Skoda Epiq Concept: ಈ ಸಣ್ಣ ಎಲೆಕ್ಟ್ರಿಕ್ SUV ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ
ಮಾರ್ಚ್ 19, 2024 03:13 pm ರಂದು ansh ಮೂಲಕ ಪ್ರಕಟಿಸಲಾಗಿದೆ
- 44 Views
- ಕಾಮೆಂಟ್ ಅನ್ನು ಬರೆಯಿರಿ
ಇದು ಸ್ಕೋಡಾದ ಆರು ಹೊಸ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ ಮತ್ತು ಇದು ಈ ಕಾರು ತಯಾರಕರ ಎಲೆಕ್ಟ್ರಿಕ್ ಕಾರುಗಳು ಹೇಗೆ ಕಾಣುತ್ತವೆ ಎಂಬುದರ ಒಂದು ಉದಾಹರಣೆಯಾಗಿ ಮಾರುಕಟ್ಟೆಗೆ ಬರಲಿದೆ.
ಸ್ಕೋಡಾ ಎಪಿಕ್ ಅನ್ನು ಮೊದಲ ಬಾರಿಗೆ ಕಾನ್ಸೆಪ್ಟ್ ಕಾರಿನ ರೂಪದಲ್ಲಿ ಜಗತ್ತಿಗೆ ತೋರಿಸಲಾಯಿತು. ಸ್ಕೋಡಾ ಅಭಿವೃದ್ಧಿಪಡಿಸುತ್ತಿರುವ ಆರು ಹೊಸ ಎಲೆಕ್ಟ್ರಿಕ್ ವಾಹನಗಳಲ್ಲಿ ಇದು ಒಂದಾಗಿದೆ. ಇನ್ನೂ ಪ್ರಾರಂಭಿಕ ಹಂತದಲ್ಲಿದ್ದರೂ ಕೂಡ, ಭವಿಷ್ಯದ ಸ್ಕೋಡಾ ಎಲೆಕ್ಟ್ರಿಕ್ ಕಾರುಗಳು ಹೇಗೆ ಕಾಣುತ್ತವೆ ಮತ್ತು ಇದು ಎಷ್ಟು ದೂರದ ಡ್ರೈವಿಂಗ್ ರೇಂಜ್ ಅನ್ನು ಹೊಂದಿದೆ ಮತ್ತು ಯಾವ ಫೀಚರ್ ಗಳನ್ನು ನೀಡಲಿದೆ ಎಂಬುದರ ಕುರಿತು ಎಪಿಕ್ ನಮಗೆ ಒಳನೋಟವನ್ನು ಒದಗಿಸುತ್ತದೆ. ಈ EV ಕಾನ್ಸೆಪ್ಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ.
ಅತ್ಯಾಕರ್ಷಕವಾದ ಡಿಸೈನ್
ಸ್ಕೋಡಾ ಎಪಿಕ್ ಕಾರು ತಯಾರಕರ ಆಧುನಿಕ ಸಾಲಿಡ್ ಡಿಸೈನ್ ಸ್ಟೈಲ್ ಅನ್ನು ಬಳಸುತ್ತದೆ, ಇದು ಶೀಘ್ರದಲ್ಲೇ ಬರಲಿರುವ ಇತರ ಹೊಸ ಸ್ಕೋಡಾ ಮಾಡೆಲ್ ಗಳಲ್ಲಿಯೂ ಕೂಡ ನೋಡಬಹುದು. ಇದು ಬಲವಾದ, ಗಟ್ಟಿಮುಟ್ಟಾದ ಬಿಲ್ಡ್ ನೊಂದಿಗೆ ಆಧುನಿಕ ಫೀಚರ್ ಗಳನ್ನು ನೀಡುವ ಸಾಧ್ಯತೆಯಿದೆ. ಎಪಿಕ್ ಸುಮಾರು 4.1 ಮೀಟರ್ ಉದ್ದವಾಗಿರುವ ಕಾರಣ ಇದು ಕುಶಾಕ್‌ನ ಸೈಜ್ ಅನ್ನು ಹೋಲುವಂತೆ ಅನಿಸುತ್ತದೆ.
ಇದನ್ನು ಕೂಡ ಓದಿ: ಹ್ಯುಂಡೈ ಕ್ರೆಟಾ EV ಯನ್ನು ಬೇರೆ ದೇಶದಲ್ಲಿ ಸ್ಪೈ ಮಾಡಲಾಗಿದೆ, ಭಾರತದಲ್ಲಿ 2025 ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ
ಎಪಿಕ್ ಸ್ಕೋಡಾದ ಸಾಮಾನ್ಯ ಗ್ರಿಲ್ ಡಿಸೈನ್ ಅನ್ನು ಮುಂಭಾಗದಲ್ಲಿ ಹೊಂದಿದೆ. ಇದು LED ಡೇಟೈಮ್ ರನ್ನಿಂಗ್ ಲೈಟ್‌ಗಳಿಗೆ ಕನೆಕ್ಟ್ ಆಗಿರುವ ಹುಡ್‌ನ ಅಂಚಿನಲ್ಲಿ ಕೆಲವು ಲೈಟಿಂಗ್ ಅನ್ನು ಹೊಂದಿದೆ. ಇದು ಸ್ಕೋಡಾ ಬ್ಯಾಡ್ಜ್ ಅನ್ನು ಹೊಂದಿಲ್ಲ ಆದರೆ ಸ್ಕೋಡಾ ಅಕ್ಷರಗಳನ್ನು ಪ್ರಕಾಶಿಸಲಾಗಿದೆ.
ಈ ಡಿಸೈನ್ ನ ಅತ್ಯಂತ ಗಮನಾರ್ಹ ಭಾಗವೆಂದರೆ 8 ವರ್ಟಿಕಲ್ ಸ್ಲ್ಯಾಟ್‌ಗಳನ್ನು ಹೊಂದಿರುವ ಬೃಹತ್ ಬಂಪರ್ ಮತ್ತು ಸ್ಕಿಡ್ ಪ್ಲೇಟ್. ಹಿಂಭಾಗದಲ್ಲಿ ಕೂಡ ಅದೇ ಬಂಪರ್ ಡಿಸೈನ್ ಅನ್ನು ನೀವು ಗಮನಿಸಬಹುದು. ಇದು ಸ್ಲೀಕ್ ಆಗಿರುವ "T-ಆಕಾರದ" ಲೈಟ್ ಗಳು ಮತ್ತು ಹೊಳೆಯುವ ಸ್ಕೋಡಾ ಲೋಗೋವನ್ನು ಹೊಂದಿದೆ.
ಉಬ್ಬುವ ವೀಲ್ ಆರ್ಕ್ ಗಳು, ಡೋರ್ ಗಳ ಕೆಳಗೆ ರಕ್ಷಣಾತ್ಮಕ ಪ್ಯಾನೆಲ್ ಗಳು ಮತ್ತು ಮೇಲ್ಭಾಗದಲ್ಲಿ ರೂಫ್ ರೈಲ್ ನೊಂದಿಗೆ ಕಾರಿನ ಸೈಡ್ ಪ್ರೊಫೈಲ್ ತುಂಬಾ ಸರಳವಾಗಿದೆ. ಆದರೆ ಇಲ್ಲಿ ನಿಜವಾಗಿಯೂ ಎದ್ದುಕಾಣುವ ಅಂಶವೆಂದರೆ ಎಡ್ಜ್ ಗಳಲ್ಲಿ ಸುತ್ತಲೂ ಮುಚ್ಚಿದಂತೆ ಕಾಣುವ ಅಲೊಯ್ ವೀಲ್ಸ್ ಗಳು.
ಮಿನಿಮಲಿಸ್ಟ್ ಕ್ಯಾಬಿನ್
ಸ್ಕೋಡಾ ಸೇರಿದಂತೆ ಅನೇಕ ಕಾರು ಕಂಪನಿಗಳು ತಮ್ಮ ಡಿಸೈನ್ ಗಳನ್ನು ಅತ್ಯಂತ ಸರಳವಾಗಿರಿಸಲು ನೋಡುತ್ತಿವೆ. ಎಪಿಕ್ ಕ್ಯಾಬಿನ್ ಕನಿಷ್ಠ ಡಿಸೈನ್ ಅಂಶಗಳನ್ನು ಹೊಂದಿದೆ ಆದರೆ ಸರಳ ಮತ್ತು ಆಧುನಿಕ ನೋಟವನ್ನು ನೀಡುತ್ತದೆ. ಇದು ಡ್ಯುಯಲ್-ಟೋನ್ ಕ್ಯಾಬಿನ್ ನೊಂದಿಗೆ ಫ್ಲಾಟ್ ಡ್ಯಾಶ್‌ಬೋರ್ಡ್ ಮತ್ತು ಕೆಳಭಾಗದಲ್ಲಿ ಸ್ವಲ್ಪ ಮಟ್ಟಿಗೆ ಹೊರಬರುವ ಹೊಸದಾದ ಟು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಸೆಂಟರ್ ಕನ್ಸೋಲ್ ಆಂಬಿಯೆಂಟ್ ಲೈಟಿಂಗ್ ನೊಂದಿಗೆ U-ಆಕಾರದ ಡಿಸೈನ್ ಎಲಿಮೆಂಟ್ ಅನ್ನು ಪಡೆಯುತ್ತದೆ ಮತ್ತು ಇಲ್ಲಿ ನೀವು ಸ್ಪೋರ್ಟಿಯಾಗಿ ಕಾಣುವ ಬಕೆಟ್ ಸೀಟ್‌ಗಳನ್ನು ಕೂಡ ನೋಡಬಹುದು (ಇದು ಪ್ರೊಡಕ್ಷನ್ ರೆಡಿ ವರ್ಷನ್ ನಲ್ಲಿ ಸಿಗದೇ ಇರಬಹುದು).
ಇದನ್ನು ಕೂಡ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಆಮದು ಸುಂಕವನ್ನು ಕಡಿಮೆ ಮಾಡುವ ಹೊಸ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಪ್ರವೇಶವು ವೇಗವನ್ನು ಪಡೆದುಕೊಂಡಿದೆ.
ಇದರಲ್ಲಿ 490 ಲೀಟರ್ ಬೂಟ್ ಸ್ಪೇಸ್ ಕೂಡ ಸಿಗಲಿದೆ.
ಆಧುನಿಕ ಫೀಚರ್ ಗಳು
ಎಪಿಕ್ ಕಾನ್ಸೆಪ್ಟ್ ನ ಫೀಚರ್ ಗಳ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ವಿವರಗಳು ಸಿಗದಿದ್ದರೂ ಕೂಡ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯೊಂದಿಗೆ ಬರಬಹುದಾದ ಫ್ರೀ ಫ್ಲೋಟಿಂಗ್ 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ ಎಂದು ನಮಗೆ ತಿಳಿದಿದೆ. ಇದು ಅಗತ್ಯವಿರುವ ಮಾಹಿತಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನರೋಮಿಕ್ ಗ್ಲಾಸ್ ರೂಫ್ ನೊಂದಿಗೆ 5.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಅನ್ನು ಪಡೆಯಲಿದೆ.
ಇದನ್ನು ಕೂಡ ಓದಿ: ಮಹೀಂದ್ರಾ ಇನ್ನೂ ಹೆಚ್ಚಿನ ಹೆಸರುಗಳಿಗಾಗಿ ಟ್ರೇಡ್‌ಮಾರ್ಕ್‌ಗಳನ್ನು ಫೈಲ್ ಮಾಡಿದೆ
ಸುರಕ್ಷತೆಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TMPS), 360-ಡಿಗ್ರಿ ಕ್ಯಾಮೆರಾ ಮತ್ತು ಕೆಲವು ADAS ಫೀಚರ್ ಗಳನ್ನು ಪಡೆಯುವ ಸಾಧ್ಯತೆಯಿದೆ.
400 ಕಿಮೀಗಿಂತಲೂ ಹೆಚ್ಚಿನ ರೇಂಜ್
ಈ EV ಕಾನ್ಸೆಪ್ಟ್ ನ ನಿಖರವಾದ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ ಸ್ಪೆಸಿಫಿಕೇಷನ್ ಗಳನ್ನು ಸ್ಕೋಡಾ ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಎಪಿಕ್ 400 ಕಿಮಿಗಿಂತಲೂ ಹೆಚ್ಚಿನ ರೇಂಜ್ ಅನ್ನು ನೀಡಲಿದೆ ಎಂದು ತಿಳಿಸಿದೆ. ಬ್ಯಾಟರಿ ಪ್ಯಾಕ್ ಸಾಮರ್ಥ್ಯ ಮತ್ತು ಮೋಟಾರ್ ಪರ್ಫಾರ್ಮೆನ್ಸ್ ಬಗ್ಗೆ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ. ಇದು ಇತರ ಎಲೆಕ್ಟ್ರಿಕಲ್ ಸಿಸ್ಟಮ್ ಗಳನ್ನು ಚಾರ್ಜ್ ಮಾಡುವ V2L ಸಾಮರ್ಥ್ಯವನ್ನು ಹೊಂದಿರುತ್ತದೆ.
E ಯಿಂದ Q ಗೆ
ಸ್ಕೋಡಾ ತನ್ನ SUV ಗಳಿಗೆ ಹೆಸರಿಡಲು ಒಂದು ನಿಯಮವನ್ನು ಹೊಂದಿದೆ: ಅವೆಲ್ಲವೂ 'K' ಯಿಂದ ಪ್ರಾರಂಭವಾಗುತ್ತವೆ ಮತ್ತು 'Q' ನೊಂದಿಗೆ ಕೊನೆಗೊಳ್ಳುತ್ತವೆ, ಉದಾಹರಣೆಗೆ ಕುಶಾಕ್ (Kushaq), ಕೊಡಿಯಾಕ್ (Kodiaq) ಮತ್ತು ಕರೋಕ್ (Karoq). ಭಾರತಕ್ಕೆ ಇತ್ತೀಚೆಗೆ ಘೋಷಿಸಲಾದ ಹೊಸ ಸಣ್ಣ SUV ಕೂಡ ಈ ರೀತಿಯ ಹೆಸರಿಡುವ ಮಾದರಿಯನ್ನು ಅನುಸರಿಸಲಿದೆ. ಆದರೆ, ಎಲೆಕ್ಟ್ರಿಕ್ SUVಗಳಿಗೆ, ಎನ್ಯಾಕ್ (Enyaq) ನಂತೆ ಹೆಸರು 'E' ಅಕ್ಷರದಿಂದ ಪ್ರಾರಂಭವಾಗಿ ಮತ್ತು 'Q' ನೊಂದಿಗೆ ಕೊನೆಗೊಳ್ಳಲಿದೆ ಎಂದು ಕಾರು ತಯಾರಕರು ಹೇಳಿದ್ದಾರೆ. ಆದ್ದರಿಂದ, ಈ ಸಣ್ಣ ಎಲೆಕ್ಟ್ರಿಕ್ SUV ಕಾನ್ಸೆಪ್ಟ್ ಗೆ 'ಎಪಿಕ್' (Epiq) ಎಂದು ಹೆಸರಿಡಲಾಗಿದೆ.
ಸ್ಕೋಡಾ EV ಲಾಂಚ್ ಟೈಮ್‌ಲೈನ್‌ಗಳು
ಸ್ಕೋಡಾ ಎಪಿಕ್ ಅನ್ನು 2025 ರಲ್ಲಿ 25,000 ಯುರೋಗಳ (ಅಂದಾಜು ರೂ. 22.6 ಲಕ್ಷ) ನಿರೀಕ್ಷಿತ ಆರಂಭಿಕ ಬೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಇದು ಭಾರತದಲ್ಲಿ ಸ್ಥಳೀಯ ಬಿಡಿಭಾಗಗಳನ್ನು ಬಳಸಿ ಮಾರಾಟ ಮಾಡಲು ನಿರ್ಧರಿಸಿದರೆ, ಅದೇ ಬೆಲೆಯನ್ನು ಪಡೆಯಲಿದೆ ಮತ್ತು ಟಾಟಾ ಕರ್ವ್ವ್ EV ಮತ್ತು ಹ್ಯುಂಡೈ ಕ್ರೆಟಾ-ಆಧಾರಿತ EV ಯಂತಹ ಕಾರುಗಳಿಗೆ ಸ್ಪರ್ಧಿಯಾಗಲಿದೆ. ಆದರೆ ಮೊದಲಿಗೆ, ಸ್ಕೋಡಾ ಭಾರತದಲ್ಲಿ ತನ್ನ ಮೊಟ್ಟ ಮೊದಲ ಆಲ್-ಎಲೆಕ್ಟ್ರಿಕ್ ಕಾರ್ ಆಗಿ ಎನ್ಯಾಕ್ ಅನ್ನು ಹೊರತರಲಿದೆ, ನಂತರ ಸ್ಕೋಡಾ ಎಲ್ರೋಕ್ ಎಲೆಕ್ಟ್ರಿಕ್ ವಾಹನವನ್ನು ಮಾರಾಟ ಮಾಡಲಿದೆ.