• English
    • Login / Register

    Citroen India ಬ್ರಾಂಡ್‌ನ ನೂತನ ಅಂಬಾಸಿಡರ್ ಆಗಿ ನೇಮಕಗೊಂಡ ಕ್ಯಾಪ್ಟನ್‌ ಕೂಲ್‌ ಎಂಎಸ್‌ ಧೋನಿ

    ಮೇ 27, 2024 07:32 pm ರಂದು sonny ಮೂಲಕ ಪ್ರಕಟಿಸಲಾಗಿದೆ

    • 29 Views
    • ಕಾಮೆಂಟ್‌ ಅನ್ನು ಬರೆಯಿರಿ

    ಈ ಹೊಸ ಪಾಲುದಾರಿಕೆಯ ಮೊದಲ ಅಭಿಯಾನವು ಮುಂಬರುವ ICC T20 ವಿಶ್ವಕಪ್‌ಗಾಗಿ ಭಾರತೀಯ ಅಭಿಮಾನಿಗಳಲ್ಲಿ ಉತ್ಸಾಹವನ್ನು ಉಂಟುಮಾಡುವುದಾಗಿದೆ.

    MS Dhoni and Citroen

    ಸಾಕಷ್ಟು ಸುಳಿವುಗಳು ಮತ್ತು ವದಂತಿಗಳ ನಂತರ, ಸಿಟ್ರೊಯೆನ್ ಇಂಡಿಯಾ ಈಗ ಅಧಿಕೃತವಾಗಿ ಭಾರತೀಯ ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಣೆ ಮಾಡಿದೆ. ಫ್ರೆಂಚ್ ಕಾರು ಕಂಪನಿಯು 2021 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು ಮತ್ತು ಈಗಾಗಲೇ ನಾಲ್ಕು ಮಾಡೆಲ್ ಗಳು ಲಭ್ಯವಿವೆ, ಮತ್ತು ಅವುಗಳಲ್ಲಿ ಮೂರನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ.

     ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ಗೆ ಕ್ಷಣಗಣನೆ ಆಗುತ್ತಿರುವ ಈ ಸಮಯದಲ್ಲಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಎಂಎಸ್ ಧೋನಿ ಇರುವ ಮೊದಲ ಸಿಟ್ರೊಯೆನ್ ಇಂಡಿಯಾ ವೀಡಿಯೊದಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಹುರಿದುಂಬಿಸುವ ಭಾರತೀಯ ಅಭಿಮಾನಿಗಳ ಬಗ್ಗೆ ಮಾತನಾಡಲಾಗಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕೂಡ ಈ ಪ್ರಕಟಣೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ, "ಕಾರುಗಳನ್ನು ಪ್ರೀತಿಸುವ ವ್ಯಕ್ತಿಯಾಗಿರುವ ಕಾರಣ ಈ ಪ್ರಸಿದ್ಧ ಫ್ರೆಂಚ್ ಬ್ರ್ಯಾಂಡ್ ಸಿಟ್ರೊಯೆನ್ ಜೊತೆ ಸೇರಲು ಉತ್ಸುಕನಾಗಿದ್ದೇನೆ. ಅದರ ನಾವೀನ್ಯತೆ ಮತ್ತು ಎಂಜಿನಿಯರಿಂಗ್ ಕೌಶಲ್ಯಗಳು ವಿಶ್ವಾದ್ಯಂತ ಹೆಸರುವಾಸಿಯಾಗಿದೆ."

     ಭಾರತದಲ್ಲಿರುವ ಸಿಟ್ರೊಯೆನ್ ಕಾರುಗಳು

     ಸ್ಟೆಲ್ಲಂಟಿಸ್ ಗುಂಪಿನ ಭಾಗವಾಗಿರುವ ಈ ಫ್ರೆಂಚ್ ಕಾರು ಕಂಪನಿಯು ತನ್ನ ಐದನೇ ಕಾರನ್ನು ಆಗಸ್ಟ್ 2024 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಇದನ್ನು ಸಿಟ್ರೊಯೆನ್ ಬಸಾಲ್ಟ್ ಎಂದು ಕರೆಯಲಾಗುತ್ತದೆ. ಈ ವರ್ಷದ ಆರಂಭದಲ್ಲಿ, ಇದನ್ನು ಮೊದಲ ಬಾರಿಗೆ ವಿಶ್ವಾದ್ಯಂತ ಕೂಪ್ ತರಹದ ವಿನ್ಯಾಸದೊಂದಿಗೆ ಕ್ರಾಸ್ಒವರ್ SUV ಆಗಿ ತೋರಿಸಲಾಗಿತ್ತು. ಇಂಡಿಯಾ-ಸ್ಪೆಕ್ ಮಾಡೆಲ್‌ನ ವಿವರಗಳು ನಮಗೆ ತಿಳಿದಿಲ್ಲವಾದರೂ, ಇದು ಸಿಟ್ರೊಯೆನ್ C3 ಏರ್‌ಕ್ರಾಸ್ ಕಾಂಪ್ಯಾಕ್ಟ್ SUV ಯಲ್ಲಿರುವ ಹಲವು ಫೀಚರ್ ಗಳನ್ನು ಪಡೆಯಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ.

    Citroen Basalt Vision Concept

    ಇದರರ್ಥ ಇದು 110 PS ಮತ್ತು 205 Nm ಟಾರ್ಕ್ ಅನ್ನು ಉತ್ಪಾದಿಸುವ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುತ್ತದೆ. ಫೀಚರ್ ಗಳ ವಿಷಯದಲ್ಲಿ, ಬಸಾಲ್ಟ್ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, 7-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಮ್ಯಾನ್ಯುವಲ್ ACಯನ್ನು ಪಡೆಯುವ ನಿರೀಕ್ಷೆಯಿದೆ.

     ಬಸಾಲ್ಟ್ ಟಾಟಾ ಕರ್ವ್‌ನಂತಹ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ ಮತ್ತು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರ್ಡರ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್‌ನಂತಹ ಕಾಂಪ್ಯಾಕ್ಟ್ SUVಗಳಿಗೆ ಸ್ಟೈಲಿಶ್ ಆಗಿರುವ ಪರ್ಯಾಯ ಆಯ್ಕೆಯಾಗಿದೆ. ಸಿಟ್ರೊಯೆನ್ ಇಂಡಿಯಾ ಲೈನ್ ಅಪ್ ನಲ್ಲಿರುವ ಇತರ ಕಾರುಗಳೆಂದರೆ C3 ಹ್ಯಾಚ್‌ಬ್ಯಾಕ್, eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮತ್ತು C5 ಏರ್‌ಕ್ರಾಸ್ ಮಿಡ್-ಸೈಜ್ SUV.

    was this article helpful ?

    Write your ಕಾಮೆಂಟ್

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience