ಟಾಟಾ ಹ್ಯಾರಿಯರ್ ವೇರಿಯೆಂಟ್ ಗಳ ವೈಶಷ್ಯ್ತ್ಯತೆ XE, XM, XT, XZ
ಟಾಟಾ ಹ್ಯಾರಿಯರ್ 2019-2023 ಗಾಗಿ sonny ಮೂಲಕ ಮಾರ್ಚ್ 22, 2019 02:14 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ದ ಬಹು ನಿರೀಕ್ಷಿತ SUV ಹ್ಯಾರಿಯರ್ ಅನ್ನು ಬಿಡುಗಡೆ ಮಾಡಲಾಗಿದೆ. ಮತ್ತು ಇದು ನಾಲ್ಕು ವೇರಿಯೆಂತ್ ಗಳಲ್ಲಿ ಲಭ್ಯವಿದೆ XE, XM, XT, XZ.
ಟಾಟಾ ಹ್ಯಾರಿಯರ್ ನ ಬೆಲೆ ರೂ ೧೨. ೬೯ ಲಕ್ಷ ದಿಂದ ೧೬.೨೫ ಲಕ್ಷ ಡಾ ವರೆಗೂ ಇದೆ (ಎಕ್ಸ್ ಷೋರೂಮ್ ದೆಹಲಿ ). ಕೇವಲ ಒಂದು ಎಂಜಿನ್ ಅವತಾರದಲ್ಲಿ ಹೊರತರಾಗಿದೆ . ೨.೦ ಲೀಟರ್ ಡೀಸೆಲ್ ಎಂಜಿನ್ ಅನ್ನು ೬ ಸ್ಪೀಡ್ ಗೇರ್ ಬಾಕ್ಸ್ ಗೆ ಅಳವಡಿಸಲಾಗಿದೆ. ಫಿಯಟ್ ನಿಂದ ತರಲಾದ ಡೀಸೆಲ್ ಎಂಜಿನ್ ೧೪೦PS ಪವರ್ ಹಾಗು ೩೫೦ನಮ್ ಟಾರ್ಕ್ ಹೊಂದಿದೆ. ಹಾಗಾಗಿ ವೇರಿಯೆಂಟ್ ಗಾಲ ಫೀಚರ್ಗಳ ವತ್ಯಾಸಕ್ಕೆ ಸೀಮಿತವಾಗಿದೆ. ನಿಮಗೆ ಯಾವುದು ಸೂಕ್ತಎಂದು ವಿವರಗಳೊಂದಿಗೆ ಕೊಡಲಾಗಿದೆ.
ಬಣ್ಣಗಳ ಆಯ್ಕೆ
- ಕ್ಯಾಲಿಷ್ಠ ಕಾಪರ್
- ಥರ್ಮಿಷ್ಟೋ ಗೋಲ್ಡ್
- ಅರ್ಕಸ್ ವೈಟ್
- ಟೆಲಿಷ್ಟೋ ಗ್ರೇ
- ಏರಿಯಲ್ ಸಿಲ್ವರ್ .
ಸ್ಟ್ಯಾಂಡರ್ಡ್ ಸುರಕ್ಷತಾ ಉಪಕರಣಗಳು
- ಡುಯಲ್ ಫ್ರಂಟ್ ಏರ್ಬ್ಯಾಗ್ಸ್
- ABS ಮತ್ತು EBD
- ರೇರ್ ಪಾರ್ಕಿಂಗ್ ಸೆನ್ಸರ್ ಗಳು
- ಸೀಟ್ ಬೆಲ್ಟ್ ರಿಮೈಂಡರ್ ಗಳು
- ( ಡ್ರೈವರ್ ಮತ್ತು ಸಹ ಪ್ರಯಾಣಿಕ) ಆಟೋ ಡೋರ್ ಲಾಕ್
- ಪೇರಿಮೀಟರ್ ಅಲಾರ್ಮ್ ಸಿಸ್ಟಮ್.
ಟಾಟಾ ಹ್ಯಾರಿಯರ್ XE : ಎಲ್ಲಾ ಬೇಸ್ ವೇರಿಯೆಂಟ್ ನ ಫೀಚರ್ ಗಳನ್ನು ಹೊಂದಿದೆ . ಉತ್ತಮ ಬೆಲೆ ಹೊಂದಿರುವ ಮಿಡ್ ಸೈಜ್ SUV ಆಗಿದೆ
XE ಬೆಲೆ ರೂ ೧೨. ೬೯ ಲಕ್ಷ .
ಲೈಟ್ ಗಳು : ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಮತ್ತು ಡುಯಲ್ ಟೈಪ್ ಬಲ್ಬ್ ಗಳು ಟರ್ನ್ ಇಂಡಿಕೇಟರ್ ನೊಂದಿಗೆ DRL ಗಳು LED ಯೊಂದಿಗಿನ ಟೈಲ್ ಲ್ಯಾಂಪ್ ಗಳು.
ಬಾಹ್ಯ : ಇಂಟಿಗ್ರೇಟೆಡ್ ಇಂಡಿಕೇಟರ್ ಒಂದಿಗಿನ ORVM ಗಳು ಮತ್ತು ಸೈಡ್ ಕ್ಲಾಡಿಂಗ್ ಗಳು.
ಅನುಕೂಲಕರ ವಸ್ತುಗಳು : ಟಿಲ್ಟ್ ಮತ್ತು ಟೆಲೆಸ್ಕೋಪಿಕ್ ಅಡ್ಜಸ್ಟ್ ಸ್ಟಿಯರಿಂಗ್ ವೀಲ್. ಪವರ್ ವಿಂಡೋಗಳು , ಮಾನ್ಯುಯಲ್ ಎ ಸಿ ಮತ್ತು ರೇರ್ ವೆಂಟ್ ಗಳು, ಅಡ್ಜಸ್ಟಬಲ್ ಮುಂದಿನ ಹಾಗು ಹಿಂದಿನ ಹೆಡ್ ರೆಸ್ಟ್ , ಫುಡ್ಲ್ ಲ್ಯಾಂಪ್ ಗಳು, ಸನ್ ಗ್ಲಾಸ್ ಮತ್ತು ಛತ್ರಿ ಹಿಡಿಕೆಗಳು , ೪ ರೀತಿಯ ಮಾನ್ಯುಯಲ್ ಅಡ್ಜಸ್ಟ್ಲ್ ಮಾಡಬಹುದಾದ ಡ್ರೈವರ್ ಸೀಟ್.
ಆಡಿಯೋ : ಇಲ್ಲ
ವೀಲ್ : ೧೬ ಇಂಚು ಸ್ಟೀಲ್ ವೀಲ್ ಗಳು
ಬಣ್ಣಗಳು : ಅರ್ಕಸ್ ವೈಟ್ ನಲ್ಲಿ ಮಾತ್ರ ಲಭ್ಯ.
ಬೆಲೆಬಾಳುವಿಕೆ
ಇದು ಬೇಸ್ ವೇರಿಯೆಂಟ್ ಆಗಿದ್ದು ಬಹಳಷ್ಟು ಸುರಕ್ಷತೆ ಹಾಗು ಅನುಕೂಲಕರ ವಸ್ತುಗಳೊಂದಿಗೆ ಮೊದಲನೇ ಹಂತದ ಮಿಡ್ ಸೈಜ್ SUV ಕೊಳ್ಳ ಬಯಸುವವರಿಗೆ ಹೊಂದುವಂತಿದೆ. ಆಡಿಯೋ ಇಲ್ಲದಿರುವಿಕೆಯೂ ಸಹ ಅನುಕೂಲಕರವಾಗಿರುವುದು. ಮುಂದಿನ ವೇರಿಯೆಂಟ್ ಗೆ ಹೋಲಿಸಿದರೆ ಸುಮಾರು ೧ ಲಕ್ಷದ ವರೆಗೂ ಉಳಿಸಬಹುದು ಹಾಗು ಆಡಿಯೋವನ್ನು ಹೊರಗಡೆಯಿಂದ ಖರೀದಿಸಬಹುದಾಗಿದೆ. ಆದರೂ ಒಂದೇ ಬಣ್ಣದ ಆಯ್ಕೆಗೆ ಸೀಮಿತವಾಗಿರುವುದು XE ವೇರಿಯೆಂಟ್ ಕೊಳ್ಳುವವರಿಗೆ ಸ್ವಲ್ಪ ಮುಜುಗರವಾಗಬಹುದು
ಟಾಟಾ ಹ್ಯಾರಿಯರ್ XM : ನಿಜವಾದ ಎಂಟ್ರಿ ಲೆವೆಲ್ ವೇರಿಯೆಂಟ್
ಬೆಲೆ : ೧೩.ಲಕ್ಷ
XE ವೇರಿಯೆಂಟ್ ಗಿಂತ ೧. ೦೬ ಲಕ್ಷ ಹೆಚ್ಚು
XE ವೇರಿಯೆಂಟ್ ನ ಫೀಚರ್ ಗಳೊಂದಿಗೆ ಹೆಚಿನವುಗಳಾಗಿ
ಸುರಕ್ಷತಾ ಫೀಚರ್ ಗಳು: ಫಾಲೋ ಮೇ ಹೆಡ್ ಲ್ಯಾಂಪ್ ಗಳು, ವೈರ್ ಲೆಸ್ ವೈಪರ್ ಗಳು , ರೇರ್ ಪಾರ್ಕಿಂಗ್ ಸೆನ್ಸರ್ ಗಳು ಇನ್ಫೋಟೈನ್ಮೆಂಟ್ ನಲ್ಲಿ ಡಿಸ್ಪ್ಲೇ ಯೊಂದಿಗೆ.
ಲೈಟ್ : ಫಾಗ್ ಲ್ಯಾಂಪ್ ಗಳು
ಆಂತರಿಕ : ಆ ಸಿ ಮೇಲೆ ಸ್ಯಾಟಿನ್ ಫಿನಿಷ್ ಮತ್ತು ಡ್ಯಾಶ್ ಬೋರ್ಡ್ ನ ಮೇಲೆ ಕ್ರೋಮ್ ಅಸೆಂಟ್ ಗಳು , ರೇರ್ ಪಾರ್ಕಿಂಗ್ ಶೆಲ್ಫ್ ಗಳು .
ಅನುಕೂಲಗಳು : ರಿಮೋಟ್ ಸೆಂಟ್ರಲ್ ಲಾಕಿಂಗ್ , ವಿದ್ಯುತ್ ಹೊಂಡಣಿಕೆಯ ORVM ಗಳು, ಸ್ಟೀಯರಿಂಗ್ ಮೇಲಿರುವ ಕಂಟ್ರೋಲ್ ಬಟನ್ ಗಳು, ೬ ರೀತಿಯ ಮಾನ್ಯುಯಲ್ ಅಡ್ಜಸ್ಟ್ ಡ್ರೈವರ್ ಸೀಟ್, ಡ್ರೈವ್ ಮೋಡ್ ಗಾಳ ಅನುಕೂಲತೆ ( eco, city ಮತ್ತು sport).
ಇನ್ಫೋಟೈನ್ಮೆಂಟ್ : ೭ ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಯೂನಿಟ್ ೬ ಸ್ಪೀಕರ್ ಗಳೊಂದಿಗೆ ಬ್ಲೂಟೂತ್ ಹೊಂದಾಟಿಸುವಿಕೆ , ಆಡಿಯೋ ಪ್ಲೇಬ್ಯಾಕ್ ಒಂದಿಗೆ .
ಬಣ್ಣಗಳು : ಕ್ಯಾಲಿಸ್ಟೊ ಕಾಪರ್ ನಲ್ಲಿ ಮಾತ್ರ ಲಭ್ಯವಿಲ್ಲ.
ಬೆಲೆಬಾಳುವಿಕೆ : ಇದು ಸುಮಾರು ಒಂದು ಲಕ್ಷದ ವರೆಗೂ ಹೆಚ್ಚಿನ ಮುಖಬೆಲೆ ಹೊಂದಿದೆ , ಹ್ಯಾರಿಯೆರ್ XE ಮುಖಬೆಲೆಗೆ ಹೋಲಿಸಿದರೆ. ಎಲ್ಲಾ ಘಟಕಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಇದು ಹೆಚ್ಚು ಬೆಲೆ ಎಂದೆನಿಸುತ್ತದೆ , ಇನ್ಫೋಟೈನ್ಮೆಂಟ್ ಸಿಸ್ಟಮ್ , ಮುಂಭಾಗದ ಫಾಗ್ ಲ್ಯಾಂಪ್, ಡ್ರೈವ್ ಮೋಡ್, ರೇವೂರ್ ವೈಪರ್ ಗಳು ಮತ್ತು ವಾಷರ್ ಗಳು ಎಲ್ಲವೂ ಉಪಯುಕ್ತವೇ . ಆದರೂ ಇದು ಪೂರ್ಣ ಪ್ರಮಾಣದ ಫೀಚರ್ ಪ್ಯಾಕೇಜ್ ಎಂದೆನಿಸುವುದಿಲ್ಲ . ಇನ್ಫೋಟೈನ್ಮೆಂಟ್ ಸಿಸ್ಟಮ್ ನೊಂದಿಗೆ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಅಳವಡಿಸಲಾಗುವುದಿಲ್ಲ. ORVM ಗಳು ಮಾನ್ಯುಯಲ್ ಅಡ್ಜಸ್ಟ್ಬಲ್ ಆಗಿವೆ. ಇದು ಒಂದು ಉತ್ತಮ ಎಂಟ್ರಿ ಲೆವೆಲ್ ವೇರಿಯೆಂಟ್ ಆಗಿದ್ದು , ಹರಿಯರ ನಿಮಗೆ ಬೇಕಾದ ಕಂಫರ್ಟ್ ಫೀಚರ್ ಗಳನ್ನೂ ಹೊಂದಿದೆ.
ಟಾಟಾ ಹ್ಯಾರಿಯೆರ್ XT
ಬಹಳಷ್ಟು ಫೀಚರ್ ಗಳನ್ನೂ ಹೊಂದಿದ್ದು ಬೆಲೆಬಾಳುವಿಕೆಯದಾಗಿದೆ
ಬೆಲೆ : ೧೪. ೯೫ ಲಕ್ಷ
XT ಗೆ ಹೋಲಿಸಿದರೆ ಹೆಚ್ಚಿನ ಬೆಲೆ :೧. ೨೫ ಲಕ್ಷ
XM ವೆರಿಯೆಂಟ್ ಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಗಳು.
ಸುರಕ್ಷತೆ: ರೇರ್ ಪಾರ್ಕಿಂಗ್ ಕ್ಯಾಮೆರಾ, ಆಟೋ ಹೆಡ್ ಲ್ಯಾಂಪ್, ರೇರ್ ಡಿ ಫಾಗರ್
ಲೈಟ್ : LED DRL ಗಳು ಟರ್ನ್ ಇಂಡಿಕೇಟರ್ ನೊಂದಿಗೆ.
ಆಂತರಿಕ: ಫಾಕ್ಸ್ ವುಡ್ ಫಿನಿಷ್ ಮತ್ತು ಸಾಫ್ಟ್ ಟಚ್ ಮೆಟೀರಿಯಲ್ ಗಳು ಡ್ಯಾಶ್ ಬೋರ್ಡ್ ನ ಮೇಲೆ.
ಅನುಕುಲಗಳು: ಪುಶ್ ಬಟನ್ ಸ್ಟಾರ್ಟ್ ಸ್ಟಾಪ್ ಆಟೋ ಕ್ಲೈಮೇಟ್ ಕಂಟ್ರೋಲ್, ವಿದ್ಯುತ್ ಮಡಚುವಿಕೆ ಹಾಗು ಹೊಂದಿಸುವಿಕೆ ORVM ಗಳು , ೮ ರೀತಿಯ ಮಾನ್ಯುಯಲ್ ಅಡ್ಜಸ್ಟ್ ಡ್ರೈವರ್ ಸೀಟ್ , ಕ್ರೂಸ್ ಕಂಟ್ರೋಲ್, ತಂಪಾದ ಶೇಖರಣೆ ಪೆಟ್ಟಿಗೆ , ಹಿಂದಿನ ಸೀಟ್ ಗಳಲ್ಲಿ ಕೈ ಗಳನ್ನೂ ಇರಿಸಿಕೊಳ್ಳಲು ಮತ್ತು ಲೋಟ ಗಳನ್ನೂ ಇರಿಸಿಕೊಳ್ಳಲು ಅನುಕೂಲ, ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳು.
ಇನ್ಫೋಟೈನ್ಮೆಂಟ್: ೭ ಇಂಚ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ೮ ಸ್ಪೀಕರ್ ಗಳೊಂದಿಗೆ , ಹಾಗು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂಡಣಿಕೆ ಅನುಕೂಲ ವಿಡಿಯೋ ಪ್ಲೇ ಮಾಡಲು ಅನುಕೂಲ, USB ಹಾಗು ಟಾಟಾ ದ ಕನೆಕ್ಟ್ ನೆಕ್ಸ್ಟ್ ಆಪ್ ನೊಂದಿಗೆ ಬರುತ್ತದೆ.
ಬೆಲೆಬಾಳುವಿಕೆ: ಇದರಲ್ಲುವು ಸಹ ಹಿಂದಿನ ವೇರಿಯೆಂತ್ ಗೆ ಹೋಲಿಸಿದರೆ ಒಂದು ಲಕ್ಷ ಡಾ ವರೆಗೂ ಹೆಚ್ಚು ವ್ಯಯ ಮಾಡ ಬೇಕಾಗುತ್ತದೆ . ಆದರೂ ಹ್ಯಾರಿಯೆರ್ XT ಯು ಒಂದು ಉತ್ತಮ ಬೆಲೆ ಬಾಳುವ ಆಯ್ಕೆ ಆಗಿದ್ದು ನಿಮಗೆ XZ ನಲ್ಲಿರುವ ಫೀಚರ್ ಗಾಲ ಅವಶ್ಯಕತೆ ಇಲ್ಲ ಎಂದೆನಿಸಿದರೆ ಇದು ಒಂದು ಉತ್ತಮ ಆಯ್ಕೆ . ಹ್ಯಾರಿಯೆರ್ XT ನಲ್ಲಿ ನಿಮಗೆ ರೇರ್ ಪಾರ್ಕಿಂಗ್ ಕ್ಯಾಮೆರಾ, ಆಟೋ ಎ ಸಿ , ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್, ಅಲಾಯ್ ವೀಲ್, ಆಟೋ ಕ್ಲೈಮೇಟ್ ಕಂಟ್ರೋಲ್, ವಿದ್ಯುತ್ ಮಡಚುವಿಕೆ ಹಾಗು ಹೊಂದಿಸುವಿಕೆ ORVM ಗಳು , ೮ ರೀತಿಯ ಮಾನ್ಯುಯಲ್ ಅಡ್ಜಸ್ಟ್ ಡ್ರೈವರ್ ಸೀಟ್ , ಕ್ರೂಸ್ ಕಂಟ್ರೋಲ್, ತಂಪಾದ ಶೇಖರಣೆ ಪೆಟ್ಟಿಗೆ , ಹಿಂದಿನ ಸೀಟ್ ಗಳಲ್ಲಿ ಕೈ ಗಳನ್ನೂ ಇರಿಸಿಕೊಳ್ಳಲು ಮತ್ತು ಲೋಟ ಗಳನ್ನೂ ಇರಿಸಿಕೊಳ್ಳಲು ಅನುಕೂಲ, ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳು .ಲ್, ಮತ್ತು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ . ಆಂಡ್ರಾಯ್ಡ್ ಆಟೋ ಮತ್ತು ಕಾರ್ಪ್ಲೇ ಹೊಂದಾಣಿಕೆಯೊಂದಿಗೆ ಬರುತ್ತದೆ. ರೂ ೧. ೨೫ ಲಕ್ಷ ಬೆಳೆಯ ಅಂತರ ಹೆಚ್ಚು ಎಣಿಸಬಹುದು. ಆದರೂ ರೂ ೧೫ ಲಕ್ಷ ಒಳಗಿನ ಹಚಿನ ಫೀಚರ್ ಗಳನ್ನೂ ಹೊಂದಿರುವ XT ಬಹಳಷ್ಟು ಆಯ್ಕೆ ಪಟ್ಟಿಯ ವಿವರಗಳನ್ನು ಇದೆ ಎನ್ನುವಂತೆ ಮಾಡುತ್ತದೆ. ಇದು ನಿಮ್ಮ ಆಯ್ಕೆಯನ್ನು ಸರಿಯಿಲ್ಲ ಎನ್ನುವಂತೆ ಮಾಡುವುದಿಲ್ಲ.
ಹ್ಯಾರಿಯರ್ XZ
ಎಲ್ಲ ಸಲಕರಣೆಗಳೊಂದಿಗೆ ಹಾಗು ಬೇರೆ ಮೋಡೆಲ್ ಗಳಿಗೆ ಹೋಲಿಸಿದರೆ ಹೆಚ್ಚು ಬೆಲೆ ಬಾಳುವಿಕೆ
ಬೆಲೆ : XZ ೧೬. ೨೫ ಲಕ್ಷ
XT ವೇರಿಯೆಂಟ್ ಗೆ ಹೋಲಿಸಿದರೆ ಹೆಚ್ಚಿನ ಬೆಲೆ: ೧. ೨೫ ಲಕ್ಷ
XT ವೇರಿಯೆಂಟ್ ಜೊತೆಗೆ ಬರುವ ಫೀಚರ್ ಗಳು.
ಸುರಕ್ಷತೆ : ೬ ಏರ್ಬ್ಯಾಗ್ ಗಳು, ESP , ISOFIX ಮಕ್ಕಳ ಸೀಟ್ ಜೋಡಣೆಗಳು, ಹಿಲ್ ಹೋಲ್ಡ್ ಕಂಟ್ರೋಲ್ , ಹಿಲ್ ಡಿಸೆಂಟ್ ಕಂಟ್ರೋಲ್ , ರೋಲ್ ಓವರ್ ಮಿಟಿಗೇಷನ್ , ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಇಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್, ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಮತ್ತು ಬ್ರೇಕ್ ಡಿಸ್ಕ್ ವಿಪಿನ್ಗ್ ಸಿಸ್ಟಮ್.
ಲೈಟ್ : ಕ್ಸೆನಾನ್ HD ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಮುಂಬದಿಯ ಫಾಗ್ ಲ್ಯಾಂಪ್ ಕಾರ್ನೆರಿಂಗ್ ಕಾರ್ಯದೊಂದಿಗೆ
ಬಾಹ್ಯ : ಶಾರ್ಕ್ ಫಿನ್ ಆಂಟೆನಾ , ಲೋಗೋದೊಂದಿಗಿನ ORVM .
ಆಂತರಿಕ: ಓಕ್ ಬ್ರೌನ್ ಬಣ್ಣಗಳ ಉಪಯೋಗ , ಸಂದುಗಳೊಂದಿಗಿನ ಲೆಥರ್ ಸೀಟ್ ಕವರ್ ಗಳು, ಲೆಥರ್ ಹೊದಿಕೆಯೊಂದಿಗೆ ಸ್ಟಿಯರಿಂಗ್ ವೀಲ್ ಮತ್ತು ಗೇರ್ ಕ್ನೋಭ್ ಗಳು.
ಅನುಕೂಲಗಳು: ೬೦:೪೦ ಮಡಚುವಿಕೆಯ ಹಿಂಬದಿಯ ಸೀಟ್ ಗಳು, ೭ ಇಂಚ್ ಕಲರ್ TFT ಡಿಸ್ಪ್ಲೇ , ಇನ್ಸ್ಟ್ರುಮೆಂಟ್ ಕ್ಲಸ್ಟರ್ ನ ಒಳಗೆ ಇನ್ಫೋಟೈನ್ಮೆಂಟ್ ವಿವರಗಳು, ಹಾಗು ಟೆರ್ರಇನ್ ರೆಸ್ಪಾನ್ಸ್ ಮೋಡ್( normal, wet, rough)
ಇನ್ಫೋಟೈನ್ಮೆಂಟ್: ೮. ೮ ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಒಂಬತ್ತು ಸ್ಪೀಕರ್ ಗಳೊಂದಿಗೆ ಮತ್ತು JBS ಸಿಸ್ಟಮ್ ಉಪಯೋಗಿಸಲಾಗಿದೆ, ಆಪಲ್ ಕಾರ್ಪ್ಲ್ಯ್, ಮತ್ತು ಆಂಡ್ರಾಯ್ಡ್ ಸೌಂಡ್ ಆಟೋ ಹೊಂದಾಣಿಕೆ ಸಾಧ್ಯತೆ.
ಬೆಲೆಬಾಳುವಿಕೆ: ಟಾಪ್ ವೇರಿಯೆಂತ್ ಹ್ಯಾರಿಯೆರ್ ಹಿಂದಿನ ವೇರಿಯೆಂತ್ ಗಿಂತ ೧. ೩೫ ಲಕ್ಷ ಹೆಚ್ಚು ಬೆಲೆ ಮತ್ತು ಬೆಲೆಬಾಳುವಿಕೆ ಕೂಡ. ನೀವೇನಾದರೂ ಬೇಸ್ ಸ್ಪೆಕ್ ಜೀಪ್ ಕಂಪಾಸ್ , ಅಥವಾ XUV ೫೦೦ ಕೊಳ್ಳಬೇಕೆಂದಿದ್ದಲ್ಲಿ ನೀವು ಇದನ್ನು ಒಮ್ಮೆ ಪರಿಗಣಿಸುವುದು ಉತ್ತಮ, ಹೆಚ್ಚಿನ ಸುರಕ್ಷತಾ ಸಲಕರಣೆಗಳಾದ ಆರು ಏರ್ಬ್ಯಾಗ್ ಗಳು ರೋಲ್ ಓವರ್ ಮಿಟಿಗೇಷನ್ ಮತ್ತು ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಇದನ್ನು ಕೊಳ್ಳಲು ಪ್ರೇರೇಪಿಸಬುದಾದ ವೇರಿಯೆಂಟ್ ಆಗಿ ಮಾಡಿದೆ. ನಿಮಗೆ ಹೆಚ್ಚಾಗಿ ದೊಡ್ಡದಾದ ಪರದೆಯ ಇನ್ಫೋಟೈನ್ಮೆಂಟ್ , ದೊಡ್ಡದಾದ ಹಾಗು ಹೆಚ್ಚಿನ ಮಾಹಿತಿಯೊಂದಿಗಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, HID ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು , ಚೆನ್ನಾಗಿರುವ ಆಂತರಿಯಾಗಳು , ಹಾಗು ESP ಯೊಂದಿಗಿನ ಟೆರ್ರಇನ್ ರೆಸ್ಪಾನ್ಸ್ ಸಿಸ್ಟಮ್ ಸಹ ದೊರೆಯುತ್ತದೆ.
ಹ್ಯಾರಿಯೆರ್ ಡೀಸೆಲ್ ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ.