• English
    • Login / Register

    Comet EV ಮತ್ತು ZS EV ಸೇರಿದಂತೆ ಹಲವು ಮೊಡೆಲ್‌ಗಳ ಬೆಲೆಯನ್ನು ಏರಿಸಿದ MG

    ಎಂಜಿ ಕಾಮೆಟ್ ಇವಿ ಗಾಗಿ kartik ಮೂಲಕ ಜನವರಿ 31, 2025 10:40 pm ರಂದು ಪ್ರಕಟಿಸಲಾಗಿದೆ

    • 50 Views
    • ಕಾಮೆಂಟ್‌ ಅನ್ನು ಬರೆಯಿರಿ

    ಬೇಸ್‌ ವೇರಿಯೆಂಟ್‌ಗಳ ಮೇಲೆ ಬೆಲೆ ಹೆಚ್ಚಳವು ಪರಿಣಾಮ ಬೀರದಿದ್ದರೂ, ಟಾಪ್‌ ವೇರಿಯೆಂಟ್‌ಗಳ ಬೆಲೆಯಲ್ಲಿ ಗಮನಾರ್ಹ ಹೆಚ್ಚಳದಿಂದಾಗಿ ಒಟ್ಟಾರೆ ಬೆಲೆ ರೇಂಜ್‌ ಬದಲಾಗುತ್ತದೆ

    MG price hike

    • ಎಮ್‌ಜಿ ಜೆಡ್‌ಎಸ್‌ ಇವಿಯ ಬೆಲೆಯನ್ನು 89,000 ರೂ.ಗಳವರೆಗೆ ಹೆಚ್ಚಿಸಲಾಗಿದೆ.

    • ಕಾಮೆಟ್ ಇವಿ ಬೆಲೆಯನ್ನು 19,000 ರೂ.ಗಳವರೆಗೆ ಹೆಚ್ಚಿಸಲಾಗಿದೆ.

    • ಆಸ್ಟರ್ ಬೆಲೆಗಳನ್ನು ಸಹ 24,000 ರೂ.ಗಳವರೆಗೆ ಹೆಚ್ಚಿಸಲಾಗಿದೆ.

    • ಎಮ್‌ಜಿ ಹೆಕ್ಟರ್ ಬೆಲೆಯನ್ನು ಸಹ 45,000 ರೂ.ಗಳವರೆಗೆ ಹೆಚ್ಚಿಸಲಾಗಿದೆ.

    • ನಾಲ್ಕು ಕಾರುಗಳ ಬೇಸ್‌ ವೇರಿಯೆಂಟ್‌ಗಳು ಈ ಬೆಲೆ ಏರಿಕೆಯಿಂದ ಪ್ರಭಾವಿತವಾಗಿಲ್ಲ.

    ಮೋರಿಸ್ ಗ್ಯಾರೇಜಸ್ (ಸಾಮಾನ್ಯವಾಗಿ MG ಎಂದು ಕರೆಯಲಾಗುತ್ತದೆ) ತನ್ನ ಸಂಪೂರ್ಣ ರೇಂಜ್‌ನ ಕಾರುಗಳ ಬೆಲೆಗಳನ್ನು ಹೆಚ್ಚಿಸಿದೆ. ಜೆಡ್‌ಎಸ್‌ ಇವಿ ಸುಮಾರು 90,000 ರೂ.ಗಳ ಗರಿಷ್ಠ ಬೆಲೆ ಏರಿಕೆಯನ್ನು ಪಡೆದಿದ್ದು, ನಂತರದ ಸ್ಥಾನದಲ್ಲಿ ಹೆಕ್ಟರ್, ಆಸ್ಟರ್ ಮತ್ತು ಕಾಮೆಟ್ ಇವಿಗಳಿವೆ. ಈ ಲೇಖನದಲ್ಲಿ, ಮೇಲೆ ತಿಳಿಸಿದ ಕಾರುಗಳ ಪ್ರತಿಯೊಂದು ವೇರಿಯೆಂಟ್‌ ಪಡೆದ ಬೆಲೆ ಏರಿಕೆಯ ಜೊತೆಗೆ ಬೆಲೆ ವ್ಯತ್ಯಾಸವನ್ನು ನಾವು ವಿವರಿಸಿದ್ದೇವೆ.

    ಎಮ್‌ಜಿ ಜೆಡ್‌ಎಸ್‌ ಇವಿ

    MG ZS EV Exterior Image

     

    ಜೆಡ್‌ಎಸ್‌ ಇವಿ

     

     

    ವೇರಿಯೆಂಟ್‌

    ಹಳೆಯ

    ಹೊಸ

    ವ್ಯತ್ಯಾಸ

    ಎಕ್ಸ್‌ಕ್ಯೂಟಿವ್‌

    18,98,000

    18,98,000

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸೈಟ್‌ ಪ್ರೋ

    19,98,000

    20,47,800

    49,800

    ಎಕ್ಸ್‌ಕ್ಲೂಸಿವ್‌ ಪ್ಲಸ್‌ 

    24,53,800

    25,14,800

    61,000

    ಎಕ್ಸ್‌ಕ್ಲೂಸಿವ್‌ ಪ್ಲಸ್‌ ಐವರಿ

    24,73,800

    25,34,800

    61,000

    ಎಸ್ಸೆನ್ಸ್‌

    25,54,800

    26,43,800

    89,000

    ಎಸ್ಸೆನ್ಸ್‌ ಐವರಿ

    25,74,800

    26,63,800

    89,000

    • ಸ್ಟ್ಯಾಂಡರ್ಡ್ ಮತ್ತು ಐವರಿ ಇಂಟೀರಿಯರ್‌ ಹೊಂದಿರುವ ಟಾಪ್-ಎಂಡ್ ಎಸೆನ್ಸ್ ವೇರಿಯೆಂಟ್‌ಗಳ ಬೆಲೆಗಳು ಗರಿಷ್ಠ 89,000 ರೂ.ಗಳಷ್ಟು ಹೆಚ್ಚಳವನ್ನು ಕಂಡಿವೆ.

    • ಈ ಬೆಲೆ ಏರಿಕೆಯಿಂದ ಬೇಸ್‌ ವೇರಿಯೆಂಟ್‌ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

    • ಎಮ್‌ಜಿ ಜೆಡ್‌ಎಸ್‌ ಇವಿಯ ನವೀಕರಿಸಿದ ಬೆಲೆ ರೇಂಜ್‌ 18.98 ಲಕ್ಷ ರೂ.ಗಳಿಂದ 26.63 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. 

    ಎಮ್‌ಜಿ ಕಾಮೆಟ್‌ ಇವಿ

    MG Comet EV Front Left Side

     

    ಕಾಮೆಟ್‌

     

     

    ವೇರಿಯೆಂಟ್‌

    ಹಳೆಯ

    ಹೊಸ

    ವ್ಯತ್ಯಾಸ

    ಎಕ್ಸ್‌ಕ್ಯೂಟಿವ್‌

    6,99,800

    6,99,800

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸೈಟ್‌

    8,08,000

    8,20,000

    12,000

    ಎಕ್ಸೈಟ್‌ ಎಫ್‌ಸಿ

    8,55,800

    8,72,800

    17,000

    ಎಕ್ಸ್‌ಕ್ಲೂಸಿವ್‌

    9,11,800

    9,25,800

    14,000

    ಎಕ್ಸ್‌ಕ್ಲೂಸಿವ್‌ ಎಫ್‌ಸಿ

    9,48,800

    9,67,800

    19,000

    • ಟಾಪ್ ವೇರಿಯೆಂಟ್‌ ಆದ ಎಕ್ಸ್‌ಕ್ಲೂಸಿವ್ ಎಫ್‌ಸಿ ಬೆಲೆಯನ್ನು 19,000 ರೂ.ಗಳಷ್ಟು ಹೆಚ್ಚಿಸಲಾಗಿದೆ.

    • ಜೆಡ್‌ಎಸ್‌ ಇವಿಯಂತೆಯೇ, ಕಾಮೆಟ್ ಇವಿಯ ಬೇಸ್‌ ವೇರಿಯೆಂಟ್‌ನ ಬೆಲೆಯು ಬದಲಾಗದೆ ಉಳಿದಿದೆ.

    • ಕಾಮೆಟ್ ಇವಿಯ ಹೊಸ ಬೆಲೆ ರೇಂಜ್‌ ಈಗ 7 ಲಕ್ಷದಿಂದ 9.67 ಲಕ್ಷ ರೂ.ಗಳಷ್ಟಿದೆ (ಎಕ್ಸ್-ಶೋರೂಂ).

    ಎಮ್‌ಜಿ ಆಸ್ಟರ್‌

    MG Astor Front Left Side

                                            ಆಸ್ಟರ್‌

                                                      MT^

    ವೇರಿಯೆಂಟ್‌

    ಹಳೆಯ

    ಹೊಸ

    ವ್ಯತ್ಯಾಸ

    ಸ್ಪ್ರಿಂಟ್‌

    9,99,800

    9,99,800

    ಯಾವುದೇ ವ್ಯತ್ಯಾಸವಿಲ್ಲ

    ಶೈನ್‌

    11,99,800

    12,11,800

    12,000

    ಸೆಲೆಕ್ಟ್‌

    13,30,800

    13,43,800

    13,000

    ಶಾರ್ಪ್‌ ಪ್ರೋ

    14,99,800

    15,20,800

    21,000

                              ಆಟೋಮ್ಯಾಟಿಕ್‌

    ಸೆಲೆಕ್ಟ್‌ ಐವೊರಿ ಸಿವಿಟಿ*

    14,32,800

    14,46,800

    14,000

    ಶಾರ್ಪ್‌ ಪ್ರೋ ಐವೊರಿ ಸಿವಿಟಿ

    16,25,800

    16,48,800

    23,000

    ಸ್ಯಾವಿ ಪ್ರೋ ಡಿಟಿ ಐವೊರಿ ಸಿವಿಟಿ

    17,21,800

    17,45,800

    24,000

    ಸ್ಯಾವಿ ಪ್ರೋ ಸಂಗಿರ ಡ್ಯೂಯಲ್‌ಟೋನ್‌ ಸಿವಿಟಿ

    17,31,800

    17,55,800

    24,000

    ಸ್ಯಾವಿ ಪ್ರೋ ಸಂಗಿರ ಡ್ಯುಯಲ್‌ ಟೋನ್‌ 6-ಆಟೋಮ್ಯಾಟಿಕ್‌ 

    18,34,800

    18,34,800

    ಯಾವುದೇ ವ್ಯತ್ಯಾಸವಿಲ್ಲ

                                        ಬ್ಲ್ಯಾಕ್‌ಸ್ಟಾರ್ಮ್‌

    MT ಬ್ಲ್ಯಾಕ್‌ಸ್ಟಾರ್ಮ್‌

    13,64,800

    13,77,800

    13,000

    CVT ಸೆಲೆಕ್ಟ್‌ ಬ್ಲ್ಯಾಕ್‌ಸ್ಟಾರ್ಮ್‌

    14,66,800

    14,80,800

    14,000

    *CVT= ಕಂಟಿನ್ಯೂಸ್ಲಿ ವೇರಿಯಬಲ್ ಟ್ರಾನ್ಸ್‌ಮಿಷನ್

    ^MT= ಮ್ಯಾನುಯಲ್ ಟ್ರಾನ್ಸ್‌ಮಿಷನ್ 

    • ಹಿಂದಿನ ಕಾರುಗಳಂತೆಯೇ ಆಸ್ಟರ್‌ನ ಬೆಲೆ ಏರಿಕೆಯು ಟಾಪ್-ಎಂಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್‌ ವೇರಿಯೆಂಟ್‌ಗಳಲ್ಲಿದೆ.

    • ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್‌ಗಳು MT ಮತ್ತು CVT ಗಳಿಗೆ ಕ್ರಮವಾಗಿ ರೂ 13,000 ಮತ್ತು ರೂ 14,000 ರಷ್ಟು ಬೆಲೆ ಏರಿಕೆಯನ್ನು ಪಡೆದಿವೆ.

    • ಬೇಸ್‌ ವೇರಿಯೆಂಟ್‌ ಶೈನ್, ಜೊತೆಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಹೊಂದಿದ ಸ್ಯಾವಿ ಪ್ರೊ ವೇರಿಯೆಂಟ್‌ ಯಾವುದೇ ಪರಿಣಾಮ ಬೀರುವುದಿಲ್ಲ.

    • ಎಮ್‌ಜಿ ಆಸ್ಟರ್ ಬೆಲೆ ಈಗ 10 ಲಕ್ಷದಿಂದ 18.35 ಲಕ್ಷ ರೂ.ಗಳವರೆಗೆ ಇದೆ (ಎಕ್ಸ್ ಶೋ ರೂಂ).

    ಇದಕ್ಕೆ ಸಂಬಂಧಿತ: MG Windsor EV ಬೆಲೆಯಲ್ಲಿ 50,000 ರೂ.ಗಳಷ್ಟು ಏರಿಕೆ, ಏನಿರಬಹುದು ಕಾರಣ ?

    ಎಮ್‌ಜಿ ಹೆಕ್ಟರ್‌

    MG Hector Front Left Side

    ಹೆಕ್ಟರ್‌ ಮ್ಯಾನ್ಯುವಲ್‌ ಪೆಟ್ರೋಲ್‌

    ವೇರಿಯೆಂಟ್‌

    ಹಳೆಯ

    ಹೊಸ

    ವ್ಯತ್ಯಾಸ

    ಸ್ಟೈಲ್‌

    13,99,800

    13,99,800

    ಯಾವುದೇ ವ್ಯತ್ಯಾಸವಿಲ್ಲ

    ಶೈನ್‌ ಪ್ರೋ

    16,40,800

    16,73,800

    33,000

    ಸೆಲೆಕ್ಟ್‌ ಪ್ರೋ

    17,72,800

    18,07,800

    35,000

    ಸ್ಮಾರ್ಟ್‌ ಪ್ರೋ

    18,67,800

    19,05,800

    38,000

    ಶಾರ್ಪ್‌ ಪ್ರೋ

    20,19,800

    20,60,800

    41,000

    ಸಿವಿಟಿ ಪೆಟ್ರೋಲ್‌

    ಶೈನ್‌ ಪ್ರೋ

    17,41,800

    17,71,800

    30,000

    ಸೆಲೆಕ್ಟ್‌ ಪ್ರೋ

    18,95,800

    19,33,800

    38,000

    ಶಾರ್ಪ್‌ ಪ್ರೋ

    21,50,800

    21,81,800

    31,000

    ಸ್ಯಾವಿ ಪ್ರೋ

    22,49,800

    22,88,800

    39,000

    ಡೀಸೆಲ್‌ ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌

    ಶೈನ್‌ ಪ್ರೋ

    18,12,800

    18,57,800

    45,000

    ಸೆಲೆಕ್ಟ್‌ ಪ್ರೋ

    19,18,800

    19,61,800

    43,000

    ಸ್ಮಾರ್ಟ್‌ ಪ್ರೋ

    20,29,800

    20,60,800

    31,000

    ಶಾರ್ಪ್‌ ಪ್ರೋ

    22,24,800

    22,24,800

    ಯಾವುದೇ ವ್ಯತ್ಯಾಸವಿಲ್ಲ

    • ಪೆಟ್ರೋಲ್ ವೇರಿಯೆಂಟ್‌ಗಳನ್ನು ಪರಿಗಣಿಸಿದಾಗ, ಮ್ಯಾನ್ಯುವಲ್‌ ಶಾರ್ಪ್ ಪ್ರೊ ಮತ್ತು ಸಿವಿಟಿ ಸ್ಯಾವಿ ಪ್ರೊ ಕ್ರಮವಾಗಿ 41,000 ರೂ. ಮತ್ತು  39,000 ರೂ.ಗಳ ಗರಿಷ್ಠ ಬೆಲೆ ಏರಿಕೆಯನ್ನು ಪಡೆಯುತ್ತವೆ.

    • ಡೀಸೆಲ್ ಚಾಲಿತ ಶೈನ್ ಪ್ರೊ ವೇರಿಯೆಂಟ್‌ ಗರಿಷ್ಠ 45,000 ರೂ.ಗಳ ಬೆಲೆ ಏರಿಕೆಯನ್ನು ಪಡೆಯುತ್ತದೆ.

    • ಡೀಸೆಲ್ ಪವರ್‌ಟ್ರೇನ್ ಹೊಂದಿರುವ ಶಾರ್ಪ್ ಪ್ರೊ ಜೊತೆಗೆ ಬೇಸ್‌ ವೇರಿಯೆಂಟ್‌ ಅನ್ನು ಈ ಬೆಲೆ ಏರಿಕೆಯಿಂದ ಹೊರಗಿಡಲಾಗಿದೆ.

    • ಎಂಜಿ ಹೆಕ್ಟರ್‌ನ ಪರಿಷ್ಕೃತ ಬೆಲೆ 14 ಲಕ್ಷದಿಂದ 22.89 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಇದೆ.

    ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

    ಇದನ್ನೂ ಸಹ ಓದಿ: 2025ರ ಆಟೋ ಎಕ್ಸ್‌ಪೋದಲ್ಲಿ MG: ಹೊಸ MG ಸೆಲೆಕ್ಟ್ ಕಾರುಗಳು, ಹೊಸ ದೊಡ್ಡ ಗಾತ್ರದ ಎಸ್‌ಯುವಿ ಮತ್ತು ಇನ್ನಷ್ಟು.

    was this article helpful ?

    Write your Comment on M g ಕಾಮೆಟ್ ಇವಿ

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience