ಬಿಡುಗಡೆಗೆ ಮೊದಲೇ Tata Safari EV ವಿವರಗಳು ಲೀಕ್, 2025 ರ ಆರಂಭದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ
ಟಾಟಾ ಸಫಾರಿ EV ಸುಮಾರು 500 ಕಿಲೋಮೀಟರ್‌ಗಳ ಕ್ಲೈಮ್ ಮಾಡಿರುವ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ
- ಟಾಟಾ ಸಫಾರಿ EV ಯಲ್ಲಿ ಹ್ಯಾರಿಯರ್ EV ಯಲ್ಲಿ ಬಳಸಲಾಗಿರುವ ಆಕ್ಟಿ.EV ಪ್ಲಾಟ್‌ಫಾರ್ಮ್ ಅನ್ನು ಬಳಸಲಾಗಿದೆ.
- ಇದು ಡೀಸೆಲ್-ಚಾಲಿತ ಸಫಾರಿಯನ್ನು ಹೋಲುವ ನಿರೀಕ್ಷೆಯಿದೆ, ಆದರೆ ಎಲೆಕ್ಟ್ರಿಕ್ ವರ್ಷನ್ ಗೆ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಬಹುದು.
- ಇದು ಈಗಾಗಲೇ ಇರುವ 12.3-ಇಂಚಿನ ಟಚ್‌ಸ್ಕ್ರೀನ್, ಡ್ರೈವರ್‌ಗಾಗಿ 10.25-ಇಂಚಿನ ಡಿಜಿಟಲ್ ಡಿಸ್‌ಪ್ಲೇ ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆಯಿದೆ.
- ಸುರಕ್ಷತಾ ಫೀಚರ್ ಗಳಲ್ಲಿ 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿರಬಹುದು.
- ಇದು 2025 ರ ಆರಂಭದಲ್ಲಿ ಮಾರುಕಟ್ಟೆಗೆ ಬರಬಹುದು ಮತ್ತು ಬೆಲೆಯು ರೂ. 32 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ಎಲ್ಲಾ ಟಾಟಾ SUVಗಳು ಎಲೆಕ್ಟ್ರಿಕ್ ಆಗುವತ್ತ ಸಾಗುತ್ತಿವೆ. ಅವುಗಳಲ್ಲಿ ಈಗಾಗಲೇ ಘೋಷಿಸಲಾದ ಹ್ಯಾರಿಯರ್ EV ಯ ಮೂರು-ಸಾಲಿನ ವರ್ಷನ್ ಆಗಿರುವ ಸಫಾರಿ EV ಕೂಡ ಒಂದಾಗಿದೆ. ಇತ್ತೀಚೆಗೆ, ಕೆಮಫ್ಲೋಜ್ ಮಾಡಲಾದ ಸಫಾರಿ EV ಯ ಟೆಸ್ಟ್ ವರ್ಷನ್ ಅನ್ನು ಟಾಟಾ ಪರೀಕ್ಷಿಸುತ್ತಿರುವುದನ್ನು ನಾವು ನೋಡಿದ್ದೇವೆ. ಹೊಸದಾಗಿ ಬಿಡುಗಡೆಯಾದ ಪಂಚ್ EVಯಂತೆಯೇ, ಟಾಟಾ ಸಫಾರಿಯ ಎಲೆಕ್ಟ್ರಿಕ್ ವರ್ಷನ್ ಕೂಡ ಟಾಟಾದ ಆಕ್ಟಿ.EV ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ಸ್ಪೈ ಶಾಟ್ ಗಳಲ್ಲಿ ನಾವು ನೋಡಿರುವ ಕಾರಿನ ವಿವರಗಳು ಇಲ್ಲಿವೆ.
ಟೆಸ್ಟ್ ಕಾರನ್ನು ಕೆಮಫ್ಲೋಜ್ ಮಾಡಿದ್ದರೂ ಕೂಡ, ಸಫಾರಿ EV ಯು ಅದರ ICU ವರ್ಷನ್ ನ ಡಿಸೈನ್ ಪಡೆದಿರುವುದನ್ನು ನಾವು ಗಮನಿಸಿದ್ದೇವೆ. ಮುಂಭಾಗದ ಗ್ರಿಲ್, ಕನೆಕ್ಟೆಡ್ LED DRL ಗಳು ಮತ್ತು ಮುಂಭಾಗದ ಹೆಡ್‌ಲೈಟ್ ಗಳು ಸಫಾರಿಯ ಸಾಮಾನ್ಯ ವರ್ಷನ್ ನಂತೆಯೇ ಕಂಡುಬರುತ್ತವೆ. ಅಲೊಯ್ ವೀಲ್ ಗಳು ಸ್ವಲ್ಪ ವಿಭಿನ್ನವಾಗಿ ಕಾಣುತ್ತಿದ್ದರೂ ಕೂಡ, ಸಾಮಾನ್ಯ ಡೀಸೆಲ್ ಸಫಾರಿಯಲ್ಲಿರುವ 19-ಇಂಚಿನ ವೀಲ್ ಗಳನ್ನು ಇಲ್ಲಿ ಕೂಡ ನೀಡಲಾಗಿದೆ. ಹಿಂಭಾಗದಲ್ಲಿ ಕೂಡ, ಸಫಾರಿ EV ಅದೇ ರೀತಿಯ ಕನೆಕ್ಟೆಡ್ LED ಟೈಲ್‌ಲೈಟ್‌ಗಳನ್ನು ಹೊಂದಿದೆ.
ಇದನ್ನು ಕೂಡ ಓದಿ: ಹುಂಡೈ ಕ್ರೆಟಾ N ಲೈನ್ N8 ಸಂಪೂರ್ಣ ವಿವರ ಇಲ್ಲಿದೆ
ಒಳಭಾಗದ ಅಪ್ಡೇಟ್ ಗಳು
ಇದರ ಸುರಕ್ಷತಾ ಫೀಚರ್ ಗಳಲ್ಲಿ 7 ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಅಡ್ವಾನ್ಸಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಅನ್ನು ಒಳಗೊಂಡಿರಬಹುದು.
ನಿರೀಕ್ಷಿಸಲಾಗಿರುವ ರೇಂಜ್
ಸಫಾರಿ EV ಯ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿವರಗಳ ಬಗ್ಗೆ ಟಾಟಾ ನಮಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ, ಆದರೆ ಇದು ಒಂದು ಚಾರ್ಜ್‌ನಲ್ಲಿ ಸುಮಾರು 500 ಕಿಲೋಮೀಟರ್‌ಗಳ ದೂರವನ್ನು ಕ್ರಮಿಸಬಹುದು ಎಂದು ನಾವು ಭಾವಿಸುತ್ತೇವೆ. ಟಾಟಾ ಸಫಾರಿಯ ಎಲೆಕ್ಟ್ರಿಕ್ ವರ್ಷನ್ ಟಾಟಾದ ಹೊಸ Acti.EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹ್ಯಾರಿಯರ್ EV ಆಲ್-ವೀಲ್-ಡ್ರೈವ್ ಆಯ್ಕೆಯನ್ನು ಹೊಂದಿರುವ ಕಾರಣ, ಸಫಾರಿ EV ಕೂಡ ಅದೇ ಆಯ್ಕೆಯನ್ನು ಪಡೆಯಬಹುದು.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಸಫಾರಿ EV ಯ ಬೆಲೆಯು ರೂ 32 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಬಹುದು. ಇದು 2025 ರ ಆರಂಭದಲ್ಲಿ ಭಾರತದ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಸಫಾರಿ EV ಯು MG ZS EV, ಹುಂಡೈ ಕೋನಾ ಎಲೆಕ್ಟ್ರಿಕ್, BYD ಅಟ್ಟೊ 3 ಮತ್ತು ಮುಂಬರುವ ಮಾರುತಿ eVX ಗೆ ಪರ್ಯಾಯ ಆಯ್ಕೆಯಾಗಲಿದೆ.
ಇನ್ನಷ್ಟು ಓದಿ: ಟಾಟಾ ಸಫಾರಿ ಡೀಸೆಲ್