಸದಿದ್ದರೂ, ಇದು ಸುಮಾರು 550 ಕಿಮೀಗಳಷ್ಟು ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಪ್ರತಿಸ್ಪರ್ಧಿಗಳು ಮತ್ತು ನಿರೀಕ್ಷಿತ ಬೆಲೆ

ಮಾರುತಿ ಇ ವಿಟಾರಾದ ಬೆಲೆಯು ಸುಮಾರು 22 ಲಕ್ಷ ರುಪಾಯಿ (ಎಕ್ಸ್ ಶೋ ರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ಕರ್ವ್‌ ಇವಿ, ಮಹೀಂದ್ರಾ ಬಿಇ 6, ಎಮ್‌ಜಿ ಜೆಡ್‌ಎಸ್‌ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಯೊಂದಿಗೆ ಸ್ಪರ್ಧಿಸಲಿದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Maruti ಇ vitara

explore ಇನ್ನಷ್ಟು on ಮಾರುತಿ ಇ vitara

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience