Hyundai Creta ಇವಿ ಬುಕಿಂಗ್‌ಗಳು ಪ್ರಾರಂಭ, ವೇರಿಯೆಂಟ್-ವಾರು ಪವರ್‌ಟ್ರೇನ್ ಮತ್ತು ಬಣ್ಣ ಆಯ್ಕೆಗಳು ವಿವರ
ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಗಾಗಿ yashika ಮೂಲಕ ಜನವರಿ 03, 2025 10:18 pm ರಂದು ಪ್ರಕಟಿಸಲಾಗಿದೆ
- 14 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈವು ಕ್ರೆಟಾ ಎಲೆಕ್ಟ್ರಿಕ್‌ಗಾಗಿ 25,000 ರೂ.ಗೆ ಬುಕ್ಕಿಂಗ್‌ಗಳನ್ನು ಸ್ವೀಕರಿಸುತ್ತಿದೆ ಮತ್ತು ಅದನ್ನು ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಿದೆ
-
ಕ್ರೆಟಾ ಇವಿಯು ಭಾರತದಲ್ಲಿ ಹ್ಯುಂಡೈನ ಹೊಸ ಮತ್ತು ಅತ್ಯಂತ ಕೈಗೆಟುಕುವ ಇವಿ ಆಗಿರುತ್ತದೆ.
-
ಇದು ಎಕ್ಸಿಕ್ಯುಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ.
-
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ಗೆ 42 ಕಿ.ವ್ಯಾಟ್ ಮತ್ತು ದೊಡ್ಡದಾದ 51.4 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಆಯ್ಕೆಗಳನ್ನು ಒದಗಿಸಲಾಗುತ್ತದೆ, ಇವು 473 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿದೆ.
-
10.25-ಇಂಚಿನ ಟಚ್‌ಸ್ಕ್ರೀನ್, ಪನೋರಮಿಕ್ ಸನ್‌ರೂಫ್ ಮತ್ತು ADAS ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.
-
ಜನವರಿ 17 ರಂದು ಬಿಡುಗಡೆಗೊಳ್ಳಲಿದ್ದು, ಬೆಲೆಗಳು 17 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಬಿಡುಗಡೆಯಾಗಲು ದಿನಗಣನೆ ಪ್ರಾರಂಭವಾಗಿರುವಾಗ, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಹ್ಯುಂಡೈಯ ಭಾರತೀಯ ಕಾರುಗಳ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಇವಿ ಆಗಲು ಸಿದ್ಧವಾಗಿದೆ. ಅದರ ಬೆಲೆ ಬಹಿರಂಗಪಡಿಸುವ ಮೊದಲು, ವಾಹನ ತಯಾರಕರು 25,000 ರೂಪಾಯಿಗಳ ಟೋಕನ್ ಮೊತ್ತಕ್ಕೆ ಸಂಪೂರ್ಣ-ಎಲೆಕ್ಟ್ರಿಕ್ ಕ್ರೆಟಾಗಾಗಿ ಬುಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಕಾರು ತಯಾರಕರು ಇವಿಯ ವೇರಿಯೆಂಟ್‌ವಾರು ಪವರ್‌ಟ್ರೇನ್ ಮತ್ತು ಬಣ್ಣದ ಆಯ್ಕೆಗಳನ್ನು ಸಹ ಬಹಿರಂಗಪಡಿಸಿದ್ದಾರೆ, ಅದನ್ನು ನಾವು ಕೆಳಗೆ ವಿವರವಾಗಿ ವಿವರಿಸಿದ್ದೇವೆ:
ಎಲೆಕ್ಟ್ರಿಕ್ ಪವರ್‌ಟ್ರೈನ್ ಆಯ್ಕೆಗಳು
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಅನ್ನು 42 ಕಿ.ವ್ಯಾಟ್ ಮತ್ತು 51.4 ಕಿ.ವ್ಯಾಟ್ ಪ್ಯಾಕ್‌ಗಳ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ನೀಡಲಾಗುವುದು. ವಿಶೇಷಣಗಳು ಈ ಕೆಳಗಿನಂತಿವೆ:
ವೇರಿಯೆಂಟ್ |
42 ಕಿ.ವ್ಯಾಟ್ |
51.4 ಕಿ.ವ್ಯಾಟ್ |
ಎಕ್ಸ್‌ಕ್ಯೂಟಿವ್ |
✅ |
❌ |
ಸ್ಮಾರ್ಟ್ |
✅ |
❌ |
ಸ್ಮಾರ್ಟ್ (ಒಪ್ಶನಲ್) |
✅ |
✅ |
ಪ್ರೀಮಿಯಂ |
✅ |
❌ |
ಎಕ್ಸ್‌ಲೇನ್ಸ್ |
❌ |
✅ |
ಟಾಪ್-ಸ್ಪೆಕ್ ಎಕ್ಸಲೆನ್ಸ್‌ನಲ್ಲಿ ಚಿಕ್ಕದಾದ 42 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಲಭ್ಯವಿಲ್ಲ, ಇದು ARAI-ರೇಟೆಡ್ 390 ಕಿಮೀ ರೇಂಜ್ ಅನ್ನು ಹೊಂದಿದೆ.
ದೊಡ್ಡದಾದ 51.4 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಮಿಡ್ ಮತ್ತು ಟಾಪ್-ಸ್ಪೆಕ್ ಟ್ರಿಮ್‌ಗಳೊಂದಿಗೆ ಮಾತ್ರ ಲಭ್ಯವಿದೆ. ಇದು 473 ಕಿಮೀಗಳ ARAI- ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿದೆ.
ದಯವಿಟ್ಟು ಗಮನಿಸಿ: ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳ ಬಗ್ಗೆ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಇದನ್ನೂ ಓದಿ: 2025ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಕಾರುಗಳ ವಿವರಗಳು ಇಲ್ಲಿದೆ..
ವೇರಿಯಂಟ್-ವಾರು ಬಣ್ಣ ಆಯ್ಕೆಗಳು
ಕ್ರೆಟಾ ಎಲೆಕ್ಟ್ರಿಕ್ 8 ಮೊನೊಟೋನ್ ಮತ್ತು 3 ಮ್ಯಾಟ್ ಬಣ್ಣಗಳನ್ನು ಒಳಗೊಂಡಂತೆ 2 ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಪ್ರತಿ ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಬಣ್ಣದ ಆಯ್ಕೆ ಇಲ್ಲಿದೆ:
ಕಲರ್ ಆಯ್ಕೆಗಳು |
ಎಕ್ಸ್‌ಕ್ಯೂಟಿವ್ |
ಸ್ಮಾರ್ಟ್ |
ಸ್ಮಾರ್ಟ್(ಒಪ್ಶನಲ್) |
ಪ್ರೀಮಿಯಮ್ |
ಎಕ್ಸಲೆನ್ಸ್ |
ಅಟ್ಲಾಸ್ ವೈಟ್ |
✅ |
✅ |
✅ |
✅ |
✅ |
ಆಬಿಸ್ ಬ್ಲ್ಯಾಕ್ ಪರ್ಲ್ |
❌ |
✅ |
✅ |
✅ |
✅ |
ಫಿಯರಿ ರೆಡ್ ಪರ್ಲ್ |
❌ |
❌ |
✅ |
✅ |
✅ |
ಸ್ಟ್ಯಾರಿ ನೈಟ್ |
❌ |
❌ |
✅ |
✅ |
✅ |
ಓಶಿಯನ್ ಬ್ಲೂ |
❌ |
❌ |
✅ |
✅ |
✅ |
ಓಶಿಯನ್ ಬ್ಲೂ ಮ್ಯಾಟ್ |
❌ |
❌ |
✅ |
✅ |
✅ |
ಟೈಟಾನ್ ಗ್ರೇಮ್ಯಾಟ್ |
❌ |
❌ |
✅ |
✅ |
✅ |
ರೊಬಸ್ಟ್ ಎಮೆರಾಲ್ಡ್ ಮ್ಯಾಟ್ |
❌ |
❌ |
✅ |
✅ |
✅ |
ಬ್ಲ್ಯಾಕ್ ರೂಫ್‌ನೊಂದಿಗೆ ಅಟ್ಲಾಸ್ ವೈಟ್ |
❌ |
❌ |
✅ |
✅ |
✅ |
ಬ್ಲ್ಯಾಕ್ ರೂಫ್‌ನೊಂದಿಗೆ ಒಶಿಯನ್ ಬ್ಲೂ |
❌ |
❌ |
✅ |
✅ |
✅ |
-
ಇದು ಮಿಡ್-ಸ್ಪೆಕ್ ಸ್ಮಾರ್ಟ್ (ಒಪ್ಶನಲ್), ಮತ್ತು ಟಾಪ್-ಸ್ಪೆಕ್ ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಟ್ರಿಮ್‌ಗಳು ಎಲ್ಲಾ ಬಾಡಿ ಕಲರ್ ಆಯ್ಕೆಗಳನ್ನು ನೀಡುತ್ತದೆ.
-
ಲೋವರ್-ಸ್ಪೆಕ್ ಎಕ್ಸಿಕ್ಯುಟಿವ್ ಮತ್ತು ಸ್ಮಾರ್ಟ್ ಟ್ರಿಮ್‌ಗಳು ಎರಡು ಬಣ್ಣ ಆಯ್ಕೆಗಳಲ್ಲಿ ಮಾತ್ರ ಲಭ್ಯವಿರುತ್ತವೆ ಮತ್ತು ಡ್ಯುಯಲ್-ಟೋನ್ ರೂಫ್ ಆಯ್ಕೆಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತವೆ.
ಬಿಡುಗಡೆ ದಿನಾಂಕ, ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಅನ್ನು 2025 ಜನವರಿ 17ರಂದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಬೆಲೆಗಳು 17 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು. ಇದು ಮಹೀಂದ್ರಾ ಬಿಇ 6, ಎಮ್‌ಜಿ ಜೆಡ್‌ಎಸ್ ಇವಿ, ಟಾಟಾ ಕರ್ವ್ ಇವಿ ಮತ್ತು ಮುಂಬರುವ ಮಾರುತಿ ಇ ವಿಟಾರಾಗೆ ಪ್ರತಿಸ್ಪರ್ಧಿಯಾಗಲಿದೆ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ