• English
  • Login / Register

ದಕ್ಷಿಣ ಆಫ್ರಿಕಾದಲ್ಲಿ Toyota Fortuner ಮೈಲ್ಡ್-ಹೈಬ್ರಿಡ್ ಆವೃತ್ತಿ ಬಿಡುಗಡೆ, ಭಾರತದಲ್ಲಿ ಯಾವಾಗ ?

ಟೊಯೋಟಾ ಫ್ರಾಜುನರ್‌ ಗಾಗಿ anonymous ಮೂಲಕ ಏಪ್ರಿಲ್ 19, 2024 09:45 pm ರಂದು ಪ್ರಕಟಿಸಲಾಗಿದೆ

  • 28 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದು 2.8-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮೈಲ್ಡ್‌-ಹೈಬ್ರಿಡ್ ಸಿಸ್ಟಮ್‌ ಅನ್ನು ಪಡೆಯುವ ಮೊದಲ ಟೊಯೊಟಾ ಫಾರ್ಚುನರ್ ಆಗಿದೆ.

ಕಳೆದ ವರ್ಷ ಯುರೋಪ್‌ನಲ್ಲಿ ಬಿಡುಗಡೆಯಾದ ಹಿಲಕ್ಸ್ ಮೈಲ್ಡ್-ಹೈಬ್ರಿಡ್ ಪಿಕ್-ಅಪ್‌ಗೆ ಅನುಗುಣವಾಗಿ Toyota ತನ್ನ  Fortuner ಅನ್ನು ದಕ್ಷಿಣ ಆಫ್ರಿಕಾದಲ್ಲಿ ಮೈಲ್ಡ್‌-ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ. ಎರಡೂ ಒಂದೇ 2.8-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತಿದ್ದು, 204 ಪಿಎಸ್ ಉತ್ಪಾದಿಸುತ್ತದೆ. ಮೈಲ್ಡ್‌-ಹೈಬ್ರಿಡ್ ಸೆಟಪ್‌ನೊಂದಿಗೆ ಫಾರ್ಚೂನರ್ ಭಾರತಕ್ಕೂ ಬರಬಹುದು ಎಂದು ನಾವು ನಿರೀಕ್ಷಿಸುತ್ತೇವೆ. 

ದಕ್ಷಿಣ ಆಫ್ರಿಕಾದಲ್ಲಿ ಮೈಲ್ಡ್-ಹೈಬ್ರಿಡ್ ಫಾರ್ಚೂನರ್ ಈಗ 48V ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ ಅನ್ನು ಹೊಂದಿದೆ. ಟೊಯೊಟಾ ಪ್ರಕಾರ, ಇದು ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಕಡಿಮೆ ಇಂಧನವನ್ನು ಬಳಸುತ್ತದೆ. ಈ ಸೆಟಪ್‌ನೊಂದಿಗೆ, ಎಂಜಿನ್ 16 ಕ್ಕೂ ಹೆಚ್ಚಿನ ಹಾರ್ಸ್‌ಪವರ್‌ ಮತ್ತು 65 Nm ಹೆಚ್ಚಿನ ಟಾರ್ಕ್ ಅನ್ನು ನೀಡುತ್ತದೆ ಎಂದು ಟೊಯೊಟಾ ಹೇಳಿಕೊಂಡಿದೆ. ಇದು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ. ಈ ಹೈಬ್ರಿಡ್ ಸಿಸ್ಟಮ್‌ ಸಾಮಾನ್ಯ ಡೀಸೆಲ್ ಎಂಜಿನ್‌ಗಳಿಗಿಂತ 5 ಪ್ರತಿಶತ ಹೆಚ್ಚು ಇಂಧನ ಮೈಲೇಜ್‌ ಅನ್ನು ನೀಡುತ್ತದೆ. 

ಮೈಲ್ಡ್‌-ಹೈಬ್ರಿಡ್ ಸಿಸ್ಟಮ್ ಜೊತೆಗೆ, ದಕ್ಷಿಣ ಆಫ್ರಿಕಾದ ಫಾರ್ಚೂನರ್ 360-ಡಿಗ್ರಿ ಕ್ಯಾಮೆರಾ, ಲೇನ್ ಡಿಪಾರ್ಚರ್ ಅಲರ್ಟ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನಂತಹ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಒಳಭಾಗದಲ್ಲಿ, ನೀವು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಕನೆಕ್ಟಿವಿಟಿ, ಫಾನ್ಸಿ 11-ಸ್ಪೀಕರ್ JBL ಸೌಂಡ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಅನ್ನು ಪಡೆಯುತ್ತೀರಿ.

ಮೈಲ್ಡ್‌-ಹೈಬ್ರಿಡ್ ಫಾರ್ಚೂನರ್ ಅನ್ನು ಭಾರತಕ್ಕೆ ತರುತ್ತಾರೆಯೇ ಎಂದು ಟೊಯೋಟಾ ಇವರೆಗೆ ದೃಢಪಡಿಸಿಲ್ಲ, ಆದರೆ ಆಫ್ರಿಕಾದ ಬಿಡುಗಡೆಯನ್ನು ಗಮನಿಸುವಾಗ ತಡವಾದರೂ ಭಾರತೀಯ ಮಾರುಕಟ್ಟೆಗೂ ಪರಿಚಯಿಸಬಹುದು ಎಂದು ಅಂದಾಜಿಸುತ್ತೆವೆ. ಸದ್ಯಕ್ಕೆ, ನಮ್ಮ ದೇಶದಲ್ಲಿ, ಫಾರ್ಚುನರ್‌ನ ಎಕ್ಸ್ ಶೋರೂಂ ಬೆಲೆಯು 33.43 ಲಕ್ಷ ರೂ.ನಿಂದ 42.32 ಲಕ್ಷ  ರೂ.ವರೆಗೆ ಇದೆ, ಮತ್ತು ಇದು ಎಮ್‌ಜಿ ಗ್ಲೋಸ್ಟರ್‌ನೊಂದಿಗೆ ಸ್ಪರ್ಧಿಸುತ್ತದೆ.

ಇನ್ನಷ್ಟು ಓದಿ : ಫಾರ್ಚುನರ್ ಆನ್ ರೋಡ್ ಬೆಲೆ 

was this article helpful ?

Write your Comment on Toyota ಫ್ರಾಜುನರ್‌

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience