ವ್ಯಾಗನ್ R ೨೦೧೯ ವೇರಿಯೆಂಟ್ ಗಳ ವಿವರಣೆ .
ಮಾರುತಿ ವೇಗನ್ ಆರ್ 2013-2022 ಗಾಗಿ cardekho ಮೂಲಕ ಮಾರ್ಚ್ 22, 2019 01:29 pm ರಂದು ಪ್ರಕಟಿಸಲಾಗಿದೆ
- 28 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ವ್ಯಾಗನ್ R ಮುರನೇ ಜನರೇಶನ್ ವ್ಯಾಗನ್ R ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ ಹಾಗು ಇದು ರೂ ೪. ೯ಲಕ್ಷ ಗಳಲ್ಲಿ ದೊರೆಯುತ್ತದೆ.
Update: Read our first drive review of the new Maruti Wagon R here.
ಮಾರುತಿ ಸುಜುಕಿ ವ್ಯಾಗನ್ R 1.0 ಲೀಟರ್ ಹಾಗು 1.2 ಲೀಟರ್ ಗಳ ಎರೆಡು ಎಂಜಿನ್ ಆಯ್ಕೆ ಕೊಟ್ಟಿದೆ. ಮತ್ತು L,V ಮತ್ತು Z ವೇರಿಯೆಂತ್ ಗಳಲ್ಲಿ ಮಾತ್ರ ಲಭ್ಯವಿದೆ. L ವೇರಿಯೆಂಟ್ ಹೊರತಾಗಿ ಎಲ್ಲ ವೇರಿಯೆಂಟ್ ಗಳಲ್ಲೂ ಮಾನ್ಯುಯಲ್ AMT ಗೇರ್ ಬಾಕ್ಸ್ ನೊಂದಿಗೂ ಸಹ ಬರಲಿದೆ.
ನಿಮಗೆ ಯಾವ ವೇರಿಯೆಂಟ್ ನಿಮ್ಮ ಬಜೆಟ್ ಹಾಗು ಅವಶ್ಯಕತೆ ಪೂರೈಸುತ್ತದೆ ಎಂದು ನೋಡೋಣ.
ಹೆಚ್ಚಿನ ವಿವರಗಳನ್ನು ತಿಳಿಯುವ ಮುಂಚೆ ಬಣ್ಣಗಳ ಆಯ್ಕೆ ಹಾಗು ಸ್ಟ್ಯಾಂಡರ್ಡ್ ಸುರಕ್ಷತಾ ಉಪಕರಣಗಳ ಬಗ್ಗೆ ತಿಳಿಯೋಣ.
ಬಣ್ಣಗಳು:
- ಸಿಲ್ಕಿ ಸಿಲ್ವರ್
- ಮ್ಯಾಗ್ನಾ ಗ್ರೇ
- ಆಟಮ್ ಆರೆಂಜ್
- ನಟ್ ಮೆಗ್ ಬ್ರೌನ್
- ಪೂಲ್ ಸೈಡ್ ಬ್ಲೂ
- ಸುಪೀರಿಯರ್ ವೈಟ್.
ಸುರಕ್ಷತಾ ಉಪಕರಣಗಳು :
- ಡ್ರೈವರ್ ಏರ್ಬ್ಯಾಗ್
- ABS ಮತ್ತು EBD
- ಮುಂದಿನ ಸೀಟ್ ನ ಸೀಟ್ ಬೆಲ್ಟ್
- ರಿಮೈಂಡರ್
- ರೇರ್ ಪಾರ್ಕಿಂಗ್ ಸೆನ್ಸರ್
- ಸೆಂಟ್ರಲ್ ಲಾಕಿಂಗ್.
ತಾವೇ ಡ್ರೈವ್ ಮಾಡಬೇಕೆಂದುಕೊಳ್ಳುವವರಿಗಾಗಿ ಅಥವಾ ಹಿಂಬದಿಯಲ್ಲಿ ಕುಳಿತುಕೊಳ್ಳಬಯಸುವವರಿಗಾಗಿ.
|
1.0 MT |
Rs 4.19 lakh |
|
Lxi(O) |
Rs 4.25 lakh (+Rs 6,500) |
ಸುರಕ್ಷತೆ : ಸಹ ಪ್ರಯಾಣಿಕ ಏರ್ಬ್ಯಾಗ್ (ಆಯ್ಕೆ ) ಮುಂದಿನ ಸೀಟ್ ಗಳ ಸೀಟ್ ಬೆಲ್ಟ್ ಗಳು , ಪ್ರೆಟೆನ್ಸಿನ್ರ್ ಹಾಗು ಲೋಡ್ ಲಿಮಿಟರ್ ನೊಂದಿಗೆ (ಆಯ್ಕೆ )
ಬಾಹ್ಯ : ಬಾಡಿ ಕಲರ್ ಬಂಪರ್ ಮತ್ತು ರೂಫ್ ಆಂಟೆನಾ
ಅನುಕೂಲತೆ: ಮುಂದಿನ ರೋ ದಲ್ಲಿ ಅಸ್ಸೇಸ್ಸೋರಿ ಸಾಕೆಟ್ , ಮುಂದಿನ ಪವರ್ ವಿಂಡೋಸ್, ಮತ್ತು ಮಾನ್ಯುಯಲ್ ಎ ಸಿ.
ವೀಲ್ : ೧೩ ಇಂಚು ವೀಲ್ ಗಳು 155/80 R13 ಟೈರ್ ಗಳೊಂದಿಗೆ.
ಅನಿಸಿಕೆ : ವ್ಯಾಗನ್ R ಬೇಸ್ ವೇರಿಯೆಂತ್ ನ ಬೆಲೆ ಹೊರ ಹೋಗುತ್ತಿರುವ ವ್ಯಾಗನ್ R ಬೇಸ್ ವೇರಿಯೆಂಟ್ ಗೆ ಸರಿಸಮನಾಗಿದೆ. ಹಾಗು ಇದರಲ್ಲಿ ಹೆಚ್ಚಿನ ಫೀಚರ್ ಗಳು , ಸುರಕ್ಷತಾ ಸಲಕರಣೆಯೊಂದಿಗೆ ಇರುವುದರಿಂದ ಬೆಲೆ ಬಾಳುವಿಕೆ ಚೆನ್ನಾಗಿದೆ ಎನ್ನಿಸುತ್ತದೆ.
ವ್ಯಾಗನ್ R ನಲ್ಲಿ ಬಾಡಿ ಕಲರ್ ಬಂಪರ್ ಗಳು , ರೇರ್ ಪಾರ್ಕಿಂಗ್ ಸೆನ್ಸರ್ ಸೆಂಟ್ರಲ್ ಲಾಕಿಂಗ್ ಗಳು ಸ್ಟ್ಯಾಂಡರ್ಡ್ ಆಗಿರುವುದೆ , ಇದರ ಜೊತೆಗೆ ಡಿಫಾಗರ್ , ೨ ಡಿನ್ ಆಡಿಯೋ ಸಿಸ್ಟಮ್ , ಮಾನ್ಯುಯಲ್ ಡೇ/ನೈಟ್ IRVM ಮತ್ತು ವೀಲ್ ಕವರ್ ಗಳು ದೊರೆಯುವ ಹಾಗಿದ್ದರೆ ಚೆನ್ನಾಗಿರುತಿತ್ತು. . ನೀವು ಒಬ್ಬರೇ ಡ್ರೈವ್ ಮಾಡುವವರಾಗಿದ್ದರೆ ಅಥವಾ ಒಬ್ಬ ಡ್ರೈವರ್ ಅನ್ನು ಇರಿಸಿಕೊಳ್ಳುವ ಹಾಗಿದ್ದರೆ ನಿಮಗೆ LXi ಬೇಸಿಕ್ ವೆರಿಯೆಂಟ್ ಸೂಕ್ತ ಹಾಗು ನೀವು ಹೊರಗಡೆಯಿಂದ ನಿಮಗೆ ಬೇಕಾದ ಆಸ್ಸೆಸ್ಸರಿ ಗಳನ್ನೂ ಫಿಟ್ ಮಾಡಿಕೊಳ್ಳಬಹುದಾಗಿದೆ . ನೀವು ಕೋ ಪ್ಯಾಸೆಂಜರ್ ಒಂದಿಗೆ ಅಥವಾ ಕುಟುಂಬದೊಂದಿಗೆ ಹೆಚ್ಚಿನ ಪ್ರಯಾಣ ಮಾಡುವವರಾಗಿದ್ದರೆ LXi (O ) ವೇರಿಯೆಂಟ್ LXi ಗಿಂತ ರೂ ೬೫೦೦ ಹೆಚ್ಚು ಪ್ರೀಮಿಯಂ ಕೊಡಬೇಕಾಗುತ್ತದೆ .
ಎಲ್ಲಾ ಬೇಸಿಕ್ ವೇರಿಯೆಂಟ್ ನ ಫೀಚರ್ ಗಳು ಇದೆ. ೧. ಲೀಟರ್ ಎಂಜಿನ್ ಅನ್ನು ಪರಿಗಣಿಸಬಹುದು.
|
||
Vxi |
Rs 4.69 lakh/Rs 5.16 lakh (+Rs 47,000) |
Rs 4.89 lakh/Rs 5.36 lakh (+47,000) |
Vxi(O) |
Rs 4.75 lakh/Rs 5.22 lakh |
Rs 4.95 lakh/Rs 5.42 lakh |
Price over Lxi/Lxi(O) |
Rs 50,000/- |
- |
ಫೀಚರ್ (LXi ನೊಂದಿಗೆ )
ಸುರಕ್ಷತೆ: ಕೋ ಪ್ಯಾಸೆಂಜರ್ ಏರ್ಬ್ಯಾಗ್ (ಆಯ್ಕೆ ) ಫ್ರಂಟ್ ಸೀಟ್ ಬೆಲ್ಟ್ ಪ್ರೆಟೆನ್ಸಿನ್ರ್ ಹಾಗು ಲೋಡ್ ಲಿಮಿಟರ್ ನೊಂದಿಗೆ (ಆಯ್ಕೆ ). ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್, ಸ್ಪೀಡ್ ಅಲರ್ಟ್ ಸಿಸ್ಟಮ್ , ಹಾಗು ಸೆಕ್ಯೂರಿಟಿ ಅಲಾರ್ಮ್.
ಬಾಹ್ಯ : ಸುತ್ತುವರೆದ ವೀಲ್ ಕ್ಯಾಪ್ , ಬಾಡಿ ಕಲರ್ ಡೋರ್ ಹ್ಯಾಂಡಲ್, ಮತ್ತು ORVM ಗಳು.
ಅನುಕೂಲ: ವಿದ್ಯುತ್ ಅಳವಡಿಕೆಯ ORVM ಗಳು , ೬೦:೪೦ ಮಡಚಬಹುದಾದ ಹಿಂಬದಿ ಸೀಟ್ ಗಳು , ರಿಮೋಟ್ ಕೀ ಲೆಸ್ ಎಂಟ್ರಿ, ರೇರ್ ಪವರ್ ವಿಂಡೋ ಗಳು, ಮಾನ್ಯುಯಲ್ ಡೇ/ನೈಟ್ IRVM , ಟಿಲ್ಟ್ ಅಡ್ಜಸ್ಟ್ ಸ್ಟಿಯರಿಂಗ್ , ಮತ್ತು ಸ್ಟಿಯರಿಂಗ್ ಮೇಲಿನ ಆಡಿಯೋ ಕಂಟ್ರೋಲ್ ಗಳು (೧. ೨ಲೀಟರ್ ನಲ್ಲಿ ಮಾತ್ರ )
ಇನ್ಫೋಟೈನ್ಮೆಂಟ್ : ೨-ಡಿನ್ ಆಡಿಯೋ ಸಿಸ್ಟಮ್ ಬ್ಲೂಟೂತ್ ನೊಂದಿಗೆ USB ಹಾಗು AUX ಕೂಡ
ವೀಲ್ : ೧೪-ಇಂಚು ಸ್ಟೀಲ್ ವೀಲ್ ಗಳು 165/70R14 ರೇಟಿಂಗ್ ನೊಂದಿಗೆ.
ಅನಿಸಿಕೆ : VXi ವೇರಿಯೆಂಟ್ ನಲ್ಲಿ ಎಲ್ಲಾ ಬೇಸಿಕ್ ಫೀಚರ್ ಗಳು ಇವೆ ಹಾಗು ಇದು ಕೊಳ್ಳುವವರ ಅಚ್ಚು ಮೆಚ್ಚಿನ ಆಯ್ಕೆ ಆಗಿದೆ . ಆದರೆ ಇದಕ್ಕೆ ರೂ ೫೦,೦೦೦ ಹೆಚ್ಚು ಪ್ರೀಮಿಯಂ ಕೊಡಬೇಕಾಗುತ್ತದೆ. 1.0 MT LXi ಯೊಂದಿಗೆ ಹೋಲಿಸಿದಾಗ ರೂ ೧೫,೦೦೦ ಹೆಚ್ಚು . ನಿಮಗೆ ಬಜೆಟ್ ಹೆಚ್ಚು ಮುಖ್ಯವಾಗಿದ್ದರೆ ವ್ಯಾಗನ್ R ೧.೦ ಬಯಸುವುದಾದರೆ LXi MT ಕೊಳ್ಳುವುದು ಸೂಕ್ತ . ನೀವು ಎಂಟ್ರಿ ಲೆವೆಲ್ ಗಿಂತ ಮೇಲೆ ಇರುವ ಕಾರ್ ಕೊಳ್ಳಲು ವ್ಯಾಗನ್ R 1.2 VXi ಹೆಚ್ಚು ಬೆಲೆಯುಳ್ಳದಾಗಿದ್ದು ವ್ಯಾಗನ್ R 1.0 VXi ಗಿಂತ ರೂ ೨೦,೦೦೦ ಹೆಚ್ಚಾಗಿದೆ ಮತ್ತು ದೊಡ್ಡ ಹಾಗು ಶಕ್ತಿಯುಕ್ತ ಇಂಜಿನ್ ನೊಂದಿಗೆ (ಸ್ವಿಫ್ಟ್ ನಲ್ಲಿ ಇದೆ ಎಂಜಿನ್ ಬಳಸಲಾಗಿದೆ ) ಬರುತ್ತದೆ.
ಆದರೂ , ನೀವು ಹೆಚ್ಚು ಖರ್ಚು ಮಾಡಲು ಸಿದ್ಧರಿದ್ದಲ್ಲಿ ವ್ಯಾಗನ್ R 1.2 VXi ಪರಿಗಣಿಸುವುದು ಸೂಕ್ತ (ಆಯ್ಕೆ ಯೊಂದಿಗೆ ಬರುವ ವೇರಿಯೆಂಟ್ ಕೊಳ್ಳಿ ). ಇನ್ನೂ ಹೆಚ್ಚು ಖರ್ಚು ಮಾಡುವಿರಾದರೆ ವ್ಯಾಗನ್ R ZXi ಕೊಳ್ಳುವುದು ಉತ್ತಮ. ಯಾಕೆ ? ಎಂದು ವಿವರಿಸುತ್ತೇವೆ.
ಬೆಲೆಬಾಳುವ ಉನ್ನತ ಮಟ್ಟದ ಆಯ್ಕೆ . ಆದುನಿಕ ಉಪಯುಕ್ತ ಹ್ಯಾಚ್ ಬ್ಯಾಕ್ .
|
1.0L |
|
Zxi |
- |
Rs 5.22 lakh/Rs 5.69 lakh(+47,000) |
Price over Vxi |
- |
Rs 33,000/Rs 33,000 |
Price over Vxi(O) |
- |
Rs 26,500/Rs 26,500 |
ಫೀಚರ್ (VXi ನೊಂದಿಗೆ )
ಸುರಕ್ಷತೆ : ಕೋ ಪ್ಯಾಸೆಂಜರ್ ಏರ್ಬ್ಯಾಗ್ ಮತ್ತು ಮುಂದಿನ ಸೀಟ್ ಬೆಲ್ಟ್ ಪ್ರೆಟೆನ್ಸಿನ್ರ್ ಹಾಗು ಲೋಡ್ ಲಿಮಿಟರ್ ನೊಂದಿಗೆ.
ಬಾಹ್ಯ : ORVM ಮೇಲೆ ಟರ್ನ್ ಇಂಡಿಕೇಟರ್ ಮತ್ತು ಫಾಗ್ ಲ್ಯಾಂಪ್ (7k).
ಅನುಕೂಲ : ವಿದ್ಯುತ್ ಅಳವಡಿಕೆಯೊಂದಿಗಿನ ORVM ಗಳು , ಡಿ ಫಾಗರ್ ಗಳು ಮತ್ತು ರೇರ್ ವಾಷರ್ ಗಳು ಹಾಗು ವೈಪರ್ ಮತ್ತು ಸ್ಟಿಯರಿಂಗ್ ಮೇಲಿನ ವಾಯ್ಸ್ ಕಂಟ್ರೋಲ್ ಬಟನ್ ಗಳು.
ಇನ್ಫೋಟೈನ್ಮೆಂಟ್ : ೭ ಇಂಚ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ , ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ ದೊಂದಿಗೆ.
ಅನಿಸಿಕೆ: Zxi ಕೊಳ್ಳ ಬಯಸುವವರಿಗೆ ಸೂಚಿಸುವ ವೇರಿಯೆಂಟ್ ಆಗಿದೆ . 1.2ಲೀಟರ್ ವ್ಯಾಗನ್ R (ಇದು ವ್ಯಾಗನ್ ರ್ 1.0ಲೀಟರ್ ನಲ್ಲಿ ಇಲ್ಲ )ಹೆಚ್ಚಿನ ಫೀಚರ್ ಗಳು VXi ಗೆ ಹೋಲಿಸಿದಾಗ ರೂ ೩೩,೦೦೦ ಹೆಚ್ಚಿನ ಖರ್ಚಿಗೆ ಸಮಜಾಯಿಷಿ ಕೊಡುತ್ತದೆ .ಇದರಲ್ಲಿ ಹೆಚ್ಚಿನ ಸುರಕ್ಷತೆಯೊಂದಿಗೆ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ವಿದ್ಯುತ್ ಅಳವಡಿಕೆಯ ORVM ಗಳು ಇದನ್ನು ಆಧುನಿಕ ಹ್ಯಾಚ್ ಬ್ಯಾಕ್ ಆಗಿ ಮಾಡುತ್ತದೆ. ಇದರಲ್ಲಿ ನೀವು ಮಿಸ್ ಮಾಡಿ ಕೊಳ್ಳಬಹುದಾದ ಫೀಚರ್ ಎಂದರೆ ಎತ್ತರ ಹೊಂದಿಸಿಕೊಳ್ಳಬಹುದಾದ ಡ್ರೈವರ್ ಸೀಟ್. ಇದನ್ನು ಅಳವಡಿಸಿದ್ದಾರೆ ಸ್ವಲ್ಪ ಹೆಚ್ಚಿನ ಬೆಲೆ ಕೊಡಲೂ ಸಹ ಉತ್ಸುಕರಾಗಿರುತ್ತಿದೆವು .
Also Read: 2019 Maruti Wagon R Waiting Period: When To Expect Delivery?
Read More on : Wagon R AMT