• English
  • Login / Register

ಹೋಲಿಕೆ ವಿಮರ್ಶೆ : ಹೋಂಡಾ WR-V vs ಹುಂಡೈ i20 ಆಕ್ಟಿವ್

Published On ಮೇ 14, 2019 By siddharth for ಹೋಂಡಾ ಡವೋಆರ್‌-ವಿ 2017-2020

  • 1 View
  • Write a comment

ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

Comparison Review: Honda WR-V vs Hyundai i20 Active

ಸಂಶಯವಿಲ್ಲದಂತೆ ಸಬ್ ರೂ 10 ಲಕ್ಷ ಕಾಂಪ್ಯಾಕ್ಟ್ -SUV/ಕ್ರಾಸ್ಒವರ್ ಸೆಗ್ಮೆಂಟ್ ನಲ್ಲಿ  ಮಾರುತಿ ಸುಜುಕಿ ವಿಟಾರಾ ಬ್ರೆಝ ಗೆದ್ದಿದೆ . ಆದರೆ ನೀವು ಒಂದು ಹೆಚ್ಚು ಮುಂದುವರೆದ ಹ್ಯಾಚ್ ಬ್ಯಾಕ್ ಅನ್ನು SUV-ತರಹದ ಕ್ರಾಸ್ಒವರ್ ಗಿಂತಲೂ ಹೆಚ್ಚು ಬಯಸಿದರೆ ಹೇಗೆ?ನಿಮ್ಮ ಆಯ್ಕೆಗಳಲ್ಲಿ ಸೆಗ್ಮೆಂಟ್ ನ ಪ್ರಾರಂಭದ ಕಾರ್ ಗಳಾದ ವೊಲ್ಕ್ಸ್ವಾಗನ್ ಕ್ರಾಸ್ ಪೋಲೊ, ಟೊಯೋಟಾ ಎಟಿಯೋಸ್ ಕ್ರಾಸ್, ಹುಂಡೈ i20 ಆಕ್ಟಿವ್ ಮತ್ತು ಹೊಸ ಆಕರ್ಷಣೆಯ ಹೋಂಡಾ WR-V ಇವೆಲ್ಲ ಇರಬಹುದು.

Comparison Review: Honda WR-V vs Hyundai i20 Active

ಹುಂಡೈ  i20  ಆಕ್ಟಿವ್ ಅನ್ನು ಇಲ್ಲಿ March 2015 ನಲ್ಲಿ ಬಿಡುಗಡೆ ಮಾಡಲಾಗಿತ್ತು, ಮತ್ತು ಹೋಂಡಾ WR-V  ಈ ವಿಮರ್ಶೆ ಮಾಡುವ ಹೊತ್ತಿಗೆ ಮಾರ್ಕೆಟ್ ಗೆ ಬಂದು ಕೆಲವು ತಿಂಗಳುಗಳು ಆಗಿತ್ತು. ಈ ವಿಭಾಗದ ಕಾರುಗಳನ್ನು ಬಯಸುತ್ತಿದ್ದ ಗ್ರಾಹಕರಿಗೆ ಉತ್ತಮ ಆರಾಮದಾಯಕತೆ ಹಾಗು ದೂರದ ಪ್ರಯಾಣಕ್ಕೆ ಬೇಕಾಗುವ ಮತ್ತು ಕಠಿಣ ರಸ್ತೆಗಳ್ಲಲೂ ಸಹ ಉಪಯೋಗಿಸಬಹುದಾದ ಮತ್ತು ಕುಟುಂಬದ ಜೊತೆಗೆ ವಾರಾಂತ್ಯದ ಕರ್ಥವ್ಯಗಳನ್ನು ನಿಭಾಯಿಸಬಹುದಾದ ಅವಶ್ಯಕತೆ ಇತ್ತು. ನಾವು ಡೀಸೆಲ್ ವೇರಿಯೆಂಟ್ ಗಳನ್ನೂ ಪರೀಕ್ಷಿಸಿದೆವು ಯಾವುಯಾರಲ್ಲಿ ಉತ್ತಮ ಪ್ಯಾಕೇಜ್ ಗಳು ಕೊಡಲಾಗಿದೆ ಎಂದು ತಿಳಿಯಲು.

ಹೊರಗಡೆಯಲ್ಲಿ

Comparison Review: Honda WR-V vs Hyundai i20 Active

ಹೋಂಡಾ ಹಾಗು ಹುಂಡೈ ಅನುಸರಿಸಿರುವ  ಮೂಲ ಸೂತ್ರ ಒಂದೇ ಆಗಿದೆ. ಒಂದು ಹ್ಯಾಚ್ ಬ್ಯಾಕ್ ತೆಗೆದುಕೊಳ್ಳಿ ಅದಕ್ಕೆ ಹೊರನೋಟದ ವಸ್ತುಗಳನ್ನು ಹೆಚ್ಚಿಸಿ, ಸ್ವಲ್ಪ ಯಾಂತ್ರಿಕ ಬದಲಾವಣೆ ಮಾಡಿ, (ಬಹುಷಃ ) ಮತ್ತು ಪ್ರೀಮಿಯಂ ಆಗಿರುವ ಬೆಲೆ ಪಟ್ಟಿ ಕೊಡಿ. ಆದರೆ ಈ ಎರೆಡು ಕಂಪನಿಗಳು ಪಾಲಿಸಿರುವ ವಿಧಾನ ಭಿನ್ನವಾಗಿದೆ. ಒಂದು ನೋಟದಲ್ಲಿ, ಹೋಂಡಾ ಹಿಂದೆ ಸರಿದು ತನ್ನ ಡಿಸೈನ್ ಡ್ರಾಯಿಂಗ್ ಬೋರ್ಡ್ ತೆಗೆದುಕೊಂಡು ಜಾಜ್ ಗಿಂತ ಭಿನ್ನವಾಗಿ ಕಾಣುವ WR-V ಯನ್ನು ತಯಾರಿಸಿದೆ. ಅಷ್ಟರಲ್ಲಿ ಹುಂಡೈ ಸುಲಭದ ಮಾರ್ಗ ಹಿಡಿದಿದೆ 20  ಆಕ್ಟಿವ್ ನಲ್ಲಿ  ಎಲೈಟ್  i20 ನ ಹೋಲಿಕೆ  ಬಹಳಷ್ಟು ಇದೆ.  

Comparison Review: Honda WR-V vs Hyundai i20 Active 

ಇವೆರೆಯನ್ನು ಪಕ್ಕ ಪಕ್ಕ ದಲ್ಲಿ ಇತ್ತು ನೋಡಿ ಮತ್ತು WR-V' ಸ್ವಲ್ಪ ಹೊಸತು, ಮತ್ತು ಧೃಡಕಾಯವಾದ ಡಿಸೈನ್ ನಿಮ್ಮನ್ನು ಆಕರ್ಷಿಸುತ್ತದೆ. ಮುಂಬದಿಯಿಂದ ನಾವು ನೋಡಿದಾಗ, WR-V ಯು ಹೆಚ್ಚು ಆಕ್ರಮಣಕಾರಿ ನೋಟ ಹೊಂದಿದೆ ಅದರ ವಸ್ತುಗಳಾದ ದೊಡ್ಡ ಹೆಡ್ ಲ್ಯಾಂಪ್,  LED DRL ಗಳು, ಮತ್ತು ಕೆತ್ತಲಾಗಿರುವಂತೆ ಇರುವ ಬಾನೆಟ್ ಇದಕ್ಕೆ ಪೂರಕವಾಗಿದೆ. ಇದರ ಡಿಸೈನ್ ವಾಸ್ತವ ವಿಷಯವಾದ ಮೂಲವಾಗಿ ಇದು ಒಂದು ಹ್ಯಾಚ್ ಬ್ಯಾಕ್ ಆಗಿದೆ ಎಂಬುದನ್ನು ಮರೆಮಾಚಿದೆಯೇ? ಇಲ್ಲ, ಆದರೆ ಇದು  i20 ಆಕ್ಟಿವ್ ಗಿಂತಲೂ ಚೆನ್ನಾಗಿದೆ.

Comparison Review: Honda WR-V vs Hyundai i20 Active

ಸದೃಢವಾದ ನೋಟ WR-V ಯ ಮುಂಬಾಗಕ್ಕೆ  ಮಾತ್ರ ಸೀಮಿತವಾಗಿದೆ, ಬದಿ ಗಳಲ್ಲಿ ಇದು ನಿಜವಾಗಿಯೂ ಜಾಜ್ ನಂತೆಯೇ ಕಾಣಿಸುತ್ತದೆ., ಕೆಳಭಾಗದ ಕಪ್ಪು ಕ್ಲಾಡ್ಡಿಂಗ್, ಹೆಚ್ಚಿಸಲ್ಪಟ್ಟ ಗ್ರೌಂಡ್ ಕ್ಲಿಯರೆನ್ಸ್ ಹಾಗು ರೂಫ್ ರೈಲ್ ಹೊರತುಪಡಿಸಿ. ಹಿಂಬದಿ ನೋಡಲು ಹೋದಾಗ ಇದು ಆಗಲಿ ಅಥವಾ ಹೋಗಲಿ ಎಂಬ ಬವಣೆಯ ಡಿಸೈನ್ ಎಂದೆನಿಸುತ್ತದೆ, ಇದರಲ್ಲಿ ಅಪೂರ್ಣತೆ ಎದ್ದು ಕಾಣುತ್ತದೆ. ಈ ವಿಚಾರದಲ್ಲಿ ಹುಂಡೈ  i20 ಆಕ್ಟಿವ್ ಚೆನ್ನಾಗಿದೆ ಎಂದೆನಿಸುತ್ತದೆ, ಇದಕ್ಕೆ  ಸ್ಥಿರವಾದ ನೋಟ ಇದೆ, ಇದು ಯಾವುದೇ ಒಂದು ಭಾಗದಲ್ಲಿ ಮಾತ್ರ ಚೆನ್ನಾಗಿದೆ ಎಂದು ಹೇಳುವ ಹಾಗಿಲ್ಲ, ಹಾಗಂತ ಇದು ಜನರನ್ನು ಆಕರ್ಷಿಸದೇ ಇರುವುದಿಲ್ಲ.

 Comparison Review: Honda WR-V vs Hyundai i20 Active

ಹೋಂಡಾ WR-V  ಯನ್ನು ಇರುವುದಕ್ಕಿಂತ ದೊಡ್ಡದಾಗಿ ಕಾಣುವಂತೆ ಮಾಡಲು ಯಶಸ್ವಿಯಾಗಿದೆ, ಇದಕ್ಕೆ ಸದೃಢ ಎಸೈನ್ ಪೂರಕವಾಗಿದೆ, ವಿಶೇಷವಾಗಿ ಇದು ಎಷ್ಟು ಎತ್ತರವಿದೆ (46mm ನೀವು ಸಂಶಯಪಡುವಂತಿದ್ದರೆ ) i20 ಆಕ್ಟಿವ್ ಗಿಂತಲೂ ಎಂಬ ವಿಷಯ.

Comparison Review: Honda WR-V vs Hyundai i20 Active

ನೀವು ವಾಸ್ತವವಾದ ಅಂಕಿ ಅಂಶಗಳನ್ನು ಪರಿಗಣಿಸಿದಾಗ WR-Vಯು 4mm ಹೆಚ್ಚು ಉದ್ದ, ಮತ್ತು  46mm ಹೆಚ್ಚು ಎತ್ತರ ಇದೆ, ಆದರೆ ಅಗಲದ ವಿಷ್ಯದಲ್ಲಿ ಹಿಂದುಳಿಯುತ್ತದೆ 26mm ಅಷ್ಟು ಮತ್ತು ವೀಲ್ ಬೇಸ್ 15mm ಅಷ್ಟು. ಗಮನಾರ್ಹ ವಿಷಯವೆಂದರೆ WR-V ಯಲ್ಲಿ ಹಲವು ಯಾಂತ್ರಿಕ ವಿಷಯಗಳನ್ನು ನವೀಕರಣಗೊಳಿಸಲಾಗಿದೆ ಅದರ ಹ್ಯಾಚ್ ಸಿಬ್ಲಿಂಗ್ ಗೆ ಹೋಲಿಸಿದರೆ. ವೀಲ್ ಬೇಸ್ ಸಹ ಜಾಜ್ ಗಿಂತ ದೊಡ್ಡದಾಗಿದೆ. ಇದರ ಅರ್ಥ i20 ಆಕ್ಟಿವ್ ನಲ್ಲಿ ಆಂತರಿಕ ಸ್ಥಳ ದ ವಿಚಾರದಲ್ಲಿ  ಹೆಚ್ಚು ಅನುಕೂಲತೆಗಳಿವೆ.

ಆಂತರಿಕಗಳಲ್ಲಿ

Comparison Review: Honda WR-V vs Hyundai i20 Active

ಹೋಂಡಾ WR-V  ಹಾಗು ಹುಂಡೈ i20 ಆಕ್ಟಿವ್ ನಲ್ಲಿ ಕೀಲೆಸ್ಸ್ ಎಂಟ್ರಿ ಮತ್ತು ಗೋ ಫೀಚರ್ ಇದೆ.  ಎರೆದುವು ಕಾರ್ ಗಳ ಡ್ರೈವರ್ ಬದಿಯ ಡೋರ್ ಹತ್ತಿರ ಹೋಗಿರಿ, ಹ್ಯಾಂಡಲ್ ಮೇಲೆ ಇರುವ ಸೆನ್ಸರ್ ಅನ್ನು ಬಳಸಿ ಅನ್ಲಾಕ್ ಮಾಡಿರಿ, ಹಾಗು ಹುಂಡೈ ಹೆಚ್ಚು ಚೆನ್ನಾಗಿದೆ   ಅನ್ನಿಸುತ್ತದೆ. ORVM ಗಳು ಆಟೋಮ್ಯಾಟಿಕ್ ಆಗಿ ಹೊರಚಾಚುತ್ತದೆ ಮತ್ತು ಡೋರ್ ಗಳು ಬರವಾಗಿರುವಂತೆ ಎನಿಸುತ್ತದೆ.  ಇನ್ನೊಂದು ಬದಿಯಲ್ಲಿ WR-V ಯಲ್ಲಿ  ಡೋರ್ ತೆರೆಯುವುದಿಲ್ಲ, ನೀವು ನಿಮ್ಮ ಹೆಬ್ಬೆಟ್ಟನ್ನು ಸೆನ್ಸರ್ ಮೇಲೆ ಸವರಬೇಕಾಗುತ್ತದೆ. ಸೆನ್ಸಾರ್ ಅನ್ನು ಒತ್ತುವುದರಿಂದ ಕಾರ್ ಲಾಕ್ ಆಗುತ್ತದೆ.  

Comparison Review: Honda WR-V vs Hyundai i20 Active

WR-V  ಯ ಒಳಗೆ ಹೋಗಿರಿ ಸ್ಥಳಾವಕಾಶ ಅದ್ಭುತವಾಗಿದೆ  i20  ಆಕ್ಟಿವ್  ಗೆ ಹೋಲಿಸಿದರೆ. ದೊಡ್ಡ ವಿಂಡೋಗಳು ಕೆಳಭಾಗದಲ್ಲಿ ವಿಂಡೋ ಲೈನ್ ಗಳೊಂದಿಗೆ, ಒಂದು ಸನ್ ರೂಫ್, ಕ್ವಾರ್ಟರ್ ಗ್ಲಾಸ್ ಪ್ಯಾನೆಲ್ ಗಳು ಮುಂಭಾಗದಲ್ಲಿ, ಮತ್ತು ಹಿಬಾಗದಲ್ಲಿ ಬಹಳಷ್ಟು ಬೆಳಕು ಕ್ಯಾಬಿನ್ ಒಳಗೆ ಬರಲು ಸಹಕಾರಿಯಾಗಿದೆ. ಇದು ಮತ್ತು ಉದರ ಜೊತೆಗೆ ಎತ್ತರದ ರೂಫ್ WR-V ಯನ್ನು  i20 ಆಕ್ಟಿವ್ ಗಿಂತ ದೊಡ್ಡದಾದ ಆಂತರಿಕೆ ಹೊಂದಿರುವಂತೆ ತೋರುತ್ತದೆ.

Comparison Review: Honda WR-V vs Hyundai i20 Active

ಆಂತರಿಕಗಳಲ್ಲಿ  i20 ಆಕ್ಟಿವ್ ಪ್ರಾರಂಭದಲ್ಲಿ ಕಡಿಮೆ ಸ್ಥಳ ಇರುವಂತೆ ಕಂಡರೂ, ಇದು WR-V ಗಿಂತಲೂ ಹೆಚ್ಚು ಆರಾಮದಾಯಕವಾಗಿ ಕಾಣುತ್ತದೆ. ಇದರ ಸೀಟ್ ಗಳಲ್ಲಿ ಚೆನ್ನಾಗಿರುವ ಬಾಸ್ಟರಿಂಗ್ ಗಳು ಇವೆ, ಸೀಟ್ ನಲ್ಲಿ ಥೈ ಸಪೋರ್ಟ್ ಚೆನ್ನಾಗಿದೆ, ಮತ್ತು ಅದು ದೂರದ ಪ್ರಯಾಣಗಳಲ್ಲಿ ಹೆಚ್ಚು ಆರಾಮದಾಯಕವಾಗಿರುತ್ತದೆ, ಇವು WR-V ನಷ್ಟು ಮೃದುವಾಗಿಲ್ಲದಿದ್ದರೂ ಸಹ.

Comparison Review: Honda WR-V vs Hyundai i20 Active

ನೀವು ಐದು ಪ್ಯಾಸೆಂಜರ್ ಗಳನ್ನೂ ಕಾರ್ ನಲ್ಲಿ ಕೂಡಿಸಿದಾಗ ನಿಮಗೆ  WR-V  ಯ ಆಂತರಿಕ ಸ್ಥಳ ದೊಡ್ಡದಾಗಿದೆ ಎಂಬ ಭಾವನೆ ಹೋಗಿ ಸಾಕಷ್ಟು ಇಲ್ಲ ಎಂಬ ಭಾವನೆ ಬರುತ್ತದೆ. ಅಗಲವಾದ ಕ್ಯಾಬಿನ್ ಮೂರು ಮಂದಿಯನ್ನು ಆರಾಮಾಯಕವಾಗಿ ಕುಳಿತುಕೊಳ್ಳುವಂತೆ i20 ಆಕ್ಟಿವ್ ನಲ್ಲಿ ಸ್ಥಳಾವಕಾಶ ಇದೆ. ಆರಾಮದಾಯಕ ಸೀಟ್ ನ ಹಿಂಬದಿಯ ಕೊನ , ಉತ್ತಮ ಅಂಡರ್ ಥೈ ಸಪೋರ್ಟ್, ಹಿಂಬದಿ ಸೀಟ್ ನ ಪ್ಯಾಸೆಂಜರ್ ಗಾಲ ಅವಶ್ಯಕತೆಯನ್ನು ಚೆನ್ನಾಗಿ ಪೂರೈಸುತ್ತದೆ.ಚಿಕ್ಕ ಹಿನ್ನಡತೆಗಳು ಮತ್ತು  WR-V ಯಲ್ಲಿನ ದಿಟ್ಟದ, ಸರಿಹೊಂದಿಸಲು ಸಾಧ್ಯವಾಗದಂತಹ ಹೆಡ್ ರೆಸ್ಟ್ ಗಳು, ಎತ್ತರದ ಪ್ಯಾಸೆಂಜರ್ ಗಳಿಗೆ ಹೆಚ್ಚು ಆರಾಮದಾಯಕವಾಗಿಲ್ಲದಿರುವಂತೆ ಮಾಡುತ್ತದೆ.

Comparison Review: Honda WR-V vs Hyundai i20 Active

WR-V  ಯಲ್ಲಿ ಐದು ಮಂದಿಯನ್ನು ಅತ್ಯಂತ ಆರಾಮವಾಗಿ ಇರಿಸಲು ಸಾಧ್ಯವಾಗದಿರಬಹುದು, ಆದರೆ ಇದು ಖಂಡಿತವಾಗಿ 4 ನಾಲ್ಕು ಎತ್ತರದ ಪ್ಯಾಸೆಂಜರ್ ಗಳಿಗೆ ಸುಲಭವಾಗಿ ಮತ್ತು ಆರಾಮದಾಯಕವಾಗಿ  ನಗರಗಳ್ಲಲಿ ಸುತ್ತಲೂ ಅನುಕೂಲವಾಗುವಂತೆ ಇರುತ್ತದೆ. ಅವರಿಗೆ ತಮ್ಮ ಒದ್ದ ಲಗೇಜ್ ಗಳನ್ನೂ ಸುಲಭವಾಗಿ ಲಗೇಜ್ ಕಂಪಾರ್ಟ್ಮೆಂಟ್ ನಲ್ಲಿ ಇರಿಸಲು ಅನುಕೂಲವಾಗುತ್ತದೆ.  ಇದರಲ್ಲಿರುವ 363- ಬೂಟ್ ನೊಂದಿಗೆ WR-V ಯು ದೊಡ್ಡದಾಗಿದೆ i20 ಆಕ್ಟಿವ್ ನ 285ಲೀಟರ್ ಬೂಟ್ ಗೆ ಹೋಲಿಸಿದಾಗ. ಇನ್ನೊಂದು ಬಗೆಯಲ್ಲಿ ನೀವು  ವಿಂಗಡಿಸಬಹುದು (60:40) ಮತ್ತು ಮಡಚಬಹುದು ಕೂಡ  ಆಕ್ಟಿವ್ ನ ಹಿಂಬದಿಯ ಸೀಟ್ ಅನ್ನು ಮತ್ತು ವಿಭಿನ್ನವಾದ ಅಳತೆಯುಳ್ಳ ಲಗೇಜ್ ಅನ್ನು ಸಹ ಸುಲಭವಾಗಿ ಇರಿಸಬಹುದು. WR-V ಯ ಹಿಂಬದಿಯ ಸೀಟ್ ಮುಂಭಾಗಕ್ಕೆ ಒಂದು ಭಾಗವಾಗಿ ಮಡಚಬಹುದು. ಹೋಂಡಾ ಇದರಲ್ಲಿ ಜಾಜ್ ನ ಅತ್ಯದ್ಭುತವಾದ ಮ್ಯಾಜಿಕ್ ಸೀಟ್ ಅನ್ನು ಕೊಟ್ಟಿದ್ದರೆ ಬಹಳ ಚೆನ್ನಾಗಿರುತ್ತಿತ್ತು.

ಫೀಚರ್ ಗಳು

Comparison Review: Honda WR-V vs Hyundai i20 Active

ಪೇಪರ್ ನಲ್ಲಿ, ಎರೆಡೂ ಕಾರ್ ಗಳು ಒಂದೇ ರೀತಿ ಫೀಚರ್ ಗಳು ಹೊಂದಿದೆ, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನೇವಿಗೇಶನ್ ಜೊತೆಗೆ ಮತ್ತು ರೇರ್ ವ್ಯೂ ಕ್ಯಾಮೆರಾ ಡಿಸ್ಪ್ಲೇ, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟಾರ್ಟ್/ಸ್ಟಾಪ್ ಬಟನ್, ವಿದ್ಯುತ್ನಿಂದ ಮಡಚಬಹುದಾದ  ORVM ಗಳು, ಟಿಲ್ಟ್  ಮತ್ತು ಟೆಲೆಸ್ಕೋಪಿಕ್ ಅಳವಡಿಕೆಯ ಸ್ಟಿಯರಿಂಗ್ ವೀಲ್ , ಸ್ಟಿಯರಿಂಗ್ ಮೌಂಟೆಡ್ ಮಲ್ಟಿ ಫುನ್ಕ್ಷನ್ ಬಟನ್, ಮತ್ತು ಇನ್ನು ಹೆಚ್ಚು ಇದೆ.

Comparison Review: Honda WR-V vs Hyundai i20 Active

ಈ ಭಿನ್ನತೆಗಳು ನೀವು ಈ ಕಾರು ಗಳಲ್ಲಿರುವ ಫೀಚರ್ ಪಟ್ಟಿಯನ್ನು ಗಮನಿಸಿದಾಗ ತಿಳಿಯುತ್ತದೆ. ನಾವು ಡ್ರೈವ್ ಮಾಡಿದ ಆಕ್ಟಿವ್  i20 ಟೆಸ್ಟ್ ಯೂನಿಟ್ ನಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇರಲಿಲ್ಲ, ಆದರೆ ನಮಗೆ ಹಿಂದಿನ ಅನುಭವದಿಂದ ತಿಳಿದ ವಿಚಾರ (ಗ್ರಾಂಡ್  i10 ಫೇಸ್ ಲಿಫ್ಟ್ ಮತ್ತು ಎಕ್ಸೆನ್ಟ್ ಫೇಸ್ ಲಿಫ್ಟ್ ) ಎಂದರೆ ಹುಂಡೈ ನ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅಳವಡಿಸಬಹುದಾದ  ಯೂನಿಟ್ ಹೆಚ್ಚು ಸರಳವಾಗಿಯೂ ಹಾಗು ಉಪಯೋಗಕಾರಿಯಾಗಿಯೂ ಇದೆ. ಹೋಂಡಾ ದ ಡಿಜಿಪ್ಯಾಡ್ ಸಿಸ್ಟಮ್ ನಲ್ಲಿ ಮಿರರ್ ಲಿಂಕ್ ಸ್ಮಾರ್ಟ್ ಫೋನ್ ಇಂಟಿಗ್ರೇಷನ್ ಮಾತ್ರ ಇದೆ, ಇದರಲ್ಲಿ AA ಅಥವಾ  CP ಸರಳತೆಯ ಕೊರತೆ ಇದ್ದರೂ ಸಿಸ್ಟಮ್ ಹಿನ್ನಡತೆಗೆ ಕಾರಣವಾಗುವ ವಿಚಾರ ಎಂದರೆ ಇದರ ಕಳಪೆ ಗ್ರಾಫಿಕ್ ಗುಣಮಟ್ಟ ಮತ್ತು ಇರಿಸು ಮುರಿಸು ಮಾಡುವ ಗುಣ. ನಾವು ಉಪಯೋಗಿಸಿದ ಯೂನಿಟ್ ನಲ್ಲಿ ಬ್ಲೂಟೂತ್ ಮೂಲಕ ಕರೆಗಳನ್ನು ಸ್ವೀಕರಿಸಲು ಕಷ್ಟಪಡಬೇಕಾಯಿತು.

Comparison Review: Honda WR-V vs Hyundai i20 Active

WR-V ಯಲ್ಲಿರುವ ಟಚ್ ಸ್ಕ್ರೀನ್  ವೇದಿಕೆ ಮೇಲೆ ನಿರ್ಮಾಣವಾಗಿರುವ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ನೋಡಲು ಮೋಜಿನಂತೆ ಕಾಣಬಹುದು ಆದರೆ ಇದನ್ನು ಹೋಗುತ್ತಿರುವಾಗ ಉಪಯೋಗಿಸಲು ಕಷ್ಟವಾಗುತ್ತದೆ ಏಕೆಂದರೆ ನೀವು ಇದನ್ನು ಸರಿಪಡಿಸುವಾಗ ನಿಮ್ಮ ನೋಟವನ್ನು ರಸ್ತೆಯ ಮೇಲಿನಿಂದ ಸರಿಸಬೇಕಾಗುತ್ತದೆ. ಈ ಸಿಸ್ಟಮ್ ಸಹ ತಂಪಾದ ವಾತಾವರಣ ನೀಡಲು ಅಸ್ಟೇನು ಪರಿಣಾಮಕಾರಿಯಾಗಿಲ್ಲ ಹಾಗಾಗಿ ದೊಡ್ಡ ಗ್ರೀನ್ ಹೌಸ್ ತರಹದ  ಬಿಸಿಯಾದ ವಾತಾವರಣ WR-V ಯಲ್ಲಿ ಇರುತ್ತದೆ. i20 ಆಕ್ಟಿವ್ ಸಿಸ್ಟಮ್ ನಲ್ಲಿ ಸಂಪ್ರದಾಯಿಕವಾಗಿದೆ ಆದರೆ ಹೆಚ್ಚು ಕಂಟ್ರೋಲ್ ಗಳನ್ನೂ ಅಳವಡಿಸಾಲಾಗಿದೆ ಮತ್ತು ಹೆಚ್ಚು ಶಕ್ತಿಯುತವಾಗಿದೆ ಕೂಡ.

Comparison Review: Honda WR-V vs Hyundai i20 Active

WR-V ಯಲ್ಲಿ ಎರೆಡು ವಿಶೇಷವಾದ  ಫೀಚರ್ ಗಳಿವೆ  i20 ನಲ್ಲಿ ಇಲ್ಲದಿರುವುದು  ಒಂದು ಸನ್ ರೂಫ್, ಮತ್ತು ಕ್ರೂಸ್ ಕಂಟ್ರೋಲ್. ಸನ್ ರೂಫ್ ನಲ್ಲಿ ಕ್ಲಾತ್ ಕವರ್ ಇದ್ದು ಅದನ್ನು

ಗ್ಲಾಸ್ ಪ್ಯಾನೆಲ್ ಇಂದ ಬೇರೆಯಾಗಿ ತೆಗೆಯಬಹುದು ಹಾಗಾಗಿ WR-V ಯ ಕ್ಯಾಬಿನ್  ಹೆಚ್ಚು ಬೆಳಕು ಆಂತರಿಕಗಳಲ್ಲಿ ಬೀಳುವಹಾಗೆ ಮಾಡಿ  ಹೆಚ್ಚು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಇದರಲ್ಲಿರುವ ಕ್ರೂಸ್ ಕಂಟ್ರೋಲ್ ದೂರದ ಪ್ರಯಾಣಗಳಲ್ಲಿ ಮಲ್ಟಿ ಲೇನ್ ಹೈವೇ ಗಳಲ್ಲಿ ಕಡಿಮೆ ಪರಿಶ್ರಮ ಪಡುವ ಹಾಗೆ ಮಾಡುತ್ತದೆ, ಆದರೆ ಇದು ಕೇವಲ ಡೀಸೆಲ್ ವೇರಿಯೆಂಟ್ ನಲ್ಲಿ ಮಾತ್ರ ದೊರೆಯುತ್ತದೆ. ಹುಂಡೈ  ನಲ್ಲಿ ಇದಕ್ಕೆ ವಿರುದ್ಧವಾಗಿ ಆರು ಏರ್ಬ್ಯಾಗ್ ಗಳನ್ನು ಕೊಡಲಾಗಿದೆ, ಆದರೆ WR-V  ಯಲ್ಲಿ ಕೇವಲ ಎರೆಡು ಇವೆ.

ಪವರ್ ಟ್ರೈನ್ ಗಳು

Comparison Review: Honda WR-V vs Hyundai i20 Active

ಹೋಂಡಾ WR-V ದಲ್ಲಿ  ಹೋಂಡಾ ಭಾರತದ ಮಾರ್ಕೆಟ್ ನಲ್ಲಿ ತಂದಿರುವ ಪ್ರಧಾನವಾದ ಡೀಸೆಲ್ ಮೋಟಾರ್  ಹೊಂದಿದೆ, 1.5-ಲೀಟರ್ 4-ಸಿಲಿಂಡರ್ ಟ್ಯುರ್ಬೋಚಾರ್ಜ ಆಗಿರುವ 'ಅರ್ಥ್ ಡ್ರೀಮ್ಸ್ ಯೂನಿಟ್' 100PS ಗರಿಷ್ಟ ಪವರ್ ಮತ್ತ್ತು 200Nm  ಟಾರ್ಕ್ ಕೊಡುತ್ತದೆ. ಎಂಜಿನ್ ಮುಂಬಾಗದ ವೀಲ್ ಗಳಿಗೆ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಮೂಲಕ ಪವರ್ ಕೊಡುತ್ತದೆ.

Comparison Review: Honda WR-V vs Hyundai i20 Active

ಹುಂಡೈ i20 ಆಕ್ಟಿವ್ ನಲ್ಲಿ ಸ್ವಲ್ಪ ಚಿಕ್ಕದಾದ 1.4-ಲೀಟರ್ 4-ಸಿಲಿಂಡರ್ ಟರ್ಬೊ ಚಾರ್ಜ್  ಯೂನಿಟ್ ಇದ್ದು ಅದು ಹೋಂಡಾ ದಂತಹ ಪವರ್ ಮತ್ತು ಟಾರ್ಕ್ ಅನ್ನು ಕೊಡುತ್ತದೆ, - 90PS ಮತ್ತು  220Nm ಆಗಿರುತ್ತದೆ. ಇದರಲ್ಲಿ ಮುಂಬಾಗದ ವೀಲ್ ಗಳಿಗೆ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಮೂಲಕ ಪವರ್ ಕೊಡಲಾಗುತ್ತದೆ.

ಎರೆಡೂ ಕಾರ್ ಗಳನ್ನೂ ಸ್ಟಾರ್ಟ್ ಮಾಡಿರಿ ನಿಮಗೆ ತಕ್ಷಣ ತೋರುವ ವಿಷಯವೆಂದರೆ  i20 ಆಕ್ಟಿವ್ ಕಡಿಮೆ ಸಡ್ಡು ಮಾಡುತ್ತದೆ ಎಂದು, ಆಂತರಿಕಗಳಲ್ಲಿ ಹಾಗು ಹೊರಗಡೆ ಕೂಡ. WR-V ಯ ಕ್ಯಾಬಿನ್ ಡೀಸೆಲ್ ಎಂಜಿನ್ ನ ಶಬ್ದವನ್ನು ಕ್ಯಾಬಿನ್  ಒಳಗಡೆ ಬರುವಂತೆ ಮಾಡುತ್ತದೆ, ಇತರ ಹೋಂಡಾ ಕಾರ್ ಆದ ಅಮೇಜ್ ನಲ್ಲಿ ಈ ರೀತಿ ಇಲ್ಲ, ಆದರೂ ಇದು i20 ಆಕ್ಟಿವ್ ಗೆ ಹೋಲಿಸಿದಾಗ ಹೆಚ್ಚು ಶಬ್ದಮಾಡುತ್ತದೆ ಎಂದು ತಿಳಿಯುತ್ತದೆ.

Comparison Review: Honda WR-V vs Hyundai i20 Active

 

ಡ್ರೈವ್ ಮಾಡುತ್ತಿರುವಾಗ ನಿಮಗೆ ಈ ಎರೆಡೂ ಕಾರ್ ಗಳು ನಗರಗಳಲ್ಲಿನ ಉಪಯೋಗಕ್ಕೆ ಚೆನ್ನಾಗಿದೆ ಎಂದು. ಎರೆಡೂ ಕಾರ್ ಗಳಲ್ಲಿರುವ ಡೀಸೆಲ್ ಎಂಜಿನ್ ಕಡಿಮೆ ಎಂಜಿನ್ rpm ಗಳಲ್ಲಿ ಹೆಚ್ಚು ಟಾರ್ಕ್  ಕೊಡುವುದರೊಂದಿಗೆ ನಿಮಗೆ ಹೆಚ್ಚು ಹೆಚ್ಚಾಗಿ ಕ್ಲಚ್ ಮತ್ತು ಟ್ರಾನ್ಸ್ಮಿಷನ್ ಗಳನ್ನೂ ಬಳಸುವ ಅವಶ್ಯಕತೆ ಬರುವುದಿಲ್ಲ. ನೀವು ನಗರಗಳಲ್ಲಿನ ತಿರುವುಗಳಲ್ಲಿ ಮತ್ತು ಹೆಚ್ಚು ಟ್ರಾಫಿಕ್ ಇರುವಾಗ ಅಡತಡೆಗಳನ್ನು ನಿಭಾಯಿಸುವಲ್ಲಿ ನಿಮಗೆ ಹೆಚ್ಚು ಮನೋರಂಜನೆ ದೊರೆಯುವುದಾದರೆ  ನಿಮಗೆ i20 ಆಕ್ಟಿವ್ ಹೆಚ್ಚು ಅನುಕೂಲಕರವಾಗಿದೆ ಮತ್ತು WR-V ಗಿಂತಲೂ ಬೇಗ ವೇಗಗತಿ ಪಡೆಯುತ್ತದೆ. WR-V ಯು ಯಾರು ನಗರಗಳಲ್ಲಿ ನಯವಾದ ಡ್ರೈವ್ ಬಯಸುತ್ತಾರೋ ಅಂತಹವರಿಗೆ ಇದರಲ್ಲಿರುವ ಕ್ಲಚ್ ಮತ್ತು ನೇರವಾದ ಪವರ್ ಡೆಲಿವರಿ ಮೆಚ್ಚುಗೆಯಾಗುತ್ತದೆ. ಟ್ರಾನ್ಸ್ಮಿಷನ್ ಹೋಂಡಾ ಗೆ  ಆಶ್ಚರ್ಯವಾಗುವಂತೆ ಚೆನ್ನಾಗಿ ನಿಭಾಯಿಸುತ್ತದೆ.

Comparison Review: Honda WR-V vs Hyundai i20 Active

ಹೈವೇ ಸ್ಪೀಡ್ ವೇಗಗಳಲ್ಲಿ i20 ಆಕ್ಟಿವ್ ಗೇರ್ ಅನ್ನು ಹೆಚ್ಚು ಟಾರ್ಕ್ ಬ್ಯಾಂಡ್ ಅನ್ನು ಉಪಯೋಗಿಸುವಂತೆ ಮಾಡಲಾಗಿದೆ (1500rpm-2750rpm).  80kmph ವೇಗಗತಿಗಳಲ್ಲಿ ಎಂಜಿನ್ 2,000rpm ನಲ್ಲಿ ಕೆಲಸ ಮಾಡುತ್ತಿರುತ್ತದೆ, ನಯವಾದ ತ್ರೋಟಲ್ ಸಾಕು ಹೆಚ್ಚು ವೇಗಗತಿ ಪಡೆಯಲು. ಹೋಂಡಾ ಎಂಜಿನ್ ಈ ವೇಗಗಳಲ್ಲಿ ಅದರದೇ ಆದ ನಿಲುವು ಹೊಂದಿರುತ್ತದೆ, ಮತ್ತು ಇದು ಸ್ವಲ್ಪ ಹೆಚ್ಚಾದ ಸಮಯವನ್ನು ತೆಗೆದುಕೊಳ್ಳುತ್ತದೆ ಹೆಚ್ಚು ವೇಗಗತಿ ಪಡೆಯಲು, ಹೆಚ್ಚಿನ ಗೇರ್ ಗಳು ಇದಕ್ಕೆ ಕಾರಣವಾಗಿರಬಹುದು. ಒಂದು ಖಡಾಖಂಡಿತವಾಗಿ ಹೇಳಬಹುದಾದ ವಿಷಯವೆಂದರೆ , ಹೋಂಡಾ ಕಾರ್ ನೀವು ನಿಶಬ್ದವಾದ ಡ್ರೈವ್ ಬಯಸುವಿರಾದರೆ ನಿಮಗೆ ನೆಚ್ಚುವುದಿಲ್ಲ.

Comparison Review: Honda WR-V vs Hyundai i20 Active

ಹೋಂಡಾ ದ ಹೆಚ್ಚು ಗೇರ್ ಗಳು ನಿಮಗೆ  ಹೈವೇ ಗಳಲ್ಲಿ ಹೆಚ್ಚು ಮೈಲೇಜ್ ಪಡೆಯುವುದಕ್ಕೆ ಸಹಾಯ ಮಾಡುತ್ತದೆ. ನಗರಗಳ ಉಪಯೋಗದಲ್ಲಿ  i20 ಆಕ್ಟಿವ್ ನ ಪ್ರತಿಕ್ರಿಯೆಗೆ ಹೋಲಿಸಿದರೆ ಇದರ ಪ್ರತಿಕ್ರಿಯೆ ಗೌಣವಾಗುತ್ತದೆ . ನಮ್ಮ ತಂತ್ರಜ್ಞಾನಭರಿತ ಮೈಲೇಜ್ ಟೆಸ್ಟ್ ನಲ್ಲಿ ಹೋಂಡಾ  WR-V ನಮಗೆ 25.88kmpl ಕೊಟ್ಟಿತು, ಹುಂಡೈ i20 ಆಕ್ಟಿವ್ ನಲ್ಲಿ ಮೈಲೇಜ್ 23.8kmpl ಮಾತ್ರ ದೊರೆಯಿತು. ನಗರಗಳಲ್ಲಿ i20 16.36kmpl ಕೊಟ್ಟಿತು ಮತ್ತು ಹೋಲಿಕೆಯಲ್ಲಿ   WR-V ಯಲ್ಲಿ 15.35kmpl ದೊರೆಯಿತು.

ರೈಡ್ ಮತ್ತು ಹ್ಯಾಂಡಲಿಂಗ್

Comparison Review: Honda WR-V vs Hyundai i20 Active

ನೀವು ಹೆಚ್ಚಾಗಿ ಆಕ್ರಮಣಕಾರಿಯಾಗಿ ಡ್ರೈವ್ ಮಾಡುವವರಾಗಿಲ್ಲದಿದ್ದರೆ WR-V ಯು ನಿಮಗೆ ನಗರಗಳಲ್ಲಿ ಸುತ್ತಾಡುವುದಕ್ಕೆ ಒಂದು ಒಳ್ಳೆ ಸಂಗಾತಿ. ಇದರಲ್ಲಿ ನಯವಾದ ಪವರ್ ಮತ್ತು ಟಾರ್ಕ್ ಡೆಲಿವರಿ ಇದೆ , ಕ್ಲಚ್ ಸರಳವಾಗಿದೆ, ಸಸ್ಪೆನ್ಷನ್ ರಸ್ತೆಯ ಉಬ್ಬು ತಗ್ಗುಗಳನ್ನು ಚೆನ್ನಾಗಿ ನಿಭಾಯಿಸುತ್ತದೆ, ಹಾಗು ಅಗಲವಾದ ಗ್ಲಾಸ್ ಗಳಿಂದಾಗಿ  ನಿಮಗೆ ಹೊರಗಿನ ನೋಟ ಚೆನ್ನಾಗಿ ಸಿಗುತ್ತದೆ. ಇದರ ಅರ್ಥ i20 ಆಕ್ಟಿವ್ ನಗರಗಳಲ್ಲಿನ ಉಪಯೋಗಕ್ಕೆ ಸರಿಯಿಲ್ಲ ಎಂದಲ್ಲ, ಆದರೆ ಸ್ವಲ್ಪ ಕಠಿಣವಾದ ಡ್ರೈವ್, ಭಾರವಾದ ಕ್ಲಚ್, ಕಡಿಮೆ ಸುತ್ತಲಿನ ನೋಟ, ಇವುಗಳು ಚೀಟಿಯಲ್ಲಿನ ಡ್ರೈವ್ ಗೆ ಸ್ವಲ್ಪ ತೊಡಕುಗಳು ಒಂಟುಮಾಡುತ್ತದೆ. ಎರೆಡೂ ಕಾರ್ ಗಳು ಎಲ್ಲ ರೋಡ್ ಸ್ಥಿತಿಗಳನ್ನು ನಾಟಕವಿಲ್ಲದೆ ನಿಭಾಯಿಸುತ್ತದೆ, ಆದರೆ WR-V ಯಲ್ಲಿ ಹೆಚ್ಚು ಆರಾಮದಾಯಕತೆ ಇದೆ ಎಂದೆನಿಸುತ್ತದೆ. i20 ಆಕ್ಟಿವ್  ನ ಸ್ಟಿಯರಿಂಗ್ WR-V ಯಷ್ಟು ಸರಳವಾಗಿಲ್ಲ(ಅಥವಾ ಪಾರ್ಕಿಂಗ್ ಮಾಡುವ ವೇಗದಲ್ಲಿ ), ಹಾಗಾಗಿ ನೀವು ಡ್ರೈವ್ ಮಾಡುವಾಗ ಸ್ವಲ್ಪ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ.

Comparison Review: Honda WR-V vs Hyundai i20 Active

ನೀವು ಒಂದು ಹೈವೇ  ಯಲ್ಲಿ ಇವನ್ನು ತೆಗೆದುಕೊಂಡು ಹೋದರೆ ಬಹಳಷ್ಟು ಆಶ್ಚರ್ಯ ಕಾದಿರುತ್ತದೆ. ಹುಂಡೈ ನ ಸಸ್ಪೆನ್ಷನ್  ಹೆಚ್ಚು ಸಮತೋಲನದಿಂದ ಕೂಡಿದೆ ಏಕೆಂದರೆ ಇದು ಆಕ್ಟಿವ್ ನ ಮುಂದುವರೆದ ಮಾಡೆಲ್ ಆಗಿದೆ, ಸ್ವಲ್ಪ ಭಾರವಾದ ಸ್ಟಿಯರಿಂಗ್ ಹೆಚ್ಚು ಸಂಯಮ ಮತ್ತು ವಿಶ್ವಾಸ ಮೂಡಿಸುತ್ತದೆ, ಮತ್ತು ಎಂಜಿನ್ ನಲ್ಲಿ ಹೆಚ್ಚು ಶಕ್ತಿ ಇದ್ದು ನಿಮಗೆ ವೇಗವಾಗಿ ಹೋಗಲು ಪ್ರೇರೇಪಿಸುತ್ತದೆ. ಹೋಂಡಾ ದ ನಯವಾದ ಸಸ್ಪೆನ್ಷನ್ ಮತ್ತು ಎತ್ತರವಾದ ರೈಡ್ ಹೈಟ್ ನಿಮಗೆ ವೇಗವನ್ನು 80kmph ಆಸುಪಾಸಿನಲ್ಲಿರುವಂತೆ ತಡೆಯುತ್ತದೆ, ನಯವಾದ ಮತ್ತು ಸಂಪರ್ಕವಿಲ್ಲದ ಸ್ಟಿಯರಿಂಗ್ ಮತ್ತು ನಿಮಗೆ ಡ್ರೈವಿಂಗ್ ನಲ್ಲಿ ಒಳ್ಳೆ ಅನುಭವವಿರಬಹುದು ಎಂಬ ವಿಚಾರ ನಿಮಗೆ ಸ್ಟಿಯರಿಂಗ್ ಬಳಿ ಶಾಂತವಾಗಿರಲು ಸಹಾಯವಾಗುವುದಿಲ್ಲ. ಹಿಂಬದಿ ಸೀಟ್ ಪ್ಯಾಸೆಂಜರ್ ಗಳು ನಯವಾದ  ಸಸ್ಪೆನ್ಷನ್ ಮತ್ತು ಮೆತ್ತನೆಯ ಸೀಟ್ ಗಳು ರೋಡ್ ಬಂಪ್ ಗಳನ್ನೂ ಹೆಚ್ಚುವಂತೆ ಮಾಡುತ್ತದೆ. ಹೆಚ್ಚಿನದಾಗಿ ಕೊಡಲಾಗಿರುವ ಕ್ರೂಸ್ ಕಂಟ್ರೋಲ್ WR-V ಅಷ್ಟೇನು ಅವಶ್ಯಕತೆ ಇರಲಿಲ್ಲ ಎಂದೆನಿಸುತ್ತದೆ , ನೀವು ನಯವಾದ ಮತ್ತು ಹೆಚ್ಚು ದೂರದ ಹಾಗು ನೇರವಾದ ರೋಡ್ ಅನ್ನು ಉಪಯೋಗಿಸಿದಾಗ ಬಿಟ್ಟು. ನೀವು 80kmph ಕೆಳಗೆ ಡ್ರೈವ್ ಮಾಡುತ್ತಿದ್ದಾರೆ ನೀವು ಇದನ್ನು ಉಪಯೋಗಿಸುವ ಸಾಧ್ಯತೆ ಇಲ್ಲ.

Verdict

Comparison Review: Honda WR-V vs Hyundai i20 Active

ಹೋಂಡಾ WR-V ಯು ಒಂದು ಕೆಟ್ಟ ಕಾರ್ ಅಲ್ಲ. ಇದಕ್ಕೆ ಹೊಸತಾದ ಲಕ್ಷಣಗಳು ಇವೆ ಈ ವಿಭಾಗದಲ್ಲಿ, ಹೆಚ್ಚು ವಿಶಾಲವಾಗಿದೆ ಎಂದೆನಿಸುತ್ತದೆ, ನಗರಗಳಲ್ಲಿ ಚೆನ್ನಾಗಿ ಡ್ರೈವ್ ಮಾಡಬಹುದು, ಮತ್ತು ಹೆಚ್ಚು ಮೈಲೇಜ್ ಕೊಡುವ ಎಂಜಿನ್ ಹೊಂದಿದೆ ಸಹ.  ನೀವು ಹೆಚ್ಚಾಗಿ ನಗರಗಳಲ್ಲಿ ನಿಮ್ಮ ಸಮಯವನ್ನು ಕಳೆಯುವಿರಾದರೆ ಮತ್ತು ಕೆಲವೊಮ್ಮೆ ನಗರದಿಂದ ಓರಗೆ ಸುತ್ತಾಡುವಂತಿದ್ದರೆ WR-V ಯು ನೀವು ಕೊಡುವ ಬೆಲೆಗೆ ಸೂಕ್ತವಾಗಿದೆ. ಆದರೆ ನೀವು ಒಂದು ಆಲ್ರೌಂಡರ್ ಬಗ್ಗೆ ಯೋಚಿಸುತ್ತಿದ್ದರೆ i20 ಆಕ್ಟಿವ್ ಉತ್ತಮ ಆಯ್ಕೆ ಆಗಿದೆ. ಉತ್ತಮ ಬಿಲ್ಡ್ ಗುಣಮಟ್ಟ, ನವೀಕರಿಸಲ್ಪಟ್ಟ ಎಂಜಿನ್ , ಮತ್ತು ಹೈವೇ ಗಳಲ್ಲಿನ ನಡವಳಿಕೆಗಳು ಇದನ್ನಿ ಹೋಲಿಕೆಯಲ್ಲಿ ಗೆಲ್ಲುವಂತೆ ಮಾಡುತ್ತದೆ.

Published by
siddharth

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience