• English
    • Login / Register

    ಬಿಡುಗಡೆಗೂ ಮುನ್ನವೇ ಹೊಸ Volkswagen Tiguan R-Line ಸುರಕ್ಷತಾ ಫೀಚರ್‌ಗಳು ಬಹಿರಂಗ

    ಏಪ್ರಿಲ್ 03, 2025 04:41 pm ರಂದು dipan ಮೂಲಕ ಪ್ರಕಟಿಸಲಾಗಿದೆ

    • 14 Views
    • ಕಾಮೆಂಟ್‌ ಅನ್ನು ಬರೆಯಿರಿ

    2025ರ ಟಿಗುವಾನ್ ಆರ್-ಲೈನ್ ಅನ್ನು ಏಪ್ರಿಲ್ 14, 2025 ರಂದು ಬಿಡುಗಡೆ ಮಾಡಲಾಗುವುದು ಮತ್ತು ಇದು ಜರ್ಮನ್ ಮೂಲದ ಈ ಕಾರು ತಯಾರಕರಿಂದ ಭಾರತದಲ್ಲಿ ಬಿಡುಗಡೆಯಾಗಲಿರುವ ಮೊದಲ ಆರ್-ಲೈನ್ ಮೊಡೆಲ್‌ ಆಗಿದೆ

    New Volkswagen Tiguan R-Line Safety Features Revealed Ahead Of Launch

    • ಬಹಿರಂಗಪಡಿಸಿದ ಸುರಕ್ಷತಾ ಫೀಚರ್‌ಗಳಲ್ಲಿ 9 ಏರ್‌ಬ್ಯಾಗ್‌ಗಳು, TPMS, ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು ಮತ್ತು ಲೆವೆಲ್-2 ADAS ಸೇರಿವೆ.

    • ಈ ಎಎಸ್‌ಯುವಿಯಲ್ಲಿರುವ ಇತರ ಸೌಲಭ್ಯಗಳಲ್ಲಿ 12.9-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 3-ಝೋನ್‌ ಆಟೋ ಎಸಿ ಸೇರಿವೆ.

    • ಪನೋರಮಿಕ್ ಸನ್‌ರೂಫ್, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಹಿಂಭಾಗದ ಸೀಟುಗಳಲ್ಲಿ ಮಸಾಜ್ ಫಂಕ್ಷನ್‌ಅನ್ನು ಸಹ ಅಳವಡಿಸಲಾಗುವುದು.

    • 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಇದು ಹೊರಹೋಗುವ ಮೊಡೆಲ್‌ಗಿಂತ 14 ಪಿಎಸ್‌ ಹೆಚ್ಚು ಉತ್ಪಾದಿಸುತ್ತದೆ.

    • ಬೆಲೆಗಳು 55 ಲಕ್ಷ ರೂ.ಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ).

    ವೋಕ್ಸ್‌ವ್ಯಾಗನ್ ಟಿಗುವಾನ್ ಆರ್-ಲೈನ್‌ನ ಎಂಜಿನ್ ಆಯ್ಕೆ, ಉನ್ನತ ಫೀಚರ್‌ಗಳು ಮತ್ತು ಬಣ್ಣಗಳ ಆಯ್ಕೆಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದ ನಂತರ, ಜರ್ಮನ್ ಕಾರು ತಯಾರಕರು ಈಗ ಎಸ್‌ಯುವಿಯ ಕೆಲವು ಉನ್ನತ ಸುರಕ್ಷತಾ ಫೀಚರ್‌ಗಳನ್ನು ಬಹಿರಂಗಪಡಿಸಿದ್ದಾರೆ. ಟಿಗುವಾನ್ ಆರ್-ಲೈನ್ ಪಡೆಯುವ ಎಲ್ಲಾ ಪ್ರಮುಖ ಸುರಕ್ಷತಾ ಫೀಚರ್‌ಗಳನ್ನು ನೋಡೋಣ:

    ದೃಢೀಕೃತ ಸುರಕ್ಷತಾ ಫೀಚರ್‌ಗಳು

    Volkswagen Tiguan R-Line front

    ಮುಂಬರುವ ವೋಕ್ಸ್‌ವ್ಯಾಗನ್‌ನ ದುಬಾರಿ ಬೆಲೆಯ ಎಸ್‌ಯುವಿಯು ಈ ಕೆಳಗಿನ ಸುರಕ್ಷತಾ ಫೀಚರ್‌ಗಳೊಂದಿಗೆ ಬರಲಿದೆ:

    • 9 ಏರ್ಬ್ಯಾಗ್ಸ್ 

    • 9 ಏರ್‌ಬ್ಯಾಗ್‌ಗಳು

    • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

    • ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್

    • ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್

    • ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದ ಫೀಚರ್‌ಗಳೊಂದಿಗೆ ಲೆವೆಲ್-2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS)

    ಇವುಗಳಷ್ಟೇ ಅಲ್ಲದೆ, ಮುಂಬರುವ ಟಿಗುವಾನ್ ಆರ್-ಲೈನ್ ಹೆಚ್ಚಿನ ಸುರಕ್ಷತಾ ಫೀಚರ್‌ಗಳೊಂದಿಗೆ ಬರಲಿದ್ದು, ಅದರ ವಿವರಗಳನ್ನು ಎಎಸ್‌ಯುವಿ ಬಿಡುಗಡೆಯ ಸಮಯದಲ್ಲಿ ಬಹಿರಂಗಪಡಿಸಲಾಗುವುದು.

    ಇದರೊಂದಿಗೆ, ಈ ಜರ್ಮನ್ ಕಾರು ತಯಾರಕರು ಎಸ್‌ಯುವಿಯು ಆಕ್ಟಿವ್‌ ಸಸ್ಪೆನ್ಷನ್ ಸೆಟಪ್‌ನೊಂದಿಗೆ ಲಭ್ಯವಿರುತ್ತದೆ ಎಂದು ದೃಢಪಡಿಸಿದ್ದಾರೆ, ಇದು ಮೊದಲಿಗಿಂತ ಸವಾರಿ ಗುಣಮಟ್ಟವನ್ನು ಆರಾಮದಾಯಕವಾಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

    ಇತರ ಫೀಚರ್‌ಗಳು

    Volkswagen Tiguan R-Line touchscreen

    ಟಿಗುವಾನ್ ಆರ್-ಲೈನ್ 12.9-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 3-ಜೋನ್ ಆಟೋ ಎಸಿ, 30-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಮಸಾಜ್ ಫಂಕ್ಷನ್ ಮತ್ತು ಲಂಬರ್‌ ಸಪೋರ್ಟ್‌ನೊಂದಿಗೆ ಸ್ಪೋರ್ಟ್ ಸೀಟುಗಳು ಸೇರಿದಂತೆ ಸೌಲಭ್ಯಗಳೊಂದಿಗೆ ಬರಲಿದೆ. ಇದು ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಪಾರ್ಕ್ ಅಸಿಸ್ಟ್ ಅನ್ನು ಸಹ ಹೊಂದಿದೆ.

     ಇದನ್ನೂ ಓದಿ: ಮಾರಿಷಸ್‌ನಲ್ಲಿ Tiago EV, Punch EV ಮತ್ತು Nexon EVಗಳನ್ನು ಪರಿಚಯಿಸಿದ ಟಾಟಾ

    ಪವರ್‌ಟ್ರೇನ್ ಆಯ್ಕೆಗಳು

    Volkswagen Tiguan R-Line side profile

    ವೋಕ್ಸ್‌ವ್ಯಾಗನ್ ಕಂಪನಿಯು ಈ ಹಿಂದೆ ಟಿಗುವಾನ್ ಆರ್-ಲೈನ್ ಪ್ರಸ್ತುತ ಸ್ಪೆಕ್ ಮೊಡೆಲ್‌ನಂತೆಯೇ 2-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಹೊಂದಿರುತ್ತದೆ ಎಂದು ದೃಢಪಡಿಸಿತ್ತು, ಆದರೆ ಈಗ ಅದು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ. ವಿವರವಾದ ವಿಶೇಷಣಗಳು ಇಲ್ಲಿವೆ:

    ಎಂಜಿನ್‌

    2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

    ಪವರ್‌

    204 ಪಿಎಸ್‌ (ಹಿಂದಿನದಕ್ಕಿಂತ 14 ಪಿಎಸ್‌ ಹೆಚ್ಚು)

    ಟಾರ್ಕ್‌

    320 ಎನ್‌ಎಮ್‌

    ಟ್ರಾನ್ಸ್‌ಮಿಷನ್‌

    7-ಸ್ಪೀಡ್ ಡಿಸಿಟಿ*

    ಡ್ರೈವ್‌ಟ್ರೈನ್‌

    ಆಲ್-ವೀಲ್-ಡ್ರೈವ್ (AWD)

    *ಡಿಸಿಟಿ = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

    ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

    Volkswagen Tiguan R-Line rear

    ವೋಕ್ಸ್‌ವ್ಯಾಗನ್ ಟಿಗುವಾನ್ ಆರ್-ಲೈನ್ ಅನ್ನು ಏಪ್ರಿಲ್ 14, 2025 ರಂದು ಭಾರತದಲ್ಲಿ ಪರಿಚಯಿಸಲಾಗುವುದು ಮತ್ತು ಇದನ್ನು ಸಂಪೂರ್ಣವಾಗಿ ದೇಶಕ್ಕೆ ಆಮದು ಮಾಡಿಕೊಳ್ಳಲಾಗುವುದರಿಂದ ಸುಮಾರು 55 ಲಕ್ಷ ರೂ. (ಎಕ್ಸ್-ಶೋರೂಂ) ಬೆಲೆಯನ್ನು ಹೊಂದುವ ನಿರೀಕ್ಷೆಯಿದೆ. ಇದು ಜೀಪ್ ಕಂಪಾಸ್, ಹುಂಡೈ ಟಕ್ಸನ್ ಮತ್ತು ಸಿಟ್ರೊಯೆನ್ C5 ಏರ್‌ಕ್ರಾಸ್ ವಿರುದ್ಧ ಪೈಪೋಟಿಯನ್ನು ಮುಂದುವರಿಸಲಿದೆ. 

     ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Volkswagen ಟಿಗುವಾನ್ 2025

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience