Citroen C3 Aircross ಆಟೋಮ್ಯಾಟಿಕ್: ಫಸ್ಟ್ ಡ್ರೈವ್ ಕುರಿತ ವಿಮರ್ಶೆ
Published On ಏಪ್ರಿಲ್ 24, 2024 By ujjawall for ಸಿಟ್ರೊನ್ aircross
- 1 View
- Write a comment
C3 ಏರ್‌ಕ್ರಾಸ್‌ನ ಅತ್ಯಂತ-ಪ್ರಾಯೋಗಿಕ ಆದರೆ ವೈಶಿಷ್ಟ್ಯ-ಸಮೃದ್ಧವಲ್ಲದ ಪ್ಯಾಕೇಜ್‌ನಲ್ಲಿ ಆಟೋಮ್ಯಾಟಿಕ್ ಆವೃತ್ತಿಯನ್ನು ಸೇರಿಸುವುದರಿಂದ ಅದನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆಯೇ?
Citroen C3 Aircross ಅದರ 5+2 ಸೀಟ್‌ನ ಸಂರಚನೆಯೊಂದಿಗೆ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಇದು ಮಾರುಕಟ್ಟೆಯಲ್ಲಿ ಕ್ರೆಟಾ, ಸೆಲ್ಟೋಸ್, ಟೈಗುನ್, ಕುಶಾಕ್, ಆಸ್ಟರ್, ಎಲಿವೇಟ್, ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ವಿರುದ್ಧ ಸ್ಪರ್ಧಿಸುತ್ತದೆ. ಇವುಗಳೆಲ್ಲಾ 5-ಸೀಟರ್ ಎಸ್‌ಯುವಿಗಳಾಗಿದ್ದು, ಸೌಕರ್ಯಗಳು ಮತ್ತು ಪ್ರೀಮಿಯಂ ಕ್ಯಾಬಿನ್ ಅನುಭವಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಮತ್ತೊಂದೆಡೆ ಸಿಟ್ರೊಯೆನ್ ಸೌಕರ್ಯಗಳ ಬದಲಾಗಿ ಪ್ರಾಯೋಗಿಕತೆಗೆ ಹೆಚ್ಚಿನ ನೀಡುವುದೆಂದು ಸ್ಪಷ್ಟವಾಗಿದೆ.
ಇದು ಪ್ರಾಯೋಗಿಕತೆಯ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಿದರೂ,ಈ ಹಿಂದೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಮಿಸ್ ಆಗಿರುವುದು ದೊಡ್ಡ ಹಿನ್ನಡೆಯಾಗಿತ್ತು. ಈಗ 6-ಸ್ಪೀಡ್ ಆಟೋಮ್ಯಾಟಿಕ್‌ನ ಪರಿಚಯದೊಂದಿಗೆ ಅದನ್ನು ಸರಿಪಡಿಸಲಾಗಿದೆ, ಆದರೆ ಇದು ನಿಮ್ಮ ಗಮನವನ್ನು ಸೆಳೆಯಲು ಮತ್ತು ಕಾರನ್ನು ಪರಿಗಣಿಸಲು ಇಷ್ಟು ಸಾಕಾಗುತ್ತದೆಯೇ ?
ಇನ್ನೂ ಸುಂದರ
ಸಿ3 ಏರ್‌ಕ್ರಾಸ್‌ನ ಸ್ಟೈಲಿಂಗ್‌ನ ವಿಚಾರದಲ್ಲಿ ನೀವು ಸಿಟ್ರೊಯೆನ್ ಅನ್ನು ದೋಷಿಸಲಾಗುವುದಿಲ್ಲ. ಹೊಸ ಆಟೋಮ್ಯಾಟಿಕ್ ವೇರಿಯೆಂಟ್‌ಗಳು ಯಾವುದೇ ಬದಲಾವಣೆಗಳನ್ನು ಪಡೆಯುವುದಿಲ್ಲ, ಆದ್ದರಿಂದ ನೀವು ಇನ್ನೂ ಫ್ಲೇರ್ಡ್ ವೀಲ್ ಆರ್ಚ್‌ಗಳೊಂದಿಗೆ ಸ್ನಾಯು ರೀತಿಯ ಮುಂಭಾಗವನ್ನು, ಕೆಳಗಿನ ಏರ್ ಡ್ಯಾಮ್‌ನಲ್ಲಿ ಸ್ಕ್ವಾರಿಶ್-ಇನ್ಸರ್ಟ್‌ಗಳು ಮತ್ತು ಸ್ಪ್ಲಿಟ್ ಎಲ್‌ಇಡಿ ಡಿಆರ್‌ಎಲ್ ಸೆಟಪ್‌ಗಳನ್ನು ಪಡೆಯುತ್ತೀರಿ.
ಸೈಡ್‌ನಿಂದ ಗಮನಿಸುವಾಗ 17-ಇಂಚಿನ ಸ್ಟೈಲಿಶ್ ಆಲಾಯ್‌ಗಳು ಸೊಗಸಾಗಿ ಆಗಿ ಕಾಣುತ್ತವೆ, ಸೈಡ್ ಸಿಲ್‌ಗಳಲ್ಲಿ ಕೆಲವು ಕ್ಲಾಡಿಂಗ್‌ಗಳಿಂದ ಇನ್ನಷ್ಟು ಸೌಂದರ್ಯಭರಿತವಾಗಿಸುತ್ತದೆ. ಹಿಂಭಾಗವು ಇನ್ನೂ ನೇರವಾಗಿದ್ದು, ಟೈಲ್‌ಲೈಟ್‌ಗಳಿಗಾಗಿ ಅದೇ U-ಆಕಾರದ ಔಟ್‌ಲೈನ್ ಮತ್ತು ಹಿಂಭಾಗದ ಬಂಪರ್‌ನಲ್ಲಿ ಕೆಲವು ಕ್ಲಾಡಿಂಗ್ ಅನ್ನು ಒಳಗೊಂಡಿದೆ. ಇದು ಯಾವುದೇ ಸಂದೇಹವಿಲ್ಲದೆ ಸುಂದರವಾಗಿದ್ದರೂ, ಬೃಹತ್ ಮುಂಭಾಗಕ್ಕೆ ಹೋಲಿಸಿದರೆ ಹಿಂಭಾಗವು ಸ್ವಲ್ಪ ಸರಳವಾಗಿ ಕಾಣುತ್ತದೆ.
ಸ್ಟೈಲಿಂಗ್ ಇನ್ನೂ ಸರಳವಾಗಿದೆ ಮತ್ತು ವಿನ್ಯಾಸದ ಒಟ್ಟಾರೆ ಯೋಜನೆಯು ಅಲಂಕಾರಿಕವಾಗಿಲ್ಲ, ಆದರೆ ಕೆಲವೊಮ್ಮೆ ಸರಳವಾದ ವಿಷಯಗಳು ನಿಮ್ಮ ಮುಖದ ಮೇಲೆ ಸಂತಸದ ನಗುವನ್ನು ಹುಟ್ಟುಹಾಕುತ್ತದೆ.
ಬೂಟ್ ಸ್ಪೇಸ್
ಈ ವಿಭಾಗದಲ್ಲಿ ಎರಡು ಭಾಗಗಳಿವೆ. 5-ಆಸನಗಳ C3 ಏರ್‌ಕ್ರಾಸ್ 444-ಲೀಟರ್ ಸ್ಟೋರೆಜ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದು ದೊಡ್ಡದಾಗಿರುವುದು ಮಾತ್ರವಲ್ಲದೆ ಇದು ಆಳವಾಗಿದೆ, ಆದ್ದರಿಂದ ವಿಕೇಂಡ್‌ನ ಫ್ಯಾಮಿಲಿ ಟೂರ್‌ಗಳಿಗೆ ಸಾಕಾಗುವ ಲಗೇಜ್‌ಗಳಿಗೆ ಅಥವಾ ಇನ್ನೂ ಹೆಚ್ಚಿನವುಗಳನ್ನು ಕೊಂಡೊಯ್ಯಲು ಯಾವುದೇ ಸಮಸ್ಯೆಯಿಲ್ಲ. ಮತ್ತೊಂದೆಡೆ, 5+2 ಆಸನಗಳ ಆವೃತ್ತಿಯು ಎಲ್ಲಾ ಸೀಟ್‌ಗಳನ್ನು ಬಳಸುವಾಗ ಬೂಟ್ ಸ್ಪೇಸ್‌ನಲ್ಲಿ ಸ್ವಲ್ಪ ಕಡಿಮೆ ಜಾಗವನ್ನು ನೀಡುತ್ತದೆ, ನಿಖರವಾಗಿ ಹೇಳಬೇಕೆಂದರೆ 44-ಲೀಟರ್.
ಆದರೆ ನೀವು ಮೂರನೇ ಸಾಲಿನ ಆಸನಗಳನ್ನು ಸಂಪೂರ್ಣವಾಗಿ ತೆಗೆದು ಬಿಡಬಹುದು, ಅದು 511-ಲೀಟರ್ ನಷ್ಟು ಜಾಗವನ್ನು ನೀಡುತ್ತದೆ. ಅದು ಇನ್ನೂ ಚಿಕ್ಕದಾಗಿದ್ದರೆ, 839-ಲೀಟರ್‌ಗಳಷ್ಟು ಹೆಚ್ಚಿನ ಶೇಖರಣಾ ಸಾಮರ್ಥ್ಯಕ್ಕಾಗಿ ನೀವು ಎರಡನೇ ಸಾಲನ್ನು ಮಡಚಬಹುದು. ಉತ್ತಮ, ಆದರೆ ನೀವಿಲ್ಲಿ ತೆರೆದಿರುವ ಸೀಟ್ ಮೌಂಟ್ ಬ್ರಾಕೆಟ್‌ಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಅದು ಸೀಟ್ ಮಡಚುವಾಗ ಸಿಗಬಹುದು.
ಇನ್ನೂ ಬೇಸಿಕ್
ಸಾಮಾನ್ಯವಾಗಿ ಗೇರ್‌ಬಾಕ್ಸ್ ಕನ್ಸೋಲ್‌ನ ಹೊರತುಪಡಿಸಿ, ಕ್ಯಾಬಿನ್ ಸ್ಟೈಲಿಂಗ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಡ್ಯಾಶ್‌ಬೋರ್ಡ್ ಸ್ಟೈಲಿಂಗ್ ಅನ್ನು ಇದಕ್ಕಿಂತಲೂ ಚಿಕ್ಕದಾದ C3 ಹ್ಯಾಚ್‌ಬ್ಯಾಕ್‌ನಂತೆಯೇ ನೀಡಲಾಗಿದೆ ಮತ್ತು ನೀವು ಇದರಲ್ಲಿ ಹೆಚ್ಚಿನ ಉತ್ತಮ ಅನುಭವ ನೀಡುವ ಸಾಫ್ಟ್ ಟಚ್ ಮೆಟಿರೀಯಲ್‌ಗಳನ್ನು ಕಾಣುವುದಿಲ್ಲ. ಅದರೆ ಹಾರ್ಡ್ ಆಗಿರುವ ಪ್ಲಾಸ್ಟಿಕ್‌ಗಳಿಂದ ಸರಿಯಾದ ವಿನ್ಯಾಸವನ್ನು ನೀಡಲಾಗಿದೆ, ಇದು ಅನುಭವವನ್ನು ಕಡಿಮೆಗೊಳಿಸುವುದಿಲ್ಲ. ವಿಂಡೋದ ಕಂಟ್ರೋಲ್‌ಗಳನ್ನು ಹೊಂದಿರುವ ಡೋರ್ ಪ್ಯಾಡ್‌ನಲ್ಲಿರುವ ಪ್ಲಾಸ್ಟಿಕ್ ಪ್ಯಾನಲ್ ಇದಕ್ಕೆ ಒಂದು ಅಪವಾದವಾಗಿದೆ, ಇದು ಹಾರ್ಡ್ ಆಗಿದೆ ಮತ್ತು ರಾಜಿ ಮಾಡಿಕೊಂಡಂತಿದೆ.
ಕೆಲವು ಪ್ರೀಮಿಯಂ ಅಂಶಗಳು ಡೋರ್ ಪ್ಯಾಡ್‌ಗಳ ಮೇಲಿನ ಲೆದರ್‌ನ ರೂಪದಲ್ಲಿ ಬರುತ್ತವೆ, ಸ್ಟೀರಿಂಗ್, ಸೆಮಿ-ಲೆಥೆರೆಟ್ ಸೀಟ್‌ಗಳಿಗೆ ಲೆದರ್‌ನ ಕವರ್ ಮತ್ತು ಡ್ರೈವರ್ ಆರ್ಮ್‌ರೆಸ್ಟ್ ಕೂಡ ಪ್ರೀಮಿಯಂ ಆದ ಅನುಭವವನ್ನು ನೀಡುತ್ತದೆ. ಡ್ರೈವರ್ ಆರ್ಮ್‌ರೆಸ್ಟ್ ಅನ್ನು ಪ್ರಯಾಣಿಕರಿಗೂ ಸರಿಹೊಂದಿಸಲು ಸ್ವಲ್ಪ ಅಗಲ ಮಾಡಬಹುದಿತ್ತು.
ಗೇರ್ ಲಿವರ್ ಮತ್ತು ಕನ್ಸೋಲ್ ಸ್ವತಃ ಟಾರ್ಕ್ ಕನ್ವರ್ಟರ್‌ನಂತೆ ಕಾಣುವುದಿಲ್ಲ. ಇದು AMT ಅಲ್ಲ ಮತ್ತು ವಾಸ್ತವವಾಗಿ ಅದರ ಸ್ಟೈಲಿಂಗ್ ಮತ್ತು ಗುರುತುಗಳಿಂದ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಗಿದೆ ಎಂದು ಹೇಳಲು ನೀವು ಕಷ್ಟಪಡುತ್ತೀರಿ.
2 ನೇ ಮತ್ತು 3 ನೇ ಸಾಲಿನ ಅನುಭವ
C3 ಏರ್‌ಕ್ರಾಸ್ ಯಾವಾಗಲೂ ಆರಾಮದಾಯಕವಾದ ಎರಡನೇ ಸಾಲಿನ ಅನುಭವವನ್ನು ನೀಡುತ್ತದೆ ಮತ್ತು ಅದು ಈಗಲೂ ಹಾಗೆಯೇ ಇದೆ. ಕಾಲು, ಮೊಣಕಾಲು ಮತ್ತು ಹೆಡ್‌ರೂಮ್ ಸಾಕಷ್ಟು ಇದೆ, ಎತ್ತರದ ಪ್ರಯಾಣಿಕರಿಗೆ ಮತ್ತು ಸಾಮಾನ್ಯ ಗಾತ್ರದ ಮೂವರು ವಯಸ್ಕರಿಗೆ ಸಹ ಸಾಕಾಗುವಷ್ಟು ಜಾಗವನ್ನು ಹೊಂದಿದೆ. ಆದರೆ, ಮಧ್ಯದ ಪ್ರಯಾಣಿಕರು ಮಾತ್ರ ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ನ ಆಯ್ಕೆಯನ್ನು ಪಡೆಯುವುದಿಲ್ಲ.
ವೈಶಿಷ್ಟ್ಯಗಳನ್ನು ಗಮನಿಸುವಾಗ, ಬ್ಲೋವರ್ ಕಂಟ್ರೋಲ್‌ಗಳೊಂದಿಗೆ ರೂಫ್ ಮೌಂಟೆಡ್ ಎಸಿ ವೆಂಟ್‌ಗಳು 5+2 ಆವೃತ್ತಿಗಳಲ್ಲಿ ಮಾತ್ರ ಬರುತ್ತವೆ ಮತ್ತು ನೀವು ಕೇವಲ ಒಂದೆರಡು USB ಚಾರ್ಜರ್‌ಗಳನ್ನು ಮತ್ತು ಅನುಕೂಲಕ್ಕಾಗಿ ಬಾಟಲ್ ಹೋಲ್ಡರ್ ಅನ್ನು ಮಾತ್ರ ಪಡೆಯುತ್ತೀರಿ. 5+2 ಆವೃತ್ತಿಗಳಿಗೆ ಯಾವುದೇ ಸೆಂಟ್ರಲ್ ಆರ್ಮ್‌ರೆಸ್ಟ್ ಅನ್ನು ನೀಡಲಾಗುತ್ತಿಲ್ಲ.
ಈಗ ಮೂರನೇ ಸಾಲನ್ನು ಪ್ರವೇಶಿಸಲು ಎರಡನೇ ಸಾಲಿನ ಎಡದ ಸೀಟ್‌ನ ಬದಿಯಲ್ಲಿರುವ ಪಟ್ಟಿಯನ್ನು ಎಳೆದಾಗ ಅದು ಉರುಳುತ್ತದೆ ಮತ್ತು ಮಡಚಿಕೊಳ್ಳುತ್ತದೆ. ನೀವು ಪ್ರವೇಶಿಸಲು ಮತ್ತು ಹೊರಹೋಗಲು ಸಾಕಷ್ಟು ಜಾಗವನ್ನು ಪಡೆಯುತ್ತೀರಿ, ಆದರೆ ರೂಫ್‌ನ ಎತ್ತರವನ್ನು ಗಮನದಲ್ಲಿಟ್ಟುಕೊಳ್ಳಿ. ಒಮ್ಮೆ ಮೂರನೇ ಸಾಲಿನ ಸೀಟಿಗೆ ಹೋದರೆ, ನೀವು ದೂರು ನೀಡಲು ಹೆಚ್ಚಿನದನ್ನು ಹೊಂದಿರುವುದಿಲ್ಲ.
ಖಚಿತವಾಗಿ, ಇದರಲ್ಲಿ ತೊಡೆಯ ಭಾಗದಲ್ಲಿನ ಸಪೋರ್ಟ್‌ನಲ್ಲಿ ಕೊರತೆಯಿದೆ, ಹಾಗೆಯೇ ನೀವು 6 ಅಡಿ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದವರಾಗಿದ್ದರೆ ಮಾತ್ರ ನಿಮ್ಮ ಮೊಣಕಾಲುಗಳು ಮುಂದೆ ಇರುವ ಆಸನಗಳನ್ನು ಮುಟ್ಟುತ್ತದೆ. ಅಗಲವು ಇಬ್ಬರಿಗೆ ಸಾಕಷ್ಟಿದೆ, ಆದರೆ ಹೆಡ್‌ರೂಮ್ ಸ್ವಲ್ಪ ಚಿಕ್ಕದಾಗಿದೆ. ಪ್ರಾಯೋಗಿಕ ಅಂಶಗಳನ್ನು ಹೊಗಳುವಂತೆ ಮಾಡುವುದು ಇದರ ಎರಡು ಕಪ್ ಹೋಲ್ಡರ್‌ಗಳು ಮತ್ತು ಯುಎಸ್‌ಬಿ ಚಾರ್ಜರ್‌ಗಳು. ಆದರೆ ಸಣ್ಣ ಹಿಂಭಾಗದ ಕ್ವಾರ್ಟರ್ ಗ್ಲಾಸ್ ಮತ್ತು ಮುಂಭಾಗದಲ್ಲಿರುವ ಎತ್ತರದ ಆಸನಗಳ ಕಾರಣದಿಂದಾಗಿ ಎಲ್ಲಾ ಬದಿಯಿಂದ ಹೊರಗೆ ನೋಡುವುದನ್ನು ನಿರ್ಬಂಧಿಸಲಾಗಿದೆ.
ಆದ್ದರಿಂದ ಇದು ದೂರದ ಪ್ರಯಾಣಗಳಿಗೆ ಆರಾಮದಾಯಕವಾಗಿಲ್ಲ, ಆದರೆ ನಗರದೊಳಗಿನ ಸಣ್ಣ ಪ್ರಯಾಣಗಳಿಗೆ ಇದು ಸಾಕಷ್ಟು ಸೂಕ್ತವಾಗಿದೆ.
ಪ್ರಾಯೋಗಿಕತೆ
ಇದು C3 ಏರ್‌ಕ್ರಾಸ್‌ನ ಪ್ರಬಲ ಅಂಶಗಳಲ್ಲಿ ಒಂದಾಗಿದೆ. ಬಾಗಿಲಿನ ಪಾಕೆಟ್‌ಗಳು ಉತ್ತಮ ಗಾತ್ರದಲ್ಲಿವೆ ಮತ್ತು ಒಂದು-ಲೀಟರ್ ಬಾಟಲಿಗಳನ್ನು ಸುಲಭವಾಗಿ ಇಡಬಹುದು. ನಿಮ್ಮ ಫೋನ್‌ಗಾಗಿ ಮೀಸಲಾದ ಟ್ರೇ ಅನ್ನು ಎಸಿ ವೆಂಟ್‌ಗಳ ಕೆಳಗೆ ಒದಗಿಸಲಾಗಿದೆ ಮತ್ತು ಅದರ ಕೆಳಗೆ ವ್ಯಾಲೆಟ್, ಕೀಗಳು ಮತ್ತು ರಸೀದಿಗಳಂತಹ ಹೆಚ್ಚುವರಿ ವಸ್ತುಗಳಿಗೆ ಸ್ಥಳಾವಕಾಶವಿದೆ. ನಂತರ ನೀವು ಗೇರ್ ನಾಬ್‌ನ ಮುಂದೆ ಎರಡು ಕಪ್ ಹೋಲ್ಡರ್‌ಗಳನ್ನು ಪಡೆಯುತ್ತೀರಿ ಮತ್ತು ಗ್ಲೋವ್ ಬಾಕ್ಸ್ ಸಹ ಉತ್ತಮ ಗಾತ್ರದ್ದಾಗಿದೆ.
ಎರಡನೇ ಸಾಲಿನ ಪ್ರಯಾಣಿಕರು ಸೆಂಟರ್ ಟನಲ್‌ನಲ್ಲಿ ಎರಡು ಕಪ್ ಹೋಲ್ಡರ್‌ಗಳನ್ನು ಮತ್ತು ಸೆಂಟರ್ ಆರ್ಮ್‌ರೆಸ್ಟ್‌ನಲ್ಲಿ (5-ಆಸನಗಳ ಆವೃತ್ತಿಗಳಲ್ಲಿ) ಎರಡನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ. ಮೊದಲೇ ಹೇಳಿದಂತೆ, ಮೂರನೇ ಸಾಲಿನ ಪ್ರಯಾಣಿಕರು ಎರಡು ಮೀಸಲಾದ ಕಪ್ ಹೋಲ್ಡರ್‌ಗಳನ್ನು ಸಹ ಪಡೆಯುತ್ತಾರೆ. ಚಾರ್ಜಿಂಗ್ ಪೋರ್ಟ್‌ಗಳನ್ನು ಗಮನಿಸುವುದಾದರೆ ಮುಂಭಾಗದಲ್ಲಿ 12-V ಸಾಕೆಟ್ ಮತ್ತು ಯುಎಸ್‌ಬಿ ಪೋರ್ಟ್, 2ನೇ ಸಾಲಿಗೆ 2X ಯುಎಸ್‌ಬಿ ಪೋರ್ಟ್‌ಗಳು ಮತ್ತು ಮೂರನೇ ಸಾಲಿಗೆ 2x ಯುಎಸ್‌ಬಿ ಪೋರ್ಟ್‌ಗಳು ಸೇರಿವೆ. ಯಾವುದೇ ಟೈಪ್-ಸಿ ಪೋರ್ಟ್‌ಗಳಿಲ್ಲ, ಪ್ರಸ್ತುತ ಎಲ್ಲಾ ಮೊಬೈಲ್‌ಗಳು ಟೈಪ್-ಸಿಯನ್ನೇ ಬಳಸುವುದರಿಂದ ಇದು ದೊಡ್ಡ ಮಿಸ್ ಅನಿಸಲಿದೆ.
ವೈಶಿಷ್ಟ್ಯಗಳು ಮತ್ತು ಸುರಕ್ಷತೆ
ಈ ಮುಂಭಾಗದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಮ್ಯಾನ್ಯುವಲ್ ಎಸಿ, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂಗಳು, 7-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳು ಸೇರಿದಂತೆ ಪಟ್ಟಿಯಲ್ಲಿ ಇನ್ನೂ ಅನೇಕ ತಂತ್ರಜ್ಞಾನವಿದೆ.
C3 Aircross ಈಗ ರಿಮೋಟ್ ಕಂಟ್ರೋಲ್ ಸ್ಟಾರ್ಟ್/ಸ್ಟಾಪ್ ಅನ್ನು ಪಡೆಯುತ್ತದೆ, ಇದನ್ನು ನೀವು ಕ್ಯಾಬಿನ್ ಅನ್ನು ಪ್ರವೇಶಿಸುವ ಮೊದಲೇ AC ಅನ್ನು ಸಕ್ರಿಯಗೊಳಿಸಲು ಮತ್ತು ತಂಪಾಗಿಸಲು ಬಳಸಬಹುದು. ಆದರೆ ಈ ಸಣ್ಣ ಹೊಸ ಸೇರ್ಪಡೆಯ ಹೊರತಾಗಿಯೂ, ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ವೈಶಿಷ್ಟ್ಯಗಳ ಪಟ್ಟಿ ಇನ್ನೂ ಚಿಕ್ಕದಾಗಿದೆ. ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ AC, ಸನ್‌ರೂಫ್ ಮತ್ತು ಆಟೋ ಡೇ/ನೈಟ್ IRVM ನಂತಹ ತಂತ್ರಜ್ಞಾನಗಳು ಈಗ ಹೆಚ್ಚಿನ ಎಸ್‌ಯುವಿಗಳಲ್ಲಿ ಸಾಮಾನ್ಯವಾಗುತ್ತಿವೆ ಮತ್ತು C3 ಏರ್‌ಕ್ರಾಸ್‌ನಲ್ಲಿಯೂ ಇದನ್ನು ನೀಡಬೇಕಾಗಿತ್ತು.
C3 ಏರ್‌ಕ್ರಾಸ್‌ನ ನಿಜವಾದ ಸುರಕ್ಷತಾ ಪ್ಯಾಕೇಜ್ ಅನ್ನು ವ್ಯಾಖ್ಯಾನಿಸಲು ಯಾವುದೇ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಇಲ್ಲದಿದ್ದರೂ, ಅದರ ಸುರಕ್ಷತಾ ಕಿಟ್ ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅನ್ನು ಒಳಗೊಂಡಿದೆ. ಹೆಚ್ಚು ವಿಸ್ತಾರವಾದ ಸೇಫ್ಟಿ ಕಿಟ್ ಅಲ್ಲ, ಆದರೆ ಇದು ಬೇಸಿಕ್ ಅಂಶಗಳನ್ನು ಒಳಗೊಂಡಿದೆ. ವಿಶೇಷವಾಗಿ ಈ ಬೆಲೆಯನ್ನು ಪರಿಗಣಿಸಿ ಆರು ಏರ್‌ಬ್ಯಾಗ್‌ಗಳು ನೀಡುತ್ತಿರುವುದು ಸ್ವಾಗತಾರ್ಹ.
ಎಂಜಿನ್ ಮತ್ತು ಪರ್ಫಾರ್ಮೆನ್ಸ್
C3 ಏರ್‌ಕ್ರಾಸ್ ತನ್ನ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತದೆ, ಆದರೆ ಹೊಸ ಟಾರ್ಕ್ ಕನ್ವರ್ಟರ್, 6-ಸ್ಪೀಡ್ ಆಟೋಮ್ಯಾಟಿಕ್, ಟಾರ್ಕ್ ಅನ್ನು 15Nm ನಷ್ಟು ಹೆಚ್ಚಿಸುತ್ತದೆ ಮತ್ತು ಒಟ್ಟು 210ಎನ್‌ಎಮ್ ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ.
ನೀವು ವಿಶೇಷವಾಗಿ ಸಿಟಿಯಲ್ಲಿ ಶಾಂತ ರೀತಿಯಲ್ಲಿ ಚಾಲನೆ ಮಾಡುವಾಗ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಗೇರ್‌ನ ಅಪ್‌ಶಿಫ್ಟ್‌ಗಳು ನಯವಾಗಿ ಮತ್ತು ತ್ವರಿತವಾಗಿರುತ್ತವೆ ಮತ್ತು ಹೆಚ್ಚಿನ ಸಮಯ ಇದು ನಿಮಗೆ ಅನುಭವಕ್ಕೆ ಬರುವುದಿಲ್ಲ. ಆದರೆ ನೀವು ಸಹ ಮೈಲ್ಡ್ ಆದ ವೇಗವರ್ಧನೆಯನ್ನು ಕೇಳಿದಾಗ, ಅದು ತ್ವರಿತ ಡೌನ್‌ಶಿಫ್ಟ್ ಮಾಡುತ್ತದೆ ಮತ್ತು ನೀವು ವಿಳಂಬವನ್ನು ಅನುಭವಿಸುವಿರಿ ಮತ್ತು ನಂತರ ಎಕ್ಸಿಲರೇಶನ್‌ನ ಹೆಚ್ಚಳವನ್ನು ಅನುಭವಿಸುವಿರಿ. ನಿಮ್ಮ ಥ್ರೊಟಲ್ ಕಂಟ್ರೋಲ್‌ನಲ್ಲಿ ನೀವು ಸೂಕ್ತವಾದ ಗಮನವನ್ನು ನೀಡದಿದ್ದರೆ, ಡ್ರೈವಿಂಗ್‌ನಲ್ಲಿ ಇದು ಸ್ವಲ್ಪ ಜರ್ಕಿ ಅನುಭವವನ್ನು ನೀಡುತ್ತದೆ. ನೀವು ಸಾಮಾನ್ಯವಾಗಿ ಟಾರ್ಕ್ ಕನ್ವರ್ಟರ್ ಸುಸಜ್ಜಿತ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸುವ ಸುಗಮ ಚಾಲನೆಯ ಅನುಭವವನ್ನು ನೀಡುವುದಿಲ್ಲ. ಆದಾಗಿಯೂ ಇದು ಈ ನಡವಳಿಕೆಯಲ್ಲಿ ಊಹಿಸಬಹುದಾದ ಮತ್ತು ಸ್ಥಿರವಾಗಿರುತ್ತದೆ ಮತ್ತು ಮಾಲೀಕರಾಗಿ ನೀವು ಅದನ್ನು ನಿರ್ವಹಿಸುವುದನ್ನು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.
45kmph ಗಿಂತ ಹೆಚ್ಚಿನ ವೇಗದಲ್ಲಿ ಇದು ಸಾಕಷ್ಟು ಸುಗಮಗೊಳಿಸುತ್ತದೆ ಮತ್ತು ಇದು ಹೆಚ್ಚು ಪರಿಚಿತ ಚಾಲನಾ ಅನುಭವವಾಗಿದೆ. ವೇಗವರ್ಧನೆಯ ಮೃದುತ್ವ ಮತ್ತು ಸ್ಥಿರತೆಯ ಮಟ್ಟ ಮತ್ತೊಮ್ಮೆ ಬಹಳ ರೇಖಾತ್ಮಕವಾಗಿದೆ ಮತ್ತು ಹೆದ್ದಾರಿಯಲ್ಲಿ ಸುಗಮ ಪ್ರಗತಿಯನ್ನು ಸಾಧಿಸಲು ಉತ್ತಮವಾಗಿದೆ. ಆದ್ದರಿಂದ ಮತ್ತೊಮ್ಮೆ, ಮ್ಯಾನುಯಲ್ ಸುಸಜ್ಜಿತ ಕಾರಿನಂತೆ ಇದು ಉತ್ಸಾಹಿಗಳ ಆಯ್ಕೆಯಾಗಿಲ್ಲ ಆದರೆ ದೂರವನ್ನು ಕ್ರಮಿಸಲು ಉತ್ತಮವಾಗಿದೆ.
ಹೆಚ್ಚಿನ ಕಂಟ್ರೋಲ್‌ನ ಆಯ್ಕೆಯನ್ನು ನೋಡುವುದಾದರೆ ಇದರಲ್ಲಿಯೇ ಮ್ಯಾನುಯಲ್ ಮೋಡ್‌ನ ಆಯ್ಕೆ ಇದೆ, ಆದರೆ ಇದು ಶಿಫ್ಟರ್ ನಿಯಂತ್ರಿತವಾಗಿದೆ ಮತ್ತು ಯಾವುದೇ ಪ್ಯಾಡಲ್ ಶಿಫ್ಟರ್‌ಗಳಿಲ್ಲ. ಗೇರ್ ಸೆಲೆಕ್ಟರ್ ಬಗ್ಗೆ ಮಾತನಾಡುತ್ತಾ, ಇದು ತುಂಬಾ ಹಳೆಯ ಸ್ಕೂಲ್ ಸಿಸ್ಟಮ್ ಆಗಿದೆ ಮತ್ತು ಕಾರು ಆರಂಭದಲ್ಲಿ ಹೆಚ್ಚು ಅತ್ಯಾಧುನಿಕ ಟಾರ್ಕ್ ಕನ್ವರ್ಟರ್‌ಗಿಂತ ಹೆಚ್ಚಾಗಿ AMT ಟ್ರಾನ್ಸ್‌ಮಿಷನ್‌ನೊಂದಿಗೆ ಬಂದಿದೆ ಎಂದು ನಾವು ಭಾವಿಸಿದ್ದೇವೆ.
ಇಂಧನ ದಕ್ಷತೆಯ ವಿಷಯದಲ್ಲಿ, ನಾವು ಕಾರುಗಳನ್ನು ಪರೀಕ್ಷಿಸಲು ಅವಕಾಶವನ್ನು ಪಡೆಯದಿದ್ದರೂ, ಸಾಕಷ್ಟು ಸ್ಟಾಪ್-ಸ್ಟಾರ್ಟ್ (ನಿಲ್ಲಿಸಿ-ನಿಲ್ಲಿಸಿ) ಡ್ರೈವಿಂಗ್ ನಂತರ ನಮಗೆ 10.4kmpl ಅನ್ನು ತೋರಿಸುತ್ತಿತ್ತು. ಮತ್ತು ಈ ಸಮಯದಲ್ಲಿ ನಾವು ಎಕ್ಸಿಲರೇಶನ್ ಬಳಸುತ್ತಾ, ಕಾರ್ ಇಂಜಿನ್ ಆನ್‌ನಲ್ಲಿರಿಸಿಯೇ ನಿಲ್ಲಿಸುತ್ತಿದ್ದೆವು, ಇದು ನಮ್ಮ ಶೂಟ್‌ನ ಸಮಯದಲ್ಲಿ ನಮಗೆ ಅವಶ್ಯಕವಾಗಿರುತ್ತಿತ್ತು. ಮತ್ತು ಈ ಅಂಕಿಅಂಶವು ಕೆಲವೊಮ್ಮೆ ಏರುತ್ತಿತ್ತು, ಆದ್ದರಿಂದ ಇದು ನೈಜ ಪ್ರಪಂಚದ ಅನ್ವಯಗಳಲ್ಲಿ ಇದು ಬದಲಾಗಬಹುದು.
ರೈಡಿಂಗ್ ಮತ್ತು ನಿರ್ವಹಣೆ
ಈ ಫ್ರೆಂಚ್ ಕಾರು ತಯಾರಕರು ಅವರ ಕಾರುಗಳ ಸವಾರಿಯ ಗುಣಮಟ್ಟವನ್ನು ಅತ್ಯುತ್ತಮವಾಗಿಸುವ ಕೌಶಲ್ಯವನ್ನು ಹೊಂದಿದ್ದಾರೆ ಮತ್ತು C3 ಏರ್‌ಕ್ರಾಸ್ ಮ್ಯಾನುಯಲ್‌ನೊಂದಿಗೆ ನಾವು ಇದನ್ನು ಮೊದಲ ಬಾರಿಗೆ ಅನುಭವಿಸಿದ್ದೇವೆ. ಆಟೋಮ್ಯಾಟಿಕ್‌ನಲ್ಲಿಯೂ, ವಿಷಯಗಳು ಇನ್ನೂ ಒಂದೇ ಆಗಿವೆ, ಅಂದರೆ ಆರಾಮದಾಯಕವೆಂದು ವರದಿ ಮಾಡಲು ನಾವು ಸಂತೋಷಪಡುತ್ತೇವೆ. ಸಸ್ಪೆನ್ಸನ್ ಎಲ್ಲಾ ಗುಂಡಿಗಳು, ಹೆದ್ದಾರಿ ಅಂತರಗಳು ಮತ್ತು ಏರಿಳಿತಗಳನ್ನು ಸುಲಭವಾಗಿ ನಿಭಾಯಿಸುತ್ತದೆ ಮತ್ತು ಮೌನವಾಗಿ ಮಾಡುತ್ತದೆ.
ಕೆಲವು ಸಮತಲ ಚಲನೆಯನ್ನು ಕೆಲವು ಸಂದರ್ಭಗಳಲ್ಲಿ ಅನುಭವಿಸಬಹುದು, ಆದರೆ ವೇಗವನ್ನು ಕಡಿಮೆ ಮಾಡುವ ಮೂಲಕ ಮತ್ತು ನಿಧಾನಗತಿಯಲ್ಲಿ ಉಬ್ಬುಗಳನ್ನು ನಿಭಾಯಿಸುವ ಮೂಲಕ ಅದನ್ನು ನಿಯಂತ್ರಿಸಬಹುದು. ಸ್ಟೀರಿಂಗ್‌ಗೆ ಉತ್ತಮವಾದ ತೂಕವಿದೆ, ಇದು ನಗರದಲ್ಲಿ ಚಾಲನೆ ಮಾಡುವಾಗ ಭಾರವಾದ ಭಾವನೆಯನ್ನು ನೀಡುತ್ತದೆ, ಆದರೆ ನೀವು ಒಂದು ತಿರುವುಗಳಲ್ಲಿ ಹೋಗುತ್ತಿರುವಾಗ ತನ್ನ ಸಾಮರ್ಥ್ಯವನ್ನು ವ್ಯಕ್ತಪಡಿಸುತ್ತದೆ.
ಲಾವಾಸಾಗೆ (ಪುಣೆಯ ಪಕ್ಕ ಇರುವ ನಗರ) ನಮ್ಮ ಕಿರು ಡ್ರೈವ್‌ನಲ್ಲಿ, ಕಾರ್ ತಿರುವುಗಳಲ್ಲಿ ಸಮತಟ್ಟಾಗಿ ಉಳಿದುಕೊಂಡು ಅದರ ಹಿಡಿತವನ್ನು ಕಾಯ್ದುಕೊಳ್ಳುವ ಮೂಲಕ ನಿರ್ವಹಣೆಯು ನಮ್ಮನ್ನು ಪ್ರಭಾವಿಸಿತು. ಬಾಡಿ ರೋಲ್ ಇತ್ತು, ಆದರೆ ಈ ಗಾತ್ರದ ಕಾರಿಗೆ ಇದು ಹೆಚ್ಚು ಸ್ವೀಕಾರಾರ್ಹವಾಗಿದೆ.
ಅಂತಿಮ ಮಾತು
C3 ಏರ್‌ಕ್ರಾಸ್‌ನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಪರಿಚಯದೊಂದಿಗೆ, ಸಿಟ್ರೊಯೆನ್ ಎಸ್‌ಯುವಿಯ ರಕ್ಷಾಕವಚದಲ್ಲಿ ದೊಡ್ಡ ಕೊರತೆಯನ್ನು ಸರಿಪಡಿಸಿದೆ. ಇದು C3 ಏರ್‌ಕ್ರಾಸ್‌ನ ಸರಳ ಮತ್ತು ಬಹುಮುಖ ಮತ್ತು ಆರಾಮದಾಯಕ ಪ್ಯಾಕೇಜ್‌ಗೆ ಅನುಕೂಲಕರ ಅಂಶವನ್ನು ಸೇರಿಸುತ್ತದೆ. ಖಚಿತವಾಗಿ, ಇದು ಇನ್ನೂ ಉತ್ತಮ ವೈಶಿಷ್ಟ್ಯಗಳನ್ನು ಕಳೆದುಕೊಳ್ಳುತ್ತದೆ, ಆದರೆ C3 ಏರ್‌ಕ್ರಾಸ್ ಎಂದಿಗೂ ಅದರ ಲಕ್ಸುರಿ ಸೌಕರ್ಯಗಳೊಂದಿಗೆ ಜನರನ್ನು ಮೆಚ್ಚಿಸಲು ಪ್ರಯತ್ನಿಸಲಿಲ್ಲ, ಬದಲಿಗೆ ಅದರ ಪ್ರಾಯೋಗಿಕತೆಗೆ ಹೆಚ್ಚಿನ ಆದ್ಯತೆ ನೀಡಿದೆ.
ಇದು ಬೇಸಿಕ್ ಅಂಶಗಳನ್ನು ಸರಿಯಾಗಿ ಮತ್ತು ಹೆಚ್ಚಿನದನ್ನು ಪಡೆಯುತ್ತದೆ, ಇದು ಲಕ್ಸುರಿ ಗುಣಮಟ್ಟದ ರೈಡ್ ಮತ್ತು ಉತ್ತಮವಾದ ಡ್ರೈವಿಬಿಲಿಟಿ ನೀಡುವ ಸಮರ್ಥ ಎಂಜಿನ್ ಅನ್ನು ಒಳಗೊಂಡಿರುತ್ತದೆ. ಆಟೋಮ್ಯಾಟಿಕ್ ಲಭ್ಯತೆಯು ಅದರ ಅನುಕೂಲಕ್ಕೆ ಮತ್ತಷ್ಟು ಅಂಶಗಳನ್ನು ಸೇರಿಸುತ್ತದೆ ಮತ್ತು ಇದು 16 ಲಕ್ಷ ರೂ.ನೊಳಗೆ ಇದೆಲ್ಲವನ್ನೂ ನೀಡುತ್ತದೆ. ಮಾಹಿತಿಗಾಗಿ, ಈ ಸೆಗ್ಮೆಂಟ್‌ನಲ್ಲಿನ ಟಾಪ್-ಸ್ಪೆಕ್ ಎಸ್‌ಯುವಿಗಳು (ಕ್ರೆಟಾ ಮತ್ತು ಅದರಂತಿರುವ ಇತರ ಎಸ್‌ಯುವಿಗಳು) ತಮ್ಮ ಎಲ್ಲಾ ಗಿಮಿಕ್‌ಗಳೊಂದಿಗೆ 20 ಲಕ್ಷ ರೂ.ಗಳ (ಎಕ್ಸ್-ಶೋರೂಮ್) ಬೆಲೆಯ ಮಾರ್ಕ್ ಅನ್ನು ದಾಟಿವೆ.
ಆದ್ದರಿಂದ ನೀವು ಬಜೆಟ್‌ನಲ್ಲಿದ್ದರೆ ಮತ್ತು ವೈಶಿಷ್ಟ್ಯ-ಸಮೃದ್ಧ ಮತ್ತು ಪ್ರೀಮಿಯಂ ಕ್ಯಾಬಿನ್ ಅನುಭವಕ್ಕಿಂತ ಸ್ಥಳಾವಕಾಶ, ಸೌಕರ್ಯ, ಅನುಕೂಲತೆ ಮತ್ತು ಬಹುಮುಖತೆಯು ನಿಮ್ಮ ಪ್ರಮುಖ ಆದ್ಯತೆಗಳಾಗಿದ್ದರೆ, C3 ಏರ್‌ಕ್ರಾಸ್ ನಿಮ್ಮ ಮೊದಲ ಆಯ್ಕೆಯಾಗಿರುತ್ತದೆ.