• English
  • Login / Register

Nissan Magnite Facelift ಅನ್ನು ಮೊದಲ ಬಾರಿಗೆ ರಹಸ್ಯ ಟೆಸ್ಟಿಂಗ್‌ ಮಾಡುವಾಗ ಪತ್ತೆ

ನಿಸ್ಸಾನ್ ಮ್ಯಾಗ್ನೈಟ್ 2020-2024 ಗಾಗಿ rohit ಮೂಲಕ ಮಾರ್ಚ್‌ 22, 2024 08:27 pm ರಂದು ಪ್ರಕಟಿಸಲಾಗಿದೆ

  • 59 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೇಸ್‌ಲಿಫ್ಟ್ ಆಗಿರುವ ಮ್ಯಾಗ್ನೈಟ್ 2024ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ

2024 Nissan Magnite spied

  • ನಿಸ್ಸಾನ್ 2020 ರ ಕೊನೆಯಲ್ಲಿ ಭಾರತದಲ್ಲಿ 'ಮ್ಯಾಗ್ನೈಟ್' ಅನ್ನು ಪರಿಚಯಿಸಿತು.
  •  ಫೇಸ್‌ಲಿಫ್ಟ್ ಆಗಿರುವ SUV ಹೊಸ ಅಲೊಯ್ ವೀಲ್ಸ್ ನೊಂದಿಗೆ ಬರಲಿದೆ ಎಂದು ಸ್ಪೈ ಫೋಟೋಗಳು ತೋರಿಸುತ್ತವೆ.
  •  ಇದು ಟ್ವೀಕ್ ಮಾಡಲಾದ ಬಂಪರ್‌ಗಳು ಮತ್ತು ಅಪ್ಡೇಟ್ ಆಗಿರುವ ಲೈಟ್ಸ್ ಅನ್ನು ಪಡೆಯುವ ನಿರೀಕ್ಷೆಯಿದೆ.
  •  ಕ್ಯಾಬಿನ್ ಅನ್ನು ಇನ್ನೂ ಸ್ಪೈ ಮಾಡಲಾಗಿಲ್ಲ ಆದರೆ ಇದು ಹೊಸ ಅಪ್ಹೋಲ್ಸ್ಟರಿಯನ್ನು ಪಡೆಯಬಹುದು.
  •  ಫೇಸ್‌ಲಿಫ್ಟ್‌ನಲ್ಲಿನ ಹೆಚ್ಚುವರಿ ಫೀಚರ್ ಗಳಲ್ಲಿ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಒಳಗೊಂಡಿರಬಹುದು.
  •  ಇದು ನ್ಯಾಚುರಲಿ ಆಸ್ಪಿರೇಟೆಡ್ ಮತ್ತು ಟರ್ಬೊ-ಪೆಟ್ರೋಲ್ ಆಯ್ಕೆಗಳನ್ನು ಒಳಗೊಂಡಂತೆ ಪ್ರಸ್ತುತ ಮಾಡೆಲ್ ನಂತೆಯೇ ಅದೇ ಎಂಜಿನ್‌ಗಳು ಮತ್ತು ಟ್ರಾನ್ಸ್‌ಮಿಷನ್‌ಗಳನ್ನು ಪಡೆಯುವ ಸಾಧ್ಯತೆಯಿದೆ.

 ಕೆಮಫ್ಲೋಜ್ ಆಗಿರುವ ಟೆಸ್ಟ್ ಗಾಡಿಯ ಸ್ಪೈ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ನಿಸ್ಸಾನ್ ಮ್ಯಾಗ್ನೈಟ್ ಈ ವರ್ಷ ತನ್ನ ಮೊದಲ ಪ್ರಮುಖ ಅಪ್ಡೇಟ್ ಅನ್ನು ಪಡೆಯಲಿದೆ ಎಂದು ತೋರುತ್ತಿದೆ. ಡಿಸೆಂಬರ್ 2024 ರ ವೇಳೆಗೆ ಮ್ಯಾಗ್ನೈಟ್ ಭಾರತದಲ್ಲಿ ನಾಲ್ಕು ವರ್ಷಗಳಷ್ಟು ಪೂರೈಸುವ ಈ ಸಮಯದಲ್ಲಿ, SUVಗೆ ಈ ಅಪ್ಡೇಟ್ ಸೂಕ್ತವಾದ ಸಮಯದಲ್ಲಿ ನೀಡಲಾಗುತ್ತಿದೆ.

 ಸ್ಪೈ ಶಾಟ್ಸ್ ಏನನ್ನು ತೋರಿಸುತ್ತದೆ?

2024 Nissan Magnite spied

 ಅತಿ ಹೆಚ್ಚಿನ ಮಟ್ಟದಲ್ಲಿ ಕೆಮಫ್ಲೋಜ್ ಮಾಡಿದ್ದರೂ ಕೂಡ, SUV ಆಕಾರವನ್ನು ನಿಸ್ಸಾನ್ ಮ್ಯಾಗ್ನೈಟ್ ಎಂದು ಗುರುತಿಸಬಹುದಾಗಿದೆ. ಅಪ್ಡೇಟ್ ಆಗಿರುವ SUV ಯ ಮೊದಲ ಕೆಲವು ಸ್ಪೈ ಫೋಟೋಗಳು ಇದು ಒಟ್ಟಾರೆಯಾಗಿ ಒಂದೇ ರೀತಿಯ ಆಕಾರವನ್ನು ಹೊಂದಿದೆ ಎಂದು ಬಹಿರಂಗಪಡಿಸುತ್ತದೆ, ಮತ್ತು ನಾವು ಹೊಸ ಅಲೊಯ್ ವೀಲ್ಸ್ ಅನ್ನು ನೋಡಬಹುದು. ಮುಂಭಾಗ, ಲೈಟ್‌ಗಳು ಮತ್ತು ಬಂಪರ್‌ಗಳ ಅಪ್ಡೇಟ್ ನಂತಹ ಕೆಲವು ಸಣ್ಣ ಬದಲಾವಣೆಗಳನ್ನು ನಿಸ್ಸಾನ್ ಮಾಡಬಹುದು ಎಂದು ನಾವು ಭಾವಿಸುತ್ತೇವೆ.

 ನಿರೀಕ್ಷಿಸಲಾಗಿರುವ ಕ್ಯಾಬಿನ್ ಮತ್ತು ಫೀಚರ್ ಅಪ್ಡೇಟ್ ಗಳು

Nissan Magnite 8-inch touchscreen

 ನಾವು ಸ್ಪೈ ಶಾಟ್‌ಗಳಲ್ಲಿ ಅಪ್ಡೇಟ್ ಆಗಿರುವ ಮ್ಯಾಗ್ನೈಟ್‌ನ ಕ್ಯಾಬಿನ್ ಅನ್ನು ನೋಡಲು ಸಾಧ್ಯವಾಗದಿದ್ದರೂ ಕೂಡ, ಇದು ಹೊಸ ಸೀಟ್ ಕವರ್‌ಗಳನ್ನು ಮತ್ತು ಇತರ ಸಣ್ಣ SUV ಗಳೊಂದಿಗೆ ಸ್ಪರ್ಧಿಸಲು ಕೆಲವು ಹೆಚ್ಚುವರಿ ಫೀಚರ್ ಗಳನ್ನು ಪಡೆಯಬಹುದು ಎಂದು ನಮಗೆ ಅನಿಸುತ್ತದೆ. ಇದರಲ್ಲಿ ಸನ್‌ರೂಫ್, ಆಟೋ-ಡಿಮ್ಮಿಂಗ್ IRVM ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಕೂಡ ಇರಬಹುದು. ಇದು 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಒಪ್ಶನಲ್ ವೈರ್‌ಲೆಸ್ ಫೋನ್ ಚಾರ್ಜಿಂಗ್‌ನಂತಹ ಫೀಚರ್ ಗಳನ್ನು ಮುಂದುವರಿಸಬಹುದು.

 2024 ಮ್ಯಾಗ್ನೈಟ್‌ನ ಸುರಕ್ಷತಾ ಅಂಶಗಳನ್ನು ಹೆಚ್ಚಿಸಲು ಆರು ಏರ್‌ಬ್ಯಾಗ್‌ಗಳನ್ನು ನೀಡಬಹುದು, ಇದು ಈಗಾಗಲೇ 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಬರುತ್ತದೆ.

 ಇದನ್ನು ಕೂಡ ಓದಿ: ಭಾರತದಲ್ಲಿ ಕ್ರೂಸ್ ಕಂಟ್ರೋಲ್ ಹೊಂದಿರುವ 10 ಅತ್ಯಂತ ಕೈಗೆಟುಕುವ ಬೆಲೆಯ ಕಾರುಗಳ ಪಟ್ಟಿ ಇಲ್ಲಿವೆ

 ಎಂಜಿನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ

 ನಿಸ್ಸಾನ್ ತನ್ನ ಮ್ಯಾಗ್ನೈಟ್‌ಗಾಗಿ ಎಂಜಿನ್ ಅಥವಾ ಗೇರ್‌ಬಾಕ್ಸ್ ಆಯ್ಕೆಗಳನ್ನು ಬದಲಾಯಿಸುತ್ತದೆ ಎಂದು ನಾವು ಭಾವಿಸುವುದಿಲ್ಲ. ಸಬ್-4m SUV ಯನ್ನು ಪ್ರಸ್ತುತ ಕೆಳಗಿನ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ:

 ಸ್ಪೆಸಿಫಿಕೇಷನ್

 1-ಲೀಟರ್ ನಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

 1-ಲೀಟರ್ ಟರ್ಬೊ-ಪೆಟ್ರೋಲ್

 ಪವರ್

72 PS

100 PS

ಟಾರ್ಕ್

96 Nm

160 Nm, 152 Nm

 ಟ್ರಾನ್ಸ್‌ಮಿಷನ್‌

 5-ಸ್ಪೀಡ್ MT, 5-ಸ್ಪೀಡ್ AMT

 5- ಸ್ಪೀಡ್ MT, CVT

Nissan Magnite AMT gearbox

 ಮ್ಯಾಗ್ನೈಟ್‌ಗೆ 2023 ರ ಎರಡನೇ ಭಾಗದಲ್ಲಿ ಅದರ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ 5-ಸ್ಪೀಡ್ AMT ಆಟೋಮ್ಯಾಟಿಕ್ ಆಯ್ಕೆಯನ್ನು ನೀಡಲಾಯಿತು. 2020 ರ ಕೊನೆಯಲ್ಲಿ SUV ಬಿಡುಗಡೆಯಾದಾಗಿನಿಂದ, ಟರ್ಬೊ-ಪೆಟ್ರೋಲ್ ವರ್ಷನ್ CVT ಆಟೋಮ್ಯಾಟಿಕ್ ಆಯ್ಕೆಯನ್ನು ಹೊಂದಿದೆ.

 ನಿರೀಕ್ಷಿಸಲಾಗಿರುವ ಲಾಂಚ್ ಮತ್ತು ಬೆಲೆ

Nissan Magnite

 ಫೇಸ್‌ಲಿಫ್ಟ್ ಆಗಿರುವ ನಿಸ್ಸಾನ್ ಮ್ಯಾಗ್ನೈಟ್ ಅನ್ನು 2024 ರ ಅಂತಿಮ ಕ್ವಾರ್ಟರ್ ನಲ್ಲಿ ಪ್ರಸ್ತುತ ಮಾಡೆಲ್‌ಗಿಂತ ಸ್ವಲ್ಪ ಹೆಚ್ಚಿನ ಪ್ರೀಮಿಯಂ ಬೆಲೆಯಲ್ಲಿ ಬಿಡುಗಡೆ ಮಾಡಬಹುದು ಎಂಬುದು ನಮ್ಮ ಅನಿಸಿಕೆಯಾಗಿದೆ, ಇದರ ಬೆಲೆಯು ರೂ 6 ಲಕ್ಷದಿಂದ ರೂ 11.27 ಲಕ್ಷದವರೆಗೆ (ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಇರಬಹುದು. ಇದು ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ಮಹೀಂದ್ರಾ XUV300 ಮತ್ತು ಮುಂಬರುವ ಸ್ಕೋಡಾ ಸಬ್-4m SUV ಜೊತೆಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ. ಫೇಸ್‌ಲಿಫ್ಟ್ ಆಗಿರುವ ಮ್ಯಾಗ್ನೈಟ್ ಮಾರುತಿ ಫ್ರಾಂಕ್ಸ್ ಸಬ್-4m ಕ್ರಾಸ್‌ಒವರ್‌ಗೆ ಪರ್ಯಾಯ ಆಯ್ಕೆ ಕೂಡ ಆಗಲಿದೆ.

 ಚಿತ್ರದ ಮೂಲ

 ಇನ್ನಷ್ಟು ಓದಿ: ಮ್ಯಾಗ್ನೈಟ್ AMT

was this article helpful ?

Write your Comment on Nissan ಮ್ಯಾಗ್ನೈಟ್ 2020-2024

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience