ಹೊಸ ಮಾರುತಿ ಸುಜುಕಿ ಎರ್ಟಿಗಾ 2018:ಮೊದಲ ಡ್ರೈವ್ ವಿಮರ್ಶೆ
Published On jul 18, 2019 By jagdev for ಮಾರುತಿ ಎರಟಿಕಾ 2015-2022
- 0 Views
- Write a comment
ಇದು ನೀವು ಹೆಚ್ಚು ಇಷ್ಟಪಡಬಹುದಾದ MPV ಆಗಿದೆಯೇ?
ಮೊದಲ ಪೀಳಿಗೆಯ ಮಾರುತಿ ಎರ್ಟಿಗಾ ಒಂದು ಒಪ್ಪಬಹುದಾದ ಕಾರ್ ಆಗಿತ್ತು. ಅದು ಕಾಂಪ್ಯಾಕ್ಟ್ ಆಗಿತ್ತು ಆದರೂ ಏಳು ಜನರು ಕೂರಲು ಅನುಕೂಲವಾಗಿತ್ತು. ಅದರ ಬೆಲೆ ಆಕರ್ಷಕವಾಗಿತ್ತು ಆದರೆ ಯಾವಾಗಲು ಬಜೆಟ್ ದೃಷ್ಠಿಯಿಂದ ಮಾಡಿರುವ ಕಾರ್ ಎಂದು ಅನಿಸಿರಲಿಲ್ಲ. ಅದರಲ್ಲಿ ಬಹಳಷ್ಟು ಕಡಿಮೆಗಳು ಸಹ ತೋರಿಬರುತ್ತಿತ್ತು: ಸೀಮಿತವಾದ ಸ್ಥಳಾವಕಾಶ ಮತ್ತು ಇಕ್ಕಟ್ಟಾದ ಮೂರನೇ ಸಾಲು ಪ್ರಮುಖವಾದವುಗಳಾಗಿತ್ತು. ಆದರೆ ಇವುಗಳು ಡೀಲ್ ಬ್ರೇಕರ್ ಗಳಾಗುತ್ತಿತ್ತಾ? ಅಥವಾ ಬಹಳಷ್ಟು ಮಂದಿಗೆ ಡ್ರೈವ್ ಮಾಡಲು ಇಷ್ಟವಾಗಬಾರದಾಗಬಹುದಾದ ವಾಹನವಾಗಿ ತೋರುತ್ತಿತ್ತೇ?
ನಾವು ಡ್ರೈವ್ ಮಾಡುವುದಕ್ಕಿಂತ ಮುಂಚೆಯೇ ಹೇಳಬಲ್ಲೆವು ಹೊಸ ಎರ್ಟಿಗಾ ಮೋಡಲ್ ಪೀಳಿಗೆಯ ಎರ್ಟಿಗಾ ಕಿಂತಲೂ ಒಂದಕ್ಕಿಂತ ಹೆಚ್ಚು ವಿಚಾರಗಳಲ್ಲಿ ಚೆನ್ನಾಗಿದೆ ಎಂದು. ಅದು ಹೊರಗಡೆಯಿಂದ ಹೆಚ್ಚು ಉದ್ದವಾಗಿದೆ ಹಾಗು ಅಗಲವಾಗಿದೆ ಮತ್ತು ಆಂತರಿಕಗಳು ವಿಶಾಲವಾಗಿದೆ ಕೂಡ. ಅದರಲ್ಲಿ ಹೆಚ್ಚು ಶಕ್ತಿಯುತವಾದ ಹಾಗು ಹೆಚ್ಚು ಮೈಲೇಜ್ ಕೊಡುವ ಪೆಟ್ರೋಲ್ ಎಂಜಿನ್ ಕೊಡಲಾಗಿದೆ., ಮತ್ತು ಅದನ್ನು ದೃಢವಾದ ಮತ್ತು ಹಗುರವಾದ ವೇದಿಕೆಯಲ್ಲಿ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಹೆಚ್ಚು ಫೀಚರ್ ಗಳನ್ನು ಕೊಡಲಾಗಿದೆ ಹಾಗು ಬೆಲೆ ಪಟ್ಟೆಯನ್ನು ಸಹ ಒಪ್ಪುವಂತೆ ಕೊಡಲಾಗಿದೆ.
ಆದರೆ, ಇದು ಅಪೇಕ್ಷಣೀಯವಾಗಿದೆಯೇ? ಅಥವಾ ಇದು ಬುದ್ದಿಗೆ ಮೆಚ್ಚುತ್ತದೆ ಆದರೆ ಮನಸ್ಸಿಗೆ ಅಲ್ಲ ಎಂದು ಹೇಳಬಹುದೇ? ನಾವು ಈ ಪ್ರಶ್ನೆಗಳನ್ನು ಉತ್ತರಿಸಲು ಇದರ ಜೊತೆ ಹಲವು ಘಂಟೆಗಳನ್ನು ಕಳೆದೆವು.
ಬಾಹ್ಯ
ರಸ್ತೆಯಲ್ಲಿ, ಹೊಸ ಎರ್ಟಿಗಾ ಹಳೆ ಪೀಳಿಗೆಯ ಮಾಡೆಲ್ ಗಿಂತಲೂ ಚೆನ್ನಾಗಿ ಆಕರ್ಷಣೆ ಹೊಂದಿದೆ. ಮುಂಬದಿಯಲ್ಲಿ ಹೆಚ್ಚಾಗಿ ಬಳಸಲಾಗಿರುವ ಕ್ರೋಮ್ ಎಲ್ಲರಿಗೂ ಮೆಚ್ಚುಗೆಯಾಗದಿರಬಹುದು. , ಆದರೂ ಅದು ಎರ್ಟಿಗಾ ವನ್ನು ಕಣ್ಣಿಗೆ ಆಕರ್ಷಕವಾಗಿರುವಂತೆ ಮಾಡುತ್ತದೆ. ಬಂಪರ್ ಹಾಗು ಹೆಡ್ ಲ್ಯಾಂಪ್ ಗಾಲ ಡಿಸೈನ್ ನೋಟವನ್ನು ಇನ್ನು ಚೆನ್ನಾಗಿರುವಂತೆ ಮಾಡುತ್ತದೆ. ಡೇ ಟೈಮ್ ರನ್ನಿಂಗ್ ಲೈಟ್ ಗಳು , ಹೆಡ್ ಲ್ಯಾಂಪ್ ನಲ್ಲಿ ಅಥವಾ ಮುಂಬದಿಯ ಬಂಪರ್ ನಲ್ಲಿ ಕೊಟ್ಟಿದ್ದಾರೆ ಅದು ಪ್ರೀಮಿಯಂ ಆಗಿ ಮತ್ತು ಆಧುನಿಕವಾಗಿ ಕಾಣಲು ಸಹಕಾರಿಯಾಗಿರುತ್ತಿತ್ತು. ಇವುಗಳನ್ನು ಹೊರಗಡೆಯಿಂದ ಕೊಳ್ಳಬಹುದಾಗಿರುತ್ತದೆ ಎಂದುಕೊಂಡಿದ್ದೇವೆ.
ಮುಂಬದಿಯದಕ್ಕೆ ವಿರುದ್ಧವಾಗಿ ಹಿಂಬದಿಯ ಡಿಸೈನ್ ನಮ್ಮನ್ನು ಹೆಚ್ಚು ಆಕರ್ಷಿಸಿತು. ಮೂರು ಬಾಗಗಳ ಟೈಲ್ ಲೊಯಂಪ್ ಗಳು, ಜೊತೆಗೆ LED ಲೈಟ್ ಗಳು D-ಪಿಲ್ಲರ್ ವರೆಗೂ ಹರಡಿದ್ದು ಆಕರ್ಷಕವಾಗಿ ಕಾಣಿಸುತ್ತದೆ. ಬೂಟ್ ಲೀಡ್ ಮೇಲಿರುವ ಮೊನಚಾದ ಪದರಗಳು ಬಂಪರ್ ವರೆಗೂ ಹರಡಿದ್ದು ಹಿಂಬದಿ ಚೆನ್ನಾಗಿ ಕಾಣತೊಡಗುತ್ತದೆ. ಎರ್ಟಿಗಾ ದಲ್ಲಿ 40mm ನಷ್ಟು ಅಗಲ ಹೆಚ್ಚಾಗಿದೆ, ಆದರೆ ಅದನ್ನು ಅಷ್ಟು ಸುಲಭವಾಗಿ ಗಮನಿಸಲಾಗುವುದಿಲ್ಲ ಮೊದಲ ಹಾಗು ಎರೆಡನೆ ಪೀಳಿಗೆಯ ಮಾಡೆಲ್ ಗಳನ್ನು ಪಕ್ಕದಲ್ಲಿ ಇರಿಸದ ಹೊರತು.
Dimensions |
ಹಳೆ ಎರ್ಟಿಗಾ |
ಹೊಸ ಎರ್ಟಿಗಾ |
Length |
4296mm |
4395mm (+99mm) |
Width |
1695mm |
1735mm (+40mm) |
Height |
1685mm |
1690mm (+5mm) |
Wheelbase |
2740mm |
2740mm |
Tyres |
185/65 R15 |
185/65 R15 |
Ground Clearance |
185mm |
180mm |
ದಪ್ಪದಾಗಿರುವ ಶೌಲ್ಡರ್ ಲೈನ್ ಮುಂಬದಿಯ ಫೆಂಡರ್ ನಿಂದ ಟೈಲ್ ಲ್ಯಾಂಪ್ ವರೆಗೂ ಹರಡಿದೆ ಮತ್ತು ದೊಡ್ಡ ಡೋರ್ ಗಳ ಮೇಲೂ ಪ್ರಭಾವ ಬಿರುತ್ತ್ತದೆ. ಫ್ಲೋಟಿಂಗ್ ರೂಫ್ ಲೈನ್ ನೂತನವಾದ ಡಿಸೈನ್ ಶೈಲಿಯನ್ನು ಬಿಂಬಿಸುತ್ತದೆ. 15-ಇಂಚು ಮಲ್ಟಿ ಸ್ಪೋಕ್ ಅಲಾಯ್ ವೀಲ್ ನೋಡಲು ಇಂಡೋನೇಷ್ಯಾ ಸ್ಪೆಕ್ ಎರ್ಟಿಗಾ ವನ್ನು ಹೋಲುತ್ತದೆ ಮತ್ತು, ನನ್ನ ಅನಿಸಿಕೆ ಪ್ರಕಾರ ಹೆಚ್ಚು ಆಕರ್ಷಕವಾಗಿರುವ ಮುಂಬದಿ ಹಾಗು ಹಿಂಬದಿಗೆ ಮೆರುಗು ಕೊಡುವುದಿಲ್ಲ. ಹೊಸ ಎರ್ಟಿಗಾ ದ ಅಳತೆ 4395mm ಉದ್ದ, ಇದೆ ಅದು 99mm ಹೆಚ್ಚಾಗಿದೆ ಹೊರ ಹೋಗುತ್ತಿರುವ ಮಾಡೆಲ್ ಗಿಂತಲೂ. ಮತ್ತು ಅದು ನೋಡಲು ಹೆಚ್ಚು ಉದ್ದವಾಗಿದೆ , ವಿಶೇಷವಾಗಿ ನೀವು C-ಪಿಲ್ಲರ್ ಗಿಂತಲೂ ಮುಂದೆ ನೋಡಿದಾಗ. .
ಹೊಸ ಎರ್ಟಿಗಾ ದಲ್ಲಿ ಐದು ಬಣ್ಣಗಳ ಆಯ್ಕೆ ಗಳನ್ನು ಕೊಡಲಾಗಿದೆ, ಅವು ಆಬರ್ನ್ ರೆಡ್ (ಮರೂನ್ ), ಆಕ್ಸ್ಫರ್ಡ್ ಬ್ಲೂ ( ಡಿಸೈರ್ ನ ಬ್ಲೂ ತರಹ ), ಮ್ಯಾಗ್ಮಾ ಗ್ರೇ ( ಡಿಸೈರ್ ನ ಗ್ರೇ ತರಹ ), ಸಿಲ್ಕಿ ಸಿಲ್ವರ್ (ಡಿಸೈರ್ ನ ಸಿಲ್ವರ್ ತರಹ ) ಮತ್ತು ಪರ್ಲ್ ಆರ್ಕ್ಟಿಕ್ ವೈಟ್ (ಡಿಸೈರ್ ನ ವೈಟ್ ತರಹ ), ಡಾರ್ಕ್ ಬಣ್ಣಗಳಾದ ಬ್ರೌನ್ ಅಥವಾ ಸ್ವಿಫ್ಟ್ ನ ಮಿಡ್ನೈಟ್ ಬ್ಲೂ ಎರ್ಟಿಗಾ ವನ್ನು ಇನ್ನೂ ಚೆನ್ನಾಗಿ ಕಾಣುವಂತೆ ಮಾಡಬಹುದಿತ್ತು.
ಆಂತರಿಕಗಳು
ಮೊದಲ ಪೀಳಿಗೆಯ ಎರ್ಟಿಗಾ ಗಿಂತಲೂ 40mm ಹೆಚ್ಚು ಅಗಲವಾಗಿದ್ದರೂ ಸಹ, ಹೊಸ ಆವೃತ್ತಿಯಲ್ಲಿ ಡ್ರೈವರ್ ಸೀಟ್ ಕಡೆಯಿಂದ ಕಾಂಪ್ಯಾಕ್ಟ್ ಆಗಿದೆ ಎನಿಸುತ್ತದೆ, ಮತ್ತು ಅದರಲ್ಲಿ ಆಶ್ಚರ್ಯವಿಲ್ಲ, ಏಕೆಂದರೆ ಅದು ಹೊಸ ಡಿಸೈರ್ ನಷ್ಟೇ ಅಗಲವಾಗಿದೆ. ಹಾಗಾಗಿ ಎರ್ಟಿಗಾ ವು ನಗರಗಳಲ್ಲಿ ಡ್ರೈವ್ ಮಾಡುವುದಕ್ಕೆ ಸ್ವಿಫ್ಟ್ ಅಥವಾ ಡಿಸೈರ್ ತರಹ ಸುಲಭವಾಗಿದೆ.
ಎರ್ಟಿಗಾ ದಲ್ಲಿ ಸ್ವಿಫ್ಟ್ ಅಥವಾ ಡಿಸೈರ್ ಗೆ ಹೋಲಿಸಿದರೆ ಕೊನೆಗೂ ವಿಭಿನ್ನವಾದ ಡ್ಯಾಶ್ ಬೋರ್ಡ್ ಅನ್ನು ಕೊಡಲಾಗಿದೆ. ಅದರಿಂದಾಗಿ ಈ MPV ಗೆ ಅದರದೇ ಆದ ಗುರುತು ಸಿಗುವುದಲ್ಲದೆ ಮಾರುತಿ ಕುಟುಂಬದ ಗ್ರಾಹಕರಿಗೆ ಒಂದು ಹೊಸತನ್ನು ಪಡೆದ ಹಾಗೆ ಅನುಭವಾಗುತ್ತದೆ. ಈ ಹಿಂದೆ ಹೋಲಿಕೆ ಇರುವ ಡ್ಯಾಶ್ ಬೋರ್ಡ್ ಗಳು ಜೊತೆಗೆ ವಿಭಿನ್ನವಾದ ಬಣ್ಣಗಳು ಸ್ವಿಫ್ಟ್ ಮತ್ತು ಡಿಸೈರ್ ಗಳಲ್ಲಿ ಕೊಡಲಾಗುತ್ತಿತ್ತು, ಎರ್ಟಿಗಾ ದಲ್ಲೂ ಸಹ ಅದು ಸ್ವಲ್ಪ ಮಟ್ಟಿಗೆ ಗೆ ಹಾಗೆಯೆ ಇತ್ತು.
ಡ್ಯಾಶ್ ಬೋರ್ಡ್ ನ ಪದರಗಳಂತಿರುವ ಡಿಸೈನ್ ಫ್ಲಾಟ್ ಬಾಟಮ್ ಸ್ಟಿಯರಿಂಗ್ ವೀಲ್ ಹೊಂದಿರುವುದರೊಂದಿಗೆ ನವೀನವಾಗಿ ಕಂಡುಬರುತ್ತದೆ, ಆದರೆ ಪ್ಲಾಸ್ಟಿಕ್ ಗುಣಮಟ್ಟ ಹಳೆಯ ಎರ್ಟಿಗಾ ಗಿಂತಲೂ ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಅನುಗುಣವಾಗಿ, ನೀವು ಹಲವು ಪಾರ್ಟ್ ಗಳಾದ, ಉದಾಹರಣೆಗೆ ಪವರ್ ವಿಂಡೋ ಗಳು ಹಿಂದಿನದರಿಂದ ಮುಂದುವರೆಸಲಾಗಿದೆ ಎಂದು ಹೇಳಬಹುದು, ನಿಮಗೆ ನವೀಕರಣಗೊಂಡ ಎರ್ಟಿಗಾ ದಲ್ಲಿ ಕುಳಿತ ಹಾಗೆ ಅನಿಸಬಹುದು. ಆದರೆ ಹೆಚ್ಚು ಮುಂದುವರೆದಿದೆ ಎಂದು ಹೇಳಲಾಗುವುದಿಲ್ಲ.
ಎರ್ಟಿಗಾ ದಲ್ಲಿ, ಮೊದಲ ಪೀಳಿಗೆಯಲ್ಲೂ ಕೂಡ , ಒಂದು ಉತ್ತಮವಾದ ಬ್ಯಾಕ್ ಸೀಟ್ ಗಳನ್ನೂ ಕೊಡಲಾಗಿತ್ತು (ಮದ್ಯದ ಸಾಲು ) ಅದರ ಬೆಲೆ ವ್ಯಾಪ್ತಿಯಲ್ಲಿ. ಅದರಲ್ಲಿ ಸಾಕಷ್ಟು ಲೆಗ್ ರೂಮ್ ಹಾಗು ಹೆಡ್ ರೂಮ್ ಕೊಡ್ಲಗಿತ್ತು ಮತ್ತು ಏರ್ ವೆಂಟ್ ಗಳನ್ನು ರೂಫ್ ನಲ್ಲಿ ಕೊಡಲಾಗಿದ್ದು ಅದು ಸರಿಯಾಗಿತ್ತು. ಮಾರುತಿ ಸುಜುಕಿ ಯವರು ವೀಲ್ ಬೇಸ್ ಅನ್ನು ಹೆಚ್ಚು ಮಾಡದಿರುವುದು , ಎರೆಡನೆ ಸಾಲಿನಲ್ಲಿ ಅನುಭವವಾಗುತ್ತದೆ ಮತ್ತು ಹಳೆಯ ಎರ್ಟಿಗಾ ದಲ್ಲೂ ಸಹ ಅದೇ ರೀತಿ ಇತ್ತು. ಚಿಕ್ಕ ವೆತ್ಯಾಸ ಎಂದರೆ ಡೋರ್ ಗಳಲ್ಲಿ ನಲ್ಲಿ ಹೆಚ್ಚು ಜಾಗ ಕೊಡಲಾಗಿದೆ ಅದು ನವೀನ ಸೆಲ್ ಫೋನ್ ಇಡಲು ಸಹಕಾರಿಯಾಗಿದೆ.
ಮೂರನೇ ಸಲಿಗೆ ಸರಿಯಿರಿ ನಿಮಗೆ ತಕ್ಷಣ ತಿಳಿಯುತ್ತದೆ ಹೆಚ್ಚು ಲೆಗ್ ರೂಮ್ ಕೊಡಲಾಗಿದೆ ಎಂದು. ಮಾರುತಿ ಸುಜುಕಿ ಹೇಳುವಂತೆ ಮೂರನೇ ಸಾಲಿನಲ್ಲಿ 70mm ಹೆಚ್ಚು ಕೊಡಲಾಗಿದೆ ಹಳೆಯ ಆವೃತ್ತಿಗೆ ಹೋಲಿಸಿದರೆ. ಮದ್ಯದ ಸಾಲನ್ನು ಹಿಂದಕ್ಕೆ ಸರಿಸಿದರೆ ನಿಮಗೆ ಮೂರನೇ ಹಾಗು ಎರೆಡನೆ ಸಾಲಿನಲ್ಲಿ ಹೆಚ್ಚು ಜಾಗ ದೊರೆಯುತ್ತದೆ ನಿಮ್ಮ ಕಾಲು ಚಾಚಲು. ಹಿಂದಿನದರಲ್ಲಿ ಹೀಗೆ ಇರಲಿಲ್ಲ. ಮುಖ್ಯವಾಗಿ ಮದ್ಯದ ಸಾಲಿನಲ್ಲಿನ ಅಳವಡಿಕೆ (ಸ್ಲೈಡ್ ಹಾಗು ರಿಕ್ಲಐನ್ ) ಸೂಚಿಸುವಂತೆ ಮೂರನೇ ಸಾಲಿನಲ್ಲಿ ವಯಸ್ಕ ವ್ಯಕ್ತಿ ಕೂಡ ಆರಾಮದಾಯಕವಾಗಿ ಕುಳಿತುಕೊಳ್ಳಬಹುದು ನಗರಗಳಲ್ಲಿ ಪ್ರಯಾಣಿಸುತ್ತಿರುವಾಗ.
ಹೆಚ್ಚಿನದಾಗಿ, ಮೂರನೇ ಸಾಲಿನಲ್ಲಿ ಮುರು ಹಂತದ ಬ್ಯಾಕ್ ರೆಸ್ಟ್ ರಿಕ್ಲಿನ್ ಕೊಡಲಾಗಿದೆ, ಹಾಗಾಗಿ ಬೂಟ್ ನ ಬಳಕೆ ಇನ್ನುಹೆಚ್ಚು ಸುಧಾರಿಸುತ್ತದೆ. ಗರಿಷ್ಟ ರೆಸಿಲಿನ್ ಸ್ಥಿತಿಯಲ್ಲಿ ಹೆಚ್ಚು ಆರಾಮದಾಯಕವಾಗಿರುತ್ತದೆ ಹಿಂಬದಿಯ ಸೀಟ್ ನ ಪ್ಯಾಸೆಂಜರ್ ಗಳಿಗೆ. ಆದರೆ ಹೆಚ್ಚು ನೇರವಾಗಿ ಕುಳಿತುಕೊಳ್ಳುವುದರಿಂದ ಹೆಚ್ಚು ಲಗೇಜ್ ಸ್ಥಳಾವಕಾಶ ದೊರೆಯುತ್ತದೆ. ಅದರಿಂದ ಹೆಚ್ಚಿನ ಬ್ಯಾಗ್ ಗಳನ್ನು ಇಡಲು ಅಥವಾ ಟ್ರಾಲಿ ಬ್ಯಾಗ್ ಅನ್ನು ಬೂಟ್ ನಲ್ಲಿ ಇತ್ತು ಬೂಟ್ ಕ್ಲೋಸ್ ಮಾಡಲು ಅನುಕೂಲವಾಗುತ್ತದೆ. ಹೆಚ್ಚು ನಿಖರವಾದ ಬಂಗಿ ಎಂದರೆ ಸರಿಸುಮಾರು ಲಂಬಕೋನದ ಸ್ಥಿತಿ.
ಸುರಕ್ಷತೆ
ಹೊಸ ಎರ್ಟಿಗಾ ದಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS, EBD, Isofix ಚೈಲ್ಡ್ ಸೀಟ್ ಮೌಂಟ್ ಗಳು ಮತ್ತು ಫ್ರಂಟ್ ಸೀಟ್ ಬೆಲ್ಟ್ ಪ್ರಿ ಟೆಂಷನರ್ ಜೊತೆಗೆ ಲೋಡ್ ಲಿಮಿಟರ್ ಗಳನ್ನೂ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಈ ಫೀಚರ್ ಗಳನ್ನು ಕೊಡುವುದರೊಂದಿಗೆ ಇಂದು ನಮಗೆ ಗ್ರಾಹಕರಿಗೆ ಯಾವುದೇ ವೇರಿಯೆಂಟ್ ಅನ್ನು ಕೊಳ್ಳುವಂತೆ ಹೇಳಲು ಅನುಕೂಲವಾಗುತ್ತದೆ. ಫೀಚರ್ ಗಳಾದ ಸ್ಪೀಡ್ ಸೆನ್ಸಿಟಿವ್ ಆಟೋ ಡೋರ್ ಲಾಕ್ ಮತ್ತು ಸೆಂಟ್ರಲ್ ಲೊಕ್ಕಿನ್ಗ್ ಗಳನ್ನೂ ಕೂಡ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ವೇರಿಯೆಂಟ್ ಗಳಲ್ಲಿ ESP ಹಾಗು ಹಿಲ್ ಹೋಲ್ಡ್ ಫೀಚರ್ ಕೊಡಲಾಗಿದೆ.
ಟೆಕ್ನಲಾಜಿ ಮತ್ತು ಇತರ ಫೀಚರ್ ಗಳು
ಎರ್ಟಿಗಾ ದಲ್ಲಿ 7-ಇಂಚು ಸ್ಮಾರ್ಟ್ ಪ್ಲಸ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಹ ದೊರೆಯುತ್ತದೆ ಟಾಪ್ Z+ ವೇರಿಯೆಂಟ್ ನಲ್ಲಿ. ಇದರಲ್ಲಿ ಇನ್ ಬಿಲ್ಟ್ ನೇವಿಗೇಶನ್ ಸಪೋರ್ಟ್ ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾ ಕೊಡಲಾಗಿದೆ. ರೇರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. V ಮತ್ತು Z ವೇರಿಯೆಂಟ್ ಗಳಲ್ಲಿ ಸ್ಮಾರ್ಟ್ ಪ್ಲಸ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೊಡಲಾಗಿಲ್ಲ . ಆದರೆ ಸಾಮಾನ್ಯವಾದ ಆಡಿಯೋ ಸಿಸ್ಟಮ್ (ಡಿಜಿಟಲ್ ಡಿಸ್ಪ್ಲೇ ಅದನ್ನು ‘90 ಸಾಲಿನ ವರ್ಷಗಳಾದರಂತೆ ಕಾಣುತ್ತದೆ ) ಜೊತೆಗೆ ಎಲೆಕ್ಟ್ರೋ ಸ್ಟಾಟಿಕ್ ಟಚ್ ಬಟನ್ ಗಳು (ಟಚ್ ಬೇಸ್ ಇನ್ಪುಟ್ ಇರುವ ಕಂಟ್ರೋಲ್ ಗಳು ಅದನ್ನು ಟಚ್ ಸೆನ್ಸಿಟಿವ್ ಏರ್ ಕಂಟ್ರೋಲ್ ಗಳು ಹೋಂಡಾ ಸಿಟಿ ಯಲ್ಲಿ ಇರುವಂತೆ ಇದೆ ).
ಸ್ಮಾರ್ಟ್ ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಇತರ ಇನ್ ಬಿಲ್ಟ್ ಫೀಚರ್ ಗಳಾದ, ಲೆಥರ್ ಹೊರಪದರ ಹೊಂದಿರುವ ಸ್ಟಿಯರಿಂಗ್ ಒಂದು Z+ ವೇರಿಯೆಂಟ್ ನಲ್ಲಿರುವ ವಿಶೇಷವಾದ ಫೀಚರ್ ಆಗಿದೆ. ಹಾಗಾಗಿ ಒಟ್ಟಾರೆ, ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಬಯಸುವ ಗ್ರಾಹಕರು Z ವೇರಿಯೆಂಟ್ ನಲ್ಲಿ ಏನು ಮಿಸ್ ಮಾಡಿಕೊಳ್ಳುವುದಿಲ್ಲ. ಒಂದು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ (ಅಥವಾ ಇತರ ಆಡಿಯೋ ಸಿಸ್ಟಮ್ ), ಪಾರ್ಕಿಂಗ್ ಕ್ಯಾಮೆರಾ ಮತ್ತು ಲೆಥರ್ ಫಿನಿಷ್ ಸ್ಟಿಯರಿಂಗ್ ವೀಲ್ ಮೇಲೆ ಯಾವಾಗ ಬೇಕಾದರೂ ಖರೀದಿಸಿ ಅಳವಡಿಸಬಹುದು.
ಹೊಸ ಫೀಚರ್ ಗಳಲ್ಲಿ ಏರ್ ಕೂಲ್ ಇರುವ ಕಪ್ ಹೋಲ್ಡರ್ ಗಳು, ಫ್ರಂಟ್ ಆರ್ಮ್ ರೆಸ್ಟ್ , ಆಟೋಮ್ಯಾಟಿಕ್ ಏರ್ ಕಾನ್, ಮೂರನೇ ಶಾಲಿನ ಸೀಟ್ ರಿಕ್ಲಐನ್ ಮತ್ತು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಸೇರಿವೆ. ಕುತುಹೂಲಕಾರಿಯಾಗಿ ಈ ಮೂರು ಹೊಸ ಫೀಚರ್ ಗಳು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಮೂರನೇ ಸಾಲಿನ ರಿಕ್ಲಐನ್ ಮತ್ತು ಏರ್ ಕೂಲ್ ಇರುವ ಕಪ್ ಹೋಲ್ಡರ್ ಗಳು ಈಗ ಸ್ಟ್ಯಾಂಡರ್ಡ್ ಆಗಿ ದೊರೆಯುತ್ತವೆ. ಹಾಗು, ಹೆಡ್ ರೆಸ್ಟ್ ಗಳು ಎರೆಡನೆ ಹಾಗು ಮೂರನೇ ಸಾ ಲಿನ ಸೀಟ್ ಗಳಲ್ಲಿ, ಎಲ್ಲ ರೌಂಡ್ ಪವರ್ ವಿಂಡೋ ಗಳು, ಮತ್ತು ಟಿಲ್ಟ್ ಸ್ಟಿಯರಿಂಗ್ ಗಳನ್ನು ಕೂಡ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.
ಹೊಸ ಎರ್ಟಿಗಾ ಹಿಂದಿನ ಆವೃತ್ತಿಗಿಂತ ಹೆಚ್ಚಿನ ಫೀಚರ್ ಗಳನ್ನು ಕೊಡ್ಯಾಳ್;ಆಗಿದೆ, ಇನ್ನಷ್ಟು ಫೀಚರ್ ಗಳು ಕಾರ್ ನ ಒಳಗಡೆಯಲ್ಲಿನ ಒಟ್ಟಾರೆ ಅನುಭಾವವನ್ನು ಹೆಚ್ಚಿಸುತ್ತಿತ್ತು. ಖಾಸಗಿ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು , ಫೀಚರ್ ಗಳಾದ ಕ್ಯಾಪ್ಟನ್ ಸೀಟ್ ಗಳು ಮದ್ಯದಲ್ಲಿ, LED DRL ಗಳು, ಮತ್ತು ಟೆಲೆಸ್ಕೋಪಿಕ್ ಸ್ಟಿಯರಿಂಗ್ ಗಳು ಆ ಪ್ಯಾಕೇಜ್ ಅನ್ನು ಹೆಚ್ಚು ಪ್ರೀಮಿಯಂ ಆಗಿ ಮಾಡುತ್ತಿತ್ತು.
ವೇರಿಯೆಂಟ್ ಗಳು ಮತ್ತು ಬೆಲೆ
ಹೊಸ ಎರ್ಟಿಗಾ ನಾಲ್ಕು ವೇರಿಯೆಂಟ್ ಗಳಲ್ಲಿ ಸಿಗುತ್ತದೆ (L, V, Z ಮತ್ತು Z) ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳು ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ. ಒಂದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸಹ ಕೊಡಲಾಗಿದೆ, ಆದರೆ, 1.5-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ. ಪೆಟ್ರೋಲ್ ಆಟೋಮ್ಯಾಟಿಕ್ ಪವರ್ ಟ್ರೈನ್ ಗಳನ್ನು V ಮತ್ತು Z ವೇರಿಯೆಂಟ್ ಗಳಲ್ಲಿ ಮಾತ್ರ ಪಡೆಯಬಹುದಾಗಿದೆ. ದೊರೆಯುವ ಎಲ್ಲ ಫೀಚರ್ ಗಳನ್ನೂ ಗಮನಿಸಿದಾಗ ಎರ್ಟಿಗಾ ಗೆ ಸೂಕ್ತವಾದ ಬೆಲೆ ನಿಗಧಿ ಎನಿಸುತ್ತದೆ. ನಮಗೆ LXi ವೇರಿಯೆಂಟ್ ಗೆ ಸುಮಾರು Rs 7 ಲಕ್ಷದ ಹತ್ತಿರ ಇದ್ದಿದರೆ ಚೆನ್ನಾಗಿರುತ್ತಿತ್ತು ಎನಿಸಿತು ( ಅದನ್ನು Rs 7.44 ಲಕ್ಷ ದಲ್ಲಿ ಬಿಡುಗಡೆ ಮಾಡಲಾಗಿತ್ತು , ಎಕ್ಸ್ ಶೋ ರೂಮ್ ದೆಹಲಿ ). L ವೇರಿಯೆಂಟ್ ಬಿಟ್ಟು Zವೇರಿಯೆಂಟ್ ಬೆಲೆಗೆ ಉತ್ತಮ ಮೌಲ್ಯ ಕೊಡುತ್ತದೆ.
2018 Maruti Suzuki Ertiga (variants) |
Prices (ex-showroom Delhi) |
PETROL |
|
LXI |
Rs 7.44 lakh |
VXI |
Rs 8.16 lakh |
VXI AT |
Rs 9.18 lakh |
ZXI |
Rs 8.99 lakh |
ZXI AT |
Rs 9.95 lakh |
ZXI+ |
Rs 9.50 lakh |
DIESEL |
|
LDI |
Rs 8.84 lakh |
VDI |
Rs 9.56 lakh |
ZDI |
Rs 10.39 lakh |
ZDI+ |
Rs 10.90 lakh |
ಕಾರ್ಯದಕ್ಷತೆ
ಹೊಸ ಎರ್ಟಿಗಾ ಸುಝುಕಿಯ ಹಾರ್ಟ್ ಟೆಕ್ಟ್ ವೇದಿಕೆ ಮೇಲೆ ನಿರ್ಮಾಣ ಮಾಡಲಾಗಿದೆ, ಮಾರುತಿ ಹೇಳುವಂತೆ ಅದು ಹೆಚ್ಚು ದೃಢವಾಗಿದೆ ಮತ್ತು ಹಿಂದಿನ ವೇದಿಕೆಯಲ್ಲಿನದಕಿಂತ ಹಗುರವಾಗಿದೆ. ಹೊಸ ವೇದಿಕೆ ಈಗಿರುವ ಡಿಸೈರ್ ಮತ್ತು ಸ್ವಿಫ್ಟ್ ಅನ್ನು ಹೋಲುತ್ತದೆ. ಎರ್ಟಿಗಾ ಹೈವೇ ಗಳಲ್ಲಿ ನೇರವಾಗಿ ಹೋಗುವ ವಿಷಯದಲ್ಲಿ ಹೆಚ್ಚಿನ ವೇಗಗಳಲ್ಲಿ ಗಮನಾರ್ಹ ಅಭಿವೃದ್ಧಿ ಮಾಡಲಾಗಿದೆ ಮತ್ತು ಅದಕ್ಕೆ ಹೊಸ ಛಾಸಿಸ್ ಅಳವಡಿಸಿರುವುದು ಕಾರಣವಾಗಿರಬಹುದು. ನಾವೇ ಬಹಳಷ್ಟು ಹೊತ್ತು ನೇರವಾದ ರಸ್ತೆಗಳಲ್ಲಿ ಡ್ರೈವ್ ಮಾಡಿದೆವು ಹಾಗಾಗಿ ನಮಗೆ ಇದು ಹಳೆಯ ಆವೃತ್ತಿಗಿಂತ ಬಾಡಿ ರೋಲ್ ವಿಷಯದಲ್ಲಿ ಎಷ್ಟು ಮುಂದುವರೆದಿದೆ ಎಂದು ಹೇಳಲು ಆಗುತ್ತಿಲ್ಲ, ಅಥವಾ ಸ್ಟಿಯರಿಂಗ್ ಫೀಡ್ ಬ್ಯಾಕ್ ಹೇಗಿದೆ ಎಂಬ ವಿಚಾರ ಕೂಡ.
ಮತ್ತಷ್ಟು ಗಮನಾರ್ಹ ವಿಷಯಗಳೆಂದರೆ, ಇದು ರಸ್ತೆಯ ಅಡತಡೆಗಳನ್ನು ಹೇಗೆ ನಿಭಾಯಿಸುತ್ತದೆ ಎಂದು. ಸಸ್ಪೆನ್ಷನ್ ಸದೃಢವಾಗಿದೆ ಹಿಂದಿನ ಆವೃತ್ತಿಗೆ ಹೋಲಿಸಿದರೆ, ಆದರೆ, ಅದು ರಸ್ತೆಯಲ್ಲಿ ಬಂಪ್ ಗಾಲ ಅನುಭವ ತಡೆಗಟ್ಟುವುದಕ್ಕೆ ಮಾತ್ರ ಸಹಕಾರಿಯಾಗಿದೆ. ಕಾರ್ ಬೇಗನೆ ಸ್ಥಿರತೆ ಪಡೆಯುತ್ತದೆ ರಸ್ತೆಯ ವಿಕಾರತೆಗಳನ್ನು ನಿಭಾಯಿಸಿದನಂತರ ಹಾಗಾಗಿ ಅದು ಮೂರನೇ ಸಾಲಿನ ಪ್ಯಾಸೆಂಜರ್ ಗಳಿಗೆ ಹೊಸ ಎರ್ಟಿಗಾ ದಲ್ಲಿ ಸಂತೋಷ ಉಂಟುಮಾಡುತ್ತದೆ, ಹಳೆಯ ಮಾಡೆಲ್ ಗೆ ಹೋಲಿಸಿದಾಗ. ಮುಂಭಾಗದ ಸಸ್ಪೆನ್ಷನ್ಪಾಟ್ ಹೋಲ್ ಗಳಿಗೆ ಹೋದಾಗ ಕ್ರ್ಯಾಶ್ ಆಗದಿರುವುದು ಉತ್ತಮವಾಗಿದೆ ಎನಿಸುತ್ತದೆ, ಮೊದಲ ಪೀಳಿಗೆಯ ಮಾಡೆಲ್ ನಲ್ಲೂ ಸಹ ಹಾಗೆಯೆ ಇತ್ತು.
ಹೊಸ ವೇದಿಕೆಯಷ್ಟೇ ಅಲ್ಲದೆ, ಎರ್ಟಿಗಾ ದಲ್ಲಿ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಇದ್ದು ಅದರಲ್ಲಿ SHVS ಮೈಲ್ಡ್ ಹೈಬ್ರಿಡ್ ಟೆಕ್ನಲಾಜಿ ಕೊಡಲಾಗಿದೆ. ಈ ಎಂಜಿನ್ ಹೊರಹೋಗುತ್ತಿರುವ .1.4- ಲೀಟರ್ ಯೂನಿಟ್ ಗಿಂತಲೂ 13PS ಹೆಚ್ಚು ಪವರ್ ಹಾಗು 8Nm ಟಾರ್ಕ್ ಹೊಂದಿದೆ. ಹೆಚ್ಚಿನ ಟಾರ್ಕ್ ಅಷ್ಟೇನೂ ಗಮನಕ್ಕೆ ಬರುವುದಿಲ್ಲ ಪೇಪರ್ ನಲ್ಲಿ, ಆದರೆ ಅದರ ಪರಿಣಾಮ ರಸ್ತೆಯಲ್ಲಿ ತೋರಬರುತ್ತದೆ ಹೆಚ್ಚು ಬೇಗನೆ ಮುಂದುವರೆಯಲು ಸಹಕಾರಿಯಾಗುತ್ತದೆ ನೀವು ಕ್ಲಚ್ ಮೇಲಿನಿಂದ ಕಾಲನ್ನು ತೆಗೆದ ನಂತರ. ಹೆಚ್ಚಿನ ಟಾರ್ಕ್ ಸಿಗುವುದು ಗಮನಾರ್ಹವಾಗಿದೆ ಎಲ್ಲ ಸೀಟ್ ಗಳಲ್ಲಿ ಪ್ಯಾಸೆಂಜರ್ ಗಳಿದ್ದಾಗ ಹಳೆಯ ಎಂಜಿನ್ ಆವೃತ್ತಿಯಲ್ಲಿ ಇದ್ದುದಕ್ಕಿಂತ, ವಿಶೇಷವಾಗಿ ಎಲ್ಲ ಪ್ಯಾಸೆಂಜರ್ ಗಳು ಕೂತಿದ್ದು ಬೆಟ್ಟಗಳನ್ನು ಹತ್ತುವಾಗ. ಗೇರ್ ಜೊತೆಗಿನ ವೇಗಗತಿ ಪಡೆಯುವಿಕೆ ಸಹ ಸುಧಾರಿಸಲಾಗಿದೆ, ನಾವು ಆ ವಿಷಯಕ್ಕೆ ಟೆಸ್ಟ್ ಡೇಟಾ ವನ್ನು ಪರಿಗಣಿಸುತ್ತೇವೆ ಅದರಲ್ಲಿ ನಿಖರವಾದ ಮಾಹಿತಿ ದೊರೆಯುತ್ತದೆ.
5- ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಎಂಜಿನ್ ಹೆಚ್ಚು ಉತ್ಸುಕವಾಗಿರುವಂತೆ ತೋರುತ್ತದೆ 4- ಸ್ಪೀಡ್ ಆಟೋಮ್ಯಾಟಿಕ್ ಯೂನಿಟ್ ಒಂದಿಗೆ ಹೋಲಿಸಿದರೆ, ಅದು ಕೇವಲ ಟಾರ್ಕ್ ಕಾನ್ವೆರ್ಟರ್ ಆಗಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೆಚ್ಚಾಗಿ ಆರಾಮದಾಯಕ ಡ್ರೈವ್ ಗೆ ಸಹಕಾರಿಯಾಗಿದೆ ಮೋಜಿಗಾಗಿ ಅಲ್ಲ. ಅದು ಅದರದೇ ಆದ ಸಮಯ ತೆಗೆದುಕೊಳ್ಳುತ್ತದೆ ಪ್ರತಿಕ್ರಿಯೆ ನೀಡಲು (ಗೇರ್ ಬದಲಾವಣೆ) ವೇಗಗತಿ ಪಡೆಯುವಾಗ, ಹಾಗಾಗಿ ಓವರ್ಟೇಕ್ ಮಾಡಲು ಮುಂಚೆಯೇ ಯೋಚಿಸಬೇಕಾಗುತ್ತದೆ. ಹೆಚ್ಚು ಪವರ್ ಹೊಂದಿರುವ ಪೆಟ್ರೋಲ್ ಎಂಜಿನ್ ಗೆ ಅಧಿಕೃತವಾದ ಮೈಲೇಜ್ 1.4-ಲೀಟರ್ , 92PS ಎಂಜಿನ್ ಗಿಂತಲೂ ಹೆಚ್ಚು ಇದೆ. ಅದಕ್ಕೆ ಮೈಲ್ಡ್ ಹೈಬ್ರಿಡ್ ಟೆಕ್ನಲಾಜಿ ಕಾರಣವಾಗಿರಬಹುದು.
Petrol |
ಹಳೆ ಎರ್ಟಿಗಾ |
ಹೊಸ ಎರ್ಟಿಗಾ |
Engine |
1.4-litre |
1.5-litre |
Power |
92PS @ 6000rpm |
105PS @ 6000rpm (+13PS) |
Torque |
130Nm @ 4000rpm |
138Nm @ 4400rpm (+8Nm) |
Transmission |
5MT/4AT |
5MT/4AT |
Claimed FE |
17.50kmpl / 17.03kmpl |
19.34kmpl / 18.69kmpl |
Diesel |
Ertiga Old |
Ertiga New |
Engine |
1.3-litre |
1.3-litre |
Power |
90PS @ 4000rpm |
90PS @ 4000rpm |
Torque |
200Nm @ 1750rpm |
200Nm @ 1750rpm |
Transmission |
5MT |
5MT |
Claimed FE |
24.52kmpl |
25.47kmpl |
1.3-litre, 90PS ಡೀಸೆಲ್ ಎಂಜಿನ್ ಹೊಸ ಎರ್ಟಿಗಾ ಗಿಂತಲೂ ಮುಂಚೆಯ ತರಹವೇ ಇದೆ. ಅದನ್ನು ಬದಲಿಸಲಾಗಿಲ್ಲ, ಆದರೆ ಅಧಿಕೃತ ಮೈಲೇಜ್ ಡೀಸೆಲ್ ಮಾನ್ಯುಯಲ್ ಪವರ್ ಟ್ರೈನ್ ನಲ್ಲಿ ಹೆಚ್ಚು ಆಗಿದೆ ಅದು ಸರಿ ಸುಮಾರು ಒಂದು ಲೀಟರ್ ಗೆ ಒಂದು ಕಿಲೋಮೀಟರು ಅಷ್ಟು ಹೆಚ್ಚಿದೆ. ಆದರೆ ಅದಕ್ಕೆ ಕರಣ ಹೊಸ ಆವೃತ್ತಿ ಸುಮಾರು 20kg ಬಾರ ಕಡಿಮೆ ಆಗಿರುವುದು ಇರಬಹುದು.
ಅಂತಿಮ ಅನಿಸಿಕೆ
ಮಾರುತಿ ಸುಜುಕಿ ಎರ್ಟಿಗಾ ವನ್ನು ಎಲ್ಲ ರೀತಿಯಲ್ಲೂ ಉತ್ತಮವಾಗಿಸಿದೆ. ಆಂತರಿಕ ವಿಶಾಲತೆ, ಪೆಟ್ರೋಲ್ ಎಂಜಿನ್ ನ ಕಾರ್ಯದಕ್ಷತೆ , ಲಗೇಜ್ ತೆಗೆದುಕೊಂಡು ಹೋಗಬಹುದಾದ ಸಾಮರ್ಥ್ಯ, ಮತ್ತು ನೋಟ. ಹಲವು ಹೊಸ ಫೀಚರ್ ಗಳನ್ನೂ ಸಹ ಕೊಡಲಾಗಿದೆ, ಪ್ಯಾಕೇಜ್ ಸಹ ಆಕರ್ಷಕವಾಗಿದೆ. ಎರ್ಟಿಗಾ ಮನಸ್ಸಿಗೆ ಬೇಕೆನಿಸುವ ಎಲ್ಲವುಗಳನ್ನು ಹೊಂದಿದೆ.
ಮನಸ್ಸಿನಲ್ಲಿರುವುದು ಹೇಳಬೇಕೆಂದರೆ, ಹಲವು ಹಿನ್ನಡತೆಗಳು ಇವೆ. ಆಂತರಿಕಗಳ ಗುಣಮಟ್ಟ, ಉದಾಹರಣೆಗೆ ಹೆಚ್ಚು ಮುಂದುವರೆದಿಲ್ಲ ಇದರಲ್ಲಿ ಹಿಂದಿನ ಪೀಳಿಗೆಯ ಎರ್ಟಿಗಾ ದ ಬಹಳಷ್ಟು ಪಾರ್ಟ್ ಗಳನ್ನು ಹಂಚಿಕೊಳ್ಳಲಾಗಿದೆ ಎಂಬುದು ಕಂಡುಬರುತ್ತದೆ. ಅದು ಹೇಳಿದ ನಂತರ ಎರ್ಟಿಗಾ ಯಾವುದೇ ಮುಜುಗರ ತೋರುತ್ತಿಲ್ಲ. ಹಾಗಾಗಿ ಬಹಳಷ್ಟು ಮಂದಿ ಮೆಚ್ಚ ಬಹುದು ಮತ್ತು ಬಹಳಷ್ಟು ಮಂದಿ ಮೆಚ್ಚದಿರಬಹುದು. ಆದರೆ ನಾವು ಮಾರುತಿ ಸುಜುಕಿ ಗ್ರಾಹಕರ ಮನಸ್ಸನ್ನು ಗೆಲ್ಲಲು ಬಹಳಷ್ಟು ಪ್ರಯತ್ನ ಮಾಡಿದೆ ಎಂದು ಹೇಳಲು ನಿರಾಕರಿಸಲಾಗುವುದಿಲ್ಲ. ಹೊಸ ಎರ್ಟಿಗಾ ಮುಂಬದಿಯಿಂದ ಎದ್ದು ಕಾಣುವಂತಿದೆ ಮತ್ತು ಹಿಂಬದಿಯಿಂದ ಆಕರ್ಷಕವಾಗಿದೆ. ಅದರಿಂದ ಬಹಳಷ್ಟು ಜನಗಳಿಗೆ , ಎಲ್ಲರಿಗು ಅಲ್ಲದಿದ್ದರೂ ಇದನ್ನು ಹೆಚ್ಚು ಇಷ್ಟಪಡುವಂತೆ ಆಗುತ್ತದೆ ಕೊನೆಗೂ!
Also Read: Clash Of Segments: Maruti Suzuki Ertiga vs Marazzo – Which MPV To Buy?