ಆಟೋ ಎಕ್ಸ್‌ಪೋದಲ್ಲಿ ಉತ್ಪಾದನೆಗೆ ಸಿದ್ಧವಾದ ಅವತಾರದಲ್ಲಿ Tata Harrier EVಯ ಪ್ರದರ್ಶನ
ಟಾಟಾ ಹ್ಯಾರಿಯ ರ್ ಇವಿ ಗಾಗಿ shreyash ಮೂಲಕ ಜನವರಿ 17, 2025 01:44 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಒಟ್ಟಾರೆ ವಿನ್ಯಾಸ ಮತ್ತು ಬಾಡಿಯ ಆಕೃತಿ ಒಂದೇ ಆಗಿದ್ದರೂ, ಪೂರ್ಣ-ಎಲೆಕ್ಟ್ರಿಕ್ ಹ್ಯಾರಿಯರ್ ಕೆಲವು ಇವಿ-ನಿರ್ದಿಷ್ಟ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ
-
ಟಾಟಾ ಪಂಚ್ ಇವಿ ಮತ್ತು ಟಾಟಾ ಕರ್ವ್ ಇವಿ ಗಳನ್ನು ಸಹ ಆಧರಿಸಿದ ಆಕ್ಟಿ.ಇವಿ ಪ್ಲಾಟ್‌ಫಾರ್ಮ್ ಅನ್ನು ಹ್ಯಾರಿಯರ್ ಇವಿ ಆಧರಿಸಿದೆ.
-
ಅದರ ICE ಪ್ರತಿರೂಪದಂತೆಯೇ ಕಾಣುತ್ತದೆ, ಆದರೆ ಕ್ಲೋಸ್ಡ್ ಆಫ್ ಗ್ರಿಲ್, ಏರೋಡೈನಾಮಿಕ್ ಅಲಾಯ್ ವೀಲ್‌ಗಳು ಮತ್ತು EV ಬ್ಯಾಡ್ಜ್‌ಗಳಂತಹ ಕೆಲವು EV-ನಿರ್ದಿಷ್ಟ ಅಂಶಗಳನ್ನು ಪಡೆಯುತ್ತದೆ.
-
ಇಂಟೀರಿಯರ್ ರೆಗ್ಯುಲರ್ ಹ್ಯಾರಿಯರ್‌ನಂತೆಯೇ ಕಾಣುತ್ತದೆ, ಆದರೆ ವಿಭಿನ್ನ ಬಣ್ಣದ ಕವರ್‌ಗಳನ್ನು ಪಡೆಯುತ್ತದೆ.
-
ಇದರ ಬೆಲೆ 30 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು.
2023ರ ಆಟೋ ಎಕ್ಸ್‌ಪೋದಲ್ಲಿ ಪರಿಕಲ್ಪನೆಯಾಗಿ ಪಾದಾರ್ಪಣೆ ಮಾಡಿದ ಮತ್ತು ನಂತರ 2024 ರಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದ ಮೊದಲ ಆವೃತ್ತಿಯಲ್ಲಿ ಪ್ರದರ್ಶಿಸಲಾದ ಟಾಟಾ ಹ್ಯಾರಿಯರ್ ಇವಿ, 2025 ರ ಆಟೋ ಎಕ್ಸ್‌ಪೋದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲು ಮರಳಿದೆ. ಆದರೆ ಈ ಬಾರಿ ಬಂದದ್ದು, ಉತ್ಪಾದನೆಗೆ ಸಿದ್ಧವಾದ ಅವತಾರದಲ್ಲಿ. ಇದನ್ನು ಸ್ಟೀಲ್ದಿ ಮ್ಯಾಟ್ ಶೇಡ್ ಬಣ್ಣದಲ್ಲಿ ಅನಾವರಣಗೊಳಿಸಲಾಗಿದೆ. ಹ್ಯಾರಿಯರ್ ಇವಿ ತನ್ನ ICE (ಇಂಧನ ಚಾಲಿತ ಎಂಜಿನ್) ಪ್ರತಿರೂಪದಂತೆಯೇ ಒಟ್ಟಾರೆ ವಿನ್ಯಾಸವನ್ನು ಉಳಿಸಿಕೊಂಡಿದ್ದರೂ, ಇದು ಹಲವಾರು EV-ನಿರ್ದಿಷ್ಟ ಹೈಲೈಟ್‌ಗಳನ್ನು ಒಳಗೊಂಡಿದೆ. ಹ್ಯಾರಿಯರ್ ಇವಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.
ವಿನ್ಯಾಸ: ಬೋಲ್ಡ್ ಮತ್ತು ಎಲೆಕ್ಟ್ರಿಕ್ ಕೇಂದ್ರಿತ
ಟಾಟಾ ತನ್ನ ಹ್ಯಾರಿಯರ್‌ನ ಎಲೆಕ್ಟ್ರಿಕ್ ಆವೃತ್ತಿಯ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ, ವಾಸ್ತವವಾಗಿ, ಇದು ಇನ್ನೂ ಅದರ ICE ಆವೃತ್ತಿಯಂತೆಯೇ ಕಾಣುತ್ತದೆ. ಹಾಗೆಯೇ, ಹ್ಯಾರಿಯರ್ ಇವಿ ಮುಚ್ಚಿದ ಮುಂಭಾಗದ ಗ್ರಿಲ್, ಟಾಟಾ ನೆಕ್ಸಾನ್ ಇವಿ ಮತ್ತು ಟಾಟಾ ಕರ್ವ್ ಇವಿಗಳಲ್ಲಿ ಕಂಡುಬರುವಂತೆ ಲಂಬವಾದ ಸ್ಲ್ಯಾಟ್‌ಗಳೊಂದಿಗೆ ಪರಿಷ್ಕೃತ ಮುಂಭಾಗದ ಬಂಪರ್ ಮತ್ತು ಏರೋಡೈನಾಮಿಕ್ ಶೈಲಿಯ ಅಲಾಯ್ ವೀಲ್‌ಗಳಂತಹ ಕೆಲವು ಇವಿ-ನಿರ್ದಿಷ್ಟ ವಿನ್ಯಾಸ ವಿವರಗಳನ್ನು ಪಡೆಯುತ್ತ
ಹಿಂಭಾಗದಲ್ಲಿ, ಇದು ರೆಗ್ಯುಲರ್ ಹ್ಯಾರಿಯರ್‌ನಲ್ಲಿ ಕಂಡುಬರುವ ಅದೇ ಕನೆಕ್ಟೆಡ್ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ. ಹ್ಯಾರಿಯರ್ ಇವಿ ಯಲ್ಲಿರುವ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳು ಎಸ್ಯುವಿಯ ICE ಆವೃತ್ತಿಯಲ್ಲಿ ಕಂಡುಬರುವಂತೆ ವೆಲ್‌ಕಮ್ ಮತ್ತು ಗುಡ್‌ಬಾಯ್ ಅನಿಮೇಷನ್‌ಗಳನ್ನು ಸಹ ಒಳಗೊಂಡಿವೆ.
ಕ್ಯಾಬಿನ್: ಅದೇ ವಿನ್ಯಾಸ, ವಿಭಿನ್ನ ಕವರ್
ಹೊರಭಾಗವನ್ನು ಗಮನಿಸಿದಂತೆ, ಟಾಟಾ ಹ್ಯಾರಿಯರ್ EV ಯ ಕ್ಯಾಬಿನ್ ವಿನ್ಯಾಸವು ಸಹ ಅದರ ರೆಗ್ಯುಲರ್ ಆವೃತ್ತಿಯಂತೆಯೇ ಇರುತ್ತದೆ. ಹಾಗೆಯೇ, ಇದು ವಿಭಿನ್ನ ಬಣ್ಣದ ಕವರ್ ಮತ್ತು ಡ್ಯಾಶ್‌ಬೋರ್ಡ್ ಥೀಮ್ ಅನ್ನು ಪಡೆಯುತ್ತದೆ. ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾಡ್‌ಗಳು ಕೆಲವು ಸಾಫ್ಟ್ ಟಚ್ ಇನ್ಸರ್ಟ್‌ಗಳನ್ನು ಪಡೆಯುತ್ತವೆ, ಇದು ಪ್ರೀಮಿಯಂ ಆದ ಆಕರ್ಷಣೆಯನ್ನು ಹೆಚ್ಚಿಸುತ್ತದೆ.
ಫೀಚರ್‌ಗಳ ವಿಷಯದಲ್ಲಿ, ಇದು 12.3-ಇಂಚಿನ ಡ್ಯುಯಲ್ ಡ್ಯುಯಲ್ ಸ್ಕ್ರೀನ್‌ಗಳು (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ), ಮತ್ತು ಮುಂಭಾಗದಲ್ಲಿ ವೆಂಟಿಲೇಶನ್ ಸೀಟುಗಳನ್ನು ಪಡೆಯುತ್ತದೆ. ಹ್ಯಾರಿಯರ್ ಇವಿ 6-ವೇ ಚಾಲಿತ ಚಾಲಕ ಸೀಟು ಮತ್ತು 4-ವೇ ಚಾಲಿತ ಸಹ-ಚಾಲಕ ಸೀಟು, ಡ್ಯುಯಲ್-ಜೋನ್ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಸಹ ಪಡೆಯುತ್ತದೆ. ಪ್ರಯಾಣಿಕರ ಸುರಕ್ಷತೆಯನ್ನು 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಆಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ನೋಡಿಕೊಳ್ಳುತ್ತವೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಹ್ಯಾರಿಯರ್ ಇವಿ ಬೆಲೆ 30 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಮಹೀಂದ್ರಾ XEV 9e ಮತ್ತು XEV 7e ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.