Login or Register ಅತ್ಯುತ್ತಮ CarDekho experience ಗೆ
Login

MGಯಿಂದ ವಿಶೇಷ ಸಾಧನೆ; Windsor EV ಬಿಡುಗಡೆಯಾದಾಗಿನಿಂದ 15,000 ಯುನಿಟ್‌ಗಳ ಉತ್ಪಾದನೆ

ಎಂಜಿ ವಿಂಡ್ಸರ್‌ ಇವಿ ಗಾಗಿ kartik ಮೂಲಕ ಫೆಬ್ರವಾರಿ 21, 2025 08:45 pm ರಂದು ಪ್ರಕಟಿಸಲಾಗಿದೆ

ಎಮ್‌ಜಿ ಪ್ರಕಾರ, ವಿಂಡ್ಸರ್ ಇವಿಯು ದಿನಕ್ಕೆ ಸುಮಾರು 200 ಬುಕಿಂಗ್‌ಗಳನ್ನು ಪಡೆಯುತ್ತದೆ

  • ಎಮ್‌ಜಿ ವಿಂಡ್ಸರ್ ಅನ್ನು 2024ರ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು.

  • ನಮ್ಮ ದೇಶದಲ್ಲಿ ಬ್ಯಾಟರಿ ಆಸ್ ಎ ಸರ್ವಿಸ್ (BaaS) ಬಾಡಿಗೆ ಯೋಜನೆಯನ್ನು ಪಡೆದ ಮೊದಲ EV ಇದಾಗಿದೆ.

  • ವಿಂಡ್ಸರ್ ಸತತ ನಾಲ್ಕು ತಿಂಗಳು ತನ್ನ ಸೆಗ್ಮೆಂಟ್‌ನಲ್ಲಿ ಹೆಚ್ಚು ಮಾರಾಟವಾದ EV ಎಂದು ವರದಿಯಾಗಿದೆ.

  • ಇದು ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

  • ಎಂಜಿ ವಿಂಡ್ಸರ್ ಬೆಲೆ 10 ಲಕ್ಷ ರೂ.ನಿಂದ 16 ಲಕ್ಷ ರೂ.ಗಳವರೆಗೆ ಇದೆ(ಎಕ್ಸ್ ಶೋರೂಂ, ಪ್ಯಾನ್ ಇಂಡಿಯಾ).

2024ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದಾಗಿನಿಂದ MG ವಿಂಡ್ಸರ್ 15,000 ಯುನಿಟ್‌ಗಳ ಉತ್ಪಾದಿಸುವ ಮೂಲಕ ವಿಶೇಷವಾದ ಮೈಲಿಗಲ್ಲನ್ನು ಸಾಧಿಸಿದೆ. ಬಿಡುಗಡೆಯಾದ ಮೊದಲ ದಿನವೇ ಈ ಎಲೆಕ್ಟ್ರಿಕ್ ವಾಹನವು 15,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿತು, ಇದು ಭಾರತದಲ್ಲಿ ಯಾವುದೇ ಎಲೆಕ್ಟ್ರಿಕ್ ವಾಹನಕ್ಕೆ ಹೋಲಿಸಿದರೆ ಇದುವರೆಗಿನ ಅತ್ಯಧಿಕ ಬುಕಿಂಗ್‌ಗಳಲ್ಲಿ ಒಂದಾಗಿದೆ. ಪ್ರತಿದಿನ ಸುಮಾರು 200 ಬುಕಿಂಗ್‌ಗಳನ್ನು ಪಡೆಯುವ ಮೂಲಕ ಎಲೆಕ್ಟ್ರಿಕ್ ಕ್ರಾಸ್ಒವರ್‌ಗೆ ಬೇಡಿಕೆ ಇನ್ನೂ ಪ್ರಬಲವಾಗಿದೆ ಎಂದು ಎಂಜಿ ವರದಿ ಮಾಡಿದೆ. ಎಮ್‌ಜಿ ವಿಂಡ್ಸರ್ ಇವಿಯ ಒಂದು ಸಣ್ಣ ಅವಲೋಕನ ಇಲ್ಲಿದೆ.

ಎಮ್‌ಜಿ ವಿಂಡ್ಸರ್ ಇವಿ: ಅವಲೋಕನ

ವಿಂಡ್ಸರ್‌ನ ಅತ್ಯಂತ ಆಸಕ್ತಿದಾಯಕ ವಿನ್ಯಾಸದ ಅಂಶವೆಂದರೆ ಅದರ ಚಾಚಿಕೊಂಡಿರುವ ಫ್ಯಾಸಿಯಾ, ಇದು ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಅದು ಇವಿ ಆಗಿರುವುದರಿಂದ ಪ್ರಕಾಶಿತ ಎಮ್‌ಜಿ ಲೋಗೋದೊಂದಿಗೆ ಖಾಲಿಯಾಗಿರುವ ಗ್ರಿಲ್ ಅನ್ನು ಒಳಗೊಂಡಿದೆ. ಈ EV 18-ಇಂಚಿನ ಅಲಾಯ್ ವೀಲ್‌ಗಳ ಮೇಲೆ ನಿಂತಿದೆ ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಬಾಡಿ-ಬಣ್ಣದ ORVM ಗಳನ್ನು ಪಡೆಯುತ್ತದೆ. ಹಿಂಭಾಗವು ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ರೂಫ್‌ನ ಮೇಲೆ ಜೋಡಿಸಲಾದ ಸ್ಪಾಯ್ಲರ್ ಮತ್ತು ಬಂಪರ್‌ನಾದ್ಯಂತ ಚಲಿಸುವ ಕ್ರೋಮ್ ಸ್ಟ್ರಿಪ್ ಅನ್ನು ಹೊಂದಿದೆ.

ಫೀಚರ್‌ಗಳ ವಿಷಯದಲ್ಲಿ, ಎಮ್‌ಜಿ ವಿಂಡ್ಸರ್ 15.6-ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ, ಅದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಇನ್ಫಿನಿಟಿ 9-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಪನೋರಮಿಕ್ ಗ್ಲಾಸ್‌ ರೂಫ್‌, ಒರಗುವ ಹಿಂಭಾಗದ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಸುರಕ್ಷತಾ ಸೂಟ್ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನೊಂದಿಗೆ ಬರುತ್ತದೆ. ಎಮ್‌ಜಿ ವಿಂಡ್ಸರ್ ಜೊತೆಗೆ ಯಾವುದೇ ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಲಭ್ಯವಿಲ್ಲ.

ಇದನ್ನೂ ಸಹ ಓದಿ: 2025ರ Toyota Land Cruiser 300 GR-S ಬಿಡುಗಡೆ; ಬೆಲೆ 2.41 ಕೋಟಿ ರೂ. ನಿಗದಿ

ವಿಂಡ್ಸರ್ ಅನ್ನು ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ, ಇವೆಲ್ಲವೂ ಒಂದೇ ಬ್ಯಾಟರಿ ಪ್ಯಾಕ್ ಮತ್ತು ಇ-ಮೋಟಾರ್ ಅನ್ನು ಹಂಚಿಕೊಳ್ಳುತ್ತವೆ. ಪವರ್‌ಟ್ರೇನ್‌ನ ವಿಶೇಷಣಗಳು ಈ ಕೆಳಗಿನಂತಿವೆ:

ಬ್ಯಾಟರಿ ಪ್ಯಾಕ್‌

38 ಕಿ.ವ್ಯಾಟ್‌

ಪವರ್‌

136 ಪಿಎಸ್‌

ಟಾರ್ಕ್‌

200 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌ (MIDC I+II)

332 ಕಿ.ಮೀ.

ಬ್ಯಾಟರಿಯು 45 ಕಿ.ವ್ಯಾಟ್‌ ಫಾಸ್ಟ್‌ ಚಾರ್ಜರ್ ಅನ್ನು ಬೆಂಬಲಿಸುತ್ತದೆ, ಇದು 55 ನಿಮಿಷಗಳಲ್ಲಿ ಬ್ಯಾಟರಿಯನ್ನು 0 ರಿಂದ 80 ಪ್ರತಿಶತದಷ್ಟು ಚಾರ್ಜ್‌ ಮಾಡುತ್ತದೆ.

ಎಮ್‌ಜಿ ವಿಂಡ್ಸರ್ ಇವಿ: ಬೆಲೆ ಮತ್ತು ಪ್ರತಿಸ್ಪರ್ಧಿಗಳು

ವಿಂಡ್ಸರ್ ಅನ್ನು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒಗಳಿಗೆ ಪರ್ಯಾಯವೆಂದು ಪರಿಗಣಿಸಬಹುದು. ಎಲೆಕ್ಟ್ರಿಕ್ ಕ್ರಾಸ್ಒವರ್ ಬೆಲೆ 10 ಲಕ್ಷ ರೂ.ಗಳಿಂದ 16 ಲಕ್ಷ ರೂ.ಗಳವರೆಗೆ ಇದೆ (ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ).

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on M g ವಿಂಡ್ಸರ್‌ ಇವಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ