• ಸಿಟ್ರೊನ್ ಸಿ3 aircross front left side image
1/1
 • Citroen C3 Aircross
  + 37ಚಿತ್ರಗಳು
 • Citroen C3 Aircross
 • Citroen C3 Aircross
  + 5ಬಣ್ಣಗಳು
 • Citroen C3 Aircross

ಸಿಟ್ರೊನ್ ಸಿ3 ಏರ್‌ಕ್ರಾಸ್‌

ಸಿಟ್ರೊನ್ ಸಿ3 ಏರ್‌ಕ್ರಾಸ್‌ is a 5 seater ಎಸ್ಯುವಿ available in a price range of Rs. 9.99 - 12.54 Lakh*. It is available in 9 variants, a 1199 cc, / and a single ಮ್ಯಾನುಯಲ್‌ transmission. Other key specifications of the ಸಿ3 ಏರ್‌ಕ್ರಾಸ್‌ include a kerb weight of 1230, ground clearance of 200 and boot space of 444 liters. The ಸಿ3 ಏರ್‌ಕ್ರಾಸ್‌ is available in 6 colours. Over 92 User reviews basis Mileage, Performance, Price and overall experience of users for ಸಿಟ್ರೊನ್ ಸಿ3 ಏರ್‌ಕ್ರಾಸ್‌.
change car
82 ವಿರ್ಮಶೆಗಳುವಿಮರ್ಶೆ & win ₹ 1000
Rs.9.99 - 12.54 ಲಕ್ಷ*
ಆನ್‌ರೋಡ್‌ ಬೆಲೆಯನ್ನು ತಿಳಿಯಿರಿ
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer
don't miss out on the best offers for this month

ಸಿಟ್ರೊನ್ ಸಿ3 ಏರ್‌ಕ್ರಾಸ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 cc
power108.62 ಬಿಹೆಚ್ ಪಿ
ಸೀಟಿಂಗ್ ಸಾಮರ್ಥ್ಯ5, 7
ಡ್ರೈವ್ ಪ್ರಕಾರ2ಡಬ್ಲ್ಯುಡಿ
ಮೈಲೇಜ್18.5 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್

ಸಿ3 ಏರ್‌ಕ್ರಾಸ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಬ್ರೆಜಿಲ್-ಆಧಾರಿತ ಸಿಟ್ರೊಯೆನ್ C3 ಏರ್‌ಕ್ರಾಸ್ ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

ಬೆಲೆ: ಭಾರತದಾದ್ಯಂತ C3 ಏರ್‌ಕ್ರಾಸ್‌ನ ಪರಿಚಯಾತ್ಮಕ, ಎಕ್ಸ್-ಶೋರೂಮ್  ಬೆಲೆ 9.99 ಲಕ್ಷ ರೂ.ನಿಂದ 12.54  ಲಕ್ಷದವರೆಗೆ ಇದೆ.

ವೇರಿಯೆಂಟ್ ಗಳು: ಇದನ್ನು ಮೂರು ಆವೃತ್ತಿ ಗಳಲ್ಲಿ ಬುಕ್ ಮಾಡಬಹುದು: ಯು, ಪ್ಲಸ್ ಮತ್ತು ಮ್ಯಾಕ್ಸ್. 

ಬಣ್ಣಗಳು: ಸಿಟ್ರೊಯೆನ್ C3 ಏರ್‌ಕ್ರಾಸ್ ಆರು ಡ್ಯುಯಲ್-ಟೋನ್ ಮತ್ತು 4 ಮೊನೊಟೋನ್ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ: ಪೋಲಾರ್ ವೈಟ್ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಕಾಸ್ಮೋ ಬ್ಲೂ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಪೋಲಾರ್ ವೈಟ್ ರೂಫ್‌ನೊಂದಿಗೆ ಪ್ಲಾಟಿನಂ ಗ್ರೇ, ಪೋಲಾರ್ ವೈಟ್ ರೂಫ್‌ನೊಂದಿಗೆ ಕಾಸ್ಮೊ ಬ್ಲೂ, ಪೋಲಾರ್ ವೈಟ್ ಜೊತೆಗೆ ಪ್ಲಾಟಿನಂ ಗ್ರೇ ರೂಫ್ ಮತ್ತು ಪೋಲಾರ್ ವೈಟ್ ಜೊತೆಗೆ ಕಾಸ್ಮೊ ಬ್ಲೂ ರೂಫ್ ಎಂಬ ಆರು ಡುಯೆಲ್ ಟೋನ್ ಬಣ್ಣಗಳಾದರೆ,  ಸ್ಟೀಲ್ ಜಿರೇ, ಪ್ಲಾಟಿನಂ ಗ್ರೇ, ಕಾಸ್ಮೊ ಬ್ಲೂ ಮತ್ತು ಪೋಲಾರ್ ವೈಟ್ ಎಂಬ ನಾಲ್ಕು 1 ಸಿಂಗಲ್ ಬಣ್ಣಗಳು ಲಭ್ಯವಿದೆ. 

ಆಸನ ಸಾಮರ್ಥ್ಯ: ಇದು 3-ಸಾಲಿನ ಕಾಂಪ್ಯಾಕ್ಟ್ SUV 5- ಮತ್ತು 7- ಸೀಟರ್ ಆಯ್ಕೆಯಲ್ಲಿ ಲಭ್ಯವಿದೆ. 7  ಸೀಟರ್ ತೆಗೆಯಬಹುದಾದ ಮೂರನೇ ಸಾಲಿನ ಆಸನಗಳೊಂದಿಗೆ ಬರುತ್ತದೆ.

ಗ್ರೌಂಡ್ ಕ್ಲಿಯರೆನ್ಸ್: ಸಿಟ್ರೊಯೆನ್ ನ ಈ ಕಾಂಪ್ಯಾಕ್ಟ್ ಎಸ್ಯುವಿ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. 

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಸಿಟ್ರೊಯೆನ್ ಸಿ3,, ಏರ್‌ಕ್ರಾಸ್ C3 ನಂತಹ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು ಹ್ಯಾಚ್‌ಬ್ಯಾಕ್‌ನಲ್ಲಿ 110PS ಮತ್ತು 190Nm ನಷ್ಟು ಶಕ್ತಿಯನ್ನು ಹೊರಸೂಸುತ್ತದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದು 18.5kmpl ನಷ್ಟು ಇಂಧನ ದಕ್ಷತೆಯನ್ನು ನೀಡುತ್ತದೆ.

ವೈಶಿಷ್ಟ್ಯಗಳು: ಸಿಟ್ರೊಯೆನ್ C3 ಏರ್‌ಕ್ರಾಸ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕದೊಂದಿಗೆ 10.2-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯೊಂದಿಗೆ ಒದಗಿಸಲಾಗಿದೆ. ಇದು ಸ್ಟೀರಿಂಗ್-ಮೌಂಟೆಡ್ ಆಡಿಯೊ ನಿಯಂತ್ರಣಗಳು ಮತ್ತು ಮಾನ್ಯುಯಲ್ AC ಅನ್ನು ಸಹ ಪಡೆಯುತ್ತದೆ. 

ಸುರಕ್ಷತೆ: ಸುರಕ್ಷತೆಯ ಭಾಗವನ್ನು ಗಮನಿಸಿದಾಗ, ಇದು ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್-ಹೋಲ್ಡ್ ಅಸಿಸ್ಟ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ. 

 ಪ್ರತಿಸ್ಪರ್ಧಿ: ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಹೋಂಡಾ ಎಲಿವೇಟ್ ಗೆ ಮಾರುಕಟ್ಟೆಯಲ್ಲಿ ಸಿಟ್ರೊಯೆನ್ ಕಾಂಪ್ಯಾಕ್ಟ್ SUV ಸ್ಪರ್ಧೆ ನೀಡುತ್ತದೆ.  ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಸಹ ಇದಕ್ಕೆ ಪರ್ಯಾಯವಾಗಿ ಪರಿಗಣಿಸಬಹುದು.

ಮತ್ತಷ್ಟು ಓದು
ಸಿ3 aircross you 1199 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್Rs.9.99 ಲಕ್ಷ*
ಸಿ3 aircross ಪ್ಲಸ್ 1199 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್Rs.11.34 ಲಕ್ಷ*
ಸಿ3 aircross ಪ್ಲಸ್ dt 1199 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್Rs.11.54 ಲಕ್ಷ*
ಸಿ3 aircross ಪ್ಲಸ್ 7 ಆಸನ1199 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್Rs.11.69 ಲಕ್ಷ*
ಸಿ3 aircross ಪ್ಲಸ್ 7 seater dt 1199 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್Rs.11.89 ಲಕ್ಷ*
ಸಿ3 aircross max 1199 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್Rs.11.99 ಲಕ್ಷ*
ಸಿ3 aircross max dt 1199 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್Rs.12.19 ಲಕ್ಷ*
ಸಿ3 aircross max 7 ಆಸನ1199 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್Rs.12.34 ಲಕ್ಷ*
ಸಿ3 aircross max 7 seater dt 1199 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್Rs.12.54 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಸಿಟ್ರೊನ್ ಸಿ3 ಏರ್‌ಕ್ರಾಸ್‌ ಇದೇ ಕಾರುಗಳೊಂದಿಗೆ ಹೋಲಿಕೆ

ಸಿಟ್ರೊನ್ ಸಿ3 ಏರ್‌ಕ್ರಾಸ್‌ ವಿಮರ್ಶೆ

ಕ್ರೆಟಾ, ಸೆಲ್ಟೋಸ್, ಟೈಗುನ್, ಕುಶಾಕ್‌, ಆಸ್ಟರ್, ಎಲಿವೇಟ್, ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್. ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೇನೂ ಕೊರತೆಯಿಲ್ಲ. ಹಾಗಾದರೆ ನಿಮಗೆ ಇತರ ಎಸ್‌ಯುವಿಗಳು ನೀಡದ್ದನ್ನು C3 ಏರ್‌ಕ್ರಾಸ್ ಏನು ವಿಶೇಷವಾಗಿ ನೀಡುತ್ತಿದೆ? ಹೌದು, ಬಹಳಷ್ಟು ನೀಡುತ್ತದೆ. ನಿರೀಕ್ಷಿಸಿ ಎಲ್ಲಾ ಕೊಡುಗೆಗಳನ್ನು ನಾವು ವಿವರವಾಗಿ ತಿಳಿಸುತ್ತೆವೆ.

ಸಿಟ್ರೋನ್‌ ಸಿ3 ಏರ್‌ಕ್ರಾಸ್‌ ತನ್ನ ಆಕರ್ಷಕ ವೈಶಿಷ್ಟ್ಯಗಳಿಂದ, ಆಪ್‌ಹೊಲ್ಸ್‌ಟೆರಿ, ಸಾಫ್ಟ್-ಟಚ್ ಮೆಟಿರಿಯಲ್‌ ಅಥವಾ ಪವರ್‌ಟ್ರೇನ್‌ಗಳೊಂದಿಗೆ ನಿಮ್ಮ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತಿಲ್ಲ. ಅದರೆ ವಾಸ್ತವವಾಗಿ, ಮೇಲಿನ ಎಲ್ಲಾ ಅಂಶಗಳಲ್ಲಿ ಈ ತುಂಬಾ ಸರಳವಾಗಿದೆ. ಇದು ತನ್ನ ಬಹುಮುಖತೆ, ಸೌಕರ್ಯ, ಸರಳತೆ ಮತ್ತು ನೀಡುವ ಹಣಕ್ಕೆ ಸೂಕ್ತವಾದ ಉತ್ಪನ್ನ ಎಂಬ ಅಂಶಗಳ ಮೂಲಕ ನಿಮ್ಮ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಹಾಗಾದರೆ ಇದರಿಂದ ಅದು ಸಾಧ್ಯವೇ? ಮತ್ತು ನೀವು ಅದರ ಬಗ್ಗೆ ಗಮನ ಹರಿಸಬೇಕೇ?

ಎಕ್ಸ್‌ಟೀರಿಯರ್

Citroen C3 Aircross Front

ಸಿ3 ಏರ್‌ಕ್ರಾಸ್ ಒಂದು ಸುಂದರ ಎಸ್‌ಯುವಿ ಆಗಿದೆ. ಲೇಯರ್‌ಗಳಲ್ಲಿ ವಿನ್ಯಾಸಗೊಳಿಸಲಾದ ನೇರವಾದ ಮುಂಭಾಗದ ಗ್ರಿಲ್‌ನಂತಹ ಎಸ್‌ಯುವಿಯಿಂದ ನೀವು ನಿರೀಕ್ಷಿಸಬಹುದಾದ ಎಲ್ಲಾ ಲಕ್ಷಣಗಳನ್ನು ಇದು ಹೊಂದಿದೆ. ಬೊನೆಟ್‌ ನಲ್ಲಿ ಸಾಕಷ್ಟು ಮಸಲ್‌ ರೀತಿಯ ವಿನ್ಯಾಸ ಹೊಂದಿದೆ ಮತ್ತು ಚಕ್ರದ ಕಮಾನುಗಳು ಸಹ ಮುಖ್ಯ ಆಕರ್ಷಣೆಯಾಗಿದೆ. ಈ ವಿನ್ಯಾಸಕ್ಕೆ ಸುತ್ತಲೂ ಕ್ಲಾಡಿಂಗ್ ಮತ್ತು ಸ್ಟೈಲಿಶ್ 17-ಇಂಚಿನ ಅಲಾಯ್ ವೀಲ್‌ಗಳನ್ನು ಸೇರಿಸುವ  ಮೂಲಕ ಇದು ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ಎದ್ದು ಕಾಣುವ ಎಸ್‌ಯುವಿ ಆಗಿದೆ. 

Citroen C3 Aircross SideCitroen C3 Aircross Rear

ಈ ಎಸ್‌ಯುವಿ ನೋಟದಲ್ಲಿ ಕೊರತೆಯಿಲ್ಲದಿದ್ದರೂ, ಸರಳವಾದ ವೈಶಿಷ್ಟ್ಯದ ಅಂಶಗಳಿಂದ ಇದು ಎಲ್ಲರನ್ನು ಆಕರ್ಷಿಸುತ್ತದೆ. ಕೀಲಿಯು ತುಂಬಾ ಸರಳವಾಗಿದೆ ಮತ್ತು ನೀವು ಕೀಲಿರಹಿತ ಎಂಟ್ರಿಯನ್ನು ಪಡೆಯುವುದಿಲ್ಲ. ನಂತರ ಬೆಳಕಿನ ಸೆಟಪ್ ಬರುತ್ತದೆ. ಡಿಆರ್‌ಎಲ್‌ಗಳನ್ನು ಹೊರತುಪಡಿಸಿ ಎಲ್ಲಾ ಲೈಟ್‌ಗಳು ಹ್ಯಾಲೊಜೆನ್‌ಗಳಾಗಿವೆ. ಮತ್ತು DRL ಗಳು ಸಹ ಕ್ಲೀನ್ ಕವರ್‌ಗಳನ್ನು ಹೊಂದಿರುವ DRL ಗಳಲ್ಲ. ಆದ್ದರಿಂದ ಆ ದೃಷ್ಟಿಕೋನದಿಂದ ಗಮನಿಸುವಾಗ ಇದು ಹೆಚ್ಚು ಬಯಸುವ ಅಂಶವನ್ನೇ ಬಿಟ್ಟಂತಿದೆ. ಈಗ, ನೀವು ಕಾರನ್ನು ಇಷ್ಟಪಡುತ್ತೀರೋ ಇಲ್ಲವೋ ಎಂಬುದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಅದರೆ ನಿಮ್ಮ ಕಾರಿನಿಂದ ನೀವು ಸ್ವಲ್ಪ ಫ್ಯಾನ್ಸಿನೆಸ್ ಬಯಸಿದರೆ, ನಿಮ್ಮ ಕಾರು ಸ್ವಲ್ಪ ಜೋರಾಗಿರಬೇಕೆಂದು ನೀವು ಬಯಸುವುದಾದರೆ ನೀವು ಇದನ್ನು ಇಷ್ಟಪಡದಿರಬಹುದು. ಆದರೆ ನಿಮ್ಮ ಗಮನವು ಕಾರಿನ ಲುಕ್‌ ಮತ್ತು ಸಿಂಪಲ್‌ ಆಗಿರುವುದರ ಮೇಲೆ ಮಾತ್ರ ಇದ್ದರೆ, ಆಗ C3 ಏರ್‌ಕ್ರಾಸ್ ನಿಮಗೆ ಇಷ್ಟವಾಗುತ್ತದೆ.

ಇಂಟೀರಿಯರ್

ಮೂರನೇ ಸಾಲಿನ ಅನುಭವ

ಮೂರನೇ ಸಾಲಿನ ಸೀಟ್‌ಗೆ ಪ್ರವೇಶಿಸುವುದು ಈಗ ಸುಲಭವಾಗಿದೆ. ಎರಡನೇ ಸಾಲಿನ ಎಡದ ಸೀಟಿನಲ್ಲಿ ನೀವು ಪಟ್ಟಿಯನ್ನು ಎಳೆಯಬೇಕು ಮತ್ತು ಅದು ಉರುಳುತ್ತದೆ ಮತ್ತು ಮಡಚಿಕೊಳ್ಳುತ್ತದೆ. ರೂಫ್‌ನ ಎತ್ತರದ ಬಗ್ಗೆ ನೀವು ಇನ್ನೂ ಜಾಗರೂಕರಾಗಿರಬೇಕು, ಆದರೆ ಮೂರನೇ ಸಾಲನ್ನು ಪ್ರವೇಶಿಸಲು ನೀವು ಸಾಕಷ್ಟು ಜಾಗವನ್ನು ಪಡೆಯುತ್ತೀರಿ.

Citroen C3 Aircross Third Row

ಯಾವುದೇ ಇತರ ಸಣ್ಣ 3-ಸಾಲಿನ ಎಸ್‌ಯುವಿಗಳಂತೆ, ಸೀಟ್‌ಗಳನ್ನು ಸಾಕಷ್ಟು ಕೆಳಗೆ ಇರಿಸಲಾಗಿದೆ. ಆದರೆ ಅದರ ಹೊರತಾಗಿ ನಾನು ಪ್ರಾಮಾಣಿಕವಾಗಿ ದೂರು ನೀಡಲು ಸಾಧ್ಯವಿಲ್ಲದ ವಿಷಯವೆಂದರೆ ಇದರಲ್ಲಿನ ಸ್ಥಳಾವಕಾಶ. ನನ್ನ ಎತ್ತರ 5'7” ಮತ್ತು ನನ್ನ ಮೊಣಕಾಲುಗಳು ಮುಂದಿನ ಸಾಲನ್ನು ಮುಟ್ಟಲಿಲ್ಲ ಮತ್ತು ನೀವು ಎರಡನೇ ಸಾಲಿನ ಕೆಳಗೆ ನಿಮ್ಮ ಪಾದಗಳನ್ನು ಆರಾಮವಾಗಿ ಇಡಬಹುದು. ಹೆಡ್‌ರೂಮ್‌ನಲ್ಲಿ ಸ್ವಲ್ಪ ರಾಜಿಯಾದಂತಿದೆ. ರಸ್ತೆಯಲ್ಲಿ ದೊಡ್ಡ ಉಬ್ಬು ಇದ್ದರೆ, ನೀವು ಅದನ್ನು ಸ್ಪರ್ಶಿಸಬಹುದು. - ಇದರ ಹೊರತಾಗಿ, ಈ ಆಸನವು ನಗರ ಪ್ರಯಾಣಕ್ಕೆ ಪ್ರಾಯೋಗಿಕವಾಗಿದೆ. ಸೀಟ್‌ನ ಅಗಲವೂ ಸಾಕಷ್ಟಿದ್ದು,  ಇಬ್ಬರು ವಯಸ್ಕರು ಭುಜಗಳನ್ನು ಉಜ್ಜಿಕೊಳ್ಳದೆ ಕುಳಿತುಕೊಳ್ಳಬಹುದು. 

ಪ್ರಾಯೋಗಿಕತೆ ಏನು ಸೇರಿಸುತ್ತದೆ ಅಂದರೆ ಇದರ ವೈಶಿಷ್ಟ್ಯಗಳು. ಹಿಂದಿನ ಪ್ರಯಾಣಿಕರು ತಮ್ಮದೇ ಆದ ಕಪ್ ಹೋಲ್ಡರ್‌ಗಳು ಮತ್ತು USB ಚಾರ್ಜರ್‌ಗಳನ್ನು ಪಡೆಯುತ್ತಾರೆ. ಮತ್ತು 7-ಆಸನಗಳ ವೇರಿಯೆಂಟ್‌ನಲ್ಲಿ, ನೀವು ಬ್ಲೋವರ್ ನಿಯಂತ್ರಣಗಳೊಂದಿಗೆ ಎರಡನೇ ಸಾಲಿನಲ್ಲಿ ರೂಫ್-ಮೌಂಟೆಡ್ ಎಸಿ ವೆಂಟ್‌ಗಳನ್ನು ಸಹ ಪಡೆಯುತ್ತೀರಿ. ಗಾಳಿಯ ಹರಿವು ಉತ್ತಮವಾಗಿದೆ ಮತ್ತು ಮೂರನೇ ಸಾಲಿನ ಪ್ರಯಾಣಿಕರು ಸಹ ಬಿಸಿಯ ಅನುಭವವನ್ನು ಪಡೆಯುವುದಿಲ್ಲ. ಆದಾಗಿಯೂ, ಇವುಗಳು ಸಂಪೂರ್ಣವಾಗಿ ಗಾಳಿಯ ಪ್ರಸರಣ ದ್ವಾರಗಳಾಗಿವೆ ಮತ್ತು ತಂಪು ಗಾಳಿಯನ್ನು ಬೀಸಲು ಕ್ಯಾಬಿನ್ ಮೊದಲು ತಣ್ಣಗಾಗಬೇಕು. ಇದು ಬೇಸಿಗೆ ದಿನಗಳಲ್ಲಿ ಕ್ಯಾಬಿನ್‌ ತಂಪಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದರಲ್ಲಿರುವ ನಿಜವಾದ ಸಮಸ್ಯೆಗಳೆಂದರೆ: ನೀವು ಹಿಂಬದಿಯ ವಿಂಡ್‌ಸ್ಕ್ರೀನ್‌ಗೆ ತುಂಬಾ ಹತ್ತಿರದಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ಎಲ್ಲಾ ಗೋಚರತೆ ಉತ್ತಮವಾಗಿಲ್ಲ. ಸೈಡ್‌ನಲ್ಲಿರುವ ಕೊನೆಯ ಗಾಜು ಚಿಕ್ಕದಾಗಿದೆ ಮತ್ತು ಮುಂಭಾಗದ ಆಸನಗಳು ಎತ್ತರವಾಗಿವೆ.

ಎರಡನೇ ಸಾಲಿನ ಅನುಭವ

ಎರಡನೇ ಸಾಲಿನ ಸೀಟ್‌ನ ಅನುಭವವೂ ಆಶ್ಚರ್ಯಕರವಾಗಿ ಆರಾಮದಾಯಕವಾಗಿದೆ. ಎತ್ತರದ ಪ್ರಯಾಣಿಕರಿಗೆ ಆರಾಮದಾಯಕವಾಗಲು ಸಾಕಷ್ಟು ಲೆಗ್‌ರೂಮ್ ಮತ್ತು  ನೀ ರೂಮ್‌ (ಮೊಣಕಾಲಿನ ಕೋಣೆ) ಇದೆ. ಸೀಟ್ ಬೇಸ್ ವಿಸ್ತರಣೆಗಳು ಉತ್ತಮ ತೊಡೆಯ ಭಾಗಕ್ಕೆ  ಬೆಂಬಲದೊಂದಿಗೆ ಸಹಾಯ ಮಾಡುತ್ತವೆ ಮತ್ತು ಬ್ಯಾಕ್‌ರೆಸ್ಟ್ ಕೋನವು ಸಹ ಸಡಿಲಗೊಂಡಿದೆ. ಇಲ್ಲಿ ಕೇವಲ ಸಣ್ಣ ಕಾಳಜಿಯೆಂದರೆ ಸೀಟ್‌ಬ್ಯಾಕ್ ಬಲವರ್ಧನೆಯು ಕಡಿಮೆಯಾಗಿದೆ. ಮೂರು ಜನರನ್ನು ಕೂರಿಸುವಾಗ ಇದು ಉತ್ತಮವಾಗಿದ್ದರೂ, ಕೇವಲ ಇಬ್ಬರು ಪ್ರಯಾಣಿಕರು ಕುಳಿತಾಗ ಬೆಂಬಲದ ಕೊರತೆಯಿದೆ.

Citroen C3 Aircross Second Row

ಆಸನಗಳು ಮತ್ತು ಸ್ಥಳಾವಕಾಶ ಉತ್ತಮವಾಗಿದ್ದರೂ, C3 ಏರ್‌ಕ್ರಾಸ್ ಹೆಚ್ಚೆನು ವೈಶಿಷ್ಟ್ಯಗಳನ್ನು ಹೊಂದಿಲ್ಲ. ಕಪ್‌ಹೋಲ್ಡರ್‌ ಮತ್ತು ಸೆಂಟರ್ ಆರ್ಮ್‌ರೆಸ್ಟ್‌ನಂತಹ ಸೌಕರ್ಯಗಳನ್ನು ಕಳೆದುಕೊಂಡಿರುವುದು ಸಂಪೂರ್ಣ ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ರೂಫ್-ಮೌಂಟೆಡ್ ಎಸಿ ವೆಂಟ್‌ಗಳು ಸಹ 7-ಆಸನಗಳ ವೇರಿಯೆಂಟ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅದುದರಿಂದ 5-ಆಸನಗಳ ವೇರಿಯೆಂಟ್‌ನಲ್ಲಿ ಯಾವುದೇ ಹಿಂದಿನ ಎಸಿ ವೆಂಟ್‌ಗಳು ಲಭ್ಯವಿಲ್ಲ. ಈ ವೈಶಿಷ್ಟ್ಯಗಳನ್ನು ಹ್ಯಾಚ್‌ಬ್ಯಾಕ್‌ಗಳಲ್ಲಿ ನೀಡಲಾಗುತ್ತದೆ. ಹಾಗಾಗಿ ಖಂಡಿತವಾಗಿಯೂ 15 ಲಕ್ಷ ರೂ.ಗಿಂತಲೂ ಮೇಲ್ಪಟ್ಟ ಈ ಎಸ್‌ಯುವಿಯಲ್ಲಿ ಇರಬೇಕಿತ್ತು. ಎರಡನೇ ಸಾಲಿನಲ್ಲಿ ನೀವು ಪಡೆಯುವ ವೈಶಿಷ್ಟ್ಯಗಳೆಂದರೆ ಡೋರ್ ಆರ್ಮ್‌ರೆಸ್ಟ್‌ಗಳು, ಎರಡು ಯುಎಸ್‌ಬಿ ಚಾರ್ಜರ್‌ಗಳು ಮತ್ತು ಬಾಟಲ್ ಹೋಲ್ಡರ್ ಮಾತ್ರ.  

ಕ್ಯಾಬಿನ್ ಅನುಭವ

ಚಾಲಕನ ಸೀಟಿನಿಂದ ಗಮನಿಸುವಾಗ C3 ಏರ್‌ಕ್ರಾಸ್, C3 ನಂತೆ ಭಾಸವಾಗುತ್ತದೆ. ಡ್ಯಾಶ್‌ಬೋರ್ಡ್ ವಿನ್ಯಾಸ, ಎತ್ತರದ ಆಸನ ಮತ್ತು ಸ್ಟೀರಿಂಗ್ ಮತ್ತು ವೈಶಿಷ್ಟ್ಯಗಳಂತಹ ಎಲ್ಲಾ ಇತರ ಅಂಶಗಳನ್ನು ಹೆಚ್ಚಾಗಿ ಹಂಚಿಕೊಳ್ಳಲಾಗಿದೆ. ಇದರರ್ಥ, ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದರ ಕ್ಯಾಬಿನ್ ದೊಡ್ಡದಾಗಿದೆ ಎಂದು ಅನಿಸುವುದಿಲ್ಲ, ಆದರೆ ಸಬ್‌-4 ಮೀಟರ್ ಎಸ್‌ಯುವಿಗೆ ಹೋಲಿಸಬಹುದು. 

Citroen C3 Aircross Cabin

ಈ ಕ್ಯಾಬಿನ್ ನೋಡಲು ಸಾಮಾನ್ಯವಾಗಿದ್ದರೂ, ಅನುಭವವನ್ನು ಹೆಚ್ಚಿಸಲು ಸಿಟ್ರೊಯೆನ್ ಸರಿಯಾದ ಸ್ಥಳದಲ್ಲಿ ಸರಿಯಾದ ವಸ್ತುಗಳನ್ನು ಮತ್ತು ಗುಣಮಟ್ಟವನ್ನು ಬಳಸಿದೆ. ಆಸನಗಳು ಸೆಮಿ-ಲೆಥೆರೆಟ್ ಆಗಿದ್ದು, ಡ್ರೈವರ್ ಆರ್ಮ್‌ರೆಸ್ಟ್ ಪ್ರೀಮಿಯಂ ಆದ ಅನುಭವವನ್ನು ನೀಡುತ್ತದೆ ಮತ್ತು ಡೋರ್ ಪ್ಯಾಡ್‌ನಲ್ಲಿರುವ ಲೆದರ್ ಕೂಡ ಸ್ಪರ್ಶಿಸಲು ಉತ್ತಮವಾಗಿದೆ. ಸ್ಟೀರಿಂಗ್ ಚಕ್ರವು ಲೆದರ್‌ನ ಹೊದಿಕೆಯನ್ನು ಹೊಂದಿದೆ ಮತ್ತು ಈ ಅನುಭವವು ಇಲ್ಲಿಗೆ ಕೊನೆಗೊಳ್ಳುತ್ತದೆ.

ಪ್ರಾಯೋಗಿಕತೆ

ಅದರ ಪ್ಲಾಟ್‌ಫಾರ್ಮ್ ಅವಳಿಗಳಂತೆಯಾದರೂ, C3 ಏರ್‌ಕ್ರಾಸ್ ಪ್ರಾಯೋಗಿಕತೆಯಲ್ಲಿ ಉತ್ತಮವಾಗಿದೆ. ಬಾಗಿಲಿನ ಪಾಕೆಟ್‌ಗಳು ಉತ್ತಮ ಗಾತ್ರವನ್ನು ಹೊಂದಿವೆ, ಅಲ್ಲಿ ನೀವು 1-ಲೀಟರ್ ಬಾಟಲಿಗಳನ್ನು ಇಡಬಹುದು. ಹಾಗೆಯೇ ಹೆಚ್ಚಿನ ವಸ್ತುಗಳನ್ನು ಇರಿಸಿಕೊಳ್ಳಲು ನಿಮಗೆ ಇನ್ನೂ ಸ್ಥಳಾವಕಾಶವಿದೆ. ನಿಮ್ಮ ಮೊಬೈಲ್ ಫೋನ್ ಇರಿಸಿಕೊಳ್ಳಲು ಮೀಸಲಾದ ಟ್ರೇ ಇದೆ ಮತ್ತು ನಿಮ್ಮ ವ್ಯಾಲೆಟ್ ಮತ್ತು ಕೀಗಳನ್ನು ನೀವು ಇರಿಸಬಹುದಾದ ಆಳವಾದ ಪಾಕೆಟ್ ಇದೆ. ಎರಡು ಕಪ್ ಹೋಲ್ಡರ್‌ಗಳಿವೆ ಮತ್ತು ಗೇರ್ ಶಿಫ್ಟರ್‌ನ ಹಿಂದೆ ನೀವು ಕ್ಯೂಬಿಹೋಲ್ ಅನ್ನು ಪಡೆಯುತ್ತೀರಿ. ಅಂತಿಮವಾಗಿ, ಗ್ಲೋವ್ ಬಾಕ್ಸ್ ಉತ್ತಮ ಗಾತ್ರವನ್ನು ಹೊಂದಿದೆ. ಗ್ಲೋವ್‌ಬಾಕ್ಸ್‌ನ ಮೇಲೆ ನೀವು ನೋಡುವ ಸಣ್ಣ ಸ್ಥಳವು ಕೇವಲ ಪ್ರದರ್ಶನಕ್ಕಾಗಿ ಮತ್ತು ನಿಜವಾಗಿಯೂ ಸ್ಟೋರೇಜ್‌ಗೆ ಯೋಗ್ಯವಾದ ಪ್ರದೇಶವಲ್ಲ. ಹಿಂಭಾಗದಲ್ಲಿ, ನೀವು ಸೆಂಟರ್ ಕನ್ಸೋಲ್‌ನಲ್ಲಿ ಬಾಟಲ್ ಹೋಲ್ಡರ್ ಮತ್ತು ಮೂರನೇ ಸಾಲಿಗೆ ಎರಡು ಬಾಟಲ್ ಹೋಲ್ಡರ್‌ಗಳನ್ನು ಪಡೆಯುತ್ತೀರಿ.

Citroen C3 Aircross Dashboard StorageCitroen C3 Aircross Cupholders

ಚಾರ್ಜಿಂಗ್ ಆಯ್ಕೆಗಳ ಕುರಿತು ಮಾತನಾಡುವುದಾದರೆ, ನೀವು USB ಪೋರ್ಟ್ ಮತ್ತು ಮುಂಭಾಗದಲ್ಲಿ 12V ಸಾಕೆಟ್ ಅನ್ನು ಪಡೆಯುತೀರಿ.  ಇದಲ್ಲದೆ, ನೀವು ಮಧ್ಯದಲ್ಲಿ ಎರಡು USB ಚಾರ್ಜರ್‌ಗಳನ್ನು ಮತ್ತು ಮೂರನೇ ಸಾಲಿನಲ್ಲಿ ಎರಡು USB ಚಾರ್ಜರ್‌ಗಳನ್ನು ಪಡೆಯುತ್ತೀರಿ. ಯುಎಸ್‌ಬಿಯ ಬದಲು ಈಗಿನ ಟೈಪ್ ಸಿ ಪೋರ್ಟ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.

ವೈಶಿಷ್ಟ್ಯಗಳು

Citroen C3 Aircross Touchscreen Infotainment System

 ಅಂತಿಮವಾಗಿ, ವೈಶಿಷ್ಟ್ಯಗಳ ಬಗ್ಗೆ ಮಾತನಾಡೋಣ. ಮೊದಲೇ ಹೇಳಿದಂತೆ, ಈ ಕಾರು ವೈಶಿಷ್ಟ್ಯಗಳೊಂದಿಗೆ ನಿಮ್ಮ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತಿಲ್ಲ. ಇದರಲ್ಲಿ ಮೂಲಭೂತ ಅವಶ್ಯಕತೆಗಳೆಲ್ಲವೂ ಪೂರೈಸಲ್ಪಟ್ಟಿದ್ದರೂ, ಪ್ರಯಾಣಿಕರು ಹೆಚ್ಚು 'ಬಯಸುವ' ಪಟ್ಟಿಯು ಕಾಣೆಯಾಗಿದೆ.ಇದರಲ್ಲಿ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಮ್ಯಾನ್ಯುವಲ್ ಎಸಿ, ಎಲೆಕ್ಟ್ರಿಕ್ ಅಡ್ಜೆಸ್ಟ್ ಮಾಡಬಹುದಾದ ORVM ಗಳು, ಉತ್ತಮ ಡಿಸ್‌ಪ್ಲೇ ಮತ್ತು ವಿವಿಧ ಮೋಡ್‌ಗಳು ಮತ್ತು ಥೀಮ್‌ಗಳೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟೈರ್ ಪ್ರೆಶರ್ ವಾರ್ನಿಂಗ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್, ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಂ  ನಂತಹ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ. ಕ್ರೂಸ್ ಕಂಟ್ರೋಲ್, ವೆಂಟಿಲೇಟೆಡ್ ಸೀಟ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಟೋ ಡೇ/ನೈಟ್ ಐಆರ್‌ವಿಎಂ ಅಥವಾ ಸನ್‌ರೂಫ್‌ನಂತಹ 'ಬಯಸುವ' ಪಟ್ಟಿಯು ಕಾಣೆಯಾಗಿದೆ. ಈ ಎಲ್ಲಾ ಕಾರಣದಿಂದಾಗಿ, ಈ ಕಾರು ಕಡಿಮೆ ಬೆಲೆಗೆ ಗ್ರಾಹಕರ ಮನೆಗೆ ಬರುತ್ತಿದೆ. ವಾಸ್ತವವಾಗಿ, C3 ಏರ್‌ಕ್ರಾಸ್‌ನ ಉನ್ನತ ವೇರಿಯೆಂಟ್‌ಗಳು ಇದರ ಪ್ರತಿಸ್ಪರ್ಧಿ ಎಸ್‌ಯವಿಗಳ ಲೋವರ್‌ ಮತ್ತು ಮಿಡಲ್‌ ವೇರಿಯೆಂಟ್‌ಗಳಿಗೆ ಸಮಾನವಾದ ವೈಶಿಷ್ಟ್ಯದ ಅನುಭವವನ್ನು ನೀಡಲು ಶಕ್ತವಾಗಿದೆ.  

ಸುರಕ್ಷತೆ

ಸುರಕ್ಷತೆಯ ಬಗ್ಗೆ ಮಾತನಾಡುವುದು ಸ್ವಲ್ಪ ಕಷ್ಟ, ಏಕೆಂದರೆ C3 ಅಥವಾ C3 ಏರ್‌ಕ್ರಾಸ್ ಅನ್ನು ಇನ್ನೂ ಯಾವುದೇ ರೀತಿಯ ಕ್ರ್ಯಾಶ್-ಟೆಸ್ಟ್‌ಗೆ ಒಳಪಡಿಸಿಲ್ಲ.ಇದರ ಸುರಕ್ಷತಾ ಕಿಟ್‌ನಲ್ಲಿ ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅನ್ನು ಪಡೆಯುತ್ತದೆ. ಈ ಸಮಯದಲ್ಲಿ ಆರು ಏರ್‌ಬ್ಯಾಗ್‌ಗಳು ಲಭ್ಯವಿಲ್ಲ ಆದರೆ ರ ಪ್ರತಿ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿರುವ ಕಾನೂನು ಇರುವುದರಿಂದ ಮುಂದಿನ ವರ್ಷಗಳಲ್ಲಿ ಇದನ್ನು ಪರಿಚಯಿಸಬಹುದು. ಹಾಗಾಗಿ, ಆ ಕೆಲವು ತಿಂಗಳುಗಳಿಗೆ ಕೇವಲ ಎರಡು ಏರ್‌ಬ್ಯಾಗ್‌ಗಳನ್ನು ನೀಡುವುದು ಸರಿಯಲ್ಲ, ವಿಶೇಷವಾಗಿ ಈ ಬೆಲೆಯನ್ನು ಹೊಂದಿರುವ ಕಾರಿನಲ್ಲಿ. 

boot space

ಸಿಟ್ರೊಯೆನ್ C3 ಏರ್‌ಕ್ರಾಸ್‌ ಹೊಂದಿರುವ ವಿಶೇಷ ವೈಶಿಷ್ಟ್ಯವೆಂದರೆ ಅದರ ಬೂಟ್ ಸ್ಪೇಸ್. ನೀವು ಈ ಕಾರನ್ನು 5-ಆಸನಗಳು ಮತ್ತು 5+2-ಆಸನಗಳ ಆಯ್ಕೆಗಳಲ್ಲಿ ಖರೀದಿಸಬಹುದು. 5-ಆಸನದ ಆಯ್ಕೆಯಲ್ಲಿ ನೀವು ವಿಶಾಲವಾದ ಮತ್ತು ಸಾಕಷ್ಟು ಆಳವಾಗಿರುವ ಫ್ಲಾಟ್ ಆದ ಬೂಟ್ ಸಾಮರ್ಥ್ಯವನ್ನು ಪಡೆಯುತ್ತೀರಿ. ನಿಮ್ಮ ವ್ಯಾಪಾರಕ್ಕಾಗಿ ನೀವು ಸಾಕಷ್ಟು ಸಾಮಾನುಗಳನ್ನು ಕೊಂಡೊಯ್ಯಬೇಕಾದರೆ ಅಥವಾ ಕುಟುಂಬವು ಓವರ್‌ಪ್ಯಾಕ್ ಮಾಡಲು ಇಷ್ಟಪಟ್ಟರೆ, C3 ಏರ್‌ಕ್ರಾಸ್ ಯಾವತ್ತು ನಿಮಗೆ ನಿರಾಶೆ ಮಾಡುವುದಿಲ್ಲ. ಹಿಂಭಾಗದ ಪಾರ್ಸೆಲ್ ಟ್ರೇ ಕೂಡ ತುಂಬಾ ವಿಶಾಲವಾಗಿದೆ ಮತ್ತು ಚೆನ್ನಾಗಿ ಫಿಕ್ಸ್‌ ಮಾಡಲಾಗಿದೆ. ಆದ್ದರಿಂದ ನೀವು ಅದರ ಮೇಲೆ ಸಣ್ಣ ಬ್ಯಾಗ್‌ಗಳನ್ನು ಸಹ ಸುಲಭವಾಗಿ ಸಾಗಿಸಬಹುದು.

Citroen C3 Aircross 5-seater Boot Space

5+2 ಆಸನದ ವ್ಯವಸ್ಥೆ ಇರುವ ಆವೃತ್ತಿಯಲ್ಲಿ ಕೇವಲ 44 ಲೀಟರ್ ನಷ್ಟು ಸ್ಥಳಾವಕಾಶದೊಂದಿಗೆ ಮೂರನೇ ಸಾಲಿನ ಆಸನಗಳ ಹಿಂದೆ ಲಗೇಜುಗಳನ್ನು ಇಡಲು ಸ್ಥಳಾವಕಾಶವಿಲ್ಲ. ಅದರೂ, ನೀವು ಸಣ್ಣ ಲ್ಯಾಪ್‌ಟಾಪ್‌ ಬ್ಯಾಗ್‌ಗಳನ್ನು ಇಲ್ಲಿ ಇಟ್ಟು ಪ್ರಯಾಣಿಸಬಹುದು. ನೀವು ಮೂರನೇ ಸಾಲಿನ ಸೀಟನ್ನು ಮಡಚಿದಾಗ ವಿಶಾಲವಾದ ಮತ್ತು ಹಲವು ಲಗೇಜ್‌ಗಳನ್ನು ಇಡಲು ಬೇಕಾಗುವಷ್ಟು ಬೂಟ್‌ ಸ್ಪೇಸ್‌ ನ್ನು ರೆಡಿ ಮಾಡಬಹುದು. 5+2 ಆಯ್ಕೆಯಲ್ಲಿ ಹಿಂದಿನ ಸಾಲಿನ ಆಸನಗಳನ್ನು ತೆಗೆದುಹಾಕುವ ಮೂಲಕ ನೀವು 5-ಆಸನದ ಆವೃತ್ತಿಗೆ ಸಮಾನವಾದ ಬೂಟ್‌ ಜಾಗವನ್ನು ಹೊಂದಬಹುದು. ಆದರೆ, ಸಿಟ್ರೊಯೆನ್ ಹಿಂದಿನ ಸೀಟ್‌ನ ಆಡಿಯಲ್ಲಿರುವ ನೆಲವನ್ನು ಮುಚ್ಚಲು ಒಂದು ಕವರನ್ನು ನೀಡುವ ಅಗತ್ಯವಿದೆ, ಏಕೆಂದರೆ ಅಲ್ಲಿ ತೆರೆದಿರುವ ಸೀಟ್ ಮೌಂಟ್ ಬ್ರಾಕೆಟ್‌ಗಳು ಲಗೇಜ್‌ಗೆ ಅಡಿಯಲ್ಲಿ ಸಿಗಬಹುದು.

Citroen C3 Aircross 7-seater Boot Space

ಎರಡನೇ ಸಾಲಿನ ಸೀಟ್‌ಗಳನ್ನು ಮಡಚಿದಾಗ ನೀವು ಪೀಠೋಪಕರಣಗಳು ಮತ್ತು ವಾಷಿಂಗ್‌ ಮಿಷನ್‌ ನಂತಹ ದೊಡ್ಡ ವಸ್ತುಗಳನ್ನು ಸಾಗಿಸಲು ಬೇಕಾಗುವ ಸಮತಟ್ಟಾದ ಜಾಗವನ್ನು ಹೊಂದುತ್ತಿರಿ.

ಕಾರ್ಯಕ್ಷಮತೆ

C3 ಏರ್‌ಕ್ರಾಸ್‌ನಲ್ಲಿ, ನೀವು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (110PS/190Nm) ಅನ್ನು ಪಡೆಯುತ್ತೀರಿ. ಸದ್ಯಕ್ಕೆ ಯಾವುದೇ ಆಟೋಮ್ಯಾಟಿಕ್ ಗೇರ್‌ ಬಾಕ್ಸ್‌ನ ಆಯ್ಕೆ ಅಥವಾ ನೆಚುರಲಿ ಅಸ್ಪಿರೇಟೆಡ್‌ ಆದ ಪೆಟ್ರೋಲ್ ಎಂಜಿನ್‌ನ ಆಯ್ಕೆ ಇಲ್ಲ, ಆದರೆ  ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ನ್ನು ಮುಂದಿನ ದಿನಗಳಲ್ಲಿ ಪರಿಚಯಿಸಲಾಗುವುದು.

Citroen C3 Aircross Engine

ಈ ಎಂಜಿನ್ ಟರ್ಬೋಚಾರ್ಜ್ ಆಗಿದ್ದು, ಆದರೆ ಇದು ನಿಮಗೆ ಅತ್ಯಾಕರ್ಷಕ ಕಾರ್ಯಕ್ಷಮತೆಯನ್ನು ನೀಡುವುದಿಲ್ಲ. ಇದರ ಬದಲಿಗೆ ನಿಮಗೆ ಸುಲಭ ಮತ್ತು ಪ್ರಯತ್ನವಿಲ್ಲದ ಡ್ರೈವ್‌ಗೆ ಸಹಕಾರಿಯಾಗಿದೆ. ಕಡಿಮೆ ಆರ್‌ಪಿಎಮ್‌ಗಳಲ್ಲಿ ನೀವು ಸಾಕಷ್ಟು ಟಾರ್ಕ್ ಅನ್ನು ಪಡೆಯುತ್ತೀರಿ ಅದು ಕಡಿಮೆ ಆರ್‌ಪಿಎಮ್‌ಗಳಿಂದಲೂ ಉತ್ತಮ ವೇಗವರ್ಧಕವನ್ನು ನೀಡುತ್ತದೆ. ನೀವು ನಗರದಲ್ಲಿ ಪ್ರಯಾಣಿಸುತ್ತಿದ್ದರೆ, ಎರಡನೇ ಅಥವಾ ಮೂರನೇ ಗೇರ್ ನಿಮಗೆ ಆರಾಮದಾಯಕವಾಗಿಸುತ್ತದೆ ಮತ್ತು ನೀವು ಹೆಚ್ಚು ಗೇರ್‌ ಚೇಂಜ್‌ ಮಾಡುವ ಅಗತ್ಯವಿಲ್ಲ. ನೀವು ಡೌನ್‌ಶಿಫ್ಟ್ ಮಾಡಲು ನಿರ್ಧರಿಸಿದಾಗ, ಓವರ್‌ಟೇಕ್‌ಗಳು ಮತ್ತು ಅಂತರವನ್ನು ಪಡೆಯಲು ವೇಗವಾದ ವೇಗವರ್ಧನೆಯೊಂದಿಗೆ ಸುಲಭವಾಗಲಿದೆ. ಇದರಿಂದ ನಗರದಲ್ಲಿ C3 ಏರ್‌ಕ್ರಾಸ್ ಅನ್ನು ಸುಲಭವಾಗಿ ಮತ್ತು ಶ್ರಮವಿಲ್ಲದೆ ಚಾಲನೆ ಮಾಡಬಹುದು.

Citroen C3 Aircross Gear Lever

ಈ ಕರ್ತವ್ಯವನ್ನು ಹೆದ್ದಾರಿಗಳಲ್ಲಿಯೂ ನಿರ್ವಹಿಸಲಾಗುತ್ತದೆ.  ಇದು ಸುಲಭವಾಗಿ ಮತ್ತು ಐದನೇ ಗೇರ್‌ನಲ್ಲಿ 100kmph ವರೆಗಿನ ವೇಗದಲ್ಲಿ ಚಲಿಸುತ್ತದೆ, ವೇಗವನ್ನು ಹೆಚ್ಚಿಸಲು ಮತ್ತು ಓವರ್‌ಟೇಕ್‌ ಮಾಡಲು ಎಂಜಿನ್‌ ಸಾಕಷ್ಟು ಶಕ್ತವಾಗಿದೆ. ಹೈವೇಯಲ್ಲಿ ಆರನೇ ಗೇರ್ ನಲ್ಲಿ ಚಾಲನೆ ಮಾಡುವಾಗ ನೀವು ಉತ್ತಮ ಮೈಲೇಜ್ ನ್ನು ಪಡೆಯಬಹುದು.

ಆದರೂ ಈ ಕಾರಿನಲ್ಲಿ ಉತ್ತಮವಾಗಿಸಬಹುದಾದ ಎರಡು ವಿಷಯಗಳಿವೆ. 3-ಸಿಲಿಂಡರ್ ಇಂಜಿನ್‌ನ್ನು ಪರಿಷ್ಕರಿಸಿಲ್ಲ, ಹಾಗಾಗಿ ಇಂಜಿನ್‌ನ ಶಬ್ದ ಮತ್ತು ವೈಬ್ರೇಷನ್‌ ಕ್ಯಾಬಿನ್‌ಗೆ ಸುಲಭವಾಗಿ ಹರಿದಾಡುತ್ತದೆ. ಇದಲ್ಲದೆ, ಗೇರ್ ಶಿಫ್ಟ್‌ಗಳು ತುಂಬಾ ಕಠಿಣವಾಗಿದೆ ಮತ್ತು ನೀವು ಬಯಸಿದಷ್ಟು ಸುಲಭವಾಗಿ ಗೇರ್‌ಚೇಂಜ್‌ ಮಾಡಲು ಕಷ್ಟವಾಗಬಹುದು. ಇದರಿಂದ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಅದಷ್ಟು ಬೇಗನೇ ಈ ಕಾರಿನಲ್ಲಿ ಪರಿಚಯಿಸಲು ಪ್ರಾರ್ಥಿಸುತ್ತೀರಿ. 

ರೈಡ್ ಅಂಡ್ ಹ್ಯಾಂಡಲಿಂಗ್

Citroen C3 Aircross

ಕಾರುಗಳನ್ನು ಆರಾಮದಾಯಕವಾಗಿಸುವಲ್ಲಿ ಸಿಟ್ರೊಯೆನ್ ನಿಜವಾಗಲು ಒಂದು ಲೆಜೆಂಡ್‌ ಆಗಿದೆ.  C3 ಯಲ್ಲಿ ಕೆಲವು ಅಂಶಗಳು ಮಿಸ್ ಆಗಿತ್ತು, ಆದರೆ C3 ಏರ್‌ಕ್ರಾಸ್‌ನಲ್ಲಿ ಅದನ್ನು ಸರಿಯಾಗಿ ಸಂಯೋಜಿಸಲಾಗಿದೆ. ಕೆಟ್ಟ ರಸ್ತೆಗಳು ಮತ್ತು ಹೊಂಡಗಳಲ್ಲಿ ನೀವು ಸಂಚರಿಸುವಾಗ ಇದು ನಿಮಗೆ ಕುಶನ್‌ನ ಅನುಭವವನ್ನು ನೀಡುತ್ತದೆ. ಕೆಟ್ಟ ರಸ್ತೆಗಳ ಮೇಲೆ ಕಾರು ಶಾಂತವಾಗಿರುತ್ತದೆ ಮತ್ತು ಸಸ್ಪೆನ್ಸನ್‌ ಮೌನವಾಗಿ ಕಾರ್ಯನಿರ್ವಹಿಸುತ್ತದೆ.  ಕಡಿಮೆ ವೇಗದಲ್ಲಿ ಕ್ಯಾಬಿನ್‌ನಲ್ಲಿ ಸ್ವಲ್ಪ ಚಲನೆ ಇರುತ್ತದೆ, ಆದರೆ ವೇಗ ಕಡಿಮೆಯಾದಂತೆ ಅದೂ ಕಡಿಮೆಯಾಗುತ್ತದೆ. ಮತ್ತು ಸಸ್ಪೆನ್ಸನ್‌ ಯಾವಾಗಲೂ ಲಕ್ಸುರಿಯಾಗಿರುತ್ತದೆ ಮತ್ತು ಎಲ್ಲಾ ಪ್ರಯಾಣಿಕರು ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. 

ವರ್ಡಿಕ್ಟ್

C3 ಏರ್‌ಕ್ರಾಸ್ ತುಂಬಾನೇ ವಿಭಿನ್ನವಾಗಿದೆ. ಇದು ನಿಮಗೆ ಒಂದು ಪರಿಸ್ಥಿತಿಯಲ್ಲಿ ಯಾವುದೇ ಭಾವವನ್ನು ನೀಡುವುದಿಲ್ಲ, ಆದರೆ ಎರಡಕ್ಕಿಂತ ಹೆಚ್ಚಿನ ಸಮಯದಲ್ಲಿ ಸಾಕಷ್ಟು ಭಾವವನ್ನು ನೀಡುತ್ತದೆ. ಹಾಗಾಗಿ ಅತ್ಯಂತ ಜನಪ್ರಿಯವಾದವುಗಳೊಂದಿಗೆ ಪ್ರಾರಂಭಿಸೋಣ. ನಿಮ್ಮ ಹ್ಯಾಚ್‌ಬ್ಯಾಕ್ ಅಥವಾ ಸಣ್ಣ ಎಸ್‌ಯುವಿಯಿಂದ ನೀವು ಹೆಚ್ಚು ಆಸನದ ಕಾರುಗಳನ್ನು ಹುಡುಕುತ್ತಿದ್ದರೆ, C3 ಏರ್‌ಕ್ರಾಸ್ ಅದಕ್ಕೆ ಕಡಿಮೆಯಾಗುವುದಿಲ್ಲ. ನಿಮಗೆ ಅಪ್‌ಗ್ರೇಡ್‌ನ ಅನುಭವ ನೀಡಲು ಇದು ತುಂಬಾ ಬೇಸಿಕ್‌ ಆಗಿದೆ ಮತ್ತು ಕ್ಯಾಬಿನ್ ಅನುಭವವು ಸರಳವಾಗಿದೆ.  

Citroen C3 Aircross

ಆದಾಗಿಯೂ, ನೀವು ಈಗಾಗಲೇ ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳ ಮಿಡ್‌ ವೇರಿಯೆಂಟ್‌ಗಳನ್ನು ಖರೀದಿಸಲು ಆಸಕ್ತರಾಗಿದ್ದರೆ ಮತ್ತು ಈಗಾಗಲೇ ವೈಶಿಷ್ಟ್ಯಗಳಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿದ್ದರೆ C3 Aircross ನ್ನು ನಿಮ್ಮ ಆಯ್ಕೆಯಲ್ಲಿ ಪರಿಗಣಿಸಬಹುದು. ಇತರ ಎಸ್‌ಯುವಿ ಗಳ ಮಿಡ್‌ ವೇರಿಯೆಂಟ್‌ಗಳಲ್ಲಿ ಮಿಸ್‌ ಆಗಿರುವ ಸೌಕರ್ಯಗಳಾದ ಅಲಾಯ್‌ ವೀಲ್‌ಗಳು, ಡ್ಯುಯಲ್-ಟೋನ್ ಪೇಂಟ್, ದೊಡ್ಡ ಟಚ್‌ಸ್ಕ್ರೀನ್ ಮತ್ತು ಸರಿಯಾದ ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್‌ಗಳು ನಿಮಗೆ C3 ಏರ್‌ಕ್ರಾಸ್ ನಲ್ಲಿ ಸಿಗಲಿದೆ. ಅಂತಿಮವಾಗಿ, ನಿಮಗೆ ದೂರದ ಪ್ರಯಾಣಕ್ಕೆ ಏಳು ಮಂದಿ ಕುಳಿತುಕೊಳ್ಳಬಹುದಾದ ಮತ್ತು ದೊಡ್ಡ ಬೂಟ್ ಸಾಮರ್ಥ್ಯವನ್ನು ಹೊಂದಿರುವ ಎಂಪಿವಿ ಕಾರು ಅಗತ್ಯವಿದ್ದರೆ ಹಾಗು ವೈಶಿಷ್ಟ್ಯಗಳು ಮತ್ತು ಅನುಭವದಲ್ಲಿ ನಿಮಗೆ C3 ಏರ್‌ಕ್ರಾಸ್ ಅದ್ಭುತಗಳನ್ನು ಮಾಡುತ್ತದೆ.

Citroen C3 Aircross

ಆದರೆ  ಇದೆಲ್ಲವೂ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ. ನಾವು C3 ಏರ್‌ಕ್ರಾಸ್‌ನ ಬೆಲೆ 9 ರಿಂದ 15 ಲಕ್ಷ ರೂ.ವಿನ ನಡುವೆ ಇರಬಹುದು ಎಂದು ಊಹಿಸುತ್ತೇವೆ. ಈ ಬೆಲೆ ನಿರೀಕ್ಷಿಸಿದಕ್ಕಿಂತ ಹೆಚ್ಚಾದರೆ, ನಾವು ಇದರಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಯೇ ಹೆಚ್ಚಿನ ಹಣಕ್ಕೆ ಇದು ಅರ್ಹವಾಗಿಲ್ಲ ಎಂಬ ಆಂಶ ನಮ್ಮನ್ನು ಕಾಡಲು ಶುರು ಮಾಡುತ್ತದೆ. 

Citroen C3 Aircross

ಸ್ಥಳಾವಕಾಶ, ಸೌಕರ್ಯ ಮತ್ತು ಬಹುಮುಖತೆಯು ನಿಮ್ಮ ಆದ್ಯತೆಗಳಾಗಿದ್ದರೆ ಮತ್ತು ನೀವು ವೈಶಿಷ್ಟ್ಯಗಳಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿದ್ದರೆ C3 ಏರ್‌ಕ್ರಾಸ್ ಅದ್ಭುತ ಕೊಡುಗೆಯನ್ನು ನೀಡುತ್ತದೆ. ಆದರೆ ಈ ಸೂತ್ರವು C3 ತನ್ನ ವಿಭಾಗದ ಪ್ರತಿಸ್ಪರ್ಧಿಗಳಿಗಿಂತ ಕನಿಷ್ಠ 5 ಲಕ್ಷ ರೂ ಅಗ್ಗವಾಗಿದ್ದರೆ ಮಾತ್ರ ಕಾರ್ಯನಿರ್ವಹಿಸುತ್ತದೆ.

ಸಿಟ್ರೊನ್ ಸಿ3 ಏರ್‌ಕ್ರಾಸ್‌

ನಾವು ಇಷ್ಟಪಡುವ ವಿಷಯಗಳು

 • ಹೆಚ್ಚಿನ ಬೂಟ್ ಸ್ಪೇಸ್‌ನೊಂದಿಗೆ ವಿಶಾಲವಾದ 5-ಆಸನಗಳ ವೇರಿಯೆಂಟ್‌
 • 3ನೇ ಸಾಲಿನ ಸೀಟುಗಳನ್ನು ಬಳಸಬಹುದಾದ  ಕಪ್‌ಹೋಲ್ಡರ್‌ಗಳು ಮತ್ತು USB ಚಾರ್ಜರ್‌ 
 • ಕೆಟ್ಟ ಮತ್ತು ಗುಂಡಿ ಹೊಂದಿದ ರಸ್ತೆಗಳಲ್ಲಿ ತುಂಬಾ ಆರಾಮದಾಯಕವಾಗಿದೆ.
 • ಟರ್ಬೊ-ಪೆಟ್ರೋಲ್ ಎಂಜಿನ್ ನಗರ ಮತ್ತು ಹೆದ್ದಾರಿಗಳಲ್ಲಿ ಉತ್ತಮ ಡ್ರೈವಿಂಗ್‌ನ ಸಾಮರ್ಥ್ಯ ನೀಡುತ್ತದೆ
 • ಕಠಿಣವಾಗಿ ಮತ್ತು  ಕ್ರಾಸ್ಒವರ್‌ಗಿಂತ ಹೆಚ್ಚಾಗಿ ಎಸ್‌ಯುವಿಯಾಗಿ ಕಾಣುತ್ತದೆ. 
 • 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಡ್ರೈವರ್ ಡಿಸ್ಪ್ಲೇ ಎರಡೂ ಉತ್ತಮ ಡಿಸ್‌ಪ್ಲೇಗಳು

ನಾವು ಇಷ್ಟಪಡದ ವಿಷಯಗಳು

 • ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳೊಂದಿಗೆ ವಿನ್ಯಾಸದಲ್ಲಿ ಯಾವುದೇ ಆಧುನಿಕ ಅಂಶಗಳಿಲ್ಲ. 
 • ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕಲಿ ಫೋಲ್ಡಿಂಗ್ ORVM (ಸೈಡ್‌ ಮಿರರ್) ಗಳಂತಹ ಉತ್ತಮ ವೈಶಿಷ್ಟ್ಯಗಳು ಇದರಲ್ಲಿ ಕಣ್ಮರೆಯಾಗಿದೆ. 

arai mileage18.5 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ (cc)1199
ಸಿಲಿಂಡರ್ ಸಂಖ್ಯೆ3
max power (bhp@rpm)108.62bhp@5500rpm
max torque (nm@rpm)190nm@1750rpm
seating capacity7
ಟ್ರಾನ್ಸ್ಮಿಷನ್ typeಮ್ಯಾನುಯಲ್‌
boot space (litres)444
fuel tank capacity (litres)45
ಬಾಡಿ ಟೈಪ್ಎಸ್ಯುವಿ
ನೆಲದ ತೆರವುಗೊಳಿಸಲಾಗಿಲ್ಲ unladen ((ಎಂಎಂ))200

ಒಂದೇ ರೀತಿಯ ಕಾರುಗಳೊಂದಿಗೆ ಸಿ3 ಏರ್‌ಕ್ರಾಸ್‌ ಅನ್ನು ಹೋಲಿಕೆ ಮಾಡಿ

Car Name
ಸ೦ಚಾರಣೆಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
82 ವಿರ್ಮಶೆಗಳು
433 ವಿರ್ಮಶೆಗಳು
501 ವಿರ್ಮಶೆಗಳು
990 ವಿರ್ಮಶೆಗಳು
290 ವಿರ್ಮಶೆಗಳು
ಇಂಜಿನ್1199 cc1462 cc1462 cc999 cc1199 cc - 1497 cc
ಇಂಧನಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ಡೀಸಲ್ / ಪೆಟ್ರೋಲ್
ಹಳೆಯ ಶೋರೂಮ್ ಬೆಲೆ9.99 - 12.54 ಲಕ್ಷ8.64 - 13.08 ಲಕ್ಷ8.29 - 14.14 ಲಕ್ಷ6.33 - 8.97 ಲಕ್ಷ8.10 - 15.50 ಲಕ್ಷ
ಗಾಳಿಚೀಲಗಳು22-42-62-46
Power108.62 ಬಿಹೆಚ್ ಪಿ86.63 - 101.65 ಬಿಹೆಚ್ ಪಿ86.63 - 101.65 ಬಿಹೆಚ್ ಪಿ71.01 ಬಿಹೆಚ್ ಪಿ113.31 - 118.27 ಬಿಹೆಚ್ ಪಿ
ಮೈಲೇಜ್18.5 ಕೆಎಂಪಿಎಲ್20.3 ಗೆ 20.51 ಕೆಎಂಪಿಎಲ್17.38 ಗೆ 19.8 ಕೆಎಂಪಿಎಲ್18.2 ಗೆ 20.0 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್

ಸಿಟ್ರೊನ್ ಸಿ3 ಏರ್‌ಕ್ರಾಸ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

 • ಇತ್ತೀಚಿನ ಸುದ್ದಿ

ಸಿಟ್ರೊನ್ ಸಿ3 ಏರ್‌ಕ್ರಾಸ್‌ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ82 ಬಳಕೆದಾರರ ವಿಮರ್ಶೆಗಳು
 • ಎಲ್ಲಾ (82)
 • Looks (26)
 • Comfort (30)
 • Mileage (9)
 • Engine (9)
 • Interior (17)
 • Space (10)
 • Price (15)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • It's Amazing Service For All Safety

  It's a superb car for safety features it's superb quality for this car the car system it's superb qu...ಮತ್ತಷ್ಟು ಓದು

  ಇವರಿಂದ ajay choudhary
  On: Dec 04, 2023 | 30 Views
 • Bold And Strong

  Its turbo petrol engine offers good drivability both in city and highways and is very comfortable ov...ಮತ್ತಷ್ಟು ಓದು

  ಇವರಿಂದ sumit
  On: Dec 04, 2023 | 15 Views
 • A Luxurious And Spacious SUV For Refined Drives

  The Citroen C3 Aircross has left an continuing jolt with its adjustable car and simple interpretatio...ಮತ್ತಷ್ಟು ಓದು

  ಇವರಿಂದ keshav
  On: Nov 30, 2023 | 413 Views
 • Quirky And Versatile Compact SUV

  The Citroën C3 Aircross is a unique and versatile compact SUV that stands apart with its distinctive...ಮತ್ತಷ್ಟು ಓದು

  ಇವರಿಂದ preeti
  On: Nov 25, 2023 | 180 Views
 • Awesome Car

  Amazing car, with awesome mileage, and the entertainment facilities are perfect. The design is perfe...ಮತ್ತಷ್ಟು ಓದು

  ಇವರಿಂದ sengduli
  On: Nov 21, 2023 | 669 Views
 • ಎಲ್ಲಾ ಸಿ3 aircross ವಿರ್ಮಶೆಗಳು ವೀಕ್ಷಿಸಿ

ಸಿಟ್ರೊನ್ ಸಿ3 ಏರ್‌ಕ್ರಾಸ್‌ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: ಸಿಟ್ರೊನ್ ಸಿ3 ಏರ್‌ಕ್ರಾಸ್‌ petrolis 18.5 ಕೆಎಂಪಿಎಲ್.

ಇಂಧನದ ಪ್ರಕಾರಟ್ರಾನ್ಸ್ಮಿಷನ್arai ಮೈಲೇಜ್
ಪೆಟ್ರೋಲ್ಮ್ಯಾನುಯಲ್‌18.5 ಕೆಎಂಪಿಎಲ್

ಸಿಟ್ರೊನ್ ಸಿ3 ಏರ್‌ಕ್ರಾಸ್‌ ವೀಡಿಯೊಗಳು

 • Citroen C3 Aircross SUV Review: Buy only if…
  Citroen C3 Aircross SUV Review: Buy only if…
  aug 09, 2023 | 11356 Views
 • Citroen C3 Aircross Review | Drive Impressions, Cabin Experience & More | ZigAnalysis
  Citroen C3 Aircross Review | Drive Impressions, Cabin Experience & More | ZigAnalysis
  aug 11, 2023 | 23575 Views

ಸಿಟ್ರೊನ್ ಸಿ3 ಏರ್‌ಕ್ರಾಸ್‌ ಬಣ್ಣಗಳು

ಸಿಟ್ರೊನ್ ಸಿ3 ಏರ್‌ಕ್ರಾಸ್‌ ಚಿತ್ರಗಳು

 • Citroen C3 Aircross Front Left Side Image
 • Citroen C3 Aircross Rear Left View Image
 • Citroen C3 Aircross Hill Assist Image
 • Citroen C3 Aircross Exterior Image Image
 • Citroen C3 Aircross Exterior Image Image
 • Citroen C3 Aircross Exterior Image Image
 • Citroen C3 Aircross Rear Right Side Image
 • Citroen C3 Aircross DashBoard Image
space Image
Found what you were looking for?
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

 • ಇತ್ತೀಚಿನ ಪ್ರಶ್ನೆಗಳು

What are the ಲಭ್ಯವಿದೆ ಫಿನಾನ್ಸ್ options ಅದರಲ್ಲಿ ಸಿಟ್ರೊನ್ ಸಿ3 Aircross?

DevyaniSharma asked on 20 Nov 2023

If you are planning to buy a new car on finance, then generally, 20 to 25 percen...

ಮತ್ತಷ್ಟು ಓದು
By Cardekho experts on 20 Nov 2023

IS it offering ಸ್ವಯಂಚಾಲಿತ transmission?

Rajesh asked on 24 Aug 2023

The Citroen C3 Aircross gets the same 1.2-litre turbo-petrol engine like the C3....

ಮತ್ತಷ್ಟು ಓದು
By Cardekho experts on 24 Aug 2023

When will it launch?

prem asked on 5 Jul 2023

As of now, there is no official update from the brand's end. However, it is ...

ಮತ್ತಷ್ಟು ಓದು
By Cardekho experts on 5 Jul 2023

What IS the ground clearance ಅದರಲ್ಲಿ the ಸಿಟ್ರೊನ್ ಸಿ3 Aircross?

Abhijeet asked on 19 Jun 2023

The ground clearance of the Citroen C3 Aircross is 200(Unladen)

By Cardekho experts on 19 Jun 2023

How many ಗಾಳಿಚೀಲಗಳು are ಲಭ್ಯವಿದೆ ರಲ್ಲಿ {0}

shishir asked on 14 Jun 2023

It would be unfair to give a verdict here as the model is not launched yet. We w...

ಮತ್ತಷ್ಟು ಓದು
By Cardekho experts on 14 Jun 2023

space Image
space Image

ಭಾರತ ರಲ್ಲಿ ಸಿ3 ಏರ್‌ಕ್ರಾಸ್‌ ಬೆಲೆ

 • Nearby
 • ಪಾಪ್ಯುಲರ್
ನಗರಹಳೆಯ ಶೋರೂಮ್ ಬೆಲೆ
ನೋಯ್ಡಾRs. 9.99 - 12.54 ಲಕ್ಷ
ಘಜಿಯಾಬಾದ್Rs. 9.99 - 12.54 ಲಕ್ಷ
ಗುರ್ಗಾಂವ್Rs. 9.99 - 12.54 ಲಕ್ಷ
ಕಾರ್ನಾಲ್Rs. 9.99 - 12.54 ಲಕ್ಷ
ಡೆಹ್ರಾಡೂನ್Rs. 9.99 - 12.54 ಲಕ್ಷ
ಜೈಪುರRs. 9.99 - 12.54 ಲಕ್ಷ
ಚಂಡೀಗಡ್Rs. 9.99 - 12.54 ಲಕ್ಷ
ಸೊಲಾನ್Rs. 9.99 - 12.54 ಲಕ್ಷ
ನಗರಹಳೆಯ ಶೋರೂಮ್ ಬೆಲೆ
ಅಹ್ಮದಾಬಾದ್Rs. 9.99 - 12.54 ಲಕ್ಷ
ಬೆಂಗಳೂರುRs. 9.99 - 12.54 ಲಕ್ಷ
ಚಂಡೀಗಡ್Rs. 9.99 - 12.54 ಲಕ್ಷ
ಚೆನ್ನೈRs. 9.99 - 12.54 ಲಕ್ಷ
ಘಜಿಯಾಬಾದ್Rs. 9.99 - 12.54 ಲಕ್ಷ
ಗುರ್ಗಾಂವ್Rs. 9.99 - 12.54 ಲಕ್ಷ
ಹೈದರಾಬಾದ್Rs. 9.99 - 12.54 ಲಕ್ಷ
ಜೈಪುರRs. 9.99 - 12.54 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಸಿಟ್ರೊನ್ ಕಾರುಗಳು

view ಡಿಸೆಂಬರ್‌ offer
view ಡಿಸೆಂಬರ್‌ offer
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience