Hyundai Creta Electric ಫಸ್ಟ್ ಡ್ರೈವ್ ವಿಮರ್ಶೆ: ಉತ್ತಮ ಅಲ್ಲ, ಅತ್ಯುತ್ತಮ ಕ್ರೆಟಾ..
Published On ಫೆಬ್ರವಾರಿ 07, 2025 By ansh for ಹುಂಡೈ ಕ್ರೆಟಾ ಎಲೆಕ್ಟ್ರಿಕ್
- 1 View
- Write a comment
ಎಲೆಕ್ಟ್ರಿಕ್ ಕ್ರೆಟಾವು ಎಸ್‌ಯುವಿಯ ವಿನ್ಯಾಸ ಮತ್ತು ಪ್ರೀಮಿಯಂ ಅನ್ನು ಒಂದು ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು ಅದರ ಪೆಟ್ರೋಲ್ ಅಥವಾ ಡೀಸೆಲ್ ಆವೃತ್ತಿಗಿಂತ ಉತ್ತಮ ಚಾಲನಾ ಅನುಭವವನ್ನು ನೀಡುತ್ತದೆ
ಹೊಸ ವರ್ಷ ಆರಂಭವಾಗುತ್ತಿದ್ದಂತೆ, ಭಾರತದ ಅತ್ಯಂತ ಜನಪ್ರಿಯ ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯಾದ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಬಿಡುಗಡೆಗೊಂಡಿತ್ತು. ಕ್ರೆಟಾದ ಎಲ್ಲಾ ಉತ್ತಮತೆಗಳು (ವಿಶಾಲವಾದ, ಫೀಚರ್-ಸಮೃದ್ಧ, ಆಧುನಿಕ ಮತ್ತು ಪ್ರೀಮಿಯಂ), ಕೆಲವು ಹೆಚ್ಚುವರಿ ಫೀಚರ್‌ಗಳು ಮತ್ತು ಸುಧಾರಿತ ವಿನ್ಯಾಸದೊಂದಿಗೆ, ಎಲೆಕ್ಟ್ರಿಫೈಡ್ ಕ್ರೆಟಾ ಕೇವಲ ಇವಿಯಾಗಿ ಮಾತ್ರವಲ್ಲದೆ, ಅದರ ICE (ಇಂಧನ ಚಾಲಿತ ಎಂಜಿನ್) ಪ್ರತಿರೂಪಕ್ಕಿಂತ ಸಂಭಾವ್ಯ ಅಪ್‌ಗ್ರೇಡ್ ಆಗಿಯೂ ನಿಂತಿದೆ.
ಇದು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿದ್ದು, ಟಾಟಾ ಕರ್ವ್ ಇವಿ, ಮಾರುತಿ ಇ-ವಿಟಾರಾ ಮತ್ತು ಮಹೀಂದ್ರಾ ಬಿಇ6 ನಂತಹ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದನ್ನು ಚಾಲನೆ ಮಾಡಿ ಹ್ಯುಂಡೈ ಇದರಲ್ಲಿ ಏನನ್ನು ನೀಡಿದೆ ಎಂಬುವುದನ್ನು ನೋಡಿದ ನಂತರ, ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕ್ರೆಟಾ ಎಂದು ನಾವು ವಿಶ್ವಾಸದಿಂದ ಹೇಳಬಹುದು. ಮತ್ತು ಏಕೆ ಎಂಬುದು ಇಲ್ಲಿದೆ.
ಡಿಸೈನ್
ಕ್ರೆಟಾದ ವಿನ್ಯಾಸವನ್ನು ಪ್ರಯತ್ನಿಸಿ ಪರೀಕ್ಷಿಸಲಾಗಿದೆ, ಮತ್ತು ಇದು ಪ್ರೀಮಿಯಂ ಎಸ್‌ಯುವಿಯನ್ನು ಹುಡುಕುತ್ತಿರುವ ಹೆಚ್ಚಿನ ಜನರಿಗೆ ಇದು ಇಷ್ಟವಾಗಲಿದೆ. ಕ್ರೆಟಾ ಎಲೆಕ್ಟ್ರಿಕ್ ಈ ವಿನ್ಯಾಸವನ್ನು ಅಳವಡಿಸಿಕೊಂಡು, ಉತ್ತಮವಾಗಿ ಕಾಣುವ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿದೆ ಮತ್ತು ಆದರೆ ಎಸ್‌ಯುವಿಯ ಮೂಲ ವಿನ್ಯಾಸದಿಂದ ದೂರ ಸರಿಯುವುದಿಲ್ಲ.
ಇದು ಕ್ಲೋಸ್-ಆಫ್ ಗ್ರಿಲ್, 17-ಇಂಚಿನ ಏರೋಡೈನಾಮಿಕ್ ಆಗಿ ಆಪ್ಟಿಮೈಸ್ ಮಾಡಿದ ಅಲಾಯ್ ವೀಲ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಪಿಕ್ಸಲೇಟೆಡ್ ಅಂಶಗಳನ್ನು ಪಡೆಯುತ್ತದೆ, ಇದು ವಿದೇಶಗಳಲ್ಲಿ ಹೊಸ ಹ್ಯುಂಡೈ ಕಾರುಗಳಲ್ಲಿ ಕಂಡುಬರುತ್ತದೆ. ಈ ಎಲ್ಲಾ ಹೊಸ ವಿನ್ಯಾಸ ಅಂಶಗಳನ್ನು ಮೂಲ ವಿನ್ಯಾಸದೊಂದಿಗೆ ಸರಿಹೊಂದುವ ರೀತಿಯಲ್ಲಿ ಅಚ್ಚುಕಟ್ಟಾಗಿ ಸಂಯೋಜಿಸಲಾಗಿದೆ. ಈ ರೀತಿಯಾಗಿ, ಕ್ರೆಟಾ ಎಲೆಕ್ಟ್ರಿಕ್ ಅದರ ICE (ಇಂಧನ ಚಾಲಿತ ಎಂಜಿನ್) ಆವೃತ್ತಿಗಿಂತ ಹೆಚ್ಚು ಭಿನ್ನವಾಗಿ ಕಾಣುವುದಿಲ್ಲ, ಮತ್ತು ಅದು ಒಳ್ಳೆಯದು, ಏಕೆಂದರೆ ಜನರು ಈ ವಿನ್ಯಾಸವನ್ನು ಒಪ್ಪಿಕೊಳ್ಳಲು ಸುಲಭವೆಂದು ಕಂಡುಕೊಳ್ಳುತ್ತಾರೆ.
ಇಲ್ಲಿರುವ ಇನ್ನೊಂದು ಹೈಲೈಟ್ ಎಂದರೆ ಆಕ್ಟಿವ್ ಏರ್ ಫ್ಲಾಪ್‌ಗಳು ಆಗಿವೆ, ಬ್ಯಾಟರಿಗೆ ಹೆಚ್ಚಿನ ತಂಪಾಗಿಸುವಿಕೆಯ ಅಗತ್ಯವಿರುವಾಗ ಅವು ತೆರೆದುಕೊಳ್ಳುತ್ತವೆ. ಬ್ಯಾಟರಿಯನ್ನು ತಂಪಾಗಿಸಲು ಮತ್ತು ಹೊರಗಿನಿಂದ ಚೆನ್ನಾಗಿ ಕಾಣಲು ಅವು ಗಾಳಿಯನ್ನು ಒಳಗೆ ಬಿಡುತ್ತವೆ.
ಬೂಟ್
ಯಾವುದೇ ಬದಲಾವಣೆ ಇಲ್ಲ. ಸ್ಟ್ಯಾಂಡರ್ಡ್ ಕ್ರೆಟಾದಂತೆಯೇ 433-ಲೀಟರ್ ಬೂಟ್ ಇದೆ, ಇದು ಗಮನಾರ್ಹವಾಗಿದೆ, ಏಕೆಂದರೆ ಬ್ಯಾಟರಿ ಪ್ಯಾಕ್ ಕಾರಣದಿಂದಾಗಿ ಇವಿಗಳು ತಮ್ಮ ICE ಪ್ರತಿರೂಪಕ್ಕಿಂತ ಕಡಿಮೆ ಬೂಟ್ ಜಾಗವನ್ನು ಹೊಂದಿರುತ್ತವೆ. ಈ ಬೂಟು ಅಗಲವಿದೆ ಆದರೆ ಆಳವಿಲ್ಲ. ಚಿಕ್ಕ ಸೂಟ್‌ಕೇಸ್‌ಗಳು ಇಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತವೆ, ಆದರೆ ದೊಡ್ಡ ಸೂಟ್‌ಕೇಸ್ ಇಟ್ಟುಕೊಳ್ಳುವುದರಿಂದ ನಿಮಗೆ ಸ್ವಲ್ಪ ಜಾಗ ಉಳಿಯುತ್ತದೆ ಅಥವಾ ಸ್ಥಳಾವಕಾಶವೇ ಇಲ್ಲದೇ ಇರಬಹುದು. ಈ ಬೂಟ್‌ನ ಬಳಕೆಯನ್ನು ಗರಿಷ್ಠಗೊಳಿಸಲು ಕ್ಯಾಬಿನ್ ಗಾತ್ರದ ಸೂಟ್‌ಕೇಸ್‌ಗಳನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ ಮತ್ತು ಯಾವುದೇ ಸಣ್ಣ ಚೀಲ ಅಥವಾ ಚಾರ್ಜರ್ ಅನ್ನು ಬಾನೆಟ್ ಅಡಿಯಲ್ಲಿ ಇರಿಸಲಾಗಿರುವ 22-ಲೀಟರ್ ಫ್ರಂಕ್ (ಮುಂಭಾಗದ ಟ್ರಂಕ್) ನಲ್ಲಿ ಇಡಬಹುದು.
ಕ್ಯಾಬಿನ್
ಒಳಭಾಗದಲ್ಲಿ, ಬದಲಾವಣೆಗಳು ಹೆಚ್ಚು ಗಮನಾರ್ಹವಾಗಿವೆ. ಹ್ಯುಂಡೈಯು ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಸೀಟುಗಳನ್ನು ಒಳಗೊಂಡಂತೆ ಕ್ಯಾಬಿನ್‌ನ ಒಟ್ಟಾರೆ ವಿನ್ಯಾಸವನ್ನು ಕ್ರೆಟಾದಂತೆಯೇ ಉಳಿಸಿಕೊಂಡಿದೆ. ಆದರೆ, ಇವೆರೆಡರ ನಡುವೆ ವ್ಯತ್ಯಾಸವನ್ನು ಪರಿಚಯಿಸಲು ಕೆಲವು ಅಂಶಗಳನ್ನು ಮರುವಿನ್ಯಾಸಗೊಳಿಸಲಾಗಿದೆ.
ನಿಮಗೆ ಹೊಸ ಸ್ಟೀರಿಂಗ್ ವೀಲ್ ಸಿಗುತ್ತದೆ, ಇದು ಕಪ್ಪು ಕಲರ್ ಅನ್ನು ಹೊಂದಿರುವ ಅಲ್ಯೂಮಿನಿಯಂ ಇನ್ಸರ್ಟ್‌ಗಳೊಂದಿಗೆ ಬರಲಿದೆ. ಎಸಿ ಕಂಟ್ರೋಲ್‌ಗಳು ಈಗ ಟಚ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಅಚ್ಚುಕಟ್ಟಾದ ನೋಟವನ್ನು ನೀಡುತ್ತದೆ, ಆದರೆ ಮೊದಲ ಬಾರಿಗೆ ಇದನ್ನು ಡ್ರೈವ್ ಮಾಡುವಾಗ ಬಳಸಲು ಸ್ವಲ್ಪ ಟ್ರಿಕಿ ಆಗಿರಬಹುದು ಮತ್ತು ಡ್ರೈವ್ ಸೆಲೆಕ್ಟರ್ ಐಯೋನಿಕ್ 5 ನಲ್ಲಿರುವಂತೆ ಸ್ಟೀರಿಂಗ್ ಚಕ್ರದ ಹಿಂದೆ ನೀಡಲಾಗಿದೆ. ಸ್ಕ್ರೀನ್‌ಗಳ ಕೆಳಗಿರುವ ಲೋಹದ ಪಟ್ಟಿಯು ನೀಲಿ ಬಣ್ಣದಲ್ಲಿ ಬರುತ್ತದೆ, ಇದು ಇದು ಇವಿ ಎಂಬುದರ ಸೂಕ್ಷ್ಮ ಸೂಚನೆಯನ್ನು ನೀಡುತ್ತದೆ.
ಆದರೆ ಇಲ್ಲಿ ದೊಡ್ಡ ಬದಲಾವಣೆಯೆಂದರೆ ಸೆಂಟರ್ ಕನ್ಸೋಲ್, ಇದನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಆರ್ಮ್‌ರೆಸ್ಟ್ ದೊಡ್ಡದಾಗಿದೆ, ಸೀಟ್ ವೆಂಟಿಲೇಷನ್ ಕಂಟ್ರೋಲ್‌ಗಳ ಸ್ಥಾನವು ವಿಭಿನ್ನವಾಗಿದೆ, ಮತ್ತು ನೀವು ಸರಳವಾಗಿರುವ ಲುಕ್ ಅನ್ನು ಹೊಂದಿರುವ ಫ್ಲೋಟಿಂಗ್ ಕನ್ಸೋಲ್ ಡಿಸೈನ್ ಮತ್ತು ಆಂಬಿಯೆಂಟ್ ಲೈಟಿಂಗ್‌ಅನ್ನು ಪಡೆಯುತ್ತೀರಿ.
ಈ ಇವಿಯ ಕ್ಯಾಬಿನ್‌ನ ಒಳ್ಳೆಯ ವಿಷಯವೆಂದರೆ ಅದು ಸೌಂಡ್ ಮಾಡುವುದಿಲ್ಲ. ಇದು ಇವಿ ಮತ್ತು ICE ನಡುವಿನ ಸರಳ ವ್ಯತ್ಯಾಸವನ್ನು ಮಾಡುತ್ತದೆ ಮತ್ತು ಯಾವುದು ಉತ್ತಮವಾಗಿ ಕಾಣುತ್ತದೆ ಎಂಬುದನ್ನು ನೀವು ಆಯ್ಕೆ ಮಾಡಬಹುದು.
ಮೆಟಿರಿಯಲ್‌ಗಳ ಗುಣಮಟ್ಟ ಕ್ರೆಟಾದಂತೆಯೇ ಇದೆ, ಅಂದರೆ ಇದರಲ್ಲಿ ಯಾವುದೇ ರಾಜಿಗಳಿಲ್ಲ. ಎಲ್ಲಾ ಟಚ್‌ಪಾಯಿಂಟ್‌ಗಳು ಸಾಫ್ಟ್ ಟಚ್ ಪ್ಯಾಡಿಂಗ್ ಅನ್ನು ಹೊಂದಿವೆ, ಕ್ರೋಮ್ ಮತ್ತು ಗ್ಲಾಸ್ ಕಪ್ಪು ಅಂಶಗಳು ಟಚ್‌ಗೆ ಚೆನ್ನಾಗಿವೆ, ಮತ್ತು ಫಿಟ್ ಮತ್ತು ಫಿನಿಶ್ ನೀವು ಹ್ಯುಂಡೈನಿಂದ ನಿರೀಕ್ಷಿಸುವಂತೆಯೇ ಇರುತ್ತದೆ.
ನೀವು ಜಾಗರೂಕರಾಗಿರಬೇಕಾದ ಎರಡು ವಿಷಯಗಳಿವೆ. ಹೊಳಪು ಕಪ್ಪು ಇನ್ಸರ್ಟ್‌ಗಳ ಗಮನಾರ್ಹ ಬಳಕೆ ಇದೆ, ಇದು ಬಹಳಷ್ಟು ಧೂಳು, ಬೆರಳಚ್ಚುಗಳು ಮತ್ತು ಗೀರುಗಳನ್ನು ಆಕರ್ಷಿಸುತ್ತದೆ. ಅಲ್ಲದೆ, ಬಿಳಿ ಸೀಟ್ ಕವರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಅದು ಬೇಗನೆ ಕೊಳಕಾಗುತ್ತದೆ.
ಅಲ್ಲದೆ, ಚಾಲಕನ ಸೀಟು ಅತ್ಯಂತ ಕೆಳಮಟ್ಟದ ಸ್ಥಾನದಲ್ಲಿದ್ದರೂ, ಎತ್ತರವಾಗಿರುವಂತೆ ಭಾಸವಾಗುತ್ತದೆ, ಇದು ಆದರ್ಶವಾದ ಡ್ರೈವಿಂಗ್ ಪೊಸಿಶನ್‌ಅನ್ನು ಕಂಡುಹಿಡಿಯುವುದನ್ನು ಕಷ್ಟಕರವಾಗಿಸಬಹುದು. ಇದು ಸಾಮಾನ್ಯ ಕ್ರೆಟಾದಲ್ಲಿ ಸಹ ಕಾಡುವ ವಿಷಯವಾಗಿದೆ.
ಒಟ್ಟಿನಲ್ಲಿ, ಕ್ರೆಟಾ ಎಲೆಕ್ಟ್ರಿಕ್‌ನ ಕ್ಯಾಬಿನ್ ರೆಗ್ಯುಲರ್ ಕ್ರೆಟಾದ ಕ್ಯಾಬಿನ್‌ಗಿಂತ ಸುಧಾರಣೆಯಾಗಿದೆ ಎಂದು ಸಾಬೀತುಪಡಿಸುತ್ತದೆ ಮತ್ತು ಅದನ್ನು ಫೀಚರ್‌ಗಳ ಪಟ್ಟಿಯಲ್ಲೂ ಕಾಣಬಹುದು.
ಫೀಚರ್‌ಗಳು
"ನಿಮಗೆ ಇನ್ನೇನು ಬೇಕು?" ಇದು ಕ್ರೆಟಾ ಬಗ್ಗೆ ನಾವು ಕೇಳುವ ಪ್ರಶ್ನೆ, ಮತ್ತು ಹುಂಡೈ ಇದಕ್ಕೆ ಕ್ರೆಟಾ ಎಲೆಕ್ಟ್ರಿಕ್ ಮೂಲಕ ಉತ್ತರಿಸಿದೆ. ಇದು ಸ್ಟ್ಯಾಂಡರ್ಡ್ ಕ್ರೆಟಾದ ಎಲ್ಲಾ ಫೀಚರ್‌ಗಳೊಂದಿಗೆ ಬರುತ್ತದೆ, ಅದು ಸ್ವತಃ ಒಂದು ದೊಡ್ಡ ಪಟ್ಟಿಯಾಗಿದೆ, ಮತ್ತು ಇದು ಇನ್ನೂ ಕೆಲವು ಉತ್ತಮ ಫೀಚರ್‌ಗಳನ್ನು ಸೇರಿಸುತ್ತದೆ.
ಎರಡು 10.25-ಇಂಚಿನ ಸ್ಕ್ರೀನ್‌ಗಳು ಒಂದೇ ಆಗಿವೆ, ಆದರೆ ಅವು ಸ್ವಲ್ಪ ವಿಭಿನ್ನವಾದ ಇವಿ-ನಿರ್ದಿಷ್ಟ ಗ್ರಾಫಿಕ್ಸ್ ಅನ್ನು ಹೊಂದಿವೆ. ಯ್ಯುಸರ್ ಇಂಟರ್ಫೇಸ್ ಅರ್ಥಮಾಡಿಕೊಳ್ಳುವುದು ಸುಲಭ, ಮತ್ತು ರೆಗ್ಯುಲರ್ ಕ್ರೆಟಾದಂತೆಯೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ವೈರ್‌ಡ್ ಆಗಿದೆ, ವೈರ್‌ಲೆಸ್ ಅಲ್ಲ.
ಪನೋರಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಎಸಿ, 8-ವೇ ಚಾಲಿತ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳು, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಕ್ರೆಟಾದಿಂದ ಇದಕ್ಕೆ ಎರವಲು ಪಡೆಯಲಾಗಿದೆ. ಆದರೆ, ಒಂದು ಇವಿ ಆಗಿರುವುದರಿಂದ, ಇದು ನಿಮ್ಮ ಲ್ಯಾಪ್‌ಟಾಪ್ ಅನ್ನು ಚಾರ್ಜ್ ಮಾಡಲು ಅಥವಾ ಎಲೆಕ್ಟ್ರಿಕ್ ಕೆಟಲ್ ಅನ್ನು ಬಳಸಲು ವೆಹಿಕಲ್-2-ಲೋಡ್ (V2L) ಅನ್ನು ಸಹ ನೀಡುತ್ತದೆ ಮತ್ತು ಇದು ಮಲ್ಟಿ-ಲೆವೆಲ್ ರಿಜನರೇಟಿವ್ ಬ್ರೇಕಿಂಗ್‌ನೊಂದಿಗೆ ಬರುತ್ತದೆ.
ಕ್ಯಾಬಿನ್ ಅನುಭವವನ್ನು ಇನ್ನಷ್ಟು ಪ್ರೀಮಿಯಂ ಮಾಡಲು, ಕ್ರೆಟಾ ಎಲೆಕ್ಟ್ರಿಕ್ ಚಾಲಕ ಸೀಟಿಗೆ ಮೆಮೊರಿ ಕಾರ್ಯ ಮತ್ತು ಮುಂಭಾಗದ ಪ್ರಯಾಣಿಕರ ಸೀಟನ್ನು ನಿಯಂತ್ರಿಸಲು ಎಲೆಕ್ಟ್ರಿಕ್ ಬಾಸ್ ಮೋಡ್ ಫಂಕ್ಷನ್‌ನೊಂದಿಗೆ ಬರುತ್ತದೆ.
ಫೀಚರ್‌ಗಳ ವಿಷಯದಲ್ಲಿ, ಕ್ರೆಟಾ ಎಲೆಕ್ಟ್ರಿಕ್ ನಿಮ್ಮ ದೈನಂದಿನ ಡ್ರೈವ್‌ಗಳು ಮತ್ತು ಲಾಂಗ್ ಡ್ರೈವ್‌ಗೆ ಅಗತ್ಯವಿರುವ ಎಲ್ಲವನ್ನೂ ನೀಡುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್‌ಪ್ಲೇಗೆ ವೈರ್‌ಲೆಸ್ ಬೆಂಬಲವು ಲಭ್ಯವಿಲ್ಲದ್ದನ್ನು ಹೊರತುಪಡಿಸಿ, ಬೇರೆ ಯಾವುದೇ ವಿಷಯದಲ್ಲಿ ರಾಜಿ ಇಲ್ಲ.
ಪ್ರಾಯೋಗಿಕತೆ ಮತ್ತು ಚಾರ್ಜಿಂಗ್ ಆಯ್ಕೆಗಳು
ಕ್ರೆಟಾ ಎಲೆಕ್ಟ್ರಿಕ್ ನ ಸ್ಟೋರೇಜ್ ಆಯ್ಕೆಗಳು ಅದರ ICE ಪ್ರತಿರೂಪಕ್ಕಿಂತ ಉತ್ತಮವಾಗಿವೆ. ನಿಮ್ಮ ಫೋನ್ ಅನ್ನು ಇರಿಸಿಕೊಳ್ಳಲು ನಾಲ್ಕು ಬಾಗಿಲುಗಳಲ್ಲಿ ಒಂದೇ ರೀತಿಯ ಬಾಟಲ್ ಹೋಲ್ಡರ್‌ಗಳು, ಮುಂಭಾಗದಲ್ಲಿ ಎರಡು ಹಾಗು ಹಿಂಭಾಗದಲ್ಲಿ ಎರಡು ಕಪ್‌ಹೋಲ್ಡರ್‌ಗಳು, ಒಂದು ಗ್ಲೋವ್‌ಬಾಕ್ಸ್, ಸನ್‌ಗ್ಲಾಸ್ ಹೋಲ್ಡರ್, ಸೀಟ್ ಬ್ಯಾಕ್ ಪಾಕೆಟ್‌ಗಳು ಮತ್ತು ಹಿಂಭಾಗದ ಎಸಿ ವೆಂಟ್‌ಗಳ ಕೆಳಗೆ ಸ್ಲಾಟ್ ಅನ್ನು ನೀವು ಪಡೆಯುತ್ತೀರಿ.
ಆದರೆ ಮುಂಭಾಗದ ಮಧ್ಯದ ಆರ್ಮ್‌ರೆಸ್ಟ್ ಹೆಚ್ಚಿನ ಸ್ಟೋರೇಜ್ ಸ್ಥಳವನ್ನು ಹೊಂದಿದೆ, ಮತ್ತು ಕಪ್‌ಹೋಲ್ಡರ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ನಡುವೆ ಒಂದು ಟ್ರೇ ಇದೆ, ಇದು ನಿಮ್ಮ ವಸ್ತುಗಳನ್ನು ಇಡಲು ಸಾಕಷ್ಟು ಸ್ಥಳವನ್ನು ನೀಡುತ್ತದೆ.
ಆದರೆ, ಚಾರ್ಜಿಂಗ್ ಆಯ್ಕೆಗಳು ಒಂದೇ ಆಗಿರುತ್ತವೆ. ನೀವು ವೈರ್‌ಲೆಸ್ ಫೋನ್ ಚಾರ್ಜರ್, ಟೈಪ್-ಸಿ ಪೋರ್ಟ್, ಯುಎಸ್‌ಬಿ ಪೋರ್ಟ್ ಮತ್ತು ಮುಂಭಾಗದಲ್ಲಿ 12V ಸಾಕೆಟ್ ಮತ್ತು ಹಿಂಭಾಗದಲ್ಲಿ ಎರಡು ಟೈಪ್-ಸಿ ಪೋರ್ಟ್‌ಗಳನ್ನು ಪಡೆಯುತ್ತೀರಿ.
ಹಿಂದಿನ ಸೀಟಿನ ಅನುಭವ
ಇವಿಗಳಲ್ಲಿ ಬ್ಯಾಟರಿ ಪ್ಯಾಕ್ ಅಳವಡಿಸುವುದರಿಂದ ನೆಲ ಎತ್ತರವಾಗುವುದು ಒಂದು ಸಮಸ್ಯೆಯಾಗಿದೆ. ಇದರಿಂದಾಗಿ ಹಿಂಭಾಗದಲ್ಲಿ ತೊಡೆಯ ಕೆಳಭಾಗದ ಬೆಂಬಲ ಕಡಿಮೆಯಾಗುವುದರ ಜೊತೆಗೆ ಜಾಗವೂ ಕಡಿಮೆಯಾಗುತ್ತದೆ. ಆದರೆ ಕ್ರೆಟಾ ಇವಿಯಲ್ಲಿ ಹಾಗಲ್ಲ.
ನೆಲವನ್ನು ಖಂಡಿತವಾಗಿಯೂ ಎತ್ತರಿಸಲಾಗಿದೆ, ಮತ್ತು ಇದು ರೆಗ್ಯುಲರ್ ಕ್ರೆಟಾಗೆ ಹೋಲಿಸಿದರೆ ಬಹುತೇಕ ಸಮತಟ್ಟಾಗಿದೆ. ಆದರೆ ಹಿಂಬದಿಯ ಸೀಟಿನ ಬೇಸ್ ಅನ್ನು ಮೇಲಕ್ಕೆ ಓರೆಯಾಗಿಸಲಾಗಿದೆ, ಇದು ತೊಡೆಯ ಕೆಳಗಿನ ಬೆಂಬಲಕ್ಕೆ ಧಕ್ಕೆಯಾಗದಂತೆ ತಡೆಯುತ್ತದೆ. ಮಧ್ಯಮ ಗಾತ್ರದ ವಯಸ್ಕರಿಗೆ ಹೆಡ್‌ರೂಮ್ ಸಾಕಷ್ಟು ಹೆಚ್ಚು, ಮತ್ತು ಮೊಣಕಾಲು ಮತ್ತು ಪಾದಗಳಿಗೆ ಸಾಕಷ್ಟು ಸ್ಥಳವಿದೆ. ಹಿಂಭಾಗದ ಸೀಟುಗಳು 2-ಹಂತದ ರಿಕ್ಲೈನ್ ಅನ್ನು ಹೊಂದಿವೆ, ಮತ್ತು ನೀವು ಸನ್‌ಬ್ಲೈಂಡ್‌ಗಳನ್ನು ಸಹ ಪಡೆಯುತ್ತೀರಿ, ಇವುಗಳನ್ನು ರೆಗ್ಯುಲರ್ ಕ್ರೆಟಾದೊಂದಿಗೆ ಸಹ ನೀಡಲಾಗುತ್ತದೆ.
ಆದರೆ, ರೆಗ್ಯುಲರ್ ಕ್ರೆಟಾಕ್ಕಿಂತ ಹೆಚ್ಚುವರಿಯಾಗಿ, ಎಲೆಕ್ಟ್ರಿಕ್ ಕ್ರೆಟಾದ ಹಿಂಭಾಗದ ಸೀಟುಗಳು ಮುಂಭಾಗದ ಸೀಟುಗಳ ಮೇಲೆ ಟ್ರೇ ಅನ್ನು ಜೋಡಿಸಲಾಗಿದೆ. ನೀವು ಈ ಟ್ರೇ ಅನ್ನು ಉಪಹಾರದ ಸೇವನೆಯ ಸಮಯದಲ್ಲಿ ಬಳಸಬಹುದು, ನೀವು ಏನನ್ನಾದರೂ ವೀಕ್ಷಿಸಲು ಬಯಸಿದರೆ ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಇಡಲು ಬಳಸಬಹುದಾದ ಸ್ಲಾಟ್ ಇದೆ ಮತ್ತು ಈ ಟ್ರೇಗಳಲ್ಲಿ ಸಂಯೋಜಿತ ಕಪ್‌ಹೋಲ್ಡರ್‌ಗಳಿವೆ. ಇದು ಎಲೆಕ್ಟ್ರಿಕ್ ಬಾಸ್ ಮೋಡ್‌ನೊಂದಿಗೆ ಸೇರಿ, ಉತ್ತಮ ಚಾಲಕ ಚಾಲಿತ ಅನುಭವವನ್ನು ನೀಡುತ್ತದೆ.
ಸುರಕ್ಷತೆ
6 ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳು ಪ್ರಮಾಣಿತವಾಗಿ ಬರುತ್ತವೆ. ಎಲ್ಲಾ ಫೀಚರ್‌ಗಳು ICE ಕ್ರೆಟಾದಂತೆಯೇ ಇವೆ.
ನೀವು ಉತ್ತಮ ಕ್ಯಾಮೆರಾ ಗುಣಮಟ್ಟದೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಪಡೆಯುತ್ತೀರಿ ಮತ್ತು ಇದು ಬ್ಲೈಂಡ್ ಸ್ಪಾಟ್ ಮಾನಿಟರ್ ಅನ್ನು ಒಳಗೊಂಡಿದೆ, ಅದು ನೀವು ಸೂಚಿಸಿದಾಗ ಚಾಲಕನ ಡಿಸ್‌ಪ್ಲೇಯಲ್ಲಿ ಸೈಡ್ ಕ್ಯಾಮೆರಾಗಳ ಫೀಡ್ ಅನ್ನು ಪ್ರದರ್ಶಿಸುತ್ತದೆ.
ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಚಾಲಕ ಗಮನ ಎಚ್ಚರಿಕೆಯಂತಹ ಫೀಚರ್‌ಗಳೊಂದಿಗೆ ಲೆವೆಲ್ 2 ADAS ಸಹ ಇಲ್ಲಿ ಲಭ್ಯವಿದೆ. ಈ ADAS ಅನ್ನು ಭಾರತೀಯ ರಸ್ತೆಗಳಿಗೆ ಉತ್ತಮವಾಗಿ ಮಾಪನಾಂಕ ನಿರ್ಣಯಿಸಲಾಗಿದೆ ಮತ್ತು ಲೇನ್ ಗುರುತು ಮಾಡುವಿಕೆಯನ್ನು ಸುಲಭವಾಗಿ ಅನುಸರಿಸುತ್ತದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮುಂಭಾಗದಲ್ಲಿರುವ ಕಾರಿನೊಂದಿಗೆ ಸರಿಯಾದ ಅಂತರವನ್ನು ಕಾಯ್ದುಕೊಳ್ಳುತ್ತದೆ. ತುಂಬಾ ಹತ್ತಿರವೂ ಅಲ್ಲ, ಮತ್ತು ಇನ್ನೊಂದು ಕಾರು ಅಡ್ಡಲಾಗಿ ಬರುವಷ್ಟು ದೂರವೂ ಅಲ್ಲ. ಆದರೆ, ಆಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಭಾರೀ ಟ್ರಾಫಿಕ್‌ನಲ್ಲಿ ಬಳಸಿದಾಗ ಆಟೋಮ್ಯಾಟಿಕ್ ಬ್ರೇಕಿಂಗ್ ಇನ್‌ಪುಟ್‌ಗಳು ಶಾರ್ಪ್ ಆಗಿ ಬಳಕೆಯಾಗಬಹುದು.
ರಿಜನರೇಟಿವ್ ಬ್ರೇಕಿಂಗ್ ಅನ್ನು ADAS ನೊಂದಿಗೆ ಜೋಡಿಸಲಾಗಿದೆ, ಇದು ಅದಕ್ಕೆ ಆಟೋ ಫಂಕ್ಷನ್ ಅನ್ನು ನೀಡುತ್ತದೆ. ನೀವು ಈ ಫೀಚರ್‌ಗಳನ್ನು ಬಳಸುವಾಗ, ರಿಜನರೇಟಿವ್ ಬ್ರೇಕಿಂಗ್ ನಿಮ್ಮ ಚಾಲನೆ ಮತ್ತು ರಸ್ತೆ ಪರಿಸ್ಥಿತಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ನೀವು ಕಾಲಕಾಲಕ್ಕೆ ಲೆವೆಲ್ ಅನ್ನು ಬದಲಾಯಿಸಬೇಕಾಗಿಲ್ಲ.
ಬ್ಯಾಟರಿ ಪ್ಯಾಕ್ ಮತ್ತು ಡ್ರೈವ್ ಅನುಭವ
ಕ್ರೆಟಾ ಇವಿಯು 42 ಕಿ.ವ್ಯಾಟ್ ಮತ್ತು 51.4 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ನಾವು 473 ಕಿ.ಮೀ ರೇಂಜ್ ಅನ್ನು ನೀಡುವ ಎರಡನೇ ವೇರಿಯೆಂಟ್ ಅನ್ನು ಹೊಂದಿದ್ದೇವೆ, ಆದರೆ ನಮಗೆ ಸೂಚಿಸಿದ ರೇಂಜ್ 380 ಕಿ.ಮೀ.ಗೆ ಹತ್ತಿರದಲ್ಲಿತ್ತು. ಆದರೆ ಇದೂ ಜಾಸ್ತಿಯಾಯಿತು.
ಈ ಬ್ಯಾಟರಿಗಳು ಚಾರ್ಜ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಇಲ್ಲಿದೆ.
ಬ್ಯಾಟರಿ ಪ್ಯಾಕ್ |
51.4 ಕಿ.ವ್ಯಾಟ್ |
42 ಕಿ.ವ್ಯಾಟ್ |
50 ಕಿ.ವ್ಯಾಟ್ ಡಿಸಿ ಚಾರ್ಜಿಂಗ್ (10-80%) |
58 ನಿಮಿಷಗಳು |
58 ನಿಮಿಷಗಳು |
11 ಕಿ.ವ್ಯಾಟ್ ಎಸಿ ಚಾರ್ಜಿಂಗ್ 10-80% |
4 ಗಂಟೆ 50 ನಿಮಿಷಗಳು |
4 ಗಂಟೆಗಳು |
ಕೆಲವೊಮ್ಮೆ ಇವಿ ಚಾಲನೆಗೆ ಒಗ್ಗಿಕೊಳ್ಳಬೇಕಾಗುತ್ತದೆ, ಮತ್ತು ಇದರಲ್ಲಿ ಕಲಿಕೆಯ ಅಂಶಗಳು ಇರುತ್ತದೆ. ಆದರೆ ಎಲೆಕ್ಟ್ರಿಕ್ ಕ್ರೆಟಾದಲ್ಲಿ ಹಾಗಲ್ಲ. ನೀವು ಪೆಟ್ರೋಲ್ ಅಥವಾ ಡೀಸೆಲ್ ವಾಹನದಿಂದ ಇದಕ್ಕೆ ಬರುತ್ತಿದ್ದರೆ, EV ಗೆ ಹೊಂದಿಕೊಳ್ಳಲು ನಿಮಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವೇಗವರ್ಧನೆಯ ಟ್ಯೂನಿಂಗ್ ಮಾಡಲಾಗಿದೆ.
ಥ್ರೊಟಲ್ ಸ್ಪಂದಿಸುತ್ತದೆ, ವೇಗವಾಗಿರುತ್ತದೆ ಮತ್ತು ವೇಗವರ್ಧನೆಯು ಸುಗಮವಾಗಿರುತ್ತದೆ. ನಿಮಗೆ ಹಠಾತ್ ಪವರ್ ಉಲ್ಬಣವಾದಂತೆ ಅನಿಸುವುದಿಲ್ಲ, ಆದರೆ ಅದೇ ಸಮಯದಲ್ಲಿ, ಚಾಲನೆ ಮಾಡಲು ಮೋಜಿನ ಅನುಭವವನ್ನು ಪಡೆಯಲು ನಿಮಗೆ ಸಾಕಷ್ಟು ಶಕ್ತಿ ಇರುತ್ತದೆ. ಹೆಚ್ಚಿನ ವೇಗವನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಏಕೆಂದರೆ ಇದು ಕೇವಲ 7.9 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ತಲುಪಬಹುದು ಮತ್ತು ಓವರ್‌ಟೇಕ್‌ಗಳು ಸುಲಭವಾಗಿರುತ್ತವೆ. ಮಾಹಿತಿಗಾಗಿ, 7-ಸ್ಪೀಡ್ ಡಿಸಿಟಿ ಜೊತೆಗೆ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ನಡೆಸಲ್ಪಡುವ ರೆಗ್ಯುಲರ್ ಕ್ರೆಟಾವು 0-100 ಕಿಮೀ ವೇಗವನ್ನು ತಲುಪಲು 8.9 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.
ನೀವು ಅದನ್ನು ಸ್ಪೋರ್ಟ್ಸ್ ಮೋಡ್‌ನಲ್ಲಿ ಇಟ್ಟ ನಂತರ ಪವರ್ ಔಟ್‌ಪುಟ್‌ನಲ್ಲಿ ಗಮನಾರ್ಹ ವ್ಯತ್ಯಾಸವಿದೆ, ಮತ್ತು ಅದು ಕೇವಲ ಥ್ರೊಟಲ್‌ನ ಮಾಪನಾಂಕ ನಿರ್ಣಯವಾಗಿದೆ. ಆದರೂ, ನೀವು ಎಲೆಕ್ಟ್ರಿಕ್ ಕ್ರೆಟಾದಿಂದ ಅತ್ಯಾಕರ್ಷಕ ಡ್ರೈವ್ ಅನ್ನು ಪಡೆಯಬಹುದು.
ನೀವು ರೇಂಜ್ ಅನ್ನು ಗರಿಷ್ಠಗೊಳಿಸಲು ಬಯಸಿದರೆ, ಇಕೋ ಮೋಡ್ ಸಹ ಇದೆ, ಮತ್ತು ಅದಕ್ಕಾಗಿ ನೀವು ಬಹು-ಹಂತದ ರಿಜನರೇಷನ್ ಅನ್ನು ಸಹ ಪಡೆಯುತ್ತೀರಿ. ಕ್ರೆಟಾ ಎಲೆಕ್ಟ್ರಿಕ್ ಸಿಂಗಲ್-ಪೆಡಲ್ ಮೋಡ್‌ನೊಂದಿಗೆ ಬರುತ್ತದೆ, ಇದಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು, ಆದರೆ ನೀವು ಅದನ್ನು ಒಮ್ಮೆ ಅಭ್ಯಾಸ ಮಾಡಿಕೊಂಡರೆ, ಚಾಲನೆ ಮಾಡುವುದು ಇನ್ನಷ್ಟು ಅನುಕೂಲಕರವಾಗುತ್ತದೆ.
ರೈಡ್‌ನ ಗುಣಮಟ್ಟ
ಕ್ರೆಟಾದಂತೆಯೇ ಇದೆ. ಸುಗಮ, ಪ್ರಯಾಣಿಕರಿಗೆ ಕಡಿಮೆ ಶೇಕಿಂಗ್, ಮತ್ತು ಉತ್ತಮ ನಿರೋಧನವನ್ನು ಹೊಂದಿದೆ. ಕ್ರೆಟಾ ಇವಿ ಚಾಲನೆ ಮಾಡುವಾಗ, ನೀವು ರಸ್ತೆಗಳ ಬಿರುಕುಗಳು ಮತ್ತು ಅಂತರಗಳನ್ನು ಅನುಭವಿಸುತ್ತೀರಿ, ಆದರೆ ಕ್ಯಾಬಿನ್ ಒಳಗೆ ಯಾವುದೇ ಗಮನಾರ್ಹ ಬಾಡಿ ರೋಲ್‌ಅನ್ನು ನೀವು ಅನುಭವಿಸುವುದಿಲ್ಲ.
ಇದು ನಿಮ್ಮ ದೈನಂದಿನ ಡ್ರೈವ್‌ಗಳನ್ನು ಸುಲಭವಾಗಿ ನಿಭಾಯಿಸುತ್ತದೆ ಮತ್ತು ನಿಮಗೆ ಯಾವುದೇ ಕಿರಿಕಿರಿಯನ್ನು ನೀಡುವುದಿಲ್ಲ. ಕಾರು ಹೆದ್ದಾರಿಗಳಲ್ಲಿ ಸ್ಥಿರವಾಗಿರುತ್ತದೆ ಮತ್ತು ಪಕ್ಕಕ್ಕೆ ಚಲಿಸುವಂತೆ ಮಾಡುವುದಿಲ್ಲ, ಮತ್ತು ಅದನ್ನು ಚಾಲನೆ ಮಾಡುವಾಗ ನೀವು ಆತ್ಮವಿಶ್ವಾಸವನ್ನು ಅನುಭವಿಸುತ್ತೀರಿ. ಆದರೆ, ನಮ್ಮ ಮೊದಲ ಡ್ರೈವ್‌ನ ಮಾರ್ಗವು ಹೆಚ್ಚಾಗಿ ಸುಸಜ್ಜಿತ ಹೆದ್ದಾರಿಗಳನ್ನು ಹೊಂದಿತ್ತು, ಆದ್ದರಿಂದ ನಾವು ಕಾರನ್ನು ಹೆಚ್ಚು ವಿವರವಾದ ವಿಮರ್ಶೆಗಾಗಿ ಪಡೆದ ನಂತರ ಅದರ ಸೌಕರ್ಯದ ಬಗ್ಗೆ ಆಳವಾದ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಅಂತಿಮ ಮಾತು
ICE ಯ ವಿನ್ಯಾಸ ಮತ್ತು ಫೀಚರ್‌ಗಳನ್ನು ಗಮನಿಸುವಾಗ, ಕೆಲವು ಅಂಶಗಳನ್ನು ಸುಧಾರಿಸುವ ಮೂಲಕ, ಹ್ಯುಂಡೈ ಈ ಇವಿಯನ್ನು ಪರಿಚಯಿಸಿದೆ, ಇದು ಎದ್ದು ಕಾಣಲು ನೀವು ಆಕರ್ಷಕ ಅಂಶಗಳನ್ನು ಹೊಂದಿರಬೇಕಾಗಿಲ್ಲ ಎಂದು ಸಾಬೀತುಪಡಿಸುತ್ತದೆ. ಎಲೆಕ್ಟ್ರಿಕ್ ಕ್ರೆಟಾವು ರೆಗ್ಯುಲರ್ ಕ್ರೆಟಾದ ಎಲ್ಲಾ ಉತ್ತಮ ಗುಣಗಳನ್ನು ಹೊಂದಿದ್ದು, ಇದು ಉತ್ತಮ ಕುಟುಂಬ ಎಸ್‌ಯುವಿಯನ್ನಾಗಿ ಮಾಡುತ್ತದೆ ಮತ್ತು ತನ್ನದೇ ಆದ ವಿಶಿಷ್ಟತೆಗಳು ಅದನ್ನು ಪ್ರತ್ಯೇಕಿಸುತ್ತದೆ.
ಕ್ರೆಟಾ ಎಲೆಕ್ಟ್ರಿಕ್‌ನ ಬೆಲೆಯು 16 ಲಕ್ಷ ರೂ.ಗಳಿಂದ 23 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಇರಬಹುದೆಂದು ನಾವು ನಿರೀಕ್ಷಿಸುತ್ತೇವೆ, ಮತ್ತು ಈ ಬೆಲೆಯಲ್ಲಿ, ಇದು ಅದರ ICE ವೇರಿಯೆಂಟ್‌ಗಿಂತ ಸುಮಾರು 3 ಲಕ್ಷ ರೂ.ಗಳಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರುತ್ತದೆ. ಅದರ ಹೆಚ್ಚು ಪ್ರೀಮಿಯಂ ವಿನ್ಯಾಸ, ಹೆಚ್ಚುವರಿ ಫೀಚರ್‌ಗಳು ಮತ್ತು ಅತ್ಯಾಕರ್ಷಕ ಕಾರ್ಯಕ್ಷಮತೆಯನ್ನು ಗಮನಿಸಿದರೆ, ಆ ಬೆಲೆಯ ಹೆಚ್ಚಳವು ಸಮರ್ಥನೀಯವಾಗಿರುತ್ತದೆ.
ಚಾರ್ಜಿಂಗ್ ನಿಮಗೆ ಸಮಸ್ಯೆಯಲ್ಲದಿದ್ದರೆ, ಕ್ರೆಟಾ ಎಲೆಕ್ಟ್ರಿಕ್ ಖಂಡಿತವಾಗಿಯೂ ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ, ಮತ್ತು ನಾವು ರೆಗ್ಯುಲರ್ ಕ್ರೆಟಾಕ್ಕಿಂತಲೂ ಇದನ್ನೇ ಶಿಫಾರಸು ಮಾಡುತ್ತೇವೆ. ಇದು ಅಚ್ಚುಕಟ್ಟಾದ ಮತ್ತು ಸ್ವಚ್ಛವಾದ ವಿನ್ಯಾಸ, ಉತ್ತಮ ಫೀಚರ್‌ಗಳ ಪಟ್ಟಿ, ಸಾಕಷ್ಟು ಶಕ್ತಿ ಮತ್ತು ನಿಮ್ಮ ನಿಯಮಿತ ಡ್ರೈವ್‌ಗಳಿಗೆ ಸಾಕಷ್ಟು ರೇಂಜ್ ಅನ್ನು ನೀಡುತ್ತದೆ. ಇದು ಕೇವಲ ಒಳ್ಳೆಯ ಕ್ರೆಟಾ ಅಲ್ಲ, ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಕ್ರೆಟಾ ಆಗಿದೆ.