ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್‌ನ ಸ್ಟೈಲ್ ವೇರಿಯಂಟ್‌ಗಳಲ್ಲಿ ಮತ್ತೆ ಸಿಗಲಿದೆ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್
ಸ್ಕೋಡಾ ಸ್ಲಾವಿಯಾ ಗಾಗಿ shreyash ಮೂಲಕ ಅಕ್ಟೋಬರ್ 16, 2023 12:15 pm ರಂದು ಪ್ರಕಟಿಸಲಾಗಿದೆ
- 40 Views
- ಕಾಮೆಂಟ್ ಅನ್ನು ಬರೆಯಿರಿ
ಜೆಕ್ ಕಾರು ತಯಾರಕರು ಸ್ಕೋಡಾ ಕುಶಾಕ್‌ನ ಸ್ಟೈಲ್ ವೇರಿಯಂಟ್‌ನ ಅಲಾಯ್ ವ್ಹೀಲ್‌ಗಳನ್ನು ಕೂಡ ಬದಲಾಯಿಸಿದ್ದಾರೆ.
- ಬಿಡುಗಡೆಯ ಸಮಯದಲ್ಲಿ, ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾದಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಅನ್ನು ನೀಡಲಾಗಿತ್ತು ಆದರೆ ನಂತರ ಪೂರೈಕೆ ಸರಪಳಿಯಲ್ಲಿನ ಸಮಸ್ಯೆಗಳಿಂದ ಅದನ್ನು ನಿಲ್ಲಿಸಲಾಯಿತು.
- ಇದು ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ ಎರಡರ ಟಾಪ್-ಸ್ಪೆಕ್ ಸ್ಟೈಲ್ ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ.
- ಈ ಎರಡೂ ಮಾಡೆಲ್‌ಗಳು ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಫ್ರಂಟ್ ಸೀಟುಗಳು ಮತ್ತು ಇಲ್ಯುಮಿನೇಟೆಡ್ ಫುಟ್‌ವೆಲ್ ಅನ್ನು ಸಹ ಪಡೆಯುತ್ತವೆ.
- ಆದರೆ, 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಸ್ಕೋಡಾ ಕುಶಾಕ್‌ನ ಮಾಂಟೆ ಕಾರ್ಲೋ ಆವೃತ್ತಿಯಲ್ಲಿ ಈಗಾಗಲೇ ಲಭ್ಯವಿದೆ.
- ಸ್ಲಾವಿಯಾ ಮತ್ತು ಕುಶಾಕ್ ಎರಡರ ಬೆಲೆಗಳು ರೂ. 10.89 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ)
ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್ ಈಗ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಅನ್ನು ಮರಳಿ ಪಡೆದಿವೆ, ಅದನ್ನು ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯಿಂದಾಗಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಎರಡೂ ಮಾಡೆಲ್‌ಗಳ ಟಾಪ್-ಸ್ಪೆಕ್ ಸ್ಟೈಲ್ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಆದರೆ, ಕುಶಾಕ್‌ನ ಮಾಂಟೆ ಕಾರ್ಲೋ ಆವೃತ್ತಿಯಲ್ಲಿ ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಈಗಾಗಲೇ ನೀಡಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.
ಸ್ಕೋಡಾ ಇತ್ತೀಚೆಗೆ ಎರಡೂ ಕಾರುಗಳ ಬೆಲೆಯನ್ನು ಸೀಮಿತ ಅವಧಿಯವರೆಗೆ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಬೆಲೆಯನ್ನು ಪರಿಷ್ಕರಿಸಿದೆ. ವೇರಿಯಂಟ್-ವಾರು ಪರಿಷ್ಕೃತ ಬೆಲೆಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಫೀಚರ್‌ಗಳು
10 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಹೊರತುಪಡಿಸಿ, ಈ ಎರಡೂ ಸ್ಕೋಡಾ ಕಾರುಗಳ ಸ್ಟೈಲ್ ವೇರಿಯಂಟ್‌ಗಳು ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಫ್ರಂಟ್ ಸೀಟುಗಳು ಮತ್ತು ಫುಟ್‌ವೆಲ್ ಇಲ್ಯುಮಿನೇಷನ್ ಫೀಚರ್ ಅನ್ನು ಹೊಂದಿವೆ. ಸ್ಲಾವಿಯಾ ಮತ್ತು ಕುಶಾಕ್ ನಡುವಿನ ಸಾಮಾನ್ಯ ಫೀಚರ್‌ಗಳನ್ನು 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳನ್ನು ಸಹ ಒಳಗೊಂಡಿದೆ. ಇದರ ಹೊರತಾಗಿ, ಬಿಲ್ಟ್ ಇನ್ ಡ್ಯಾಶ್‌ಕ್ಯಾಮ್‌ನ ಫೀಚರ್ ಅನ್ನು ಸ್ಲಾವಿಯಾದ ಆಂಬಿಷನ್ ಪ್ಲಸ್ ವೇರಿಯಂಟ್‌ನಲ್ಲಿ ಸಹ ಒದಗಿಸಲಾಗಿದೆ.
ಸುರಕ್ಷತೆಗಾಗಿ, ಎರಡೂ ಕಾರುಗಳು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾದಂತಹ ಫೀಚರ್‌ಗಳನ್ನು ಹೊಂದಿವೆ.
ಇದನ್ನೂ ಪರಿಶೀಲಿಸಿ: ರೂ. 15.52 ಲಕ್ಷ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾದ ಸ್ಕೋಡಾ ಸ್ಲಾವಿಯಾ ಮ್ಯಾಟ್ ಆವೃತ್ತಿ
ಕುಶಾಕ್‌ನ ವಿಭಿನ್ನ ರೀತಿಯ ಅಲಾಯ್ ವ್ಹೀಲ್‌ಗಳು
ಈ ಹಿಂದೆ, ಸ್ಕೋಡಾ ಕುಶಾಕ್‌ನ ಸ್ಟೈಲ್ ವೇರಿಯಂಟ್ ಡ್ಯುಯಲ್-ಟೋನ್ 17-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿತ್ತು. ಆದರೆ, ಈಗ ಅದೇ ಗಾತ್ರದ ಸಿಂಪಲ್ ಆಗಿ ಕಾಣುವ ಸಿಲ್ವರ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ. ಮತ್ತೊಂದೆಡೆ, ಕುಶಾಕ್‌ನ ಮಾಂಟೆ ಕಾರ್ಲೊ ಆವೃತ್ತಿಯು 5-ಸ್ಪೋಕ್ ಡ್ಯುಯಲ್-ಟೋನ್ 17-ಇಂಚಿನ ವ್ಹೀಲ್‌ಗಳನ್ನು ಒಳಗೊಂಡಿದೆ. ಸ್ಕೋಡಾ ಎರಡೂ ವ್ಹೀಲ್ ವಿನ್ಯಾಸಗಳನ್ನು ವೇಗಾ ಎಂಬ ಒಂದೇ ಹೆಸರಿನಿಂದ ಲೇಬಲ್ ಮಾಡಿದೆ.
ಪವರ್‌ಟ್ರೇನ್ ಆಯ್ಕೆಗಳು
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ ಎರಡೂ 1-ಲೀಟರ್ ಟರ್ಬೊ ಪೆಟ್ರೋಲ್ (115PS/178Nm) ಮತ್ತು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (150PS/250Nm) ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತವೆ. 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಎರಡೂ ಎಂಜಿನ್‌ಗಳೊಂದಿಗೆ ಪ್ರಮಾಣಿತವಾಗಿದೆ, ಆದರೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಸೀಮಿತ ಅವಧಿಗೆ ಎರಡೂ ಕಾರುಗಳ ಬೇಸ್ ಬೆಲೆಗಳನ್ನು ಕಡಿಮೆ ಮಾಡಿರುವುದರಿಂದ, ಸ್ಲಾವಿಯಾ ಮತ್ತು ಕುಶಾಕ್‌ನ ಬೆಲೆ ಈಗ ರೂ. 10.89 ಲಕ್ಷದಿಂದ ಪ್ರಾರಂಭವಾಗುತ್ತವೆ. ಸ್ಲಾವಿಯಾದ ಟಾಪ್ ವೆರಿಯಂಟ್ ಬೆಲೆ 19.12 ಲಕ್ಷ ರೂ.ಗಳಾಗಿದ್ದು, ಕುಶಾಕ್ ಟಾಪ್ ಮಾದರಿಯ ಬೆಲೆ 20.01 ಲಕ್ಷ ರೂ. ಆಗಿದೆ.
ಸ್ಕೋಡಾ ಸ್ಲಾವಿಯಾ ಪ್ರೀಮಿಯಂ ಸೆಡಾನ್ ಕಾರುಗಳಾದ ಹೊಂಡಾ ಸಿಟಿ, ಫೋಕ್ಸ್‌ವ್ಯಾಗನ್ ಟೈಗನ್, ಹುಂಡೈ ವೆರ್ನಾಗಳೊಂದಿಗೆ ಸ್ಪರ್ಧಿಸಿದರೆ, ಸ್ಕೋಡಾ ಕುಶಾಕ್ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, MG ಆಸ್ಟರ್, ಹೋಂಡಾ ಎಲಿವೇಟ್, ಟೊಯೋಟಾ ಹೈರೈಡರ್, ಮಾರುತಿ ಗ್ರ್ಯಾಂಡ್ ವಿಟಾರಾ, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ಗಳೊಂದಿಗೆ ಸ್ಪರ್ಧಿಸುತ್ತದೆ.
ಎಲ್ಲವೂ ಎಕ್ಸ್‌ಶೋರೂಂ ಪ್ಯಾನ್ ಇಂಡಿಯಾ ಬೆಲೆಗಳಾಗಿವೆ.
ಇನ್ನಷ್ಟು ಓದಿ: ಸ್ಲಾವಿಯಾ ಆನ್ ರೋಡ್ ಬೆಲೆ