ಮೊದಲ ಡ್ರೈವ್ ವಿಮರ್ಶೆ : ಮಾರುತಿ ಸುಜುಕಿ S -ಕ್ರಾಸ್ ಫೇಸ್ ಲಿಫ್ಟ್

Published On ಮೇ 10, 2019 By jagdev for ಮಾರುತಿ sx4 ಎಸ್‌ ಕ್ರಾಸ್

ಮತ್ತೆ ಕೆಲಸಮಾಡಿರುವ ಬಾಹ್ಯಗಳು ಮತ್ತು SHVS ಟೆಕ್ನಾಲಜಿ S -ಕ್ರಾಸ್ ಅನ್ನು ಉತ್ತಮ ಗಾಡಿ ಯಾಗಿ ಮಾಡುತ್ತದೆಯೇ? ನಾವು ತಿಳಿಯೋಣ

Maruti Suzuki S-Cross facelift

ಮಾರುತಿ ಸುಜುಕಿ S -ಕ್ರಾಸ್ ಒಂದು SUV ಅಲ್ಲ. ಆದರೂ ಇದು ಕಾಂಪ್ಯಾಕ್ಟ್ SUV ಗಳಿಗೆ ಈ ಬೆಲೆಯ ವ್ಯಾಪ್ತಿಯಲ್ಲಿ ಬಹಳಷ್ಟು ಪೈಪೋಟಿ ನೀಡಿದೆ. ಪ್ರಿ ಫೇಸ್ ಲಿಫ್ಟ್ S -ಕ್ರಾಸ್ ಒಂದು ಹೆಡ್ ಟರ್ನರ್ ಆಗಿರಲಿಲ್ಲ , ಇದರ ಹೆಚ್ಚು ಮಾರಾಟವಾಗುವ ವೇರಿಯೆಂಟ್ ಗಳಲ್ಲಿ ಸಾಮಾನ್ಯವಾದ  1.3-litre 90PS  ಡೀಸೆಲ್ ಎಂಜಿನ್ ಇತ್ತು. ಕಾಂಪ್ಯಾಕ್ಟ್ SUVಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಇರುವಾಗ ಈ ದೊಡ್ಡ ಕ್ರಾಸ್ಒವರ್ ಒಂದು ಭದ್ರವಾದ ಸ್ಥಾನ ಗಳಿಸಿತ್ತು ಮತ್ತು ಮಾರುತಿ ಸುಜುಕಿ ಯ ಮಾರಾಟ ಪಟ್ಟಿಗೆ ಬಹಳಷ್ಟು ಅಂಕಿಗಳನ್ನು ಕೂಡಿಸಿತ್ತು .

ಇದರ ಬಿಡುಗಡೆಯ ಎರೆಡು ವರ್ಷಗಳ ನಂತರ ಮಾರುತಿ ಸುಜುಕಿ  S -ಕ್ರಾಸ್ ಅನ್ನು ಮುಂಚೂಣಿಯಲ್ಲಿರಿಸಲು ಪ್ರಯತ್ನಿಸುತ್ತಿದೆ , ಇದನ್ನು ೨೦೧೭ ನ್ ಹಬ್ಬಗಳ ದಿನಗಳ ಮುಂಚಿನ ದಿನಗಳಲ್ಲಿ ಹೊರತರಲು ಪ್ರಯತ್ನಿಸುತ್ತಿದೆ. ಇದರಫೇಸ್ ಲಿಫ್ಟ್ ಹೆಚ್ಚು ಫೀಚರ್ ಗಳನ್ನೂ ಪಡೆದಿದೆ, ಸ್ವಲ್ಪ ಮಟ್ಟಿಗೆ ಬದಲಿಸಲಾದ ಯಾಂತ್ರಿಕಗಳು, ಮತ್ತು ಹೊಸ ಟೆಕ್ನಾಲಜಿ ಸಹ. ಆದರೆ S -ಕ್ರಾಸ್ ಫೇಸ್ ಲಿಫ್ಟ್ ದೊಡ್ಡ ಮತ್ತು ಹೆಚ್ಚು ಶಕ್ತಿ ಹೊಂದಿದಂತಹ 1.6-litre, 120PS ಡೀಸೆಲ್ ಎಂಜಿನ್ ಅನ್ನು ಹಿಂಪಡೆದಿದೆ.

Maruti Suzuki S-Cross facelift

ಮತ್ತೆ ಕೆಲಸ ಮಾಡಿರುವ ವಿಷಯಗಳು ಮತ್ತು ಸೇರ್ಪಡಿಕೆಗಳು ಒಟ್ಟುಗೂಡಿ S -ಕ್ರಾಸ್ ಅನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆಯೇ? ದೊಡ್ಡ ಎಂಜಿನ್ ಅನ್ನು ಬಿಟ್ಟಿರುವುದು ಏನಾದರೂ ಪರಿಣಾಮ ಬೀರುತ್ತದೆಯೇ ? ನಾವು ತಿಳಿಯೋಣ

ನೈಜ ಪರಿಶೀಲನೆ : ಮಾರುತಿ ಸುಜುಕಿ S -ಕ್ರಾಸ್  ಕಳೆದ ೧೨ ತಿಂಗಳಲ್ಲಿ ರೆನಾಲ್ಟ್ ಡಸ್ಟರ್ ಗಿಂತ ಹೆಚ್ಚು ಮಾರಾಟವಾಗಿದೆ.

ಬಾಹ್ಯ

Maruti Suzuki S-Cross facelift

ಫೇಸ್ ಲಿಫ್ಟ್ ಗಿಂತಲೂ ಮುಂಚಿನ S -ಕ್ರಾಸ್ ಡಿಸೈನ್ ಅಷ್ಟೊಂದು ಆಕರ್ಷಕವಾಗಿರಲಿಲ್ಲ ಮತ್ತು ಮಾರುತಿ ಸುಜುಕಿ ಅದರ ನ್ಯೂನತೆಗಳನ್ನು ಕಡಿಮೆಮಾಡಲು ಬಹಳಷ್ಟು ಪ್ರಯತ್ನಿಸಿದೆ. ಬಹಳಷ್ಟು  ಸೌನ್ದರ್ಯವರ್ಧಕಗಳು S -ಕ್ರಾಸ್ ನ ಮುಂಬಾಗದ ಮೇಲೆ ಮಾಡಲಾಗಿದೆ. ಇದಕ್ಕೆ  ರಿ  ಡಿಸೈನ್ ಮಾಡಲಾದ ಮುಂದಿನ ಬಂಪರ್, ದೊಡ್ಡ ಮತ್ತು ಅಗಲವಾದ ಫ್ರಂಟ್ ಗ್ರಿಲ್, ನವೀಕರಿಸಲಾದ ಬಾನೆಟ್, ಮತ್ತು ನುಣುಪಾದ ಹೆಡ್ ಲ್ಯಾಂಪ್ ಡಿಸೈನ್ ಕೊಡಲಾಗಿದೆ . ಹತ್ತಿರದಿಂದ ಪರೀಕ್ಷಿಸಿದಾಗ ಕೆಲವು ವಿಷಯಗಳಾದ ವರ್ಟಿಕಲ್ ಸ್ಲಾಟ್ ಗಳು, ಮುಂದಿನ ಗ್ರಿಲ್, ಪ್ಲಾಸ್ಟಿಕ್ ಕ್ಲಾಡ್ಡಿಂಗ್, ಫ್ರಂಟ್ ಬಂಪರ್ ಮೇಲೆ, ಇವೆಲ್ಲವೂ SUV ಗಳನ್ನೂ ನೆನೆಪಿಸುತ್ತದೆ. ಮುಂದಿನಬಾಗ ಎದ್ದು ಕಾಣುವಂತಿರುವುದು ನಿಜವೇ, ಯಾರು S -ಕ್ರಾಸ್  ಹಳೆ ಡಿಸೈನ್ ಗೆ ಹೊಂದಿಕೊಂಡಿದ್ದರೋ ಅವರಿಗೆ ಇದು ಸ್ವಲ್ಪ ಹೆಚ್ಚಾಯಿತು ಎಂದು ಎನಿಸಬಹುದು.

Maruti Suzuki S-Cross facelift

ಪಕ್ಕದ ಬಾಗದಿಂದ ನೋಡಿದಾಗ ಮುಂದಿನ ಗ್ರಿಲ್ ಸ್ವಲ್ಪ ಬಾಗಿದಂತೆ ಕಾಣುತ್ತದೆ. ಹೆಡ್ ಲ್ಯಾಂಪ್ ಗಳು ಚೆನ್ನಾಗಿದ್ದು  ಮುಂಬಾಗವನ್ನು ಹಿಂದಿಗಿಂತಲೂ ಹೆಚ್ಚು ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಮಿಕ್ಕೆಲ್ಲವೂ ಹಿಂದಿನದಂತೆಯೇ ಇದೆ, ಹೊಸ ಅಲಾಯ್ ವೀಲ್ ಡಿಸೈನ್ ಬಿಟ್ಟು. ಟೈಲ್ ಲ್ಯಾಂಪ್ ಗಳು ಬದಲಾಗಿರುವ ಶೈಲಿಯಲ್ಲಿ ಬರುತ್ತಿದ್ದು SHVS  ಬ್ಯಾಡ್ಜ್ ಬೂಟ್ ಮೇಲೆ ಇದ್ದು ಮಿಕ್ಕೆಲ್ಲವೂ ಹಿಂದಿನದರಂತೆಯೇ ಸಾದಾರಣವಾಗಿ ಇದೆ. ಮಾರುತಿ ಸುಜುಕಿ S -ಕ್ರಾಸ್ ಗೆ  ಐದು ಹೊರಗಿನ ಬಣ್ಣಗಳ ಆಯ್ಕೆಯನ್ನು ಕೊಡುತ್ತದೆ, ಆದರೂ ಅರ್ಬನ್ ಬ್ಲೂ ಬಣ್ಣವನ್ನು ಹೊಸ ಬ್ಲೂ ಕಲರ್ ನಿಂದ ಬದಲಿಸಲಾಗಿದೆ, ಮತ್ತು ಇದು ಮಾರುತಿ ಸುಜುಕಿ ಸಿಯಾಜ್ ನಾಲ್ಲುವು ಸಹ ಇದೆ.

Maruti Suzuki S-Cross facelift

ಮಾರುತಿ ಸುಜುಕಿ S- ಕ್ರಾಸ್ ಬಹಳಷ್ಟು ಜನರಿಗೆ ಒಂದು ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಗಿ ಕಾಣಿಸಬಹುದು. ಇದನ್ನು 4m ಒಳಗಿನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳಿಗೆ ಹೋಲಿಸಿದರೆ ದೊಡ್ಡದಾಗಿ ಕಾಣಬಹುದು. ಇದು SUV  ಗಳೊಂದಿಗೆ ಆತ್ಮವಿಶ್ವಾಸದೊಂದಿಗೆ ನಿಲ್ಲುತ್ತದೆ.  ಇದು  4300mm ಉದ್ದ  ಮತ್ತು 1785mm ಅಗಲ ಇದ್ದು S- ಕ್ರಾಸ್ ಫೇಸ್ ಲಿಫ್ಟ್ ಹುಂಡೈ ಕ್ರೆಟಾ ಗಿಂತಲೂ 30mm  ಉದ್ದ, 5mm. ಅಗಲ ಇದೆ. ಫೇಸ್ ಲಿಫ್ಟ್ ನೊಂದಿಗೆ ಗ್ರೌಂಡ್ ಕ್ಲಿಯರೆನ್ಸ್ ಸಹ ಮುಂದುವರೆದಿದೆ ಮತ್ತು ಇದು 137mm (laden) ಇದ್ದು  ದೊಡ್ಡದಾದ ಟೈರ್ ಗಳು ಇದಕ್ಕೆ ಕಾರಣವಾಗಿದೆ. ಹೊಸ  215/60 R16 ವೀಲ್ ಹಿಂದಿನದಕ್ಕಿಂತ ಅಗಲವಾಗಿದೆ, 205/60 R16 ಮುಂದುವರೆದಿದೆ.

 

Maruti Suzuki S-Cross facelift

Dimensions

 

S-Cross facelift

S-Cross pre-facelift

L x W x H

4300 x 1785 x 1595

4300 x 1765 x 1590

Wheelbase

2600

2600

Tyre size

215/60 R16

205/60 R16

Boot space

353

353

ಆಂತರಿಕಗಳು

Maruti Suzuki S-Cross facelift

ನೀವು ಅಂತರಿಕಗಳಲ್ಲಿ ಬದಲಾವಣೆಗಳನ್ನು ಕಂಡುಹಿಡಿಯಲು ಸೂಕ್ಷ್ಮದರ್ಶಕ ಬೇಕಾಗುತ್ತದೆ. ಕೆಲವು ವಿಷಯಗಳಾದ SHVS ಲೈಟ್ ಗಳು ಇನ್ಸ್ಟ್ರುಮೆಂಟ್ ಪ್ಯಾನೆಲ್ ನಲ್ಲಿ  ಇರುವುದು, ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಸ್ಮಾರ್ಟ್ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್ ನಲ್ಲಿ ಇರುವುದು, ನುಣುಪಾದ ಮತ್ತು ಮೃದುವಾದ ಮೇಲ್ಪದರಗಳ್ನ್ನು ಹೊಂದಿರುವ  ಡ್ಯಾಶ್ಬೋರ್ಡ್ ಮೇಲೇರುವ ಪ್ಲಾಸ್ಟಿಕ್ ಹೊರತಾಗಿ ಏನು ಬದಲಾವಣೆಗಳು ಇಲ್ಲ.

Maruti Suzuki S-Cross facelift

S-ಕ್ರಾಸ್ ನ ಕ್ಯಾಬಿನ್ ಸೌಕರ್ಯಯುಕ್ತ ಆಂತರಿಕಗಳನ್ನು ಹೊಂದಿತ್ತು, ಹಾಗು ಹೊಂದಿದೆ ಕೂಡ. ಇದರಲ್ಲಿ ಬಹಳಷ್ಟು  ಹೆಡ್ ರೂಮ್ ಮತ್ತು ಲೆಗ್ ರೂಮ್ ಗಳು ಮುಂದೆ ಹಾಗು ಹಿಂದೆಯೂ ಸಹ  ಇದ್ದು, ಹಿಂದಿನ ಸೀಟ್ ನಲ್ಲೂ ಮೂರು ಮಂದಿ ಕುಳಿತುಕೊಳ್ಳಬಹುದು, ಬೇರೆ ಹ್ಯಾಚ್ ಬ್ಯಾಕ್ ಗಳಿಗೆ ಹೋಲಿಸಿದರೆ ಇನ್ನೂ ಚೆನ್ನಾಗಿದೆ. ಹೊರಗಿನ ಶಬ್ದದ ತಡೆಯುವಿಕೆಯು ಮೆಚ್ಚುವಂತದ್ದಾಗಿದೆ, ಕ್ಯಾಬಿನ್ ವಿಸ್ತಾರವಾಗಿದೆ ಎಂದೆನಿಸುತ್ತದೆ.ಎಲ್ಲಬಾಗಗಳ ಕಪ್ಪು ಬಣ್ಣದ ಥೀಮ್  ಇದನ್ನು ಸ್ಪರ್ಧಾತ್ಮಕವಾಗಿ ಕಾಣುವಂತೆ ಮಾಡುತ್ತದೆ. ಬುದ್ದಿವಂತಿಕೆಯಿಂದ ಉಪಯೋಗಿಸಿದ ಸಿಲ್ವರ್ ಮತ್ತು ಕ್ರೋಮ್ ಗಳು ಪ್ರೀಮಿಯಂ ಅಗರುವುದನ್ನು ವೃದ್ಧಿಸುತ್ತದೆ.

 

Maruti Suzuki S-Cross facelift

ಇದರಲ್ಲಿ ದೂರುವಂತಹುದು ಏನು ಇಲ್ಲವಾದರೂ, ಮಾರುತಿ ಸುಜುಕಿ ಯು ಇದರಲ್ಲಿ ಡ್ರೈವರ್ ಸೈಡ್ ಪವರ್ ವಿಂಡೋ ಅಪ್ / ಡೌನ್ ಸ್ವಿಚ್, ಮತ್ತು ಸ್ತೀಯಿಂಗ್ ಕಂಟ್ರೋಲ್ ವೈಟ್ ಬ್ಯಾಕ್ ಲೈಟ್ ನಲ್ಲಿ ಕೊಡಬಹುದಾಗಿತ್ತು, ಆರೆಂಜ್ ನ ಹೊರತಾಗಿ. ಇದು ಬಿಳಿ ಹಿಂಬಾಗ ಬೆಳಕನ್ನು ಹೊಂದಿರುವ ಇನ್ಸ್ಟ್ರುಮೆಂಟ್ ಕನ್ಸೋಲ್, ಮತ್ತು ಏರ್ ಕಾನ್ ಡಿಸ್ಪ್ಲೇಸ್ ಯೂನಿಟ್ ಗೆ ಸರಿಹೊಂದುವುದಿಲ್ಲ. ಲೆಥರ್ ಹೊದಿಕೆ ಇರುವ ಸ್ಟಿಯರಿಂಗ್ ವೀಲ್ ಸ್ವಲ್ಪ ಜಾರುವಂತೆ ಇದ್ದು , ಇದಕ್ಕೆ ಸ್ವಲ್ಪ ಗ್ರಾಯಿನ್ ಹಾಗು ರಬ್ಬರ್ ಹೊರಮೈ ಇದ್ದಿದ್ದರೆ ಚೆನ್ನಾಗಿರುತಿತ್ತು. ಹಿಂಬದಿಯ ಏರ್ ಕಾನ್ ವೆಂಟ್ ಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು .  ಈ ವಿಚಾರಗಳು ಅಸ್ಟೇನು ಮುಖ್ಯವಲ್ಲದಿದ್ದರೂ, ಅವು ಕ್ಯಾಬಿನ್ ಆಕರ್ಷಣೆಯನ್ನು ಹೆಚ್ಚಿಸುತ್ತಿದ್ದವು, ಮತ್ತು ಬೆಲೆಯೂ ಸಹ ಅಸ್ಟೇನು ಹೆಚ್ಚುತ್ತಿರಲಿಲ್ಲ.

Maruti Suzuki S-Cross facelift

ಎಂಜಿನ್ ಮತ್ತು ಟ್ರಾನ್ಸ್ಮಿಷನ್

ಈ S -ಕ್ರಾಸ್ ಫೇಸ್ ಲಿಫ್ಟ್  1.3-litre 90PS ಡೀಸೆಲ್ ಎಂಜಿನ್ ನಿಂದ ಪವರ್ ಪಡೆಯಲು ಮುಂದುವರೆಸಿದೆ. ಇದರೊಂದಿಗೆ ೫-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಸಹ ಇದೆ.  ಫೇಸ್ ಲಿಫ್ಟ್ ಗಿಂತಲೂ ಮುಂಚೆಯ S -ಕ್ರಾಸ್ ನಲ್ಲಿ ಇದೆ ಎಂಜಿನ್ -ಟ್ರಾನ್ಸ್ಮಿಷನ್ ಜೋಡಿ ಅಳವಡಿಸಲಾಗಿತ್ತು. ಮತ್ತು ಇದು 1.6-litre ಡೀಸೆಲ್ ಎಂಜಿನ್ ಗೀತಲೂ ಸ್ವಲ್ಪ ಮುಂದುವರೆದಿತ್ತು. ಇದು ಒಂದು 120PS ಎಂಜಿನ್ ಅನ್ನು ಹಿಂಪಡೆಯಲು ಕಾರಣವಾಯಿತು.

Maruti Suzuki S-Cross facelift

S - ಕ್ರಾಸ್  ಫೇಸ್ ಲಿಫ್ಟ್ ಲ್ಲಿಯ 1.3-litre ಡೀಸೆಲ್ ಎಂಜಿನ್  ಹಿಂದಿನಂತೆಯೇ ಪವರ್ ಮತ್ತು ಟಾರ್ಕ್ ನೀಡುತ್ತದೆ., ಮತ್ತು ಇದನ್ನು SHVS tech ನೊಂದಿಗೆ ವೃದ್ಧಿಸಲಾಗಿದೆ ಮಾರುತಿ ಸುಜುಕಿ ಹೇಳುವಂತೆ SHVS ನ ಅಳವಡಿಕೆ  ಮೈಲೇಜ್ ಅನ್ನು ಹೆಚ್ಚಿಸುತ್ತದೆ, ಮತ್ತು ಎದ್ದು ಕಾಣುವಂತಹ ವಿಚಾರವೆಂದರೆ  ಕಡಿಮೆ ವೇಗದಲ್ಲಿಯ ಡ್ರೈವಬಿಲಿಟಿ ಯಾ ಸುಧಾರಣೆ ಮಾಡಲಾಗಿದೆ. ನಿಮಗೆ ಎಳ್ಳು ಟರ್ಬೊ ಲ್ಯಾಗ್ ಇದೆ ಎಂದೆನಿಸುತ್ತದೆಯೋ ಅಲ್ಲಿ ಸ್ಮಾರ್ಟ್  ಹೈಬ್ರಿಡ್ ಸಿಸ್ಟಮ್ ಎಲೆಕ್ಟ್ರಿಕ್ ಮೋಟಾರ್ ಉಪಯೋಗಿಸಿ  ಪವರ್ ಅನ್ನು ವೃದ್ಧಿಪಡಿಸುತ್ತದೆ.

ನೀವು ಇದನ್ನು ನಗರಗಲ್ಲಿನ ಓಪನ್ ರೋಡ್ ಗಳಲ್ಲಿ ತೆಗೆದುಕೊಂಡು ಹೋದಾಗ ನಿಮಗೆ 1.6-litre ಯೂನಿಟ್  ಇರಬೇಕಾಗಿತ್ತು ಎಂದೆನಿಸುತ್ತದೆ.  ಇದರ  1.3-litre ಎಂಜಿನ್ S -ಕ್ರಾಸ್ ಅನ್ನು ಮೂರು  ಅಂಕೆಯ ವೇಗ ಮತ್ತು  ಕ್ರೂಸ್  ಗೆ ಅನುಕೂಲವಾಗಿರುತ್ತದೆ. ಆದರೆ ಇದು ಓವರ್ಟೇಕ್ ಮಾಡುವಾಗ ಬಹಳ ಶ್ರಮ ಪಡುವಂತೆ ಕಾಣುತ್ತದೆ. ಇದು ಅತಿ ಹೆಚ್ಚಾದ   ಟಾರ್ಕ್  ಅನ್ನು 1750rpm ನಲ್ಲಿ ಪಡೆದಾಗಲೂ ಸಹ. ಇಂತಹ ಸಮಯದಲ್ಲಿ ಒಂದು ಅಥವಾ ಎರೆಡು ಗೇರ್ ಗಳನ್ನೂ ಬದಲಾಯಿಸುವ ಅವಶ್ಯಕತೆ ಇರುತ್ತದೆ. ನೀವು 2500rpm ದಾಟಿದ ನಂತರ, S -ಕ್ರಾಸ್ ಹೆಚ್ಚು ವೇಗವಾಗಿ  ಎಳೆಯುವಂತೆ ಕಾಣುತ್ತದೆ. ಗೇರ್ ಬದಲಾವಣೆಗಳು ಸುಲಭವಾಗಿದ್ದು ಮತ್ತು ಸರಿಯಾಗಿ  ಜೋಡಣೆಯಾಗುವಂತಿದ್ದು, ಕ್ಲಚ್ ಕೂಡ ಸುಲಭವಾಗಿದೆ.

Specifications

Displacement

1248cc

Maximum power

90PS@4000rpm

Maximum torque

200Nm@1750rpm

Transmission

5-speed manual

Kerb Weight

1240kg

ರೈಡ್ ಮತ್ತು ಹ್ಯಾಂಡಲಿಂಗ್

Maruti Suzuki S-Cross facelift

S-ಕ್ರಾಸ್ ಹಿಂದಿನಂತೆಯೇ ಸಸ್ಪೆನ್ಷನ್  ಹೊಂದಿದೆ, ಆದರೆ ಇದನ್ನು ಹೊಸ ಮತ್ತು ದೊಡ್ಡದಾದ ವೀಲ್ ಗಳಿಗೆ ಟ್ಯೂನ್ ಮಾಡಲಾಗಿದೆ. S-ಕ್ರಾಸ್ ಹೈಲೈಟ್ ಕ್ಯಾಬಿನ್ ನ ಹಿಡಿತ ಹಾಗು ಉತ್ತಮ ರೈಡ್ ಆಗಿದೆ. ರಸ್ತೆಯ ಅಂಕು ಡೊಂಕುಗಳ ಅಳತೆಗಳು ಎಷ್ಟೇ ವೆತ್ಯಾಸದ್ದಾಗಿರಲಿ, ಸಸ್ಪೆನ್ಷನ್ ಸೆಟ್ ಅಪ್ ನಿಮಗೆ ಹೆಚ್ಚು ಎತ್ತಿಹಾಕುವಂತಹ ಅನುಭವವನ್ನು ಕೊಡುವುದಿಲ್ಲ. ಹೌದು, ಇದರಲ್ಲಿ ಸ್ವಲ್ಪ ಬಾಡಿ ರೋಲ್ ಇದೆ, ಆದರೆ ಇದರ ಅನುಭವ ನೀವು ಮೂರು ಅಂಕೆಯ ವೇಗಗತಿಯಲ್ಲಿ S-ಕ್ರಾಸ್ ಅನ್ನು  ಓಡಿಸಿದಾಗ ಬರುತ್ತದೆ.

Maruti Suzuki S-Cross facelift

S-ಕ್ರಾಸ್ ನ ಸ್ಟಿಯರಿಂಗ್ ಕಡಿಮೆ ವೇಗಗಳಲ್ಲಿ ಸ್ವಲ್ಪ ಘನತೆ ತೋರಿಸುತ್ತದೆ, ಇದನ್ನು ಕೆಲವರಿಗೆ  U -ಟರ್ನ್ ಮಾಡುವಾಗ   ಅಥವಾ ಲಂಬ ಕೋನಗಳ ಲೇನ್ ಗಳಲ್ಲಿ ಬಳಸಲು ಸ್ವಲ್ಪ ಕಷ್ಟವಾಗಬಹುದು. ಆದರೇ ಇಡೀ ಸೆಟಪ್ ನಿಮಗೆ ಹೈವೆ ಗಳಲ್ಲಿ ಓಡಿಸಲು ಬಹಳ ವಿಶ್ವಾಸ ಮುಡಿಸುತ್ತದೆ, ಅಂತಹ ರಸ್ತೆಗಳಲ್ಲಿ ನೀವು ನೇರವಾದ ಲೈನ್ ನಲ್ಲಿ ಯಾವುದೇ ತಡೆಯಿಲ್ಲದೆ ಓಡಿಸಬಹುದು .

Maruti Suzuki S-Cross facelift

ಅಂತಿಮ ಅನಿಸಿಕೆ

Maruti Suzuki S-Cross facelift

ಅತಿ ಹೆಚ್ಚು ಗಮನಿಸಬಹುದಾದ S -ಕ್ರಾಸ್ ನಲ್ಲಿಯ ಬದಲಾವಣೆ ಎಂದರೆ ಬದಲಿಸಲಾಗಿರುವ ಬಾಹ್ಯದ ಡಿಸೈನ್, ಇದು ಪೆರ್ಸನಾಲಿಟಿಯನ್ನು ತೀವ್ರವಾಗಿ ಬದಲಿಸಿದೆ. S -ಕ್ರಾಸ್  ಈಗ ಕಡಿಮೆ ಸೆಡಾನ್ ತರಹ ಇದ್ದು, ಹೆಚ್ಚು SUV ತರಹ ಕಾಣಿಸುತ್ತದೆ. ಮತ್ತು ಇದು ಮಾರುತಿ ಸುಜುಕಿ ಯಾ ನುಣುಪಾದ ಬಾಹ್ಯ ಗಾಲ ಡಿಸೈನ್ ನಿಂದ ಸ್ವಲ್ಪ ಹಿಂಜರಿಯುತ್ತಿದ್ದ ಗ್ರಾಹಕರನ್ನು ಆಕರ್ಷಿಸುತ್ತದೆ.

Maruti Suzuki S-Cross facelift

ತಾಂತ್ರಿಕವಾಗಿ ಪ್ಯಾಕೇಜ್ ಬಹಳಷ್ಟು ಮುಂದುವರೆದಿದೆ, ರೈಡ್ ಮತ್ತು ಕಂಫರ್ಟ್ ನಿಮನ್ನು ಮೆಚ್ಚಿಸುತ್ತದೆ. ಹಾಗು ಹೆಚ್ಚು ಪ್ರಖ್ಯಾತಿ ಹೊಂದಿದ್ದ ಎಂಜಿನ್ ಅನ್ನು ಹೆಚ್ಚು ಮೈಲೇಜ್ ಕೂಡ ಕೊಡುವಂತೆ ಮಾಡಲಾಗಿದೆ  ಇದಕ್ಕಾಗಿ ಮಾರುತಿ ಸುಜುಕಿ SHVS ಟೆಕ್ನಾಲಜಿ ಬಳಸಿದೆ. ದೊಡ್ಡ್ ಮತ್ತು ಆರಾಮದಾಯಕವಾಗಿರುವ S -ಕ್ರಾಸ್, ಫೇಸ್ ಲಿಫ್ಟ್ ನಂತರ ನಿಮ್ಮ ಸೆಡಾನ್ ಅಥವಾ SUV  ಕೊಳ್ಳುವ ಪಟ್ಟಿಯಲ್ಲಿ ಇರಲು ಅರ್ಹತೆ  ಹೊಂದಿದೆ. ಇದು ಹಿಂದಿನದಕ್ಕಿಂತ  ಹೆಚ್ಚು ಸುಧಾರಿತವಾಗಿದ್ದು ನೋಡಲೂ ಸಹ ಹೆಚ್ಚು ಆಕರ್ಷಕವಾಗಿದೆ.

 

Maruti Suzuki S-Cross facelift

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

×
We need your ನಗರ to customize your experience