Login or Register ಅತ್ಯುತ್ತಮ CarDekho experience ಗೆ
Login

ವಿಶ್ವ ಪರಿಸರ ದಿನಾಚರಣೆ ವಿಶೇಷ: ಪರಿಸರ ಸ್ನೇಹಿ ಕ್ಯಾಬಿನ್‌ನ 5 ಇಲೆಕ್ಟ್ರಿಕ್ ಕಾರುಗಳು

ಜೂನ್ 06, 2023 02:00 pm ರಂದು rohit ಮೂಲಕ ಪ್ರಕಟಿಸಲಾಗಿದೆ
34 Views

ಪಟ್ಟಿಯಲ್ಲಿರುವ ಎಲ್ಲಾ ಹೆಚ್ಚಿನ ಕಾರುಗಳ ಸೀಟುಗಳು ಲೆದರ್-ಮುಕ್ತ ವಸ್ತುಗಳನ್ನು ಪಡೆದರೆ, ಇನ್ನೂ ಕೆಲವು ಕ್ಯಾಬಿನ್ ಒಳಗೆ ಬಯೋ-ಪೇಂಟ್ ಕೋಟಿಂಗ್ ಅನ್ನೂ ಬಳಸುತ್ತವೆ

ವಿಶ್ವಾದ್ಯಂತ ಕಾರುತಯಾರಕರು ತಾವು ಸೇವೆ ಸಲ್ಲಿಸುವ ಮಾರುಕಟ್ಟೆಗಳನ್ನು ಅವಲಂಬಿಸಿ ವಿಭಿನ್ನ ಕಾರ್ಯತಂತ್ರಗಳನ್ನು ಹೊಂದಿದ್ದರೂ, ಅವರೆಲ್ಲರೂ ಒಂದೇ ಗುರಿಯನ್ನು ಹೊಂದಿದ್ದಾರೆ, ಯಾವುದೆಂದರೆ, ತಮ್ಮ ಕಾರುಗಳಲ್ಲಿ ಸಾಧ್ಯವಾದಷ್ಟು ನವೀಕರಿಸಬಲ್ಲ ಸಂಪನ್ಮೂಲಗಳು ಮತ್ತು ಸುಸ್ಥಿರ ವಸ್ತುಗಳನ್ನು ಬಳಸುವುದು. ಇವತ್ತಿನ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಕ್ಯಾಬಿನ್‌ನಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಪಡೆದಿರುವ 5 ಇಲೆಕ್ಟ್ರಿಕ್ ಕಾರುಗಳನ್ನು ನೋಡಲು ನಾವು ನಿರ್ಧರಿಸಿದ್ದೇವೆ.

5 ಹ್ಯುಂಡೈ ಅಯಾನಿಕ್ 5

ಭಾರತದಲ್ಲಿ ಹ್ಯುಂಡೈನ ಚೊಚ್ಚಲ EV, ಅಯಾನಿಕ್ 5, ಬಯೋ ಪೇಂಟ್ ಮತ್ತು ಪರಿಸರ ಸ್ನೇಹಿ ಲೆದರ್ ಮತ್ತು ಫ್ಯಾಬ್ರಿಕ್ ಒಳಗೊಂಡಂತೆ ಅನೇಕ ಸುಸ್ಥಿರ ವಸ್ತುಗಳನ್ನು ಪಡೆದಿದೆ. ಈ ಕಾರುತಯಾರಕರು ಅಯಾನಿಕ್ 5ನ ಡ್ಯಾಶ್‌ಬೋರ್ಡ್, ಸ್ಟೀರಿಂಗ್ ವ್ಹೀಲ್‌, ಸ್ವಿಚ್‌ಗಳು, ಡೋರ್‌ಪ್ಯಾಡ್‌ಗಳು ಮತ್ತು ಡ್ಯಾಶ್‌ಬೋರ್ಡ್‌ ಮೇಲೆ ಬಯೋ ಪೇಂಟ್ ಕೋಟಿಂಗ್ ಅನ್ನು ಬಳಸಿದೆ. ಈ ಬಯೋಪೇಂಟ್, ಸಸ್ಯ ಮತ್ತು ಜೋಳದ ತೈಲ ಸಾರವನ್ನು ಒಳಗೊಂಡಿವೆ. ಇದರ ಪರಿಸರ ಸ್ನೇಹಿ ಲೆದರ್ ಮತ್ತು ಫ್ಯಾಬ್ರಿಕ್ ಅನ್ನು ಕಬ್ಬು, ಜೋಳ ಮತ್ತು 32 ರ ತನಕದ ಪ್ಲಾಸ್ಟಿಕ್ ಬಾಟಲಿಗಳಿಂದ ಮಾಡಲಾಗಿದ್ದು, ಇದನ್ನು ಸೀಟುಗಳು, ಕಾರ್ಪೆಟ್ ಮತ್ತು ಆರ್ಮ್‌ರೆಸ್ಟ್‌ಗಳಿಗೆ ಬಳಸಲಾಗಿದೆ.

ಕಿಯಾ EV6

ಅಯಾನಿಕ್ 5 ನಂತೆಯೇ ಇರುವ ಕಿಯಾ EV6 ಕೂಡಾ ಅನೇಕ ಮರುಬಳಕೆ ಮಾಡಿದ ಮತ್ತು ಸುಸ್ಥಿರ ವಸ್ತುಗಳೊಂದಿಗೆ ಬರುತ್ತದೆ. ಈ ಕಾರುತಯಾರಕರು ವಿವಿಧ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದ್ದು, ಇದು ಅಣಬೆಯಿಂದ ಪಡೆದ ವಸ್ತುಗಳು, ಬಯೋ ಪೇಂಟ್, ವೀಗನ್ ಲೆದರ್ ಮತ್ತು ಮರುಬಳಕೆ ಮಾಡಿದ ಬಾಟಲಿಗಳನ್ನು ಒಳಗೊಂಡಿದ್ದು, ಇದನ್ನು ಅಪ್‌ಹೋಲ್ಸ್‌ಟ್ರಿ, ಡೋರ್‌ಪ್ಯಾಡ್‌ಗಳು ಮತ್ತು ಡ್ಯಾಶ್‌ಬೋರ್ಡ್ ಹಾಗೂ ಫ್ಲೋರ್‌ಮ್ಯಾಟ್‌ಗಳ ಮೇಲಿನ ಫ್ಯಾಬ್ರಿಕ್ ವಸ್ತುಗಳಿಗೆ ಬಳಸಲಾಗುತ್ತದೆ. ಅಲ್ಲದೇ ತನ್ನ ಮುಂಬರುವ ಕಾರುಗಳ ಶ್ರೇಣಿಗಳಲ್ಲಿ ಸಾಗರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕೂಡಾ ಬಳಸಲು ಇವರು ಯೋಜಿಸಿದ್ದಾರೆ.

ಇದನ್ನೂ ಓದಿ: ಎಐ ಪ್ರಕಾರ ಭಾರತದಲ್ಲಿ ರೂ 20 ಲಕ್ಷದ ಕೆಳಗಿನ ಟಾಪ್ 3 ಫ್ಯಾಮಿಲಿ ಕಾರುಗಳು SUVಗಳು ಯಾವುವು

ವೋಲ್ವೋ XC40 ರಿಚಾರ್ಜ್

XC40 ರಿಚಾರ್ಜ್, ಭಾರತದಲ್ಲಿ ವೋಲ್ವೋದ ಮೊತ್ತಮೊದಲ ಇಲೆಕ್ಟ್ರಿಕ್ ಕಾರು ಆಗಿದ್ದು, ಇದು ಕೂಡಾ ವಿಶೇಷವಾಗಿ ಒಳಗೆ ಅನೇಕ ಮರುಬಳಕೆ ಮಾಡಿದ ಭಾಗಗಳೊಂದಿಗೆ ಬರುತ್ತದೆ. ಇದು ಲೆದರ್-ಮುಕ್ತ ಇಂಟೀರಿಯರ್ ಮತ್ತು ಭಾಗಶಃ ಮರುಬಳಕೆ ಮಾಡಿದ ಕಾರ್ಪೆಟ್‌ಗಳನ್ನು ಹೊಂದಿದೆ. ವೋಲ್ವೋ ಇದಕ್ಕೆ ಡಾರ್ಕ್ ಗ್ರೇ ಕ್ಯಾಬಿನ್ ಅನ್ನು ನೀಡಿದ್ದು, ಕಾರ್ಪೆಟ್‌ಗಳು “ಫ್ಯೋಝ್ ಬ್ಲೂ” ಫಿನಿಶ್‌ನಲ್ಲಿ ಬರುತ್ತದೆ.

ಸ್ಕೋಡಾ ಎನ್ಯಾಕ್ iV

ಸ್ಕೋಡಾ ತನ್ನ ಚೊಚ್ಚಲ EV, ಎನ್ಯಾಕ್ iV ಅನ್ನು ಶೀಘ್ರದಲ್ಲೇ ಭಾರತಕ್ಕೆ ತರಲಿದೆ. ಈ ಇಲೆಕ್ಟ್ರಿಕ್ SUV ಕಾರುತಯಾರಕರ ಇಂದಿನತನಕ ಮರುಬಳಕೆ ಮಾಡಲಾದ ಕಾರು ಎಂದು ಹೇಳಲಾಗುತ್ತದೆ. ಇದು ಸೌಂಡ್ ಇನ್ಸುಲೇಶನ್‌ಗೆ ಮರುಬಳಕೆ ಮಾಡಲಾದ ಟೆಕ್ಸ್‌ಟೈಲ್‌ಗಳು ಮತ್ತು ಫ್ಲೋರ್ ಮ್ಯಾಟ್‌ಗಳು ಮತ್ತು ಬೂಟ್‌ ಮ್ಯಾಟ್‌ಗಳಿಗೆ ಮರುರಚಿಸಿದ ಪಾಲಿಇಥೈಲಿನ್ ಟೆರಿಫ್ತಾಲೇಟ್ (PET) ಬಾಟಲ್ ಫೈಬರ್‌ಗಳನ್ನು ಒಳಗೊಂಡಂತೆ ಕ್ಯಾಬಿನ್ ಒಳಗೆ ವಿವಿಧ ಉದ್ದೇಶಗಳಿಗಾಗಿ ಸುಸ್ಥಿರ ವಸ್ತುಗಳನ್ನು ಬಳಸುತ್ತದೆ. ಇದರ ಸೀಟುಗಳನ್ನು PET ಬಾಟಲಿಗಳು ಮತ್ತು ಉಣ್ಣೆಯಿಂದ ಮಾಡಿದ್ದರೆ ಒಳಗಿನ ಲೆದರ್ ಅನ್ನು ಆಲಿವ್ ಎಲೆಯ ಸಾರ ಬಳಸಿ ಹದಗೊಳಿಸಲಾಗುತ್ತದೆ.

ಮರ್ಸಿಡಿಸ್-ಬೆನ್ಝ್ EQS

ಭಾರತದಲ್ಲಿ, ಮುಂಚೂಣಿಯಲ್ಲಿ ಮಾರಾಟದಲ್ಲಿರುವ ಇಲೆಕ್ಟ್ರಿಕ್ ಸೆಡಾನ್‌ಗಳಲ್ಲಿ ಮರ್ಸಿಡಿಸ್-ಬೆನ್ಝ್ EQS ಕೂಡಾ ಒಂದು. ಜರ್ಮನ್ ಮಾರ್ಕ್‌ನ ಈ ಆಗ್ರಸ್ಥಾನದಲ್ಲಿರುವ EV ಅನೇಕ ಸುಸ್ಥಿರ ವಸ್ತುಗಳು ಮತ್ತು ಭಾಗಗಳನ್ನು ಒಳಗೊಂಡಿದೆ. ಈ ಇಲೆಕ್ಟ್ರಿಕ್ ಸೆಡಾನ್ ಅನ್ನು ಆಹಾರ ತ್ಯಾಜ್ಯಗಳು, ಪ್ಲಾಸ್ಟಿಕ್ ಮಿಶ್ರಣಗಳು, ಕಾರ್ಡ್‌ಬೋರ್ಡ್ ಅಲ್ಲದೇ ಮಕ್ಕಳ ಡಯಾಪರ್‌ಗಳನ್ನೂ ಒಳಗೊಂಡ ಗೃಹತ್ಯಾಜ್ಯ ಮಿಶ್ರಣದಿಂದ ಪಡೆದ ವಸ್ತುಗಳಿಂದ ತಯಾರಿಸಲಾಗಿದೆ. ಅಲ್ಲದೇ ಇದು ಫ್ಲೋರ್ ಕವರಿಂಗ್‌ಗಾಗಿ ಮರುಬಳಕೆ ಮಾಡಿದ ಕಾರ್ಪೆಟ್‌ಗಳು ಮತ್ತು ಮೀನುಗಾರಿಕಾ ಬಲೆಯಿಂದ ಪಡೆದ ನೈಲನ್ ನೂಲುಗಳನ್ನು ಕೂಡಾ ಬಳಸುತ್ತದೆ.

ಇದನ್ನೂ ಓದಿ: ದೊಡ್ಡದಾದಷ್ಟು ಉತ್ತಮವೇ? ಈ 10 ಕಾರುಗಳು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಡಿಸ್‌ಪ್ಲೇಗಳನ್ನು ಪಡೆದಿವೆ

ಸುಸ್ಥಿರ ವಸ್ತುಗಳನ್ನು ಹೊಂದಿದ ಕಾರುಗಳಿಗೆ ಇವುಗಳು ಕೆಲವು ಉದಾಹರಣೆಯಾದರೆ, ಮೇಲೆ ಹೇಳಲಾದ ಕಾರುತಯಾರಕರ ಹೊರತಾಗಿ ಸುಸ್ಥಿರ ಉತ್ಪಾದನಾ ಅಭ್ಯಾಸಗಳನ್ನು ಅನುಸರಿಸಿ ಜಗತ್ತಿನಾದ್ಯಂತ ತಮ್ಮ ತಯಾರಿಕಾ ಸೌಲಭ್ಯಗಳಲ್ಲಿ ಮರುನವೀಕರಿಸುವ ಶಕ್ತಿಯ ಮೂಲವನ್ನು ಅನ್ವೇಷಿಸುವ ಇನ್ನೂ ಅನೇಕ ಕಾರುತಯಾರಕರು ಇದ್ದಾರೆ. ಜಗತ್ತಿನಾದ್ಯಂತ ಎಲ್ಲಾ ಕಾರುತಯಾರಕರ ಸಂಯೋಜಿತ ಪರಿಶ್ರಮವು ನಮ್ಮ ಭೂಮಿಯ ಮೇಲಿನ ಇಂಗಾಲದ ಹೊರೆಯನ್ನು ಕಡಿಮೆಗೊಳಿಸುವಲ್ಲಿ ಖಂಡಿತ ಸಹಕಾರಿಯಾಗಲಿದೆ.

ಇನ್ನಷ್ಟು ಓದಿ : ಹ್ಯುಂಡೈ IONIQ 5 ಆಟೋಮ್ಯಾಟಿಕ್

Share via

Write your Comment on Hyundai ಅಯಾನಿಕ್ 5

explore similar ಕಾರುಗಳು

ಕಿಯಾ ಇವಿ6

51 ವಿಮರ್ಶೆಈ ಕಾರಿಗೆ ಅಂಕಗಳನ್ನು ನೀಡಿ
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ