• English
  • Login / Register

ಇವು ಭಾರತದಲ್ಲಿ 20 ಲಕ್ಷ ರೂ. ನ ಕೆಳಗಿನ ಟಾಪ್ 3 ಫ್ಯಾಮಿಲಿ SUVಗಳು

ಹುಂಡೈ ಕ್ರೆಟಾ 2020-2024 ಗಾಗಿ rohit ಮೂಲಕ ಜೂನ್ 05, 2023 02:00 pm ರಂದು ಪ್ರಕಟಿಸಲಾಗಿದೆ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಾರು-ಖರೀದಿಸುವ ಸಲಹೆಯಲ್ಲಿ ಪರಿಣಿತರಾಗಿ, ಅತ್ಯಂತ ಜನಪ್ರಿಯ ಕಾರಿನ ಕುರಿತ ಪ್ರಶ್ನೆಗಳಲ್ಲಿ ಒಂದನ್ನು ಪ್ರಯತ್ನಿಸಲು ಮತ್ತು ಉತ್ತರಿಸಲು ನಾವು ಟಾಪ್ ಮೂರು ಎಐ ಟೂಲ್‌ಗಳನ್ನು ಪರೀಕ್ಷಿಸುತ್ತೇವೆ.

Best family SUVs under Rs 20 lakh as per A.I.

ರೂ 20 ಲಕ್ಷದ ಕೆಳಗಿನ ಫ್ಯಾಮಿಲಿ SUVಯನ್ನು ಆಯ್ಕೆ ಮಾಡಲು ನೀವು ಇಂದು ಮಾರುಕಟ್ಟೆಯಲ್ಲಿದ್ದರೆ, ಸಬ್‌ಕಾಂಪ್ಯಾಕ್ಟ್‌ನಿಂದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ SUVಗಳ ತನಕ ಆಯ್ಕೆ ಮಾಡಲು ಹಲವಾರು ಮಾಡೆಲ್‌ಗಳಿವೆ. ಹೊಸದಾಗಿ ತಯಾರಿಸಲಾದ ಕೃತಕ ಬುದ್ಧಿಮತ್ತೆ (ಎಐ) ಟೂಲ್‌ಗಳ ಹೆಚ್ಚುತ್ತಿರುವ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಕಾರು ಖರೀದಿಸುವ ನಿರ್ಧಾರಕ್ಕೆ ನೆರವಾಗಲು ಚಾಟ್‌ಜಿಪಿಟಿ, ಗೂಗಲ್ ಬಾರ್ಡ್ ಮತ್ತು ಮೈಕ್ರೋಸಾಫ್ಟ್ ಬಿಂಗ್‌ನಿಂದ ಮಾಹಿತಿ ಪಡೆಯಲು ನಾವು ಯೋಚಿಸಿದ್ದೇವೆ.

 ವಿಷಯಗಳನ್ನು ಸ್ಥಿರವಾಗಿರಿಸಲು ನಾವು ಮೂರು ಎಐ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಒಂದೇ ವಿಷಯವನ್ನು ಕೇಳಿದೆವು. ಅವುಗಳಿಂದ ದೊರೆತ ವಿವರ ಇಲ್ಲಿದೆ: 

 Prompt: ನಮಸ್ತೆ ಚಾಟ್‌ಜಿಪಿಟಿ/ಬಾರ್ಡ್/ಬಿಂಗ್, ಭಾರತದಲ್ಲಿ ರೂ 20 ಲಕ್ಷದ ಕೆಳಗಿನ 3 ಅತ್ಯುತ್ತಮ ಫ್ಯಾಮಿಲಿ SUVಗಳು ಯಾವುವು ಎಂಬುವುದನ್ನು ದಯವಿಟ್ಟು ನನಗೆ ತಿಳಿಸು

ಚಾಟ್‌ಜಿಪಿಟಿ: ನಿಸ್ಸಂಶಯವಾಗಿ! ಭಾರತದಲ್ಲಿ ರೂ 20 ಲಕ್ಷದ ಕೆಳಗಿನ ಟಾಪ್ 3 ಅತ್ಯುತ್ತಮ ಫ್ಯಾಮಿಲಿ SUVಗಳ ವಿವರ ಇಲ್ಲಿದೆ:

Kia Seltos

  •  ಬೆಲೆಯಿಂದಾಗಿ ಕಿಯಾ ಸೆಲ್ಟೋಸ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳ ಆಯ್ಕೆಯನ್ನು ನೀಡುತ್ತದೆ. ಈ ಸೆಲ್ಟೋಸ್ ಆರಾಮದಾಯಕ ಮತ್ತು ವಿಶಾಲವಾದ ಕ್ಯಾಬಿನ್, ಸುಧಾರಿತ ಸುರಕ್ಷತಾ ಫೀಚರ್‌ಗಳು ಮತ್ತು ಸರಾಗ ರೈಡ್ ಗುಣಮಟ್ಟವನ್ನು ನೀಡುತ್ತದೆ. 

  •  ಹ್ಯುಂಡೈ ಕ್ರೆಟಾ: ಈ ಹ್ಯುಂಡೈ ಕ್ರೆಟಾ ಫ್ಯಾಮಿಲಿ SUV ವಿಭಾಗದಲ್ಲಿ ಅಗ್ರ ಸ್ಪರ್ಧಿಯಾಗಿದೆ.ಇದು ಆಧುನಿಕ ಡಿಸೈನ್, ಉತ್ತಮವಾಗಿ ರಚಿಸಿದ ಇಂಟೀರಿಯರ್, ಮತ್ತು ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೇ ಟರ್ಬೋಚಾರ್ಚ್ ಪೆಟ್ರೋಲ್ ವೇರಿಯೆಂಟ್ ಅನ್ನೂ ಒಳಗೊಂಡು ಇಂಜಿನ್ ಆಯ್ಕೆಗಳ ಶ್ರೇಣಿಯನ್ನು ಹೊಂದಿದೆ. ಈ ಕ್ರೆಟಾ ಆರಾಮದಾಯಕ ರೈಡ್, ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ, ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್‌ ಸಿಸ್ಟಮ್, ಸಂಪರ್ಕಿತ ಕಾರ್ ತಂತ್ರಜ್ಞಾನ ಮತ್ತು ಸುಧಾರಿತ ಸುರಕ್ಷತಾ ಫೀಚರ್‌ಗಳನ್ನು ನೀಡುತ್ತದೆ.

Tata Harrier

  •  ಟಾಟಾ ಹ್ಯಾರಿಯರ್: ತನ್ನ ದೃಢವಾದ ಮತ್ತು ಭವ್ಯ ಡಿಸೈನ್‌ನೊಂದಿಗೆ ಟಾಟಾ ಹ್ಯಾರಿಯರ್ ಆಕರ್ಷಕವಾಗಿ ಎದ್ದು ಕಾಣುತ್ತದೆ. ಈ ಹ್ಯಾರಿಯರ್ ಶಕ್ತಿಶಾಲಿ ಡೀಸೆಲ್ ಇಂಜಿನ್ ಅನ್ನು ಪಡೆದಿದ್ದು  ವಿವಿಧ ಭೂಪ್ರದೇಶಗಳಲ್ಲಿ ಆರಾಮದಾಯಕ ರೈಡ್ ನೀಡುತ್ತದೆ. ಅಲ್ಲದೇ ಅನೇಕ ಏರ್‌ಬ್ಯಾಗ್‌ಗಳು, ABS, EBD, ಮತ್ತ ಸ್ಟೆಬಿಲಿಟಿ ಕ್ರಂಟ್ರೋಲ್‌ ಮುಂತಾದ ಸುರಕ್ಷತಾ ಫೀಚರ್‌ಗಳನ್ನು ಪಡೆದಿದೆ.

 ಈ SUVಗಳು ಸ್ಟೈಲ್, ಫೀಚರ್‌ಗಳು, ಕಾರ್ಯಕ್ಷಮತೆ ಮತ್ತು ಹಣದ ಮೌಲ್ಯಕ್ಕೆ ಉತ್ತಮ ಸಮತೋಲನವನ್ನು ನೀಡುತ್ತದೆ. ಆದಾಗ್ಯೂ, ಕೊನೆಯ ನಿರ್ಧಾರಕ್ಕೂ ಮುನ್ನ ನಿಮ್ಮ ನಿರ್ದಿಷ್ಟ ಅವಶ್ಯಕತೆಗಳಾದ ಆಸನ ಸಾಮರ್ಥ್ಯ, ಇಂಧನ ದಕ್ಷತೆ ಮತ್ತು ಹೆಚ್ಚುವರಿ ಫೀಚರ್‌ಗಳನ್ನು ಪರಿಗಣಿಸುವುದು ಸೂಕ್ತ.

 ಗಮನಿಸಿ:- ಚಾಟ್‌ಜಿಪಿಟಿಯ ಡೇಟಾ 2021ರ ತನಕ ಮಾತ್ರ ಸೀಮಿತವಾಗಿದೆ, ಆದ್ದರಿಂದ ನಂತರದಲ್ಲಿ ಬಿಡುಗಡೆ ಮಾಡಲಾದ ಕಾರುಗಳನ್ನು ದುರದೃಷ್ಟವಶಾತ್ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ, ಇದರಿಂದ ಪಲಿತಾಂಶದ ದಕ್ಷತೆಯನ್ನು ಸೀಮಿತಗೊಳಿಸುತ್ತದೆ

 ಇದನ್ನೂ ಓದಿ:  ಇತ್ತೀಚಿನ ವರ್ಷಗಳಲ್ಲಿ CNG ತಂತ್ರಜ್ಞಾನ ಮತ್ತು ಕಾರುಗಳ ವಿಕಾಸ

 

ಬಾರ್ಡ್: ಖಂಡಿತ, ಭಾರತದಲ್ಲಿ ರೂ 20 ಲಕ್ಷದ ಕೆಳಗಿನ ಟಾಪ್ 3 ಅತ್ಯುತ್ತಮ ಫ್ಯಾಮಿಲಿ SUVಗಳ ವಿವರ ಇಲ್ಲಿದೆ:

Mahindra XUV700

  •   ಮಹೀಂದ್ರಾ XUV700: ಮಹೀಂದ್ರಾ XUV700 ಈ ವಿಭಾಗದಲ್ಲಿ ಅತ್ಯುತ್ತಮ ಆಲ್‌ರೌಂಡರ್. ಇದು ವಿಶಾಲವಾದ ಮತ್ತು ಆರಾಮದಾಯಕ ಕ್ಯಾಬಿನ್, ಶಕ್ತಿಶಾಲಿ ಇಂಜಿನ್, ಮತ್ತು ಫೀಚರ್‌ಗಳ ಉದ್ದನೆಯ ಪಟ್ಟಿಯನ್ನೇ ಹೊಂದಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎರಡು ವೇರಿಯೆಂಟ್‌ಗಳಲ್ಲೂ ಲಭ್ಯವಿದೆ ಮತ್ತು ಬೆಲೆಗಳು ರೂ 14.01 ಲಕ್ಷದಿಂದ ಪ್ರಾರಂಭವಾಗುತ್ತವೆ.
  •  ಕಿಯಾ ಸೆಲ್ಟೋಸ್: ಸ್ಟೈಲಿಶ್ ಮತ್ತು ಫೀಚರ್‌ಭರಿತ SUVಯನ್ನು ಹುಡುಕುವವರಿಗಾಗಿ ಕಿಯಾ ಸೆಲ್ಟೋಸ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಹೆಚ್ಚು ಆರಾಮದಾಯಕ ಕ್ಯಾಬಿನ್, ಶಕ್ತಿಶಾಲಿ ಇಂಜಿನ್ ಮತ್ತು ಫೀಚರ್‌ಗಳ ಉದ್ದ ಪಟ್ಟಿಯನ್ನು ಹೊಂದಿದೆ. ಬೆಲೆಗಳು ರೂ 10.49 ಲಕ್ಷದಿಂದ ಪ್ರಾರಂಭವಾಗುತ್ತದೆ.
  •  ಹ್ಯುಂಡೈ ಕ್ರೆಟಾ: ಫ್ಯಾಮಿಲಿಗಳಿಗೆ ಹ್ಯುಂಡೈ ಕ್ರೆಟಾ ಜನಪ್ರಿಯ ಆಯ್ಕೆಯಾಗಿದೆ.ಇದು ಉತ್ತಮವಾಗಿ ಸುಸಜ್ಜಿತಗೊಂಡು, ಇಂಧನ ದಕ್ಷತೆಯನ್ನು ಹೊಂದಿದೆ ಮತ್ತು ಸ್ಟೈಲಿಶ್ ಡಿಸೈನ್ ಹೊಂದಿದೆ. ಬೆಲೆ ರೂ 10.87 ಲಕ್ಷದಿಂದ ಪ್ರಾರಂಭವಾಗಲಿದೆ.
  •  ಇವುಗಳು ಭಾರತದಲ್ಲಿ ಲಭ್ಯವಿರುವ ರೂ 20 ಲಕ್ಷದ ಕೆಳಗಿನ ಅತ್ಯುತ್ತಮ ಫ್ಯಾಮಿಲಿ SUVಗಳಲ್ಲಿ ಕೇವಲ ಕೆಲವು ಆಗಿವೆ. SUV ಅನ್ನು ಆಯ್ಕೆ ಮಾಡುವಾಗ, ನಿಮ್ಮ ಅಗತ್ಯಗಳು ಮತ್ತು ಬಜೆಟ್ ಅನ್ನು ಪರಿಗಣಿಸುವುದು ಮುಖ್ಯ. ನಿಮಗೆ ಎಷ್ಟು ಜನರು ಕುಳಿತುಕೊಳ್ಳಬಹುದಾದ ಆಸನ ಬೇಕಾಗಿದೆ, ನಿಮಗೆ ಎಷ್ಟು ಸರಕು ಸ್ಥಳದ ಅಗತ್ಯವಿದೆ ಮತ್ತು ನಿಮಗೆ ಯಾವ ಫೀಚರ್‌ಗಳು ಮುಖ್ಯ ಎಂಬುದನ್ನು ಪರಿಣಿಸಿ.

ಬಿಂಗ್: CarDekho.com ಪ್ರಕಾರ, ಇವುಗಳು ಭಾರತದ 20 ಲಕ್ಷದ ಕೆಳಗಿನ ಟಾಪ್ SUV ಕಾರುಗಳು:

Mahindra Thar

  •  Mahindra XUV700 (Rs 14.01 - 26.18 Lakh) ಮಹೀಂದ್ರಾ XUV700 (ರೂ 14.01 - 26.18 ಲಕ್ಷ)

Hyundai Creta

  • Hyundai Creta (Rs 10.87 - 19.20 Lakh) ಹ್ಯುಂಡೈ ಕ್ರೆಟಾ (ರೂ 10.87 - 19.20 ಲಕ್ಷ)

ಇದು ನಿಮಗೆ ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ನೆರವಾಗುತ್ತದೆ ಎಂದು ನಾನು ಭಾವಿಸುತ್ತೇನೆ.

ಮೇಲೆ ಕೊಟ್ಟಿರುವ ಫಲಿತಾಂಶಗಳ ಪ್ರಕಾರ, ಕೇವಲ ಹೆಸರುಗಳು ಮತ್ತು ಅವುಗಳ ಬೆಲೆಗಳ ಪಟ್ಟಿಯನ್ನು ನೀಡುವ ಬಿಂಗ್‌ಗೆ ಹೋಲಿಸಿದರೆ, ಮಾಡೆಲ್‌ಗಳನ್ನು ಆಯ್ಕೆ ಮಾಡುವಲ್ಲಿ ಚಾಟ್‌ಜಿಪಿಟಿ ಬಲವಾದ ತಾರ್ಕಿಕತೆ ನೀಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಪ್ರತಿ ಎಐ ಟೂಲ್‌ನ ಫಲಿತಾಂಶದ ಟಾಪ್ ಮೂರರಲ್ಲಿ ಕ್ರೆಟಾ ಮೊದಲಿಗನಾಗಿದೆ ಮತ್ತು ಅನೇಕ ವರ್ಷಗಳ ಇದರ ಜನಪ್ರಿಯತೆಯಿಂದಾಗಿ ಇದು ಆಶ್ಚರ್ಯವೇನಲ್ಲ. ಬಿಂಗ್ ನಮ್ಮ ವೆಬ್‌ಸೈಟ್‌ನಿಂದ ತನ್ನ ಫಲಿತಾಂಶಗಳನ್ನು ಆಯ್ಕೆ ಮಾಡಿದ್ದು ಅದರ ಆಯ್ಕೆಯ ಮಾನದಂಡಗಳನ್ನು ನಾವು ಅಂಗೀಕರಿಸುವುದಿಲ್ಲ ಹಾಗೂ ನಮ್ಮ ತಜ್ಞರ ವಿಮರ್ಶೆಗಳು ನಿಮಗೆ ಅತ್ಯುತ್ತಮ ಆಯ್ಕೆಗಳನ್ನು ನೀಡುತ್ತವೆ.

CD ಅಭಿಮತ: ಮೂರು ಪ್ಲಾಟ್‌ಫಾರ್ಮ್‌ಗಳ ಹೆಚ್ಚಿನ ಶಿಫಾರಸುಗಳನ್ನು ನಾವು ಒಪ್ಪುತ್ತೇವೆ, ಅದು ಹ್ಯುಂಡೈ ಕ್ರೆಟಾ ಆಗಿರಬಹುದು, ಟಾಟಾ ಹ್ಯಾರಿಯರ್ ಆಗಿರಬಹುದು ಅಥವಾ ಮಹೀಂದ್ರಾ XUV700 ಕೂಡಾ ಆಗಿರಬಹುದು, ಆದರೆ ಬಿಂಗ್‌ನ ಮೊದಲನೇ ಫಲಿತಾಂಶ (ಥಾರ್) ಅನ್ನು ಸರಿಯಾದ ಫ್ಯಾಮಿಲಿ SUV ಎಂಬುದನ್ನು ನಾವು ಒಪ್ಪುವುದಿಲ್ಲ. ಥಾರ್ ಲೈಫ್‌ಸ್ಟೈಲ್ ಆಫ್-ರೋಡರ್ ಆಗಿದ್ದು ಸೀಮಿತ ಬೂಟ್‌ಸ್ಪೇಸ್‌ನೊಂದಿಗೆ ನಾಲ್ಕು ಆಸನಗಳಿಗೆ ಮೀಸಲಾಗಿದೆ. ಇದು ಸಾಹಸಮಯ ಚಾಲನೆಗೆ ಹೆಚ್ಚು ಸೂಕ್ತವಾಗಿದ್ದು ನಿಮ್ಮ ಇಡೀ ಕುಟುಂಬವನ್ನು ಕರೆದೊಯ್ಯಲು ಬಯಸುವ ಸಾಧ್ಯತೆ ಕಡಿಮೆ.

ಎಲ್ಲಾ ಮೂರರಲ್ಲಿ ಕ್ರೆಟಾ ಸಾಮಾನ್ಯ ಆಯ್ಕೆಯಾಗಿರುವುದು ಕಾಣುತ್ತದೆ ಏಕೆಂದರೆ ಇದು ಟಾಪ್-ಮಾರಾಟವಾಗುವ SUVಗಳಲ್ಲಿ ಒಂದು, ತನ್ನ ಆರಾಮದಾಯಕತೆ, ಪ್ರೀಮಿಯಂ ಫೀಚರ್‌ಗಳು ಮತ್ತು ವಿವಿಧ ಪವರ್‌ಟ್ರೇನ್‌ಗಳಿಗೆ ಹೆಸರುವಾಸಿಯಾಗಿದೆ. ಇದೇವೇಳೆ, ಮಹೀಂದ್ರಾ XUV700 ಮತ್ತು ಕಿಯಾ ಸೆಲ್ಟೋಸ್ ಲೆಕ್ಕಾಚಾರಗಳ ನಡುವಿನ ಸಾಮಾನ್ಯ ಆಯ್ಕೆಗಳಾಗಿವೆ ಮಾತ್ರವಲ್ಲದೇ ಒಂದೇ ರೀತಿಯ ಕಾರಣಗಳಿಗೆ ಜನಪ್ರಿಯವಾಗಿವೆ. ಚಾಟ್GPT XUV700ಗೆ ಬದಲಾಗಿ ಟಾಟಾ ಹ್ಯಾರಿಯರ್ ಅನ್ನು ಮಧ್ಯಮ ಗಾತ್ರದ SUV ಆಯ್ಕೆ ಎಂದು ಸಲಹೆ ನೀಡಿದ ಏಕೈಕ ಪ್ಲಾಟ್‌ಫಾರ್ಮ್ ಆಗಿದ್ದು, ತನ್ನ ಸೀಮಿತ ಮಾಹಿತಿಯ ಚೌಕಟ್ಟು ಇದಕ್ಕೆ ಕಾರಣವಾಗಿರಬಹುದು.

ಇದನ್ನೂ ಓದಿ: ನಿಮ್ಮ ಆ್ಯಂಡ್ರಾಯ್ಡ್ ಫೋನ್ ಸದ್ಯದಲ್ಲೇ ಡ್ಯಾಶ್‌ಕ್ಯಾಮ್ ಆಗಿಯೂ ಕಾರ್ಯನಿರ್ವಹಿಸಲಿದೆ

ಇವುಗಳು ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿರುವ ಅತ್ಯುತ್ತಮ A.I. ಉಪಕರಣಗಳಾಗಿದ್ದರೂ ಅವುಗಳು ಇನ್ನೂ ಬೆಳವಣಿಗೆಯ ಹಂತದಲ್ಲಿವೆ ಮತ್ತು ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುವುದಕ್ಕಾಗಿ ಹೆಚ್ಚು ಸಂಕೀರ್ಣ ನವೀಕರಣಗಳನ್ನು ಖಂಡಿತವಾಗಿಯೂ ಸ್ವೀಕರಿಸಲಿವೆ. ಮೇಲೆ ಉಲ್ಲೇಖಿಸಲಾದ ಮಾಡೆಲ್‌ಗಳು ಇವತ್ತು ಮಾರಾಟದಲ್ಲಿರುವ ರೂ 20 ಲಕ್ಷದ (ಎಕ್ಸ್-ಶೋರೂಂ) ಕೆಳಗಿನ ಅತ್ಯುತ್ತಮ ಫ್ಯಾಮಿಲಿ SUVಗಳ ಸನಿಹದಲ್ಲಿದ್ದರೂ ನಿಮ್ಮ ಕುಟುಂಬಕ್ಕೆ ಅಗತ್ಯವಿರುವ ಪರಿಪೂರ್ಣ ಕಾರು ನಿಮ್ಮ ನಿಖರವಾದ ಅವಶ್ಯಕತೆಗಳು, ಬಜೆಟ್ ಮತ್ತು ಕಾರುಗಳ ಪವರ್‌ಟ್ರೇನ್‌ಗಳನ್ನು ಆಧರಿಸಿ ವ್ಯತ್ಯಾಸವಾಗಬಹುದು. ಅದೃಷ್ಟವಶಾತ್, ನಿಮಗೆ ಸೂಕ್ತ ಕಾರನ್ನು ಗುರುತಿಸುವಲ್ಲಿ ನೆರವಾಗಲು ಅಗತ್ಯವಿರುವ ವಿಶೇಷ ಪರಿಣಿತಿಗಾಗಿ ನಾವು ಇಲ್ಲಿ ಇದ್ದೇವೆ.

ಇನ್ನಷ್ಟು ಓದಿ : ಹ್ಯುಂಡೈ ಕ್ರೆಟಾದ ಆನ್‌ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಕ್ರೆಟಾ 2020-2024

1 ಕಾಮೆಂಟ್
1
S
sumeet v shah
Jun 2, 2023, 9:09:16 PM

You have cover nicely.

Read More...
    ಪ್ರತ್ಯುತ್ತರ
    Write a Reply
    Read Full News

    explore similar ಕಾರುಗಳು

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience