ಮೋದಲ ಬಾರಿಗೆ MG Windsor EVಯ ಇಂಟೀರಿಯರ್ ಟೀಸರ್ ಔಟ್
ಎಂಜಿ ವಿಂಡ್ಸರ್ ಇವಿ ಗಾಗಿ dipan ಮೂಲಕ ಆಗಸ್ಟ್ 09, 2024 07:45 pm ರಂದು ಪ್ರಕಟಿಸಲಾಗಿದೆ
- 58 Views
- ಕಾಮೆಂಟ್ ಅನ್ನು ಬರೆಯಿರಿ
ಇತ್ತೀಚಿನ ಟೀಸರ್ 135-ಡಿಗ್ರಿ ಒರಗಿರುವ ಆಸನಗಳನ್ನು ಮತ್ತು ಮುಂಬರುವ ಈ ಕ್ರಾಸ್ಒವರ್ ಇವಿಯ ಕ್ಯಾಬಿನ್ ಥೀಮ್ ಅನ್ನು ತೋರಿಸುತ್ತದೆ
- ವಿಂಡ್ಸರ್ EVಯು MG ಇಂಡಿಯಾದ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಮೂರನೇ ಕಾರು ಆಗಿದೆ.
- ಸೆಂಟರ್ ಕನ್ಸೋಲ್ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಕಂಚಿನ ಇನ್ಸರ್ಟ್‌ನೊಂದಿಗೆ ಸಂಪೂರ್ಣ-ಕಪ್ಪಾದ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ.
- ಇತ್ತೀಚಿನ ಟೀಸರ್ ಫೋಲ್ಡ್ ಮಾಡಬಹುದಾದ ರಿಯರ್ ಸೆಂಟರ್ ಆರ್ಮ್‌ರೆಸ್ಟ್, ಆಂಬಿಯೆಂಟ್ ಲೈಟಿಂಗ್ ಮತ್ತು ರಿಯರ್ ಎಸಿ ವೆಂಟ್‌ಗಳನ್ನು ಬಹಿರಂಗಪಡಿಸುತ್ತದೆ.
- ಇದು 15.6-ಇಂಚಿನ ಟಚ್‌ಸ್ಕ್ರೀನ್ ಮತ್ತು ಪವರ್-ಎಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.
- ಎಮ್‌ಜಿಯು ಇದನ್ನು ಎಲ್ಲಾ ಹಿಂಬದಿ ಪ್ರಯಾಣಿಕರಿಗೆ ಸರಿಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳು ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳೊಂದಿಗೆ ನೀಡಬಹುದು.
- ಇದು ಕ್ಲೌಡ್ ಇವಿಯಂತೆಯೇ ಅದೇ 50.6 ಕಿವ್ಯಾಟ್ ಬ್ಯಾಟರಿ ಪ್ಯಾಕ್ ಮತ್ತು ಪರಿಷ್ಕೃತ ARAI-ರೇಟೆಡ್ ಕ್ಲೈಮ್ ಮಾಡಲಾದ ರೇಂಜ್ ಅನ್ನು ಪಡೆಯಬಹುದು.
- ಇದನ್ನು ಹಬ್ಬದ ಋತುವಿನಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ಬೆಲೆಗಳು 20 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
ಎಮ್‌ಜಿಯು ಭಾರತದಲ್ಲಿ ತನ್ನ ಮೂರನೇ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ, ಅದುವೇ ಮುಂಬರುವ MG ವಿಂಡ್ಸರ್ EV. ಈ ಮೊಡೆಲ್‌ನ ಟೀಸರ್ ಅನ್ನು ಹಲವು ಬಾರಿ ಬಿಡುಗಡೆ ಮಾಡಿದ ನಂತರ, ಎಮ್‌ಜಿಯು ಈಗ ಹೊಸ ಟೀಸರ್ ಮೂಲಕ ಇಂಟಿರೀಯರ್‌ನ ಮೊದಲ ಲುಕ್ ಅನ್ನು ಒದಗಿಸಿದೆ. ಈ ಟೀಸರ್‌ನಲ್ಲಿ ನಾವು ಏನನ್ನು ಗಮನಿಸಿದ್ದೇವೆ ಎಂಬುದನ್ನು ಹತ್ತಿರದಿಂದ ನೋಡೋಣ:
ನಾವು ಏನನ್ನು ಗಮನಿಸಬಹುದು?
ಎಮ್‌ಜಿ ವಿಂಡ್ಸರ್ ಇವಿಯ ಟೀಸರ್ ಕಪ್ಪು ಲೆಥೆರೆಟ್ ಸೀಟ್‌ಗಳೊಂದಿಗೆ ಎರಡನೇ ಸಾಲನ್ನು ತೋರಿಸುತ್ತದೆ. ಇದರ ಸ್ಟ್ಯಾಂಡ್‌ಔಟ್ ಫೀಚರ್ ಎಂದರೆ, 135-ಡಿಗ್ರಿ ಒರಗಿರುವ ಹಿಂದಿನ ಸೀಟುಗಳು. ಹಿಂಭಾಗದ ಸೀಟುಗಳು ಫೋಲ್ಡ್ ಮಾಡಬಹುದಾದ ಸೆಂಟರ್ ಆರ್ಮ್‌ರೆಸ್ಟ್ ಅನ್ನು ಸಹ ಒಳಗೊಂಡಿವೆ. ಎಲ್ಲಾ ಮೂರು ಹಿಂಬದಿಯ ಸೀಟ್‌ಗಳು ಹೊಂದಾಣಿಕೆಯ ಹೆಡ್‌ರೆಸ್ಟ್‌ಗಳು ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳೊಂದಿಗೆ ಬರುತ್ತವೆ ಎಂದು ಚಿತ್ರ ತೋರಿಸುತ್ತದೆ. ಹೆಚ್ಚುವರಿಯಾಗಿ, ಹಿಂಭಾಗದ ಎಸಿ ವೆಂಟ್ ಮತ್ತು ಹಿಂಭಾಗದ ಡಿಫಾಗರ್ ಸಹ ಗೋಚರಿಸುತ್ತದೆ.
ಒಳಭಾಗವು ಕಂಚಿನ ಎಕ್ಸೆಂಟ್‌ನೊಂದಿಗೆ ಸಂಪೂರ್ಣ ಕಪ್ಪು ಯೋಜನೆಯಲ್ಲಿ ಕಂಡುಬರುತ್ತದೆ. ಆದಾಗಿಯೂ, ಟೀಸರ್‌ನಲ್ಲಿ ಕಂಡುಬರುವ ಆಂಬಿಯೆಂಟ್ ಲೈಟಿಂಗ್ ನೀಲಿ ಕಲರ್ ಅನ್ನು ಹೊಂದಿದೆ, ಆದರೆ ಪ್ರೊಡಕ್ಷನ್-ಸ್ಪೆಕ್ ಮೊಡೆಲ್ ಹೆಚ್ಚಿನ ಬಣ್ಣಗಳೊಂದಿಗೆ ಬರಬಹುದು.
ಇದನ್ನೂ ಗಮನಿಸಿ: Windsor EVಯ ಬಿಡುಗಡೆಗೆ ಮೊದಲು ಭಾರತದಲ್ಲಿ EV ಗಾಗಿ MG ಮೋಟಾರ್‌ನಿಂದ ಹೊಸ ತಂತ್ರಜ್ಞಾನಗಳ ಪರಿಚಯ
ಇತರ ನಿರೀಕ್ಷಿತ ಫೀಚರ್‌ಗಳಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್, 8.8-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಎಲೆಕ್ಟ್ರಿಕ್ ಟೈಲ್‌ಗೇಟ್ ಸೇರಿವೆ.
ಸುರಕ್ಷತಾ ಫ್ಯಾಕೇಜ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿವೆ. ಎಮ್‌ಜಿ ವಿಂಡ್ಸರ್ ಇವಿಯು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್ ಅನ್ನು ಒಳಗೊಂಡಿರುವ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್‌ನೊಂದಿಗೆ ಸಹ ಬರಬಹುದು.
ಎಂಜಿ ವಿಂಡ್ಸರ್ ಇವಿ ಎಲೆಕ್ಟ್ರಿಕ್ ಪವರ್‌ಟ್ರೇನ್
ಎಮ್‌ಜಿ ವಿಂಡ್ಸರ್ 136 ಪಿಎಸ್ ಮತ್ತು 200 ಎನ್‌ಎಮ್ ಟಾರ್ಕ್ ಅನ್ನು ವಿತರಿಸುವ, ಒಂದೇ ಫ್ರಂಟ್-ವೀಲ್-ಡ್ರೈವ್ (FWD) ಮೋಟಾರ್‌ಗೆ ಪವರ್ ನೀಡುವ 50.6 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ. ಇಂಡೋನೇಷ್ಯಾ-ಸ್ಪೆಕ್ ಆವೃತ್ತಿಯು ಚೀನಾ ಲೈಟ್ ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್ (CLTC) ಆಧಾರದ ಮೇಲೆ 460 ಕಿಮೀ ವ್ಯಾಪ್ತಿಯನ್ನು ಹೊಂದಿದೆ, ಆದರೆ ಈ ಅಂಕಿಅಂಶವು ಭಾರತೀಯ ಮಾರುಕಟ್ಟೆಗೆ ಭಿನ್ನವಾಗಿರಬಹುದು, ಅಲ್ಲಿ ಶ್ರೇಣಿಯನ್ನು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಿಸುತ್ತದೆ.
ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು
ಹಬ್ಬದ ಸಮಯದಲ್ಲಿ ಈ ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು MG ಘೋಷಿಸಿದೆ. ಇದರ ಬೆಲೆಗಳು 20 ಲಕ್ಷ ರೂಪಾಯಿಗಳಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುವ ನಿರೀಕ್ಷೆಯಿದೆ, ಇದು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಇವಿಗಿಂತ ಪ್ರೀಮಿಯಂ ಆಯ್ಕೆಯನ್ನು ನೀಡುತ್ತಿರುವಾಗ ಎಮ್‌ಜಿ ಜೆಡ್‌ಎಸ್ ಇವಿಗೆ ಹೆಚ್ಚು ಕೈಗೆಟುಕುವ ಪರ್ಯಾಯವಾಗಿದೆ.
ಕಾರು ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
0 out of 0 found this helpful