ಮಾರುತಿ ಸುಜುಕಿ ಎರ್ಟಿಗಾ: ಹಳೆಯದು vs ಹೊಸತು - ಪ್ರಮುಖ ಭಿನ್ನತೆಗಳು
ಮಾರುತಿ ಎರ್ಟಿಗಾ 2015-2022 ಗಾಗಿ raunak ಮೂಲಕ ಜುಲೈ 17, 2019 12:05 pm ರಂದು ಪ್ರಕಟಿಸಲಾಗಿದೆ
- 60 Views
- ಕಾಮೆಂಟ್ ಅನ್ನು ಬರೆಯಿರಿ
ಎರೆಡನೆ ಪೀಳಿಗೆಯ ಎರ್ಟಿಗಾ ಸುಜುಕಿ ಯ ಹಗುರವಾದ ಮೊಡ್ಯೂಲರ್ ಆದ ಹಾರ್ಟ್ ಟೆಕ್ಟ್ ವೇದಿಕೆಯಲ್ಲಿ ಮಾಡಲಾಗಿದೆ ಮತ್ತು ಅದು ಹೊಸ 1.5-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ಪವರ್ ಹೊಂದಿದೆ.
ಮಾರುತಿ ಸುಜುಕಿ ಎರ್ಟಿಗಾ 2018 ವನ್ನು ಕೂಲಂಕುಷವಾಗಿ ಪರಿವರ್ತಿಸಿದೆ ಈ ವೇದಿಕೆಯಲ್ಲಿನ ಪ್ರತಿಯೊಂದು ವಿಚಾರಗಳನ್ನು ಪರಿಶೀಲಿಸಿ ಎಂಜಿನ್ ಹಾಗು ಫೀಚರ್ ಗಳನ್ನು ಸೇರಿಸಿ. ಇದು ಮೊದಲನೆಯ ಪೀಳಿಗೆಯ ಮಾಡೆಲ್ ಜೊತೆಗೆ ಹೋಲಿಸಿದಾಗ ಹೇಗಿದೆ ಎಂದು ತಿಳಿಯೋಣ.
Dimensions
ಸುಜುಕಿ ಎರ್ಟಿಗಾ |
ಮೊದಲ ಪೀಳಿಗೆ (ಹಳೆಯದು) |
ಎರೆಡನೆ ಪೀಳಿಗೆ (ಹೊಸತು ) |
Length |
4,296mm |
4,395mm (+99mm) |
Width |
1,695mm |
1,735mm (+40mm) |
Height |
1,685mm |
1,690mm (+5mm) |
Wheelbase |
2,740mm |
2,740mm (same) |
Ground Clearance |
185mm |
180mm (-5mm) |
ಡಿಸೈನ್ ಮತ್ತು ವೇದಿಕೆ
ಎರೆಡನೆ ಪೀಳಿಗೆಯ ಎರ್ಟಿಗಾ ನೋಡಲು ಸದೃಢವಾಗಿ ಹಾಗು ಎದ್ದು ಕಾಣುವಂತೆ ಇದೆ ಮೊದಲ ಪೀಳಿಗೆಯ ಮಾಡೆಲ್ ಗೆ ಹೋಲಿಸಿದಾಗ. ಅದರ ಬಾನೆಟ್ ಹಿಂದನದಕ್ಕಿಂತ ಸ್ವಲ್ಪ ಎತ್ತರದಲ್ಲಿದೆ ಎಂದು ಹೇಳಬಹುದು. ಒಂದು SUV ತರಹ ಇದ್ದು ಮುಂಬದಿಯ ಗ್ರಿಲ್ ಹಾಗು ಬಂಪರ್ ಅದರ ನೇರವಾದ ನೋಟಕ್ಕೆ ಮೆರುಗು ಕೊಡುತ್ತದೆ. ಹೆಡ್ ಲ್ಯಾಂಪ್ ಗಳು ಹಿಂದಿನದಕ್ಕಿಂತ ಮೊನಚಾಗಿದ್ದು ಅದರಲ್ಲಿ ಡುಯಲ್ ಬ್ಯಾರೆಲ್ ಸೆಟ್ ಅಪ್ ಹಾಗು ಹ್ಯಾಲೊಜೆನ್ ಪ್ರೊಜೆಕ್ಟರ್ ಗಳನ್ನು ಕೊಡಲಾಗಿದೆ. ಹೊಸ ಎರ್ಟಿಗಾ ಹಿಂದಿನದಕ್ಕಿಂತ ಅಗಲವಾಗಿದೆ ಮತ್ತು ಅದಕ್ಕೆ ಹೊಸ ಸದೃಢವಾದ ಡಿಸೈನ್ ಮತ್ತು ಹೆಚ್ಚಾದ ಒಟ್ಟಾರೆ ಅಗಲ ಹೊಂದಿದೆ ಹಿಂದಿನ ಮಾಡೆಲ್ ಗೆ ಹೋಲಿಸಿದರೆ.
ಇದರ 99mm ಹೆಚ್ಚಿನ ಉದ್ದ C-ಪಿಲ್ಲರ್ ನಂತರ ಕಾಣಿಸತೊಡಗುತ್ತದೆ ಏಕೆಂದರೆ ಎರ್ಟಿಗಾ ದಲ್ಲಿ ಗಮನಾರ್ಹವಾಗಿ ದೊಡ್ಡದಾದ ರೇರ್ ಕ್ವಾರ್ಟರ್ ಗ್ಲಾಸ್ ಹೊಂದಿದೆ. ಹಾಗು ಅದು ಮೂರನೇ ಸಳನನ್ನು ಹೆಚ್ಚು ವಿಶಾಲವಾಗಿ ಇರುವಂತೆ ಮಾಡುತ್ತದೆ. ಒಂದೇ ನೇರವಾಗಿ ಹೋಗುವಂತಹ ಗೆರೆ MPV ಯ ಉದ್ದಕ್ಕೂ ಕೊಡಲಾಗಿದೆ. ಹೊಸ ಎರ್ಟಿಗಾ ದಲ್ಲಿ 15-ಅಲಾಯ್ ವೀಲ್ ಗಳು ಇವೆ (185/65 ಕ್ರಾಸ್ ಸೆಕ್ಷನ್ ಟೈರ್ ಗಳು ) ಹಿಂದಿನ ಮಾಡೆಲ್ ನಂತೆಯೇ ಕೊಡಲಾಗಿದೆ.
ಪೂರ್ಣವಾಗಿ ಮತ್ತೆ ಡಿಸೈನ್ ಮಾಡಲಾದಎರ್ಟಿಗಾ ದ ರೇರ್ ಪ್ರೊಫೈಲ್ ಸ್ವಲ್ಪ ಮಟ್ಟಿಗೆ ಹೋಂಡಾ ತರಹ ಕಾಣಿಸುತ್ತದೆ, ವಿಶೇಷವಾಗಿ ಹೊಸ LED ಟೈಲ್ ಲ್ಯಾಂಪ್ ಗಳೊಂದಿಗೆ, ಅದು ನಮಗೆ ಮುಂಬರುವ ಐದನೇ ಪೀಳಿಗೆಯ ಹೋಂಡಾ CR-V ಯನ್ನು ಜ್ಞಾಪಿಸುತ್ತದೆ. ಅದರ ಹೊರತಾಗಿ, ರೇರ್ ಪ್ರೊಫೈಲ್ ನಿಂದಾಗಿ ಮುಂಬದಿಯಲ್ಲಿರುವ ವಿಶೇಷತೆಗಳು ಮತ್ತು ಸದೃಢವಾದ ನೋಟ ಮತ್ತಷ್ಟು ಚೆನ್ನಾಗಿ ಕಾಣಿಸುತ್ತದೆ. ಹಿಂಬದಿಯ ಕ್ವಾರ್ಟರ್ ಗ್ಲಾಸ್ ರೇರ್ ವಿಂಡ್ ಸ್ಕ್ರೀನ್ ಜೊತೆಗೆ ಸಂಯೋಜನೆ ಗೊಳ್ಳುತ್ತದೆ ಮತ್ತು ಅದರಿಂದ ರೂಫ್ ಗೆ ಫ್ಲೋಟಿಂಗ್ ತರಹದ ನೋಟ ಕೊಡುತ್ತದೆ.
ಆಂತರಿಕಗಳು ಹಾಗು ಫೀಚರ್ ಗಳು
ಈ ಬಾರಿ ಎರ್ಟಿಗಾ ದಲ್ಲಿ ಸ್ವಿಫ್ಟ್ ಹಾಗು ಡಿಸೈರ್ ನಿಂದ ತರಲಾದಂತಹ ಡ್ಯಾಶ್ ಬೋರ್ಡ್ ಕೊಡಲಾಗಿಲ್ಲ. ಇದರಲ್ಲಿ ಬಹಳಷ್ಟು ಪಾರ್ಟ್ ಗಳನ್ನೂ ಶೇರ್ ಮಾಡಲಾಗಿದೆ , ಅವುಗಳೆಂದರೆ ಫ್ಲಾಟ್ ಬಾಟಮ್ ಹೊಂದಿರುವ ಸ್ಟಿಯರಿಂಗ್ ವೀಲ್ ಮತ್ತು ಏರ್ ಕಂಡೀಷನಿಂಗ್ ಪ್ಯಾನೆಲ್.
ಕ್ಯಾಬಿನ್ನಲ್ಲಿ ಹಿಂದಿನಂತೆಯೇ ಗ್ರೇ ಹಾಗು ಬಿಜ್ ಥೀಮ್ ಅನ್ನು ಹಿಂದಿನಂತೆಯೇ ಮುಂದುವರೆಸುತ್ತದೆ, ಅದರಲ್ಲಿ ಸೆಂಟ್ರಲ್ ಬ್ಲಾಕ್ ಪ್ಯಾನೆಲ್ ನಲ್ಲಿ ಏರ್ ವೆಂಟ್ ಗಳನ್ನು ಕೊಡಲಾಗಿದ್ದು ಜೊತೆಗೆ ಅಗಲವನ್ನು ಹೆಚ್ಚಿಸುವಂತಹ ಫಾಕ್ಸ್ ವುಡ್ ಇನ್ಸರ್ಟ್ ಗಳನ್ನೂ ಕೊಡಲಾಗಿದೆ. ಇದರ ಪ್ರೀಮಿಯಂ ಗುಣಗಳನ್ನು ಹೆಚ್ಚುವಂತಹ AC ವೆಂಟ್ ಗಳು ಆಡಿ ಯ ಹೊಸ ಕಾರ್ ಆದ A5 ನಿಂದ ಪ್ರೇರಿತವಾಗಿದೆ.
ಎರೆಡನೆ ಪೀಳಿಗೆಯ ಎರ್ಟಿಗಾ ದಲ್ಲಿರುವ ಟ್ವಿನ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ , ಡ್ರೈವರ್ ಇನ್ಫೋ ಡಿಸ್ಪ್ಲೇ, ಗಳು ಕೂಡ ಹೊಸದಾಗಿದ್ದು ನೋಡಲು ಸಿಯಾಜ್ ಫೇಸ್ ಲಿಫ್ಟ್ ಅನ್ನು ಬಹಳಷ್ಟು ಹೋಲುತ್ತದೆ. ಮೊದಲನೆಯ ಪೀಳಿಗೆಯ ಎರ್ಟಿಗಾ ದಲ್ಲಿ ಮಾನ್ಯುಯಲ್ AC ಕೊಡಲಾಗಿತ್ತು, ಹೊಸ ಪೀಳಿಗೆಯ ಮಾಡೆಲ್ ನಲ್ಲಿ ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು Z ಮತ್ತು Z+ ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ. ಮಾರುತಿಯವರು AC ವೆಂಟ್ ಗಳನ್ನು ಸೆಂಟ್ರಲ್ ಕನ್ಸೋಲ್ ನ ಟ್ವಿನ್ ಬಾಟಲ್ ಹೋಲ್ಡರ್ ನಲ್ಲಿ ಕೊಡಲಾಗಿದೆ, ಅದು ಪಾನೀಯಗಳನ್ನು ತಂಪಾಗಿರಿಸಲು ಸಹಕಾರಿಯಾಗಿರುತ್ತದೆ.
ಹೊಸ ಎರ್ಟಿಗಾ ದಲ್ಲಿ ಇಗ್ನಿಸ್ ತರಹದ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡಲಾಗಿದೆ. ಅದು 7-ಇಂಚು ಸ್ಮಾರ್ಟ್ ಪ್ಲೇ ಯೂನಿಟ್ ಆಗಿದ್ದು ಜೊತೆಗೆ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಕೊಡಲಾಗಿದೆ , ಇವು ಮೊದಲ ಪೀಳಿಗೆಯ ಎರ್ಟಿಗಾದಲ್ಲೂ ಸಹ ದೊರೆಯುತ್ತಿತ್ತು.
ಹೊಸ ಎರ್ಟಿಗಾ ದ ಫೀಚರ್ ಗಳ ಪಟ್ಟಿಯಲ್ಲಿ ಫಾಸ್ಸಿವ್ ಕೀ ಲೆಸ್ ಎಂಟ್ರಿ ಸಿಸ್ಟಮ್ ಜೊತೆಗೆ ಪುಶ್ ಬಟನ್ ಎಂಜಿನ್ ಸ್ಟಾರ್ಟ್/ ಸ್ಟಾಪ್, ರೂಫ್ ಮೌಂಟ್ ಆಗಿರುವ ವೆಂಟ್ ಗಳು, ಜೊತೆಗೆ ಬ್ಲೌರ್ ಕಂಟ್ರೋಲ್ ಗಳು, ಮತ್ತು ವಿದ್ಯುತ್ ಅಳವಡಿಕೆಯೊಂದಿಗೆ ಸರಿಹೊಂದಿಸಬಹುದಾದ ಹೊರಗಡೆಯ ರೇರ್ ವ್ಯೂ ಮಿರರ್ ಕೊಡಲಾಗಿದೆ. ಸುರಕ್ಷತೆಗಾಗಿ, ಇದರಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ EBD, ಮತ್ತು ISOFIX ಚೈಲ್ಡ್ ಸೀಟ್ ಆಂಕರ್ ಗಳನ್ನೂ ಕೊಡಲಾಗಿದೆ.
ಹೊಸ ಎರ್ಟಿಗಾ ದಲ್ಲಿ ESP ಹಾಗು ಹಿಲ್ ಹೋಲ್ಡ್ ಕಂಟ್ರೋಲ್ ಸಹ ಕೊಡಲಾಗಿದೆ, ಆದರೆ ಅವುಗಳು ಪೆಟ್ರೋಲ್ ಆಟೋಮ್ಯಾಟಿಕ್ ವೇರಿಯೆಂಟ್ ಗೆ ಮಾತ್ರ ಸೀಮಿತವಾಗಿದೆ. ಹಳೆಯ ಮಾಡೆಲ್ ನಲ್ಲಿ ಈ ಫೀಚರ್ ಗಳನ್ನೂ ಯಾವ ವೇರಿಯೆಂಟ್ ನಲ್ಲೂ ಕೊಡಲಾಗಿರಲಿಲ್ಲ.
ಮೆಕ್ಯಾನಿಕಲ್ ವಿಚಾರಗಳು
ಎರೆಡನೆ ಪೀಳಿಗೆಯ ಎರ್ಟಿಗಾ ದಲ್ಲಿ ಬಾನೆಟ್ ಒಳಭಾಗದಲ್ಲಿ ಹೆಚ್ಚಿನ ನವೀಕರಣ ಕೊಡಲಾಗಿದೆ. ಇದು 1.5-litre 105PS/138Nm ಪೆಟ್ರೋಲ್ ಎಂಜಿನ್ ಹೊಂದಿದ್ದು , ಆ ಎಂಜಿನ್ ಅನ್ನು ಸಿಯಾಜ್ ಫೇಸ್ ಲಿಫ್ಟ್ ನಲ್ಲಿ ಮೊದಲಬಾರಿಗೆ ಕೊಡಲಾಗಿತ್ತು. ಇದರಲ್ಲಿರುವ 1.3-litre 90PS/200Nm ಡೀಸೆಲ್ ಎಂಜಿನ್ ಅನ್ನು, ಹಿಂದಿನದರಿಂದ ಮುಂದುವರೆಸಲಾಗಿದೆ. ಆದರೆ, ಹಿಂದಿನದಕ್ಕಿಂತ ಭಿನ್ನವಾಗಿ, ಈ ಬಾರಿ ಪೆಟ್ರೋಲ್ ಎಂಜಿನ್ ನಲ್ಲಿ ಸುಜುಕಿ ಯ ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ SHVS ಅನ್ನು ಸಹ ಕೊಡಲಾಗಿದೆ.
Petrol Engine |
1.4-litre K14B (old) |
1.5-litre K15B (new) with Smart Hybrid |
Displacement |
1,373cc |
1,462cc |
Power |
92.4PS @ 6,000rpm |
105PS @ 6,000rpm |
Torque |
130Nm @ 4,000rpm |
138Nm @ 4,400rpm |
Transmission |
5-speed MT/4-speed AT |
5-speed MT/4-speed AT |
ಇಲ್ಲಿ ಹೊಸ 1.5- ಪೆಟ್ರೋಲ್ ಎಂಜಿನ್ ಕೊಡಲಾಗಿದ್ದರೂ ಸಹ, ಟ್ರಾನ್ಸ್ಮಿಷನ್ ಆಯ್ಕೆಗಳು ಹಿಂದಿನದರಂತೆಯೇ ಇದೆ. ಮತ್ತು ಹಿಂದಂದಕಿಂತ ಭಿನ್ನವಾಗಿ , ಪೆಟ್ರೋಲ್ ಎರ್ಟಿಗಾ 5-ಸ್ಪೀಡ್ MT ಮತ್ತು 4-ಸ್ಪೀಡ್ AT ಯನ್ನು ಪಡೆಯುತ್ತದೆ, ಡೀಸೆಲ್ ಎರ್ಟಿಗಾ ಕೇವಲ 5-ಸ್ಪೀಡ್ MT ಯನ್ನು ಪಡೆಯುತ್ತದೆ.
ಹೊಸ ಬಿಡುಗಡೆಗಳು ಹಾಗು ಬೆಲೆಗಳು
ಎರೆಡನೆ ಪೀಳಿಗೆಯ ಎರ್ಟಿಗಾ ಬೆಲೆ ವ್ಯಾಪ್ತಿ Rs 7.44 ಲಕ್ಷ ದಿಂದ Rs 10.90 ಲಕ್ಷ ದ ವರೆಗೂ ಇದೆ. ಅದರ ಬೆಲೆ ಪಟ್ಟಿ ಮೊದಲ ಪೀಳಿಗೆಯ ಮಾಡೆಲ್ ಗಿಂತ ಹೆಚ್ಚಿದೆ. ಹಿಂದಿನದರಲ್ಲಿ ಬೆಲೆ ವ್ಯಾಪ್ತಿ Rs 6.33 ಲಕ್ಷ ದಿಂದ Rs 10.69 ಲಕ್ಷ ದ ವರೆಗೂ ವ್ಯಾಪಿಸಿದೆ ( ಎಲ್ಲ ಎಕ್ಸ್ ಶೋ ರೂಮ್ ದೆಹಲಿ ಬೆಲೆಗಳು )
Also Read: Clash Of Segments: Maruti Ertiga Vs Maruti Ciaz- Which Car To Buy?