ಟೊಯೋಟಾ ಹೈರೈಡರ್ vs ಸ್ಕೋಡಾ ಕುಶಕ್ vs ಹ್ಯುಂಡೈ ಕ್ರೆಟಾ vs ಮಾರುತಿ ಗ್ರ್ಯಾಂಡ್ ವಿಟಾರಾ vs ಫೋಕ್ಸ್‌ವಾಗನ್ ಟೈಗನ್: ಸ್ಥಳಾವಕಾಶ ಮತ್ತು ವಾಸ್ತವಿಕತೆಯ ಹೋಲಿಕೆ

published on ಮಾರ್ಚ್‌ 21, 2023 07:42 pm by rohit for ಹುಂಡೈ ಕ್ರೆಟಾ 2020-2024

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ನಿಮ್ಮ ಕುಟುಂಬಕ್ಕಾಗಿ SUV ಅನ್ನು ಆರಿಸುವುದು ಅಂತಹ ಅಗ್ನಿಪರೀಕ್ಷೆಯೇನು ಅಲ್ಲ. ನೀವು ಯಾವುದನ್ನು ಆರಿಸಬೇಕು ? ಮತ್ತು ಯಾಕೆ ? ಎಂಬುವುದಕ್ಕೆ ಇಲ್ಲಿದೆ ಉತ್ತರ.

ಹ್ಯುಂಡೈ ಕ್ರೆಟಾ ನಮ್ಮ ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದ ಕಾಂಪ್ಯಾಕ್ಟ್ SUV ಸ್ಥಳದಲ್ಲಿ ಜನಪ್ರಿಯ ಆಯ್ಕೆಯಾಗಿ ಉಳಿದಿದೆ. ಇದರ ಸಹೋದರ ಸಂಬಂಧಿ, ಕಿಯಾ ಸೆಲ್ಟೋಸ್ 2019ರ ಮಧ್ಯದಲ್ಲಿ ಕಣಕ್ಕಿಳಿಯಿತು ಮತ್ತು ಹ್ಯುಂಡೈ ಮುಂದಿನ ವರ್ಷ ಎರಡನೇ-ಪೀಳಿಗೆ ಮಾಡೆಲ್ ಅನ್ನು ಬಿಡುಗಡೆಗೊಳಿಸಿತು. ಸೆಲ್ಟೋಸ್‌ನ ಮೂರು-ವರ್ಷದ ಮಾರುಕಟ್ಟೆ ಉಪಸ್ಥಿತಿಯ ನಂತರ, ಕಿಯಾ ಭಾರತದಲ್ಲಿ ತನ್ನ ನವೀಕೃತ ಪುನರಾವೃತ್ತಿಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

Volkswagen Taigun vs Skoda Kushaq vs Hyundai Creta vs Toyota Hyryder vs Maruti Grand Vitara

 ಈ ಹ್ಯುಂಡೈ-ಕಿಯಾ ಜೊತೆ ಹೆಚ್ಚಿನ ಖರೀದಿದಾರರನ್ನು ಆಕರ್ಷಿಸುವುದರೊಂದಿಗೆ, ಸ್ಕೋಡಾ/VW SUVಗಳೊಂದಿಗೆ ಇತ್ತೀಚಿನ ಟೊಯೋಟಾ-ಮಾರುತಿ ಜೋಡಿಯ ಸೇರ್ಪಡೆಯೊಂದಿಗೆ ಸ್ಪರ್ಧೆಯೂ ಕಠಿಣವಾಗಲಾರಂಭಿಸಿತು. ಆದ್ದರಿಂದ ಈ ವಿಮರ್ಶೆಯಲ್ಲಿ, ನಿಮ್ಮ ಕುಟುಂಬಕ್ಕೆ ಸೂಕ್ತವಾದುದನ್ನು ಆಯ್ಕೆ ಮಾಡುವಲ್ಲಿ ನೆರವಾಗಲು ನಾವು ಕಾಂಪ್ಯಾಕ್ಟ್ SUV ಸ್ಥಳದಲ್ಲಿ ಸ್ಟಾಲ್‌ವಾರ್ಟ್‌ಗಳನ್ನು ಹೋಲಿಸಲು ನಿರ್ಧರಿಸಿದೆವು.

 ನೋಟಗಳು

ಆಯಾಮ

ಟೊಯೋಟಾ ಹೈರೈಡರ್

ಸ್ಕೋಡಾ ಕುಶಕ್

ಹ್ಯುಂಡೈ ಕ್ರೆಟಾ

ಮಾರುತಿ ಗ್ರ್ಯಾಂಡ್ ವಿಟಾರಾ

ಫೋಕ್ಸ್‌ವಾಗೆನ್ ಟೈಗನ್

ಉದ್ದ

4,365mm

4,225mm

4,300mm

4,345mm

4,221mm

ಅಗಲ

1,795mm

1,760mm

1,790mm

1,795mm

1,760mm

ಎತ್ತರ

1,635mm

1,612mm

1,635mm

1,645mm

1,612mm

ವ್ಹೀಲ್‌ಬೇಸ್

2,600mm

2,651mm

2,610mm

2,600mm

2,651mm

  •  ಈ ಎಲ್ಲಾ ಕಾಂಪ್ಯಾಕ್ಟ್ SUVಗಳು ತಮ್ಮ ಉದ್ದ ಮತ್ತು ವ್ಹೀಲ್‌ಬೇಸ್‌ನಲ್ಲಿ ಸುಮಾರಿಗೆ ಒಂದೇ ರೀತಿಯದ್ದಾಗಿದ್ದು, ನೋಟದಲ್ಲಿ ಎಲ್ಲವೂ ವಿಭಿನ್ನವಾಗಿವೆ.

Skoda Kushaq

  •  ವಿಶಿಷ್ಟ ಬಾಕ್ಸಿ ವಿನ್ಯಾಸದ SUVಗಳನ್ನು ಇಷ್ಟಪಡುವವರಿಗೆ, ಸ್ಕೋಡಾ ಕುಶಕ್ ಫೋಕ್ಸ್‌ವಾಗೆನ್ ಟೈಗನ್ ಮೆಚ್ಚುಗೆಯಾಗಬಹುದು.
  • ಇವುಗಳು ಎಲ್ಲಕ್ಕಿಂತ ಅತ್ಯಂತ ಸಣ್ಣ SUVಗಳಾದರೂ, ಅತ್ಯಂತ ಉದ್ದದ ವ್ಹೀಲ್‌ಬೇಸ್ ಹೊಂದಿವೆ. ಅಲ್ಲದೇ ಇವು ಅಗ್ರೆಸಿವ್ ಡಿಸೈನ್ ಫಿಲಾಸಫಿ ಹೊಂದಿದ್ದು, ಸ್ಟೈಲಿಂಗ್ ಮತ್ತು ಗ್ರಿಲ್ ಗಾತ್ರ ಸಾಮಾನ್ಯವಾಗಿದೆ.
  •  ಇತರ ಮೂರು SUVಗಳಾದ ಹ್ಯುಂಡೈ ಕ್ರೆಟಾ, ಟೊಯೋಟಾ ಹೈರೈಡರ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಬಾಗಿದ ನೋಟವನ್ನು ಹೊಂದಿದ್ದು, ಟೊಯೋಟಾ ಮಾಡೆಲ್ ಅತ್ಯಂತ ಉದ್ದವಾಗಿದೆ ಮತ್ತು ಮಾರುತಿಯು ಅತ್ಯಂತ ಎತ್ತರದ್ದಾಗಿದೆ. ಇಲ್ಲಿ ಕ್ರೆಟಾ ಅತ್ಯಂತ ಧ್ರುವೀಕರಿಸುವ ಮುಖವನ್ನು ಹೊಂದಿದ್ದು, ಅದರ ಬಾಗಿದ ನೋಟವು ಈ ಗುಂಪಿನಲ್ಲಿ ದೊಡ್ಡದಾಗಿ ಕಾಣುವಂತೆ ಮಾಡುತ್ತದೆ.
  •  ಎಲ್ಲಾ ಐದು SUVಗಳ ಸಾಮಾನ್ಯ ಅಂಶಗಳೆಂದರೆ,  17-ಇಂಚಿನ ಡ್ಯುಯಲ್-ಟೋನ್ ಮಿಶ್ರಲೋಹದ ವ್ಹೀಲ್‌ಗಳು ಮತ್ತು ಅವುಗಳ ಜೊತೆಗೆ LED DRLಗಳು

 ಕ್ಯಾಬಿನ್ ಗುಣಮಟ್ಟ

Toyota Hyryder cabin

Maruti Grand Vitara cabin

  •  ಕಾಂಪ್ಯಾಕ್ಟ್ SUV ಸ್ಥಳದಲ್ಲಿ ಇತ್ತೀಚೆಗಷ್ಟೆ ಪರಿಚಯವಾಗಿರುವ ಟೊಯೋಟಾ ಹೈರೈಡರ್-ಮಾರುತಿ ಗ್ರ್ಯಾಂಡ್ ವಿಟಾರಾ ಜೋಡಿಯ ಹೆಚ್ಚು ಪ್ರೀಮಿಯಮ್ ಮತ್ತು ಉನ್ನತ ಮಾರುಕಟ್ಟೆಯ ಇಂಟೀರಿಯರ್‌ಗೆ ಧನ್ಯವಾದಗಳು. ಎರಡೂ SUVಗಳು ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್‌ಗಳನ್ನು (ಎರಡು ವೇರಿಯೆಂಟ್‌ಗಳಲ್ಲಿ ನೀವು ಮೈಲ್ಡ್-ಅಥವಾ ಸ್ಟ್ರಾಂಗ್ ಹೈಬ್ರಿಡ್‌ನಲ್ಲಿ ಯಾವುದನ್ನು ಆರಿಸುತ್ತೀರಿ ಎಂಬುದರ ಮೇಲೆ ಬಣ್ಣವು ಅವಲಂಬಿಸಿರುತ್ತದೆ) ಹೊಂದಿದ್ದು, ಡ್ಯಾಶ್‌ಬೋರ್ಡ್‌ನಲ್ಲಿ ಸಾಫ್ಟ್-ಟಚ್ ಲೆದರೆಟ್ ಮಟೀರಿಯಲ್‌ನೊಂದಿಗಂ ಅವುಗಳ ಪ್ರೀಮಿಯಮ್ ಇಂಟೀರಿಯರ್ ನೋಟವನ್ನು ವರ್ಧಿಸುತ್ತದೆ.

Volkswagen Taigun cabin

 

Skoda Kushaq cabin

  •  ಫೋಕ್ಸ್‌ವಾಗನ್ ಮತ್ತು ಸ್ಕೋಡಾ ಕಾರುಗಳು ಮುಂದಿನ ರ‍್ಯಾಂಕ್‌ನಲ್ಲಿವೆ. ಇವುಗಳು ಟೊಯೋಟಾ-ಮಾರುತಿ SUVಗಳಂತೆ ಶ್ರೀಮಂತ ಮತ್ತು ಪ್ರೀಮಿಯಂ ಆಗಿ ಇಲ್ಲದಿದ್ದರೂ, ಡ್ಯಾಶ್‌ಬೋರ್ಡ್‌ನಲ್ಲಿ ಟ್ರಿಮ್ ಇನ್ಸರ್ಟ್‌ನೊಂದಿಗೆ (ಆರಿಸಿದ ವೇರಿಯೆಂಟ್‌ಗಳ ಮೇಲೆ ಬಣ್ಣ-ಸಂಯೋಜನೆ ಮಾಡಲಾಗಿದೆ) ವಿಶಿಷ್ಟ ಸ್ಪರ್ಶವನ್ನು ಹೊಂದಿದ್ದು, 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಕ್ರೋಮ್ ಆಕ್ಸೆಂಟ್‌ಗಳು ಮತ್ತು ರೋಟರಿ ಡಯಲ್‌ಗಳನ್ನು (ಕುಶಕ್) ಒಳಗೊಂಡಿದೆ.

Hyundai Creta cabin

  •  ತನ್ನೆಲ್ಲಾ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕ್ರೆಟಾದ ಕ್ಯಾಬಿನ್‌ ಕ್ರಿಯಾತ್ಮಕತೆಯ ವಿಷಯದಲ್ಲಿ ಕಡಿಮೆಯೇನಿಲ್ಲದಿದ್ದರೂ, ಉಳಿದ ನಾಲ್ಕರಂತೆ ಇದು ಪ್ರೀಮಿಯಂ ಡಿಸೈನ್ ನೋಟವನ್ನು ಹೊಂದಿಲ್ಲ. ಖಂಡಿತವಾಗಿಯೂ ಇದರ ಕ್ಯಾಬಿನ್ ಅನ್ನು ದಕ್ಷತೆಯಿಂದ ವಿನ್ಯಾಸಗೊಲಿಸಲಾಗಿದ್ದು ಉತ್ತಮ ಸ್ಟೀರಿಂಗ್ ವ್ಹೀಲ್ ಮತ್ತು ಬಟನ್‌ಗಳನ್ನು ಹೊಂದಿದ್ದರೂ, ಈ SUVಯ ಪ್ಲಾಸ್ಟಿಕ್‌ಗಳು ಮತ್ತು ನಿರ್ಮಾಣ ಗುಣಮಟ್ಟದ ವಿಷಯಕ್ಕೆ ಬಂದಾಗ ನೀವು ಇನ್ನೂ ಹೆಚ್ಚಿನದನ್ನು ಬಯಸುವಿರಿ.  

 ಇದನ್ನೂ ಓದಿ: ಹ್ಯುಂಡೈ ಇಂಡಿಯಾ GMನ ತಲೆಗಾಂವ್ ಕೈಗಾರಿಕೆಯನ್ನು ಸ್ವಾಧೀನಪಡಿಸಿಕೊಳ್ಳಲು ಟರ್ಮ್ ಶೀಟ್ ಅನ್ನು ಸಹಿ ಮಾಡಿದೆ

 ಫ್ರಂಟ್ ಸೀಟ್

Maruti Grand Vitara front seats

  •  ಹೈರೈಡರ್ ಮತ್ತು ಗ್ರ್ಯಾಂಡ್ ವಿಟಾರಾ ಎರಡೂ ಉತ್ತಮವಾಗಿ ಬಲಪಡಿಸಲಾದ ಮತ್ತು ಕ್ವಿಲ್ಟಡ್ ಲೆದರೆಟ್ ಫ್ರಂಟ್‌ ಸೀಟುಗಳನ್ನು ಹೊಂದಿವೆ. ದೃಢತೆಯಲ್ಲಿ ಯಾವುದೇ ಕೊರತೆಯಿಲ್ಲ ಮತ್ತು ದೀರ್ಘ ಪ್ರಯಾಣದಲ್ಲಿ ನಿಮ್ಮನ್ನು ಆಯಾಸದಿಂದ ದೂರವಿಡುತ್ತದೆ. ಡ್ರೈವರ್‌ ಸೀಟ್ ಮತ್ತು ಸ್ಟೀರಿಂಗ್ ವ್ಹೀಲ್ ಎರಡೂ ಸಾಕಷ್ಟು ಹೊಂದಾಣಿಕೆಗಳನ್ನು ಒಳಗೊಂಡಿದ್ದು ನಿಮಗೆ ಅತ್ಯಂತ ಸೂಕ್ತವಾದ ಮತ್ತು ಆರಾಮದಾಯಕವಾದ ಡ್ರೈವಿಂಗ್ ಸ್ಥಾನವನ್ನು ಕಂಡುಕೊಳ್ಳುವಲ್ಲಿ ನೆರವಾಗುತ್ತದೆ. 

Hyundai Creta front seats

  • ನಿಮಗೆ ದೊಡ್ಡದಾದ ಮತ್ತು ಹೊಂದಿಕೊಳ್ಳಬಹುದಾದ ಫ್ರಂಟ್ ಸೀಟುಗಳು ಬೇಕೆಂದರೆ ಕ್ರೆಟಾವನ್ನು ನೀವು ಆಯ್ಕೆ ಮಾಡಬಹುದು. ಸೂಕ್ತವಾದ ಡ್ರೈವಿಂಗ್ ಸ್ಥಾನವನ್ನು ಪಡೆಯಲು, ಸಾಕಷ್ಟು ಮೆತ್ತನೆಯ ಸೀಟುಗಳೊಂದಿಗೆ ಡ್ರೈವರ್‌ಗೆ 8-ವಿಧದಲ್ಲಿ ಹೊಂದಾಣಿಕೆಯೊಂದಿಗೆ ಸೂಕ್ತವಾಗಿದೆ

Volkswagen Taigun front seats

  • ಸ್ಕೋಡಾ ಕುಶಕ್ ಮತ್ತು ಫೋಕ್ಸ್‌ವಾಗನ್ ಟೈಗನ್, ಎರಡರಲ್ಲಿಯೂ ಉತ್ತಮವಾದ ಬಾಹ್ಯ ಆಕಾರ ಹೊಂದಿರುವುದನ್ನು ನೀವು ಗಮನಿಸಬಹುದು ಮತ್ತು ಹೆಚ್ಚಿನವರಿಗೆ ಇದು ಸಹಾಯಕವಾಗಿದೆ, ಆದರೂ ಸ್ಥೂಲಕಾಯದವರಿಗೆ ಈ ಬಾಹ್ಯ ಆಕಾರವು ತುಸು ಕಷ್ಟಕರ ಎನಿಸಬಹುದು. 

ಹಿಂಬದಿ ಸೀಟು

Toyota Hyryder rear seats

  •  ಹೈರೈಡರ್ ಮತ್ತು ಗ್ರ್ಯಾಂಡ್ ವಿಟಾರಾ ಸಾಮಾನ್ಯ ಗಾತ್ರದ ಮೂವರು ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಹೊಂದಿದ್ದು, ಸ್ಥೂಲಕಾಯದವರು ಇನ್ನಷ್ಟು ಹೆಚ್ಚಿನ ಸ್ಥಳಾವಕಾಶವನ್ನು ನಿರೀಕ್ಷಿಸಬಹುದು. ಹಿಂಬದಿ ಆಸನಗಳು ಒರಗುವ ರಿಕೈನ್ ಫಂಕ್ಷನಾಲಿಟಿಯನ್ನು ಹೊಂದಿದ್ದರೂ ಆರು ಅಡಿಗಳು ಅಥವಾ ಅದಕ್ಕಿಂತಲೂ ಹೆಚ್ಚು ಎತ್ತರ ಇರುವವರಿಗೆ ಹೆಡ್‌ರೂಂ ತುಸು ತಗ್ಗು ಎನಿಸಬಹುದು. ಎರಡೂ SUVಗಳು ಹಿಂಬದಿಯ ಎಲ್ಲಾ ಪ್ರಯಾಣಿಕರಿಗೆ ಮೂರು ಪ್ರತ್ಯೇಕ ಹೆಡ್‌ರೆಸ್ಟ್‌ಗಳು ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಹೊಂದಿವೆ. ಟೊಯೋಟಾ ಮತ್ತು ಮಾರುತಿ ಅವುಗಳನ್ನು ಎರಡು ರಿಯರ್ AC ವೆಂಟ್‌ಗಳು ಮತ್ತು ಎರಡು USB ಪೋರ್ಟ್‌ಗಳೊಂದಿಗೆ (ಟೈಪ್ A ಮತ್ತು ಟೈಪ್ C ಎರಡೂ) ಸಜ್ಜುಗೊಳಿಸಿವೆ. ಅವುಗಳ ಕ್ಯಾಬಿನ್‌ಗಳು ಗಾಢ ವರ್ಣಗಳನ್ನು ಹೊಂದಿದ್ದರೂ, ದೊಡ್ಡದಾದ ಪನೋರಮಿಕ್ ಸನ್‌ರೂಫ್‌ಗಳು ತುಸು ಬೆಳಕನ್ನು ಬೀರಿ ಗಾಳಿಯಾಡುವಂತೆ ಮಾಡುತ್ತದೆ. ಆದ್ದರಿಂದ ತಿಳಿ ಬಣ್ಣದ ಥೀಮ್ ಕ್ಯಾಬಿನ್ ಗಾತ್ರವನ್ನು ಅನುಭವಿಸಲು ಖಂಡಿತ ನೆರವಾಗುತ್ತದೆ ಎಂದು ಹೇಳಲಾಗಿದೆ.

Hyundai Creta rear seats

  • ಇಲ್ಲಿ ಕ್ರೆಟಾವನ್ನು ಅತ್ಯುತ್ತಮ SUV ಆಗಿದ್ದು ಮೂರು ಹಿಂಬದಿ ಸೀಟುಗಳು ಫ್ಲಾಟ್ ಆಗಿದ್ದು ಮಧ್ಯದ ಪ್ರಯಾಣಿಕ ಕೂಡಾ ಆರಾಮಾದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ. ಇದು ರಿಯರ್ AC ವೆಂಟ್‌ಗಳು ಮತ್ತು USB ಪೋರ್ಟ್ ಒಳಗೊಂಡು ಚಾಲಕ ಚಾಲಿತವಾಗಿರಲು ಬಯಸುವವರಿಗೆ ತಕ್ಕಂತೆ ಇದೆ. ಇದು ಹೆಡ್‌ರೆಸ್ಟ್‌ಗಳಿಗೆ ಎರಡು ಕುಶನ್‌ಗಳು (ಆದರೆ ಮಧ್ಯದ ಪ್ರಯಾಣಿಕನಿಗೆ ಹೆಡ್‌ರೆಸ್ಟ್‌ ಇರುವುದಿಲ್ಲ), ಸನ್‌ಶೇಡ್‌ಗಲು ಮತ್ತು ಹಿಂದಿನ ಸೀಟಿನ ಅನುಭವವನ್ನು ವರ್ಧಿಸಲು ಪನೋರಮಿಕ್ ಸನ್‌ರೂಫ್ (ಕ್ಯಾಬಿನ್ ಹಿಂಭಾಗದಲ್ಲೂ ಗಾಳಿಯಾಡುವಂತೆ ಮಾಡಲು) ಅನ್ನು ಹೊಂದಿದೆ.

Skoda Kushaq rear seats

  • ಸ್ಕೋಡಾ ಕುಶಕ್ ಮತ್ತು VW ಟೈಗನ್‌ನ ರಿಯರ್ ಸೀಟುಗಳು ಉತ್ತಮ ಬಾಹ್ಯ ಆಕಾರವನ್ನು ಹೊಂದಿದ್ದು, ಕ್ಯಾಬಿನ್ ಒಳಗೆ ಚಲನೆ ಇದ್ದಾಗಲು ಪ್ರಯಾಣಿಕರು ಭದ್ರವಾಗಿ ಕುಳಿತುಕೊಳ್ಳುವಲ್ಲಿ ನೆರವಾಗುತ್ತದೆ. ಈ ಜೋಡಿಯನ್ನು 4-ಸೀಟರ್‌ಗಳಿಗೆ ಬಳಸಲು ಉತ್ತಮವಾಗಿದೆ ಯಾಕೆಂದರೆ, ಕ್ಯಾಬಿನ್‌ನ ಸೀಮಿತ ಅಗಲ ಮತ್ತು ಸೀಟುಗಳ ದೃಢವಾದ ಬಾಹ್ಯ ಆಕಾರದಿಂದಾಗಿ  ಹೆಚ್ಚುವರಿ ವ್ಯಕ್ತಿಗೆ (ಮಧ್ಯ ಸೀಟಿನ ಪ್ರಯಾಣಿಕ)  ಸ್ಥಳಾವಕಾಶಕ್ಕಾಗಿ ಹೆಣಗಾಡಬೇಕಾಗಬಹುದು.

ಇದನ್ನೂ ಓದಿ: ನಿಮ್ಮ ಸನ್‌ರೂಫ್ ಅನ್ನು ಬಳಸಲು ಮತ್ತು ನಿರ್ವಹಿಸಲು ಟಾಪ್ 5 ಸಲಹೆಗಳು

ಫೀಚರ್‌ಗಳು

ಸಾಮಾನ್ಯ ಫೀಚರ್‌ಗಳು

ಟೊಯೋಟಾ ಹೈರೈಡರ್/ಮಾರುತಿ ಗ್ರ್ಯಾಂಡ್ ವಿಟಾರಾದ ಫೀಚರ್ ಹೈಲೈಟ್‌ಗಳು

ಸ್ಕೋಡಾ ಕುಶಕ್ /VW ಟೈಗನ್‌ನ ಫೀಚರ್ ಹೈಲೈಟ್‌ಗಳು

ಹ್ಯುಂಡೈ ಕ್ರೆಟಾದ ಫೀಚರ್ ಹೈಲೈಟ್‌ಗಳು

  • ಕೀ ರಹಿತ ಪ್ರವೇಶ
  • ಪುಶ್-ಬಟನ್ ಸ್ಟಾರ್ಟ್ /ಸ್ಟಾಪ್
  • ಆಟೋ ಕ್ಲೈಮೇಟ್ ಕಂಟ್ರೋಲ್, AC ವೆಂಟ್‌ಗಳ ಜೊತೆಗೆ
  • ಆಟೋ-ಹೆಡ್‌ಲೈಟ್‌ಗಳು
  • ಟಿಲ್ಟ್-ಅಡ್ಜಸ್ಟೇಬಲ್ ಸ್ಟೀರಿಂಗ್ ವ್ಹೀಲ್
  • ವಾತಾಯನದ ಫ್ರಂಟ್ ಸೀಟುಗಳು
  • ಕ್ರ್ಯೂಸ್ ಕಂಟ್ರೋಲ್
  • ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ
  • ವೈರ್‌ಲೆಸ್ ಫೋನ್‌ ಚಾರ್ಜಿಂಗ್
  • ಸಂಪರ್ಕಿತ ಕಾರ್ ಟೆಕ್
  • ರಿವರ್ಸಿಂಗ್ ಕ್ಯಾಮರಾ
  • ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವ್ಹೀಲ್
  • ರೈನ್-ಸೆನ್ಸಿಂಗ್ ವೈಪರ್‌ಗಳು
  • 360-ಡಿಗ್ರಿ ಕ್ಯಾಮರಾ
  • ಒಂಭತ್ತು-ಇಂಚಿನ ಟಚ್‌ಸ್ಕ್ರೀನ್
  • ಹೆಡ್-ಅಪ್ ಡಿಸ್‌ಪ್ಲೇ
  • ಪನೋರಮಿಕ್ ಸನ್‌ರೂಫ್
  • ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವ್ಹೀಲ್
  • ರೈನ್-ಸೆನ್ಸಿಂಗ್ ವೈಪರ್‌ಗಳು​​​​​​​
  • ಕೂಲ್ಡ್ ಗ್ಲೋವ್‌ಬಾಕ್ಸ್
  • ​​​​​​​​  10-ಇಂಚಿನ ಟಚ್‌ಸ್ಕ್ರೀನ್
  • ಪನೋರಮಿಕ್ ಸನ್‌ರೂಫ್
  • 10.25- ಇಂಚಿನ ಟಚ್‌ಸ್ಕ್ರೀನ್
  • ಇಂಚಿನ ಟಚ್‌ಸ್ಕ್ರೀನ್
  • ಎಂಟು-ವಿಧದಲ್ಲಿ ಚಾಲಿತ ಡ್ರೈವರ್ ಸೀಟ್
  • ಡ್ರೈವ್ ಮತ್ತು ಟ್ರಾಕ್ಷನ್ ಮೋಡ್‌ಗಳು
  • ರಿಯರ್ ವಿಂಡೋ ಸನ್‌ಶೇಡ್‌ಗಳು

Skoda Kushaq sunroof

  •  ಇಲ್ಲಿ ಎಲ್ಲಾ ಐದು SUVಗಳು ನೀವು ಬಯಸುವ ಹೆಚ್ಚಿನ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದ್ದು, ಇವುಗಳು ಸನ್‌ರೂಫ್ (ಮೂರು ಮಾಡೆಲ್‌ಗಳಲ್ಲಿ ಪನೋರಮಿಕ್ ಸನ್‌ರೂಫ್), ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವಾತಾಯನದ ಫ್ರಂಟ್ ಸೀಟುಗಳನ್ನು ಹೊಂದಿದೆ.
  •  ಪ್ರತಿ SUV ಅಥವಾ ಇಲ್ಲಿ ಪ್ರತಿ SUV ಜೋಡಿಯು ಇತರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕೆಲವು ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ, ಟೊಯೋಟಾ ಮ್ತು ಮಾರುತಿ ಮಾಡೆಲ್‌ನ ಸ್ಟ್ರಾಂಗ್ ಹೈಬ್ರಿಡ್ ವೇರಿಯೆಂಟ್‌ಗಲು ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು 360-ಡಿಗ್ರಿ ಕ್ಯಾಮರಾ ಹೊಂದಿದ್ದು  ಎರಡೂ ಕೂಡಾ ಸೆಗ್‌ಮೆಟ್-ಎಕ್ಸ್‌ಕ್ಲ್ಯೂಸಿವ್‌ಗಳಾಗಿವೆ.
  •  ಜರ್ಮನ್ ಜೋಡಿಯು ರೈನ್-ಸೆನ್ಸಿಂಗ್ ವೈಪರ್‌ಳು ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್‌ಗಳನ್ನು ಹೊಂದಿದ್ದು ಇವು ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್‌ನಲ್ಲಿ ಇರುವುದಿಲ್ಲ.Hyundai Creta rear window sunshades
  •  ಇಲ್ಲಿ ಕ್ರೆಟಾ ಅತ್ಯಂತ ದೊಡ್ಡ ಟಚ್ ಸ್ಕ್ರೀನ್ ಹೊಂದಿದ್ದು (10.25-ಇಂಚುಗಳ ಅಳತೆ) ಮತ್ತು ಚಾಲಿತ ಡ್ರೈವರ್ ಸೀಟ್,ರಿಯರ್ ಸನ್‌ಶೇಡ್‌ಗಳು ಮತ್ತು ಡ್ರೈವ್ ಮತ್ತು ಟ್ರ್ಯಾಕ್ಷನ್ ಮೋಡ್‌ಗಳನ್ನು ಹೊಂದಿರುವ ಏಕೈಕ SUV ಆಗಿದೆ.

ಸುರಕ್ಷತೆ

  •  ಇಲ್ಲಿ ಸ್ಕೋಡಾ/ಫೋಕ್ಸ್‌ವಾಗನ್ SUVಗಳಿಗೆ ದೊಡ್ಡ ಅನುಕೂಲವೆಂದರೆ, ಗ್ಲೋಬಲ್ NCAP ಯಿಂದ ಅವುಗಳಿಗೆ ದೊರೆತ ಬಲವಾದ ಫೈವ್-ಸ್ಟಾರ್ ರೇಟಿಂಗ್. 
  •  ಇನ್ನೊಂದೆಡೆ, ಕ್ರೆಟಾದ ಪರೀಕ್ಷಾ ಫಲಿತಾಂಶಗಳು ಏಪ್ರಿಲ್ 2022ರಲ್ಲಿ ಬಂದಿದ್ದು, ಇದು ಸರಾಸರಿ ಥ್ರೀ-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಇಲ್ಲಿ ಗಮನಿಸಬೇಕಾಗದ ವಿಷಯವೆಂದರೆ, ಅದು ಇಂದಿನಂತೆ ಸುರಕ್ಷತಾ ಫೀಚರ್‌ಗಳಿಂದ ಸಜ್ಜುಗೊಂಡಿರಲಿಲ್ಲ ಆದರೆ ಪರೀಕ್ಷೆಗಳೂ ಅಷ್ಟೊಂದು ಕಟ್ಟುನಿಟ್ಟಾಗಿರಲಿಲ್ಲ.
  •  ಮಾರುತಿ-ಟೊಯೊಟಾ ಮಾಡೆಲ್‌ಗಳು ಗ್ಲೋಬಲ್ NCAP ಯಿಂದ ಇನ್ನಷ್ಟೇ ಪರೀಕ್ಷೆಗೆ ಒಳಪಡಬೇಕಿದೆ.

Volkswagen Taigun airbag tag

Hyundai Creta ISOFIX child seat anchors

  •  ಎಲ್ಲಾ ಐದು SUV ಗಳು ಆರು ಏರ್‌ಬ್ಯಾಗ್‌ಗಳು, ABS ಜೊತೆಗಿನ EBD, ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಹೊಂದಿದೆ.

ಇದನ್ನೂ ಓದಿ: ಒಂದು ಕಾರನ್ನು SUV ಎಂದು ವಿಭಾಗಿಸಲು ChatGPTಯು 5 ಅವಶ್ಯಕತೆಗಳನ್ನು ವಿವರಿಸಿದೆ.

 ಬೂಟ್ ಸ್ಪೇಸ್

  •  ಐದು SUVಗಳಲ್ಲಿ ಯಾವುದು ಗರಿಷ್ಠ ಬೂಟ್‌ ಸ್ಪೇಸ್ ಹೊಂದಿದೆ ಎಂಬುದನ್ನು ನೋಡಲು ನಾವು ಮೂರು ಸೂಟ್‌ಕೇಸ್‌ಗಳು ಮತ್ತು ಎರಡು ಸಾಫ್ಟ್ ಬ್ಯಾಗ್‌ಗಳನ್ನು ಒಳಗೊಂಡ ಟೆಸ್ಟ್ ಲಗೇಜ್‌ಗಳನ್ನು ಬಳಸಿ ನೋಡಿದೆವು.

Maruti Grand Vitara mild-hybrid variant boot space

Toyota Hyryder strong-hybrid variant boot space

  •  ಮಾರುತಿ ಗ್ರ್ಯಾಂಡ್ ವಿಟಾರಾ/ಟೊಯೋಟಾ ಹೈರೈಡರ್‌ಗೆ ಬಂದಾಗ ಅವುಗಳ ಮೈಲ್ಡ್-ಹೈಬ್ರಿಡ್ ಆವೃತ್ತಿಯಲ್ಲಿ ಹೆಚ್ಚಿನ ಲಗೇಜ್ ಹಿಡಿಯುತ್ತದೆ ಮತ್ತು ದೊಡ್ಡದಾದ ಬ್ಯಾಟರಿ ಪ್ಯಾಕ್ ಇಲ್ಲದಿರುವುದು ಅನುಕೂಲಕರವಾಗಿದೆ. ಮೈಲ್ಡ್-ಹೈಬ್ರಿಡ್ ವೇರಿಯೆಂಟ್‌ನಲ್ಲಿ, ಈ SUVಗಳಲ್ಲಿ ದೊಡ್ಡ ಮತ್ತು ಸಣ್ಣ ಟ್ರಾಲಿ ಬ್ಯಾಗ್‌ಗಳು ಮತ್ತು ಸಾಫ್ಟ್ ಬ್ಯಾಗ್‌ಗಳನ್ನು ಇಡಬಹುದಾಗಿದೆ. ಇನ್ನೊಂದೆಡೆ ಸ್ಟ್ರಾಂಗ್-ಹೈಬ್ರಿಡ್ ವೇರಿಯೆಂಟ್‌ಗಳಲ್ಲಿ ಒಂದು ಸಾಫ್ಟ್ ಬ್ಯಾಗ್, ದೊಡ್ಡ ಮತ್ತು ಸಣ್ಣ ಟ್ರಾಲಿ ಬ್ಯಾಗ್ ಅನ್ನು ಇಡಬಹುದಾಗಿದೆ.

Hyundai Creta boot space

  •  ಉಳಿದ ಮೂರು SUVಗಳಲ್ಲಿ, ಹ್ಯುಂಡೈ ಕ್ರೆಟಾ ಗರಿಷ್ಠ ಬೂಟ್ ಸ್ಪೇಸ್ ಸಾಮರ್ಥ್ಯ (433 ಲೀಟರ್‌ಗಳು) ಹೊಂದಿದ್ದು, ಯೂರೋಪಿಯನ್ SUVಗಳೆರಡೂ 385 ಲೀಟರ್ ಸಾಮರ್ಥ್ಯ ಹೊಂದಿದೆ. ವಾಸ್ತವದಲ್ಲಿ ಕುಶಕ್ ಮತ್ತು ಟೈಗನ್‌ನಲ್ಲಿ ಮೂರು ಸೂಟ್‌ಕೇಸ್‌ಗಳು ಮತ್ತು ಒಂದು ಸಾಫ್ಟ್ ಬ್ಯಾಗ್ ಅನ್ನು ಇಡಬಹುದಾಗಿದೆ. ಯಾಕೆಂದರೆ, ಕುಶಕ್ ಮತ್ತು ಟೈಗನ್‌ನಲ್ಲಿನ ಬೂಟ್ ಅನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದು ಕ್ರೆಟಾಗಿಂತ ಆಳವಾಗಿದೆ. ಹ್ಯುಂಡೈ SUVಯಲ್ಲಿ  ಪೂರ್ಣ-ಗಾತ್ರದ ಮತ್ತು ಸಣ್ಣ ಟ್ರಾಲಿ ಬ್ಯಾಗ್‌ಗಳು ಮತ್ತು ಎರಡು ಸಾಫ್ಟ್ ಬ್ಯಾಗ್‌ಗಳನ್ನು ಇಡಬಹುದು ಆದರೆ ಇದಕ್ಕೆ ಪಾರ್ಸೆಲ್ ಟ್ರೇ ಅನ್ನು ತೆಗೆಯಬೇಕಾಗುತ್ತದೆ. 

 ಪವರ್‌ಟ್ರೇನ್‌ಗಳು ಮತ್ತು ರೈಡ್ ಗುಣಮಟ್ಟ

ನಿರ್ದಿಷ್ಟತೆ

ಟೊಯೋಟಾ ಹೈರೈಡರ್/ಮಾರುತಿ ಗ್ರ್ಯಾಂಡ್ ವಿಟಾರಾ

ಸ್ಕೋಡಾ ಕುಶಕ್ /VW ಟೈಗನ್

ಹ್ಯುಂಡೈ ಕ್ರೆಟಾ

ಇಂಜಿನ್

1.5-ಲೀಟರ್ ಮೈಲ್ಡ್-ಹೈಬ್ರಿಡ್/  1.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್

1-ಲೀಟರ್ ಟರ್ಬೋ-ಪೆಟ್ರೋಲ್/ 1.5 ಲೀಟರ್ ಟರ್ಬೋ-ಪೆಟ್ರೋಲ್

1.5-ಲೀಟರ್ ಪೆಟ್ರೋಲ್/ 1.4- ಲೀಟರ್ ಟರ್ಬೋ-ಪೆಟ್ರೋಲ್ / 1.5-ಲೀಟರ್ ಡೀಸೆಲ್

ಪವರ್

103PS/ 116PS (ಸಂಯೋಜಿತ)

115PS/ 150PS

115PS/ 140PS/ 115PS

ಟಾರ್ಕ್

137Nm/ 122Nm (ಇಂಜಿನ್), 141Nm (ಮೋಟರ್)

178Nm/ 250Nm

144Nm/ 242Nm/ 250Nm

ಟ್ರಾನ್ಸ್‌ಮಿಶನ್

5-ಸ್ಪೀಡ್ MT, 6- ಸ್ಪೀಡ್ AT/ e-CVT

6- ಸ್ಪೀಡ್ MT, 6- ಸ್ಪೀಡ್ AT/ 6- ಸ್ಪೀಡ್ MT, 7- ಸ್ಪೀಡ್ DCT

6- ಸ್ಪೀಡ್, CVT/ 7- ಸ್ಪೀಡ್ DCT/ 6- ಸ್ಪೀಡ್ MT, 6- ಸ್ಪೀಡ್ AT

ಡ್ರೈವ್‌ಟ್ರೇನ್

FWD, AWD (MT ಮಾತ್ರ)/ FWD

FWD

FWD

Hyundai Creta

  •  ಇಲ್ಲಿರುವ ಎಲ್ಲಾ SUVಗಳಲ್ಲಿ, ಕ್ರೆಟಾ ಹೆಚ್ಚಿನ ಇಂಜಿನ್-ಗೇರ್‌ಬಾಕ್ಸ್ ಸಂಯೋಜನೆಗಳನ್ನು ಹೊಂದಿದೆ. ಹ್ಯುಂಡೈ ಇಲ್ಲಿ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ನೀಡುವ ಏಕಮಾತ್ರ ಕಾರುತಯಾರಕ ಸಂಸ್ಥೆಯಾಗಿದೆ. ಡೀಸೆಲ್ ಪವರ್‌ಟ್ರೇನ್ ಚಾಲನೆಗೆ ಸುಲಭವಾಗಿದ್ದು ಹೆಚ್ಚಿನ ಇಂಧನ ಸಾಮರ್ಥ್ಯವನ್ನು ನೀಡುತ್ತದೆ, ಇದು ಸ್ವಾಭಾವಿಕವಾಗಿ ಚೂಸಿಸುವ ಪೆಟ್ರೋಲ್ ಯೂನಿಟ್ ಆಗಿದ್ದು ನಗರಗಳಲ್ಲಿ ಓಡಿಸಲು ಉತ್ತಮವಾಗಿದೆ. ಇದು ಅಪರೂಪದ ಹೈವೇ ಡ್ರೈವ್‌ಗಳನ್ನೂ ನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ನೀವು ಪಂಚಿ ಎಂಜಿನ್ ಹೊಂದಿರುವ ಕ್ರೆಟಾ ಬಯಸುವವರಾಗಿದ್ದರೆ, ನೀವು ಟರ್ಬೋ-ಪೆಟ್ರೋಲ್ ಪವರ್‌ಟ್ರೇನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ.

Skoda Kushaq

Volkswagen Taigun

  •  ಸ್ಕೋಡಾ ಮತ್ತು ಫೋಕ್ಸ್‌ವಾಗೆನ್ ಕಾರುಗಳು ಯಾವಾಗಲೂ ಅವುಗಳ ಪಂಚಿ ಮತ್ತು ಅತ್ಯತಾಕರ್ಷಕ ಇಂಜಿನ್‌ಗಳಿಗೆ ಹೆಸರುವಾಸಿಯಾಗಿದ್ದು ಉತ್ಸಾಹಿಗಳಿಗೆ ಇದು ಅಚ್ಚುಮೆಚ್ಚಿನದಾಗಿದೆ. ಕುಶಕ್-ಟೈಗನ್ ಜೋಡಿಯ ದೊಡ್ಡ 1.5-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್‌ಗೆ ಬಂದಾಗ ಮೃದುವಾದ ಹೆಚ್ಚು ಸ್ಪಂದಿಸುವ ಮತ್ತು ಸಂಸ್ಕರಿಸಿದ ಇಂಜಿನ್ ಬಯಸುವವರಿಗೆ ಇದು ಸೂಕ್ತವಾಗಿದೆ.

Maruti Grand Vitara

Toyota Hyryder

  • ಮಾರುತಿ-ಟೊಯೋಟಾ SUVಯ ಮೈಲ್ಡ್ ಹೈಬ್ರಿಡ್ ಯೂನಿಟ್ ನಗರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ನಿಖರವಾಗಿ ಹೈವೇ ಪ್ರಯಾಣಗಳು ಅಥವಾ ಹೆಚ್ಚಿನ ಜನರು/ಲಗೇಜ್ ಇರುವಾಗ ವಿಶೇಷವಾಗಿ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಇದು ನಿಮ್ಮ ಬಯಕೆಗೆ ತಕ್ಕಂತೆ ಇಲ್ಲ. SUVಯಿಂದ ಹೆಚ್ಚಿನ ಇಂಧನ ಸಾಮರ್ಥ್ಯವನ್ನು ಬಯಸುವವರು ಹೆಚ್ಚಿನ ಸಂದರ್ಭದಲ್ಲಿ ಕನಿಷ್ಠ 20kmpl ನ ಸುಮಾರಿಗೆ ನೀಡುವ ಹೈಬ್ರಿಡ್ ವೇರಿಯೆಂಟ್‌ಗಳನ್ನು ಆಯ್ಕೆ ಮಾಡಬೇಕು. ಇಲೆಕ್ಟ್ರಿಕ್ ಮೋಟರ್ ವೇರವರ್ಧನೆಯನ್ನು ಉತ್ತೇಜಿಸಿದರೂ ಹೈವೇಯಲ್ಲಿ ಇದರ ಪಂಚ್ ಸಾಕಾಗುವುದಿಲ್ಲ. ಮಾರುತಿ ಮತ್ತು ಟೊಯೋಟಾ  SUV ಕೂಡಾ ನಿಮಗೆ ಅಗತ್ಯವಿದ್ದಲ್ಲಿ ಆಲ್-ವ್ಹೀಲ್ ಡ್ರೈವ್‌ಟ್ರೈನ್ (AWD) ಅನ್ನು ಪಡೆದಿದೆ ಆದರೆ ಇದು ಮೈಲ್ಡ್-ಹೈಬ್ರಿಡ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಸಂಯೋಜನೆಯಲ್ಲಿ ಮಾತ್ರ ಬರುತ್ತದೆ.

ನಿರ್ಣಯ

Compact SUVs comparison

  • ಈ ಕ್ರೆಟಾ ಎಲ್ಲದಕ್ಕಿಂತ ಹಳೆಯ ಮಾಡೆಲ್ ಆಗಿದ್ದರೂ, ತನ್ನ ಅನೇಕ ಬಲವಾದ ಅಂಶಗಳನ್ನು ಹೊಂದಿದ್ದು, ಅತ್ಯಂತ ಹೆಚ್ಚಿನ ಪವರ್‌ಟ್ರೇನ್ ಆಯ್ಕೆಗಲನ್ನು ಹೊಂದಿರುವ ಮತ್ತು ಸಾಕಷ್ಟು ಕ್ಯಾಬಿನ್ ಒಳಗಿನ ಸ್ಥಳಾವಕಾಶ ಮತ್ತು ಉತ್ತಮ ರೈಡ್ ಗುಣಮಟ್ಟವನ್ನು ನೀಡುವ ಏಕೈಕ SUV ಆಗಿದೆ.
  •  ನೀವು ಕ್ಲಾಸ್ ಮತ್ತು ಪ್ರೀಮಿಯಮ್ ಕ್ಯಾಬಿನ್ ಹಾಗೂ ಫೀಚರ್ ಪಟ್ಟಿಯಲ್ಲಿ ಅತ್ಯಂತ ಹೆಚ್ಚಿನ ಇಂಧನ ಸಾಮರ್ಥ್ಯವನ್ನು ಬಯಸುವವರಾದರೆ, ನಿಮ್ಮ ಆಯ್ಕೆಯು ಮಾರುತಿ ಗ್ರ್ಯಾಂಡ್ ವಿಟಾರಾ/ಟೊಯೋಟಾ ಹೈರೈಡರ್ ಹೈಬ್ರಿಡ್‌ಗೆ ಸೀಮಿತವಾಗಬೇಕಾಗುತ್ತದೆ. ಈ ಎರಡೂ ಪೆಟ್ರೋಲ್ ಮಾತ್ರ ಆಫರಿಂಗ್‌ಗಳಾಗಿದ್ದು ಎರಡು ಪವರ್‌ಟ್ರೇನ್ ಆಯ್ಕೆಗಳು ಮತ್ತು ಅನೇ ಅತ್ಯುತ್ತಮ ಇನ್-ಸೆಗ್ಮೆಂಟ್ ಫೀಚರ್‌ಗಳನ್ನು ಹೊಂದಿವೆ. 
  •  ಕೊನೆಯದಾಗಿ, ಜರ್ಮನ್ನರು ಆಕರ್ಷಕ ನೋಟದ SUVಗಳನ್ನು ತಮ್ಮದಾಗಿಸಿಕೊಂಡಿದ್ದು ಇದು ಕೂಡಾ ಅತ್ಯುತಮವಾಗಿದೆ. ಖಂಡಿತವಾಗಿ ಅವುಗಳು ಕೆಲವು ಫೀಚರ್‌ಗಳನ್ನು ಹೊಂದಿಲ್ಲವಾದರೂ, ಹ್ಯುಂಡೈ ಮತ್ತು ಮಾರುತಿ-ಟೊಯೋಟಾ ಜೋಡಿಗೆ ಹೋಲಿಸಿದರೆ ಇತರವುಗಳಷ್ಟು ದೊಡ್ಡದಾಗಿ ಕಾಣುವುದಿಲ್ಲ,ಆದರೆ ಅದಕ್ಕಿಂತಲೂ ಹಿಂದಿನದನ್ನು ನೀವು ನೋಡಿದರೆ, ಮತ್ತು ಹೆಚ್ಚು ಅಂತರ್ಗತ ಚಾಲನಾ ಅನುಭವವನ್ನು ಬಯಸಿದರೆ, ಇವುಗಳು ನಿಮಗೆ ಉತ್ತಮ ಆಯ್ಕೆಯಾಗಬಲ್ಲವು.

ಇನ್ನಷ್ಟು ಓದಿ : ಕ್ರೆಟಾದ ಆನ್‌ ರೋಡ್ ಬೆಲೆ

 

 


 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ ಕ್ರೆಟಾ 2020-2024

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience