ಮಾರುತಿ ಇನ್ವಿಕ್ಟೊ ಮುಂಭಾಗ left side imageಮಾರುತಿ ಇನ್ವಿಕ್ಟೊ ಹಿಂಭಾಗ left ನೋಡಿ image
  • + 5ಬಣ್ಣಗಳು
  • + 42ಚಿತ್ರಗಳು
  • shorts
  • ವೀಡಿಯೋಸ್

ಮಾರುತಿ ಇನ್ವಿಕ್ಟೋ

4.492 ವಿರ್ಮಶೆಗಳುrate & win ₹1000
Rs.25.51 - 29.22 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ನೋಡಿ ಏಪ್ರಿಲ್ offer

ಮಾರುತಿ ಇನ್ವಿಕ್ಟೊ ನ ಪ್ರಮುಖ ಸ್ಪೆಕ್ಸ್

ಇಂಜಿನ್1987 ಸಿಸಿ
ಪವರ್150.19 ಬಿಹೆಚ್ ಪಿ
ಟಾರ್ಕ್‌188 Nm
ಆಸನ ಸಾಮರ್ಥ್ಯ7, 8
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಫ್ಯುಯೆಲ್ಪೆಟ್ರೋಲ್
  • ಪ್ರಮುಖ ವಿಶೇಷಣಗಳು
  • ಪ್ರಮುಖ ಫೀಚರ್‌ಗಳು

ಇನ್ವಿಕ್ಟೊ ಇತ್ತೀಚಿನ ಅಪ್ಡೇಟ್

  • ಮಾರ್ಚ್ 06, 2025: ಮಾರ್ಚ್‌ನಲ್ಲಿ ಮಾರುತಿ ಇನ್ವಿಕ್ಟೊವನ್ನು 1.15 ಲಕ್ಷ ರೂ.ಗಳವರೆಗೆ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ
  • ಜನವರಿ 18, 2025: ಮಾರುತಿ ಇನ್ವಿಕ್ಟೊದ ಎಕ್ಸ್‌ಕ್ಯೂಟಿವ್‌ ಕಾನ್ಸೆಪ್ಟ್‌ಅನ್ನು ಆಟೋ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಿತು.
ಇನ್ವಿಕ್ಟೊ ಝೆಟ ಪ್ಲಸ್ 7ಸೀಟರ್‌(ಬೇಸ್ ಮಾಡೆಲ್)1987 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 23.24 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌25.51 ಲಕ್ಷ*ನೋಡಿ ಏಪ್ರಿಲ್ offer
ಇನ್ವಿಕ್ಟೊ ಝೆಟ ಪ್ಲಸ್ 8ಸೀಟರ್‌1987 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 23.24 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌25.56 ಲಕ್ಷ*ನೋಡಿ ಏಪ್ರಿಲ್ offer
ಅಗ್ರ ಮಾರಾಟ
ಇನ್ವಿಕ್ಟೊ ಆಲ್ಫಾ ಪ್ಲಸ್ 7ಸೀಟರ್‌(ಟಾಪ್‌ ಮೊಡೆಲ್‌)1987 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 23.24 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌
29.22 ಲಕ್ಷ*ನೋಡಿ ಏಪ್ರಿಲ್ offer

ಮಾರುತಿ ಇನ್ವಿಕ್ಟೋ ವಿಮರ್ಶೆ

Overview

ಟೊಯೊಟಾ ಮತ್ತು ಮಾರುತಿ ಸುಜುಕಿಯ ಪಾಲುದಾರಿಕೆಯ ಹೊಸ ಕಾರಿನಲ್ಲಿ ಏನಿದೆ ವಿಶೇಷ ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ

 ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪೆನಿ ಮಾಡಿಕೊಂಡಿರುವ ಪಾಲುದಾರಿಕೆಯ ನಾಲ್ಕನೇ ಉತ್ಪನ್ನ ಇದಾಗಿದೆ ಅದೂ ಅಲ್ಲದೆ, ಇದು ಮಾರುತಿ ಸುಜುಕಿ ಉತ್ಪಾದಿಸುವ ಅತಿ ದುಬಾರಿಯ ಕಾರು ಇದಾಗಿದೆ. ಟೊಯೋಟಾ ಇನ್ನೋವಾ ಹೈಕ್ರಾಸ್ ನ ಬದಲು ಮಾರುತಿ ಇನ್ವಿಕ್ಟೊ ವನ್ನು ಪರಿಗಣಿಸಲು ಯಾವುದೇ ಹೊಸ ಕಾರಣಗಳಿಲ್ಲ. ಇನ್ವಿಕ್ಟೋ ಟೊಯೋಟಾದ ಎಲ್ಲಾ ಸಾಮರ್ಥ್ಯ ಮತ್ತು ವೈಶಿಷ್ಟ್ಯಗಳನ್ನೂ ಹೊಂದಿದೆ. ನೀವು ನೋಟ, ಬ್ರಾಂಡ್ ಅಥವಾ ನಿಮಗೆ ಬೇಗ ಸಿಗುವ ಕಾರನ್ನು ನೋಡಿ ಆಯ್ಕೆ ಮಾಡಬಹುದು.

ಅದರ ಹೊರತಾಗಿ, ಇನ್ವಿಕ್ಟೋ ಏನನ್ನು ವಿಶೇಷವಾಗಿ ನೀಡುತ್ತದೆ ಎಂಬುದರ ಕುರಿತು ಈಗ ಗಮನಹರಿಸೋಣ.

ಮತ್ತಷ್ಟು ಓದು

ಎಕ್ಸ್‌ಟೀರಿಯರ್

ಮಾರುತಿ ಸುಜುಕಿಯ ಇನ್ವಿಕ್ಟೋವು ಎಸ್‌ಯುವಿ ಮತ್ತು ಎಮ್‌ಪಿವಿ ವಿನ್ಯಾಸಗಳನ್ನು ಸಮಾನ ಪ್ರಮಾಣದಲ್ಲಿ ಸಂಯೋಜಿಸುತ್ತದೆ. ಇದರ ಫಲಿತಾಂಶವು ಕುಟುಂಬದಲ್ಲಿ ಪ್ರಾಯೋಗಿಕವಾಗಿ ಎಲ್ಲರೂ ಒಂದೇ ಕಾರಿನಲ್ಲಿ ಸೇರಲು ಸಾಧ್ಯತೆಯಿರುವ ವಿನ್ಯಾಸವಾಗಿದೆ. ನೇರವಾದ ಮುಂಭಾಗದ ಲುಕ್, ಅಗಲವಾದ ಗ್ರಿಲ್ ಮತ್ತು ಹೈ-ಸೆಟ್ ಹೆಡ್‌ಲ್ಯಾಂಪ್‌ಗಳನ್ನು ಗಮನಿಸುವಾಗ ಇನ್ವಿಕ್ಟೋ ಆತ್ಮವಿಶ್ವಾಸದ ಮುಖವನ್ನು ಹೊಂದಿದೆ ಎಂದು ಖಾತ್ರಿಯಾಗುತ್ತದೆ. ಪೂರ್ಣ-ಎಲ್ಇಡಿ ಹೆಡ್‌ಲ್ಯಾಂಪ್‌ಗಳು ನೆಕ್ಸಾದ ಸಿಗ್ನೇಚರ್ ಟ್ರಿಪಲ್ ಡಾಟ್ ಡೇಟೈಮ್ ರನ್ನಿಂಗ್ ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಹೈಕ್ರಾಸ್‌ಗೆ ಹೋಲಿಸಿದರೆ, ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. 

ಒಂದು ಬದಿಯಿಂದ ನೋಡಿದಾಗ, ಇನ್ವಿಕ್ಟೊದ ಸಂಪೂರ್ಣ ಗಾತ್ರವು ನಿಮ್ಮನ್ನು ಬೆರಗುಗೊಳಿಸುತ್ತದೆ. ಇದು ಅದೇ ಬೆಲೆ ವಿಭಾಗದಲ್ಲಿ ಬೇಟೆಯಾಡುವ SUV ಗಳ ವಿರುದ್ಧ ತನ್ನದೇ ಆದ ನಿಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಆದರೂ ನೀವು ಚಕ್ರದ ಗಾತ್ರವನ್ನು ಗಮನಿಸುವಾಗ ನಿಮ್ಮ ಹುಬ್ಬು ಮೇಲಕ್ಕೇರಲಿದೆ.  ಇದು 17 ಇಂಚಿನ ಚಕ್ರಗಳಲ್ಲಿ ಚಲಿಸುತ್ತಿದೆ (ಹೈಕ್ರಾಸ್‌ನ 18 ಇಂಚಿನ ಗಾತ್ರ ಹೊಂದಿದೆ), ಇದು ಕ್ಲಾಸಿ ವಿನ್ಯಾಸವನ್ನು ಹೊಂದಿದ್ದರೂ ಸಹ ಇನ್ವಿಕ್ಟೋನ ಸ್ಲ್ಯಾಬ್-ಸೈಡೆಡ್ ಪ್ರೊಫೈಲ್ ಅನ್ನು ನೀಡಿದರೆ ತುಂಬಾ ಕಡಿಮೆ ತೋರುತ್ತದೆ. ಕ್ರೋಮ್‌ನ ಸುಂದರವಾದ ಡಬ್‌ಗಳು ಬಾಗಿಲಿನ ಹಿಡಿಕೆಗಳ ಮೇಲೆ ಮತ್ತು ಕಿಟಕಿಗಳ ಕೆಳಗೆ ತಮ್ಮ ದಾರಿಯನ್ನು ಕಂಡುಕೊಳ್ಳುತ್ತವೆ.

ನೇರವಾದ ಹಿಂಭಾಗದ ತುದಿಯು ಇನ್ವಿಕ್ಟೋದ ಅತ್ಯಂತ ಎಮ್‌ಪಿವಿ (ಮಲ್ಟಿ ಪರ್ಪಸ್ ವೆಹಿಕಲ್) ತರಹದ ಕೋನವಾಗಿದೆ. ವಿಭಿನ್ನ ಬೆಳಕಿನ ಮಾದರಿಯನ್ನು ಪಡೆಯುವ ಹಳೆಯ ಟೈಲ್ ಲ್ಯಾಂಪ್‌ ಗಳನ್ನು ಗಮನಿಸುವಾಗ, ಇನ್ನೋವಾಗೆ ಹೋಲಿಸಿದರೆ ವಿನ್ಯಾಸವು ಬದಲಾಗದೆ ಉಳಿದಿದೆ.

ನೀವು ಇನ್ವಿಕ್ಟೋದಲ್ಲಿ ಕಡಿಮೆ ಬಣ್ಣದ ಆಯ್ಕೆಗಳನ್ನು ಪಡೆಯುತ್ತೀರಿ - ನೀಲಿ, ಬಿಳಿ, ಸಿಲ್ವರ್ ಮತ್ತು ಗ್ರೇ.

ಗ್ರ್ಯಾಂಡ್ ವಿಟಾರಾ ಮತ್ತು ಹೈರ್ಡರ್‌ನಂತೆಯೇ ವಿನ್ಯಾಸದ ವಿಷಯದಲ್ಲಿ ಸ್ವಲ್ಪ ಹೆಚ್ಚು ವ್ಯತ್ಯಾಸವನ್ನು ನೋಡಲು ನಾವು ಇಷ್ಟಪಡುತ್ತೇವೆ. ಅದೃಷ್ಟವಶಾತ್, ಇದು ಕೇವಲ ರಿಬ್ಯಾಡ್ಜಿಂಗ್ ಅಭ್ಯಾಸಕ್ಕಿಂತ ಸ್ವಲ್ಪ ಹೆಚ್ಚು.

ಮತ್ತಷ್ಟು ಓದು

ಇಂಟೀರಿಯರ್

ಇನ್ವಿಕ್ಟೊದ ಬಾಗಿಲುಗಳು ವಿಶಾಲವಾಗಿ ತೆರೆದುಕೊಳ್ಳುತ್ತವೆ. ಒಳಗೆ ಮತ್ತು ಹೊರಗೆ ಹೋಗುವುದು ಸುಲಭದ ಸಂಗತಿಯಾಗಿದೆ ಮತ್ತು ಬೇರೆ ಬೇರೆ ಬಣ್ಣದ ಯೋಜನೆಯಲ್ಲಿ ಮುಗಿದಿರುವ ಕ್ಯಾಬಿನ್ ನಿಮ್ಮನ್ನು ಸ್ವಾಗತಿಸುತ್ತದೆ.  ಇದನ್ನು ಹೊರತುಪಡಿಸಿ ಯಾವುದೇ ರೀತಿಯ ವಿಶುಯಲ್ ನಲ್ಲಿ ಬದಲಾವಣೆಗಳಿಲ್ಲ. ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ನಲ್ಲಿ ನೀಡಿರುವಂತೆ ಗುಲಾಬಿ ಚಿನ್ನದ ಬಣ್ಣದಲ್ಲಿ ಸಂಪೂರ್ಣ ಕಪ್ಪು ಥೀಮ್ ಅನ್ನು ಆಯ್ಕೆ ಮಾಡಿದೆ. ಇದು ಕ್ಲಾಸಿಯಾಗಿದೆ, ಆದರೆ ಮಾರುತಿ ಸುಜುಕಿ ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಲೆಥೆರೆಟ್ ಹೊದಿಕೆಗೆ ಕಾಂಟ್ರಾಸ್ಟ್ ಬಣ್ಣವನ್ನು ಆಯ್ಕೆ ಮಾಡಬಹುದಿತ್ತು. ಬ್ಲಾಕ್ ಸಾಫ್ಟ್-ಟಚ್ ಮೆಟೀರಿಯಲ್ ಸುತ್ತಮುತ್ತಲಿನ ಕಪ್ಪು ಪ್ಲಾಸ್ಟಿಕ್‌ಗೆ ಸರಳವಾಗಿ ಬೆರೆಯುತ್ತದೆ ಮತ್ತು ಅದನ್ನು ಸ್ಪರ್ಶಿಸಿದ ನಂತರ ಅದು ವಿಭಿನ್ನ ವಸ್ತು ಮತ್ತು ವಿನ್ಯಾಸವಾಗಿದೆ ಎಂದು ನೀವು ಸ್ವಲ್ಪ ಆಶ್ಚರ್ಯ ಪಡಬಹುದು.

ಇವುಗಳನ್ನು ಸೇರಿಸಿರುವುದನ್ನು ಗಮನಿಸುವಾಗ, ಪ್ಲಾಸ್ಟಿಕ್ ಗುಣಮಟ್ಟ ಮತ್ತು ಫಿಟ್-ಫಿನಿಶ್ ನಿಮಗೆ ಹೆಚ್ಚಿನದನ್ನು ಬಯಸುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿರುವ ಪ್ಲಾಸ್ಟಿಕ್‌ಗಳು ಗಟ್ಟಿಯಾಗಿದ್ದು, ಹಾಗಾಗಿ ಇದು ಹಲವು ವರ್ಷಗಳ ಕಾಲ ಬಳಸಲು ಯೋಗ್ಯವಾದ ಅಂಶವಾಗಿದೆ.   ಆದಾಗಿಯೂ, ಉತ್ತಮವಾದ ಅಂಶಗಳು ಮತ್ತು ಮೆಟಿರಿಯಲ್ ಗಳು ಇಂದು ನಿಮ್ಮನ್ನು ಹೆಚ್ಚು ಆಕರ್ಷಿಸಲು ಸಹಾಯ ಮಾಡುತ್ತದೆ. ನಮ್ಮ ಹೊಚ್ಚಹೊಸ ಪರೀಕ್ಷಾ ಕಾರಿನ ಒಳಭಾಗದಲ್ಲಿ ಕೆಲವು ನ್ಯೂನತೆಗಳನ್ನು ಸಹ ನಾವು ಕಂಡುಕೊಂಡಿದ್ದೇವೆ - ರೂ 30 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಈ ಕಾರಿಗಾಗಿ ವ್ಯಹಿಸುವಾಗ ನೀವು ಇಂತಹ ಸಂಗತಿಗಳನ್ನು ಎದುರಿಸುವುದು ಬೇಸರದಾಯಕ ಅಂಶವಾಗಿದೆ.  

ಆದರೆ, ನೀವು ಟೊಯೋಟಾ/ಸುಜುಕಿಯೊಂದಿಗೆ ನಿರೀಕ್ಷಿಸಿದಂತೆ, ದಕ್ಷತಾಶಾಸ್ತ್ರವು  ಉತ್ತಮವಾಗಿದೆ. ಕ್ಯಾಬಿನ್ ಪರಿಚಿತ ಅನುಭವ ನೀಡುತ್ತದೆ ಮತ್ತು ನೀವು ಚಿಕ್ಕ ವಾಹನದಿಂದ ಅಪ್‌ಗ್ರೇಡ್ ಆಗುತ್ತಿದ್ದರೆ ಪ್ರಾಯೋಗಿಕವಾಗಿ ತಕ್ಷಣವೇ ಆರಾಮದಾಯಕವಾಗುತ್ತೀರಿ. ಬಾನೆಟ್‌ನ ಸ್ಪಷ್ಟ ನೋಟವನ್ನು ನೀಡುವ ಡ್ರೈವಿಂಗ್ ಸೀಟ್ ನ್ನು ಸಹ ನೀವು ಇಷ್ಟಪಡುತ್ತೀರಿ. ಎಲ್ಲಾ ಬದಿಯಿಂದಲೂ ಗೋಚರತೆಯು ಅದ್ಭುತವಾಗಿದೆ ಮತ್ತು ಇನ್ವಿಕ್ಟೊವನ್ನು ಡ್ರೈವ್ ಮಾಡುವಾಗ ವಿಶೇಷವಾದ ಆತ್ಮವಿಶ್ವಾಸವನ್ನು ಅನುಭವಿಸುವುದು ಸಹಜ. 

ಇದರಲ್ಲಿ ನೀಡಿರುವ ಸ್ಥಳಾವಕಾಶವು ಒಂದು ಸ್ಪಷ್ಟವಾದ ಶಕ್ತಿಯಾಗಿದೆ. ಪ್ರತಿ ಸೀಟ್ ನ ಸಾಲಿನಲ್ಲಿ ಆರು-ಅಡಿ ಎತ್ತರದ ಪ್ರಯಾಣಿಕರು ತುಂಬಾ ಆರಾಮದಾಯಕವಾಗಿ ಪ್ರಯಾಣಿಸಬಹುದು. ಬೇರೆ ಎಮ್‌ಪಿವಿಗಳ ಹಾಗೆ ಮೂರನೇ ಸಾಲನ್ನು ಮಕ್ಕಳಿಗಾಗಿ ಕಾಯ್ದಿರಿಸಿದ ಎಮ್‌ಪಿವಿಯಲ್ಲ ಇದು.   ವಯಸ್ಕರು ಸಹ ಇಲ್ಲಿ ಕುಳಿತುಕೊಳ್ಳಬಹುದು ಮಾತು ಆರಾಮದಾಯಕ ದೀರ್ಘ ಪ್ರಯಾಣವನ್ನು ಸಹ ಮಾಡಬಹುದು. ಮೂರನೇ ಸಾಲಿನ ಪ್ರಯಾಣಿಕರು ರೂಫ್-ಮೌಂಟೆಡ್ ಎಸಿ ವೆಂಟ್‌ಗಳು, ಕಪ್‌ಹೋಲ್ಡರ್‌ಗಳು ಮತ್ತು ಫೋನ್ ಚಾರ್ಜರ್‌ಗಳನ್ನು ಪಡೆಯುತ್ತಾರೆ.

ಎರಡನೇ ಸಾಲಿನಲ್ಲಿ ಒಂತರಹ  ಮ್ಯಾಜಿಕ್ ಇದೆ. ನಿಮ್ಮ ಹೊಸ ಇನ್ವಿಕ್ಟೊದಲ್ಲಿ ಚಾಲಕರಂತಹ ಸೀಟ್ ಗಳನ್ನು  ಎರಡನೇ ಸಾಲಿನಲ್ಲಿಯೂ ಬಯಸುವ ಸಾಧ್ಯತೆಗಳಿವೆ ಮತ್ತು ಅದು ಸರಳವಾಗಿ ಇಲ್ಲಿ ತಲುಪಿಸುತ್ತದೆ. ಆಸನಗಳು ಸ್ವಲ್ಪ ಹಿಂದಕ್ಕೆ ಜಾರುತ್ತವೆ, ಆದುದರಿಂದ ನೀವು ಸುಲಭವಾಗಿ ಕಾಲನ್ನು ಅಡ್ಡಹಾಕಿ ಕುಳಿತುಕೊಳ್ಳಬಹುದು. ಆಸನಗಳ ನಡುವೆ ( ದುರ್ಬಲವಲ್ಲದ) ಮಡಚುವ ಟ್ರೇ ಟೇಬಲ್, ಸನ್ ಬ್ಲೈಂಡ್‌ಗಳು ಮತ್ತು ಎರಡು ಟೈಪ್-ಸಿ ಚಾರ್ಜರ್‌ಗಳು ಇದೆ.

ಕ್ಯಾಪ್ಟನ್ ಆಸನಗಳು ಸಾಕಷ್ಟು ಆರಾಮದಾಯಕವಾಗಿದ್ದು, ದೊಡ್ಡ ಚೌಕಟ್ಟುಗಳನ್ನು ಸಹ ಸುಲಭವಾಗಿ ಅಳವಡಿಸಿಕೊಳ್ಳುತ್ತವೆ. ಇಲ್ಲಿ  ಸೀಟ್ ನ್ನು ಮೇಲಕ್ಕೆ ಅಥವಾ ಕೆಳಗೆ ಮಾಡಲು ಯಾವುದೇ ರೀತಿಯ ಎಲೆಕ್ಟ್ರಿಕ್ ಹೊಂದಾಣಿಕೆ ಇಲ್ಲ, ಹಾಗೆಯೇ ಕೆಳಗೆ ನಿಮ್ಮ ಮೊಣಕಾಲಿಗೆ ಬೆಂಬಲವನ್ನು (ಕಫ್ ಸಪೋರ್ಟ್)  ಹೆಚ್ಚಿಸುವ ಸೀಟ್ ನ ಸಣ್ಣ ಭಾಗವನ್ನು ನ್ನು ನೀವು ಪಡೆಯುವುದಿಲ್ಲ. ಇದು ಲಾಂಗ್ ಡ್ರೈವ್‌ಗಳಲ್ಲಿ ಆರಾಮವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ನೀವು ಬೇರೆ ಬೇರೆ ನಗರಗಳಿಗೆ ಪ್ರಯಾಣಿಸುವಾಗ ಹಿಂದಿನ ಸೀಟಿನಲ್ಲಿ ಸಮಯ ಕಳೆದರೆ  ಆ ಆರಾಮವನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ. ನೀವು ಬೇರೆ ಯಾವುದೇ  ವೈಶಿಷ್ಟ್ಯಗಳನ್ನು ಮಿಸ್ ಮಾಡಿಕೊಂಡರೂ, ಈ ಎಂಪಿವಿಯ ಎರಡನೇ ಸಾಲಿನಲ್ಲಿ ಕಣ್ಮರೆಯಾಗಿರುವ ಮತ್ತೊಂದು  ವೈಶಿಷ್ಟ್ಯವೆಂದರೆ ಒನ್-ಟಚ್ ಟಂಬಲ್ (ಬಟನ್ ಮೂಲಕ ಸೀಟನ್ನು ಸಂಪೂರ್ಣ ಮಡಚುವುದು). ಇದರಲ್ಲಿ ಆಸನಗಳು ಕೇವಲ ಜಾರುತ್ತವೆ ಮತ್ತು ಒರಗುತ್ತವೆ. ಕ್ಯಾಬಿನ್‌ನಲ್ಲಿ ನೀವು ಎರಡನೇ ಸಾಲಿನಿಂದ ಹಿಂದಕ್ಕೆ ಹೋಗಲು ಸಾಕಷ್ಟು ಸ್ಥಳಾವಕಾಶವಿದ್ದರೂ, ಎರಡನೇ ಸಾಲು ಸಂಪೂರ್ಣ ಮಡಚುವುದರಿಂದ (ಉರುಳುವುದು) ಮೂರನೇ ಸಾಲಿನ ಪ್ರಯಾಣಿಕರಿಗೆ ಪ್ರವೇಶ ಮತ್ತು ಹೊರಹೋಗುವಿಕೆ ಸುಲಭವಾಗುತ್ತದೆ. 

ವೈಶಿಷ್ಟ್ಯಗಳಲ್ಲಿ ದೊಡ್ಡದು

ಮಾರುತಿ ಸುಜುಕಿ ತನ್ನ ಇನ್ವಿಕ್ಟೋವನ್ನು ಎರಡು ಆವೃತ್ತಿಗಳಲ್ಲಿ ನೀಡುತ್ತದೆ: ಝೆಟ+ ಮತ್ತು ಅಲ್ಫಾ+. ಇದರ ಟಾಪ್-ಎಂಡ್ ವೇರಿಯೆಂಟ್, ಇನ್ನೋವಾ ಹೈಕ್ರಾಸ್‌ನಲ್ಲಿನ ZX ಟ್ರಿಮ್ ಅನ್ನು ಆಧರಿಸಿದೆ. ಇದರರ್ಥ ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ, ಅವುಗಳಲ್ಲಿ ಹಲವು ಮಾರುತಿ ಸುಜುಕಿ ಭಾರತದಲ್ಲಿ  ಮೊದಲ ಬಾರಿಗೆ ನೀಡಿದಂತಾಗಿದೆ. ಇದರ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಮುಂಭಾಗದ ಸೀಟಿನಲ್ಲಿ ವೆಂಟಿಲೇಷನ್ ಸೌಕರ್ಯ, ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕರಿಗೆ ಮೀಸಲಾದ ಹವಾಮಾನ ನಿಯಂತ್ರಣ ಜೋನ್ ಮತ್ತು ಚಾಲಿತ ಟೈಲ್‌ಗೇಟ್ ಅನ್ನು ಒಳಗೊಂಡಿವೆ.

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುವ 10.1-ಇಂಚಿನ ಟಚ್‌ಸ್ಕ್ರೀನ್‌ನಿಂದ ಇನ್ಫೋಟೈನ್‌ಮೆಂಟ್ ನ ಕೆಲಸಗಳನ್ನು ನಿರ್ವಹಿಸಲಾಗುತ್ತದೆ. ಈ ದುಬಾರಿ ವಾಹನದಲ್ಲಿ ಇನ್ಫೋಎಂಟರ್ಟೈನ್ಮೆಂಟ್ ಅನುಭವವು ಅಷ್ಟೇನೂ ಉತ್ತಮವಾಗಿಲ್ಲ. ಸ್ಕ್ರೀನ್ ಕಾಂಟ್ರಾಸ್ಟ್ ಅನ್ನು ಹೊಂದಿಲ್ಲ ಮತ್ತು ನೀವು ನಿರೀಕ್ಷಿಸಿದಷ್ಟು ಸ್ನ್ಯಾಪ್ ಆಗಿರುವುದಿಲ್ಲ. ಕ್ಯಾಮೆರಾ ಫೀಡ್‌ನ ಗುಣಮಟ್ಟವು ಸಹ ಬೆಲೆಗೆ ಸಮನಾಗಿಲ್ಲ ಎಂದನಿಸುತ್ತದೆ. ಮಾರುತಿ ಸುಜುಕಿ 9-ಸ್ಪೀಕರ್ ನ ಜೆಬಿಎಲ್ ಆಡಿಯೊ ಸಿಸ್ಟಮ್ ಅನ್ನು  ಬಿಟ್ಟು ಬಿಟ್ಟಿದೆ, ಇದರಿಂದ ಇನ್ವಿಕ್ಟೋದ  ಬೆಲೆಗಳನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿದೆ. 

ಮತ್ತಷ್ಟು ಓದು

ಸುರಕ್ಷತೆ

ಇನ್ವಿಕ್ಟೋ ದಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್ ಮತ್ತು  ಟ್ರಾಕ್ಷನ್ ಕಂಟ್ರೋಲ್ ನ್ನು ನೀಡಲಾಗುತ್ತದೆ. ಬೇಸ್-ಮಾಡೆಲ್ ಆವೃತ್ತಿಯು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುತ್ತದೆ, ಆದರೆ ಆಶ್ಚರ್ಯವಾಗಿ ಪಾರ್ಕಿಂಗ್ ಸೆನ್ಸಾರ್ ಗಳನ್ನು ಬಿಟ್ಟುಬಿಡಲಾಗಿದೆ.  ವೈಶಿಷ್ಟ್ಯದ ಪಟ್ಟಿಗೆ ADAS ಅನ್ನು ಸೇರಿಸಿರುವ Hycross ನ ZX (O) ವೇರಿಯಂಟ್‌ಗೆ ಇದು ಭದ್ರತೆಯಲ್ಲಿ ಯಾವುದೇ ರೀತಿಯ ಸಮವಾಗಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಇನ್ನೋವಾ ಹೈಕ್ರಾಸ್ ಅಥವಾ ಇನ್ವಿಕ್ಟೋ ಗ್ಲೋಬಲ್ ಎನ್‌ಸಿಎಪಿ ಅಥವಾ ಯಾವುದೇ ಇತರ ಸ್ವತಂತ್ರ ಪ್ರಾಧಿಕಾರದಿಂದ ಕ್ರ್ಯಾಶ್ ಟೆಸ್ಟ್ ನ್ನು ಇನ್ನೂ ಮಾಡಿಲ್ಲ.

ಮತ್ತಷ್ಟು ಓದು

ಬೂಟ್‌ನ ಸಾಮರ್ಥ್ಯ

ಎಲ್ಲಾ ಸಾಲುಗಳನ್ನು ಬಳಸಿಯೂ  289-ಲೀಟರ್‌ ನಷ್ಟು ಬೂಟ್ ಸ್ಪೇಸ್ ಅನ್ನು ಇದು ಪಡೆಯುತ್ತದೆ.  ನೀವು ವಾರಾಂತ್ಯದಲ್ಲಿ ಫಾರ್ಮ್‌ಹೌಸ್‌ಗೆ ಹೋಗಲು ಬಯಸಿದರೆ ಕೆಲವು ಟ್ರಾವೆಲ್ ಬ್ಯಾಗ್‌ಗಳನ್ನು ಇಡಲು ಈ ಜಾಗ ಸಾಕಾಗುತ್ತದೆ. ಹೆಚ್ಚುವರಿ ಬೂಟ್ ಸ್ಪೇಸ್‌ಗಾಗಿ ನೀವು ಮೂರನೇ ಸಾಲನ್ನು ಮಡಚಬಹುದು. ಮೂರನೇ ಸಾಲನ್ನು ಮಡಿಸುವುದರಿಂದ ನಿಮಗೆ ಒಟ್ಟು 690-ಲೀಟರ್ ನಷ್ಟು ಸಾಮರ್ಥ್ಯದ ಸ್ಥಳಾವಕಾಶ ಸಿಗುತ್ತದೆ.

ಮತ್ತಷ್ಟು ಓದು

ಕಾರ್ಯಕ್ಷಮತೆ

ಇನ್ವಿಕ್ಟೊವನ್ನು ಪವರ್ ಮಾಡುವುದು ಟೊಯೋಟಾದ 2.0-ಲೀಟರ್ ಪೆಟ್ರೋಲ್ ಮೋಟರ್ ಆಗಿದ್ದು ಅದು ಎಲೆಕ್ಟ್ರಿಕ್ ಮೋಟಾರ್ ಮತ್ತು ಸಣ್ಣ ಬ್ಯಾಟರಿ ಪ್ಯಾಕ್‌ನೊಂದಿಗೆ ಜೋಡಿಯಾಗಿದೆ. ಕುತೂಹಲಕಾರಿಯಾಗಿ, ಮಾರುತಿ ಸುಜುಕಿಯು ಹೈಬ್ರಿಡ್ ಅಲ್ಲದ ಪವರ್‌ಟ್ರೇನ್ ಅನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ನಿರ್ಧರಿಸಿದೆ.  ಹೈಕ್ರಾಸ್‌ನ ಹೈಬ್ರಿಡ್ ಅಲ್ಲದ ಮತ್ತು ಹೈಬ್ರಿಡ್ ವೇರಿಯೆಂಟ್ ಗಳ ನಡುವೆ ಖಾಲಿ ಇರುವ ವಿಶಾಲ ಬೆಲೆಯ ಅಂತರವನ್ನು ಪರಿಗಣಿಸಿ ಈ ನಿರ್ಧಾರವನ್ನು ಮಾರುತಿ ಸುಜುಕಿ ಮಾಡಿರಬಹುದು. 

ಹೈಬ್ರಿಡ್ ಸೆಟಪ್ ವಿಭಜಿತ ವ್ಯಕ್ತಿತ್ವವನ್ನು ಹೊಂದಿದೆ. ನೀವು ಆರಾಮದಾಯಕ ಡ್ರೈವ್‌ನ ಮೂಡ್‌ನಲ್ಲಿರುವಾಗ ಇದು ಶಾಂತ, ಸಂಯೋಜನೆ ಮತ್ತು ನಂಬಲಾಗದಷ್ಟು ಪರಿಣಾಮಕಾರಿಯಾಗಿದೆ. ಇದು EV ಮೋಡ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಕಡಿಮೆ ವೇಗದಲ್ಲಿ ಸಂಪೂರ್ಣವಾಗಿ ಬ್ಯಾಟರಿ ಪವರ್‌ನಲ್ಲಿ ಚಾಲನೆ ಮಾಡಲು ಸಂತೋಷವಾಗುತ್ತದೆ. ಕಾರಿನ ವೇಗವು ಹೆಚ್ಚಾದಂತೆ, ಪೆಟ್ರೋಲ್ ಮೋಟರ್ ನಿಮಗೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ವೇಗವಾಗಿ ಚಲಿಸುವಾಗ ಥ್ರೊಟಲ್ ನ ಬಳಕೆಯಿಂದಾಗಿ ಮತ್ತು ಮತ್ತು ಬ್ರೇಕಿಂಗ್ ನ ಸಹಾಯದಿಂದ ಬ್ಯಾಟರಿ ಚಾರ್ಜ್ ನ್ನು ಮರಳಿ ಪಡೆಯುತ್ತದೆ. ಕಾರು ನಿಧಾನವಾದಂತೆ ಎಲೆಕ್ಟ್ರಿಕ್ ಮೋಟಾರ್ ನಿಂದ ಮತ್ತೆ ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ನಿಂದ ಹೆಚ್ಚಿನ ಮೈಲೇಜ್ ನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

ನೀವು ವೇಗವಾಗಿ ಕಾರನ್ನು ಚಲಾಯಿಸಲು ಬಯಸಿದರೆ, ಇಲ್ಲಿಯೂ ಇನ್ವಿಕ್ಟೋ ನಿಮಗೆ ಉತ್ತಮ ಅನುಭವ ನೀಡುತ್ತದೆ. ಮಾರುತಿ ಸುಜುಕಿ 0 ದಿಂದ 100 ಕಿ.ಮೀ ನಷ್ಟು ವೇಗವನ್ನು ಪಡೆಯಲು ಕೇವಲ 9.5 ಸೆಕೆಂಡುಗಳನ್ನಷ್ಟೇ ತೆಗೆದುಕೊಳ್ಳುತ್ತದೆ ಎಂದು ಘೋಷಣೆ ಮಾಡಿದೆ, ಮತ್ತು ಇದು ವಾಸ್ತವದಲ್ಲಿಯೂ ಸಾಕಷ್ಟು ಹತ್ತಿರದಲ್ಲಿದೆ. ಗಂಟೆಗೆ 100ಕಿ.ಮೀ ವೇಗದಲ್ಲಿ ನೀವು ಪ್ರಯಾಣಿಸಲು ಮತ್ತು ಓವರ್ ಟೇಕ್ ಮಾಡಲು ಇನ್ವಿಕ್ಟೋ ಸಾಕಷ್ಟು ಶಕ್ತಿಯನ್ನು ಹೊಂದಿದೆ.

ಚೆನ್ನಾಗಿ ಟ್ಯೂನ್ ಮಾಡಿದ ಸವಾರಿಯು ಚಾಲನಾ ಅನುಭವವನ್ನು ಹೆಚ್ಚಿಸುತ್ತದೆ. ನಿಧಾನಗತಿಯ ವೇಗದಲ್ಲಿ ನೀವು ಕೆಲವು ಅಕ್ಕಪಕ್ಕದ ಚಲನೆಯನ್ನು ಅನುಭವನ್ನು ಪಡೆಯುತ್ತೀರಿ, ಆದರೆ ಅದು ಎಂದಿಗೂ ಅಹಿತಕರವಾಗುವುದಿಲ್ಲ.  ಎಷ್ಟೇ ವೇಗವಿದ್ದರೂ ಇನ್ವಿಕ್ಟೋ ತ್ವರಿತವಾಗಿ ನಿಲ್ಲುತ್ತದೆ.  ಹೆಚ್ಚಿನ ವೇಗದ ಸ್ಥಿರತೆಯು ಅದ್ಭುತವಾಗಿದೆ ಮತ್ತು ಅದು ಅಂತರರಾಜ್ಯ ಪ್ರಯಾಣಗಳ ಮೇಲೆ ನಿಮಗೆ ಖಚಿತವಾಗಿ ವಿಶ್ವಾಸವನ್ನು ಪ್ರೇರೇಪಿಸುತ್ತದೆ.

ಸಿಟಿ ಟ್ರಾಫಿಕ್‌ನಲ್ಲಿ ಇನ್ವಿಕ್ಟೊವನ್ನು ಸುಲಭವಾಗಿ ಡ್ರೈವ್ ಮಾಡಲು ಸ್ಟೀರಿಂಗ್ ಸಾಕಷ್ಟು ಹಗುರವಾಗಿರುತ್ತದೆ. ಹಾಗೆಯೇ ವೇಗದ ಚಾಲನೆಯಲ್ಲೂ ಸ್ಟೀರಿಂಗ್ ತೂಕವು ಚಾಲನೆಗೆ ಸಮರ್ಪಕವಾಗಿರುತ್ತದೆ.

ಮತ್ತಷ್ಟು ಓದು

ವರ್ಡಿಕ್ಟ್

 ಹೈಕ್ರಾಸ್ ZX ಗೆ ಹೋಲಿಸಿದರೆ, ಇನ್ವಿಕ್ಟೋ ಅಲ್ಫಾ+ ಬೆಲೆ ಸುಮಾರು ಒಂದು ಲಕ್ಷ ಕಡಿಮೆ. ವೈಶಿಷ್ಟ್ಯಗಳ ಬದಲು ಉಳಿತಾಯಕ್ಕೆ ನೀವು ಹೆಚ್ಚು ಪ್ರಾಧಿನಿತ್ಯ ನೀಡುವುದಾದರೆ ನಿಮಗೆ ವ್ಯವಹಾರ ಸುಲಭವಾಗಬಹುದು. ನೀವು ಇನ್ನೋವಾವನ್ನು ಬಯಸಿದರೆ ಮತ್ತು ಅದನ್ನು ಟೊಯೋಟಾ ಅಥವಾ ಇನ್ನೋವಾ ಎಂದು ಕರೆಯುವುದರ ಬಗ್ಗೆ ನೀವು ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲದಿದ್ದರೆ, ಇನ್ವಿಕ್ಟೋ ನಿಮಗೆ ಉತ್ತಮ ಆಯ್ಕೆಯಾಗಬಹುದು.

ಮತ್ತಷ್ಟು ಓದು

ಮಾರುತಿ ಇನ್ವಿಕ್ಟೊ

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ದೊಡ್ಡ ಗಾತ್ರ ಮತ್ತು ಪ್ರೀಮಿಯಂ ಲೈಟಿಂಗ್ ಅಂಶಗಳೊಂದಿಗೆ ರಸ್ತೆಯಲ್ಲಿ ಪ್ರಭಾವಶಾಲಿ ಕಾರ್ಯಕ್ಷಮತೆ .
  • ನಿಜವಾದ ವಿಶಾಲವಾದ 7-ಆಸನಗಳು
  • ಇದರ ಹೈಬ್ರಿಡ್ ಪವರ್‌ಟ್ರೇನ್ ಸ್ಮೂತ್ ಡ್ರೈವ್ ಮತ್ತು ಪ್ರಭಾವಶಾಲಿ ಮೈಲೇಜ್ ನ್ನು ನೀಡುತ್ತದೆ
ಮಾರುತಿ ಇನ್ವಿಕ್ಟೋ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಮಾರುತಿ ಇನ್ವಿಕ್ಟೋ comparison with similar cars

ಮಾರುತಿ ಇನ್ವಿಕ್ಟೋ
Rs.25.51 - 29.22 ಲಕ್ಷ*
ಟೊಯೋಟಾ ಇನ್ನೋವಾ ಹೈಕ್ರಾಸ್
Rs.19.94 - 31.34 ಲಕ್ಷ*
ಟೊಯೋಟಾ ಇನೋವಾ ಕ್ರಿಸ್ಟಾ
Rs.19.99 - 26.82 ಲಕ್ಷ*
ಟೊಯೋಟಾ ಫ್ರಾಜುನರ್‌
Rs.35.37 - 51.94 ಲಕ್ಷ*
ಟಾಟಾ ಸಫಾರಿ
Rs.15.50 - 27.25 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
Rs.13.99 - 25.74 ಲಕ್ಷ*
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.99 - 24.89 ಲಕ್ಷ*
ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
Rs.11.34 - 19.99 ಲಕ್ಷ*
Rating4.492 ವಿರ್ಮಶೆಗಳುRating4.4242 ವಿರ್ಮಶೆಗಳುRating4.5296 ವಿರ್ಮಶೆಗಳುRating4.5644 ವಿರ್ಮಶೆಗಳುRating4.5181 ವಿರ್ಮಶೆಗಳುRating4.61.1K ವಿರ್ಮಶೆಗಳುRating4.5775 ವಿರ್ಮಶೆಗಳುRating4.4381 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಮ್ಯಾನುಯಲ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌
Engine1987 ccEngine1987 ccEngine2393 ccEngine2694 cc - 2755 ccEngine1956 ccEngine1999 cc - 2198 ccEngine1997 cc - 2198 ccEngine1462 cc - 1490 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power150.19 ಬಿಹೆಚ್ ಪಿPower172.99 - 183.72 ಬಿಹೆಚ್ ಪಿPower147.51 ಬಿಹೆಚ್ ಪಿPower163.6 - 201.15 ಬಿಹೆಚ್ ಪಿPower167.62 ಬಿಹೆಚ್ ಪಿPower152 - 197 ಬಿಹೆಚ್ ಪಿPower130 - 200 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Mileage23.24 ಕೆಎಂಪಿಎಲ್Mileage16.13 ಗೆ 23.24 ಕೆಎಂಪಿಎಲ್Mileage9 ಕೆಎಂಪಿಎಲ್Mileage11 ಕೆಎಂಪಿಎಲ್Mileage16.3 ಕೆಎಂಪಿಎಲ್Mileage17 ಕೆಎಂಪಿಎಲ್Mileage12.12 ಗೆ 15.94 ಕೆಎಂಪಿಎಲ್Mileage19.39 ಗೆ 27.97 ಕೆಎಂಪಿಎಲ್
Airbags6Airbags6Airbags3-7Airbags7Airbags6-7Airbags2-7Airbags2-6Airbags6
GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings5 StarGNCAP Safety Ratings-GNCAP Safety Ratings5 StarGNCAP Safety Ratings4 Star
Currently Viewingಇನ್ವಿಕ್ಟೊ vs ಇನ್ನೋವಾ ಹೈಕ್ರಾಸ್ಇನ್ವಿಕ್ಟೊ vs ಇನೋವಾ ಕ್ರಿಸ್ಟಾಇನ್ವಿಕ್ಟೊ vs ಫ್ರಾಜುನರ್‌ಇನ್ವಿಕ್ಟೊ vs ಸಫಾರಿಇನ್ವಿಕ್ಟೊ vs ಎಕ್ಸ್‌ಯುವಿ 700ಇನ್ವಿಕ್ಟೊ vs ಸ್ಕಾರ್ಪಿಯೊ ಎನ್ಇನ್ವಿಕ್ಟೊ vs ಅರ್ಬನ್ ಕ್ರೂಸರ್ ಹೈ ರೈಡರ್
ಇಎಮ್‌ಐ ಆರಂಭ
Your monthly EMI
66,984Edit EMI
48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
View EMI Offers

ಮಾರುತಿ ಇನ್ವಿಕ್ಟೋ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಫಿಲಿಪೈನ್ಸ್‌ನಲ್ಲಿ ಮೈಲ್ಡ್‌ ಹೈಬ್ರಿಡ್ ಪವರ್‌ಟ್ರೇನ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ Maruti Suzuki Dzire ಬಿಡುಗಡೆ

ಇದು ಹೆಚ್ಚು ಉತ್ತಮವಾದ ಪವರ್‌ಟ್ರೇನ್ ಅನ್ನು ಪಡೆದರೂ, ಫಿಲಿಪೈನ್-ಸ್ಪೆಕ್ ಮೊಡೆಲ್‌ 360-ಡಿಗ್ರಿ ಕ್ಯಾಮೆರಾ, ಸಿಂಗಲ್-ಪೇನ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಕೆಲವು ಉತ್ತಮ ಫೀಚರ್‌ಗಳನ್ನು ಕಳೆದುಕೊಳ್ಳುತ್ತದೆ

By dipan Apr 16, 2025
ಮಾರುತಿ ಇನ್ವಿಕ್ಟೊದಲ್ಲೀಗ ಹಿಂದಿನ ಸೀಟ್‌ಬೆಲ್ಟ್ ಹಾಕದಿದ್ರೆ ಅಲಾರಾಂ ಹೊಡೆಯುತ್ತೆ..!!

ಮಾರುತಿ ಇನ್ವಿಕ್ಟೊ ಝೆಟಾ+ ಟ್ರಿಮ್ ಈಗ ರೂ. 3,000 ಪ್ರೀಮಿಯಂನಲ್ಲಿ ಹಿಂದಿನ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಪಡೆಯುತ್ತಿದೆ.

By rohit Aug 04, 2023
ಮಾರುತಿ ಇನ್ವಿಕ್ಟೋದ ವೇರಿಯೆಂಟ್‌ವಾರು ಫೀಚರ್‌ಗಳ ಒಂದು ನೋಟ

ಈ ಮಾರುತಿ ಇನ್ವಿಕ್ಟೋ ಕೇವಲ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಎರಡು ವೇರಿಯೆಂಟ್‌ಗಳಲ್ಲಿ ಬರುತ್ತದೆ: ಝೆಟಾ ಪ್ಲಸ್ ಮತ್ತು ಆಲ್ಫಾ ಪ್ಲಸ್

By rohit Jul 13, 2023
ಮಾರುತಿಯ ಅತ್ಯಂತ ದುಬಾರಿ ಕಾರು ಇನ್ವಿಕ್ಟೋ 4 ಬಣ್ಣಗಳ ಆಯ್ಕೆಯಲ್ಲಿ ಲಭ್ಯ

ಮಾರುತಿ ಇನ್ವಿಕ್ಟೋವು ಇನ್ನೋವಾ ಹೈಕ್ರಾಸ್‌ನ ಮರುಬ್ಯಾಡ್ಜ್ ಆಗಿರುವ ಆವೃತ್ತಿಯಾಗಿದೆ. ಆದರೆ ಕಡಿಮೆ ಬಣ್ಣದ ಆಯ್ಕೆಗಳನ್ನು ಪಡೆಯುತ್ತದೆ

By ansh Jul 11, 2023
ಮಾರುತಿ ಇನ್ವಿಕ್ಟೋ ಮತ್ತು ಟೊಯೋಟಾ ಇನ್ನೋವಾ ಹೈಕ್ರಾಸ್ ನಡುವಿನ 5 ಪ್ರಮುಖ ವ್ಯತ್ಯಾಸಗಳು

ಈ MPVಗಳು ಮೊದಲ ನೋಟದಲ್ಲಿ ಹೋಲುತ್ತವೆ ಆದರೆ ವಿನ್ಯಾಸ, ಪವರ್‌ಟ್ರೇನ್, ವೈಶಿಷ್ಟ್ಯಗಳು ಮತ್ತು ಹೆಚ್ಚಿನವುಗಳ ವಿಷಯದಲ್ಲಿ ವಿಭಿನ್ನವಾಗಿರುತ್ತವೆ

By ansh Jul 08, 2023

ಮಾರುತಿ ಇನ್ವಿಕ್ಟೋ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (92)
  • Looks (28)
  • Comfort (33)
  • Mileage (23)
  • Engine (21)
  • Interior (26)
  • Space (11)
  • Price (24)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • A
    anand on Apr 08, 2025
    5
    My Lovely Car

    Very good Suzuki invicto car luxury car and luxury lifestyle good fetcher fully powerful engine automatic transmission car and I like Invicto car good mileage top model fully loaded system drive enjoy entertainment dizine power steering wheel power break abs system antilock good filling drive and travel.ಮತ್ತಷ್ಟು ಓದು

  • R
    rajab ansari on Mar 05, 2025
    4.5
    ಮಾರುತಿ ಸುಜುಕಿ ಇನ್ವಿಕ್ಟೊ

    Very very nice mpv car by maruti suzuki this is the best car in this segment and i enjoyed the car because I have a big family about 6 to 7 peoples.ಮತ್ತಷ್ಟು ಓದು

  • M
    manan baweja on Feb 11, 2025
    3.5
    ಇನ್ವಿಕ್ಟೊ ವಿಮರ್ಶೆ

    The car has a sleek as well as muscular build, giving it a high end yet rough look. it is good for city use purposes as well as highway cruising.ಮತ್ತಷ್ಟು ಓದು

  • A
    anurag daniel hemrom on Feb 10, 2025
    4
    Feature And Designs

    I like the car, it's design and features and the mileage it gives keeping it's size in mind is awesome. I would recommend this car for joint families or a big familyಮತ್ತಷ್ಟು ಓದು

  • S
    simraan on Jan 30, 2025
    3.8
    Price High

    Car is Best. Look is best. Capacity is best. But car price is very high. Front look, Back look, Interior, Tyre. And Innova ki copy lag rahi hai. Maruti Suzuki Innovaಮತ್ತಷ್ಟು ಓದು

ಮಾರುತಿ ಇನ್ವಿಕ್ಟೋ ವೀಡಿಯೊಗಳು

  • Full ವೀಡಿಯೊಗಳು
  • Shorts
  • 5:56
    Upcoming Cars In India | July 2023 | Kia Seltos Facelift, Maruti Invicto, Hyundai Exter And More!
    1 year ago | 196.9K ವ್ಯೂವ್ಸ್‌

ಮಾರುತಿ ಇನ್ವಿಕ್ಟೋ ಬಣ್ಣಗಳು

ಮಾರುತಿ ಇನ್ವಿಕ್ಟೋ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.
ಮಿಸ್ಟಿಕ್ ವೈಟ್
ಮ್ಯಾಗ್ನಿಫಿಕೆಂಟ್‌ ಬ್ಲ್ಯಾಕ್
ಮೆಜೆಸ್ಟಿಕ್ ಸಿಲ್ವರ್
ಸ್ಟೆಲ್ಲಾರ್ ಬ್ರಾಂಝ್‌
ನೆಕ್ಸಾ ಬ್ಲೂ ಸೆಲೆಸ್ಟಿಯಲ್

ಮಾರುತಿ ಇನ್ವಿಕ್ಟೋ ಚಿತ್ರಗಳು

ನಮ್ಮಲ್ಲಿ 42 ಮಾರುತಿ ಇನ್ವಿಕ್ಟೋ ನ ಚಿತ್ರಗಳಿವೆ, ಇನ್ವಿಕ್ಟೊ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಮ್‌ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

ನವ ದೆಹಲಿನಲ್ಲಿ ಶಿಫಾರಸು ಮಾಡಲಾದ ಬಳಸಿದ ಮಾರುತಿ ಇನ್ವಿಕ್ಟೋ ಪರ್ಯಾಯ ಕಾರುಗಳು

Rs.29.75 ಲಕ್ಷ
202419,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.28.49 ಲಕ್ಷ
202317,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.19.40 ಲಕ್ಷ
20245,000 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.18.50 ಲಕ್ಷ
202416,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.31.00 ಲಕ್ಷ
202415,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.16.25 ಲಕ್ಷ
202316,000 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.16.65 ಲಕ್ಷ
20236,900 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.15.75 ಲಕ್ಷ
202318,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.18.75 ಲಕ್ಷ
202355,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.32.95 ಲಕ್ಷ
202338,000 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಮ್‌ಯುವಿ cars

  • ಟ್ರೆಂಡಿಂಗ್

Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

DevyaniSharma asked on 28 Oct 2023
Q ) What are the available finance offers of Maruti Invicto?
Abhijeet asked on 16 Oct 2023
Q ) What is the seating capacity of Maruti Invicto?
Prakash asked on 28 Sep 2023
Q ) What is the engine displacement of the Maruti Invicto?
DevyaniSharma asked on 20 Sep 2023
Q ) Can I exchange my old vehicle with Maruti Invicto?
naveen asked on 9 Jul 2023
Q ) What is the GNCAP rating?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
ನೋಡಿ ಏಪ್ರಿಲ್ offer