ಬಿಡುಗಡೆಗೆ ಮುಂಚೆಯೆ 2 ತಿಂಗಳವರೆಗೆ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Hyundai Creta N Line
ಹುಂಡೈ ಕ್ರೇಟಾ ಎನ್ ಲೈನ್ ಗಾಗಿ rohit ಮೂಲಕ ಮಾರ್ಚ್ 06, 2024 05:50 pm ರಂದು ಪ್ರಕಟಿಸಲಾಗಿದೆ
- 38 Views
- ಕಾಮೆಂಟ್ ಅನ್ನು ಬರೆಯಿರಿ
ಕ್ರೆಟಾ ಎಸ್‌ಯುವಿಯ ಸ್ಪೋರ್ಟಿಯರ್ ಆಗಿ ಕಾಣುವ ಆವೃತ್ತಿಯು ಭಾರತದಲ್ಲಿ ಮಾರ್ಚ್ 11 ರಂದು ಮಾರಾಟವಾಗಲಿದೆ
- ಕ್ರೆಟಾ ಎನ್ ಲೈನ್‌ಗಾಗಿ ಬುಕ್ಕಿಂಗ್‌ಗಳು ಆನ್‌ಲೈನ್ ಮತ್ತು ಡೀಲರ್‌ಶಿಪ್‌ಗಳಲ್ಲಿ 25,000 ರೂ.ಗೆ ಈಗಾಗಲೇ ಪ್ರಾರಂಭವಾಗಿದೆ.
- ಈ ಎಸ್‌ಯುವಿ ಬಿಡುಗಡೆಯ ದಿನದಿಂದ ಆರರಿಂದ ಎಂಟು ವಾರಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿರಬಹುದು.
- ಇದರ ಬಾಹ್ಯ ಪರಿಷ್ಕರಣೆಗಳು ರೆಡ್ ಹೈಲೈಟ್ಸ್‌ಗಳು ಮತ್ತು ಸುತ್ತಲೂ 'N ಲೈನ್' ಬ್ಯಾಡ್ಜ್‌ಗಳನ್ನು ಒಳಗೊಂಡಿವೆ.
- ಕ್ಯಾಬಿನ್‌ನ ಡ್ಯಾಶ್‌ಬೋರ್ಡ್‌ನಲ್ಲಿ ರೆಡ್ ಎಕ್ಸೆಂಟ್‌ಗಳೊಂದಿಗೆ ಸಂಪೂರ್ಣ ಕಪ್ಪು ಥೀಮ್ ಅನ್ನು ಪಡೆಯುತ್ತದೆ.
- ಬೋರ್ಡ್‌ನಲ್ಲಿರುವ ವೈಶಿಷ್ಟ್ಯಗಳು ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು, ಆರು ಏರ್‌ಬ್ಯಾಗ್‌ಗಳು ಮತ್ತು ADAS ಅನ್ನು ಒಳಗೊಂಡಿರಬಹುದು.
- 6-ಸ್ಪೀಡ್ ಮ್ಯಾನುಯಲ್ ಮತ್ತು 7-ಸ್ಪೀಡ್ ಡಿಸಿಟಿ ಎರಡನ್ನೂ ಹೊಂದಿರುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.
- ಇದರ ಎಕ್ಸ್ ಶೋರೂಂ ಬೆಲೆಗಳು 17.50 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು.
ಬಹು ನಿರೀಕ್ಷಿತ ಹ್ಯುಂಡೈ ಕ್ರೆಟಾ ಎನ್ ಲೈನ್ ಮಾರ್ಚ್ 11 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹ್ಯುಂಡೈ ಈಗಾಗಲೇ ಆನ್‌ಲೈನ್ ಮತ್ತು ಅದರ ಡೀಲರ್‌ಶಿಪ್‌ಗಳಲ್ಲಿ 25,000 ರೂ.ಗೆ ಈ ಸ್ಪೋರ್ಟಿಯರ್ ಎಸ್‌ಯುವಿಗಾಗಿ ಗಾಗಿ ಬುಕ್ಕಿಂಗ್‌ಗಳನ್ನು ತೆಗೆದುಕೊಳ್ಳುತ್ತಿದೆ. 2024ರ ಮೇ ತಿಂಗಳಿನಿಂದ ಡೆಲಿವರಿಗಳು ಪ್ರಾರಂಭವಾಗುವ ಸಾಧ್ಯತೆಯೊಂದಿಗೆ ಕ್ರೆಟಾ ಎನ್ ಲೈನ್‌ನ ಬಿಡುಗಡೆಗಿಂತ ಮುಂಚಿತವಾಗಿಯೇ ಆರರಿಂದ ಎಂಟು ವಾರಗಳವರೆಗೆ ಇದರ ವೈಟಿಂಗ್ ಪಿರೇಡ್ ಅನ್ನು ಕಾರು ತಯಾರಕರು ಅಂದಾಜು ಮಾಡುತ್ತಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ.
ಅದರ ಬೆಲೆ ಘೋಷಣೆಗೆ ಮುಂಚಿತವಾಗಿ ಸ್ಪೋರ್ಟಿಯರ್ ಕ್ರೆಟಾದ ತ್ವರಿತ ಅವಲೋಕನ ಇಲ್ಲಿದೆ:
ಒಟ್ಟಾರೆ ಬದಲಾವಣೆಗಳ ಸಾರಾಂಶ
ಹ್ಯುಂಡೈ ಕ್ರೆಟಾ ಎನ್ ಲೈನ್ ಅನ್ನು ರೆಗುಲರ್ ಕ್ರೆಟಾದೊಂದಿಗೆ ಹೋಲಿಸಿದರೆ, ಎನ್-ಲೈನ್ ಸ್ಪೋರ್ಟಿಯರ್ ನೋಟವನ್ನು ಹೊಂದಿದೆ. ಸ್ಟ್ಯಾಂಡರ್ಡ್ ಕ್ರೆಟಾಗಿಂತ ಕ್ರೆಟಾ N ಲೈನ್‌ನಲ್ಲಿನ ಬದಲಾವಣೆಗಳನ್ನು ಗಮನಿಸುವುದಾದರೆ, ಇದು ಮರುವಿನ್ಯಾಸಗೊಳಿಸಲಾದ ಗ್ರಿಲ್, ಬದಲಾವಣೆ ಮಾಡಿದ ಬಂಪರ್‌ಗಳು, ಹೊರಭಾಗದಲ್ಲಿ ಬಹು 'N ಲೈನ್' ಬ್ಯಾಡ್ಜ್‌ಗಳು, ರೆಡ್ ಹೈಲೈಟ್‌ಗಳು, ಡ್ಯುಯಲ್-ಟಿಪ್ ಎಕ್ಸಾಸ್ಟ್ ಮತ್ತು ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ದೊಡ್ಡ 18-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಇದು ಕಾಂಟ್ರಾಸ್ಟ್ ಬ್ಲ್ಯಾಕ್ ರೂಫ್‌ನೊಂದಿಗೆ ಥಂಡರ್ ಬ್ಲೂ ಎಂಬ ಹೊಸ ಬಣ್ಣವನ್ನು ಸಹ ಪಡೆಯುತ್ತದೆ.
ಒಳಭಾಗದಲ್ಲಿ, ಡ್ಯಾಶ್‌ಬೋರ್ಡ್‌ನಲ್ಲಿ ಕೆಂಪು ಹೈಲೈಟ್‌ಗಳು ಮತ್ತು ಅಪ್ಹೋಲ್‌ಸ್ಟರಿಗಾಗಿ ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್‌ನಿಂದ ಪೂರಕವಾಗಿರುವ ಎಲ್ಲಾ-ಬ್ಲ್ಯಾಕ್ ಥೀಮ್‌ನೊಂದಿಗೆ ಕಾರು ತಯಾರಕರು ಅದನ್ನು ಒದಗಿಸುತ್ತಾರೆ. ಕ್ರೆಟಾ ಎನ್ ಲೈನ್ ಸಹ ಎನ್ ಲೈನ್ ಗಾಗಿ ವಿಶೇಷ ಸ್ಟೀರಿಂಗ್ ವೀಲ್‌ನೊಂದಿಗೆ ಬರಲಿದೆ.
ಇದು ಯಾವ ವೈಶಿಷ್ಟ್ಯಗಳನ್ನು ಪಡೆಯುತ್ತದೆ?
ನಾವು ಹ್ಯುಂಡೈ ಕ್ರೆಟಾ ಎನ್ ಲೈನ್ ಅನ್ನು ಸ್ಟ್ಯಾಂಡರ್ಡ್ ಮಾಡೆಲ್‌ನ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳೊಂದಿಗೆ (ಒಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್‌ಗಾಗಿ), ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಎಸಿಯೊಂದಿಗೆ ನೀಡಬಹುದೆಂದು ನಿರೀಕ್ಷಿಸುತ್ತಿದ್ದೇವೆ.
ಪ್ರಯಾಣಿಕರ ರಕ್ಷಣೆಗೆ ಸಂಬಂಧಿಸಿದಂತೆ, ಸ್ಪೋರ್ಟಿಯರ್ ಹ್ಯುಂಡೈ ಎಸ್‌ಯುವಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಹಿಲ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನೊಂದಿಗೆ ಆಟೋ-ಹೋಲ್ಡ್ ಅನ್ನು ಹೊಂದಿರುತ್ತದೆ. ಕ್ರೆಟಾ ಎನ್ ಲೈನ್ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ತಂತ್ರಜ್ಞಾನವನ್ನು ಪಡೆಯುವ ಸಾಧ್ಯತೆಯಿದೆ.
ಇದನ್ನು ಸಹ ಓದಿ: ಕಂಪನಿಯು ಜನರೇಟಿವ್ AI ಗೆ ಗಮನಹರಿಸುತ್ತಿದ್ದಂತೆ EV ಯೋಜನೆಗಳನ್ನು ರದ್ದುಗೊಳಿಸಿದ Apple
ಎಂಜಿನ್ ಬಗ್ಗೆ ಗಮನಿಸುವುದಾದರೆ..
ಹ್ಯುಂಡೈ ಕ್ರೆಟಾ N ಲೈನ್ ಅನ್ನು ಅದೇ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS/ 253 Nm) ನೊಂದಿಗೆ ರೆಗುಲರ್ ಆವೃತ್ತಿಯಂತೆ ನೀಡುತ್ತದೆ, ಆದರೆ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಗೆ ಹೆಚ್ಚುವರಿಯಾಗಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಒದಗಿಸುವ ಸಾಧ್ಯತೆಯಿದೆ.
ಸಾಮಾನ್ಯ ಕ್ರೆಟಾಗಿಂತ ಇದನ್ನು ವಿಭಿನ್ನವಾಗಿಸಲು ಸುಧಾರಿತ ನಿರ್ವಹಣೆಗಾಗಿ ಸ್ವಲ್ಪ ವಿಭಿನ್ನವಾದ ಸಸ್ಪೆನ್ಸನ್ ಸೆಟಪ್ ಮತ್ತು ತ್ವರಿತ ಸ್ಟೀರಿಂಗ್ ರೆಸ್ಪೊನ್ಸ್ ಅನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಹ್ಯುಂಡೈ ಇದನ್ನು ಸ್ಪೋರ್ಟಿಯರ್-ಸೌಂಡಿಂಗ್ ಎಕ್ಸಾಸ್ಟ್‌ನೊಂದಿಗೆ ನೀಡಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಕ್ರೆಟಾ ಎನ್ ಲೈನ್‌ನ ಎಕ್ಸ್ ಶೋರೂಂ ಬೆಲೆಗಳು 17.50 ಲಕ್ಷ ರೂ.ನಿಂದ ಪ್ರಾರಂಭವಾಗಬಹುದೆಂದು ಅಂದಾಜಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಜಿಟಿಎಕ್ಸ್+ ಮತ್ತು ಎಕ್ಸ್-ಲೈನ್‌ನೊಂದಿಗೆ ಸ್ಪರ್ಧಿಸುತ್ತದೆ. ಹಾಗೆಯೇ ಇದು ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗುನ್ ಜಿಟಿ ಲೈನ್ ಮತ್ತು ಎಂಜಿ ಆಸ್ಟರ್‌ಗೆ ಸ್ಪೋರ್ಟಿಯರ್-ಕಾಣುವ ಪರ್ಯಾಯವಾಗಿಯೂ ಇರಲಿದೆ.
ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ