• English
  • Login / Register

MG Windsor EV ಬೆಲೆಯಲ್ಲಿ 50,000 ರೂ.ಗಳಷ್ಟು ಏರಿಕೆ, ಏನಿರಬಹುದು ಕಾರಣ ?

ಎಂಜಿ ವಿಂಡ್ಸರ್‌ ಇವಿ ಗಾಗಿ kartik ಮೂಲಕ ಜನವರಿ 31, 2025 06:55 pm ರಂದು ಪ್ರಕಟಿಸಲಾಗಿದೆ

  • 48 Views
  • ಕಾಮೆಂಟ್‌ ಅನ್ನು ಬರೆಯಿರಿ

ಬೆಲೆ ಬದಲಾವಣೆಗಳಲ್ಲಿ ಮೂರು ವೇರಿಯೆಂಟ್‌ಗಳಲ್ಲಿ ಏಕರೂಪದ ಹೆಚ್ಚಳ ಮತ್ತು ಉಚಿತ ಸಾರ್ವಜನಿಕ ಚಾರ್ಜಿಂಗ್ ಕೊಡುಗೆಯನ್ನು ಸ್ಥಗಿತಗೊಳಿಸುವುದು ಸೇರಿವೆ

MG Windsor EV Gets Costlier By Rs 50,000, Introductory Prices Come To An End

  • ಎಮ್‌ಜಿ ವಿಂಡ್ಸರ್ ಅನ್ನು 2024ರ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು.

  • ಇದನ್ನು ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ.

  • ಮೂರು ವೇರಿಯೆಂಟ್‌ಗಳು ಒಂದೇ ರೀತಿಯ 38 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಮತ್ತು 136 ಪಿಎಸ್‌ ಮತ್ತು 200 ಎನ್‌ಎಮ್‌ ಉತ್ಪಾದಿಸುವ ಮೋಟಾರ್ ಸೆಟಪ್‌ನೊಂದಿಗೆ ಬರುತ್ತವೆ.

  • ಎಂಜಿ ವಿಂಡ್ಸರ್ ಈಗ 14 ಲಕ್ಷ ರೂ.ಗಳಿಂದ 16 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ಬೆಲೆಯನ್ನು ಹೊಂದಿದೆ.

ಬ್ರಿಟಿಷ್ ಕಾರು ತಯಾರಕ ಕಂಪನಿಯಾದ ಎಂಜಿ ವಿಂಡ್ಸರ್‌ನ ಮೂರನೇ ಇವಿ ವಾಹನವಾದ ಎಂಜಿ ವಿಂಡ್ಸರ್‌ನ ಬೆಲೆಗಳನ್ನು 50,000 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಇದರ ಪರಿಚಯಾತ್ಮಕ ಬೆಲೆಗಳ ಆಫರ್‌ಗಳನ್ನು ಅಂತ್ಯಗೊಳಿಸಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಹೆಚ್ಚಳವು EV ಯ ಮೂರು ವೇರಿಯೆಂಟ್‌ಗಳ ಮೇಲೆ ಒಂದೇ ಪ್ರಮಾಣದ ಪರಿಣಾಮ ಬೀರುತ್ತದೆ. ವಿಂಡ್ಸರ್ ಇವಿ ಯ ಪರಿಷ್ಕೃತ ವೇರಿಯೆಂಟ್‌-ವಾರು ಬೆಲೆಗಳನ್ನು ವಿವರವಾಗಿ ನೋಡೋಣ.

ಎಂಜಿ ವಿಂಡ್ಸರ್ ಬೆಲೆ ಏರಿಕೆ

 

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಎಕ್ಸೈಟ್‌

13,49,800 ರೂ.

  13,99,800 ರೂ.

+ 50,000 ರೂ.

ಎಕ್ಸ್‌ಕ್ಲೂಸಿವ್‌

  14,49,800 ರೂ.

  14,99,800 ರೂ.

  • 50,000 ರೂ.

ಎಸೆನ್ಸ್‌

15,49,800 ರೂ.

15,99,800 ರೂ.

  • 50,000 ರೂ.

 

ಮೂರು ವೇರಿಯೆಂಟ್‌ಗಳಿಗೂ ಬೆಲೆ ಏರಿಕೆಯು ಏಕರೂಪವಾಗಿದ್ದು, 50,000 ರೂ. ಹೆಚ್ಚಳವಾಗಿದೆ. MG eHUB ಅಪ್ಲಿಕೇಶನ್ ಮೂಲಕ ಉಚಿತ ಚಾರ್ಜಿಂಗ್ ಅನ್ನು ಸಹ ತೆಗೆದುಹಾಕಲಾಗಿದೆ. ಬೆಲೆ ಏರಿಕೆಯ ನಂತರ, ಎಮ್‌ಜಿ ವಿಂಡ್ಸರ್ ಇವಿಯ ಪರಿಷ್ಕೃತ ಬೆಲೆ ರೇಂಜ್‌ 14 ಲಕ್ಷ ರೂ.ನಿಂದ 16 ಲಕ್ಷ ರೂ.ಗಳವರೆಗೆ ಇದೆ(ಬೆಲೆಗಳು ಭಾರತಾದ್ಯಂತ ಎಕ್ಸ್ ಶೋರೂಂ ಆಗಿದೆ). ನೀವು ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಆಯ್ಕೆಯನ್ನು ಆರಿಸಿಕೊಳ್ಳದಿದ್ದರೆ ಇವುಗಳು ಬೆಲೆಗಳಾಗಿರುತ್ತದೆ ಎಂಬುದನ್ನು ಗಮನಿಸಿ.

ಎಂಜಿ ವಿಂಡ್ಸರ್ ಕಂಫರ್ಟ್ ಮತ್ತು ಸುರಕ್ಷತಾ ಫೀಚರ್‌ಗಳು

MG Windsor EV Launched, Prices Start From Rs 9.99 Lakh

ಸೌಕರ್ಯ ಮತ್ತು ಅನುಕೂಲತೆಯನ್ನು ಒದಗಿಸಲು, ವಿಂಡ್ಸರ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 15.6-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಮತ್ತು 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ಸೌಲಭ್ಯಗಳೊಂದಿಗೆ ಬರುತ್ತದೆ. ಇತರ ಫೀಚರ್‌ಗಳಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿವೆ.

ವಿಂಡ್ಸರ್ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಬರುತ್ತದೆ. ಇದು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ಸಹ ಪಡೆಯುತ್ತದೆ.

ಇದನ್ನೂ ಓದಿ: ಭಾರತದಲ್ಲಿಯೇ ತಯಾರಾದ 5-ಡೋರ್‌ ಮಾರುತಿ ಸುಜುಕಿ Jimny Nomade ಜಪಾನ್‌ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?

ಎಂಜಿ ವಿಂಡ್ಸರ್ ಪವರ್‌ಟ್ರೇನ್

ಎಮ್‌ಜಿ ವಿಂಡ್ಸರ್ ಒಂದೇ 38 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಮತ್ತು ಒಂದೇ ಎಲೆಕ್ಟ್ರಿಕ್ ಮೋಟಾರ್ ಸೆಟಪ್ ಅನ್ನು ಹೊಂದಿದ್ದು, 136 ಪಿಎಸ್‌ ಮತ್ತು 200 ಎನ್‌ಎಮ್‌ ಉತ್ಪಾದಿಸುವ ಮೂಲಕ 332 ಕಿಮೀ ದೂರ ಕ್ರಮಿಸಲಿದೆ. ಈ ಬ್ಯಾಟರಿ ಮತ್ತು ಮೋಟಾರ್ ಪ್ಯಾಕ್ ಅನ್ನು ಮೂರು ವೇರಿಯೆಂಟ್‌ಗಳಲ್ಲಿ ಒಂದೇ ರೀತಿ ನೀಡಲಾಗಿದೆ. 

ಎಂಜಿ ವಿಂಡ್ಸರ್ ಪ್ರತಿಸ್ಪರ್ಧಿಗಳು

MG Windsor EV Launched, Prices Start From Rs 9.99 Lakh

ಎಮ್‌ಜಿ ವಿಂಡ್ಸರ್ ಅನ್ನು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಇವಿಗಳಿಗೆ ಪರ್ಯಾಯವೆಂದು ಪರಿಗಣಿಸಬಹುದು.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇದನ್ನೂ ಓದಿ: Kia Syros ನಿರೀಕ್ಷಿತ ಬೆಲೆಗಳು: ಸಬ್-4m ಎಸ್‌ಯುವಿಯಾದ ಸೋನೆಟ್‌ಗಿಂತ ಎಷ್ಟು ದುಬಾರಿಯಾಗಿದೆ ?

was this article helpful ?

Write your Comment on M g ವಿಂಡ್ಸರ್‌ ಇವಿ

explore ಇನ್ನಷ್ಟು on ಎಂಜಿ ವಿಂಡ್ಸರ್‌ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಕಿಯಾ ಇವಿ6 2025
    ಕಿಯಾ ಇವಿ6 2025
    Rs.63 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience