Login or Register ಅತ್ಯುತ್ತಮ CarDekho experience ಗೆ
Login

ಸೆನ್ಸಿಬಲ್ ಐಷಾರಾಮಿ ಎಸ್‌ಯುವಿಯಾದ DC2-ವಿನ್ಯಾಸಯುಕ್ತ ಕಸ್ಟಮ್ ಕ್ರಾಸ್ಓವರ್

published on ಮೇ 19, 2023 05:13 pm by rohit for ವೋಲ್ವೋ xc 90

ದೊಡ್ಡ ಗುಲ್ವಿಂಗ್ ಡೋರ್‌ಗಳನ್ನು ಹೊಂದಿರುವ ಇದರ ಲುಕ್ ಜನಪ್ರಿಯವಲ್ಲದಿದ್ದರೂ ಮರುವಿನ್ಯಾಸವು ಖಂಡಿತವಾಗಿಯೂ ವಿಶಿಷ್ಟವಾಗಿದೆ

ದಿಲೀಪ್ ಛಾಬ್ರಿಯಾ ಅವರ DC2 ಡಿಸೈನ್ ಸ್ಟುಡಿಯೋ ಕಾರು ಕಸ್ಟಮೈಸೇಶನ್‌ನಲ್ಲಿ ಪರಿಣತಿ ಸಾಧಿಸಿದೆ ಮತ್ತು ಸಂಸ್ಥೆಯು ಇಲ್ಲಿಯವರೆಗೆ ಹಲವಾರು ಕಂಪನಿಗಳ ಕಾರುಗಳನ್ನು ಮಾರ್ಪಡಿಸಿದೆ.

ಈಗ DC2 ಪ್ರಿ-ಫೇಸ್‌ಲಿಫ್ಟ್ ವೋಲ್ವೋ XC90 ಅನ್ನು ಕೂಪ್ ಕ್ರಾಸ್‌ಓವರ್ ಕಾರ್ ಆಗಿ ಕಸ್ಟಮೈಸ್ ಮಾಡಿದೆ, ಅದು ಮೊದಲ ನೋಟದಲ್ಲೇ ಎಲ್ಲರ ಗಮನವನ್ನು ಸೆಳೆಯುತ್ತದೆ. ಈ ಕಾರು ಪಡೆದುಕೊಂಡಿರುವ ಅಪ್‌ಡೇಟ್‌ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಪ್ರಯತ್ನಿಸೋಣ:

ಟೀಕೆಗೊಳಗಾದ ಬದಲಾವಣೆಗಳು

DC2 ಈ ಎಸ್‌ಯುವಿಯ ಬಾಹ್ಯ ನೋಟವನ್ನು ಸಂಪೂರ್ಣವಾಗಿ ಬದಲಾಯಿಸಿದೆ, ಇದಕ್ಕಾಗಿ ಇದು ಹಲವಾರು ಟೀಕೆಗಳನ್ನು ಸಹ ಎದುರಿಸಿದೆ. ಏಕೆಂದರೆ XC90 ಸೇರಿದಂತೆ ವೋಲ್ವೋ ಕಾರುಗಳು ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಸೊಗಸಾದ ಮತ್ತು ಉತ್ತಮವಾಗಿ ಕಾಣುವ ಮಾಡೆಲ್‌ಗಳು ಎಂಬ ಖ್ಯಾತಿಯನ್ನು ಪಡೆದಿವೆ.

View this post on Instagram

A post shared by DC2 Dilip Chhabria (@dc2dilipchhabria)

DC2 ಡಿಸೈನ್ ಸ್ಟುಡಿಯೋ ಈ ಎಸ್‌ಯುವಿ ಕಾರಿನ ಮೂಲ ರೂಪವನ್ನು ಸಂಪೂರ್ಣವಾಗಿ ಬದಲಾಯಿಸಿ ವೋಲ್ವೋ ಕಾರಿಗಿಂತ ಹೆಚ್ಚಾಗಿ ರಗಡ್ ಡೀಟೈಲ್‌ಗಳೊಂದಿಗೆ ಕ್ರಾಸ್ಒವರ್ ಕೂಪ್‌ನಂತೆ ಪರಿವರ್ತಿಸಿದೆ. ವೋಲ್ವೋ ಎಸ್‌ಯುವಿ ತನ್ನ ನಯವಾದ ವಿನ್ಯಾಸ ಮತ್ತು ಐಕಾನಿಕ್ ಎಲ್‌ಇಡಿ ಲೈಟಿಂಗ್‌ಗಳಿಗೇ ಜನಪ್ರಿಯವಾಗಿದೆ, ಅದಾಗ್ಯೂ ಈ ಕಸ್ಟಮ್-ನಿರ್ಮಿತ ಕ್ರಾಸ್‌ಓವರ್ ಕಾರಿನಲ್ಲಿ ಅವುಗಳೆಲ್ಲವೂ ಕಾಣೆಯಾಗಿವೆ.

ಬದಲಾಗಿ, ಇದರ ಮುಂಭಾಗದಲ್ಲಿ ದೊಡ್ಡದಾದ ಮೆಶ್ ಮಾದರಿಯ ಗ್ರಿಲ್ ಅನ್ನು ಹೊಂದಿದ್ದು, ನಮ್ಮ ಅಭಿಪ್ರಾಯದಲ್ಲಿ, ಇದು ಎಸ್‌ಯುವಿಯ ಸೌಂದರ್ಯವನ್ನು ಕಸಿದುಕೊಳ್ಳುತ್ತದೆ ಮತ್ತು ಹಳೆಯದಾಗಿದೆ. ಸೈಡ್ ಪ್ರೊಫೈಲ್ ದೊಡ್ಡ ಆಫ್-ರೋಡಿಂಗ್ ಟೈರ್‌ಗಳನ್ನು ಹೊಂದಿದೆ ಮತ್ತು ಹೊರಭಾಗದಲ್ಲಿ ಉಬ್ಬಿದ ವ್ಹೀಲ್ ಆರ್ಚೆಸ್ ಅನ್ನು ಹೊಂದಿದೆ. ಕಸ್ಟಮ್ ಕಾರು ಮೇಲ್ಮುಖವಾಗಿ ತೆರೆಯುವ ಎರಡು ದೊಡ್ಡ ಛಾವಣಿಯ ಮೌಂಟೆಡ್ ಬಾಗಿಲುಗಳನ್ನು ಪಡೆಯುತ್ತದೆ. ಇದರ ಗ್ಲಾಸ್ ಪ್ಯಾನೆಲ್‌ಗಳು ತುಂಬಾ ಚಿಕ್ಕದಾಗಿವೆ ಮತ್ತು ತೆರೆಯಬಹುದಾದ ಕಿಟಕಿ ಪ್ರದೇಶವು ರೇಸಿಂಗ್ ಕಾರ್ ಅನ್ನು ಹೋಲುತ್ತವೆ.

ಹಿಂಭಾಗದಲ್ಲಿ, XC90-ಆಧಾರಿತ ಕೂಪ್ ಎಸ್‌ಯುವಿ ಹಿಂಭಾಗದ ಮಿಡ್-ಎಂಜಿನ್‌ನ ಸ್ಪೋರ್ಟ್ಸ್ ಕಾರ್‌ಗಳಂತೆಯೇ ಉಬ್ಬಿದ ಹಿಂಭಾಗದ ಗ್ಲಾಸ್ ಪ್ಯಾನೆಲ್‌ ಎರಡು ಔಟ್‌ಲೆಟ್‌ಗಳನ್ನು ಪಡೆದುಕೊಂಡಿದೆ. ಸಂಪರ್ಕಿತ ಟೈಲ್‌ಲೈಟ್‌ಗಳನ್ನು ಸಹ ಇದರಲ್ಲಿ ನೀಡಲಾಗಿದೆ, ಆದರೆ ಇದು ಹೆಚ್ಚು ಆಕರ್ಷಕವಾಗಿಲ್ಲ. ಹಿಂಭಾಗದಲ್ಲಿ, ಇದು ಕೆಳಗಿನ ರಿಯರ್ ವಿಭಾಗದಲ್ಲಿ ಒಂದು ವಿಶಿಷ್ಟವಾದ ಜೇನುಗೂಡು ಮಾದರಿಯನ್ನು ಪಡೆಯುತ್ತದೆ, ಇದಕ್ಕೆ ಬೃಹತ್ ಡ್ಯುಯಲ್ ಎಕ್ಸಾಸ್ಟ್‌ಗಳನ್ನು ಅಳವಡಿಸಲಾಗಿದೆ, ಇದು ಕೂಪ್‌ನ ಅಂದವನ್ನು ಇನ್ನೂ ಕೆಡಿಸುತ್ತದೆ

ಇದನ್ನೂ ಓದಿ: 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ 7 ದೊಡ್ಡ ಬಳಸಿದ ಎಸ್‌ಯುವಿಗಳ ವಿವರ ಇಲ್ಲಿದೆ

ಉತ್ತಮ ಬದಲಾವಣೆಗಳು

ಈ ಕಾರಿನ ಕ್ಯಾಬಿನ್ ಅನ್ನು ನೀವು ನೋಡಿದಾಗ ಮಾತ್ರ ಅದು ವೋಲ್ವೋ, ಅಂದರೆ XC90 ಎಸ್‌ಯುವಿಯನ್ನು ಆಧರಿಸಿದೆ ಎಂದು ನಿಮಗೆ ನಂಬಿಕೆ ಬರುತ್ತದೆ. ಕಸ್ಟಮ್ ಕಾರು ಎಸ್‌ಯುವಿಯ ಎಕ್ಸಲೆನ್ಸ್ ವೇರಿಯಂಟ್ ಅನ್ನು ಆಧರಿಸಿದೆ ಏಕೆಂದರೆ ಇದು 4-ಸೀಟುಗಳ ವಿನ್ಯಾಸವನ್ನು ಹೊಂದಿದೆ. DC2 ಇದಕ್ಕೆ ಕೆಂಪು ಒಳಭಾಗ ಮತ್ತು ಕ್ಯಾಬಿನ್ ಸುತ್ತಲೂ ಆಂಬಿಯಂಟ್ ಲೈಟಿಂಗ್ ಹೊಂಡಿರುವ ಅಪ್‌ಹೋಲೆಸ್ಟರಿ ಮತ್ತು ವಿಹಂಗಮ ಸನ್‌ರೂಫ್ ಅನ್ನು ನೀಡಿದೆ.

ಡಿಸೈನ್ ಸ್ಟುಡಿಯೋ ಎಸ್‌ಯುವಿಯ ಮೂಲ ಡ್ಯಾಶ್‌ಬೋರ್ಡ್ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡಿಲ್ಲ. ಕಸ್ಟಮೈಸ್ ಮಾಡಲಾದ ಮಾಡೆಲ್ ವೋಲ್ವೋ ಎಸಿ ವೆಂಟ್‌ಗಳನ್ನು ಮತ್ತು ಲಂಬವಾಗಿ ಜೋಡಿಸಲಾದ ಟಚ್‌ಸ್ಕ್ರೀನ್ ವ್ಯವಸ್ಥೆಯನ್ನು ಪಡೆಯುತ್ತದೆ. ಇದರ ಸ್ಟೀರಿಂಗ್ ವ್ಹೀಲ್ ಅನ್ನು ನೇರವಾಗಿ XC90 ನಿಂದ ಎರವಲು ಪಡೆಯಲಾಗಿದೆ ಆದರೆ ಅದು ಕೆಂಪು ಮತ್ತು ಕಪ್ಪು ಹೊದಿಕೆಯನ್ನು ಪಡೆಯುತ್ತದೆ, ಕೇಂದ್ರ ಕನ್ಸೋಲ್ ಸಹ ಕೆಂಪು ಹೊಲಿಗೆಯನ್ನು ಹೊಂದಿರುತ್ತದೆ. ಇದರ ಪವರ್ ಅಡ್ಜೆಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳನ್ನು ವೋಲ್ವೋ XC90 ಯಂತೆಯೇ ಉಳಿಸಿಕೊಳ್ಳಲಾಗಿದೆ.

ವ್ಯಾಪಕವಾಗಿ ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಮತ್ತು ರಿಯರ್ ಪ್ರಯಾಣಿಕರ ಸೀಟುಗಳ ನವೀಕರಣದಂತ ಹಿಂದಿನ ಕೆಲವು ಕಸ್ಟಮ್-ನಿರ್ಮಿತ ಮಾಡೆಲ್‌ಗಳಿಗಿಂತ ಭಿನ್ನವಾಗಿ, DC2 ಇಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ. ಡ್ಯಾಶ್‌ಬೋರ್ಡ್ ಎಲಿಮೆಂಟ್‌ಗಳು ಮತ್ತು ಕಾರಿನ ಆನ್‌ಬೋರ್ಡ್ ಕಂಪ್ಯೂಟರ್‌ಗಳ ಕಾಂಪ್ಲೆಕ್ಸ್ ಇಂಟೆಗ್ರೇಷನ್‌ನಿಂದಾಗಿ ಇದರಲ್ಲಿ ಬದಲಾವಣೆಗಳನ್ನು ಮಾಡಿಲ್ಲವೆನ್ನುವುದು ನಮ್ಮ ಊಹೆಯಾಗಿದೆ.

ಇದನ್ನೂ ಓದಿ: ಕಾರ್ ಕೇರ್ ಸಲಹೆಗಳು: ನೀವು ನಿಮ್ಮ ಸಾಕುಪ್ರಾಣಿಗಳನ್ನು ಕಾರಿನಲ್ಲಿ ಒಯ್ಯುತ್ತಿದ್ದರೆ, ಈ ವಿಷಯಗಳನ್ನು ಅನುಸರಿಸಿ

ಈ ಮರುವಿನ್ಯಾಸದ ಬಳಿಕ ಬೆಲೆ ಎಷ್ಟು?

DC2 ಈ ಕಸ್ಟಮೈಸೇಶನ್‌ನ ನಿಖರವಾದ ವೆಚ್ಚವನ್ನು ಬಹಿರಂಗಪಡಿಸದಿದ್ದರೂ, ಇದು ಪ್ರಮಾಣಿತ XC90 ಯ 98.5 ಲಕ್ಷ ರೂ. ಬೆಲೆಗಿಂತ ಗಮನಾರ್ಹವಾಗಿ ಅಧಿಕವಾಗಿರಲಿದೆ ಎಂದು ನಾವು ಭಾವಿಸುತ್ತೇವೆ. ಅದರ ಎಂಜಿನ್ ಮತ್ತು ಪವರ್‌ಟ್ರೇನ್‌ನಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಇದು ಕಸ್ಟಮೈಸ್ ಮಾಡಿದ ಕಾರು ಆಗಿರುವುದರಿಂದ ಮತ್ತು ಹೆಚ್ಚಿನ ಗ್ರಾಹಕರು ಈ ಕಸ್ಟಮೈಸ್ ಆಯ್ಕೆಯನ್ನು ಪರಿಗಣಿಸುವುದಿಲ್ಲವಾದ್ದರಿಂದ, ನಾವು ಈ ಕಾರು ರಸ್ತೆಯಲ್ಲಿ ಓಡಾಡುವುದನ್ನು ಅತ್ಯಂತ ವಿರಳವಾಗಿ ಕಾಣುತ್ತೇವೆ.

ಈ ಕಸ್ಟಮೈಸೇಶನ್ ಮಾಡಿದ ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ಮತ್ತು ನೀವು ಅದರಲ್ಲಿ ಯಾವ ಇತರ ಬದಲಾವಣೆಗಳನ್ನು ನೋಡಲು ಇಷ್ಟಪಡುತ್ತೀರಿ? ಅವುಗಳನ್ನು ಕಾಮೆಂಟ್‌ ಮಾಡಿ ನಮಗೆ ತಿಳಿಸಿ.

ಇನ್ನಷ್ಟು ಓದಿ: XC90 ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 24 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ವೋಲ್ವೋ XC 90

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ