ಸೆಪ್ಟೆಂಬರ್ 4ರಂದು ರಸ್ತೆಗೆ ಇಳಿಯಲಿರುವ ವೋಲ್ವೊ C40 ರೀಚಾರ್ಜ್
C40 ರೀಚಾರ್ಜ್ ವಾಹನವು ಭಾರತದಲ್ಲಿ ವೋಲ್ವೊ ಸಂಸ್ಥೆಯ ಎರಡನೆಯ ಅಪ್ಪಟ ಎಲೆಕ್ಟ್ರಿಕ್ ಮಾದರಿಯಾಗಿದ್ದು, 530 km ತನಕದ ಶ್ರೇಣಿಯನ್ನು ಹೊಂದಿದೆ.
-
C40 ರೀಚಾರ್ಜ್ ಕಾರು XC40 ರೀಚಾರ್ಜ್ ನ SUV ಕೂಪ್ ಆವೃತ್ತಿಯಾಗಿದೆ.
-
ಇದು ಸುಧಾರಿತ 78kWh ಬ್ಯಾಟರಿ ಪ್ಯಾಕ್ ಅನ್ನು ಬಳಸಲಿದ್ದು, ಅತ್ಯಧಿಕ WLTP-ಕ್ಲೇಮು ಮಾಡಿರುವ 530km ಶ್ರೇಣಿಯನ್ನು ನೀಡಲಿದೆ.
-
ಇದು 4.7 ಸೆಕೆಂಡುಗಳಲ್ಲಿ 0 ಯಿಂದ 100kmph ತನಕ ವೇಗವನ್ನು ವರ್ಧಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, 408PS ಜೊತೆಗೆ ಡ್ಯುವಲ್ ಮೋಟರ್ AWDಯಿಂದಾಗಿ ಇದು ಸಾಧ್ಯವಾಗಿದೆ.
-
ಈ ವಾಹನದ ಒಳಗಡೆ 9 ಇಂಚಿನ ಟಚ್ ಸ್ಕ್ರೀನ್, ಚಾಲಕನ ಡಿಸ್ಪ್ಲೇ ಮತ್ತು ಪ್ಯಾನರೋಮಿಕ್ ಸನ್ ರೂಫ್ ಮುಂತಾದ ಸೌಲಭ್ಯಗಳು ಲಭ್ಯ.
-
ಇದು ಸುಮಾರು ರೂ. 60 ಲಕ್ಷಕ್ಕೆ (ಎಕ್ಸ್ - ಶೋರೂಂ) ಲಭ್ಯ.
ಜೂನ್ 2023 ರಲ್ಲಿ, ವೋಲ್ವೊ ಕಾರು ತಯಾರಕ ಸಂಸ್ಥೆಯು ಭಾರತದಲ್ಲಿ C40 ರೀಚಾರ್ಜ್ ವಾಹನವನ್ನು ಅನಾವರಣಗೊಳಿಸಿತು. ಇದು XC40 ರೀಚಾರ್ಜ್ ನ SUV ಕೂಪ್ ಆವೃತ್ತಿಯಾಗಿದೆ. ಇದು ಈ ಸ್ವೀಡಿಶ್ ಕಾರು ತಯಾರಕ ಸಂಸ್ಥೆಯ ಎರಡನೇ ಅಪ್ಪಟ ಎಲೆಕ್ಟ್ರಿಕ್ ಮಾದರಿಯಾಗಿದ್ದು, XC40 ರೀಚಾರ್ಜ್ ನಂತೆಯೇ ಕಾಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್ (CMA) ಆಧರಿಸಿ ತಯಾರಾಗಿದೆ.
C40 ರೀಚಾರ್ಜ್ ಕಾರಿನ ಬೆಲೆಯನ್ನು ಸೆಪ್ಟೆಂಬರ್ 4 ರಂದು ಘೋಷಿಸಲಾಗುವುದು. ಅಲ್ಲದೆ ವೋಲ್ವೊ ಸಂಸ್ಥೆಯು ಸೆಪ್ಟೆಂಬರ್ 5 ರಿಂದಲೇ ಆರ್ಡರ್ ತೆಗೆದುಕೊಳ್ಳಲು ಪ್ರಾರಂಭಿಸಲಿದೆ. ಅದೇ ತಿಂಗಳಿನಲ್ಲಿ ವಾಹನಗಳು ಗ್ರಾಹಕರ ಕೈ ಸೇರಲಿವೆ. ಈ ಕಾರು ಏನೆಲ್ಲ ಕೊಡುಗೆಗಳನ್ನು ಹೊತ್ತು ತರಲಿದೆ ಎಂಬುದನ್ನು ನೋಡೋಣ.
ಆಕರ್ಷಕ ವಿನ್ಯಾಸ
C40 ರೀಚಾರ್ಜ್ ವಾಹನವು (ಮುಖ್ಯವಾಗಿ ಇದರ ಮುಂಭಾಗವು) ಸರಿಸುಮಾರು ಇದರ ದಾಯಾದಿ ಎನಿಸಿರುವ XC40 ರೀಚಾರ್ಜ್ ನಂತೆಯೇ ಕಾಣಿಸಿಕೊಳ್ಳುತ್ತದೆ. ಮುಚ್ಚಿದ ಗ್ರಿಲ್, ಥೋರ್ ನ ಹ್ಯಾಮರ್ ಶೈಲಿನ DRL ಗಳು ಮತ್ತು ಬಂಪರ್ ವಿನ್ಯಾಸ, ಮತ್ತು 19 ಇಂಚಿನ ಅಲೋಯ್ ವೀಲ್ ಗಳನ್ನು ಇದರ ಯಾಂತ್ರಿಕ ದಾಯಾದಿ ಎನಿಸಿರುವ XC40 ರೀಚಾರ್ಜ್ ನಿಂದ ಪಡೆಯಲಾಗಿದೆ.
ಆದರೆ ನೀವು ಈ ವಾಹನದತ್ತ ಇನ್ನಷ್ಟು ಗಹನವಾಗಿ ಕಣ್ಣು ಹಾಯಿಸಿದರೆ, C40 ಕಾರು ಇಳಿಜಾರಾದ ರೂಫ್ ಲೈನ್ ಅನ್ನು ಹೊಂದಿದ್ದು, XC40 ರೀಚಾರ್ಜ್ ಗೆ ಹೋಲಿಸಿದರೆ ಇದು ಕೂಪ್ ಶೈಲಿ ಮತ್ತು ನಯವಾದ ನೋಟವನ್ನು ನೀಡುತ್ತದೆ.
ಇದನ್ನು ಸಹ ಓದಿರಿ: 2023 ಮರ್ಸಿಡಿಸ್ ಬೆಂಜ್ GLC vs ಆಡಿ Q5, BMW X3, ವೋಲ್ವೊ XC60: ಬೆಲೆಗಳ ಹೋಲಿಕೆ
ಸಾಕಷ್ಟು ವೈಶಿಷ್ಟ್ಯಗಳಿಂದ ಕೂಡಿದ ಕ್ಯಾಬಿನ್
C40 ರೀಚಾರ್ಜ್ ಕಾರು, ಇದರ ಜೊತೆ ಬರುವ ಸಾಧನಗಳನ್ನು ಸೇರಿದಂತೆ, ಸಾಕಷ್ಟು ವಿಚಾರಗಳಲ್ಲಿ XC40 ರೀಚಾರ್ಜ್ ಜೊತೆಗೆ ಸಾಮ್ಯತೆಯನ್ನು ಹೊಂದಿದೆ. ಇದು 9 ಇಂಚಿನ ಲಂಬಾಂತರ ಟಚ್ ಸ್ಕ್ರೀನ್, 12.3 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ವಿದ್ಯುತ್ ಚಾಲಿತವಾಗಿ ಹೊಂದಿಸಬಹುದಾದ ಮುಂದಿನ ಸೀಟುಗಳು (ಹೀಟೆಡ್ ಮತ್ತು ಕೂಲಿಂಗ್ ಫಂಕ್ಷನ್ ಜೊತೆಗೆ), ಡ್ಯುವಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಪ್ಯಾನರೋಮಿಕ್ ಸನ್ ರೂಫ್ ಮತ್ತು ಪ್ರೀಮಿಯಂ ಹರ್ಮನ್ ಕಾರ್ದೊನ್ ಸೌಂಡ್ ಸಿಸ್ಟಂ ಅನ್ನು ಹೊಂದಿದೆ.
ಸುರಕ್ಷತೆಯ ಕುರಿತು ಗಮನ ಹರಿಸುವುದಾದರೆ, C40 ಕಾರು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಕೊಲಿಶನ್ ಅವಾಯ್ಡನ್ಸ್ ಮತ್ತು ಮಿಟಿಗೇಶನ್, ಲೇನ್ ಕೀಪಿಂಗ್ ಏಯ್ಡ್, ಪೋಸ್ಟ್ ಇಂಪ್ಯಾಕ್ಟ್ ಬ್ರೇಕಿಂಗ್, ಡ್ರೈವರ್ ಅಲರ್ಟ್ ಮತ್ತು ರನ್ ಆಫ್ ಮಿಟಿಗೇಶನ್ ಜೊತೆಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಗಳನ್ನು ಹೊಂದಿದೆ. ಅಲ್ಲದೆ ಇದು ಏಳು ಏರ್ ಬ್ಯಾಗುಗಳು, ಹಿಲ್ ಅಸಿಸ್ಟ್ ಫಂಕ್ಷನ್ ಮತ್ತು 360 ಡಿಗ್ರಿ ಕ್ಯಾಮರಾವನ್ನು ಹೊಂದಿದೆ.
ಅದೇ ಕಾರ್ಯಕ್ಷಮತೆ, ಹೆಚ್ಚು ಶ್ರೇಣಿ
ಹೌದು, ವೋಲ್ವೊ C40 ರೀಚಾರ್ಜ್ ವಾಹನವು, XC40 ರೀಚಾರ್ಜ್ ವಾಹನವು ಹೊಂದಿರುವ 78kWh ಬ್ಯಾಟರಿ ಪ್ಯಾಕ್ ಅನ್ನೇ ಬಳಸಲಿದೆ. ಆದರೆ ಇದು ಮಾತ್ರ ಭಿನ್ನವಾಗಿದೆ. ವೋಲ್ವೊ ಸಂಸ್ಥೆಯು ಹೊಸ ಸೆಲ್ ಪೂರೈಕೆದಾರರ ಕಾರಣ ಬ್ಯಾಟರಿ ಪ್ಯಾಕ್ ನ ಸುಧಾರಿತ ಇಂಧನ ದಕ್ಷತೆಯನ್ನು ಹೊಂದಿದೆ. C40 ವಾಹನದ ವಿನ್ಯಾಸವು ನಯವಾಗಿದ್ದು ಹೆಚ್ಚು ಏರೋಡೈನಾಮಿಕ್ ಆಗಿರುವುದರಿಂದ, 530 km ನಷ್ಟು ಅಧಿಕ ಶ್ರೇಣಿಯನ್ನು ಒದಗಿಸುತ್ತದೆ. ಇದು XC40 ರೀಚಾರ್ಜ್ ಗಿಂತ 112 km ನಷ್ಟು ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ.
ಇದರ ಡ್ಯುವಲ್ ಮೋಟರ್ ಸೆಟಪ್ ಮೂಲಕ ಇದು ಟಾರ್ಮಾಕ್ ನಲ್ಲಿ 408PS ಮತ್ತು 660Nm ಉಂಟು ಮಾಡಬಲ್ಲದು. ಅಲ್ಲದೆ 4.7 ಸೆಕೆಂಡುಗಳಲ್ಲಿ 0-100kmph ವೇಗವನ್ನು ಗಳಿಸಿಕೊಳ್ಳಬಲ್ಲದು. C40 ರೀಚಾರ್ಜ್ ವಾಹನವು 150kW DC ವೇಗದ ಚಾರ್ಜಿಂಗ್ ಅನ್ನು ಒದಗಿಸಲಿದ್ದು, ಬ್ಯಾಟರಿಯನ್ನು 27 ನಿಮಿಷಗಳಲ್ಲಿ 10 ರಿಂದ 80 ಶೇಕಡಾದ ತನಕ ಚಾರ್ಜ್ ಮಾಡಬಲ್ಲದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ವೋಲ್ವೊ ಸಂಸ್ಥೆಯು C40 ರೀಚಾರ್ಜ್ ವಾಹನದ ಬೆಲೆಯನ್ನು ಸುಮಾರು ರೂ. 60 ಲಕ್ಷಕ್ಕೆ (ಎಕ್ಸ್-ಶೋರೂಂ), ನಿಗದಿಪಡಿಸಲಿದ್ದು ಇದು XC40 ರೀಚಾರ್ಜ್ ಗಿಂತ ದುಬಾರಿ ಎನಿಸಲಿದೆ. ಇದು ಹ್ಯುಂಡೈ ಅಯಾನಿಕ್ 5, ಕಿಯಾ EV6, ಮತ್ತು BMW i4 ಇತ್ಯಾದಿಗಳೊಂದಿಗೆ ಸ್ಪರ್ಧಿಸಲಿದೆ.