MG ಮೋಟರ್ ಇಂಡಿಯಾ ರೂಪಿಸುತ್ತಿದೆ 5-ವರ್ಷದ ಮಾರ್ಗಸೂಚಿ, EVಗಳ ಮೇಲೆ MGಯ ಪ್ರಮುಖ ಗಮನ
ಮೇ 12, 2023 02:00 pm ರಂದು rohit ಮೂಲಕ ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಈ ಕಾರುತಯಾರಕ ಸಂಸ್ಥೆ ಮುಂದಿನ ಐದು ವರ್ಷಗಳಲ್ಲಿನ ತನ್ನ ಭಾರತೀಯ ಉದ್ಯಮ ಕಾರ್ಯನಿರ್ವಹಣೆಗಾಗಿ ರೂ 5,000 ಕೋಟಿಗೂ ಹೆಚ್ಚು ಹೂಡಿಕೆ ಮಾಡುವುದಾಗಿ ಹೇಳಿದೆ.
- MG ಗುಜರಾತಿನಲ್ಲಿ ಮತ್ತೊಂದು ಉತ್ಪಾದನಾ ಘಟಕವನ್ನು ಸ್ಥಾಪಿಸಲಿದ್ದು ಇದರ ಒಟ್ಟು ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಪ್ರಸ್ತುತ 1.2 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಿದೆ.
- EV ಭಾಗಗಳ ಸ್ಥಳೀಯ ಉತ್ಪಾದನೆಯನ್ನು ಬಲಗೊಳಿಸುವತ್ತ ಮತ್ತು ಗುಜರಾತಿನಲ್ಲಿ ಬ್ಯಾಟರಿ ಅಸೆಂಬ್ಲಿ ಘಟಕವನ್ನು ಸ್ಥಾಪಿಸುವತ್ತ ಕೇಂದ್ರೀಕರಿಸಿದೆ.
- 4-5 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಿದ್ದು ಹೆಚ್ಚಿನವು EVಗಳಾಗಿರಲಿವೆ.
- 2028ರ ವೇಳೆಗೆ EV ಲೈನ್ ಅಪ್‌ನಿಂದ ಒಟ್ಟು ಕಾರು ಮಾರಾಟದ 65 ರಿಂದ 75 ಪ್ರತಿಶತದಷ್ಟು ಸಾಧಿಸುವ ಗುರಿ ಹೊಂದಿದೆ.
MG ಮೋಟರ್ ಭಾರತದ ಮಾರುಕಟ್ಟೆಗೆ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ ಹಾಗೂ ತಾನು ಹೊಸದಾಗಿ ಪ್ರಕಟಿಸಿದ 5-ವರ್ಷದ ಮಾರ್ಗಸೂಚಿಯಲ್ಲಿ ಉತ್ಸುಕತೆಯಿಂದ ಕಾರ್ಯನಿರ್ವಹಿಸುವಂತೆ ಕಾಣುತ್ತದೆ. ಇದು ಹೊಸ ಘಟಕವನ್ನು ಸ್ಥಾಪಿಸುವುದು, ಹೊಸ ಕಾರುಗಳನ್ನು ಪರಿಚಯಿಸುವುದು, ಹೊಸ ತಂತ್ರಜ್ಞಾನದ ಸ್ಥಳೀಕರಣ ಮತ್ತು ಹೊಸದಾಗಿ ಹೂಡಿಕೆಗಳನ್ನು ಮಾಡುವುದನ್ನು ಒಳಗೊಂಡಿದೆ. ಈ ಎಲ್ಲಾ ವಿವರಗಳನ್ನು ನಾವೀಗ ನೋಡೋಣ:
ಸ್ಥಳೀಕರಣ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದು
MGಯು ವಾರ್ಷಿಕವಾಗಿ ಪ್ರಸ್ತುತ 1.2 ಲಕ್ಷ ದಿಂದ 3 ಲಕ್ಷದ ತನಕ ಕಾರುಗಳ ಸಂಯೋಜಿತ ಉತ್ಪಾದನಾ ಫಲಿತಾಂಶವನ್ನು ಹೆಚ್ಚಿಸಲು ಗುಜರಾತಿನಲ್ಲಿ ಎರಡನೇ ಕಾರು ಉತ್ಪಾದನಾ ಘಟಕವನ್ನು ಸ್ಥಾಪಿಸಲು ಯೋಜಿಸುತ್ತಿದೆ.
ಅಲ್ಲದೇ ಈ ಕಾರುತಯಾರಕರು EV ಭಾಗಗಳ ಸ್ಥಳೀಯ ಉತ್ಪಾದನೆಯನ್ನು ಬಲಪಡಿಸಲು ಮತ್ತು ಗುಜರಾತಿನಲ್ಲಿ ಬ್ಯಾಟರಿ ಅಸೆಂಬ್ಲಿ ಯೂನಿಟ್ ಅನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸುತ್ತಿದೆ. ಅಲ್ಲದೇ ಇದು ಹೈಡ್ರೋಜನ್ ಇಂಧನ ಘಟಕಗಳು ಮತ್ತು ಸೆಲ್ ಉತ್ಪಾದನೆ ಮುಂತಾದ ಹೊಸ ತಂತ್ರಜ್ಞಾನಗಳಲ್ಲಿಯೂ ಹೂಡಿಕೆ ಮಾಡಲಿದ್ದು, JVಗಳು ಅಥವಾ ತೃತೀಯ ಕಕ್ಷಿ ಉತ್ಪಾದನೆಯ ಮೂಲಕ ಸ್ಥಳೀಕರಣವನ್ನು ಹೆಚ್ಚಿಸಿದೆ.
ಅಲ್ಲದೇ ಇದು ಮುಂದಿನ ಎರಡರಿಂದ ನಾಲ್ಕು ವರ್ಷಗಳಲ್ಲಿ ಭಾರತೀಯರ ಬಹುಪಾಲು ಷೇರುಗಳನ್ನು ಕಡಿಮೆಗೊಳಿಸುವ ಯೋಜನೆಗಳನ್ನು ಹೊಂದಿದೆ.
ಇದನ್ನೂ ಓದಿ: ಇಲ್ಲಿವೆ ಏಪ್ರಿಲ್ 2023ರಲ್ಲಿ ಮಾರಾಟವಾಗುತ್ತಿರುವ 10 ಅತ್ಯುತ್ತಮ ಕಾರುಗಳು
ಹೊಸ ಕಾರುಗಳು ಮತ್ತು ಮಾರಾಟದ ನಿರೀಕ್ಷೆ
MG ನಮ್ಮ ಮಾರುಕಟ್ಟೆಯಲ್ಲಿ ಈಗಾಗಲೇ ಹೇಳಲಾದ ಅವಧಿಯಲ್ಲಿ ನಾಲ್ಕರಿಂದ ಐದು ಹೊಸಕಾರುಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದು, ಇವುಗಳಲ್ಲಿ ಹೆಚ್ಚಿನವು EVಗಳಾಗಿರಲಿವೆ. ಈ ಕಾರುತಯಾರಕ ಸಂಸ್ಥೆಯು ನಮ್ಮ ಮಾರುಕಟ್ಟೆಯಲ್ಲಿ 2028ರ ವೇಳೆಗೆ EVಗಳು ತನ್ನ ಒಟ್ಟು ಮಾರಾಟದ 65 ರಿಂದ 75 ಪ್ರತಿಶತದಷ್ಟು ಇರಬೇಕೆಂದು ಬಯಸುತ್ತದೆ.
ಹೂಡಿಕೆ ಮೊತ್ತ ಮತ್ತು ಕಾರ್ಯಪಡೆ
ಮೇಲೆ ಹೇಳಲಾದ ಗುರಿಗಳನ್ನು ತಲುಪಲು, ಈ ಕಾರುತಯಾರಕ ಸಂಸ್ಥೆಯು ಮುಂದಿನ ತನ್ನ ಭಾರತೀಯ ಉದ್ಯಮ ಕಾರ್ಯಾಚರಣೆಯಲ್ಲಿ ಐದು ವರ್ಷಗಳಾದ್ಯಂತ ರೂ 5,000 ಕೋಟಿಗೂ ಹೆಚ್ಚಿನ ಹೂಡಿಕೆಯನ್ನು ಮಾಡಲು ನಿರ್ಧರಿಸಿದೆ. ಗುರಿಯನ್ನು ಸಾಧಿಸುವ ಇನ್ನೊಂದು ಅಂಶವೆಂದರೆ ದೊಡ್ಡ ಕಾರ್ಯಪಡೆಯನ್ನು ಹೊಂದುವುದು, ಕಾರು ತಯಾರಕ ಸಂಸ್ಥೆಯ ಪ್ರಕಾರು 2028ರ ವೇಳೆಗೆ ಇದು 20,000ದಷ್ಟು ಆಗುತ್ತದೆ.
ಇದನ್ನೂ ಓದಿ: ಇಲ್ಲಿವೆ ಏಪ್ರಿಲ್ 2023ರ ವೇಳೆಗೆ ಮಾರಾಟವಾಗುವ 15 ಅತ್ಯುತ್ತಮ ಕಾರುಗಳು
MGಯ ಇಲ್ಲಿಯ ತನಕದ ಭಾರತೀಯ ಇನ್ನಿಂಗ್ಸ್
ಈ ಕಾರುತಯಾಕರು ಭಾರತಕ್ಕೆ 2019ರಲ್ಲಿ ಹೆಕ್ಟರ್ ಎಂಬ ಮಧ್ಯಮ ಗಾತ್ರದ SUVಯೊಂದಿಗೆ ಪ್ರವೇಶಿಸಿತು. ತನ್ನ ಸುಮಾರು 4-ವರ್ಷಗಳ ಅವಧಿಯಲ್ಲಿ, MG ಮೋಟಾರ್ ನಮ್ಮ ಮಾರುಕಟ್ಟೆಗೆ ಪೂರ್ಣ-ಗಾತ್ರದ SUV ಮತ್ತು ಎರಡು EVಗಳನ್ನು ಒಳಗೊಂಡಂತೆ ಅನೇಕ ಕಾರುಗಳನ್ನು ಪರಿಚಯಿಸಿದೆ, ಹೊಸದಾಗಿ ಬಿಡುಗಡೆಯಾದ ಕಾಮೆಟ್ EV ಇವುಗಳಲ್ಲಿ ಒಂದಾಗಿದ್ದು, ಇದು ಭಾರತದ ಅತ್ಯಂತ ಕೈಗೆಟುಕುವ ಕಾರು ಆಗಿದೆ. ಏಪ್ರಿಲ್ 2023ರಲ್ಲಿ ಹೋಂಡಾ ನಂತರ ಇದು ಅತ್ಯುತ್ತಮವಾಗಿ ಮಾರಾಟವಾದ ಎಂಟನೇ ಕಾರು ಆಗಿದೆ.
ಇದನ್ನು ಓದಿ: 2023 MG ಹೆಕ್ಟರ್ ಮೊದಲ ಡ್ರೈವ್: ADAS ಮತ್ತು ಹೆಚ್ಚುವರಿ ಫೀಚರ್‌ಗಳು ಪ್ರೀಮಿಯಂಗೆ ತಕ್ಕಂತೆ ಇವೆಯೇ?