• English
  • Login / Register

ಟೊಯೊಟಾ ಫಾರ್ಚುನರ್‌ ಮತ್ತು ಟೊಯೊಟಾ ಫಾರ್ಚುನರ್‌ ಲೆಜೆಂಡರ್‌ ಕಾರುಗಳ ಬೆಲೆಯಲ್ಲಿ ರೂ. 70,000 ದಷ್ಟು ಹೆಚ್ಚಳ

ಟೊಯೋಟಾ ಫ್ರಾಜುನರ್‌ ಗಾಗಿ shreyash ಮೂಲಕ ಅಕ್ಟೋಬರ್ 12, 2023 05:10 pm ರಂದು ಪ್ರಕಟಿಸಲಾಗಿದೆ

  • 43 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದು 2023ರಲ್ಲಿ ಟೊಯೊಟಾ ಫಾರ್ಚುನರ್‌ ಮತ್ತು ಟೊಯೊಟಾ ಫಾರ್ಚುನರ್‌ ಲೆಜೆಂಡರ್‌ ಗಳಲ್ಲಿ ಉಂಟಾದ ಎರಡನೇ ಬೆಲೆ ಏರಿಕೆಯಾಗಿದೆ

Toyota Fortuner and Toyota Fortuner Legender's Prices Hiked By Up to Rs 70,000

  • ಈಗ ಗ್ರಾಹಕರು ಟೊಯೊಟಾ ಫಾರ್ಚುನರ್‌ ಮತ್ತು ಟೊಯೊಟಾ ಫಾರ್ಚುನರ್‌ ಲೆಜೆಂಡ್‌ ನ 4X2 ವೇರಿಯಂಟ್‌ ಗಳಿಗೆ ರೂ. 44,000 ದಷ್ಟು ಹೆಚ್ಚಿನ ಮೊತ್ತವನ್ನು ಪಾವತಿಸಬೇಕು.

  • ಈ SUV ಗಳ 4X4 ವೇರಿಯಂಟ್‌ ಗಳಲ್ಲಿ ರೂ. 70.000 ದಷ್ಟು ಹೆಚ್ಚಳ ಉಂಟಾಗಿದೆ.

  • ಟೊಯೊಟಾ ಸಂಸ್ಥೆಯು ಈ SUV ಗಳ ಪೆಟ್ರೋಲ್‌ ಆವೃತ್ತಿಯಲ್ಲಿ ಮಾತ್ರವೇ 4X4 ಡ್ರೈವ್‌ ಟ್ರೇನ್‌ ಆಯ್ಕೆಯನ್ನು ಒದಗಿಸುತ್ತದೆ.

  • ಟೊಯೊಟಾ ಫಾರ್ಚುನರ್‌ ಮಾದರಿಯ GR-S (Gr-ಸ್ಪೋರ್ಟ್)‌ ವೇರಿಯಂಟ್‌, 4X4 ಡೀಸೆಲ್‌ ಅಟೋಮ್ಯಾಟಿಕ್‌ ಆಯ್ಕೆಯಲ್ಲಿ ಮಾತ್ರವೇ ಲಭ್ಯವಿದ್ದು, ಇದರ ಬೆಲೆಯು ರೂ. 70,000 ದಷ್ಟು ಹೆಚ್ಚಿದೆ.

ಭಾರತದ SUV ಗಳಲ್ಲಿ ಅತ್ಯಂತ ಜನಪ್ರಿಯವೆನಿಸಿರುವ  ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್‌ ಲೆಜೆಂಡರ್‌  ಗಳ ಬೆಲೆಯಲ್ಲಿ ರೂ. 70,000 ದಷ್ಟು ಹೆಚ್ಚಳ ಉಂಟಾಗಿದೆ. ಈ ವಾಹನಗಳ ಬೆಲೆಯಲ್ಲಿ 2023ರ ಜುಲೈ ತಿಂಗಳಿನಲ್ಲಷ್ಟೇ ಬೆಲೆಯನ್ನು ಹೆಚ್ಚಿಸಲಾಗಿದ್ದು, ಇದು ಈ ವರ್ಷದ ಎರಡನೇ ಬೆಲೆ ಹೆಚ್ಚಳವಾಗಿದೆ. ಫಾರ್ಚುನರ್‌ ಮತ್ತು ಫಾರ್ಚುನರ್‌ ಲೆಜೆಂಡ್‌ SUV ಗಳ ಎಲ್ಲಾ ವೇರಿಯಂಟ್‌ ಗಳಲ್ಲಿ ಈ ಬೆಲೆ ಏರಿಕೆ ಉಂಟಾಗಿದ್ದು, 4X4 ವೇರಿಯಂಟ್‌ ಗಳಲ್ಲಿ ಅತೀ ಹೆಚ್ಚಿನ ಬೆಲೆ ಏರಿಕೆ ಕಂಡು ಬಂದಿದೆ. ಈ SUV ಗಳ ಪ್ರತಿ ವೇರಿಯಂಟ್‌ ಗಳಲ್ಲಿ ಯಾವ ರೀತಿಯಲ್ಲಿ ಬೆಲೆಗಳ ಬದಲಾವಣೆ ಉಂಟಾಗಿದೆ ಎಂಬುದನ್ನು ನಾವೀಗ ನೋಡೋಣ.

ಫಾರ್ಚುನರ್‌ ಪೆಟ್ರೋಲ್

ವೇರಿಯಂಟ್‌ ಗಳು

ಹಳೆಯ ಬೆಲೆಗಳು

ಹೊಸ ಬೆಲೆಗಳು

ವ್ಯತ್ಯಾಸ

4x2 MT

ರೂ 32.99 ಲಕ್ಷ

ರೂ 33.43 ಲಕ್ಷ

+ ರೂ 44,000

4X2 AT

ರೂ 34.58 ಲಕ್ಷ

ರೂ 35.02 ಲಕ್ಷ

+ ರೂ 44,000

ಫಾರ್ಚುನರ್‌ ಡೀಸೆಲ್

ವೇರಿಯಂಟ್‌ ಗಳು

ಹಳೆಯ ಬೆಲೆಗಳು

ಹೊಸ ಬೆಲೆಗಳು

ವ್ಯತ್ಯಾಸ

4X2 MT

ರೂ 35.49 ಲಕ್ಷ

ರೂ 35.93 ಲಕ್ಷ

+ ರೂ 44,000

4X2 AT

ರೂ 37.77 ಲಕ್ಷ

ರೂ 38.21 ಲಕ್ಷ

+ ರೂ 44,000

4X4 MT

ರೂ 39.33 ಲಕ್ಷ

ರೂ 40.03 ಲಕ್ಷ

+ ರೂ 70,000

4X4 AT

ರೂ 41.62 ಲಕ್ಷ

ರೂ 42.32 ಲಕ್ಷ

+ ರೂ 70,000

GR-S 4X4 AT

ರೂ 50.74 ಲಕ್ಷ

ರೂ 51.44 ಲಕ್ಷ

+ ರೂ 70,000

ಇದನ್ನು ಸಹ ನೋಡಿರಿ: ಹೆಚ್ಚು ಇಂಧನ ದಕ್ಷತೆ ಪಡೆಯುವುದಕ್ಕಾಗಿ AC ಇಲ್ಲದೆ ವಾಹನ ಚಾಲನೆ ಮಾಡುವುದು ಸಮರ್ಥನೀಯವೇ? ಇಲ್ಲಿ ಕಂಡುಹಿಡಿಯಿರಿ

ಫಾರ್ಚುನರ್‌ ಲೆಜೆಂಡರ್‌ (ಡೀಸೆಲ್‌ ನಲ್ಲಿ ಮಾತ್ರ)

ವೇರಿಯಂಟ್‌ ಗಳು

ಹಳೆಯ ಬೆಲೆಗಳು

ಹೊಸ ಬೆಲೆಗಳು

ವ್ಯತ್ಯಾಸ

4X2 AT

ರೂ 43.22 ಲಕ್ಷ

ರೂ 43.66 ಲಕ್ಷ

+ ರೂ 44,000

4X4 AT

ರೂ 46.94 ಲಕ್ಷ

ರೂ 47.64 ಲಕ್ಷ

+ ರೂ 70,000

ಟೊಯೊಟಾ ಫಾರ್ಚುನರ್‌ ನ ಪೆಟ್ರೋಲ್‌ ವೇರಿಯಂಟ್‌ ಗಳಲ್ಲಿ ರೂ. 44,000 ದಷ್ಟು ಏಕರೂಪದ ಬೆಲೆ ಏರಿಕೆ ಉಂಟಾಗಿದ್ದರೆ, ಈ SUV ಯ ಡೀಸೆಲ್‌ ವೇರಿಯಂಟ್‌ ಗೂ ಇದೇ ಬೆಲೆ ಏರಿಕೆಯು ಅನ್ವಯವಾಗುತ್ತದೆ. ಟೊಯೊಟಾ ಫಾರ್ಚುನರ್‌ ಮತ್ತು ಫಾರ್ಚುನರ್‌ ಲೆಜೆಂಡರ್‌ ನ 4X4 ವೇರಿಯಂಟ್‌ ಗಳಲ್ಲಿ ಅತೀ ಹೆಚ್ಚಿನ ಬೆಲೆಯೇರಿಕೆ ಉಂಟಾಗಿದೆ.

ಪವರ್‌ ಟ್ರೇನ್‌ ಗಳ ಪರಿಶೀಲನೆ

ಟೊಯೊಟಾ ಸಂಸ್ಥೆಯು ಫಾರ್ಚುನರ್‌ ಅನ್ನು ಎಂಜಿನ್‌ ಗಳ ಎರಡು ಆಯ್ಕೆಗಳೊಂದಿಗೆ ಹೊರತರುತ್ತಿದೆ: 2.7-ಲೀಟರ್‌  ಪೆಟ್ರೋಲ್‌ (166PS/ 245Nm) ಮತ್ತು 2.8-ಲೀಟರ್‌ ಟರ್ಬೊ ಡೀಸೆಲ್ ಎಂಜಿನ್ (204PS/ 500Nm). ಮೊದಲನೆಯ ಎಂಜಿನ್‌ ಅನ್ನು 5 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಹೊಂದಿಸಲಾಗಿದ್ದರೆ, ಎರಡನೆಯದ್ದನ್ನು 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಸಂಯೋಜಿಸಲಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಎರಡನ್ನೂ ಐಚ್ಛಿಕ 6 ಸ್ಪೀಡ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜೊತೆಗೂ ಪಡೆಯಬಹುದು.

ಇದನ್ನು ಸಹ ನೋಡಿರಿ: ಹೊಸದಾಗಿ ಬಿಡುಗಡೆ ಮಾಡಿದ 2024 ಸ್ಕೋಡಾ ಕೊಡಿಯಾಕ್‌ ಕುರಿತು ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ

ಹೊಸ ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು

ಟೊಯೊಟಾ ಸಂಸ್ಥೆಯು ಫಾರ್ಚುನರ್‌ ಅನ್ನು ರೂ. 33.43 ಲಕ್ಷದಿಂದ ರೂ. 51.44 ಲಕ್ಷದ ನಡುವಿನ ಶ್ರೇಣಿಯಲ್ಲಿ ಮಾರಿದರೆ, ಫಾರ್ಚುನರ್‌ ಲೆಜೆಂಡರ್‌ ಅನ್ನು ರೂ. 43.66 ಲಕ್ಷದಿಂದ ರೂ. 47.64 ಲಕ್ಷದ ನಡುವಿನ ಶ್ರೇಣೆಯಲ್ಲಿ ಹೊರತರುತ್ತಿದೆ. ಎರಡೂ SUV ಗಳು MG ಗ್ಲೋಸ್ಟರ್, ಜೀಪ್‌ ಮೆರಿಡಿಯನ್, ಮತ್ತು ಸ್ಕೋಡಾ ಕೊಡಿಯಾಕ್‌ ಜೊತೆಗೆ ಸ್ಪರ್ಧಿಸಲಿವೆ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟೊಯೊಟಾ ಫಾರ್ಚುನರ್‌ ಆನ್‌ ರೋಡ್‌ ಬೆಲೆ

was this article helpful ?

Write your Comment on Toyota ಫ್ರಾಜುನರ್‌

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience