Tata Tiago EV ವರ್ಸಸ್ Tata Nexon EV: ಯಾವ ಇವಿ ಬೇಗ ಚಾರ್ಜ್ ಆಗುತ್ತದೆ ?
ಟಾಟಾ ನೆಕ್ಸಾನ್ ಇವಿ ಗಾಗಿ ansh ಮೂಲಕ ಜೂನ್ 28, 2024 11:43 am ರಂದು ಪ್ರಕಟಿಸಲಾಗಿದೆ
- 105 Views
- ಕಾಮೆಂಟ್ ಅನ್ನು ಬರೆಯಿರಿ
ನೆಕ್ಸಾನ್ ಇವಿ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದುವುದರೊಂದಿಗೆ, ಇದು ತ್ವರಿತ DC ಸ್ಪೀಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ
ಟಾಟಾ ಟಿಯಾಗೊ ಇವಿಯು ಕಾರು ತಯಾರಕರ ಅತ್ಯಂತ ಕೈಗೆಟಕುವ ಬೆಲೆಯಲ್ಲಿರುವ ಎಲೆಕ್ಟ್ರಿಕ್ ಕಾರು ಆಗಿದ್ದು ಮತ್ತು ಇದು 19.2 ಕಿ.ವ್ಯಾಟ್ ಮತ್ತು 24 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಮತ್ತೊಂದೆಡೆ, ನೆಕ್ಸಾನ್ ಇವಿಯು ನಮ್ಮ ಸ್ವದೇಶಿ ಬ್ರಾಂಡ್‌ನಿಂದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದ್ದು, ಮತ್ತು ಇದು 30 ಕಿ.ವ್ಯಾಟ್ ಮತ್ತು 40.5 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಸಹ ಪಡೆಯುತ್ತದೆ. ಈ ಎರಡೂ ಮೊಡೆಲ್‌ಗಳ ದೊಡ್ಡ ಬ್ಯಾಟರಿ ಪ್ಯಾಕ್‌ಗಳ ಚಾರ್ಜಿಂಗ್ ಸಮಯವನ್ನು ನಾವು 15 ರಿಂದ 100 ಪ್ರತಿಶತದವರೆಗೆ ಪರೀಕ್ಷಿಸಿದ್ದೇವೆ ಮತ್ತು ಫಲಿತಾಂಶಗಳು ಇಲ್ಲಿವೆ.
ಇದನ್ನೂ ಓದಿ: ಭಾರತ್ NCAP ನಿಂದ Tata Nexon EVಗೆ 5 ಸ್ಟಾರ್ ಸುರಕ್ಷತಾ ರೇಟಿಂಗ್
ಗಮನಿಸಿ: ಈ ಎರಡೂ ಕಾರುಗಳ ಚಾರ್ಜಿಂಗ್ ಸಮಯವನ್ನು ಒಂದೇ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಪರೀಕ್ಷಿಸಲಾಯಿತು, ಆದರೆ, ಒಂದು ವರ್ಷದ ಅಂತರದಲ್ಲಿ. ಟಿಯಾಗೋ ಇವಿಯನ್ನು 2023ರ ಜೂನ್‌ನಲ್ಲಿ ಪರೀಕ್ಷಿಸಲಾಯಿತು ಮತ್ತು ನೆಕ್ಸಾನ್ ಇವಿಯನ್ನು 2024ರ ಜೂನ್‌ನಲ್ಲಿ ಪರೀಕ್ಷಿಸಲಾಯಿತು, ಆದ್ದರಿಂದ ಎರಡೂ ಪರೀಕ್ಷೆಗಳನ್ನು ಒಂದೇ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿ ನಡೆಸಲಾಯಿತು.
ಪ್ರತಿಶತ |
ಟಾಟಾ ಟಿಯಾಗೋ ಇವಿ ಎಲ್ ಆರ್ |
ಟಾಟಾ ನೆಕ್ಸಾನ್ ಇವಿ ಎಲ್‌ಆರ್ |
15-20% |
4 ನಿಮಿಷಗಳು |
5 ನಿಮಿಷಗಳು |
20-30% |
8 ನಿಮಿಷಗಳು |
9 ನಿಮಿಷಗಳು |
30-40% |
8 ನಿಮಿಷಗಳು |
9 ನಿಮಿಷಗಳು |
40-50% |
8 ನಿಮಿಷಗಳು |
8 ನಿಮಿಷಗಳು |
50-60% |
8 ನಿಮಿಷಗಳು |
9 ನಿಮಿಷಗಳು |
60-70% |
8 ನಿಮಿಷಗಳು |
8 ನಿಮಿಷಗಳು |
70-80% |
9 ನಿಮಿಷಗಳು |
11 ನಿಮಿಷಗಳು |
80-85% |
4 ನಿಮಿಷಗಳು |
6 ನಿಮಿಷಗಳು |
85-90% |
5 ನಿಮಿಷಗಳು |
6 ನಿಮಿಷಗಳು |
90-95% |
7 ನಿಮಿಷಗಳು |
11 ನಿಮಿಷಗಳು |
95-100% |
26 ನಿಮಿಷಗಳು |
31 ನಿಮಿಷಗಳು |
ತೆಗೆದುಕೊಂಡ ಒಟ್ಟು ಸಮಯ |
1 ಗಂಟೆ 35 ನಿಮಿಷಗಳು |
1 ಗಂಟೆ 53 ನಿಮಿಷಗಳು |
ಗಮನಿಸಿದ ಪ್ರಮುಖ ಅಂಶಗಳು
-
ಟಿಯಾಗೋ ಇವಿಯ ಚಾರ್ಜ್ ಸ್ಥಿತಿಯು 70 ಪ್ರತಿಶತವನ್ನು ತಲುಪುವವರೆಗೆ ಪ್ರತಿ 10 ಪ್ರತಿಶತಕ್ಕೆ 8 ನಿಮಿಷಗಳ ಸ್ಥಿರ ಚಾರ್ಜಿಂಗ್ ಅನ್ನು ತೋರಿಸಿದೆ, ಆದರೆ 70 ರಿಂದ 80 ಪ್ರತಿಶತದಷ್ಟು ಚಾರ್ಜ್ ಆಗಲು 9 ನಿಮಿಷದಷ್ಟು ಸಮಯವನ್ನು ತೆಗೆದುಕೊಂಡಿದೆ.
-
ಮತ್ತೊಂದೆಡೆ, ನೆಕ್ಸಾನ್ ಇವಿಯ ಚಾರ್ಜಿಂಗ್ ಸಮಯವು 80 ಪ್ರತಿಶತವನ್ನು ತಲುಪುವವರೆಗೆ ಪ್ರತಿ 10 ಪ್ರತಿಶತಕ್ಕೆ 8 ಮತ್ತು 11 ನಿಮಿಷಗಳ ನಡುವೆ ಏರಿಳಿತಗೊಳ್ಳುತ್ತದೆ.
-
ಟಿಯಾಗೋ ಇವಿಯಲ್ಲಿ 80 ರಿಂದ 100 ಪ್ರತಿಶತದವರೆಗೆ ಚಾರ್ಜ್ ಆಗಲು ಸಮಯವು ಹೆಚ್ಚುತ್ತಲೇ ಇತ್ತು ಮತ್ತು ಕೊನೆಯ 5 ಪ್ರತಿಶತವು ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು.
-
ನೆಕ್ಸಾನ್ ಇವಿಗಾಗಿ, ಚಾರ್ಜಿಂಗ್ ಸಮಯವು 90 ಪ್ರತಿಶತದವರೆಗೆ ಸ್ಥಿರವಾಗಿರುತ್ತದೆ ಮತ್ತು ನಂತರ ಅದು ಏರಲು ಪ್ರಾರಂಭಿಸಿತು, ಕೊನೆಯ 5 ಪ್ರತಿಶತಕ್ಕೆ 31 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
-
ಒಟ್ಟಾರೆಯಾಗಿ, ನೆಕ್ಸಾನ್ ಇವಿಯಯ ಚಾರ್ಜಿಂಗ್ ಸಮಯವು ಟಿಯಾಗೋ ಇವಿಗಿಂತ 18 ನಿಮಿಷಗಳಷ್ಟು ಹೆಚ್ಚಿದೆ, ಅಂದಾಜು 20 ನಿಮಿಷಗಳು. ಆದರೆ ಈ ವ್ಯತ್ಯಾಸವು ಹೆಚ್ಚು ಮಹತ್ವದ್ದಾಗಿಲ್ಲ ಎಂದು ತೋರುತ್ತಿದೆ, ಏಕೆಂದರೆ ನೆಕ್ಸಾನ್ ಇವಿಯ ಬ್ಯಾಟರಿ ಪ್ಯಾಕ್‌ನ ಗಾತ್ರವು Tiago EV ಗಿಂತ ಡಬಲ್ ಇದೆ.
ಚಾರ್ಜಿಂಗ್‌ನ ಸ್ಪೀಡ್
ನೆಕ್ಸಾನ್ ಇವಿಯು 50 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಆದರೆ ಪರೀಕ್ಷೆಗಳ ಸಮಯದಲ್ಲಿ, ಇದು 29 ರಿಂದ 30 ಕಿ.ವ್ಯಾಟ್ ಚಾರ್ಜ್ ಅನ್ನು 80 ಪ್ರತಿಶತದವರೆಗೆ ತೆಗೆದುಕೊಳ್ಳುತ್ತದೆ. ಅದರ ನಂತರ, ಚಾರ್ಜಿಂಗ್ ವೇಗವು ಕಡಿಮೆಯಾಗಲು ಪ್ರಾರಂಭಿಸಿತು ಮತ್ತು ಕೊನೆಯ ಕೆಲವು ಪ್ರತಿಶತವನ್ನು 3 ಕಿ.ವ್ಯಾಟ್‌ನಲ್ಲಿ ಮಾಡಲಾಯಿತು.
ಇದನ್ನೂ ನೋಡಿ: Exclusive: ಟೆಸ್ಟಿಂಗ್ ವೇಳೆಯಲ್ಲಿ Tata Harrier EVಯ ಎಲೆಕ್ಟ್ರಿಕ್ ಮೋಟಾರ್ ಸೆಟಪ್‌ನ ಮಾಹಿತಿಗಳು ಬಹಿರಂಗ
ಅಂತೆಯೇ, ಟಿಯಾಗೋ ಇವಿಯು 25 ಕಿ.ವ್ಯಾಟ್‌ವರೆಗೆ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಪರೀಕ್ಷೆಯ ಸಮಯದಲ್ಲಿ, ಇದು 80 ಪ್ರತಿಶತದವರೆಗೆ 17 ಕಿ.ವ್ಯಾಟ್‌ನಲ್ಲಿ ಚಾರ್ಜ್ ಮಾಡುತ್ತಿದೆ. ಇದರ ಚಾರ್ಜ್ ದರವು 80 ಪ್ರತಿಶತದ ನಂತರ ಕುಸಿಯಿತು ಮತ್ತು ಕೊನೆಯ ಕೆಲವು ಪ್ರತಿಶತವನ್ನು 2 ಕಿ.ವ್ಯಾಟ್‌ನಲ್ಲಿ ಮಾಡಲಾಯಿತು.
ಎರಡೂ ಮೊಡೆಲ್‌ಗಳ 10-80 ಪ್ರತಿಶತ ಡಿಸಿ ಫಾಸ್ಟ್ ಚಾರ್ಜಿಂಗ್ ಸಮಯವೂ ಹೋಲುತ್ತದೆ. ನೆಕ್ಸಾನ್ ಇವಿಯ 10-80 ಪ್ರತಿಶತ ಸಮಯವು 56 ನಿಮಿಷಗಳು ಮತ್ತು ಟಿಯಾಗೋ ಇವಿಯ ಸಮಯವು 58 ನಿಮಿಷಗಳು ಮತ್ತು ಈ ಚಾರ್ಜ್‌ನೊಂದಿಗೆ ಹೆಚ್ಚು ಬಳಸಬಹುದಾದ ರೇಂಜ್ ಅನ್ನು ನೀಡುತ್ತದೆ. ಆದಾಗ್ಯೂ, ದೊಡ್ಡ ಬ್ಯಾಟರಿ ಪ್ಯಾಕ್‌ನಿಂದಾಗಿ ನೆಕ್ಸಾನ್ ಇವಿಯು ಕೊನೆಯ 20 ಪ್ರತಿಶತದಷ್ಟು ಚಾರ್ಜ್ ಆಗಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.
ಗಮನಿಸಿ: ಮೇಲೆ ತೋರಿಸಿರುವ ಚಾರ್ಜಿಂಗ್ ಸಮಯಗಳು ತಾಪಮಾನ ಮತ್ತು ಎಲೆಕ್ಟ್ರಿಕ್ ಕಾರಿನ ಬ್ಯಾಟರಿ ಆರೋಗ್ಯದ ಆಧಾರದ ಮೇಲೆ ಬದಲಾಗಬಹುದು. ಈ ಎರಡೂ ಕಾರುಗಳು ಪರೀಕ್ಷೆಯ ಸಮಯದಲ್ಲಿ ತೆಗೆದುಕೊಂಡಿದ್ದಕ್ಕಿಂತ ಹೆಚ್ಚಿನ ಚಾರ್ಜ್ ಅನ್ನು ತೆಗೆದುಕೊಳ್ಳಬಹುದು. ತಂಪಾದ ವಾತಾವರಣದಲ್ಲಿ, ಎರಡೂ ಕಾರುಗಳ ಚಾರ್ಜಿಂಗ್ ಸಮಯವು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇನ್ನಷ್ಟು ಓದಿ : ನೆಕ್ಸಾನ್ ಇವಿ ಆಟೋಮ್ಯಾಟಿಕ್