ಹೊಸ ತಲೆಮಾರಿನ Skoda Superb ಅನಾವರಣ, ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗುವ ಸಾಧ್ಯತೆ
ಸ್ಕೋಡಾ ಸೂಪರ್ ಗಾಗಿ ansh ಮೂಲಕ ನವೆಂಬರ್ 05, 2023 02:12 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಫ್ಲ್ಯಾಗ್ ಶಿಪ್ ಸ್ಕೋಡಾ ಸೆಡಾನ್ ಕಾರಿನ ಹೊರಾಂಗಣಕ್ಕೆ ಸಮಗ್ರ ಬದಲಾವಣೆಯನ್ನು ಮಾಡಲಾಗಿದ್ದು ಒಳಾಂಗಣವನ್ನು ಸಹ ಸಂಪೂರ್ಣವಾಗಿ ಬದಲಾಯಿಸಲಾಗಿದೆ
- ಹೊಸ ತಲೆಮಾರಿನ ಸುಪರ್ಬ್ ಕಾರು ಸ್ಕೋಡಾದ ಹೊಸ ಮಾಡರ್ನ್ ಸಾಲಿಡ್ ವಿನ್ಯಾಸ ಭಾಷೆಯನ್ನು ಹೊಂದಿದೆ.
- ವಿವಿಧ ಬಣ್ಣಗಳೊಂದಿಗೆ ಸರಳ ಮತ್ತು ಉನ್ನತ ತಾಂತ್ರಿಕತೆಯ ಕ್ಯಾಬಿನ್ ನೊಂದಿಗೆ ಬರಲಿದ್ದು, ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
- ಇದು 10 ಏರ್ ಬ್ಯಾಗ್ ಗಳು, ಎಮರ್ಜೆನ್ಸಿ ಸ್ಟೀಯರಿಂಗ್ ಅಸಿಸ್ಟ್ ಮತ್ತು ಅಟೋ ಎಮರ್ಜೆ ಬ್ರೇಕಿಂಗ್ ನಂತ ADAS ವೈಶಿಷ್ಟ್ಯಗಳನ್ನು ಹೊಂದಿದೆ.
- ಜಾಗತಿಕ ಮಾದರಿಯು ಟರ್ಬೋ ಪೆಟ್ರೋಲ್, ಡೀಸೆಲ್ ಮತ್ತು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರಲಿದೆ.
- ಇದನ್ನು ಮುಂದಿನ ವರ್ಷದಲ್ಲಿ ರೂ. 40 ಲಕ್ಷದಷ್ಟು ಆರಂಭಿಕ ಬೆಲೆಗೆ (ಎಕ್ಸ್-ಶೋರೂಂ) ಬಿಡುಗಡೆ ಮಾಡುವ ಸಾಧ್ಯತೆ ಇದೆ.
2024 ಸ್ಕೋಡಾ ಸುಪರ್ಬ್ ಕಾರನ್ನು ಈ ಕಾರು ತಯಾರಕ ಸಂಸ್ಥೆಯು ಜಾಗತಿಕವಾಗಿ ಅನಾವರಣಗೊಳಿಸಿದ್ದು, ಹೊಸ ತಲೆಮಾರಿನ ಸ್ಕೋಡಾ ಕೊಡಿಯಾಕ್ ಮಾರುಕಟ್ಟೆಗೆ ಬಂದ ತಿಂಗಳೊಳಗೆ ಇದು ಬಿಡುಗಡೆಯಾಗಿದೆ. ಈ ನಾಲ್ಕನೇ ತಲೆಮಾರಿನ ಸೆಡಾನ್ ಕಾರು ಪರಿಷ್ಕೃತ ವಿನ್ಯಾಸ, ಆಧುನಿಕ ಮತ್ತು ಸರಳ ಕ್ಯಾಬಿನ್, ಹೊಸ ವೈಶಿಷ್ಟ್ಯಗಳು ಮತ್ತು ವಿವಿಧ ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರಲಿದೆ. ಈ ಬದಲಾವಣೆಗಳನ್ನು ಇನ್ನಷ್ಟು ಸವಿಸ್ತಾರವಾಗಿ ನೋಡೋಣ.
ಹೊಸ ವಿನ್ಯಾಸ ಭಾಷೆ
ಹೊಸ ಸುಪರ್ಬ್ ಕಾರು ಸ್ಕೋಡಾ ಸಂಸ್ಥೆಯ ಮಾಡರ್ನ್ ಸಾಲಿಡ್ ವಿನ್ಯಾಸ ಭಾಷೆಯನ್ನು ಹೊಂದಿದ್ದು, ಯುರೋಪಿನ ಮಾರುಕಟ್ಟೆಗಳಲ್ಲಿ ಸೆಡಾನ್ ಮತ್ತು ಕಾಂಬಿ (ಎಸ್ಟೇಟ್) ಆಕಾರಗಳಲ್ಲಿ ಇದು ದೊರೆಯಲಿದೆ. ಭಾರತೀಯ ಮಾರುಕಟ್ಟೆಯು ಸೆಡಾನ್ ಆವೃತ್ತಿಯನ್ನು ಮಾತ್ರವೇ ಪಡೆಯಲಿದ್ದು, ವಿನ್ಯಾಸದಲ್ಲಿನ ಬದಲಾವಣೆಯ ಕುರಿತು ನಾವು ಹೆಚ್ಚಿನ ಗಮನ ನೀಡಲಿದ್ದೇವೆ. ಮರುವಿನ್ಯಾಸಕ್ಕೆ ಒಳಪಟ್ಟ ಫ್ರಂಟ್ ಗ್ರಿಲ್, ಪರಿಷ್ಕೃತ LED ಹೆಡ್ ಲೈಟ್ ಗಳು ಮತ್ತು DRLಗಳು ಮತ್ತು ಶಾರ್ಪ್ ಡಿಟೇಲ್ ಗಳೊಂದಿಗೆ ಹೊಸ ಫ್ರಂಟ್ ಬಂಪರ್ ಮೂಲ ಇದು ಹೊಸ ಫ್ರಂಟ್ ಪ್ರೊಫೈಲ್ ಅನ್ನು ಪಡೆದಿದೆ. ಈ ಕಾರು ತಯಾರಕ ಸಂಸ್ಥೆಯು ಫಾಗ್ ಲ್ಯಾಂಪ್ ಗಳನ್ನು ತೆಗೆದು ಹಾಕಿದೆ.


ಸೈಡ್ ಪ್ರೊಫೈಲ್ ಹಾಗೆಯೇ ಇದ್ದರೂ, ಶೋಲ್ಡರ್ ಲೈನ್ ಗೆ ಬದಲಾವಣೆಗಳನ್ನು ಮಾಡಲಾಗಿದೆ. ಅಲ್ಲದೆ ಬಾಟಮ್ ಎಜ್ ನ ಕ್ರೀಸ್ ಗಳನ್ನು ಪರಿಷ್ಕರಿಸಲಾಗಿದೆ. ಇದು ಹೊಸ ಅಲೋಯ್ ವೀಲ್ ಗಳನ್ನು ಪಡೆಯಲಿದ್ದು, ಇದರ ಗಾತ್ರವು 16ರಿಂದ 19 ಇಂಚುಗಳ ನಡುವೆ ಇರಲಿದೆ. ಮುಂಭಾಗದಂತೆಯೇ ಹಿಂಭಾಗದ ವಿನ್ಯಾಸದಲ್ಲಿಯೂ ಸ್ಕೋಡಾ ಸಂಸ್ಥೆಯು ಬದಲಾವಣೆಗಳನ್ನು ಮಾಡಿದ್ದು, ಇಂಡಿವಿಜುವಲ್ ಲೈಟ್ ಎಲಿಮೆಂಟ್ ಗಳೊಂದಿಗೆ C ಆಕಾರದ LED ಟೇಲ್ ಲ್ಯಾಂಪ್ ಗಳು ಮತ್ತು ಫಾಕ್ಸ್ ಎಕ್ಸಾಸ್ಟ್ ವೆಂಟ್ ಇಲ್ಲದೆಯೇ ಪರಿಷ್ಕರಿಸಲಾಗಿರುವ ಬಂಪರ್ ವಿನ್ಯಾಸವನ್ನು ಇಲ್ಲಿ ಕಾಣಬಹುದು.
ಸಂಪೂರ್ಣ ಹೊಸ ಕ್ಯಾಬಿನ್
ಹೊಸ ತಲೆಮಾರಿನ ಸ್ಕೋಡಾ ಸುಪರ್ಬ್ ಕಾರಿಗೆ ಅಳವಡಿಸಲಾಗಿರುವ ಸಂಪೂರ್ಣ ಹೊಸ ಕ್ಯಾಬಿನ್ ಗೆ ಹೋಲಿಸಿದರೆ ಹೊರಾಂಗಣ ವಿನ್ಯಾಸಕ್ಕೆ ಮಾಡಲಾಗಿರುವ ಬದಲಾವಣೆಗಳು ತೀರಾ ಕಡಿಮೆ. ಈ ಕಾರು ತಯಾರಕ ಸಂಸ್ಥೆಯು ಸರಳ ವಿನ್ಯಾಸವನ್ನು ಆಯ್ದುಕೊಂಡಿದ್ದು, ಇದು ವಿವಿಧ ಕ್ಯಾಬಿನ್ ಥೀಮ್ ಗಳನ್ನು ಒಳಗೊಂಡಿದೆ. ಡ್ಯಾಶ್ ಬೋರ್ಡ್ ನಲ್ಲಿ, ಕಾರ್ನರ್ AC ವೆಂಟ್ ಗಳನ್ನು ಮರೆಮಾಚುವ ವರ್ಟಿಕಲ್ ಸ್ಲಾಟ್ ಗಳು ಎದ್ದು ಕಾಣುತ್ತಿದ್ದು, 13 ಇಂಚುಗಳಷ್ಟು ದೊಡ್ಡದಾದ ಸೆಂಟ್ರಲ್ ಟಚ್ ಸ್ಕ್ರೀನ್, ಮಲ್ಟಿ ಝೋನ್ ಕ್ಲೈಮೇಟ್ ಕಂಟ್ರೋಲ್ ಗಾಗಿ ಸ್ಮಾರ್ಟ್ ಡಿಸ್ಪ್ಲೇಗಳೊಂದಿಗೆ ಫಿಸಿಕಲ್ ಡಯಲ್ ಗಳನ್ನು ಇತ್ಯಾದಿಗಳನ್ನು ಇಲ್ಲಿ ಕಾಣಬಹುದು.
ಸ್ಟೀಯರಿಂಗ್ ವೀಲ್ ನ ಹಿಂಭಾಗದಲ್ಲಿರುವ ಸ್ಟಾಕ್ ಮೂಲಕ ಕಾರ್ಯನಿರ್ವಹಿಸುವ ಸೆಂಟರ್ ಕನ್ಸೋಲ್ ನಲ್ಲಿ ಅಟೋಮ್ಯಾಟಿಕ್ ವೇರಿಯಂಟ್ ಗಳಿಗೆ ಡ್ರೈವ್ ಸೆಲೆಕ್ಟರ್ ಇರುವುದಿಲ್ಲ. ಬದಲಾಗಿ, ನಿಮ್ಮ ಫೋನ್ ಇಡುವುದಕ್ಕಾಗಿ ಒಂದು ಟ್ರೇ ಮತ್ತು ಟ್ರೇಯನ್ನು ಹಿಂದಕ್ಕೆ ಸರಿಸಿ ಬಳಸಬಹುದಾದ ಕಪ್ ಹೋಲ್ಡರ್ ಅನ್ನು ಇದು ಹೊಂದಿದೆ.
ಇದನ್ನು ಸಹ ಓದಿರಿ: ಇನ್ನೊಮ್ಮೆ 10 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಪಡೆಯಲಿರುವ ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಕ್ ಸ್ಟೈಲ್ ವೇರಿಯಂಟ್ ಗಳು
ಫ್ರಂಟ್ ಆರ್ಮ್ ರೆಸ್ಟ್ ಆಗಿ ಬಳಸಬಹುದಾದ ಹಾಗೂ ಸ್ಟೋರೇಜ್ ಅನ್ನು ಹೊಂದಿರುವ ಸೆಂಟ್ರಲ್ ಟನೆಲ್ ಜೊತೆಗೆ ಈ ಸೆಂಟರ್ ಕನ್ಸೋಲ್ ವಿಲೀನಗೊಂಡಿದೆ. ಅಫೋಲ್ಸ್ಟರಿಯನ್ನು 100 ಶೇಕಡಾದಷ್ಟು ಮರುಬಳಕೆಯ ವಸ್ತುಗಳಿಂದ ತಯಾರಿಸಲಾಗಿದ್ದು, ಹೊಸ ತಲೆಮಾರಿನ ಗ್ರೀನ್ ಕೋಶಿಯೆಂಟ್ ಅನ್ನು ಇನ್ನಷ್ಟು ವೃದ್ಧಿಸಿದೆ.
ಗುಣಲಕ್ಷಣಗಳು ಮತ್ತು ಸುರಕ್ಷತೆ
13 ಇಂಚಿನ ಫ್ರೀ ಫ್ಲೋಟ್ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಮತ್ತು ಸ್ಮಾರ್ಟ್ ಡಯಲ್ ಗಳನ್ನು ಹೊರತುಪಡಿಸಿ, ಈ ಹೊಸ ಸ್ಕೋಡಾ ಸುಪರ್ಬ್ ಕಾರು 10 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ಹೆಡ್ಸ್ ಅಪ್ ಡಿಸ್ಪ್ಲೇ, ಅಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೂಲಿಂಗ್ ಜತೆಗೆ ಫಾಸ್ಟ್ ವೈರ್ ಲೆಸ್ ಚಾರ್ಜರ್, 5W USB ಟೈಪ್ A ಚಾರ್ಜರ್ ಗಳು, ಮಸಾಜ್ ಫಂಕ್ಷನ್ ಜೊತೆಗೆ ಪವರ್ಡ್ ಫ್ರಂಟ್ ಸೀಟ್ ಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಸನ್ ರೂಫ್ ಅನ್ನು ಇದು ಹೊಂದಿರಲಿದೆ.
ಇದನ್ನು ಸಹ ಓದಿರಿ: ಸ್ಕೋಡಾ ಸ್ಲಾವಿಯಾ ಮ್ಯಾಟ್ ಆವೃತ್ತಿ ರೂ. 15.52 ಲಕ್ಷಕ್ಕೆ ಬಿಡುಗಡೆ
10 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಟರ್ನ್ ಅಸಿಸ್ಟ್, ಎಮರ್ಜೆನ್ಸಿ ಸ್ಟೀಯರಿಂಗ್ ಅಸಿಸ್ಟ್, ಅಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಕ್ರಾಸ್ ರೋಡ್ ಅಸಿಸ್ಟ್ ಸೇರಿದಂತೆ ಸಾಕಷ್ಟು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ಗಳ ಮೂಲಕ ಈ ವಾಹನದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಲಾಗಿದೆ.
ಎಂಜಿನ್ ಆಯ್ಕೆಗಳು
ಎಂಜಿನ್ |
1.5-ಲೀಟರ್ ಟರ್ಬೊ ಪೆಟ್ರೋಲ್ ಮೈಲ್ಡ್ ಹೈಬ್ರೀಡ್ |
2-ಲೀಟರ್ ಟರ್ಬೊ ಪೆಟ್ರೋಲ್ |
2-ಲೀಟರ್ ಡೀಸೆಲ್ |
1.5-ಲೀಟರ್ ಟರ್ಬೊ ಪೆಟ್ರೋಲ್ ಪ್ಲಗ್ ಇನ್ ಹೈಬ್ರೀಡ್ |
ಪವರ್ |
150PS |
204PS/265PS |
150PS/193PS |
204PS |
ಟ್ರಾನ್ಸ್ ಮಿಶನ್ |
7-ಸ್ಪೀಡ್ DSG |
7-ಸ್ಪೀಡ್ DSG |
7-ಸ್ಪೀಡ್ DSG |
6-ಸ್ಪೀಡ್ DSG |
ಡ್ರೈವ್ ಟ್ರೇನ್ |
FWD |
FWD/AWD |
FWD/AWD |
FWD |
ಮೇಲಿನ ಕೋಷ್ಟಕದಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ ಪವರ್ ಟ್ರೇನ್ ಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ಟರ್ಬೋ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರೀಡ್ ಮತ್ತು ಪ್ಲಗ್ ಇನ್ ಹೈಬ್ರೀಡ್ ಆಯ್ಕೆಗಳೊಂದಿಗೆ ಫ್ರಂಟ್ ವೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈಲ್ ಸೆಟಪ್ ಗಳೆರಡನ್ನೂ ಗ್ರಾಹಕರು ಪಡೆಯಬಹುದಾಗಿದೆ.
ಪ್ಲಗ್ ಇನ್ ಹೈಬ್ರೀಡ್ ಸಿಸ್ಟಂ ಮೂಲಕ ಸುಪರ್ಬ್ ಕಾರು ಎಲೆಕ್ಟ್ರಿಕ್ ಮೋಡ್ ನಲ್ಲಿ 100km ತನಕ ಸಾಗಲಿದ್ದು, 25.7kWh ಬ್ಯಾಟರಿ ಪ್ಯಾಕ್ ಇದನ್ನು ಆಧರಿಸಿದೆ. ಪ್ಲಗ್ ಇನ್ ಹೈಬ್ರೀಡ್ ಸುಪರ್ಬ್ ಕಾರು 50kW DC ಫಾಸ್ಟ್ ಚಾರ್ಜಿಂಗ್ ಅನ್ನು ಆಧರಿಸುತ್ತದೆ. ಆದರೆ ಭಾರತದಲ್ಲಿ 2024 ಸೂಪರ್ಬ್ ಕಾರು ಪ್ಲಗ್ ಇನ್ ಹೈಬ್ರೀಡ್ ಆವೃತ್ತಿಯನ್ನು ಹೊಂದದೆಯೇ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಗಳು ಹೆಚ್ಚು.
ಬಿಡುಗಡೆಯ ಸಮಯ
ಹೊಸ ಸ್ಕೋಡಾ ಸುಪರ್ಬ್ ಕಾರು ಮುಂದಿನ ವರ್ಷದ ಆರಂಭದಲ್ಲಿ ಜಾಗತಿಕ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಅದೇ ವರ್ಷದಲ್ಲಿ ನಂತರದ ತಿಂಗಳುಗಳಲ್ಲಿ CBU (ಕಂಪ್ಲೀಟ್ಲಿ ಬಿಲ್ಟ್ ಅಪ್ ಯೂನಿಟ್) ಆಫರಿಂಗ್ ಆಗಿ ಭಾರತದಲ್ಲಿ ಇದನ್ನು ಬಿಡುಗಡೆ ಮಾಡಲಾಗುತ್ತದೆ. ಪರಿಷ್ಕೃತ ಸೆಡಾನ್ ಕಾರಿನ ಬೆಲೆಯು ರೂ. 40 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದ್ದು ಇದು ಟೊಯೊಟಾ ಕ್ಯಾಮ್ರಿ ಜೊತೆಗೆ ಸ್ಪರ್ಧಿಸಲಿದೆ.