ಮಹೀಂದ್ರಾ ಥಾರ್‌ಗೆ ಹೋಲಿಸಿದರೆ ಮಾರುತಿ ಜಿಮ್ನಿಯ 7 ವಿಶೇಷ ಕೊಡುಗೆಗಳು

modified on ಜನವರಿ 20, 2023 01:28 pm by sonny for ಮಹೀಂದ್ರ ಥಾರ್‌

  • 41 Views
  • ಕಾಮೆಂಟ್‌ ಅನ್ನು ಬರೆಯಿರಿ

ಕೈಗೆಟಕುವ ಜೀವನಶೈಲಿಯ ಎಸ್‌ಯುವಿ ಸೆಗ್‌ಮೆಂಟ್‌ನ ಪ್ರತಿಸ್ಪರ್ಧಿ ರಹಿತವಾದ ಹಿಂದಿನ ನಾಯಕನೊಂದಿಗೆ ಸ್ಪರ್ಧಿಸಲು ಅಂತಿಮವಾಗಿ ಮಾರುತಿಯ ಪೆಪ್ಪಿ ಆಫ್-ರೋಡರ್  ತಯಾರಾಗಿದೆ 

 

Jimny vs Thar

ಮಾರುತಿ ಜಿಮ್ನಿಯ ಆಗಮನದಿಂದ ಅಂತಿಮವಾಗಿ ಭಾರತದಲ್ಲಿ ಕೈಗೆಟಕುವ ಜೀವನಶೈಲಿಯ ಎಸ್‌ಯುವಿ ಸೆಗ್‍ಮೆಂಟ್ ವಿಸ್ತಾರಗೊಂಡಿದೆ. ಇದರ ಬೆಲೆಗಳು ಇನ್ನೂ ಪ್ರಕಟಗೊಂಡಿಲ್ಲವಾದರೂ ಈ ಫೈವ್-ಡೋರ್, ಆಫ್-ರೋಡರ್ ಮಹೀಂದ್ರಾ ಥಾರ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ. ಎರಡು ಸಬ್-4 ಮೀಟರ್‌ಗಳ ಕೊಡುಗೆಗಳ ವಿಶೇಷ ವಿವರಣೆ ಮತ್ತು ವೈಶಿಷ್ಟ್ಯಗಳ ಕುರಿತು ನಾವು ಈಗಾಗಲೇ ಹೋಲಿಸಿ ಉಲ್ಲೇಖಿಸಿದ್ದೇವೆ. ಆದರೆ ಥಾರ್‌ಗೆ ಹೋಲಿಸಿದರೆ ಜಿಮ್ನಿ ಹೆಚ್ಚಿನದೇನನ್ನು ಕೊಡುಗೆಯಾಗಿ ನೀಡುತ್ತಿದೆ ಎಂಬ ಲಿಸ್ಟ್ ಇಲ್ಲಿದೆ:

ಸುಲಭ ಪ್ರವೇಶಕ್ಕಾಗಿ ರಿಯರ್ ಡೋರ್‌ಗಳು

Jimny 5-door

ಫೈವ್-ಡೋರ್ ಜಿಮ್ನಿಯಲ್ಲಿ ನಾಲ್ಕು ಸೀಟುಗಳನ್ನು ನೀಡಲಾಗಿದ್ದರೂ ಇದು ಹೆಚ್ಚುವರಿಯಾಗಿ ರಿಯರ್ ಡೋರ್ ಅನ್ನು ಹೊಂದಿರುವುದರಿಂದ ಹಿಂದಿನ ಸೀಟುಗಳನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ. ಹಾಗೆ ನೋಡಿದರೆ, ಥ್ರೀ-ಡೋರ್ ಥಾರ್‌ನಲ್ಲಿ ಹಿಂದಿನ ಸೀಟುಗಳಿಗೆ ಪ್ರವೇಶವು ಸ್ವಲ್ಪ ಕಠಿಣವಾಗಿದೆ.

ಬಳಕೆಗೆ ಯೋಗ್ಯವಾದ ಬೂಟ್ ಸ್ಪೇಸ್

Maruti Jimny boot

ವಿಸ್ತೃತ ಉದ್ದವನ್ನು ಪಡೆದ ಇಂಡಿಯಾ-ಸ್ಪೆಕ್ ಜಿಮ್ನಿಯು ಲಾಂಗರ್‌ ವ್ಹೀಲ್‌ಬೇಸ್ ಅನ್ನು ಹೊಂದಿದ್ದು, ಇದು ರಿಯರ್ ಸೀಟುಗಳಿಗೆ ಲೆಗ್‌ರೂಮ್ ಆಗಿ ಬಳಸಲ್ಪಡುತ್ತದೆ. ಉಳಿದ ಭಾಗಗಳನ್ನು ಯೂಸೇಜ್ ಬೂಟ್ ಆಗಿ ಬಳಸಬಹುದಾಗಿದೆ. ಹಿಂದಿನ ಸಾಲಿನ ಬಳಕೆಯ ಜೊತೆಗೆ, 208 ಲೀಟರ್‌ಗಳ ಲಗೇಜ್ ಸ್ಪೇಸ್ ಅನ್ನು ಹೊಂದಿದ್ದು, ಥಾರ್‌ಗೆ ಹೋಲಿಸಿದರೆ ಇದು ಗಣನೀಯವಾಗಿ ಅಧಿಕ. ಆದರೆ ಎರಡು ಕೂಡ ಸ್ಪೇರ್ ವ್ಹೀಲ್ ಅನ್ನು ಅಳವಡಿಸಲಾದ ಸೈಡ್-ಹಿಂಗ್ಡ್ ಟೈಲ್‌ಗೇಟ್ ಅನ್ನು ಹೊಂದಿವೆ.

ಫಂಕ್ಷನಲ್ ರಿಯರ್ ವಿಂಡೋಗಳು

Maruti Jimny rear seats

ಥ್ರೀ-ಡೋರ್ ಮಹೀಂದ್ರಾ ಎಸ್‌ಯುವಿಯ ರಿಯರ್ ವಿಂಡೋ ಪ್ಯಾನಲ್‌ಗಳನ್ನು ಹಾರ್ಡ್‌ಟಾಪ್‌ನೊಂದಿಗೆ ಒಂದೇ ಸ್ಥಳದಲ್ಲಿ ಭದ್ರಪಡಿಸಲಾಗಿದೆ. ಆದರೆ ಫೈವ್-ಡೋರ್ ಜಿಮ್ನಿಯು ಫಂಕ್ಷನಲ್ ರಿಯರ್ ವಿಂಡೋಗಳನ್ನು ಹೊಂದಿದ್ದು ಇದು ಟಾಪ್ ಟ್ರಿಮ್‌ನಲ್ಲಿ ಹಿಂಬದಿ ಪ್ರಯಾಣಿಕರ ಸೌಕರ್ಯಕ್ಕೆ ಉತ್ತಮವಾಗಿದೆ ಮತ್ತು ಅವು ವಿದ್ಯುತ್ ಚಾಲಿತವಾಗಿದೆ.

ಆರು ಏರ್‌ಬ್ಯಾಗ್‌ಗಳು

Jimny six airbags

ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಮಾರುತಿಯು ಜಿಮ್ನಿಯನ್ನು ಸುಸಜ್ಜಿತ ಮಾಡೆಲ್ ಆಗಿ ಪ್ರದರ್ಶಿಸಿದೆ. GNCAP ಇಂದ ಸುರಕ್ಷತಾ ರೇಟಿಂಗ್‌ನಲ್ಲಿ ನಾಲ್ಕು-ಸ್ಟಾರ್ ಹೊಂದಿದ ಥಾರ್ ಸುರಕ್ಷತಾ ಕ್ರೆಡೆನ್ಷಿಯಲ್‌ಗಳನ್ನು ಸಾಬೀತುಪಡಿಸಿದರೂ ತನ್ನ ಯಾವುದೇ ವೇರಿಯಂಟ್‌ನಲ್ಲಿ ಮುಂಭಾಗದಲ್ಲಿ ಹೆಚ್ಚುವರಿ ಎರಡು ಏರ್‌ಬ್ಯಾಗ್ ಅನ್ನು ನೀಡಿಲ್ಲ.

ವಾಷರ್‌ಗಳೊಂದಿಗೆ ಆಟೋ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು

Maruti Jimny headlight washer

ಜಿಮ್ನಿಯ ಮುಂಭಾಗದ ನೋಟವು ಥಾರ್‌ನಂತೆ ಭವ್ಯವಾಗಿರದಿದ್ದರೂ, ಇದು ಸಣ್ಣ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಉತ್ತಮವಾದ ಯುಟಿಲಿಟಿಯನ್ನು ಹೊಂದಿದೆ. ಹೆಡ್‌ಲ್ಯಾಂಪ್‌ಗಳನ್ನು ಸ್ವಚ್ಛವಾಗಿಡಲು ಮತ್ತು ಆಪ್-ರೋಡಿಂಗ್‌ನಲ್ಲಿ ನಿಮ್ಮ ದೃಷ್ಟಿಯನ್ನು ದುರ್ಬಲಗೊಳ್ಳದೇ ಇರಲು ಹೆಡ್‌ಲ್ಯಾಂಪ್ ವಾಶರ್‌ಗಳನ್ನು ಸಹ ಇದು ಹೊಂದಿದೆ. ಆದರೆ ಮಹೀಂದ್ರಾ ಎಸ್‌ಯುವಿ ಹಾಲೋಜೆನ್ ಹೆಡ್‌ಲ್ಯಾಂಪ್‌ಗಳನ್ನು ಮಾತ್ರ ಪಡೆದಿದ್ದು ಅವೂ ಸ್ವಯಂಚಾಲಿತ ನಿರ್ವಹಣೆಯನ್ನು ಹೊಂದಿಲ್ಲ.

ದೊಡ್ಡ ಸೆಂಟ್ರಲ್ ಡಿಸ್‌ಪ್ಲೇ

Maruti Jimny nine-inch touchscreen

ಹೊಸ ಫೈವ್-ಡೋರ್ ಜಿಮ್ನಿಯು ಮಾರುತಿಯ ಹೊಸ ಒಂಬತ್ತು-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ ಸಿಸ್ಟಂನೊಂದಿಗೆ ಸ್ಮಾರ್ಟ್‌ಪ್ಲೇ ಪ್ರೋ+ ಎಂಬ ನಾಲ್ಕು-ಸ್ಪೀಕರ್ ಆರ್ಕಮಿಸ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಇದು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇಗೆ ವೈರ್‌ಲೆಸ್ ಕನೆಕ್ಟಿವಿಟಿಯನ್ನು ಸಹ ಸಪೋರ್ಟ್ ಮಾಡುತ್ತದೆ. ಏತನ್ಮಧ್ಯೆ, ಮಹೀಂದ್ರಾ ಥಾರ್, ಡೇಟೆಡ್ ಗ್ರಾಫಿಕ್ಸ್‌ನೊಂದಿಗೆ ಏಳು-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ ಹೊಂದಿದೆ ಮತ್ತು ರಗಡ್ ನೋಟವನ್ನು ಹೊಂದಿದ ಆದರೆ ಕಡಿಮೆ ಪ್ರೀಮಿಯಂ ಡಿಸೈನ್‌ನಲ್ಲಿ ಇರಿಸಲಾಗಿದೆ.

ಆಟೋ ಕ್ಲೈಮ್ಯಾಟ್ ಕಂಟ್ರೋಲ್

Jimny Auto AC

ಮಾರುತಿ ಜಿಮ್ನಿಯಲ್ಲಿರುವ ಸಣ್ಣ ಆದರೆ ಉಪಯುಕ್ತ ಸೌಕರ್ಯದ ವೈಶಿಷ್ಟ್ಯವೆಂದರೆ ಕ್ಲೈಮ್ಯಾಟ್ ಕಂಟ್ರೋಲ್ ಕನ್ಸೋಲ್‌ನಲ್ಲಿ ಡಿಜಿಟಲ್ ರೀಡ್‌ಔಟ್ ಹೊಂದಿರುವ ಆಟೋ ಎಸಿ. ಮಹೀಂದ್ರಾ ಥಾರ್‌ನ ಟಾಪ್ ವೇರಿಯೆಂಟ್‌ ಸಹ ಮ್ಯಾನ್ಯುವಲಿ ಅಡ್ಜೆಸ್ಟೇಬಲ್ ಎಸಿಯನ್ನು ಹೊಂದಿದೆ.

ಥ್ರೀ-ಡೋರ್ ಥಾರ್‌ಗೆ ಹೋಲಿಸಿದರೆ ಫೈವ್-ಡೋರ್ ಜಿಮ್ನಿಯು ಕೆಲವು ಫಂಕ್ಷನಲ್ ಅನುಕೂಲತೆಗಳನ್ನು ಹೊಂದಿದೆ. ಮಾರ್ಚ್ 2023 ರಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾದ ಮಾರುತಿ ನೆಕ್ಸಾ ಎಸ್‌ಯುವಿಯ ಬುಕಿಂಗ್‌ಗಳು ಈಗಾಗಲೇ ನಡೆಯುತ್ತಿವೆ. ಮತ್ತು ಇದರ ಬೆಲೆಯು ರೂ. 10 ಲಕ್ಷವೆಂದು ನಿರೀಕ್ಷಿಸಲಾಗಿದ್ದು, ತನ್ನ ರಿಯರ್-ವ್ಹೀಲ್-ಡ್ರೈವ್ ಫಾರ್ಮ್‌ನಲ್ಲಿರುವ ಮಹೀಂದ್ರಾ ಥಾರ್‌ನ ಆರಂಭಿಕ ಬೆಲೆಯು ಸಹ ರೂ. 9.99 ಲಕ್ಷವಾಗಿದೆ (ಎರಡೂ ಎಕ್ಸ್-ಶೋರೂಮ್ ಬೆಲೆಗಳು).

ಈ ಕುರಿತು ಇನ್ನಷ್ಟು ಓದಿ: ಥಾರ್ ಮಾಡೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಥಾರ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience