• English
  • Login / Register

Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್‌ ಖಾನ್

ಹುಂಡೈ ಅಯಾನಿಕ್ 5 ಗಾಗಿ shreyash ಮೂಲಕ ಡಿಸೆಂಬರ್ 06, 2023 10:29 am ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯುಂಡೈಯು ತನ್ನ ಸಂಸ್ಥೆಯ 1,100 ನೇ ಅಯಾನಿಕ್‌ ಅನ್ನು ಶಾರುಕ್‌ ಖಾನ್‌ ಗೆ ಹಸ್ತಾಂತರಿಸುವ ಮೂಲಕ ಈ ಸ್ಟಾರ್‌ ನಟ ಮತ್ತು ಕಾರು ತಯಾರಕ ಸಂಸ್ಥೆ ಸೇರಿಕೊಂಡು ಭಾರತದಲ್ಲಿ ತಮ್ಮ 25 ವರ್ಷಗಳ ಸಹಭಾಗಿತ್ವವನ್ನು ಆಚರಿಸಿಕೊಂಡರು

Shah Rukh Taking Delivery of Ioniq 5

  • ಶಾರುಕ್‌ ಖಾನ್‌ ಅವರು 1998ರಿಂದ ಹ್ಯುಂಡೈ ಸಂಸ್ಥೆಯ ಬ್ರಾಂಡ್‌ ಅಂಬಾಸಿಡರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ
  • ಅಯಾನಿಕ್ 5 EV‌ ವಾಹನವು ಭಾರತದಲ್ಲಿ ಹ್ಯುಂಡೈ ಸಂಸ್ಥೆಯ ಅತ್ಯುನ್ನತ ಕಾರು ಎನಿಸಿದೆ.
  • ಶಾರುಕ್‌ ಖಾನ್‌ ಅವರು 2020ರಲ್ಲಿ ಭಾರತದಲ್ಲಿ ಹ್ಯುಂಡೈ ಕ್ರೆಟಾ ಕಾರಿನ ಮೊದಲ ಮಾಲೀಕ ಎನಿಸಿದ್ದರು.
  • ಈ ನಟನ ಕಾರುಗಳ ಸಂಗ್ರಹದಲ್ಲಿ ರೋಲ್ಸ್‌ ರೋಯ್ಸ್‌ ಕಲಿನನ್‌ ಬ್ಲ್ಯಾಕ್‌ ಬ್ಯಾಜ್‌ ಸಹ ಒಳಗೊಂಡಿದೆ.

 ಹ್ಯುಂಡೈ ಅಯಾನಿಕ್‌ 5 ಕಾರಿನ ಅತ್ಯಾಧುನಿಕ ಶೈಲಿಯ ಚಾಸಿಸ್‌ ನಂತೆಯೇ ಅದರಲ್ಲಿ ಬಳಸಿಕೊಳ್ಳಲಾಗಿರುವ ತಂತ್ರಜ್ಞಾನವು ಸಹ ಅದ್ಭುತವಾಗಿದ್ದು, ಬಾಲಿವುಡ್‌ ತಾರೆ ಶಾರುಕ್‌ ಖಾನ್‌ ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು ಈ ವಾಹನವನ್ನು ಇಷ್ಟಪಟ್ಟಿದ್ದಾರೆ. ಆದರೆ ಶಾರುಕ್‌ ಖಾನ್‌ ಅವರು ಹ್ಯುಂಡೈ ಸಂಸ್ಥೆಯ ರಾಯಭಾರಿಯಾಗಿ 1998ರಿಂದಲೇ ಸೇವೆ ಸಲ್ಲಿಸುತ್ತಿದ್ದು, ತಮ್ಮ ನಿರಂತರ ಸಹಭಾಗಿತ್ವದ ಅಂಗವಾಗಿ ಅವರೀಗ ಅಯಾನಿಕ್‌ 5 EV ವಾಹನದ ಮಾಲೀಕರೆನಿಸಿದ್ದಾರೆ. 

ಹ್ಯುಂಡೈ ಸಂಸ್ಥೆಯ ಈ ಅಗ್ರಗಣ್ಯ ಎಲೆಕ್ಟ್ರಿಕ್‌ SUV ಯನ್ನು ಭಾರತದಲ್ಲಿ ಜನವರಿಯಲ್ಲಿ 2023 ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಖುದ್ದಾಗಿ ಶಾರುಕ್‌ ಖಾನ್‌ ಅವರೇ ಬಿಡುಗಡೆ ಮಾಡಿದ್ದರು. ಕಳೆದ ವಾರದಲ್ಲಿ ಅಯಾನಿಕ್‌ 5 ಕಾರು 1000 ಘಟಕಗಳ ಮಾರಾಟದ ಗಡಿಯನ್ನು ದಾಟಿದ್ದು, ಈ ಕಾರು ತಯಾರಕ ಸಂಸ್ಥೆಯು 1,100ನೇ ಘಟಕವನ್ನು ಶಾರುಕ್‌ ಖಾನ್‌ ಅವರಿಗೆ ನೀಡಿದೆ.

 

ಅಯಾನಿಕ್ 5‌ ಕಾರು ಶಾರುಕ್‌ ಗೆ ಒಪ್ಪುತ್ತದೆಯೇ?

Hyundai Ioniq 5 Interior

 ಹ್ಯುಂಡೈ ಸಂಸ್ಥೆಯ ಈ ಅಗ್ರಗಣ್ಯ ಎಲೆಕ್ಟ್ರಿಕ್ SUVಯು (ಭಾರತದಲ್ಲಿ) ಡ್ಯುವಲ್‌ ಇಂಟಗ್ರೇಟೆಡ್‌ 12.3 ಇಂಚಿನ ಡಿಸ್ಪ್ಲೇ ಸೆಟಪ್‌ (ಇನ್ಫೊಟೈನ್‌ ಮೆಂಟ್‌ ಮತ್ತು ಚಾಲಕನ ಡಿಸ್ಪ್ಲೇಗಾಗಿ), ವೈರ್‌ ಲೆಸ್‌ ಫೋನ್‌ ಚಾರ್ಜರ್,‌ ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳು, ಡ್ಯುವಲ್‌ ಜೋನ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಪ್ಯಾನೊರಾಮಿಕ್‌ ಸನ್‌ ರೂಫ್‌ ಅನ್ನು ಹೊಂದಿದೆ. ಇದರ ಸುರಕ್ಷತಾ ಪಟ್ಟಿಯು 6 ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), 360 ಡಿಗ್ರಿ ಕ್ಯಾಮರಾ ಮತ್ತು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಗಳನ್ನು ಒಳಗೊಂಡಿದೆ.

ಇದನ್ನು ಸಹ ನೋಡಿರಿ: ಎಂ.ಎಸ್‌ ಧೋನಿಯ ಗ್ಯಾರೇಜ್‌ ಶೋಭಿಸಿದ ಮರ್ಸಿಡಿಸ್-AMG G 63 SUV

Hyundai Ioniq 5

 ಭಾರತದಲ್ಲಿ ಹ್ಯುಂಡೈ ಅಯಾನಿಕ್ 5‌ ಕಾರು,‌ ಹಿಂಭಾಗದ ಗಾಲಿಗಳನ್ನು ಚಲಾಯಿಸುವ ಸಿಂಗಲ್‌ ಎಲೆಕ್ಟ್ರಿಕ್ ಮೋಟರ್‌ ಜೊತೆಗೆ 72.6 kWh ಬ್ಯಾಟರಿಯನ್ನು ಹೊಂದಿದ್ದು ಇದು 217 PS ಮತ್ತು 350 Nm ಅನ್ನು ಉಂಟು ಮಾಡುತ್ತದೆ. ಇದು ARAI ಪ್ರಮಾಣೀಕೃತ 631 km ಶ್ರೇಣಿಯನ್ನು ನೀಡುತ್ತದೆ. ಅಯಾನಿಕ್ 5‌ ವಾಹನವು 2 ಫಾಸ್ಟ್‌ ಚಾರ್ಜಿಂಗ್‌ ಆಯ್ಕೆಯನ್ನು ಆಧರಿಸುತ್ತದೆ: 150 kW DC ಫಾಸ್ಟ್‌ ಚಾರ್ಜಿಂಗ್‌ - ಇದು ಬ್ಯಾಟರಿಯನ್ನು 0 ಯಿಂದ 80 ಶೇಕಡಾದ ವರೆಗೆ ಚಾರ್ಜ್‌ ಮಾಡಲು 21 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಮತ್ತು  50 kW - ಇದು ಅದೇ ಕೆಲಸವನ್ನು ಒಂದು ಗಂಟೆಯಲ್ಲಿ ಮಾಡುತ್ತದೆ.

ಇದನ್ನು ಸಹ ನೋಡಿರಿ: ಟೆಸ್ಲಾ ಸೈಬರ್‌ ಟ್ರಕ್‌ ಕಾರು ನಿಮ್ಮ ಸಾಹಸಕ್ಕಾಗಿ ಈ ಸಾಧನಗಳೊಂದಿಗೆ ಇನ್ನಷ್ಟು ಶಕ್ತಿ ಪಡೆದಿದೆ

 

ಶಾರುಕ್‌ ಖಾನ್ ಬಳಿ ಇರುವ ಇತರ ಕಾರುಗಳು

Shahrukh Khan Buys Rolls Royce Cullinan Black Badge Edition

ಐಷಾರಾಮಿ ಕಾರುಗಳ ಖರೀದಿಯ ವಿಚಾರದಲ್ಲಿ ಶಾರುಕ್‌ ಖಾನ್‌ ಅವರು ಹೆಸರುವಾಸಿಯಾಗಿದ್ದಾರೆ. ಆದರೆ ಅವರ ಬಳಿ ಇರುವ ಕಾರುಗಳ ಸಂಪೂರ್ಣ ಪಟ್ಟಿಯು ಬಹಿರಂಗಗೊಂಡಿಲ್ಲ. ಅವರ ಸಂಗ್ರಹದಲ್ಲಿರುವ ರೋಲ್ಸ್‌ ರಾಯ್ಸ್‌ ಕಲಿನನ್ ಬ್ಲ್ಯಾಕ್‌ ಬ್ಯಾಜ್‌ ರೂ. 10 ಕೋಟಿಯಷ್ಟು ಬೆಲೆಯನ್ನು ಹೊಂದಿದ್ದರೆ ಮರ್ಸಿಡಿಸ್‌ ಬೆಂಜ್‌ S-ಕ್ಲಾಸ್ ರೂ. 1.84 ಕೋಟಿಯಷ್ಟು ಬೆಲೆ ಬಾಳುತ್ತದೆ. ಹ್ಯುಂಡೈ ಕ್ರೆಟಾ ಮಾದರಿಯ ಮೊದಲ ತಲೆಮಾರಿನ ಕಾರು 2020ರಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಿದಾಗ ಶಾರುಕ್‌ ಖಾನ್‌ ಅವರೇ ಇದರ ಮೊದಲ ಕಾರಿನ ಮಾಲೀಕರೆನಿಸಿದ್ದರು.

 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಸಿಂಗಲ್‌ ಫುಲಿ ಲೋಡೆಡ್‌ ವೇರಿಯಂಟ್‌ ಆಗಿ ಬರುವ ಹ್ಯುಂಡೈ ಅಯಾನಿಕ್‌ 5 ಕಾರು ರೂ. 45.95 ಲಕ್ಷದಷ್ಟು ಬೆಲೆಯನ್ನು ಹೊಂದಿದೆ (ಎಕ್ಸ್‌ - ಶೋರೂಂ ದೆಹಲಿ) ಇದು ಕಿಯಾ EV6, ವೋಲ್ವೊ XC40 ರೀಚಾರ್ಜ್, ಮತ್ತು BMW i4 ಜೊತೆಗೆ ಸ್ಪರ್ಧಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯುಂಡೈ ಅಯಾನಿಕ್ 5‌ ಅಟೋಮ್ಯಾಟಿಕ್

was this article helpful ?

Write your Comment on Hyundai ಅಯಾನಿಕ್ 5

explore ಇನ್ನಷ್ಟು on ಹುಂಡೈ ಅಯಾನಿಕ್ 5

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience