Login or Register ಅತ್ಯುತ್ತಮ CarDekho experience ಗೆ
Login

ಬಿಡುಗಡೆಗೆ ಮುನ್ನವೇ Volkswagen Tiguan R-Lineನ ಎಂಜಿನ್ ಮತ್ತು ಬಣ್ಣ ಆಯ್ಕೆಗಳ ಮಾಹಿತಿಗಳು ಬಹಿರಂಗ

ವೋಕ್ಸ್ವ್ಯಾಗನ್ ಟಿಗುವಾನ್ 2025 ಗಾಗಿ dipan ಮೂಲಕ ಮಾರ್ಚ್‌ 25, 2025 08:17 pm ರಂದು ಪ್ರಕಟಿಸಲಾಗಿದೆ

ಜರ್ಮನ್‌ನ ಈ ಕಾರು ತಯಾರಕ ಕಂಪನಿಯು ಏಪ್ರಿಲ್ 14 ರಂದು ಬಿಡುಗಡೆಯಾಗಲಿರುವ ಸ್ಪೋರ್ಟಿಯರ್ ಟಿಗುವಾನ್‌ನ ಪ್ರಿ-ಬುಕಿಂಗ್ ಅನ್ನು ಸಹ ಪ್ರಾರಂಭಿಸಿದೆ

  • ಇದು ಅದೇ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (204 ಪಿಎಸ್‌/320 ಎನ್‌ಎಮ್‌)ನೊಂದಿಗೆ ಬರುತ್ತದೆ.

  • ಹೊಸ ಜನರೇಶನ್‌ನ ಮೊಡೆಲ್‌ ರೆಗ್ಯುಲರ್‌ ಆವೃತ್ತಿಯಂತೆಯೇ 7-ಸ್ಪೀಡ್‌ ಡಿಸಿಟಿ ಆಯ್ಕೆಯನ್ನು ಪಡೆಯಬಹುದು.

  • ಇದು 6 ಸಿಂಗಲ್‌-ಟೋನ್‌ ಬಣ್ಣ ಆಯ್ಕೆಗಳೊಂದಿಗೆ ಬರಲಿದ್ದು, ಡ್ಯುಯಲ್-ಟೋನ್ ಆಯ್ಕೆಯನ್ನು ನೀಡುವ ಸಾಧ್ಯತೆಯಿಲ್ಲ.

  • ಫೀಚರ್‌ಗಳ ಸೂಟ್ ಇನ್ನೂ ಬಹಿರಂಗಗೊಂಡಿಲ್ಲ, ಆದರೆ ಇದು 12.9-ಇಂಚಿನ ಟಚ್‌ಸ್ಕ್ರೀನ್ ಮತ್ತು ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರಬಹುದು.

  • 6 ಏರ್‌ಬ್ಯಾಗ್‌ಗಳು, ಟಿಪಿಎಮ್‌ಎಸ್‌ ಮತ್ತು ADAS ಸೇರಿದಂತೆ ಸುರಕ್ಷತಾ ತಂತ್ರಜ್ಞಾನವನ್ನು ಪಡೆಯಬಹುದು.

  • ಬೆಲೆಗಳು 55 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ವೋಕ್ಸ್‌ವ್ಯಾಗನ್ ಟಿಗುವಾನ್ ಆರ್-ಲೈನ್ ಅನ್ನು ಅದರ ಹೊಸ ಜನರೇಶನ್‌ನ ಅವತಾರದಲ್ಲಿ ಏಪ್ರಿಲ್ 14, 2025 ರಂದು ಬಿಡುಗಡೆ ಮಾಡಲಾಗುವುದು ಎಂದು ಸ್ವಲ್ಪ ಸಮಯದ ಹಿಂದೆ ಘೋಷಿಸಲಾಗಿತ್ತು. ಈಗ, ಸ್ಪೋರ್ಟಿಯರ್-ಲುಕಿಂಗ್ ಆವೃತ್ತಿಯ ಎಸ್‌ಯುವಿಯ ಅಧಿಕೃತ ಬುಕಿಂಗ್‌ಗಳು ಪ್ರಾರಂಭವಾಗಿವೆ ಮತ್ತು ಕಾರು ತಯಾರಕರು ಇದೀಗ ಅದರ ಎಂಜಿನ್ ಮತ್ತು ಬಣ್ಣ ಆಯ್ಕೆಗಳನ್ನು ಸಹ ಬಹಿರಂಗಪಡಿಸಿದ್ದಾರೆ.

ಎಂಜಿನ್‌ ಆಯ್ಕೆಗಳು

ಟಿಗುವಾನ್ ಆರ್-ಲೈನ್ ಅದೇ 2-ಲೀಟರ್ ಟಿಎಸ್ಐ ಎಂಜಿನ್‌ನೊಂದಿಗೆ ಬರುತ್ತದೆ, ಅದು ಈ ಕೆಳಗಿನ ವಿಶೇಷಣಗಳನ್ನು ಹೊಂದಿದೆ:

ಎಂಜಿನ್‌

2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಪವರ್‌

204 ಪಿಎಸ್‌

ಟಾರ್ಕ್‌

320 ಎನ್‌ಎಮ್‌

ಟ್ರಾನ್ಸ್‌ಮಿಷನ್‌

7-ಸ್ಪೀಡ್‌ ಡಿಸಿಟಿ*

ಡ್ರೈವ್‌ಟ್ರೈನ್‌

ಆಲ್‌-ವೀಲ್‌-ಡ್ರೈವ್‌ (AWD)

*DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

ಕಲರ್‌ ಆಯ್ಕೆಗಳು

ಜರ್ಮನ್‌ನ ಈ ಕಾರು ತಯಾರಕ ಕಂಪನಿಯು ಟಿಗುವಾನ್ ಆರ್-ಲೈನ್ ಆರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ಬಹಿರಂಗಪಡಿಸಿದೆ, ಅವುಗಳು ಈ ಕೆಳಗಿನಂತಿವೆ:

  • ಓರಿಕ್ಸ್ ವೈಟ್ ಮದರ್ ಆಫ್ ಪರ್ಲ್ ಎಫೆಕ್ಟ್

  • ಆಯ್ಸ್‌ಟರ್‌ ಸಿಲ್ವರ್ ಮೆಟಾಲಿಕ್

  • ಪರ್ಸಿಮನ್ ರೆಡ್ ಮೆಟಾಲಿಕ್

  • ಸಿಪ್ರೆಷನೊ ಗ್ರೀನ್ ಮೆಟಾಲಿಕ್

  • ನೈಟ್‌ಶೇಡ್ ಬ್ಲೂ ಮೆಟಾಲಿಕ್

  • ಗ್ರೆನಡಿಲ್ಲಾ ಬ್ಲ್ಯಾಕ್ ಮೆಟಾಲಿಕ್

ಇದನ್ನೂ ಓದಿ: HSRP ಗಡುವನ್ನು ಜೂನ್ 30, 2025 ರವರೆಗೆ ವಿಸ್ತರಿಸಿದ ನಮ್ಮ ನೆರೆಯ ರಾಜ್ಯ

ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತೆ

ಅಂತರರಾಷ್ಟ್ರೀಯ-ಸ್ಪೆಕ್ ಟಿಗುವಾನ್ ಆರ್-ಲೈನ್ 12.9-ಇಂಚಿನ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ವೆಂಟಿಲೇಟೆಡ್‌ ಮತ್ತು ವಿದ್ಯುತ್ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಸಹ ಪಡೆಯುತ್ತದೆ. ಈ ಎಲ್ಲಾ ಫೀಚರ್‌ಗಳು ಭಾರತ-ಸ್ಪೆಕ್ ಮೊಡೆಲ್‌ನಲ್ಲೂ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸುರಕ್ಷತೆಯ ದೃಷ್ಟಿಯಿಂದ, ಇದು ಕನಿಷ್ಠ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಫಾರ್ವರ್ಡ್ ಡಿಕ್ಕಿ ಮಿಟಿಗೇಷನ್, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ಸಹ ಪಡೆಯಬಹುದು.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಟಿಗುವಾನ್ ಆರ್-ಲೈನ್ ಏಪ್ರಿಲ್ 14, 2025 ರಂದು ಬಿಡುಗಡೆಯಾಗಲಿದ್ದು, ಬೆಲೆಗಳು 55 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ರೆಗ್ಯುಲರ್‌ ಟಿಗುವಾನ್‌ನಂತೆ, ಇದು ಹುಂಡೈ ಟಕ್ಸನ್, ಜೀಪ್ ಕಂಪಾಸ್ ಮತ್ತು ಸಿಟ್ರೊಯೆನ್ C5 ಗಳಿಗೆ ಪೈಪೋಟಿ ನೀಡಲಿದೆ.

ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

Share via

Write your Comment on Volkswagen ಟಿಗುವಾನ್ 2025

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಫೇಸ್ ಲಿಫ್ಟ್
Rs.65.90 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.10 - 11.23 ಲಕ್ಷ*
ಹೊಸ ವೇರಿಯೆಂಟ್
Rs.18.99 - 32.41 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ