• English
  • Login / Register

ಮಾರುತಿ ಇವಿಎಕ್ಸ್ ಜಾಗತಿಕವಾಗಿ Suzuki e Vitara ಎಂದು ಅನಾವರಣ, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ

ಮಾರುತಿ ಇವಿಎಕ್ಸ್ ಗಾಗಿ shreyash ಮೂಲಕ ನವೆಂಬರ್ 05, 2024 05:46 pm ರಂದು ಪ್ರಕಟಿಸಲಾಗಿದೆ

  • 77 Views
  • ಕಾಮೆಂಟ್‌ ಅನ್ನು ಬರೆಯಿರಿ

ಸುಜುಕಿ ಇ ವಿಟಾರಾವು 49 ಕಿ.ವ್ಯಾಟ್‌ ಮತ್ತು 61 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, 550 ಕಿ.ಮೀ.ವರೆಗೆ ರೇಂಜ್‌ ಅನ್ನು ನೀಡಬಹುದು

Maruti eVX Revealed Globally As The Suzuki e Vitara, India Launch Soon

  • ಸುಜುಕಿ ಇ ವಿಟಾರಾವು ಮಾರುತಿಯ ಮೊದಲ ಆಲ್-ಎಲೆಕ್ಟ್ರಿಕ್ ಕೊಡುಗೆಯಾಗಿದೆ.

  • ನಯವಾದ ಲೈಟಿಂಗ್‌ ಅಂಶಗಳು ಮತ್ತು ಕಪ್ಪು ಬಣ್ಣದ ಚಕ್ರಗಳೊಂದಿಗೆ ರಗಡ್‌ ಆದ ಬಾಹ್ಯ ವಿನ್ಯಾಸವನ್ನು ಹೊಂದಿದೆ.

  • ಇದು ಫ್ಲೋಟಿಂಗ್ ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್‌ನೊಂದಿಗೆ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ.

  • 2-ವೀಲ್-ಡ್ರೈವ್ (2WD) ಮತ್ತು ಆಲ್‌-ವೀಲ್‌-ಡ್ರೈವ್‌ ಎರಡೂ ಆವೃತ್ತಿಗಳಲ್ಲಿ ಲಭ್ಯವಿದೆ.

  • 2025ರಲ್ಲಿ ಭಾರತದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ.

  • 22 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಬೆಲೆಯನ್ನು ನಿರೀಕ್ಷಿಸಲಾಗಿದೆ.

ಮಾರುತಿ eVX ಪರಿಕಲ್ಪನೆಯನ್ನು ಅನಾವರಣಗೊಳಿಸಿದ ನಂತರ, ಸುಜುಕಿ ಇತ್ತೀಚೆಗೆ ಇಟಲಿಯ ಮಿಲನ್‌ನಲ್ಲಿ ಇ ವಿಟಾರಾ ಎಂಬ ತನ್ನ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಬಹಿರಂಗಪಡಿಸಿತು. ಆಲ್-ಎಲೆಕ್ಟ್ರಿಕ್ ಎಸ್‌ಯುವಿಯನ್ನು 2025 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ ಮತ್ತು ಈ EV ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ, ಹಾಗೆಯೇ ಇದು ನಮ್ಮ ಮಾರುಕಟ್ಟೆಗೆ ಮಾರುತಿ ಸುಜುಕಿಯಿಂದ ಬರುವ ಮೊದಲ EV ಆಗಿರುತ್ತದೆ.

ವಿನ್ಯಾಸ ಮತ್ತು ಆಯಾಮಗಳು

Maruti eVX Revealed Globally As The Suzuki e Vitara, India Launch Soon

ವಿನ್ಯಾಸದ ವಿಷಯದಲ್ಲಿ ಸುಜುಕಿ ಇ ವಿಟಾರಾವು eVX ಪರಿಕಲ್ಪನೆಯನ್ನು ಹೋಲುತ್ತದೆ. ಇದು ನಯವಾದ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು Y-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ, ಜೊತೆಗೆ ದಪ್ಪನಾದ ಬಂಪರ್ ಜೊತೆಗೆ ಫಾಗ್‌ ಲೈಟ್‌ಗಳನ್ನು ಸಂಯೋಜಿಸುತ್ತದೆ. ಸೈಡ್‌ನಿಂದ ಗಮನಿಸುವಾಗ, ದಪ್ಪದಾದ ಬಾಡಿ ಕ್ಲಾಡಿಂಗ್ ಮತ್ತು 19-ಇಂಚಿನ ಸಂಪೂರ್ಣ ಕಪ್ಪಾದ ಅಲಾಯ್‌ ವೀಲ್‌ಗಳಿಂದಾಗಿ (AWD ಆವೃತ್ತಿಗೆ ಸೀಮಿತವಾಗಿದೆ) ಇ ವಿಟಾರಾವು ರಗಡ್‌ ಆಗಿ ಕಾಣುತ್ತದೆ. ಹಿಂಭಾಗದ ಡೋರ್‌ನ ಹ್ಯಾಂಡಲ್‌ಗಳು ಸಿ-ಪಿಲ್ಲರ್‌ನಲ್ಲಿ ಇರಿಸಲ್ಪಟ್ಟಿವೆ.

ಅದರ ಪರಿಕಲ್ಪನೆಯ ಆವೃತ್ತಿಯಲ್ಲಿ ನಾವು ನೋಡಿದಂತೆಯೇ, ಹಿಂಭಾಗದಲ್ಲಿ e ವಿಟಾರಾವು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ ಮತ್ತು 3-ಪೀಸ್ ಲೈಟಿಂಗ್ ಅಂಶಗಳನ್ನು ಹೊಂದಿದೆ. ಇ ವಿಟಾರಾವು ನಾಲ್ಕು ಮೀಟರ್ ಉದ್ದವನ್ನು ಹೊಂದಿದ್ದು ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

ಉದ್ದ

4,275 ಮಿ.ಮೀ

ಅಗಲ

1,800 ಮಿ.ಮೀ

ಎತ್ತರ

1,635 ಮಿ.ಮೀ

ವೀಲ್‌ಬೇಸ್‌

2700 ಮಿ.ಮೀ

ಗ್ರೌಂಡ್‌ ಕ್ಲಿಯರೆನ್ಸ್‌

180 ಮಿ.ಮೀ

ಇದನ್ನೂ ಗಮನಿಸಿ: 2025ರ Honda City ಫೇಸ್‌ಲಿಫ್ಟ್ ಜಾಗತಿಕವಾಗಿ ಅನಾವರಣ: ಭಾರತೀಯ ಮೊಡೆಲ್‌ಗಿಂತ ಇದು ಭಿನ್ನವಾಗಿದೆಯೇ ?

ಲಕ್ಷುರಿಯಾದ ಇಂಟೀರಿಯರ್‌

Maruti eVX Revealed Globally As The Suzuki e Vitara, India Launch Soon

ಇ ವಿಟಾರಾ ಎರಡು-ಟೋನ್ ಕಪ್ಪು ಮತ್ತು ಕಿತ್ತಳೆ ಕ್ಯಾಬಿನ್ ಥೀಮ್ ಅನ್ನು 2-ಸ್ಪೋಕ್ ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಮತ್ತು ಕ್ರೋಮ್‌ನಿಂದ ಸುತ್ತುವರಿದ ಲಂಬವಾಗಿ ಆಧಾರಿತ ಎಸಿ ವೆಂಟ್‌ಗಳನ್ನು ಹೊಂದಿದೆ. ಕ್ಯಾಬಿನ್‌ನ ಒಳಗಿನ ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದು ಅದರ ಸಂಯೋಜಿತ ಫ್ಲೋಟಿಂಗ್ ಸ್ಕ್ರೀನ್ ಸೆಟಪ್ ಆಗಿದೆ (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಡ್ರೈವರ್‌ನ ಡಿಸ್‌ಪ್ಲೇಗಾಗಿ).

ಇ ವಿಟಾರಾನ ವಿವರವಾದ ಫೀಚರ್‌ಗಳ ಪಟ್ಟಿಯನ್ನು ಸುಜುಕಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಇದು ಆಟೋಮ್ಯಾಟಿಕ್‌ ಎಸಿ, ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳನ್ನು ಪಡೆಯುವ ನಿರೀಕ್ಷೆಯಿದೆ. ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿರಬಹುದು.

ಬ್ಯಾಟರಿ ಪ್ಯಾಕ್ ಆಯ್ಕೆಗಳು

ಯುರೋಪಿಯನ್-ಸ್ಪೆಕ್ ಇ ವಿಟಾರಾವು 49 ಕಿ.ವ್ಯಾಟ್‌ ಮತ್ತು 61 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಅವುಗಳ ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಬ್ಯಾಟರಿ ಪ್ಯಾಕ್‌

49 ಕಿ.ವ್ಯಾಟ್‌

61 ಕಿ.ವ್ಯಾಟ್‌

ಪವರ್‌

144 ಪಿಎಸ್‌

174 ಪಿಎಸ್‌

184 ಪಿಎಸ್‌

ಟಾರ್ಕ್‌

189 ಎನ್‌ಎಮ್‌

189 ಎನ್‌ಎಮ್‌

300 ಎನ್‌ಎಮ್‌

ಡ್ರೈವ್‌ ಟೈಪ್‌

2-ವೀಲ್ ಡ್ರೈವ್ (2WD)

2-ವೀಲ್ ಡ್ರೈವ್ (2WD)

ಆಲ್-ವೀಲ್-ಡ್ರೈವ್ (AWD)

ಸುಜುಕಿಯು ಇ ವಿಟಾರಾಕ್ಕಾಗಿ ಕ್ಲೈಮ್ ಮಾಡಲಾದ ರೇಂಜ್‌ಅನ್ನು ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಇದು 550 ಕಿಮೀ ವರೆಗೆ ಇರಬಹುದೆಂದು ನಾವು ನಿರೀಕ್ಷಿಸುತ್ತೇವೆ.

ಭಾರತದಲ್ಲಿನ ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

 ಮಾರುತಿ ಸುಜುಕಿಯು ಇ ವಿಟಾರಾವನ್ನು 2025 ರ ಆರಂಭದಲ್ಲಿ ನಮ್ಮ ಮಾರುಕಟ್ಟೆಗೆ ತರುವ ನಿರೀಕ್ಷೆಯಿದೆ. ಇದರ ಬೆಲೆ 22 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇ ವಿಟಾರಾವು ಎಮ್‌ಜಿ ಜೆಡ್‌ಎಸ್‌ ಇವಿ, ಟಾಟಾ ಕರ್ವ್‌ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಯಂತಹವುಗಳನ್ನು ಎದುರಿಸಲಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಇವಿಎಕ್ಸ್

Read Full News

explore ಇನ್ನಷ್ಟು on ಮಾರುತಿ ಇವಿಎಕ್ಸ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience