ಭಾರತದಲ್ಲಿನ ಅತ್ಯಂತ ದುಬಾರಿ ಹ್ಯುಂಡೈನ ಬೆಲೆ ಪ್ರಕಟ!
ಹುಂಡೈ ಅಯಾನಿಕ್ 5 ಗಾಗಿ tarun ಮೂಲಕ ಜನವರಿ 13, 2023 05:44 pm ರಂದು ಪ್ರಕಟಿಸಲಾಗಿದೆ
- 44 Views
- ಕಾಮೆಂಟ್ ಅನ್ನು ಬರೆಯಿರಿ
ಪ್ರೀಮಿಯಂ ಎಲೆಕ್ಟ್ರಿಕ್ ಕ್ರಾಸ್‌ಓವರ್ ಹೇಳಿಕೊಂಡಿದೆ 631 ಕಿಲೋಮೀಟರ್‌ಗಳ ರೇಂಜ್
-
ರೂ. 44.95 ಲಕ್ಷಕ್ಕೆ ಸಿಂಗಲ್ ಫುಲ್ಲೀ ಲೋಡೆಡ್ ವೇರಿಯಂಟ್‌ನಲ್ಲಿ ಲಭ್ಯವಿದೆ.
-
72.6kWh ಬ್ಯಾಟರಿ ಪ್ಯಾಕ್ ಮತ್ತು ರಿಯರ್ ವ್ಹೀಲ್‌ಗಳನ್ನು ಡ್ರೈವ್ ಮಾಡಲು 217PS/350Nm ಮೋಟಾರ್ ಅನ್ನು ಹೊಂದಿದೆ.
-
350kW ಚಾರ್ಜರ್ 18 ನಿಮಿಷಗಳಲ್ಲಿ ಬ್ಯಾಟರಿಯನ್ನು 80 ಶೇಕಡಾದಷ್ಟು ಚಾರ್ಜ್ ಮಾಡುತ್ತದೆ; ಅಷ್ಟೇ ಚಾರ್ಜ್ ಮಾಡಲು 50kW ಚಾರ್ಜರ್ ಒಂದು ಗಂಟೆ ತೆಗೆದುಕೊಳ್ಳುತ್ತದೆ.
-
12.3-ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್, ಆಟೋ ಫ್ಲಶ್ ಡೋರ್ ಹ್ಯಾಂಡಲ್‌ಗಳು, ಪವರ್‌ಯುಕ್ತ ಮುಂಭಾಗದ ಮತ್ತು ಹಿಂಭಾಗದ ಸೀಟುಗಳು ಮತ್ತು ADAS ಅನ್ನು ಒಳಗೊಂಡಿದೆ.
-
ಕಿಯಾ ಇವಿ6, ವೋಲ್ವೋ ಎಕ್ಸ್‌ಸಿ40 ರೀಚಾರ್ಜ್, ಮತ್ತು ಮುಂಬರುವ ಸ್ಕೋಡಾ ಎನ್ಯಾಕ್ iV ಗೆ ಪ್ರತಿಸ್ಪರ್ಧಿ.
ಹ್ಯುಂಡೈ ಆಟೋ ಎಕ್ಸ್‌ಪೋ 2023 ರಲ್ಲಿ ಅಯೋನಿಕ್ 5 ಬೆಲೆಗಳನ್ನು ಪ್ರಕಟಿಸಿದೆ. ಈ ಕಾರು ತಯಾರಕರ ಎರಡನೇ ಎಲೆಕ್ಟ್ರಿಕ್ ಮಾಡಲ್‌ನ ಬೆಲೆ ಈ ದೇಶದಲ್ಲಿ ರೂ. 44.95 ಲಕ್ಷ ಮತ್ತು ಸಿಂಗಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಗಳ ಮೂಲಕ ರೂ.1 ಲಕ್ಷಕ್ಕೆ ಬುಕಿಂಗ್ ನಡೆಯುತ್ತಿದೆ.
ಅಯೋನಿಕ್ 5, 72.6kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ARAI ಕ್ಲೈಮ್‌ನ ಪ್ರಕಾರ ಒಂದು ಚಾರ್ಜ್‌ನಲ್ಲಿ 631 ಕಿಲೋಮೀಟರ್‌ಗಳನ್ನು ಕ್ರಮಿಸುತ್ತದೆ. ಇದರ ಏಕೈಕ ಎಲೆಕ್ಟ್ರಾನಿಕ್ ಮೋಟಾರ್ ರಿಯರ್ ವ್ಹೀಲ್‌ಗಳನ್ನು ಡ್ರೈವ್ ಮಾಡುತ್ತದೆ. ಇದು 217PS ಮತ್ತು 350Nm ಕಾರ್ಯಕ್ಷಮತೆಯನ್ನು ನೀಡುತ್ತದೆ. ಎಲೆಕ್ಟ್ರಿಕ್ ಕ್ರಾಸ್ಓವರ್ 350kW ತನಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಇದು ಕೇವಲ 18 ನಿಮಿಷಗಳಲ್ಲಿ 80 ಪ್ರತಿಶತದಷ್ಟು ಚಾರ್ಜ್ ಆಗಲು ಸಹಾಯ ಮಾಡುತ್ತದೆ, ಆದರೆ 150kW ಚಾರ್ಜರ್ 21 ನಿಮಿಷಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಭಾರತೀಯ ಖರೀದಿದಾರರಿಗೆ ಹೆಚ್ಚು ಸಹಾಯಕವಾದ ಸಂಗತಿಯೆಂದರೆ 50kW ವೇಗದ ಚಾರ್ಜರ್ ಒಂದು ಗಂಟೆಯಲ್ಲಿ ಅಷ್ಟೇ ಚಾರ್ಜ್ ಆಗಬಹುದು ಆದರೆ 11kW ಹೋಮ್ ಚಾರ್ಜರ್ ಸುಮಾರು ಏಳು ಗಂಟೆಗಳಲ್ಲಿ ಅದನ್ನು ಪೂರ್ಣವಾಗಿ ಮಾಡಬಹುದು.
ಹ್ಯುಂಡೈ ಅಯೋನಿಕ್ 5, ಎಲ್‌ಇಡಿ ಲೈಟಿಂಗ್, 20-ಇಂಚಿನ ಅಲೋಯ್‌ಗಳು, ಆಟೋ ಫ್ಲಶ್ ಡೋರ್ ಹ್ಯಾಂಡಲ್‌ಗಳು, ಪವರ್‌ಯುಕ್ತ ಮತ್ತು ಬೆಚ್ಚಗಿನ ಹಿಂದಿನ ಮತ್ತು ಮುಂದಿನ ಸೀಟುಗಳು, ವಿಹಂಗಮವಾದ ಸನ್‌ರೂಫ್, ಟಚ್‌ಸ್ಕ್ರೀನ್ ಇನ್‌ಫೋಟೇನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇ ಹಾಗೂ ಬೋಸ್ 8-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಹೊಂದಿರುವ ಡ್ಯುಯಲ್-12.3-ಇಂಚಿನ ಡಿಸ್‌ಪ್ಲೇಗಳನ್ನು ಹೊಂದಿದ್ದು ಬಹಳಷ್ಟು ವೈಶಿಷ್ಟ್ಯ-ಭರಿತವಾಗಿದೆ.
ಆರು ಏರ್‌ಬ್ಯಾಗ್‌ಗಳು, ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಂತೆ ಮುಂದಿನ ಡಿಕ್ಕಿ ಎಚ್ಚರಿಕೆ, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿಪ್ ಕ್ರೂಸ್ ನಿಯಂತ್ರಣ ಮತ್ತು 360-ಡಿಗ್ರಿ ಕ್ಯಾಮರಾವನ್ನು ಒಳಗೊಂಡ ADAS (advanced driver assistance system/ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಅನ್ನು ಹೆಚ್ಚಿನ ಸುರಕ್ಷತೆಗಾಗಿ ಇದು ಹೊಂದಿದೆ.
ಹ್ಯುಂಡೈ ಅಯೋನಿಕ್ 5 ಅನ್ನು ಸ್ಥಳೀಯವಾಗಿ ಜೋಡಣೆ ಮಾಡಿರುವುದರಿಂದ, ಸಂಪೂರ್ಣ ಆಮದು ಮಾಡಿಕೊಂಡ ಇದರ ಪ್ರತಿಸ್ಪರ್ಧಿಯಾದ ಕಿಯಾ ಇವಿ6 ಗಿಂತ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿದೆ. ಇವೆರಡೂ ವೋಲ್ವೋ ಎಕ್ಸ್‌ಸಿ40 ರೀಚಾರ್ಜ್ ಮತ್ತು ಮುಂಬರುವ ಸ್ಕೋಡಾ ಎನ್ಯಾಕ್ iV ಗಳೊಂದಿಗೆ ಸ್ಪರ್ಧಿಸುತ್ತವೆ.