• ಮಾರುತಿ ವೇಗನ್ ಆರ್‌ front left side image
1/1
 • Maruti Wagon R
  + 52ಚಿತ್ರಗಳು
 • Maruti Wagon R
 • Maruti Wagon R
  + 5ಬಣ್ಣಗಳು
 • Maruti Wagon R

ಮಾರುತಿ ವ್ಯಾಗನ್ ಆರ್‌

ಮಾರುತಿ ವ್ಯಾಗನ್ ಆರ್‌ is a 5 seater ಹ್ಯಾಚ್ಬ್ಯಾಕ್ available in a price range of Rs. 4.93 - 6.45 Lakh*. It is available in 14 variants, 2 engine options that are /bs6 compliant and 2 transmission options: ಹಸ್ತಚಾಲಿತ & ಸ್ವಯಂಚಾಲಿತ. Other key specifications of the ವ್ಯಾಗನ್ ಆರ್‌ include a kerb weight of 905-910 and boot space of 341 liters. The ವ್ಯಾಗನ್ ಆರ್‌ is available in 6 colours. Over 1681 User reviews basis Mileage, Performance, Price and overall experience of users for ಮಾರುತಿ ವ್ಯಾಗನ್ ಆರ್‌.
change car
1433 ವಿರ್ಮಶೆಗಳು ಈ ಕಾರಿಗೆ ಅಂಕಗಳನ್ನು ನೀಡಿ
Rs.4.93 - 6.45 ಲಕ್ಷ *
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ವೀಕ್ಷಿಸಿ ಲೇಟೆಸ್ಟ್ ಕೊಡುಗೆ
don't miss out on the best ಆಫರ್‌ಗಳು for this month

ಮಾರುತಿ ವ್ಯಾಗನ್ ಆರ್‌ ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)32.52 ಕಿಮೀ / ಕೆಜಿ
ಇಂಜಿನ್ (ಇಲ್ಲಿಯವರೆಗೆ)1197 cc
ಬಿಹೆಚ್ ಪಿ81.8
ಟ್ರಾನ್ಸ್ಮಿಷನ್ಹಸ್ತಚಾಲಿತ/ಸ್ವಯಂಚಾಲಿತ
ಸೀಟುಗಳು5
ಸೇವೆಯ ಶುಲ್ಕRs.3,165/yr

ವ್ಯಾಗನ್ ಆರ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು : ಮಾರುತಿ ಬಿಡುಗಡೆ ಮಾಡಿದೆ BS6 ವ್ಯಾಗನ್ R CNG. ಹೆಚ್ಚು ತಿಳಿಯಲು ಇಲ್ಲಿ ಓದಿ 

ಮಾರುತಿ ವ್ಯಾಗನ್ R ಬೆಲೆ ಹಾಗು ವೇರಿಯೆಂಟ್ ಗಳು: ಹೊಸ ವ್ಯಾಗನ್ R ಬೆಲೆ ವ್ಯಾಪ್ತಿ ರೂ 4.45 ಲಕ್ಷ ದಿಂದ ರೂ  5.94 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ ). ಅದನ್ನು ಮೂರು ವೇರಿಯೆಂಟ್ ಗಳಲ್ಲಿ ಕೊಡಲಾಗುತ್ತಿದೆ. : L, V, ಹಾಗು  Z. ಅವುಗಳ ವೆತ್ಯಾಸಗಳ ಬಗ್ಗೆ ತಿಳಿಯಲು ವೇರಿಯೆಂಟ್ ಗಳ ಫೀಚರ್ ಪಟ್ಟಿಯನ್ನು ಇಲ್ಲಿ ಓದಿರಿ

ಮಾರುತಿ ವ್ಯಾಗನ್ R ಎಂಜಿನ್ ಹಾಗು ಟ್ರಾನ್ಸ್ಮಿಷನ್ ಗಳು : ಮಾರುತಿ ವ್ಯಾಗನ್ R ಅನ್ನು ಎರೆಡು BS6- ಕಂಪ್ಲೇಂಟ್ ಎಂಜಿನ್ ಗಳೊಂದಿಗೆ ಕೊಡುತ್ತಿದೆ: 1.0- ಲೀಟರ್ ಪೆಟ್ರೋಲ್ ಹಾಗು 1.2 ಲೀಟರ್ ಯುನಿಟ್ ಗಳೊಂದಿಗೆ. 1.2- ಲೀಟರ್ ಎಂಜಿನ್ ಕೊಡುತ್ತದೆ 83PS ಪವರ್ ಹಾಗು  113Nm ಟಾರ್ಕ್ ಹಾಗು ಸಾಮಾನ್ಯ 1.0-ಲೀಟರ್  3- ಸಿಲಿಂಡರ್ ಪೆಟ್ರೋಲ್ ಎಂಜಿನ್ ಕೊಡುತ್ತದೆ  68PS ಹಾಗು 90Nm. ಎರೆಡೂ ಎಂಜಿನ್ ಗಳು ಆಯ್ಕೆಯಾಗಿ 5- ಸ್ಪೀಡ್ ಮಾನ್ಯುಯಲ್ ಹಾಗು  AMT ಗೇರ್ ಬಾಕ್ಸ್ ಪಡೆಯುತ್ತದೆ. ಹೊಸ  ವ್ಯಾಗನ್ R ಅನ್ನು CNG ವೇರಿಯೆಂಟ್ ನಲ್ಲಿ 1.0- ಲೀಟರ್ ಆವೃತ್ತಿಯಲ್ಲಿ ಕೊಡಲಾಗುತ್ತಿದೆ. 

ಮಾರುತಿ ವ್ಯಾಗನ್ R ಸುರಕ್ಷತೆ ಫೀಚರ್ ಗಳು: ಇದು ಸ್ಟ್ಯಾಂಡರ್ಡ್ ಫೀಚರ್ ಗಳಾದ ಡ್ರೈವರ್ ಏರ್ಬ್ಯಾಗ್, ABS ಜೊತೆಗೆ  EBD, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಸಿಸ್ಟಮ್, ಹಾಗು ರೇರ್ ಪಾರ್ಕಿಂಗ್ ಸೆನ್ಸರ್ ಗಳನ್ನು ಪಡೆಯುತ್ತದೆ. ಕೋ ಪ್ಯಾಸೆಂಜರ್ ಏರ್ಬ್ಯಾಗ್ ಜೊತೆಗೆ ಫ್ರಂಟ್ ಸೀಟ್ ಬೆಲ್ಟ್ ಗಳು ಹಾಗು ಪ್ರಿ ಟೆಂಷನರ್ ಗಳು ಹಾಗು ಲೋಡ್ ಲಿಮಿಟರ್ ಗಳನ್ನು ಟಾಪ್ ಸ್ಪೆಕ್ Z  ವೇರಿಯೆಂಟ್ ಅಲ್ಲಿ ಹಾಗು ಆಯ್ಕೆಯಾಗಿ L ಹಾಗು  V ವೇರಿಯೆಂಟ್ ಗಳಲ್ಲಿ ಕೊಡಲಾಗುತ್ತಿದೆ. 

ಮಾರುತಿ ವ್ಯಾಗನ್ R ಫೀಚರ್ ಗಳು: ಹೊಸ ವ್ಯಾಗನ್ R ನಲ್ಲಿ ಫೀಚರ್ ಗಳಾದ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ,ಮಾನ್ಯುಯಲ್  AC, ಎಲ್ಲ ನಾಲ್ಕು ಪವರ್ ವಿಂಡೋ ಗಳು, ವಿದ್ಯುತ್ ಅಳವಡಿಕೆಯ ಹಾಗು ಮಡಚಬಹುದಾದ ORVM ಫೀಚರ್ ಗಳನ್ನು ಕೊಡಲಾಗುತ್ತಿದೆ. ಹೆಚ್ಚುವರಿಯಾಗಿ ಮಾರುತಿ ಹ್ಯಾಚ್ಬ್ಯಾಕ್ ನಲ್ಲಿ ಕೊಡುತ್ತಿದೆ ರೇರ್ ವಾಷರ್ ಹಾಗು ವೈಪರ್ ಜೊತೆಗೆ ಡಿ ಫಾಗರ್,  60:40  ಸ್ಪ್ಲಿಟ್ ರೇರ್ ಸೀಟ್, ಹಾಗು ಫ್ರಂಟ್ ಫಾಗ್ ಲ್ಯಾಂಪ್ ಗಳನ್ನೂ ಕೊಡುತ್ತಿದೆ. 

ಮಾರುತಿ ವ್ಯಾಗನ್ Rಪ್ರತಿಸ್ಪರ್ಧೆ : ಹೊಸ ವ್ಯಾಗನ್ R  ತನ್ನ ಸ್ಪರ್ಧೆಯನ್ನು ಹುಂಡೈ ಸ್ಯಾಂಟ್ರೋ, ಟಾಟಾ ಟಿಯಾಗೋ , ಡಾಟ್ಸನ್ GO, ಹಾಗು ಮಾರುತಿ ಸುಜುಕಿ ಸೆಲೆರಿಯೊ ಗಳೊಂದಿಗೆ ಮಾಡುತ್ತದೆ.

ಮತ್ತಷ್ಟು ಓದು

ಮಾರುತಿ ವ್ಯಾಗನ್ ಆರ್‌ ಬೆಲೆ ಪಟ್ಟಿ (ರೂಪಾಂತರಗಳು)

ಎಲ್‌ಎಕ್ಸೈ998 cc, ಹಸ್ತಚಾಲಿತ, ಪೆಟ್ರೋಲ್, 21.79 ಕೆಎಂಪಿಎಲ್2 months waitingRs.4.93 ಲಕ್ಷ *
ಎಲ್‌ಎಕ್ಸ್‌ಐ ಆಪ್ಟ್998 cc, ಹಸ್ತಚಾಲಿತ, ಪೆಟ್ರೋಲ್, 21.79 ಕೆಎಂಪಿಎಲ್2 months waitingRs.4.99 ಲಕ್ಷ*
ವಿಎಕ್ಸೈ998 cc, ಹಸ್ತಚಾಲಿತ, ಪೆಟ್ರೋಲ್, 21.79 ಕೆಎಂಪಿಎಲ್
ಅಗ್ರ ಮಾರಾಟ
2 months waiting
Rs.5.25 ಲಕ್ಷ*
ವಿಎಕ್ಸ್‌ಐ ಆಪ್ಟ್998 cc, ಹಸ್ತಚಾಲಿತ, ಪೆಟ್ರೋಲ್, 21.79 ಕೆಎಂಪಿಎಲ್2 months waitingRs.5.32 ಲಕ್ಷ*
ವಿಎಕ್ಸ್ಐ 1.21197 cc, ಹಸ್ತಚಾಲಿತ, ಪೆಟ್ರೋಲ್, 20.52 ಕೆಎಂಪಿಎಲ್ 2 months waitingRs.5.61 ಲಕ್ಷ*
ವಿಎಕ್ಸೈ ಆಪ್ಷನ್ 1.21197 cc, ಹಸ್ತಚಾಲಿತ, ಪೆಟ್ರೋಲ್, 20.52 ಕೆಎಂಪಿಎಲ್ 2 months waitingRs.5.68 ಲಕ್ಷ*
ವಿಎಕ್ಸೈ ಎಎಂಟಿ998 cc, ಸ್ವಯಂಚಾಲಿತ, ಪೆಟ್ರೋಲ್, 21.79 ಕೆಎಂಪಿಎಲ್2 months waitingRs.5.75 ಲಕ್ಷ*
ವಿಎಕ್ಸೈ ಎಎಂಟಿ ಆಪ್ಷನ್998 cc, ಸ್ವಯಂಚಾಲಿತ, ಪೆಟ್ರೋಲ್, 21.79 ಕೆಎಂಪಿಎಲ್2 months waitingRs.5.82 ಲಕ್ಷ*
ಝಡ್ಎಕ್ಸ್ಐ 1.21197 cc, ಹಸ್ತಚಾಲಿತ, ಪೆಟ್ರೋಲ್, 20.52 ಕೆಎಂಪಿಎಲ್ 2 months waitingRs.5.95 ಲಕ್ಷ*
ವಿಎಕ್ಸ್ಐ ಎಎಂಟಿ 1.21197 cc, ಸ್ವಯಂಚಾಲಿತ, ಪೆಟ್ರೋಲ್, 20.52 ಕೆಎಂಪಿಎಲ್ 2 months waitingRs.6.11 ಲಕ್ಷ*
ವಿಎಕ್ಸೈ ಎಎಂಟಿ ಆಪ್ಷನ್ 1.21197 cc, ಸ್ವಯಂಚಾಲಿತ, ಪೆಟ್ರೋಲ್, 20.52 ಕೆಎಂಪಿಎಲ್ 2 months waitingRs.6.18 ಲಕ್ಷ*
ಝಡ್ಎಕ್ಸ್ಐ ಎಎಂಟಿ 1.21197 cc, ಸ್ವಯಂಚಾಲಿತ, ಪೆಟ್ರೋಲ್, 20.52 ಕೆಎಂಪಿಎಲ್ 2 months waitingRs.6.45 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ವ್ಯಾಗನ್ ಆರ್‌ ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ಮಾರುತಿ ವ್ಯಾಗನ್ ಆರ್‌ ವಿಮರ್ಶೆ

ಮಾರುತಿ ವ್ಯಾಗನ್ ಆರ್ ಎರಡು ದಶಕಗಳಿಗೂ ಮೇಲ್ಪಟ್ಟು ಪ್ರಾಯೋಗಿಕ ಮತ್ತು ಬಳಕೆಯನ್ನು ಎದುರು ನೋಡುವ ಕೊಳ್ಳುಗರಿಗೆ ಮುಂಚೂಣಿಯ ಆಯ್ಕೆಗಳಲ್ಲಿ ಒಂದೆನಿಸಿದೆ. ಹಿಂದಿನ ತಲೆಮಾರಿನ ಟಾಲ್ ಬಾಯ್ ಬಾಕ್ಸಿ ವಿನ್ಯಾಸ ಕಾರ್ಯ ನಿರ್ವಹಣೆಯ ಯ್ಕೆಯಾಗಿದ್ದು ಅದನ್ನು ಮಾರಾಟದಲ್ಲಿರುವ ಯಾವುದೇ ಹ್ಯಾಚ್ ಬ್ಯಾಕ್ ಗಿಂತ ಹೆಚ್ಚು ಪ್ರಾಯೋಗಿಕವಾಗಿಸಿದೆ. ಆದರೆ ಮಾರುಕಟ್ಟೆಯ ಪ್ರವೃತ್ತಿಗಳು, ಗ್ರಾಹಕರ ಆದ್ಯತೆಗಳು, ಅಲ್ಲದೆ ಸುರಕ್ಷತೆ ಹಾಗೂ ಎಮಿಷನ್ ನಿಯಮಗಳು ಬದಲಾಗುತ್ತಿದ್ದಂತೆ ವ್ಯಾಗನ್ ಆರ್ ಕೂಡಾ ಬದಲಾಗಿದೆ. ಸಹಜವಾಗಿ ಇತ್ತೀಚೆಗೆ ಬಿಡುಗಡೆಯಾದ ಮೂರನೇ ತಲೆಮಾರಿನ ವ್ಯಾಗನ್ ಆರ್ 2019 ಅನ್ನು ಪ್ರಾಯೋಗಿಕತೆಯ ಮೌಲ್ಯಗಳಲ್ಲಿ ನಿರ್ಮಿಸಲಾಗಿದೆಯೇ ಅಥವಾ ಇದು ತನ್ನ ತೀವ್ರ ಪ್ರತಿಸ್ಪರ್ಧಿಗಳ ವಿರುದ್ಧ ಕಠಿಣ ಸರ್ವಾಂಗೀಣ ಸ್ಪರ್ಧೆಗೆ ಬಿದ್ದಿದೆಯೋ ನೋಡೋಣ. 

ಹೊಸ ವಿನ್ಯಾಸ ಕಣ್ಸೆಳೆಯುವಂತೇನೂ ಇಲ್ಲ, ಮಾರುತಿ ಹಿಂದಿನ ಮಾದರಿಗಳಂತೆ ಆಲಸಿಯಾದ ನೋಟವಿಲ್ಲ ಎನ್ನುವುದನ್ನು ದೃಢಪಡಿಸಿದೆ. ಈ ವಿನ್ಯಾಸ ನಿಮ್ಮಲ್ಲಿ ಕ್ರಮೇಣವಾಗಿ ಬೆಳೆಯುತ್ತದೆ. 

ಮೂರನೇ ತಲೆಮಾರಿನ ವ್ಯಾಗನ್ ಆರ್ ನೊಂದಿಗೆ ಮಾರುತಿ ಪ್ರಾಯೋಗಿಕತೆಯನ್ನು ಮತ್ತೆ ಆದ್ಯತೆಯಾಗಿಸಿದೆ. ಈ ಕಾರು ಉತ್ಪಾದಕ ಹೊಸ ವ್ಯಾಗನ್ ಆರ್.ನೊಂದಿಗೆ ಮತ್ತಷ್ಟು ಉನ್ನತಿಗೆ ಕೊಂಡೊಯ್ದಿದೆ. ಹೆಚ್ಚಿಸಿದ ಹೆಜ್ಜೆ ಗುರುತು ವಿಶಾಲ ಕ್ಯಾಬಿನ್ ಮತ್ತು ಸಮಾನ ಬೂಟ್ ನೀಡಿದೆ. ಇದಲ್ಲದೆ ಹೆಚ್ಚು ಶಕ್ತಿಯುತ ಎಂಜಿನ್ ನೊಂದಿಗೆ ಲಭ್ಯವಿದೆ. 

ಹಾಗೆಂದು ಹೊಸ ವ್ಯಾಗನ್ ಆರ್ ಅದರಲ್ಲಿಯೂ ಹಿಂಬದಿಯ ಸೀಟುಗಳ ವಿಚಾರಕ್ಕೆ ಬಂದಾಗ, ಪರಿಪೂರ್ಣವಲ್ಲ. ಆದರೆ ಹಿಂದೆಂದಿಗಿಂತಲೂ ಸನ್ನದ್ಧವಾಗಿದೆ ಮತ್ತು ಅದರ ಪ್ರತಿಸ್ಪರ್ಧಿಗಳಿಗೆ ಸವಾಲೆಸೆಯಲು ಸಿದ್ಧವಾಗಿದ್ದು ಒಂದರ ನಂತರ ಮತ್ತೊಂದು ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ. ಕೊಂಚವಷ್ಟೇ ಬೆಲೆಯ ಹೆಚ್ಚಳ ಇದನ್ನು ಇನ್ನಷ್ಟು ಸಿಹಿಯಾಗಿಸಿದೆ. 

ಎಕ್ಸ್‌ಟೀರಿಯರ್

ಮೂರನೇ ತಲೆಮಾರಿನ ವ್ಯಾಗನ್ ಆರ್ ಅತ್ಯಾಧುನಿಕ ಸುಝುಕಿಯ ಹಾರ್ಟೆಕ್ಟ್ ಮಾಡ್ಯುಲರ್ ಪ್ಲಾಟ್ ಫಾರಂ ಹೊಂದಿದೆ. ಈ ಹೊಸ ಪ್ಲಾಟ್ಫಾರಂ ಇದನ್ನು ಉದ್ದ ಹಾಗೂ ಗಮನಾರ್ಹವಾಗಿ ಅಗಲವಾಗಿಸಿದೆ. ಮತ್ತು ಗಾತ್ರದಲ್ಲಿ ಹೆಚ್ಚಳ ಮೊದಲ ನೋಟಕ್ಕೇ ಗೊತ್ತಾಗುತ್ತದೆ. 

ಮಾರುತಿ ಸುಝುಕಿ ವ್ಯಾಗನ್ ಆರ್. ವಿನ್ಯಾಸದಲ್ಲಿ ಹೆಚ್ಚೇನೂ ಬದಲಾವಣೆಗಳನ್ನು ಮಾಡಿಲ್ಲ. ಹೊಸ ಹ್ಯಾಚ್ ಬ್ಯಾಕ್ ಟಾಲ್ ಬಾಯ್ ಆಗಿ ಮುಂದುವರೆದಿದೆ, ಇದರ ಒಳಬರುವುದು ಹೊರ ಹೋಗುವುದನ್ನು ಸುಲಭಗೊಳಿಸಿರುವುದೇ ಅಲ್ಲದೆ ಕೇಳುವುದಕ್ಕಿಂತ ಹೆಚ್ಚಿನ ಹೆಡ್ ರೂಂ ನೀಡಿದೆ. ಅಲ್ಲದೆ ಹೊಸ ಸ್ಯಾಂಟ್ರೊ ರೀತಿಯಲ್ಲಿ ಅಲ್ಲದೆ ವ್ಯಾಗನ್ ಆರ್ ಈ ಟಾಲ್ ಬಾಯ್ ಮತ್ತಷ್ಟು ಮನ ಒಲಿಸುವಂತೆ ಕಾಣಿಸಿದೆ. ಸ್ಯಾಂಟ್ರೊ ಹೆಸರಿಗೆ ಹೊಸ ತಲೆಮಾರಿನದಾದರೂ ಐ10 ರೀತಿಯಲ್ಲಿ ಬದಲಾಗಿಲ್ಲ. 2019ರ ವ್ಯಾಗನ್ ಆರ್ ಹೊಂದಿರುವ ದೊಡ್ಡ ವಿಂಡೋಗಳು ಕ್ಯಾಬಿನ್ ಗಾಳಿ ಚಲನೆಯನ್ನು ಸ್ಥಿರವಾಗಿಸಿದೆ. ಹೊಸ ವ್ಯಾಗನ್ ಆರ್ ಮೂಲ ವಿನ್ಯಾಸದ ವಿಧಾನ ಮುಂದುವರೆಸಿದೆ ಹಾಗೂ ಬಾಕ್ಸಿನಂತೆ ಮುಂದುವರೆದಿದೆ, ಇದು ಬದಲಾವಣೆಯಾದ ಮಾದರಿಗಿಂತ ಹೆಚ್ಚು ಹೊಸತನದಿಂದ ಕಾಣುತ್ತದೆ. 

ಮಾರುತಿ ವ್ಯಾಗನ್ ಆರ್ ಮುಂಬದಿ ಮುಖವನ್ನು ಸಾಕಷ್ಟು ಚಪ್ಪಟೆಯಾಗಿಸಿ ಅಗಲ ಹೆಚ್ಚಿಸುವ ಅನುಕೂಲ ಪಡೆದಿದೆ. ಸಪಾಟಾದ ರೆಕ್ಟಾಂಗುಲರ್ ಗ್ರಿಲ್ ಕಾರಿನ ನೋಟದ ಅಗಲ ಹೆಚ್ಚಿಸಿದೆ ಮತ್ತು ಆಲೋಚನೆಯುಕ್ತ ಬದಲಾವಣೆಗಳಾದ ಕ್ರೋಮ್ ಗ್ರಿಲ್ ಬೇಸ್ ವೇರಿಯೆಂಟ್ ನಲ್ಲಿ ಕೂಡಾ ಅಷ್ಟೇನೂ ಕೆಟ್ಟದಾಗಿ ಕಾಣುವುದಿಲ್ಲ. ಹೆಡ್ ಲ್ಯಾಂಪ್ಸ್ ಹಿಂದೆಂದಿಗಿಂತ ದಪ್ಪವಾಗಿ ಕಾಣುತ್ತವೆ ಮತ್ತು ತನ್ನ ಪ್ರತಿಸ್ಪರ್ಧಿಗಳಂತೆ ನಿಯಮಿತ ಮಲ್ಟಿ-ರಿಫ್ಲೆಕ್ಟರ್ ಯೂನಿಟ್ಸ್ ನೊಂದಿಗೆ ಸನ್ನದ್ಧವಾಗಿದ್ದು ಟಾಟಾ ಟಿಯಾಗೊ ಅದನ್ನು ಹೊರತಾಗಿದೆ.ಹೊಸ ಟಾಪ್-ಸ್ಪೆಕ್ ವೇರಿಯೆಂಟ್ ಝಡ್ಎಕ್ಸ್ಐ ಹಳೆಯ ಮಾಡೆಲ್ ಗಳಂತೆ ವಿಎಕ್ಸ್ಐ/ಸ್ಟಿಂಗ್ ರೇ ವೇರಿಯೆಂಟ್ ನಂತೆ ಡ್ಯುಯಲ್-ಬ್ಯಾರಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್ ಹೊಂದಿಲ್ಲ. ಮತ್ತು ವ್ಯಾಗನ್ ಆರ್ ಇನ್ನೆಂದಿಗೂ ಮಾರುತಿ ಸುಝುಕಿಯ `ಬ್ಲೂ ಐಯ್ಡ್ ಬಾಯ್' ಆಗಿಲ್ಲ ಎನ್ನುವುದಕ್ಕೆ ಅದು ನೀಲಿ ಬಣ್ಣದ ಪಾರ್ಕಿಂಗ್ ಲ್ಯಾಂಪ್ಸ್ ನಿವಾರಿಸಿರುವುದೇ ಸಾಕ್ಷಿಯಾಗಿದೆ. 

ಒಟ್ಟಾರೆ ವ್ಯಾಗನ್ ಆರ್ ಹಿಂದೆಂದಿಗಿಂತಲೂ ಹೆಚ್ಚು ಕಾರ್ಯ ನಿರ್ವಹಣೆಯದಾಗಿದೆ, ಟಾಟಾ ಟಿಯಾಗೊ ಹೆಚ್ಚು ಸಾರ್ವತ್ರಿಕ ಮೆಚ್ಚುಗೆಯ ವಿನ್ಯಾಸ ಹೊಂದಿದೆ. ಒಟ್ಟಾರೆ ನಾವು ಸ್ಟೈಲಿಂಗ್ ಅನ್ನು ಚಮತ್ಕಾರಿ, ಆಕರ್ಷಣೆ ಇಲ್ಲದ್ದು ಎನ್ನಬಹುದು. 

ವ್ಯಾಗನ್ ಆರ್ ಹಿಂದಿನ ತಲೆಮಾರುಗಳು ನೋಡಲು ಸಾದಾ ಆಗಿರುತ್ತಿದ್ದವು. ಮೂರನೇ ತಲೆಮಾರಿನ ಮಾಡೆಲ್ ವ್ಹೀಲ್ ಆರ್ಚ್ ಗಳಲ್ಲಿ ಪ್ರಮುಖವಾದ ಗೆರೆಗಳಿರುವುದರಿಂದ ಅಸಂಗತವಾಗಿ ಕಾಣುತ್ತದೆ. ಹೊಸ ಹ್ಯಾಚ್ ಬ್ಯಾಕ್ ಸೂಕ್ಷ್ಮ ಆದರೆ ಗಮನಿಸಬಲ್ಲ ವೇಸ್ಟ್ ಲೈನ್ ಹೊಂದಿದೆ. ಈ ಸುಧಾರಣೆಗಳು ಅದನ್ನು ಹಿಂದಿನ ಮಾಡೆಲ್ ಗಿಂತ ಕಡಿಮೆ ಸ್ಲಾಬ್-ಸೈಡೆಡ್ ಆಗಿ ಕಾಣುವಂತೆ ಮಾಡಿದೆ ಮತ್ತು ಬಾಹ್ಯವಿನ್ಯಾಸವನ್ನು ಉನ್ನತಗೊಳಿಸಲು ನೆರವಾಗಿದೆ. ಹೊಸ ಟ್ರೆಂಡ್ ನೊಂದಿಗೆ ಮುನ್ನಡೆಯುವ ಮಾರುತಿ ಸಿ-ಪಿಲ್ಲರ್ ಮೇಲೆ ಕಪ್ಪು ಪ್ಲಾಸ್ಟಿಕ್ ಅಪ್ಲಿಕ್ ಅಳವಡಿಸಿದ್ದು ಇದು ಫ್ಲೋಟಿಂಗ್ ರೂಫ್ ಎಫೆಕ್ಟ್ ಸೃಷ್ಟಿಸಿದೆ. ಆಟಂ ಆರೇಂಜ್ ನಂತಹ ಟ್ರೆಂಡಿ ಹೊಸ ಬಣ್ಣಗಳ ಆಯ್ಕೆಯೂ ಲಭ್ಯವಿದೆ! ಇತರೆ ಆಯ್ಕೆಗಳಲ್ಲಿ ಕ್ಲಾಸಿ ಮ್ಯಾಗ್ಮಾ ಗ್ರೇ, ಜನಪ್ರಿಯ ಸಿಲ್ಕಿ ಸಿಲ್ವರ್ ಮತ್ತು ಸುಪೀರಿಯರ್ ವ್ಹೈಟ್ ನೊಂದಿಗೆ ನಟ್ ಮೆಗ್ ಬ್ರೌನ್ ಮತ್ತು ಬ್ರೈಟ್ ಪೂಲ್ ಸೈಡ್ ಬ್ಲೂ ಒಳಗೊಂಡಿವೆ. 

ಹೊಸ ಟೈರ್ ಗಳು ಅಗಲವಾಗಿದ್ದು ದಪ್ಪ ಸೈಡ್ ವಾಲ್ ಗಳನ್ನು ಹೊಂದಿದರೂ ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಹೊಂದಿವೆ, ಟಾಪ್-ಸ್ಪೆಕ್ ವೇರಿಯೆಂಟ್ ಕೂಡಾ ಸ್ಯಾಂಟ್ರೊ ರೀತಿಯಲ್ಲಿ ಅಲಾಯ್ ವ್ಹೀಲ್ಸ್ ತಪ್ಪಿಸಿಕೊಂಡಿದೆ. ಆದರೆ ಐಚ್ಛಿಕ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ಸ್ ಆಯ್ಕೆ ಇದ್ದು ಪ್ರತಿ ಯೂನಿಟ್ ಬೆಲೆ ರೂ.4,900 ಇದೆ. ಐಚ್ಛಿಕವಾದ ಆಲ್-ರೌಂಡ್ ಬಾಡಿ ಕ್ಲಾಡಿಂಗ್ ಕೂಡಾ ಲಭ್ಯವಿದೆ. ಇದು ಖಂಡಿತವಾಗಿಯೂ ಹೊಸ ವ್ಯಾಗನ್ ಆರ್ ಗೆ ವಿಶಿಷ್ಟ ಲಕ್ಷಣ ನೀಡುತ್ತದೆ. 

ರಿಯರ್ ಪ್ರೊಫೈಲ್ ಹಿಂದಿನಂತೆಯೇ ಸಪಾಟಾಗಿದೆ. ಆದರೆ ರಿಯರ್ ವಿಂಡ್ ಸ್ಕ್ರೀನ್ ಹಿಂದಿನ ಮಾಡೆಲ್ ಗಿಂತ ಕೊಂಚ ಚಾಚಿಕೊಂಡಿದೆ. ಲೈಸೆನ್ಸ್ ಪ್ಲೇಟ್ ಬೂಟ್ ಲಿಡ್ ಮೇಲೆ ಸ್ಥಳ ಪಡೆದುಕೊಂಡಿದೆ, ಟೈಲ್ ಲ್ಯಾಂಪ್ಸ್ ವೋಲ್ವೋಗಳಿಂದ ಸ್ಫೂರ್ತಿ ಪಡೆದಂತೆ ಕಾಣುತ್ತವೆ. 

ಹಳೆಯ ಮಾಡೆಲ್ ನಂತೆ ಅಲ್ಲದೆ ಹೊಸ ವ್ಯಾಗನ್ ಆರ್ ಹೊಂದಿರುವ ರಿಯರ್ ಬಂಪರ್ ಫಾಗ್ ಲ್ಯಾಂಪ್ ಹೊಂದಿಲ್ಲ. ಬಹಳಷ್ಟು ಮಾರುತಿಯ ಹೊಸ ಕಾರುಗಳಂತೆ, ರಿಯರ್ ನಲ್ಲಿ ಬ್ಯಾಡ್ಜ್ ಗಳಿಲ್ಲ. ಸುಝುಕಿ ಲಾಂಛನವಿದೆ. 

Exterior Comparison

Hyundai Santro
Maruti Wagon R
Datsun GO
Length (mm)3610 mm3655 mm3788mm
Width (mm)1645 mm1620 mm1636mm
Height (mm)1560 mm1675 mm1507mm
Ground Clearance (mm)
Wheel Base (mm)2400 mm2435 mm2450mm
Kerb Weight (kg)-805-825kg875kg
 

Boot Space Comparison

Datsun GO
Hyundai Santro
Maruti Wagon R
Volume265235 litre341 Litres

 

ಇಂಟೀರಿಯರ್

ಅದರ ಟಾಲ್ ಬಾಯ್ ವಿನ್ಯಾಸದಿಂದ ಹೊಸ ವ್ಯಾಗನ್ ಆರ್ ಒಳಕ್ಕೆ ನೇರ ನಡೆದು ಪ್ರವೇಶಿಸಬಹುದು. ಇದು ಹಿರಿಯ ನಾಗರಿಕರಿಗೆ ತುಂಬಾ ಅನುಕೂಲಕರವಾಗಿದೆ. ಮತ್ತಷ್ಟು ಅನುಕೂಲ ಬಾಗಿಲುಗಳದ್ದು, ಅದು ಬಹುತೇಕ ತೊಂಬ್ಬತು ಡಿಗ್ರಿಗಳಲ್ಲಿ ತೆರೆಯುತ್ತದೆ. ಆದ್ದರಿಂದ ವ್ಯಾಗನ್ ಆರ್ ಒಳ ಪ್ರವೇಶ ಹಾಗೂ ಹೊರಬರುವುದು ಸದಾ ಸುಲಭ. 

ವ್ಯಾಗನ್ ಆರ್ ಡ್ಯಾಶ್ ಬೋರ್ಡ್ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ ಮತ್ತು ಡ್ಯುಯಲ್-ಟೋನ್ ಬ್ಲಾಕ್ ಮತ್ತು ಬೀಜ್ ಲೇಔಟ್ ಹೊಂದಿದ್ದು ಮಸುಕಾದ ಸಿಲ್ವರ್ ಅಕ್ಸೆಂಟ್ಸ್ ಹೊಂದಿದೆ. ಸ್ಟೀರಿಂಗ್ ವ್ಹೀಲ್ ಅನ್ನು ನೇರವಾಗಿ ಇಗ್ನಿಸ್ ನಿಂದ ಎತ್ತಿಕೊಳ್ಳಲಾಗಿದೆ, ಆದರೆ ಇದು ಪ್ರೀಮಿಯಂ ಹ್ಯಾಚ್ ಬ್ಯಾಕ್ ನಂತರ ಲೆದರ್ ರ್ಯಾಪ್ ಒಳಗೊಂಡಿಲ್ಲ. ಸೆಂಟರ್ ಕನ್ಸೋಲ್ 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂನಿಂದ ಪ್ರಭಾವಿತವಾಗಿದ್ದು ಇದು ಭಾರತದಲ್ಲಿ ವ್ಯಾಗನ್ ಆರ್.ಗೆ ಮೊದಲನೆಯದಾಗಿದೆ. ಇದು ಕನ್ಸೋಲ್ ಅನ್ನು ಕೊಂಚ ವಿಸ್ತರಿಸಿದೆ ಮತ್ತು ಲಂಬವಾಗಿ ಜೋಡಿಸಿದ ಸೆಂಟರ್ ಎಸಿ ವೆಂಟ್ ಗಳಿಂದ ಸುತ್ತುವರಿಯಲ್ಪಟ್ಟಿದೆ, ಅದರ ಕೆಳಗೆ ಮ್ಯಾನ್ಯುಯಲ್ ಎಸಿಯ ಕಂಟ್ರೋಲ್ ಗಳನ್ನು ಕಾಣಬಹುದು. 

ಸೀಟುಗಳು ಗ್ರೇಯಿಷ್-ಬೀಜ್ ಛಾಯೆಯಲ್ಲಿ ಕಂದು ಹೈಲೈಟರ್ ಅಪ್ ಹೋಲ್ಸ್ ಟ್ರಿ ಹೊಂದಿದೆ. ಲಘು ಅಪ್ ಹೋಲ್ಸ್ ಟ್ರಿ, ಡ್ಯುಯಲ್-ಟೋನ್ ಥೀಮ್ ಮತ್ತು ಸಾಕಷ್ಟು ಹೆಡ್ ರೂಮ್ ನಿಂದ ಕ್ಯಾಬಿನ್ ಆಕರ್ಷಕವಾಗಿ ಕಾಣುತ್ತದೆ. ಮುಂಬದಿಯ ಸೀಟುಗಳು ತಕ್ಕಷ್ಟು ಸೈಡ್ ಬೋಲ್ಸ್ ಟರ್ ಗಳಿಂದ ಕೂಡಿವೆ. ಹಿಂದಿನ ತಲೆಮಾರಿನ ಮಾಡೆಲ್ ಗಳಲ್ಲಿ ಕಂಡಂತೆ ಸಹ-ಚಾಲಕರ ಸೀಟಿನ ಕೆಳಗೆ ಸ್ಟೋರೇಜ್ ಕಂಪಾರ್ಟ್ ಮೆಂಟ್ ಇದೆ. 

ಹಿಂಬದಿಯ ಸೀಟು ಸಾಮಾನ್ಯ ಗಾತ್ರದ ಪ್ರಯಾಣಿಕರಿಗೂ ಕೆಳಭಾಗದ ಬೆಂಬಲ ಹೊಂದಿಲ್ಲ. ರಿಯರ್ ಲೆಗ್ ರೂಂ ತಕ್ಕಷ್ಟಿದೆ ಮತ್ತು ಈ ವಿಭಾಗದಲ್ಲಿ ಅತ್ಯುತ್ತಮವಾಗಿದೆ. ವಿಸ್ತರಿಸಿದ ಅಗಲ ಇದಕ್ಕೆ ಕಾರಣ, ಮೂರನೇ ತಲೆಮಾರಿನ ವ್ಯಾಗನ್ ಆರ್.ನಲ್ಲಿ ಹಿಂಬದಿಯ ಮಧ್ಯದ ಪ್ರಯಾಣಿಕರು ಹಿಂದಿನ ಮಾಡೆಲ್ ಗಿಂತ ಸಾಕಷ್ಟು ಸ್ಥಳಾವಕಾಶದ ಭಾವನೆ ಹೊಂದುತ್ತಾರೆ. ರಿಯರ್ ಫ್ಲೋರ್ ಕೂಡಾ ಸಪಾಟಾಗಿದ್ದು, ಮಧ್ಯದಲ್ಲಿ ಕೊಂಚ ಉಬ್ಬಿದೆ. 

341 ಲೀಟರ್ ಬೂಟ್ ಸ್ಪೇಸ್ ಇರುವ ಹೊಸ ವ್ಯಾಗನ್ ಆರ್ ತನ್ನ ಪ್ರತಿಸ್ಪರ್ಧಿಗಳಿಗಿಂತ ಮತ್ತು ಉನ್ನತ ವರ್ಗದ ಹಲವು ಕಾರುಗಳಿಗಿಂತ ಗಮನಾರ್ಹವಾಗಿ ಹೆಚ್ಚು ಸ್ಥಳಾವಕಾಶ ಹೊಂದಿದೆ. ಇದು ವಿತಾರಾ ಬ್ರೆಝಾ(328 ಲೀಟರ್) ಮತ್ತು ಬಲೆನೊ(339 ಲೀಟರ್)ಗಿಂತ ಹೆಚ್ಚು ಬೂಟ್ ಹೊಂದಿದೆ. ಇದು ಹೊಸ ವ್ಯಾಗನ್ ಆರ್ ಅನ್ನು 340 ಲೀಟರ್ ಗಳ ಬೂಟ್ ಸ್ಪೇಸ್ ಹೊಂದಿದ ಕೆಲವೇ ಸಬ್-4ಮೀಟರ್ ಕಾರುಗಳಲ್ಲಿ ಒಂದಾಗಿಸಿದೆ. ಈ ಪಟ್ಟಿಯಲ್ಲಿ ಇರುವ ಇತರೆ ಕಾರುಗಳು ನೆಕ್ಸಾನ್(350 ಲೀಟರ್), ಹೊಂಡಾ ಜಾಝ್(354-ಲೀಟರ್) ಮತ್ತು ಡಬ್ಲ್ಯೂಆರ್-ವಿ(363-ಲೀಟರ್). ಅಗಲ ಮತ್ತು ಸ್ಥಳಾವಕಾಶದ ಬೂಟ್ ಹಾಗೂ 60:40 ಸ್ಪ್ಲಿಟ್-ಫೋಲ್ಡಿಂಗ್ ರಿಯರ್ ಸೀಟುಗಳ ಹೊಸ ವ್ಯಾಗನ್ಆರ್ ನಿಮ್ಮ ಬಂಧುಮಿತ್ರರನ್ನು ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. 

ವ್ಯಾಗನ್ ಆರ್ ಒಳಾಂಗಣದಲ್ಲಿ ದೋಷ ಕಂಡುಕೊಳ್ಳುವುದು ಕಷ್ಟ, ಆದರೆ ಕೆಲ ದಕ್ಷತಾಶಾಸ್ತ್ರೀಯ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಮೊದಲಿಗೆ ವ್ಯಾಗನ್ ಆರ್ ನಲ್ಲಿರುವ ಯಾವುದೇ ಹೆಡ್ ರೆಸ್ಟ್ ಗಳು ಹೊಂದಿಸುವಂತಿಲ್ಲ. ಮಾರುತಿ ದೂರ ಪ್ರಯಾಣವನ್ನು ಅನುಕೂಲಕರವಾಗಿಸಲು ಅಡ್ಜಸ್ಟಬಲ್ ಹೆಡ್ ರೆಸ್ಟ್ ಗಳನ್ನು ನೀಡಬಹುದಾಗಿತ್ತು. ಪ್ರಸ್ತುತ ಅವು ಆರು ಅಡಿಗಿಂತ ಕಡಿಮೆ ಉದ್ದದ ವಯಸ್ಕರ ಕುತ್ತಿಗೆಗೂ ಸೂಕ್ತ ರೀತಿಯಲ್ಲಿ ಬೆಂಬಲಿಸುವುದೇ ಇಲ್ಲ. 

ಸ್ಟೀರಿಂಗ್ ವ್ಹೀಲ್ ಅನ್ನು ಎತ್ತರಕ್ಕೆ ಹೊಂದಿಸಬಹುದು, ದುರಾದೃಷ್ಟವಶಾತ್ ಮಾರುತಿ ಚಾಲಕರ ಸೀಟಿನ ಎತ್ತರ ಹೊಂದಿಸುವಿಕೆಯನ್ನು ತೆಗೆದು ಹಾಕಿದೆ. ಇದನ್ನು ಟಾಪ್-ಸ್ಪೆಕ್ ಝಡ್ಎಕ್ಸ್ಐ ವೇರಿಯೆಂಟ್ ನಲ್ಲಿ ನೀಡಬಹುದಾಗಿತ್ತು. ಹ್ಯುಂಡೈ ಸ್ಯಾಂಟ್ರೊ ಎತ್ತರ ಹೊಂದಿಸಬಲ್ಲ ಚಾಲಕರ ಸೀಟಿನ ಆಯ್ಕೆಯನ್ನು ತಪ್ಪಿಸಿಕೊಂಡಿದೆ, ಆದರೆ ಟಾಟಾ ಟಿಯಾಗೊದಲ್ಲಿ ಅಲ್ಲ. ಕ್ಯಾಬಿನ್ ನ ಹಿಂಬದಿಯ ಅರ್ಧದಲ್ಲಿ ಹಿಂಬದಿಯ ಹ್ಯಾಂಡ್ ರೆಸ್ಟ್ ಕೊಂಚ ಕೆಳಕ್ಕಿವೆ, ಇದರಿಂದ ರಿಯರ್ ಪವರ್ ವಿಂಡೋಸ್ ನ ಕಂಟ್ರೋಲ್ ಗಳು ವಯಸ್ಕರಿಗೆ ತಲುಪುವುದು ಕಷ್ಟ. 

ಈ ಸಣ್ಣ ಪುಟ್ಟ ಅಡೆತಡೆ ಪಕ್ಕಕ್ಕಿಟ್ಟರೆ ಕ್ಯಾಬಿನ್ ಒಳಗಡೆ ಫಿಟ್ ಅಂಡ್ ಫಿನಿಷ್ ಎರಡನೆಯ ತಲೆಮಾರಿನ ಮಾಡೆಲ್ ಗಿಂತ ಒಂದು ಹೆಜ್ಜೆ ಮುಂದಿದೆ. ಮತ್ತು ಹೊಸ ವ್ಯಾಗನ್ ಆರ್ ತನ್ನ ಪ್ರಾಯೋಗಿಕತೆಯನ್ನು ಕೂಡಾ ಉಳಿಸಿಕೊಂಡಿದೆ. 

ಇನ್ಫೊಟೈನ್ ಮೆಂಟ್ ಸಿಸ್ಟಂ

ಮೂರನೇ ತಲೆಮಾರಿನ ವ್ಯಾಗನ್ ಆರ್ 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಹೊಂದಿದ್ದು ಅದನ್ನು ಮಾರುತಿ ಸ್ಮಾರ್ಟ್ ಪ್ಲೇ ಸ್ಟುಡಿಯೊ ಎಂದು ಕರೆಯಲು ಬಯಸುತ್ತದೆ. ಇದು ಆಂಡ್ರಾಯಿಡ್ ಆಟೊ ಮತ್ತು ಆಪಲ್ ಕಾರ್ ಪ್ಲೇ ಹೊಂದಿದ್ದು ನಿಮ್ಮ ಸ್ಮಾರ್ಟ್ ಫೋನ್ ಗೆ ವಿವಿಧ ಕಾರ್ಯಗಳಿಗೆ ಬೆಂಬಲಿಸಲು ಆಪ್ ಕೂಡಾ ಹೊಂದಿದೆ, ಅದರಲ್ಲಿ ಹರ್ಮನ್ ನಿಂದ ಎ.ಎಚ್.ಎ ರೇಡಿಯೊ(ಎಎಚ್ಎ ರೇಡಿಯೊ ಅಂತರ್ಜಾಲದಿಂದ ನಿಮ್ಮ ಅಚ್ಚುಮೆಚ್ಚಿನ ಕಂಟೆಂಟ್ ಅನ್ನು ವೈಯಕ್ತಿಕಗೊಳಿಸುತ್ತದೆ, ಲೈವ್ ಮತ್ತು ಆನ್-ಡಿಮ್ಯಾಂಡ್ ರೇಡಿಯೊ ಸ್ಟೇಷನ್ ಆಗಿ ಸಂಘಟಿಸುತ್ತದೆ), ಮ್ಯಾಪ್ ಮೈ ಇಂಡಿಯಾ ನ್ಯಾವಿಗೇಷನ್ ಮತ್ತಿತರೆ ಒಳಗೊಂಡಿದೆ. 

ಇದು ಕೆಪ್ಯಾಸಿಟೇಟಿವ್ ಟಚ್ ಸ್ಕ್ರೀನ್(ಸ್ಮಾರ್ಟ್ ಫೋನ್ ರೀತಿ) ಮತ್ತು ಸರಳ ಟೈಲ್-ರೀತಿಯ ಲೇಔಟ್ ಹೊಂದಿದೆ. ಇದು ನೇರ ಸೂರ್ಯನ ಬೆಳಕಿನಲ್ಲಿ ಕಾಣಿಸುತ್ತದೆಯಾದರೂ ಇದು ಕೊಂಚ ಹೆಚ್ಚು ಪ್ರಕಾಶ ಹೊಂದಿರುತ್ತದೆ. ಇದನ್ನು ಸ್ವಿಫ್ಟ್ ರೀತಿಯಲ್ಲಿ ಚಾಲಕನ ಕಡೆ ಕೊಂಚ ತಿರುಗಿಸಬಹುದಾಗಿತ್ತು. ಈ ಹೊಸ ಹರ್ಮನ್ ನಿಂದ ಬಂದಿರುವ ಯೂನಿಟ್ ಹಿಂದಿನ ಹೊಸ ಮಾರುತಿ ಕಾರುಗಳಲ್ಲಿನ ಬಾಷ್-ಸೋರ್ಸ್ ಡ್ ಸಿಸ್ಟಂ ಬದಲಾಯಿಸಿದೆ. 

ಕಾರ್ಯಕ್ಷಮತೆ

ಮೂರನೇ ತಲೆಮಾರಿನ ವ್ಯಾಗನ್ ಆರ್, ಪೆಟ್ರೋಲ್ ಎಂಜಿನ್ ಗಳಿಂದ ಮ್ಯಾನ್ಯುಯಲ್ ಮತ್ತು ಎಎಂಟಿ ಆಯ್ಕೆಗಳಿಂದ ಸನ್ನದ್ಧವಾಗಿದೆ. ಇದು ಪ್ರಸ್ತುತದ 1.0-ಲೀಟರ್, 3-ಸಿಲಿಂಡರ್ ಎಂಜಿನ್ ಮುಂದುವರೆಸಿದ್ದು ಹೊಸ, ಹೆಚ್ಚು ಶಕ್ತಿಯುತ 1.2-ಲೀಟರ್, 4-ಸಿಲಿಂಡರ್ ಮೋಟಾರ್ ಹೊಂದಿದೆ. ಇದನ್ನು ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ನೊಂದಿಗೆ ಸ್ಯಾಂಪಲ್ ನೋಡಿದೆವು. 1.2-ಲೀಟರ್ ಎಂಜಿನ್ ಸ್ವಿಫ್ಟ್ ಮತ್ತು ಬಲೆನೊ ರೀತಿಯ ದೊಡ್ಡ ಹ್ಯಾಚ್  ಬ್ಯಾಕ್ ಗಳ ಅದೇ ಶಕ್ತಿ ಹೊಂದಿದೆ. 

ಹಳೆಯ ಮಾದರಿಯ 1.0-ಲೀಟರ್ ಎಂಜಿನ್ ಗೆ ಹೋಲಿಸಿದರೆ 1.2-ಲೀಟರ್ ಎಂಜಿನ್ ಆರೋಗ್ಯಕರ 23ಎನ್ಎಂ ಒಟ್ಟಾರೆ ಟಾರ್ಕ್ ನಲ್ಲಿ ಉತ್ತೇಜನ ಪಡೆದಿದೆ, ಪವರ್ ಔಟ್ ಪುಟ್ 15ಪಿಎಸ್ ನಷ್ಟು ಹೆಚ್ಚಾಗಿದೆ. ಕೆರ್ಬ್ ವೈಟ್ 50ಕೆಜಿಯಷ್ಟು ಕಡಿಮೆ ಮಾಡಿದ್ದು 1.2-ಲೀಟರ್ ಎಂಜಿನ್ ಹೊಂದಿದ ಹೊಸ ವ್ಯಾಗನ್ ಆರ್ ಹಿಂದಿನ ಮಾದರಿಗೆ ಹೋಲಿಸಿದರೆ ಕೊಂಚ ನಿಧಾನ ಎಂಬ ಭಾವನೆ ಮೂಡುತ್ತದೆ. 1.2-ಲೀಟರ್ ಎಂಜಿನ್ ಮೂರನೇ ಗೇರ್ ನಲ್ಲಿ 15-20ಕೆಎಂಪಿಎಚ್ ವೇಗವನ್ನು ಡೌನ್ ಶಿಫ್ಟ್ ಕೇಳದೆ ಪಡೆಯುತ್ತದೆ. ಆಶ್ಚರ್ಯಕರವಾಗಿ ಅದೇ ಪವರ್ ಟ್ರೈನ್ ಹೊಂದಿದ ಸೋದರ ಕಾರುಗಳಿಗಿಂತ ಎಂಜಿನ್ ಕ್ಯಾಬಿನ್ ಒಳಗಡೆಯಿಂದ ಗಮನಾರ್ಹವಾಗಿ ಕೇಳಿಸುತ್ತದೆ. ಅದಕ್ಕೆ ತಕ್ಕಷ್ಟು ಇನ್ಸುಲೇಷನ್ ಕೊರತೆ ಇರಬಹುದು. 

ಚಾಲನೆ ಮತ್ತು ನಿರ್ವಹಣೆ

ಮೂರನೇ ತಲೆಮಾರಿನ ವ್ಯಾಗನ್ ಆರ್ ಚಾಲನೆಯ ಗುಣಮಟ್ಟ ಎರಡನೇ ತಲೆಮಾರಿನ ಮಾದರಿಗಿಂತ ಅಪಾರವಾಗಿ ಸುಧಾರಿಸಿದೆ. ಹೊಸ ಬಿಗಿಯಾದ ಚಾಸಿಗಳು, ಅಗಲ ಟೈರ್ ಗಳು ಮೃದು ಸಸ್ಪೆನ್ಷನ್ ಸೆಟಪ್ ನಲ್ಲಿ ಕಡಿಮೆ ಇದೆ. ಹಿಂದಿನಂತಲ್ಲದೆ ಉಬ್ಬು ತಗ್ಗುಗಳು ಟಾಲ್ ಬಾಯ್ ಗೆ ಅಷ್ಟು ಬಾಧಿಸುವುದಿಲ್ಲ. ಫೋರ್-ಪಾಟ್ ಎಂಜಿನ್  3- ಸಿಲಿಂಡರ್ ಎಂಜಿನ್ ಹೋಲಿಕೆಯಲ್ಲಿ ಹಳೆಯ ಮಾದರಿ ಕಡಿಮೆ ವೈಬ್ರೇಷನ್ ಉತ್ಪಾದಿಸುತ್ತದೆ. 

ನಗರದ ವೇಗಗಳಲ್ಲಿ ಸ್ಟೀರಿಂಗ್ ಕೊಂಚ ಭಾರ ಎನಿಸುತ್ತದೆ ಮತ್ತು ಕೊಂಚ ಅಸ್ಪಷ್ಟವೂ ಇದೆ. ಕೊಂಚ ಫೀಲ್ ಆದರೆ ನಾವು ಸ್ಟೀರಿಂಗ್ ಅನ್ನು ಆದ್ಯತೆಗೊಳಿಸಬಹುದಾಗಿತ್ತು. ಮತ್ತು ಮುಂಬದಿಯ ವ್ಹೀಲ್ ಭಾಗಶಃ ಮುಚ್ಚಿರುವಾಗ ಹಿಂಬದಿಗೆ ಕ್ಲಾಡಿಂಗ್ ಪಡೆಯುವುದಿಲ್ಲ. ಆದ್ದರಿಂದ ಚಕ್ರಕ್ಕೆ ತಗುಲುವ ಕಸ ಕಡ್ಡಿ ಕ್ಯಾಬಿನ್ ಒಳಗಡೆ ಕೇಳುತ್ತದೆ. ಇವುಗಳಿಗೆ ಸಾಕಷ್ಟು ಮುಚ್ಚುವಿಕೆ ಇದ್ದರೆ ಒಟ್ಟಾರೆ ಚಾಲನೆಯನ್ನು ಮತ್ತಷ್ಟು ಉತ್ತಮಗೊಳಿಸುತ್ತಿತ್ತು. ಆದರೆ ಈ ಕೆಲ ಸಣ್ಣ ಅಂಶಗಳು ವ್ಯಾಗನ್ ಆರ್ ಸ್ಪರ್ಧಿಸುತ್ತಿರುವ ವಿಭಾಗದಲ್ಲಿ ಡೀಲ್ ಬ್ರೇಕರ್ ಗಳೇನೂ ಅಲ್ಲ. 

ವ್ಯಾಗನ್ ಆರ್ ಸೂಕ್ಷ್ಮ ತಿರುವುದನ್ನು ಇಷ್ಟಪಡುವುದಿಲ್ಲ. ಅದಕ್ಕೆ ಅದರ ಎತ್ತರ ಮತ್ತು ಮೃದು ಸಸ್ಪೆನ್ಷನ್ ಸೆಟಪ್ ಕಾರಣ. ಈ ವಲಯದಲ್ಲಿ ಇತರೆ ಕಾರುಗಳಂತೆ ಇದನ್ನು ಸೌಮ್ಯವಾಗಿ ಚಾಲನೆ ಮಾಡಲು ಆದ್ಯತೆ ನೀಡುತ್ತದೆ. 

ನಗರದ ಮಿತಿಗಳಲ್ಲಿ ಚಾಲಿಸಬಹುದಾದ ವ್ಯಾಗನ್ ಆರ್ ನಿಮ್ಮನ್ನು ಪ್ರಬಾವಿಸುತ್ತದೆ, ಅದರಲ್ಲೂ ಹೊಸ ಪೆಪ್ಪಿ 1.2-ಲೀಟರ್ ಮೋಟರ್ ಮತ್ತು ಪ್ಲಷ್ ರೈಡ್ ಗುಣಮಟ್ಟದಿಂದ ಸೆಳೆಯುತ್ತದೆ. ವ್ಯಾಗನ್ ಆರ್ ಹೊಂದಿದ ಸಣ್ಣ ತಿರುವಿನ ತ್ರಿಜ್ಯ ನಗರದ ವೇಗದ ಟ್ರಾಫಿಕ್ ಸುಲಭಗೊಳಿಸುತ್ತದೆ ಮತ್ತು ಬಿಗಿಯಾದ ಸ್ಥಳಗಳಲ್ಲಿ ಪಾರ್ಕಿಂಗ್ ಸುಲಭಗೊಳಿಸುತ್ತದೆ. 

Performance Comparison (Petrol)

Maruti ವೇಗನ್ RDatsun GOHyundai Santro
Power81.80bhp@6000rpm67.05bhp@5000rpm68bhp@5500rpm
Torque (Nm)113Nm@4200rpm104Nm@4000rpm99Nm@4500 rpm
Engine ಡಿಸ್‌ಪ್ಲೇಸ್‌ಮೆಂಟ್ (cc)1197 cc1198 cc1086 cc
TransmissionManualManualManual
Top Speed (kmph)
0-100 ವೇಗವರ್ಧನೆ (sec)18.6 Seconds
Kerb Weight (kg)830-845kg859kg-
Fuel Efficiency (ARAI)20.52kmpl19.02kmpl20.3kmpl
Power Weight Ratio-78.05bhp/ton-

 

ಸುರಕ್ಷತೆ

ಮೂರನೇ ತಲೆಮಾರಿನ ವ್ಯಾಗನ್ ಆರ್, ಚಾಲಕನ ಏರ್ ಬ್ಯಾಗ್, ಇಬಿಡಿಯೊಂದಿಗೆ ಎಬಿಎಸ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿದೆ. ಟಾಪ್-ಸ್ಪೆಕ್ ಝಡ್ ವೇರಿಯೆಂಟ್ ಸಹ-ಚಾಲಕರ ಏರ್ ಬ್ಯಾಗ್ ಅಲ್ಲದೆ ಮುಂಬದಿಯಲ್ಲಿ ಪ್ರಿಟೆನ್ಷನರ್ ಗಳೊಂದಿಗೆ ಸೀಟ್ ಬೆಲ್ಟ್ ಮತ್ತು ಲೋಡ್ ಲಿಮಿಟರ್ ಹೊಂದಿವೆ. ಈ ಎರಡು ಸಕ್ರಿಯ ಸೇಫ್ಟಿ ಫೀಚರ್ ಗಳು ಎಲ್ ಮತ್ತು ವಿ ವೇರಿಯೆಂಟ್ ಗಳಲ್ಲಿ ಐಚ್ಛಿಕ ಎಕ್ಸ್ ಟ್ರಾ ಆಗಿ ಲಭ್ಯವಿವೆ. 

ರೂಪಾಂತರಗಳು

ಮೂರನೇ ತಲೆಮಾರಿನ ವ್ಯಾಗನ್ ಆರ್ ಮೂರು ವೇರಿಯೆಂಟ್ ಗಳಲ್ಲಿ ಲಭ್ಯ- ಎಲ್, ವಿ ಮತ್ತು ಝಡ್. ಬೇಸ್ ಸ್ಪೆಕ್ ಎಲ್ ಸಣ್ಣ 1.0 ಲೀಟರ್ ಎಂಜಿನ್ ಹೊಂದಿದ್ದು, ಈ ಶ್ರೇಣಿಯ ಉನ್ನತ ಮಟ್ಟದ ಝಡ್ ಹೊಸ 1.2-ಲೀಟರ್ ಮೋಟಾರ್ ನೀಡುತ್ತದೆ. ಮಧ್ಯಮ ಹಂತದ ವಿ ವೇರಿಯೆಂಟ್ ನಲ್ಲಿ ಎರಡೂ ಎಂಜಿನ್ ಆಯ್ಕೆಗಳಿವೆ. 

ಮಾರುತಿ ವ್ಯಾಗನ್ ಆರ್‌

ನಾವು ಇಷ್ಟಪಡುವ ವಿಷಯಗಳು

 • ಸುಲಭ ಪ್ರವೇಶ ಮತ್ತು ನಿರ್ಗಮನ: ವ್ಯಾಗನ್ ಆರ್ ಪ್ರವೇಶ ಮತ್ತು ನಿರ್ಗಮನ ಬಹಳ ಸುಲಭವಾಗಿದ್ದು ನೀವು ಹೆಚ್ಚು ಬಾಗಬೇಕಿಲ್ಲ.
 • ವಿಶಾಲ ಕ್ಯಾಬಿನ್: ಬಾಹ್ಯ ವಿನ್ಯಾಸದಲ್ಲಿ ಹೆಚ್ಚಳ ಮತ್ತು ವ್ಹೀಲ್ ಬೇಸ್ ಕ್ಯಾಬಿನ್ ಒಳಗಡೆ ಹೆಚ್ಚು ಸ್ಥಳಾವಕಾಶ ನೀಡಿದೆ.
 • ಕೇವೆರ್ನಸ್ ಬೂಟ್: 341-ಲೀಟರ್ ಬೂಟ್ ಸ್ಪೇಸ್ ತನ್ನ ವರ್ಗದಲ್ಲಿ ಗರಿಷ್ಠವಾಗಿದೆ. ಇದು ಈ ವಲಯಕ್ಕಿಂತ ಮೇಲ್ಮಟ್ಟದ ದೊಡ್ಡ ಕಾರುಗಳಿಗೆ ಹೋಲಿಕೆ ಮಾಡಬಹುದು. ಸುಲಭವಾಗಿ 3-4 ಮಧ್ಯಮ ಗಾತ್ರದ ಬ್ಯಾಗ್ ಗಳನ್ನು ಜೋಡಿಸಬಹುದು. ಹಿಂಬದಿಯ ಸೀಟು 60:40 ಸ್ಪ್ಲಿಟ್ ಹೊಂದಿದ್ದು ಹೆಚ್ಚು ವೈವಿಧ್ಯತೆ ನೀಡುತ್ತದೆ.
 • ಎರಡೂ ಎಂಜಿನ್ ಗಳಲ್ಲಿ ಎಎಂಟಿ : ಈಗಾಗಲೇ ಸುಲಭ ಚಾಲನೆಯ ಕಾರಿಗೆ ಎಎಂಟಿ ಆಯ್ಕೆ ಅನುಕೂಲದ ಅಂಶವನ್ನು ಮತ್ತಷ್ಟು ಹೆಚ್ಚಿಸಿದೆ. ವಿ ಮತ್ತು ಝಡ್ ವೇರಿಯೆಂಟ್ ಗಳಲ್ಲಿ ಎರಡೂ ಎಂಜಿನ್ ಗಳಲ್ಲಿ ಲಭ್ಯ.
 • ಸುರಕ್ಷಿತ: ಎಬಿಎಸ್ ಸ್ಟಾಂಡರ್ಡ್, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್ ಎಲ್ಲ ವೇರಿಯೆಂಟ್ ಗಳಲ್ಲಿಯೂ ಐಚ್ಛಿಕವಾಗಿ ಲಭ್ಯ. ಹೊಸ ಪ್ಲಾಟ್ ಫಾರಂ ಕೂಡಾ ಹಿಂದಿಗಿಂತ ಸದೃಢವಾಗಿದೆ.

ನಾವು ಇಷ್ಟಪಡದ ವಿಷಯಗಳು

 • ಪ್ಲಾಸ್ಟಿಕ್ ಗುಣಮಟ್ಟ: ಕ್ಯಾಬಿನ್ ನಲ್ಲಿರುವ ಗುಣಮಟ್ಟದ ವಸ್ತುಗಳು ಮತ್ತಷ್ಟು ಉತ್ತಮವಾಗಬಹುದಿತ್ತು. ಗುಣಮಟ್ಟದಲ್ಲಿ ಸ್ಥಿರತೆ ಕೂಡಾ ಕಾಳಜಿಯ ವಿಷಯವಾಗಿದೆ.
 • ಸಿ.ಎನ್.ಜಿ ಅಥವಾ ಎಲ್.ಪಿ.ಜಿ. ಆಯ್ಕೆ ಸದ್ಯಕ್ಕೆ ಇಲ್ಲ.
 • ಸ್ಮಂಜಿನಂತಹ ಬ್ರೇಕ್ ಗಳು: ಇವುಗಳನ್ನು ಉತ್ತಮ ಪೆಡಲ್ ರೆಸ್ಪಾನ್ಸ್ ಗೆ ನೀಡುವಂತೆ ಮಾಡಬಹುದಿತ್ತು.
 • ತಪ್ಪಿಸಿಕೊಂಡ ವಿಶೇಷತೆಗಳು: ಅಡ್ಜಸ್ಟಬಲ್ ರಿಯರ್ ಹೆಡ್ ರೆಸ್ಟ್ ಗಳು, ಎತ್ತರ ಹೊಂದಿಸಬಲ್ಲ ಚಾಲಕರ ಸೀಟು, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಅಲಾಯ್ ವ್ಹೀಲ್ಸ್ ಒಂದಾದರೂ ಟಾಪ್ ವೇರಿಯೆಂಟ್ ನಲ್ಲಿ ನೀಡಬಹುದಾಗಿತ್ತು.
 • ದುರ್ಬಲ ಕ್ಯಾಬಿನ್ ಇನ್ಸುಲೇಷನ್: ಎನ್.ವಿ.ಎಚ್ ಮಟ್ಟಗಳು ಉತ್ತಮವಾಗಿಲ್ಲ- ಕ್ಯಾಬಿನ್ ಒಳಗಡೆ ಎಂಜಿನ್ ಶಬ್ದ ಸಾಕಷ್ಟಿದೆ.

ಉತ್ತಮ ವೈಶಿಷ್ಟ್ಯಗಳು

 • Pros & Cons of Maruti Wagon R

  60:40 ಸ್ಪ್ಲಿಟ್-ಫೋಲ್ಡಿಂಗ್ ರಿಯರ್ ಸೀಟ್: ಈ ವಲಯದಲ್ಲಿ ಸೆಲೆರಿಯೊ ಹೊರತುಪಡಿಸಿ ಯಾವುದೇ ಕರು ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟ್ ಹೊಂದಿಲ್ಲ. ಅದು ಬೂಟ್ ಸ್ಪೇಸ್ ವೈವಿಧ್ಯತೆ ಹೆಚ್ಚಿಸುತ್ತದೆ. 

 • Pros & Cons of Maruti Wagon R

  341-ಲೀಟರ್ ಬೂಟ್ ಸ್ಪೇಸ್: ವ್ಯಾಗನ್ ಆರ್ ಬೂಟ್ ಸ್ಪೇಸ್ ಅದರ ಪ್ರತಿಸ್ಪರ್ಧಿಗಳಿಗಿಂತ ಹಾಗೂ ಅದರ ಮೇಲ್ಮಟ್ಟದ ಕಾರುಗಳಿಗಿಂತ ಗಮನಾರ್ಹವಾಗಿ ವಿಶಾಲವಾಗಿದೆ. 

 • Pros & Cons of Maruti Wagon R

  7-ಇಂಚು ಇನ್ಫೊಟೈನ್ಮೆಂಟ್ ಸಿಸ್ಟಂ: ಮಾರುತಿಯ ಹೊಸ ಸ್ಮಾರ್ಟ್ ಪ್ಲೇ ಸ್ಟುಡಿಯೊ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೊ ಸಪೋರ್ಟ್ ನೊಂದಿಗೆ ಬಂದಿದ್ದು ಕಾರು ಉತ್ಪಾದಕರ ಸ್ಮಾರ್ಟ್ ಫೋನ್ ಇಂಟಿಗ್ರೇಷನ್ ಆಪ್, ಸ್ಮಾರ್ಟ್ ಪ್ಲೇ ಸ್ಟುಡಿಯೊ ಕೂಡಾ ಹೊಂದಿದೆ. ಇದು ಇಂಟರ್ ನೆಟ್ ರೇಡಿಯೊಗಳು ಮತ್ತು ಡಿಸ್ಪ್ಲೇ ವೆಹಿಕಲ್ ಸ್ಟಾಟ್ಸ್ ಕೂಡಾ ಹೊಂದಿದೆ. 

ಮಾರುತಿ ವ್ಯಾಗನ್ ಆರ್‌ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ1433 ಬಳಕೆದಾರರ ವಿಮರ್ಶೆಗಳು
 • ಎಲ್ಲಾ (1398)
 • Looks (354)
 • Comfort (487)
 • Mileage (423)
 • Engine (223)
 • Interior (173)
 • Space (358)
 • Price (205)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • WaganR After 10000km Driving Only Some Minor Replacement Is Neede...

  Good family car, good head, and legroom, extra space for luggage, fuel economy is quite good on highway as in local driving can be considered best in class. Gear shifting...ಮತ್ತಷ್ಟು ಓದು

  ಇವರಿಂದ jeetendra singh
  On: Sep 16, 2021 | 1778 Views
 • Looking For Upgrade

  Nice car, with good mileage, low maintenance. Well maintained looking to upgrade with SUV model, Bolero or Innova car.

  ಇವರಿಂದ tanveer hussain
  On: Aug 10, 2021 | 95 Views
 • WagonR Is WagonR

  This is the best car forever, and the Performance of this car is excellent and on full tank avg.25 I guess, Comfort is very Good

  ಇವರಿಂದ omprakash sha
  On: Aug 07, 2021 | 97 Views
 • Really Awesome

  Really very happy with my car. Best quality, low maintenance, low service charges.

  ಇವರಿಂದ murthy v
  On: Aug 07, 2021 | 63 Views
 • Improve Quality

  Good experience with my car. But Maruti wants to improve your build quality. They should provide world-class features on a lower budget.

  ಇವರಿಂದ mukesh kumar khandsiya
  On: Jul 31, 2021 | 79 Views
 • ಎಲ್ಲಾ ವೇಗನ್ ಆರ್‌ ವಿರ್ಮಶೆಗಳು ವೀಕ್ಷಿಸಿ
space Image

ಮಾರುತಿ ವ್ಯಾಗನ್ ಆರ್‌ ವೀಡಿಯೊಗಳು

 • New Maruti WagonR 2019 Variants: Which One To Buy: LXi, VXi, ZXi? | CarDekho.com #VariantsExplained
  10:46
  New Maruti WagonR 2019 Variants: Which One To Buy: LXi, VXi, ZXi? | CarDekho.com #VariantsExplained
  ಜೂನ್ 02, 2020
 • Maruti Wagon R 2019 - Pros, Cons and Should You Buy One? Cardekho.com
  6:44
  Maruti Wagon R 2019 - Pros, Cons and Should You Buy One? Cardekho.com
  ಏಪ್ರಿಲ್ 22, 2019
 • Santro vs WagonR vs Tiago: Comparison Review    | CarDekho.com
  11:47
  Santro vs WagonR vs Tiago: Comparison Review | CarDekho.com
  sep 21, 2019
 • Maruti Wagon R 2019 | 7000km Long-Term Review | CarDekho
  7:51
  Maruti Wagon R 2019 | 7000km Long-Term Review | CarDekho
  ಜೂನ್ 02, 2020
 • 2019 Maruti Suzuki Wagon R : The car you start your day in : PowerDrift
  9:36
  2019 Maruti Suzuki Wagon R : The car you start your day in : PowerDrift
  ಏಪ್ರಿಲ್ 22, 2019

ಮಾರುತಿ ವ್ಯಾಗನ್ ಆರ್‌ ಬಣ್ಣಗಳು

 • ರೇಷ್ಮೆ ಬೆಳ್ಳಿ
  ರೇಷ್ಮೆ ಬೆಳ್ಳಿ
 • ಪೂಲ್ಸೈಡ್ ನೀಲಿ
  ಪೂಲ್ಸೈಡ್ ನೀಲಿ
 • ನಟ್ಮೆಗ್ ಬ್ರೌನ್
  ನಟ್ಮೆಗ್ ಬ್ರೌನ್
 • ಮಾಗ್ಮಾ ಗ್ರೇ
  ಮಾಗ್ಮಾ ಗ್ರೇ
 • ಸಾಲಿಡ್ ಬಿಳಿ
  ಸಾಲಿಡ್ ಬಿಳಿ
 • ಶರತ್ಕಾಲ ಕಿತ್ತಳೆ
  ಶರತ್ಕಾಲ ಕಿತ್ತಳೆ

ಮಾರುತಿ ವ್ಯಾಗನ್ ಆರ್‌ ಚಿತ್ರಗಳು

 • Maruti Wagon R Front Left Side Image
 • Maruti Wagon R Rear Left View Image
 • Maruti Wagon R Grille Image
 • Maruti Wagon R Front Fog Lamp Image
 • Maruti Wagon R Headlight Image
 • Maruti Wagon R Taillight Image
 • Maruti Wagon R Side Mirror (Body) Image
 • Maruti Wagon R Side View (Right) Image
space Image

ಮಾರುತಿ ವ್ಯಾಗನ್ ಆರ್‌ ಸುದ್ದಿ

ಮಾರುತಿ ವ್ಯಾಗನ್ ಆರ್‌ ರಸ್ತೆ ಪರೀಕ್ಷೆ

space Image

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Ask Question

Are you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

 • ಲೇಟೆಸ್ಟ್ questions

ವೇಗನ್ ಆರ್‌ cng ka waiting period kitna Hai?

Sanchit asked on 12 Sep 2021

For the delivery and waiting period, we would suggest you please connect with th...

ಮತ್ತಷ್ಟು ಓದು
By Cardekho experts on 12 Sep 2021

What IS the ಬೆಲೆ/ದಾರ ಅದರಲ್ಲಿ ಮಾರುತಿ Suzuki ವೇಗನ್ ಆರ್‌ through CSD?

Jeeva asked on 7 Sep 2021

The exact information regarding the CSD prices of the car can be only available ...

ಮತ್ತಷ್ಟು ಓದು
By Cardekho experts on 7 Sep 2021

IS ಹೊಸದು ವೇಗನ್ ಆರ್‌ semi ಸ್ವಯಂಚಾಲಿತ or fully ಸ್ವಯಂಚಾಲಿತ

manoj asked on 1 Sep 2021

Maruti offers the Wagon R with two petrol engine options: a 1.0-litre (68PS/90Nm...

ಮತ್ತಷ್ಟು ಓದು
By Cardekho experts on 1 Sep 2021

ಐ want cng to be installed from market IS it ok??

sumit asked on 1 Sep 2021

We wouldn't recommend it, as it may hamper or void your car's warranty. ...

ಮತ್ತಷ್ಟು ಓದು
By Cardekho experts on 1 Sep 2021

Which wagon r is more stable new wagon r or stingray wagon r

Aman asked on 24 Aug 2021

The Maruti Wagon R Stingray has been discontinued and is not available for sale ...

ಮತ್ತಷ್ಟು ಓದು
By Cardekho experts on 24 Aug 2021

Write your Comment on ಮಾರುತಿ ವ್ಯಾಗನ್ ಆರ್‌

90 ಕಾಮೆಂಟ್ಗಳು
1
K
krishna rinku
Jul 6, 2021 11:12:26 AM

Price is high

Read More...
  ಪ್ರತ್ಯುತ್ತರ
  Write a Reply
  1
  k
  kia
  Dec 16, 2020 12:55:45 PM

  very nice car

  Read More...
   ಪ್ರತ್ಯುತ್ತರ
   Write a Reply
   1
   R
   raju
   Dec 16, 2020 12:51:43 PM

   nice car...

   Read More...
    ಪ್ರತ್ಯುತ್ತರ
    Write a Reply
    space Image
    space Image

    ಭಾರತ ರಲ್ಲಿ ಮಾರುತಿ ವ್ಯಾಗನ್ ಆರ್‌ ಬೆಲೆ

    ನಗರಹಳೆಯ ಶೋರೂಮ್ ಬೆಲೆ
    ಮುಂಬೈRs. 4.93 - 6.45 ಲಕ್ಷ
    ಬೆಂಗಳೂರುRs. 4.93 - 6.45 ಲಕ್ಷ
    ಚೆನ್ನೈRs. 4.93 - 6.45 ಲಕ್ಷ
    ತಳ್ಳುRs. 4.93 - 6.45 ಲಕ್ಷ
    ಕೋಲ್ಕತಾRs. 4.93 - 6.45 ಲಕ್ಷ
    ನಿಮ್ಮ ನಗರವನ್ನು ಆರಿಸಿ
    space Image

    ಟ್ರೆಂಡಿಂಗ್ ಮಾರುತಿ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    • ಎಲ್ಲಾ ಕಾರುಗಳು
    ×
    We need your ನಗರ to customize your experience