• English
    • Login / Register

    ಬಿಡುಗಡೆಗೂ ಮುನ್ನ ಮೊದಲ ಬಾರಿಗೆ ಭಾರತೀಯ ರಸ್ತೆಯಲ್ಲಿ ಕಾಣಿಸಿಕೊಂಡ Volkswagen Golf GTI

    ಮಾರ್ಚ್‌ 19, 2025 09:14 pm ರಂದು shreyash ಮೂಲಕ ಪ್ರಕಟಿಸಲಾಗಿದೆ

    17 Views
    • ಕಾಮೆಂಟ್‌ ಅನ್ನು ಬರೆಯಿರಿ

    ಗಾಲ್ಫ್ ಜಿಟಿಐ ಭಾರತದಲ್ಲಿ ಸೀಮಿತ ಸಂಖ್ಯೆಯ ಘಟಕಗಳಲ್ಲಿ ಲಭ್ಯವಿರುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು, ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ

    Volkswagen Golf GTI Spied In India For The First Time Ahead Of The Launch

    • ಆಯ್ದ ಡೀಲರ್‌ಶಿಪ್‌ಗಳಲ್ಲಿ ಗಾಲ್ಫ್ ಜಿಟಿಐಗಾಗಿ ಮುಂಗಡ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದೆ.

    • ಇದು ಮ್ಯಾಟ್ರಿಕ್ಸ್ LED ಹೆಡ್‌ಲೈಟ್‌ಗಳು, 18 ಅಥವಾ 19-ಇಂಚಿನ ಅಲಾಯ್ ವೀಲ್‌ಗಳು ಮತ್ತು ಡ್ಯುಯಲ್ ಎಕ್ಸಾಸ್ಟ್ ಸೆಟಪ್‌ನೊಂದಿಗೆ ಆಕ್ರಮಣಕಾರಿಯೊಂದಿಗೆ ಬೋಲ್ಡ್‌ ವಿನ್ಯಾಸವನ್ನು ಹೊಂದಿದೆ.

    • ಇದು ಮೆಟಾಲಿಕ್ ಪೆಡಲ್‌ಗಳು ಮತ್ತು GTI ಲೋಗೋದೊಂದಿಗೆ 3-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ.

    • 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಇದು 265 ಪಿಎಸ್‌ ಮತ್ತು 370 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ.

    • 52 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಬೆಲೆಯನ್ನು ನಿಗದಿಪಡಿಸಲಾಗಿದೆ.

     ಜರ್ಮನ್ ವಾಹನ ತಯಾರಕ ಕಂಪನಿಯಾದ ವೋಕ್ಸ್‌ವ್ಯಾಗನ್‌ನ ಗಾಲ್ಫ್ ಜಿಟಿಐ ಭಾರತದಲ್ಲಿ ಬಿಡುಗಡೆಯಾಗಲಿರುವ ಅತಿದೊಡ್ಡ ಕಾರುಗಳಲ್ಲಿ ಒಂದಾಗಲಿದೆ. ಅದಕ್ಕೂ ಮುನ್ನ, ಇತ್ತೀಚೆಗೆ ನಮ್ಮ ರಸ್ತೆಯಲ್ಲಿ ಈ ಹಾಟ್ ಹ್ಯಾಚ್ ಅನ್ನು ಮೊದಲ ಬಾರಿಗೆ ಕ್ಯಾಮೆರಾದ ಕಣ್ಣಿನಲ್ಲಿ ಸೆರೆಹಿಡಿಯಲಾಯತು, ಅದು ಕೂಡ ಯಾವುದೇ ರೀತಿಯ ಕವರ್‌ ಇಲ್ಲದೆ. ಗಾಲ್ಫ್ ಜಿಟಿಐ ಅನ್ನು ಭಾರತದಲ್ಲಿ ಸಿಬಿಯು (ಸಂಪೂರ್ಣವಾಗಿ ನಿರ್ಮಿಸಲಾದ ಘಟಕ) ರೂಪದ ಮೂಲಕ ಮಾರಾಟ ಮಾಡಲಾಗುವುದು ಮತ್ತು ಸೀಮಿತ ಸಂಖ್ಯೆಯಲ್ಲಿ ಲಭ್ಯವಿರುತ್ತದೆ.

    ಸ್ಪೈ ಶಾಟ್‌ಗಳಲ್ಲಿ ನಾವು ಏನು ನೋಡಿದ್ದೇವೆ?

    ಈ ಸ್ಪೈ ಶಾಟ್ ನಮಗೆ ಭಾರತ-ಸ್ಪೆಕ್ ಗಾಲ್ಫ್ GTI ನ ಸೈಡ್‌ನ ಸ್ಪಷ್ಟ ನೋಟವನ್ನು ನೀಡಿತು. ಇದು 5-ಸ್ಪೋಕ್ ಅಲಾಯ್ ವೀಲ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಕೆಂಪು ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳನ್ನು ಹೊಂದಿತ್ತು. ಮುಂಭಾಗದ ಬಾಗಿಲಿನ ಮೇಲೆ 'GTI' ಬ್ಯಾಡ್ಜ್ ಕೂಡ ಇದೆ, ಮತ್ತು ಹಿಂಭಾಗದಲ್ಲಿ LED ಟೈಲ್ ಲೈಟ್‌ಗಳ ಒಂದು ನೋಟವನ್ನು ಸಹ ನಾವು ಪಡೆದುಕೊಂಡಿದ್ದೇವೆ. ಇದು ಸ್ಟ್ಯಾಂಡರ್ಡ್ ಗಾಲ್ಫ್‌ಗಿಂತ ಕಡಿಮೆ ಸವಾರಿಯನ್ನು ಹೊಂದಿದ್ದು, ಇದು ಹೆಚ್ಚು ಆಕ್ರಮಣಕಾರಿ ನಿಲುವನ್ನು ನೀಡುತ್ತದೆ.

    ಡಿಸೈನ್‌ ಕುರಿತು ಇನ್ನಷ್ಟು

    ಇದು ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್‌ಗಳು, ಕೇಂದ್ರೀಯ ಸ್ಥಾನದಲ್ಲಿರುವ 'VW' ಲೋಗೋವನ್ನು ಹೊಂದಿರುವ ನಯವಾದ ಗ್ರಿಲ್ ಮತ್ತು ಆಕ್ರಮಣಕಾರಿ ಹನಿಕೋಂಬ್ ಮೆಶ್ ಮಾದರಿಯನ್ನು ಹೊಂದಿರುವ ಮುಂಭಾಗದ ಬಂಪರ್‌ನೊಂದಿಗೆ ಸಜ್ಜುಗೊಂಡಿದೆ. ಹಿಂಭಾಗದಲ್ಲಿ, ಸ್ಪೋರ್ಟಿ ಡಿಫ್ಯೂಸರ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಸೆಟಪ್ ಕೂಡ ಇದೆ.

    ಕ್ಯಾಬಿನ್ ಮತ್ತು ಫೀಚರ್‌ಗಳು

    Volkswagen Golf GTi DashBoard

    ಗಾಲ್ಫ್ GTI ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್ ಥೀಮ್ ಅನ್ನು ಹೊಂದಿದ್ದು, ಲೇಯರ್ಡ್ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಟಾರ್ಟನ್-ಕ್ಲಾಡ್ ಸ್ಪೋರ್ಟ್‌ ಸೀಟುಗಳನ್ನು ಒಳಗೊಂಡಿದೆ. ಇದು ಮೆಟಾಲಿಕ್ ಪೆಡಲ್‌ಗಳು ಮತ್ತು 'GTI' ಬ್ಯಾಡ್ಜ್‌ನೊಂದಿಗೆ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಸಹ ಪಡೆಯುತ್ತದೆ. ಇದರ ಫೀಚರ್‌ಗಳ ಸೆಟ್‌ನಲ್ಲಿ GTI-ನಿರ್ದಿಷ್ಟ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 12.9-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಂಬಿಯೆಂಟ್ ಲೈಟಿಂಗ್ ಸೇರಿವೆ.

    ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ನೋಡಿಕೊಳ್ಳುತ್ತವೆ.

    ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್

    ಗಾಲ್ಫ್ ಜಿಟಿಐ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 265 ಪಿಎಸ್ ಮತ್ತು 370 ಎನ್ಎಂನಷ್ಟು ಔಟ್‌ಪುಟ್‌ಅನ್ನು ಉತ್ಪಾದಿಸುತ್ತದೆ. ಇದು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತದೆ, ಇದು ಈ ಹ್ಯಾಚ್‌ಬ್ಯಾಕ್‌ನ ಮುಂಭಾಗದ ಚಕ್ರಗಳಿಗೆ ಪವರ್‌ಅನ್ನು ನೀಡುತ್ತದೆ. ಇದು ಕೇವಲ 5.9 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ. ವೇಗವನ್ನು ತಲುಪಬಲ್ಲದು ಮತ್ತು ಗಂಟೆಗೆ 250 ಕಿ.ಮೀ. ಟಾಪ್‌ ಸ್ಪೀಡ್‌ಅನ್ನು ಹೊಂದಿದೆ.

    ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

    ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲಾದ ಗಾಲ್ಫ್ ಜಿಟಿಐ ಕಾರಿನ ಬೆಲೆ 52 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಗಾಲ್ಫ್ ಜಿಟಿಐಯು ಮಿನಿ ಕೂಪರ್ ಎಸ್ ನಂತಹ ಕಾರುಗಳೊಂದಿಗೆ ಪೈಪೋಟಿ ನಡೆಸಲಿದೆ. 

    ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

     

    was this article helpful ?

    Write your Comment on Volkswagen Golf ಜಿಟಿ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ కన్వర్టిబుల్ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience