ರೂ.7.39 ಲಕ್ಷಕ್ಕೆ ಬಿಡುಗಡೆಯಾಗಲಿದೆ ನಿಸಾನ್ ಮ್ಯಾಗ್ನೈಟ್ ಗೆಝಾ ಆವೃತ್ತಿ
ನಿಸ್ಸಾನ್ ಮ್ಯಾಗ್ನೈಟ್ 2020-2024 ಗಾಗಿ ansh ಮೂಲಕ ಮೇ 29, 2023 02:00 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಈ ವಿಶೇಷ ಆವೃತ್ತಿ ಮ್ಯಾಗ್ನೈಟ್‌ನ ಲೋವರ್-ಎಂಡ್ ವೇರಿಯೆಂಟ್ ಅನ್ನು ಆಧರಿಸಿದ್ದು, ಇದು ಇನ್ಫೊಟೇನ್‌ಮೆಂಟ್ ಮತ್ತು ಮ್ಯೂಸಿಕ್ ಮೇಲಿನ ಅಪ್ಡೇಟ್ ಗಳನ್ನು ಪಡೆದಿದೆ
- XL ಮ್ಯಾನುವಲ್ ವೇರಿಯೆಂಟ್ ಆಧಾರಿತವಾಗಿರುವಂತೆ ತೋರುತ್ತದೆ.
- 9-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಮತ್ತು JBL ಸೌಂಡ್ ಸಿಸ್ಟಮ್ ಅನ್ನು ಪಡೆದಿದೆ.
- ಹೊಸ ಬಗೆಯ ಬೇಝ್ ಅಫ್‌ಹೋಲ್ಸ್‌ಟ್ರಿ ಮತ್ತು ರಿಯರ್ ವ್ಯೂ ಕ್ಯಾಮರಾ ಹೊಂದಿದೆ.
- ಈ ವಿಶೇಷ ಎಡಿಷನ್ ಕೇವಲ ಬೇಸ್ 96PS 1-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್‌ನೊಂದಿಗೆ ಮಾತ್ರ ಬರುತ್ತದೆ.
ನಿಸಾನ್ ಮ್ಯಾಗ್ನೈಟ್ ಈಗಷ್ಟೇ ಹೊಸ ಗೆಝಾ ವಿಶೇಷ ಎಡಿಷನ್ ಅನ್ನು ಭಾರತದಲ್ಲಿ ಪಡೆದಿದೆ. ಮೇಲಿನ ಒಂದು ಬೇಸ್ XL ವೇರಿಯೆಂಟ್ ಅನ್ನು ಆಧರಿಸಿ, ಇದರ ಇನ್ಫೋಟೇನ್‌ಮೆಂಟ್ ಮತ್ತು ಸೌಂಡ್ ಸಿಸ್ಟಮ್ ಅನ್ನು ಸೂಕ್ಷ್ಮವಾಗಿ ನವೀಕರಿಸಲಾಗಿದೆ.
ಬೆಲೆ
ಗೆಝಾ ಎಡಿಷನ್ |
XL ಮ್ಯಾನುವಲ್ ವೇರಿಯೆಂಟ್ |
ವ್ಯತ್ಯಾಸ |
ರೂ 7.39 ಲಕ್ಷ |
ರೂ 7.04 ಲಕ್ಷ |
+ ರೂ 35,000 |
ಈ ವಿಶೇಷ, ಎಡಿಷನ್ XL ವೇರಿಯೆಂಟ್‌ಗೆ ಹೋಲಿಸಿದರೆ ರೂ. 35,000ದಷ್ಟು ದುಬಾರಿಯಾಗಿದ್ದು, ಇದರಲ್ಲಿ ಕೇವಲ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮಾತ್ರ ಲಭ್ಯವಿರುತ್ತದೆ. ಈ ಹೆಚ್ಚುವರಿ ಬೆಲೆಗೆ ಯಾವೆಲ್ಲಾ ನವೀಕರಣಗಳನ್ನು ಪಡೆದಿದೆ ಎಂಬುದನ್ನು ನೋಡೋಣ.
ಹೊಸತೇನಿದೆ
ಈ ವಿಶೇಷ ಆವೃತ್ತಿ ಮ್ಯೂಸಿಕ್‌ಗೆ(ಗೆಝಾ ಎಂದರೆ ಜಪಾನಿ ಭಾಷೆಯಲ್ಲಿ ಸಂಗೀತ) ಒತ್ತು ನೀಡಿದ್ದು, ಇದು JBL ಪ್ರೀಮಿಯಂ ಸೌಂಡ್ ಸಿಸ್ಟಮ್ ಮತ್ತು 9 ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಅನ್ನು ಪಡೆದಿದೆ. ಇದಲ್ಲದೆ, ಈ ವಿಶೇಷ ಎಡಿಷನ್‌ನಲ್ಲಿ ವೈರ್‌ಲೆಸ್ ಆ್ಯಂಡ್ರೋ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ರಿಯರ್ ಪಾರ್ಕಿಂಗ್ ಕ್ಯಾಮರಾ, ಬೇಝ್ ಅಪ್‌ಹೋಲ್ಸ್‌ಟ್ರಿ, ಆ್ಯಪ್ ಆಧಾರಿತ ನಿಯಂತ್ರಣಗಳೊಂದಿಗೆ ಆ್ಯಂಬಿಯೆಂಟ್ ಲೈಟಿಂಗ್ ಮತ್ತು ಶಾರ್ಕ್ ಫಿನ್ ಆ್ಯಂಟೆನಾವನ್ನು ಪಡೆದಿದೆ.
ಇದನ್ನೂ ಓದಿ: ಮುಂದಿನ ವರ್ಷಗಳಲ್ಲಿ ಭಾರತಕ್ಕಾಗಿ ಟಾಪ್ 7 ಕಾರು ಬ್ರಾಂಡ್‌ಗಳ ಯೋಜನೆಗಳು ಏನು?
ಪವರ್‌ಟ್ರೇನ್
ಈ ಮ್ಯಾಗ್ನೈಟ್ ಗೆಝಾ ಆವೃತ್ತಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾದ 1-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್-ಇಂಜಿನ್‌ನೊಂದಿಗೆ (72PS ಮತ್ತು 96Nm) ಬರುತ್ತದೆ. ಈ SUVಯ ಟಾಪ್ ಎಂಡ್ ವೇರಿಯೆಂಟ್‌ಗಳು ಕೂಡಾ 1-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ (100PS ಮತ್ತು 160Nm ತನಕ) ಹೊಂದಿದ್ದು 5-ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
ಪ್ರತಿಸ್ಪರ್ಧಿಗಳು
ರೂ 6 ಲಕ್ಷ ಮತ್ತು ರೂ 11.02 ಲಕ್ಷದ (ಎಕ್ಸ್-ಶೋರೂಂ) ನಡುವೆ ಬೆಲೆ ನಿಗದಿಪಡಿಸಲಾದ ಈ ನಿಸಾನ್ ಮ್ಯಾಗ್ನೈಟ್, ಟಾಟ ನೆಕ್ಸಾನ್, ಕಿಯಾ ಸೋನೆಟ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ XUV300ಗೆ ಪೈಪೋಟಿ ನೀಡುತ್ತದೆ.
ಇನ್ನಷ್ಟು ಓದಿ : ಮ್ಯಾಗ್ನೈಟ್‌ನ ಆನ್ ರೋಡ್ ಬೆಲೆ