• English
  • Login / Register

ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್‌ಶಿಪ್‌ಗಳಲ್ಲಿ ಪ್ರೀ-ಬುಕಿಂಗ್ ಈಗಾಗಲೇ ಆರಂಭ

ವೋಕ್ಸ್ವ್ಯಾಗನ್ ಗೋಲ್ಫ್ ಜಿಟಿ ಗಾಗಿ shreyash ಮೂಲಕ ಫೆಬ್ರವಾರಿ 06, 2025 04:00 pm ರಂದು ಪ್ರಕಟಿಸಲಾಗಿದೆ

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

ನಮ್ಮ ಮೂಲಗಳ ಪ್ರಕಾರ, ಗಾಲ್ಫ್ ಜಿಟಿಐ ಅನ್ನು ಸಂಪೂರ್ಣವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು ಮತ್ತು ಸೀಮಿತ ಸಂಖ್ಯೆಯ ಯೂನಿಟ್‌ಗಳಲ್ಲಿ ಲಭ್ಯವಿರುತ್ತದೆ

Volkswagen Golf GTI

  •  ಗ್ರಾಹಕರು ಈಗ ಕೆಲವು ಆಯ್ದ ಡೀಲರ್‌ಶಿಪ್‌ಗಳಲ್ಲಿ ಗಾಲ್ಫ್ ಜಿಟಿಐ ಅನ್ನು ಮುಂಗಡವಾಗಿ ಬುಕ್ ಮಾಡಬಹುದು.

  •  ನಮ್ಮ ಮೂಲಗಳ ಪ್ರಕಾರ, ಗಾಲ್ಫ್ ಜಿಟಿಐ ಕೇವಲ 250 ಯೂನಿಟ್‌ಗಳಲ್ಲಿ ಲಭ್ಯವಿರಬಹುದು.

  •  ಇದು ಮ್ಯಾಟ್ರಿಕ್ಸ್ LED ಹೆಡ್‌ಲೈಟ್‌ಗಳು, 18 ಅಥವಾ 19-ಇಂಚಿನ ಅಲಾಯ್ ವೀಲ್‌ಗಳು ಮತ್ತು ಡ್ಯುಯಲ್ ಎಕ್ಸಾಸ್ಟ್ ಸೆಟಪ್‌ನೊಂದಿಗೆ ರಫ್ ಆಗಿರುವ ಮತ್ತು ಸ್ಪೋರ್ಟಿ ಡಿಸೈನ್ ಅನ್ನು ಹೊಂದಿದೆ.

  •  ಇದು ಮೆಟಾಲಿಕ್ ಪೆಡಲ್‌ಗಳೊಂದಿಗೆ ಆಲ್ ಬ್ಲಾಕ್ ಕ್ಯಾಬಿನ್ ಥೀಮ್ ಅನ್ನು ಮತ್ತು ಜಿಟಿಐ ಲೋಗೋದೊಂದಿಗೆ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ.

  •  ಇದು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಮೂಲಕ ಚಲಿಸುತ್ತದೆ, ಮತ್ತು 245 PS ಮತ್ತು 370 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

  •  ಇದರ ಬೆಲೆಯು 52 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.

ಭಾರತದಲ್ಲಿ ಅನೇಕ ಫೋಕ್ಸ್‌ವ್ಯಾಗನ್ ಅಭಿಮಾನಿಗಳ ಕನಸಿನ ಕಾರಾಗಿರುವ ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ, ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಹೊಸ ಹ್ಯಾಚ್ ಕಾರನ್ನು ಇಲ್ಲಿಗೆ ತರಲು ಬ್ರ್ಯಾಂಡ್ ಸಿದ್ಧವಾಗುತ್ತಿದೆ. ಗಾಲ್ಫ್ ಜಿಟಿಐ ಅನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲಾಗುವುದು ಮತ್ತು ಬಲ್ಲ ಮೂಲಗಳ ಪ್ರಕಾರ ಭಾರತದಲ್ಲಿ ಕೇವಲ 250 ಯುನಿಟ್‌ಗಳು ಮಾತ್ರ ಲಭ್ಯವಿರುತ್ತವೆ. ಭಾರತದ ಕೆಲವು ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗಳು ಗಾಲ್ಫ್ ಜಿಟಿಐಗಾಗಿ ಆಫ್‌ಲೈನ್ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿವೆ.

ಗಾಲ್ಫ್ GTI ಡಿಸೈನ್

Volkswagen Golf GTi Front View

ಮೊದಲ ನೋಟದಲ್ಲೇ ಗಾಲ್ಫ್ GTI ಸ್ಪೋರ್ಟಿ ಮತ್ತು ಬೋಲ್ಡ್ ಲುಕ್ ಅನ್ನು ನೀಡುತ್ತದೆ, ಆದರೆ ಇದರ ಕ್ಲಾಸಿಕ್ ಫೋಕ್ಸ್‌ವ್ಯಾಗನ್ ಶೈಲಿಯನ್ನು ಇನ್ನೂ ಉಳಿಸಿಕೊಂಡಿದೆ. ಇದು ಮ್ಯಾಟ್ರಿಕ್ಸ್ LED ಹೆಡ್‌ಲೈಟ್‌ಗಳು, ಸೆಂಟರ್‌ನಲ್ಲಿ 'VW' ಲೋಗೋ ಹೊಂದಿರುವ ಸ್ಟೈಲಿಶ್ ಗ್ರಿಲ್ ಮತ್ತು ಹನಿಕೋಂಬ್ ಮೆಶ್ ಮಾದರಿ ವಿನ್ಯಾಸದೊಂದಿಗೆ ಮುಂಭಾಗದ ಬಂಪರ್ ಅನ್ನು ಒಳಗೊಂಡಿದೆ. ಇದರ ಬೋಲ್ಡ್ ಲುಕ್ ಅನ್ನು 18-ಇಂಚಿನ 'ರಿಚ್ಮಂಡ್' ಅಲಾಯ್ ವೀಲ್‌ಗಳು (ಐಚ್ಛಿಕವಾಗಿ 19-ಇಂಚಿನ ಸೆಟ್‌ನೊಂದಿಗೆ), ಸ್ಪೋರ್ಟಿ ರಿಯರ್ ಡಿಫ್ಯೂಸರ್ ಮತ್ತು ಡ್ಯುಯಲ್ ಎಕ್ಸಾಸ್ಟ್‌ಗಳಿಂದ ಹೆಚ್ಚಿಸಲಾಗಿದೆ. ಇದನ್ನು ಸ್ಪೋರ್ಟಿಯರ್ ಹ್ಯಾಚ್‌ಬ್ಯಾಕ್ ಆಗಿ ಎದ್ದು ಕಾಣುವಂತೆ ಮಾಡುತ್ತಿರುವುದು ಅದರ ಗ್ರಿಲ್, ಫೆಂಡರ್ ಮತ್ತು ಟೈಲ್‌ಗೇಟ್‌ನಲ್ಲಿರುವ 'GTI' ಬ್ಯಾಡ್ಜ್‌ಗಳು.

ಕ್ಯಾಬಿನ್ ಮತ್ತು ಫೀಚರ್‌ಗಳು

Volkswagen Golf GTi DashBoard

ಗಾಲ್ಫ್ ಜಿಟಿಐ ಕಾರಿನ ಕ್ಯಾಬಿನ್ ಆಲ್ ಬ್ಲಾಕ್ ಆಗಿದ್ದು, ಲೇಯರ್ಡ್ ಡ್ಯಾಶ್‌ಬೋರ್ಡ್ ಮತ್ತು ಟಾರ್ಟನ್-ಕ್ಲಾಡ್ ಸ್ಪೋರ್ಟ್ ಸೀಟುಗಳನ್ನು ಹೊಂದಿದೆ. ಇದು ಮೆಟಾಲಿಕ್ ಪೆಡಲ್‌ಗಳು ಮತ್ತು 'GTI' ಬ್ಯಾಡ್ಜ್‌ನೊಂದಿಗೆ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಕೂಡ ಪಡೆಯುತ್ತದೆ. ಇದರ ಫೀಚರ್‌ಗಳ ವಿಷಯದಲ್ಲಿ ಜಿಟಿಐನಲ್ಲಿ ಮಾತ್ರ ಇರುವ ಆಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 12.9-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಆಟೋ AC, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಂಬಿಯೆಂಟ್ ಲೈಟಿಂಗ್ ಸೇರಿವೆ.

 ಹ್ಯಾಚ್‌ಬ್ಯಾಕ್‌ನಲ್ಲಿದೆ 245 PS

Volkswagen Golf GTi Exterior Image

 ಗಾಲ್ಫ್ ಜಿಟಿಐ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು ಪ್ರಭಾವಶಾಲಿ 245 PS ಮತ್ತು 370 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ, ಇದು ಹ್ಯಾಚ್‌ಬ್ಯಾಕ್‌ನ ಮುಂಭಾಗದ ಚಕ್ರಗಳಿಗೆ ಪವರ್ ಅನ್ನು ನೀಡುತ್ತದೆ. ಇದು ಕೇವಲ 5.9 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ/ಗಂಟೆ ವೇಗವನ್ನು ತಲುಪಬಲ್ಲದು ಮತ್ತು 250 ಕಿಮೀ/ಗಂಟೆ ಗರಿಷ್ಠ ವೇಗವನ್ನು ತಲುಪಬಲ್ಲದು. 

ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು  

 ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲಾಗುತ್ತಿರುವ ಗಾಲ್ಫ್ ಜಿಟಿಐ ಬೆಲೆ ಸುಮಾರು ರೂ. 52 ಲಕ್ಷ (ಎಕ್ಸ್ ಶೋರೂಂ) ಇರುವ ನಿರೀಕ್ಷೆಯಿದೆ. ಭಾರತದಲ್ಲಿ, ಇದು ಮಿನಿ ಕೂಪರ್ S ನಂತಹ ಕಾರುಗಳೊಂದಿಗೆ ಸ್ಪರ್ಧಿಸಲಿದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

was this article helpful ?

Write your Comment on Volkswagen Golf ಜಿಟಿ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending కన్వర్టిబుల్ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience