ಮೊಟ್ಟ ಮೊದಲ ಬಾರಿಗೆ ಹೊರಬಿದ್ದಿದೆ MG Cloud EV ಟೀಸರ್, ಶೀಘ್ರದಲ್ಲೇ ಬಿಡುಗಡೆಯಾಗುವ ಸೂಚನೆ!
ಎಂಜಿ ವಿಂಡ್ಸರ್ ಇವಿ ಗಾಗಿ samarth ಮೂಲಕ ಜುಲೈ 29, 2024 04:10 pm ರಂದು ಪ್ರಕಟಿಸಲಾಗಿದೆ
- 42 Views
- ಕಾಮೆಂಟ್ ಅನ್ನು ಬರೆಯಿರಿ
ಕ್ಲೌಡ್ EVಯು MG ಯ ಮೂರನೇ ಎಲೆಕ್ಟ್ರಿಕ್ ವಾಹನವಾಗಿದ್ದು, ಇದನ್ನು ಕಾಮೆಟ್ EV ಮತ್ತು ZS EV ಶ್ರೇಣಿಯ ನಡುವೆ ಇರಿಸುವ ಸಾಧ್ಯತೆಯಿದೆ
-
ಕ್ಲೌಡ್ EV ಯು MG ಮೋಟಾರ್‌ನ ಮೂರನೇ ಎಲೆಕ್ಟ್ರಿಕ್ ವಾಹನವಾಗಲಿದೆ.
-
ಕನೆಕ್ಟೆಡ್ LED DRL ಗಳು, ಪನರೋಮಿಕ್ ಸನ್‌ರೂಫ್ ಮತ್ತು ಅಲಾಯ್ ವೀಲ್ ಡಿಸೈನ್ ನಂತಹ ಫೀಚರ್ ಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ.
-
ಅಂತಾರಾಷ್ಟ್ರೀಯ ವರ್ಷನ್ ನಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 4 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ.
-
ಇತರ ದೇಶಗಳಲ್ಲಿ, ಇದು ಒಂದೇ ಮೋಟಾರ್ ಮತ್ತು 50.6 kWh ಬ್ಯಾಟರಿಯನ್ನು ಹೊಂದಿದೆ, ಮತ್ತು CLTC ಕ್ಲೇಮ್ ಮಾಡಿರುವ 460 ಕಿ.ಮೀ. ರೇಂಜ್ ಅನ್ನು ನೀಡುತ್ತದೆ.
-
ಬೆಲೆಯು ರೂ. 20 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ).
ಭಾರತಕ್ಕಾಗಿ ತಯಾರಾಗಿರುವ MG ಯ ಹೊಸ ಎಲೆಕ್ಟ್ರಿಕ್ ಕಾರ್ MG ಕ್ಲೌಡ್ EV ಅನ್ನು ಮೊದಲ ಬಾರಿಗೆ ಟೀಸರ್ ಮೂಲಕ ತೋರಿಸಲಾಗಿದೆ. ಇದನ್ನು ಪ್ರಸ್ತುತ ಇತರ ದೇಶಗಳಲ್ಲಿ ವುಲಿಂಗ್ ಬ್ರಾಂಡ್ ಹೆಸರಿನ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮೊದಲ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಕಾರಿನ ಭಾರತೀಯ ವರ್ಷನ್ ನ ಆಗಮನದ ಬಗ್ಗೆ ಸುಳಿವು ನೀಡಲು MG ಪ್ರಾರಂಭಿಸಿದೆ. ಟಾಟಾ ನೆಕ್ಸಾನ್ ಪ್ರತಿಸ್ಪರ್ಧಿಯಾಗಿರುವ ಈ ಕಾರಿನಲ್ಲಿ ಏನೇನಿದೆ ಎಂಬುದನ್ನು ನೋಡೋಣ:
ಏನೇನು ತೋರಿಸಲಾಗಿದೆ?
ವೀಡಿಯೊದಲ್ಲಿ MG ಕ್ಲೌಡ್ EV ಅನ್ನು ತೋರಿಸಲಾಗಿಲ್ಲ, ಆದರೆ ಟೀಸರ್ ಅದರ ಹೊರಗಿನ ಡಿಸೈನ್ ಕುರಿತು ಕೆಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸುತ್ತದೆ. ಇತರ ದೇಶಗಳಲ್ಲಿ ಮಾರಾಟವಾಗುವ ಮಾಡೆಲ್ ನಲ್ಲಿರುವಂತೆ ಕಾರಿನ ಮುಂಭಾಗವು LED DRL ಗಳನ್ನು ಎರಡೂ ಸೈಡ್ ಗಳ ಹೆಡ್‌ಲೈಟ್‌ಗಳೊಂದಿಗೆ ಕನೆಕ್ಟ್ ಮಾಡುತ್ತದೆ. MG ಲೋಗೋವನ್ನು DRL ಗಳ ಕೆಳಗೆ ಮಧ್ಯದಲ್ಲಿ ಇರಿಸಲಾಗಿದೆ.
ಟೀಸರ್ ನಲ್ಲಿ ಏರೋಡೈನಾಮಿಕ್ ಅಲೊಯ್ ವೀಲ್ ಗಳನ್ನು ಹತ್ತಿರದಿಂದ ತೋರಿಸಲಾಗಿದೆ. ಅವು ಅಂತರಾಷ್ಟ್ರೀಯ ಮಾಡೆಲ್ ನಂತೆಯೇ ಕಾಣುತ್ತವೆ ಮತ್ತು ಮಧ್ಯದಲ್ಲಿ MG ಲೋಗೋವನ್ನು ನೀಡಲಾಗಿದೆ.
ಇದರ ಜೊತೆಗೆ 2-ಸ್ಪೋಕ್, ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಮತ್ತು ಪನರೋಮಿಕ್ ಸನ್‌ರೂಫ್ ವಿವರಗಳನ್ನು ಕೂಡ ತೋರಿಸಲಾಗಿದೆ.
ನಿರೀಕ್ಷಿಸಲಾಗಿರುವ ಫೀಚರ್ ಗಳು ಮತ್ತು ಸುರಕ್ಷತೆ
ಕ್ಯಾಬಿನ್ ನಲ್ಲಿ ವಿದೇಶದಲ್ಲಿ ಮಾರಾಟವಾಗುವ ಮಾಡೆಲ್ ನಲ್ಲಿರುವ ಬ್ರೊನ್ಸ್ ಅಕ್ಸೆಂಟ್ ನೊಂದಿಗೆ ಬ್ಲಾಕ್ ಥೀಮ್ ಅನ್ನು ಹೊಂದಿರಬಹುದು, ಮತ್ತು ಬ್ಲಾಕ್ ಲೆಥರೆಟ್ ಅಪ್ಹೋಲಿಸ್ಟ್ರೀಯನ್ನು ಕೂಡ ಪಡೆಯಬಹುದು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, 15.6-ಇಂಚಿನ ಫ್ರೀ ಫ್ಲೋಟಿಂಗ್ ಟೈಪ್ ಇನ್ಫೋಟೈನ್ಮೆಂಟ್ ಸಿಸ್ಟಮ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 6-ವೇ ಪವರ್ಡ್ ಡ್ರೈವರ್ ಸೀಟ್, ಹಿಂಬದಿಯ ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಫೀಚರ್ ಗಳನ್ನು ನೀಡಲಾಗಿದೆ.
ಸುರಕ್ಷತೆಯ ವಿಷಯದಲ್ಲಿ, ಇದು 6 ಏರ್‌ಬ್ಯಾಗ್‌ಗಳನ್ನು (ಅಂತರರಾಷ್ಟ್ರೀಯ ಮಾಡೆಲ್ ನಲ್ಲಿ 4 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುವ ನಿರೀಕ್ಷೆಯಿದೆ. MG ಇಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಕೆಲವು ಅಡ್ವಾನ್ಸಡ್ ಡ್ರೈವರ್ ಅಸಿಸ್ಟಂಸ್ ಸಿಸ್ಟಮ್ (ADAS) ಗಳನ್ನು ನೀಡಬಹುದು.
ಇದನ್ನು ಕೂಡ ಓದಿ: ಭಾರತದಲ್ಲಿ MG ಕ್ಲೌಡ್ EV ಟೆಸ್ಟಿಂಗ್, ಸೆಪ್ಟೆಂಬರ್ 2024 ರಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ
ನಿರೀಕ್ಷಿಸಲಾಗಿರುವ ಪವರ್‌ಟ್ರೇನ್ ಮತ್ತು ಚಾರ್ಜಿಂಗ್
ಕ್ಲೌಡ್ EVಯು ಇಂಡೋನೇಷಿಯನ್ ಮಾರುಕಟ್ಟೆಯಲ್ಲಿ ಈ ಕೆಳಗಿನ ಪವರ್‌ಟ್ರೇನ್ ಸ್ಪೆಸಿಫಿಕೇಷನ್ ನೊಂದಿಗೆ ಲಭ್ಯವಿದೆ:
ಸ್ಪೆಸಿಫಿಕೇಷನ್ ಗಳು |
|
ಬ್ಯಾಟರಿ ಸಾಮರ್ಥ್ಯ |
50.6 kWh |
ಮೋಟಾರು ಸಂಖ್ಯೆ |
1 |
ಪವರ್ |
136 PS |
ಟಾರ್ಕ್ |
200 Nm |
ಕ್ಲೇಮ್ ಮಾಡಿರುವ ರೇಂಜ್ (CLTC) |
460 ಕಿ.ಮೀ |
ಡ್ರೈವ್ ಟ್ರೈನ್ |
ಫ್ರಂಟ್-ವೀಲ್-ಡ್ರೈವ್ (FWD) |
CLTC: ಚೀನಾ ಲೈಟ್ ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್
ಆದರೆ, ಭಾರತೀಯ ವರ್ಷನ್ ಅನ್ನು ARAI ಮಾನದಂಡಗಳ ಪ್ರಕಾರ ಪರೀಕ್ಷಿಸಲಾಗುವ ಕಾರಣ ಇದು ವಿಭಿನ್ನ ರೇಂಜ್ ಅನ್ನು ಪಡೆಯುವ ಸಾಧ್ಯತೆಯಿದೆ.
MG ಮೋಟಾರ್‌ನ ಹೊಸ ಕ್ರಾಸ್‌ಒವರ್-SUV ಅನ್ನು DC ಫಾಸ್ಟ್ ಚಾರ್ಜರ್‌ನೊಂದಿಗೆ ಸುಮಾರು 30 ನಿಮಿಷಗಳಲ್ಲಿ 30% ರಿಂದ 100% ವರೆಗೆ ಚಾರ್ಜ್ ಮಾಡಬಹುದು. ಹೋಮ್ AC ಚಾರ್ಜರ್ ಅನ್ನು ಬಳಸಿ ಬ್ಯಾಟರಿಯನ್ನು 20% ರಿಂದ 100% ವರೆಗೆ ಸುಮಾರು 7 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
MG ಕ್ಲೌಡ್ EV ಬೆಲೆಯು ರೂ 20 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಇದು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರಾ XUV400 ಗೆ ಪ್ರೀಮಿಯಂ ಆಗಿರುವ ಪರ್ಯಾಯ ಆಯ್ಕೆಯಾಗಲಿದೆ, ಹಾಗೂ MG ZS EV ಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿ ಬರಲಿದೆ.
ಇತ್ತೀಚಿನ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ