• English
  • Login / Register

ಭಾರತದಲ್ಲಿ ಹೊಸ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ಸ್ಥಾಪಿಸಲಿರುವ Toyota, ಈಗಾಗಲೇ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ

ಟೊಯೋಟಾ ಗ್ಲ್ಯಾನ್ಜಾ ಗಾಗಿ dipan ಮೂಲಕ ಆಗಸ್ಟ್‌ 02, 2024 05:27 pm ರಂದು ಪ್ರಕಟಿಸಲಾಗಿದೆ

  • 40 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಹೊಸ ಪ್ಲಾಂಟ್ ನೊಂದಿಗೆ ಟೊಯೊಟಾ ಭಾರತದಲ್ಲಿ ನಾಲ್ಕು ಉತ್ಪಾದನಾ ಯೂನಿಟ್ ಗಳನ್ನು ಹೊಂದಲಿದೆ

Toyota India fourth manufacturing plant in Maharashtra

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಇಂಡಿಯಾ ಹೊಸ ಉತ್ಪಾದನಾ ಯೂನಿಟ್ ಅನ್ನು ನಿರ್ಮಿಸಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಪ್ಲಾಂಟ್ ಅನ್ನು ಈ ಹಿಂದೆ ಔರಂಗಾಬಾದ್ ಎಂದು ಕರೆಯಲಾಗುತ್ತಿದ್ದ ಛತ್ರಪತಿ ಸಂಭಾಜಿ ನಗರದಲ್ಲಿ ಸ್ಥಾಪಿಸಲಾಗುತ್ತದೆ. ಇದು ಭಾರತದಲ್ಲಿ ಟೊಯೊಟಾದ ನಾಲ್ಕನೇ ಯೂನಿಟ್ ಆಗಿದೆ. ಇದು ಪರಿಸರ ಸ್ನೇಹಿ ಉತ್ಪನ್ನಗಳ ಶ್ರೇಣಿಯನ್ನು ಬೆಳೆಸಲು ಕಂಪನಿಯ ಬದ್ಧತೆಯನ್ನು ತೋರಿಸುತ್ತದೆ ಮತ್ತು ಸುಸ್ಥಿರ ಮತ್ತು ಸುಧಾರಿತ ಹಸಿರು ತಂತ್ರಜ್ಞಾನಗಳ ಮೇಲೆ ಅದರ ಗಮನವನ್ನು ಎತ್ತಿ ತೋರಿಸುತ್ತದೆ.

 ಟೊಯೋಟಾ ಗ್ರೂಪ್ ಪ್ರಸ್ತುತ ಭಾರತದ ಕರ್ನಾಟಕ ರಾಜ್ಯದ ಬಿಡದಿಯಲ್ಲಿ ಒಟ್ಟು ಎರಡು ಉತ್ಪಾದನಾ ಯೂನಿಟ್ ಗಳನ್ನು ಹೊಂದಿದೆ. ಟೊಯೊಟಾ ಸುಮಾರು ರೂ. 3,300 ಕೋಟಿ ವೆಚ್ಚದಲ್ಲಿ ಬಿಡದಿಯಲ್ಲಿ ಇನ್ನೊಂದು ಹೊಸ ಪ್ಲಾಂಟ್ ಅನ್ನು ಕೂಡ ಸ್ಥಾಪಿಸುತ್ತಿದೆ.

 ಟೊಯೋಟಾದ ಈಗಿರುವ ಉತ್ಪಾದನಾ ಪ್ಲಾಂಟ್ ಗಳು

 ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ನ ಮೊದಲ ಪ್ಲಾಂಟ್ ಅನ್ನು ಕರ್ನಾಟಕದ ಬಿಡದಿಯಲ್ಲಿ 1997 ರಲ್ಲಿ ಸ್ಥಾಪಿಸಲಾಯಿತು, ಮತ್ತು ಇಲ್ಲಿ ಉತ್ಪಾದನೆಯು 1999 ರ ಅಂತ್ಯದ ವೇಳೆಗೆ ಪ್ರಾರಂಭವಾಯಿತು. ಈ ಪ್ಲಾಂಟ್ ವರ್ಷದಲ್ಲಿ 1.32 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾ, ಫಾರ್ಚುನರ್ ಮತ್ತು ಲೆಜೆಂಡರ್ ಅನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

Toyota Innova Hycross

 ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಕಾರನ್ನು ಹೇಗೆ ಡಿಸೈನ್ ಮಾಡಲಾಗುತ್ತದೆ ಎಂಬ ವಿವರ

 ಬಿಡದಿಯಲ್ಲಿರುವ ಎರಡನೇ ಪ್ಲಾಂಟ್ ಡಿಸೆಂಬರ್ 2010 ರಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿತು. ಈ ಪ್ಲಾಂಟ್ ಕ್ಯಾಮ್ರಿ ಹೈಬ್ರಿಡ್, ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಹಿಲಕ್ಸ್ ಅನ್ನು ತಯಾರಿಸುತ್ತದೆ, ಮತ್ತು ವಾರ್ಷಿಕವಾಗಿ 2 ಲಕ್ಷ ಯೂನಿಟ್‌ಗಳಿಗಿಂತ ಹೆಚ್ಚು ಪ್ರೊಡಕ್ಷನ್ ಸಾಮರ್ಥ್ಯವನ್ನು ಹೊಂದಿದೆ.

Toyota Urban Cruiser Hyryder

 ಬಿಡದಿಯಲ್ಲಿ ಬರಲಿರುವ ಮೂರನೇ ಪ್ಲಾಂಟ್ ನವೆಂಬರ್ 2023 ರಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಸಹಿ ಮಾಡಿದ ಒಪ್ಪಂದದ ಭಾಗವಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಈ ಹೊಸ ಪ್ಲಾಂಟ್ ಬ್ರಾಂಡ್‌ನ ಉತ್ಪಾದನೆಯನ್ನು ಪ್ರತಿ ವರ್ಷ 100,000 ಯುನಿಟ್‌ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ, ಕರ್ನಾಟಕದ ಮೂರು ಪ್ಲಾಂಟ್ ಗಳು ಒಟ್ಟು ವಾರ್ಷಿಕ 442,000 ಯೂನಿಟ್ ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.

 ಭಾರತದಲ್ಲಿ ಟೊಯೋಟಾ ನೀಡುತ್ತಿರುವ ಕಾರುಗಳು

 ಟೊಯೊಟಾ ಇಂಡಿಯಾ ಪ್ರಸ್ತುತ 12 ಮಾಡೆಲ್ ಗಳನ್ನು ಹೊಂದಿದೆ, ಇದರಲ್ಲಿ ಮಾರುತಿ ಬಲೆನೊ ಆಧಾರಿತ ಬಜೆಟ್-ಸ್ನೇಹಿ ಗ್ಲ್ಯಾನ್ಜಾದಿಂದ ಹಿಡಿದು ಐಷಾರಾಮಿ ಲ್ಯಾಂಡ್ ಕ್ರೂಸರ್ 300 SUV ವರೆಗೆ ಇವೆ. ಟೊಯೋಟಾ ವೆಲ್‌ಫೈರ್ MPV ಮತ್ತು LC300 ಅನ್ನು ಭಾರತದಲ್ಲಿ ತಯಾರಿಸಲಾಗುತ್ತಿಲ್ಲ; ಅವುಗಳನ್ನು ಸಂಪೂರ್ಣವಾಗಿ ನಿರ್ಮಿಸಿದ ಕಾರುಗಳಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ.

 ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

 ಇನ್ನಷ್ಟು ಓದಿ: ಗ್ಲಾನ್ಜಾ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Toyota ಗ್ಲ್ಯಾನ್ಜಾ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.9 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ನಿಸ್ಸಾನ್ ಲೀಫ್
    ನಿಸ್ಸಾನ್ ಲೀಫ್
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ಮಾರುತಿ ಎಕ್ಸ್‌ಎಲ್ 5
    ಮಾರುತಿ ಎಕ್ಸ್‌ಎಲ್ 5
    Rs.5 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಸೆಪಟೆಂಬರ್, 2025
×
We need your ನಗರ to customize your experience