Login or Register ಅತ್ಯುತ್ತಮ CarDekho experience ಗೆ
Login

MG ಮೋಟಾರ್ ನವರು ಮಾರುತಿ ವ್ಯಾಗನ್ R ಆಧಾರಿತ EV, ಟಾಟಾ ನೆಕ್ಸಾನ್ EV ಗಳಿಗೆ ಪ್ರತಿಸ್ಪರ್ದಿಗಳನ್ನು 2022 ವೇಳೆಗೆ ತರಬಹುದು.

published on ನವೆಂಬರ್ 22, 2019 12:45 pm by dhruv attri for ಎಂಜಿ ಜೆಡ್‌ಎಸ್‌ ಇವಿ 2020-2022

ಕಾರ್ ಮೇಕರ್ ಬ್ಯಾಟರಿ ಜೋಡಿಸುವ ಕಾರ್ಯಗಾರಗಳನ್ನು ಮುಂದಿನ ಎರೆಡು ವರ್ಷದಲ್ಲಿ ಸಂಯೋಜಿಸಬಹುದು

  • MG ಮೋಟಾರ್ ಹೊಸ ವಿದ್ಯುತ್ ಕಾರ್ ಗಳನ್ನು ZS EV ಕೆಳ ಹಂತದಲ್ಲಿ ತರಲು ಯೋಜನೆ ಮಾಡುತ್ತಿದೆ
  • ಈ ಮಾಸ್ ಮಾರ್ಕೆಟ್ EV ಗಳಲ್ಲಿ ಒಂದು 2022-2023 ವೇಳೆಗೆ ಬಿಡುಗಡೆ ಆಗಬಹುದು.
  • ಈ ಸ್ಥಳೀಯವಾಗಿ ಮಾಡಲ್ಪಟ್ಟ ವಿದ್ಯುತ್ ಕಾರ್ ಗಳ ಬೆಲೆ ಪಟ್ಟಿ ಸುಮಾರು ರೂ 10 ಲಕ್ಷ ದಿಂದ ರೂ 15 ಲಕ್ಷ ವರೆಗೂ ಇರಬಹುದು
  • MG ಮೋಟಾರ್ ನ ZS EV ಮುಂದಿನ ವರ್ಷದ ಪ್ರಾರಂಭದಲ್ಲಿ ಸುಮಾರು ರೂ 20 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಬಹುದು.
  • MG ಮೋಟಾರ್ ನವರು ವೇಗಗತಿ ಚಾರ್ಜರ್ ಗಳನ್ನು ಏಳು ದೊಡ್ಡ ಪಟ್ಟಣಗಳಲ್ಲಿ ಸ್ಥಾಪಿಸಬಹುದು ತನ್ನ ZS EV ಗ್ರಾಹಕರಿಗೆ ಪ್ರಾರಂಭದಲ್ಲಿ ಅನುಕೂಲವಾಗುವಂತೆ.

ಪ್ರಖ್ಯಾತ ಕಲ್ಪನೆಯನ್ನು ಹೆಕ್ಟರ್ SUV ಮೂಲಕ ಪ್ರವೇಶಿಸಿದ ನಂತರ, MG ಮೋಟಾರ್ ಈಗ EV ಆವರಣ ಪ್ರವೇಶಿಸಲು ನೋಡುತ್ತಿದೆ ZS EV ಒಂದಿಗೆ ಪ್ರಾರಂಭಿಸಿ. ZS EV ಬೆಲೆ ಸುಮಾರು ರೂ 20 ಲಕ್ಷ ವರೆಗೂ ಇರಬಹುದು, ಹಾಗು ಬಹಳಷ್ಟು ಕೈಗೆಟುವ ಬೆಲೆಯಲ್ಲಿ ದೊರೆಯಬಹುದಾದ ಎಲೆಕ್ಟ್ರಿಕ್ ಕಾರ್ ಗಳು ಸಹ ಲಭ್ಯವಾಗಬಹುದು ಸುಮಾರು ರೂ 10 ಲಕ್ಷ ದಿಂದ ರೂ 15 ಲಕ್ಷ ವ್ಯಾಪ್ತಿಯಲ್ಲಿ. ಈ EV ಗಳು ಸ್ಥಳೀಯ ಬ್ಯಾಟರಿ ತಯಾರಕರಿಂದ ಪ್ರಯೋಜನ ಪಡೆಯಬಹುದು, ಅವುಗಳನ್ನು MG ಮೋಟಾರ್ ನವರು ಭಾರತದಲ್ಲಿ ಮುಂದಿನ ಹಲವು ವರ್ಷಗಳಲ್ಲಿ ಸ್ಥಾಪಿಸುವ ನಿರೀಕ್ಷೆ ಇದೆ.

ಈ ಯೋಜನೆಗಳ ಬಗ್ಗೆ ಮಾತನಾಡುತ್ತ , MG ಮೋಟಾರ್ ಭಾರತ MD, ರಾಜೀಕ್ ಚಾಂಬ ಹೇಳಿದರು, " ಮುಖ್ಯ ರಹದಾರಿಗೆ ಸೇರಲು, ನೀವು EV ಗಳ ಬೆಲೆಯನ್ನು ಕಡಿಮೆ ಗೊಳಿಸಬೇಕಾಗಿದೆ. ಹೀಗೆ ಹೇಳಲು ಈಗ ಸಮಯವಲ್ಲದಿರಬಹುದು, ಆದರೆ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚುಗೊಳಿಸಲು, ಮತ್ತು ಬಹಳಷ್ಟು ಕಾರ್ ಗ್ರಾಹಕರಿಗೆ ಮೆಚ್ಚುಗೆಯಾಗುವಂತೆ ಮಾಡಲು, ನೀವು ರೂ 15 ಲಕ್ಷ ಮತ್ತು ರೂ 10 ಲಕ್ಷ ಮತ್ತು ಕೆಳಗೆ ಹೋಗಬೇಕಾಗುತ್ತದೆ ಮುಂದುವರೆದಂತೆ."

MG ಯವರ ವಿದ್ಯುತ್ ಇನ್ನಿಂಗ್ಸ್ ಅನ್ನು ಪ್ರಾರಂಭಿಸುತ್ತ, ZS EV ಯನ್ನು ಡಿಸೆಂಬರ್ 5, 2019 ರಂದು ಅನಾವರಣಗೊಳಿಸಲಾಗುವುದು, ಮತ್ತು ಅದರ ಬಿಡುಗಡೆ ಜನವರಿ 2020 ಯಲ್ಲಿ ಇರಬಹುದು. MG ZS EV ಯನ್ನು CKD ( ಪೂರ್ಣವಾಗಿ ಬೇರ್ಪಡಿಸಲಾದ ) ಮಾರ್ಗದಲ್ಲಿ ತರಲಾಗುವುದು ಮತ್ತು ಜೋಡಿಸಲಾಗುವುದು ಅದರ ಹಲಾಲ್ ಪ್ಲಾಂಟ್ ನಲ್ಲಿ. MG ZS EV ಯಲ್ಲಿ 44.5 KWh ಬ್ಯಾಟರಿ ಪ್ಯಾಕ್ ಕೊಡಲಾಗಿದೆ ಮತ್ತು ಅದು 400km ವ್ಯಾಪ್ತಿಯ ARAI ಇಂದ ಮಾಪನ ಮಾಡಲಾದ ವ್ಯಾಪ್ತಿ ಹೊಂದಿದೆ ಒಂದು ಬಾರಿಯ ಚಾರ್ಜ್ ಗೆ ಅನುಗುಣವಾಗಿ. MG ಯವರು ಈಗಾಗಲೇ ಏಳುನಗರಗಳಲ್ಲಿ ಸ್ಥಳಗಳನ್ನು ನಿಗದಿಪಡಿಸಿದೆ ಮತ್ತು ಅಲ್ಲಿ ZS EV ಗ್ರಾಹಕರಿಗಾಗಿ ವೇಗಗತಿ ಚಾರ್ಜರ್ ಗಳನ್ನು ಸ್ಥಾಪಿಸಲಾಗುತ್ತದೆ.

MG ಯವರ ವಿದ್ಯುತ್ ಕಾರ್ ಗಳ ವ್ಯಾಪ್ತಿ ಸುಮಾರು ರೂ 10 ಲಕ್ಷ ದಿಂದ ರೂ 15 ಲಕ್ಷ ವರೆಗೆಯಿರುತ್ತದೆ. ಮತ್ತು ಅವು ತನ್ನ ಪ್ರಮುಖ ಪ್ರತಿಸ್ಪರ್ದಿ ತಯಾರಕರಾದ ಟಾಟಾ ತನ್ನ ಟಿಗೋರ್ EV, ನೆಕ್ಸಾನ್ EV ಮತ್ತು ಅಲ್ಟ್ರಾಜ್ EV ಯೊಂದಿಗೆ, ಮತ್ತು ಮಹಿಂದ್ರಾ ಅವರ 2020 XUV300 EV ಮತ್ತು eKUV ಗಳೊಂದಿಗೆ (ಕೆಲವೇ ತಿಂಗಳಲ್ಲಿ ಬಿಡುಗಡೆ ನಿರೀಕ್ಷಿಸಲಾಗಿದೆ ), ಮತ್ತು ಮಾರುತಿ ವ್ಯಾಗನ್ R- ವೇದಿಕೆಯ EV ಗಳೊಂದಿಗೆ ಸ್ಪರ್ದಿಸುತ್ತದೆ. ಇವುಗಳಲ್ಲಿನ ಬಹಳಷ್ಟು EV ಗಳು ಮಾರ್ಕೆಟ್ ಗೆ 2021 ವೇಳೆಗೆ ಬರಬಹುದು.

ಮುಂಬರುವ EV ಗಳ ಪೂರ್ಣ ಪಟ್ಟಿಯನ್ನು ಇಲ್ಲಿ ನೋಡಿ.

Source

d
ಅವರಿಂದ ಪ್ರಕಟಿಸಲಾಗಿದೆ

dhruv attri

  • 15 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಎಂಜಿ ZS EV 2020-2022

a
aarif
Nov 14, 2019, 2:11:32 PM

this is nice

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ