ಟಾಟಾ ದವರ ಮುಂಬರುವ ಪ್ರೀಮಿಯಂ ಹ್ಯಾಚ್ ಬ್ಯಾಕ್ ಅಲ್ಟ್ರಾಜ್ ಮತ್ತೊಮ್ಮೆ ನೋಡಲಾಗಿದೆ, ಆಂತರಿಕಗಳನ್ನು ವಿವರವಾಗಿ ನೋಡಲಾಗಿದೆ.
ಟಾಟಾ ಆಲ್ಟ್ರೋಝ್ 2020-2023 ಗಾಗಿ dhruv ಮೂಲಕ ಸೆಪ್ಟೆಂಬರ್ 19, 2019 11:58 am ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಜಿನೀವಾ ಆವೃತ್ತಿಯ ಅಲ್ಟ್ರಾಜ್ ಮತ್ತು ಇಂಡಿಯಾ -ಸ್ಪೆಕ್ ಅಲ್ಟ್ರಾಜ್ ಗಳ ನಡುವಿನ ಪ್ರಮುಖ ಭಿನ್ನತೆ ಎಂದರೆ ಅಲಾಯ್ ವೀಲ್ ಗಳು.
- ಅಲ್ಟ್ರಾಜ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮಾನ್ಯುಯಲ್ ಬಟನ್ ಗಳನ್ನು ಉಪಯೋಗಿಸುತ್ತದೆ.
- ಚಪ್ಪಟೆ ತಳ ಇರುವ ಸ್ಟಿಯರಿಂಗ್ ವೀಲ್ ಪಡೆಯುತ್ತದೆ. ಏಕೋ ಮೋಡ್ ಮತ್ತು ಕ್ರೂಸ್ ಕಂಟ್ರೋಲ್.
- ಹ್ಯಾರಿಯೆರ್ ತರಹದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯುತ್ತದೆ
- ಅಲ್ಟ್ರಾಜ್ ಬಿಡುಗಡೆ ನವೆಂಬರ್ ನಲ್ಲಿ ನಿರಿಕ್ಷಿಸಲಾಗಿದೆ.
- ಇದು ಪವರ್ ಟ್ರೈನ್ ಅನ್ನು ನೆಕ್ಸಾನ್ ಜೊತೆ ಹಂಚಿಕೊಂಡಿದೆ ಆದರೆ ಸರಿಪಡಿಸಿದ ಆವೃತ್ತಿಯಲ್ಲಿ
- ಪ್ರೀಮಿಯಂ ಹ್ಯಾಚ್ ಬ್ಯಾಕ್ ನ ಬೆಲೆ ಪಟ್ಟಿ ರೂ 5.5 ಲಕ್ಷ ದಿಂದ 8.5 ಲಕ್ಷ ವರೆಗೆ ನಿರೀಕ್ಷಿಸಬಹುದು.
- ಅದರ ಪ್ರತಿಸ್ಪರ್ದಿಗಳು ಬಲೆನೊ, ಎಲೈಟ್ i20, ಪೋಲೊ ಮತ್ತು ಜಾಜ್
ಟಾಟಾ ಅಲ್ಟ್ರಾಜ್ ಅನ್ನು ಮತ್ತೆ ನೋಡಲಾಗಿದೆ, ಮರೆಮಾಚುವಿಕೆಗಳೊಂದಿಗೆ. ಈ ವಾಹನವನ್ನು ಈ ಹಿಂದೆಯೂ ಹೀಗೆ ನೋಡಲಾಗಿತ್ತು , ಹೊಸ ಚಿತ್ರಗಳು ಕ್ಯಾಬಿನ್ ವಿವರಗಳನ್ನು ಹೈಲೈಟ್ ಮಾಡುತ್ತದೆ.
ಅದರಲ್ಲಿ ಡುಯಲ್ ಟೋನ್ ಡ್ಯಾಶ್ ಬೋರ್ಡ್ ಮತ್ತು ಫ್ಲೋಟಿಂಗ್ ಟಚ್ ಸ್ಕ್ರೀನ್ ಫೀಚರ್ ಕೊಡಲಾಗಿದೆ ಅದು 7-ಇಂಚು ಯೂನಿಟ್ ತರಹ ಕಾಣುತ್ತದೆ ಅದರಲ್ಲಿ ಮಾನ್ಯುಯಲ್ ಕಂಟ್ರೋಲ್ ಗಳು ಇದ್ದು ಅದರಲ್ಲಿ ವಾಲ್ಯೂಮ್ ಮತ್ತು ಸೀಕ್ ಕಾರ್ಯಗಳು ಇದೆ, ಅವು ಡ್ರೈವರ್ ಗೆ ಅನುಕೂಲವಾಗುತ್ತದೆ. ಈ ಯೂನಿಟ್ ನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಜೊತೆಗೆ ವಾಯ್ಸ್ ಕಮಾಂಡ್ ಕೊಡಲಾಗಿದೆ. ಒಂದು ಆಫ್ ಸ್ವಿಚ್ ಇರುವುದರ ಅರ್ಥ ಉಪಯೋಗಿಗಳು ಸ್ಕ್ರೀನ್ ಅನ್ನು ಆಫ್ ಮಾಡಬಹುದು ಅಥವಾ ಕಡಿಮೆ ಬೆಳಕು ಇರುವಂತೆ ಮಾಡಬಹುದು ಕೇವಲ ಸಮಯ ಡಿಸ್ಪ್ಲೇ ಇರುವಂತೆ .
ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳಲ್ಲಿ ಕ್ರೂಸ್ ಕಂಟ್ರೋಲ್, ಮತ್ತು ಇತರ ಬಟನ್ ಗಳು ಇದ್ದು ಇನ್ಫೋಟೈನ್ಮೆಂಟ್ ಸಿಸ್ಟಮ್ ಉಪಯೋಗಿಸಲು ಸಹಕಾರಿಯಾಗಿದೆ ಅಥವಾ ವೆಹಿಕಲ್ ವಿವರಗಳನ್ನು ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಯಲ್ಲಿ ನೋಡಬಹುದು. ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಇರುವ ಕೇವಲ ಅನಲಾಗ್ ತುಣುಕು ಎಂದರೆ ಅಲ್ಟ್ರಾಜ್ ನಲ್ಲಿರುವ ಸ್ಪೀಡೋಮೀಟರ್ ಎಲ್ಲ ತುಣುಕುಗಳು ನೋಡಲು ನಾವು ಜಿನೀವಾ ಎವೃತ್ತಿ ಅಲ್ಟ್ರಾಜ್ ದಲ್ಲಿ ಇದ್ದ ತರಹ ಇದೆ.
ಅಲ್ಟ್ರಾಜ್ ನಲ್ಲಿ ಡೋರ್ ಹ್ಯಾಂಡಲ್ ಮೇಲೆ ಬಟನ್ ಗಳು ಮತ್ತು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಫೀಚರ್, ಇದೆ ಅದು ಅಲ್ಟ್ರಾಜ್ ನಲ್ಲಿ ಪಸ್ಸಿವ್ ಕೀ ಲೆಸ್ ಎಂಟ್ರಿ ದೊರೆಯುತ್ತದೆ ಎಂದು ಸೂಚಿಸುತ್ತದೆ. ಇದರಲ್ಲಿ ಏಕೋ ಡ್ರೈವ್ ಮೋಡ್ ಬಟನ್ ಇದ್ದು ಗೇರ್ ಬಾಕ್ಸ್ ಹಾಗು ಸ್ಟೋರೇಜ್ ಸ್ಪೇಸ್ ಸಹ ಹೊಂದಿದೆ.
ಹೊಸ ಇಣುಕು ಚಿತ್ರಗಳು ಜಿನೀವಾ ಆವೃತ್ತಿಯ ಅಲ್ಟ್ರಾಜ್ ಗಿಂತಲೂ ಭಾರತದಲ್ಲಿ ಉತ್ಪಾದನೆಯಾಗುವ ಆವೃತ್ತಿಗಿಂತ ಭಿನ್ನವಾಗಿರುವ ವಿಷಯಗಳನ್ನು ತೋರಿಸುವುದಿಲ್ಲ. ಭಿನ್ನವಾಗಿ ಕಾಣುವ ಕೇವಲ ವಿಷಯವೆಂದರೆ ಅದು ಅಲಾಯ್ ವೀಲ್ ಗಳು. ಬ್ಲಾಕ್ ಸಶ್ ವಿಂಡೋ ಲೈನ್ ಮುಕಾಂತರ ಹೋಗುತ್ತದೆ ಮತ್ತು ರೇರ್ ವಿಂಡ್ ಶೀಲ್ಡ್ ಸಹ ಜಿನೀವಾ ಆವೃತ್ತಿ ಕಾರ್ ನಲ್ಲಿ ಇತ್ತು ಹಾಗು ಅದರ ನೋಟ ಇಂಡಿಯಾ ಸ್ಪೆಕ್ ಕಾರ್ ನಲ್ಲಿ ಸಹ ಗೋಚರವಾಗುತ್ತಿದೆ.
ಸಾದಾರಣವಾಗಿ, ಅಲ್ಟ್ರಾಜ್ ವನ್ನು ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಪ್ರೀಮಿಯಂ ಹ್ಯಾಚ್ ಬ್ಯಾಕ್ ಅನ್ನು ನವೆಂಬರ್ ಗೆ ಮುಂದೂಡಲಾಗಿದೆ. ಟಾಟಾ ದವರು ನಿದಾನವಾಗುತ್ತಿರುವುದಕ್ಕೆ ಯಾವುದೇ ಕರಣ ಕೊಟ್ಟಿಲ್ಲ , ನಮ್ಮ ನಿರೀಕ್ಷೆಯಂತೆ ಅದಕ್ಕೆ ಭಾರತದ ಆಟೋ ಉದ್ಯಮದ ಹಿನ್ನಡತೆ ಕಾರಣವಾಗಿರಬಹುದು.
ಅಲ್ಟ್ರಾಜ್ ನಲ್ಲಿನ ಎಂಜಿನ್ ಆಯ್ಕೆಗಳಲ್ಲಿ 1.2- ಲೀಟರ್ ನಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಒಂದು 1.2-ಲೀಟರ್ ಟರ್ಬೊ ಪೆಟ್ರೋಲ್ ಆಯ್ಕೆ ಇರಬಹುದು , ಅದು ನೆಕ್ಸಾನ್ ನಲ್ಲಿ ಸಹ ಇದೆ. ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಸಹ ನೆಕ್ಸಾನ್ ನಲ್ಲಿ ಇದೆ. ಟರ್ಬೊ ಎಂಜಿನ್ 102PS/140Nm ಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ. ನೆಕ್ಸಾನ್ ನಲ್ಲಿ ಡೀಸೆಲ್ 110PS ಮತ್ತು 260Nm ಕೊಡುತ್ತದೆ. ಮತ್ತು ನಮ್ಮ ಅನಿಸಿಕೆಯಂತೆ ಅಲ್ಟ್ರಾಜ್ ನಲ್ಲಿ ಕಡಿಮೆ ಪವರ್ ಇರುವುದನ್ನು ಅಳವಡಿಸಬಹುದು. ಮಾನ್ಯುಯಲ್ ಜೊತೆಗೆ, ಬಿಡುಗಡೆ ಸಮಯದಲ್ಲಿ ಟಾಟಾ ದವರು AMT ಗೇರ್ ಬಾಕ್ಸ್ ಕೊಡುವ ನಿರೀಕ್ಷೆ ಇದೆ.
ಒಮ್ಮೆ ಟಾಟಾ ದವರು ಅಲ್ಟ್ರಾಜ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದರೆ, ಅವು ಮಾರುತಿ ಸುಜುಕಿ ಬಲೆನೊ, ಹುಂಡೈ ಎಲೈಟ್ i20, ವೋಕ್ಸ್ವ್ಯಾಗನ್ ಪೋಲೊ ಮತ್ತು ಹೋಂಡಾ ಜಾಜ್ ಗಳ ಜೊತೆ ಸ್ಪರ್ಧೆ ಮಾಡಬಹುದು. ನಮ್ಮ ನಿರೀಕ್ಷೆಯಂತೆ ಅಲ್ಟ್ರಾಜ್ ಬೆಲೆ ರೂ 5.5 ಲಕ್ಷ ದಿಂದ ರೂ 8.5 ಲಕ್ಷ ವರೆಗೆ ಇರುತ್ತದೆ.
0 out of 0 found this helpful