ಮಾರುತಿ ಜಿಮ್ನಿ 5-ಡೋರ್ ಮತ್ತು ಫ್ರಾಂಕ್ಸ್ ಎಸ್ ಯುವಿಗಳ ಆರ್ಡರ್ ಬುಕಿಂಗ್ ಈಗ ಆರಂಭ
ಮಾರುತಿ ಜಿಮ್ನಿ ಗಾಗಿ rohit ಮೂಲಕ ಜನವರಿ 13, 2023 06:29 pm ರಂದು ಮಾರ್ಪಡಿಸಲಾಗಿದೆ
- 57 Views
- ಕಾಮೆಂಟ್ ಅನ್ನು ಬರೆಯಿರಿ
ಎರಡೂ ಎಸ್‌ಯುವಿಗಳು 2023 ರ ಆಟೋ ಎಕ್ಸ್‌ಪೋನಲ್ಲಿ ಪ್ರದರ್ಶನಗೊಂಡಿದ್ದು ಮಾರುತಿಯ ನೆಕ್ಸಾ ಔಟ್‌ಲೆಟ್‌ಗಳಲ್ಲಿ ಲಭ್ಯ
- ಮಾರುತಿಯು ಬಲೆನೋ-ಆಧಾರಿತ ಎಸ್‌ಯುವಿಯನ್ನು ‘ಫ್ರಾಂಕ್ಸ್’ ಎಂದು ನಾಮಕರಣ ಮಾಡಿದೆ.
- ಇಂಡಿಯಾ-ಸ್ಪೆಕ್ ಜಿಮ್ನಿ ತನ್ನ ಅಂತರಾಷ್ಟ್ರೀಯ ಪ್ರತಿರೂಪಕ್ಕಿಂತ ಎರಡು ಹೆಚ್ಚುವರಿ ಡೋರ್‌ಗಳನ್ನು ಮತ್ತು ಉದ್ದವಾದ ವ್ಹೀಲ್‌ಬೇಸ್‌ಗಳನ್ನು ಹೊಂದಿದೆ.
- ಫ್ರಾಂಕ್ಸ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಮಾರುತಿಯ ಸ್ಥಿರತೆಗೆ ಪುನಃ ತರುತ್ತದೆ, ಅಂತೆಯೇ ಜಿಮ್ನಿ 4WD ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ.
- ಎರಡೂ ಎಸ್‌ಯುವಿಗಳು ಏಪ್ರಿಲ್ 2023 ರಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
- ಎರಡೂ ಮಾಡೆಲ್‌ಗಳ ನಿರೀಕ್ಷಿತ ಬೆಲೆಗಳು ಕ್ರಮವಾಗಿ ರೂ. 10 ಲಕ್ಷಗಳು ಮತ್ತು ರೂ. 8 ಲಕ್ಷಗಳು (ಎಕ್ಸ್-ಶೋರೂಮ್).
ಮಾರುತಿಯು 2023 ಆಟೋ ಎಕ್ಸ್‌ಪೋ ಅನ್ನು ತನ್ನ ಎರಡು ನಿರೀಕ್ಷಿತ ಎಸ್‌ಯುವಿಗಳನ್ನು ಪ್ರದರ್ಶಿಸಲು ಬಳಸಿಕೊಂಡಿದೆ, ಅವುಗಳೆಂದರೆ., ಜಿಮ್ನಿ 5-ಡೋರ್ ಮತ್ತು ಫ್ರಾಂಕ್ಸ್. ಎರಡೂ ಮಾಡೆಲ್‌ಗಳನ್ನು ಈಗ ರೂ. 11.000 ಗಳಿಗೆ ಕಾಯ್ದಿರಿಸಬಹುದಾಗಿದೆ ಮತ್ತು ಅವುಗಳನ್ನು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಒಂದೇ ಆದರೆ ವಿಭಿನ್ನ
ಉದ್ದವಾದ ಜಿಮ್ನಿ ತನ್ನ ಥ್ರೀ-ಡೋರ್ ಆವೃತ್ತಿಯಿಂದ ಹೆಚ್ಚಿನ ವಿನ್ಯಾಸದ ಎಲಿಮೆಂಟ್‌ಗಳನ್ನು ಜಾಗತಿಕವಾಗಿ ಮಾರಾಟ ಮಾಡಿದ್ದರೂ, ಹೆಚ್ಚುವರಿ ಎರಡು ಡೋರ್‌ಗಳು, ಉದ್ದವಾದ ವ್ಙೀಲ್ ಬೇಸ್ ಮತ್ತು ಕ್ವಾರ್ಟರ್ ರಿಯರ್ ಗ್ಲಾಸ್ ಪ್ಯಾನಲ್‌ಗಳನ್ನು ಪಡೆದಿದೆ. ಮತ್ತೊಂದೆಡೆ ಫ್ರಾಂಕ್ಸ್ ಎಸ್‌ಯುವಿತನದೊಂದಿಗೆ ಗ್ರ್ಯಾಂಡ್ ವಿಟಾರಾದ ಬಲೆನೋದ ಪ್ರಮಾಣದೊಂದಿಗೆ ಸಂಯೋಜಿಸಲ್ಪಟ್ಟಿದೆ.
ಎರಡೂ ಎಸ್‌ಯುವಿಗಳ ಇಂಟೀರಿಯರ್‌ಗಳು ಅವುಗಳ ಮಾಡೆಲ್ ವಿನ್ಯಾಸದ ಎಸ್‌ಯುವಿಯಿಂದ ಎರವಲು ಪಡೆದಿವೆ. ಇಂಡಿಯನ್ ಜಿಮ್ನಿಯು, ಹೊಸ ಒಂಬತ್ತು ಇಂಚಿನ ಸೆಂಟ್ರಲ್ ಡಿಸ್‌ಪ್ಲೇ ಜೊತೆಗೆ ಜಾಗತಿಕವಾಗಿ ಮಾರಾಟವಾದ ಥ್ರೀ-ಡೋರ್ ಆವೃತ್ತಿಯಲ್ಲಿನ ವಿನ್ಯಾಸದಂತಹ ಕ್ಯಾಬಿನ್ ಅನ್ನು ಪಡೆದಿದೆ. ಏತನ್ಮಧ್ಯೆ, ಪ್ರಾಂಕ್ಸ್ ಗ್ರ್ಯಾಂಡ್ ವಿಟಾರಾದ ಡ್ಯುಯಲ್ ಟೋನ್ ಬ್ಲ್ಯಾಕ್ ಮತ್ತು ಮರೂನ್ ಥೀಮ್‌ನಲ್ಲಿ ಬಲೆನೋದ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ.
ಆಫರ್‌ನಲ್ಲಿವೆ ಪವರ್‌ಟ್ರೇನ್‌ಗಳು
ಆಫರ್‌ನಲ್ಲಿರುವ ಮಾಡೆಲ್‌ವಾರು ಪವರ್‌ಟ್ರೇನ್ ಆಯ್ಕೆಗಳ ನೋಟ ಇಲ್ಲಿದೆ:
ಜಿಮ್ನಿ
Specifications |
1.5-litre Petrol Engine |
Power |
105PS |
Torque |
134.2Nm |
Transmission |
5-speed MT, 4-speed AT |
Drivetrain |
4WD |
ಮಾರುತಿಯ ಇಂಡಿಯಾ-ಸ್ಪೆಕ್ ಜಿಮ್ನಿಯನ್ನು ಫೋರ್-ವ್ಹೀಲ್ ಡ್ರೈವ್‌ಟ್ರೇನ್ (4WD) ನೊಂದಿಗೆ ಪ್ರಮಾಣಿತವಾಗಿ ಸಜ್ಜುಗೊಳಿಸಿದೆ. ಇದು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿಲ್ಲ ಆದರೆ ಸುಧಾರಿತ ದಕ್ಷತೆಗಳಿಗಾಗಿ ಐಡಲ್ ಸ್ಟಾರ್ಟ್-ಸ್ಟಾಪ್ ಅನ್ನು ಪಡೆದಿದೆ.
ಫ್ರಾಂಕ್ಸ್
Specifications |
1.2-litre Dual Jet Petrol |
1-litre Turbo-Petrol |
Power |
90PS |
100PS |
Torque |
113Nm |
148Nm |
Transmission |
5-speed MT, 5-speed AMT |
5-speed MT, 6-speed AT |
Drivetrain |
FWD |
FWD |
ಮಾರುತಿಯು ಹೊಸ ಫ್ರಾಂಕ್ಸ್‌ಗಾಗಿ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ನವೀಕರಿಸಿದ 1-ಲೀಟರ್ ಟರ್ಬೋ-ಪೆಟ್ರೋಲ್ ಬೂಸ್ಟರ್ ಜೆಟ್ ಇಂಜಿನ್ ಅನ್ನು ಮರಳಿ ತರುತ್ತಿದೆ.
ಇದನ್ನೂ ಓದಿ: ಮಾರುತಿ ಆಟೋ ಎಕ್ಸ್‌ಪೋ 2023 ರಲ್ಲಿ ಅನಾವರಣಗೊಳಿಸಿದೆ 550ಕಿಮೀ ರೇಂಜ್‌ನೊಂದಿಗಿನ ಇವಿಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್
ವೇರಿಯೆಂಟ್‌ಗಳು ಮತ್ತು ನಿರೀಕ್ಷಿತ ಬೆಲೆಗಳು
ಜಿಮ್ನಿಯನ್ನು ಎರಡು ಟ್ರಿಮ್‌ಗಳಲ್ಲಿ– ಝೀಟಾ ಮತ್ತು ಆಲ್ಫಾ ಮತ್ತು ಫ್ರಾಂಕ್ಸ್ ಅನ್ನು ಐದು ಟ್ರಿಮ್‌ಗಳಲ್ಲಿ ಅಂದರೆ: ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಅಲ್ಫಾಗಳಲ್ಲಿ ಮಾರಾಟ ಮಾಡಲಾಗುತ್ತದೆ. ಏಪ್ರಿಲ್ 2023 ರ ವೇಳೆಗೆ ಎರಡೂ ಮಾಡೆಲ್‌ಗಳು ಮಾರಾಟಕ್ಕೆ ಬರುತ್ತವೆ ಎಂದು ನಾವು ನಿರೀಕ್ಷಿಸಿದ್ದೇವೆ. ಜಿಮ್ನಿಯ ಆರಂಭಿಕ ಬೆಲೆಯು ಕೇವಲ ರೂ.10 ಲಕ್ಷಗಳು, ಮತ್ತು ಫ್ರಾಂಕ್ಸ್‌ನ ಆರಂಭಿಕ ಬೆಲೆ ರೂ.7-8 ಲಕ್ಷ ರೇಂಜ್‌ನಲ್ಲಿವೆ. (ಎರಡೂ ಎಕ್ಸ್-ಶೋರೂಮ್)
ಜಿಮ್ನಿಯು, ಸಬ್-4 ಮೀಟರ್ ಕೊಡುಗೆಯಾಗಿದ್ದು, ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾದಂತಹ ಆಫ್-ರೋಡರ್‌ಗಳನ್ನು ಎದುರಿಸಲಿದೆ. ಮತ್ತೊಂದೆಡೆ, ಫ್ರಾಂಕ್ಸ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲವಾದರೂ ಕಿಯಾ ಸೋನೆಟ್, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ವೆನ್ಯುಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.