• English
  • Login / Register

ಹುಂಡೈ ಕ್ರೆಟಾ ವಿಮರ್ಶೆ 1.6 VTVT and 1.6 CRDi ಡ್ರೈವ್ ಮಾಡಲಾಗಿದೆ !

Published On ಜುಲೈ 02, 2019 By arun for ಹುಂಡೈ ಕ್ರೆಟಾ 2015-2020

  • 1 View
  • Write a comment

ಹ್ಯುಂಡೈ ಕ್ರೆಟಾ ತಜ್ಞರ ವಿಮರ್ಶೆಯನ್ನು ಇಲ್ಲಿ ವೀಕ್ಷಿಸಿ

Hyundai Creta Review | 1.6 VTVT and 1.6 CRDi Driven!

ಬಹಳಷ್ಟು ಹೊಸ ಕಾರ್ ಗಳು ಬಂದಿದ್ದರೂ ಸಹ ಕೆಲವು ಮಾತ್ರ ಹೊಸ ಹುಂಡೈ ಕ್ರೆಟಾ ಗೆ ಸರಿಸಮನಾಗಿ ನಿಲ್ಲಲು ಯಶಸ್ವಿಯಾಗಿದೆ. ಯಾವಾಗಿನಿಂದ ಹೊಸ ಕಾರ್ ಬರುವ ಸೂಚನೆ ಸಿಕ್ಕಿತೋ ಅಂದಿನಿಂದ ವಿವಿಧ ಆಟೋಮೋಟಿವ್ ಇಂಟರ್ನೆಟ್ ವೆಬ್ಸೈಟ್ ಗಳಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದೆ.ಅದರಿಂದಾಗಿ ಜನರಲ್ಲಿ ಪ್ರಶ್ನೆ ಗಳು ಉದ್ಬವಿಸುವಂತಹ ವಿಶೇಷತೆಗಳು ಏನು ಇದೆ ಎಂದು? ಇದು ವಿಶೇಷವಾಗಿ ವಿಭಿನ್ನವಾಗಿದೆಯೇ? ಇಲ್ಲ. ಹಾಗಾದರೆ ಇರುವ ಆರ್ಭಟಗಳು ಏಕೆ?

 ನೀವು  ನೋಡಿದ ಹಾಗೆ ಹುಂಡೈ ನ ಬ್ರಾಂಡ್ ವ್ಯಾಲ್ಯೂ ದೃಢತೆ ಇಂದ ದೃಢತೆಗೆ ಮುಂದುವರೆದಿದೆ ವರ್ಷಗಳಲ್ಲಿ. ಹುಂಡೈ ನವರು ಕಡಿಮೆ ಬೆಲೆಯ ಕಾರ್ ಮೇಕರ್ ಗಳಲ್ಲಿ ಒಂದು ಆಗಿ  10 ಲಕ್ಷ ಗಿಂತ ಹೆಚ್ಚಿನ ಬೆಲೆಯ ವಿಭಾಗಕ್ಕೆ ಸೇರಿತ್ತು. ಮತ್ತು ಅದೆಲ್ಲ ಸಾಧ್ಯವಾಗಿದ್ದು ಅವರ ಸಹಿಷ್ಣುತೆಯಿಂದ. ಮೊದಲ ಪೀಳಿಗೆಯ ತುಸಾನ್ ಮತ್ತು ಟೆರ್ರಕಾನ್ ಗಳು ನಪಾಸಾಗಿತ್ತು . ನಿಧಾನವಾಗಿ ಯಾದರೂ ಖಂಡಿತವಾಗಿ, ತಮ್ಮ ಸ್ಪರ್ಧೆಯನ್ನು ಹಂತ ಹಂತ ವಾಗಿ ಹೆಚ್ಚಿಸಲಾಗಿದೆ, ಹುಂಡೈ ಭಾರತದ ಜನರನ್ನು ಸ್ಲಾಟ್ ಇರುವ H, ಹೆಚ್ಚು ಪ್ರೀಮಿಯಂ ಆಗಿ ಇರುತ್ತದೆ ಎಂದು ಮನವರಿಕೆ ಮಾಡಿ ಕೊಟ್ಟಿದೆ. 

ಭಾರತದ ಗ್ರಾಹಕರಿಗೆ ಮಾನವರಿಕೆಯಾಗಿರಿಸಿರಿವ ಇನ್ನೊಂದು ವಿಚಾರ ಎಂದರೆ , ಅವರಿಗೆ ಅದೃಢವಾಗಿ ಕಾಣುವ ಚಿಕ್ಕ SUV , ಹೆಚ್ಚು ದಿನ ಉಪಯೋಗಕಾರಿ, ಮತ್ತು ಪ್ರತಿನಿತ್ಯ ಉಪಯೋಗಿಸಲು ಅನುಕೂಲವಾಗಿರುವಂತಹುದು. ಈ ವಿಚಾರದಲ್ಲಿ ರೆನಾಲ್ಟ್ ಮೊದಲಿಗೆ ಇಂತಹ ಕಾರ್ ಅನ್ನು ಬಿಡುಗಡೆ ಮಾಡಿತು , ಮತ್ತು ಆದರೆ ಬೇಡಿಕೆ ಈಗಲೂ ಹೆಚ್ಚು ಇದ್ದು ಅದು ಹೆಚ್ಚು ಮಾರಾಟವಾಗುವ ಕಾರ್ ಗಳಲ್ಲಿ ಒಂದು ಆಗಿದೆ. ಡಸ್ಟರ್ ಗೆ ಒಂದು ತಕ್ಕುದಾದ ಪ್ರತಿಸ್ಪರ್ದಿ ಎಂದರೆ ಅದು ಫೋರ್ಡ್ ಎಕೋಸ್ಪೋರ್ಟ್ ಆಗಿತ್ತು. ಈ ಎರೆಡು ಕಾರ್ ಗಳು ಹೆಚ್ಚಾಗಿ ಮಾರಾಟವಾಗುತ್ತಿರುವುದು ಅವುಗಳ ಡಿಸೈನ್ ತತ್ವಗಳಿಂದಾಗಿ, ಅದು  'ಶ್ರೀನ್ಕ್ SUV'  ತತ್ವವಾಗಿದೆ. ಹುಂಡೈ ನವರು ಈ ವಿಭಾಗಕ್ಕೆ ಕ್ರೆಟಾ ದೊಂದಿಗೆ ಸೇರಿದ್ದಾರೆ, ಒಂದು ದೃಢವಾಗಿ ಕಾಣುವಂತಹುದು, ಕಾಂಪ್ಯಾಕ್ಟ್ SUV ಆಗಿದ್ದು ಈ ವಿವಿಭಾಗದಲ್ಲಿ ಕಠಿಣ ಸ್ಪರ್ಧೆಯನ್ನು ಕೊಟ್ಟು ಬಹಳಷ್ಟು ಬದಲಾವಣೆಗಳನ್ನು ತರಲಾಗಿದೆ. ಅದು ಯಶಸ್ವಿಯಾಗುವುದೇ? ಮುಂದೆ ಓದಿ.

ಬಾಹ್ಯ 

Hyundai Creta Review | 1.6 VTVT and 1.6 CRDi Driven!

ಒಂದು ವಿಚಾರ ಕಂಡಿತವಾಗಿದೆ, ಇದು ನೋಡಲು ಚೆನ್ನಾಗಿದೆ. ಕ್ರೆಟಾ ಈ ವಿಭಾಗದಲ್ಲಿ ಒಂದು ಹೆಚ್ಚು ಚೆನ್ನಾಗಿ ಕಾಣುವ ಕಾರ್ ಎಂಬುದಲ್ಲಿ ಯಾವುದೇ ಸಂಶಯವಿಲ್ಲ. ಹೊರ ನೋಟವು ಒಂದೇ ರೀತಿಯಲ್ಲಿ ಇರುವುದಿಲ್ಲ, ಆದರೂ  ಕಾರ್ ಮೇಲೆ ಇರುವ ಹರಿಯುವ ಗೆರೆಗಳು, ಮೆಚ್ಚುಗೆ ಆಗದೆ ಇರಲಾರದು. ಕ್ರೆಟಾ ವು ಹುಂಡೈ ನ ಫ್ಲ್ಯೂಇಡಿಕ್ ಸ್ಕ್ಯಾಲ್ಪ್ಟರ್ 2.0  ತತ್ವದ ಮೇಲೆ ಮಾಡಲಾಗಿದೆ. ನೋಡಲು ಚೆನ್ನಾಗಿರುವ, ಚೆನ್ನಾಗಿ ವ್ಯಾಖ್ಯಾನಿಸಲಾದ ತೀಕ್ಷ್ಣವಾದ ಗೆರೆಗಳು ಇವೆ.
Hyundai Creta Review | 1.6 VTVT and 1.6 CRDi Driven!

ನಿಮಗೆ ಮೊದಲಿಗೆ ಗಮನಸೆಳೆಯುವಂತಹ ವಿಚಾರ ಎಂದರೆ ಅದು 17” ಇಂಚು ಡೈಮಂಡ್ ಕಟ್ ಅಲೊಯ್  ವೀಲ್ ಗಳು ಟಾಪ್ ಸ್ಪೆಕ್ SX (O) ಆವೃತ್ತಿಯಲ್ಲಿ. ಇದರ ಡಿಸೈನ್ ಮತ್ತು ಫಿನಿಷ್ ನೋಡಲು ಅದ್ಭುತವಾಗಿದೆ, ಮತ್ತು ವೀಲ್ ಸ್ಥಳ ವನ್ನು ಚೆನ್ನಾಗಿ ತುಂಬುತ್ತದೆ. ಡೈಮಂಡ್ ಕಟ್ ವೀಲ್ ಗಳು ತೆಳ್ಳನೆ ಶೇಡ್ ಗಳ  ಮೇಲು ಚೆನ್ನಾಗಿ ಕಾಣುತ್ತವೆ. ಮತ್ತು ಅವಕ್ಕೆ ಉತ್ತಮ ವಿಭಿನ್ನತೆ ಕೊಡುತ್ತದೆ. ಬಹಳಷ್ಟು ಹುಂಡೈ ಗಳಂತೆ ಕ್ರೆಟಾ ದಲ್ಲಿ ತುಲನಾತ್ಮಕವಾಗಿ ಎತ್ತರದ ನಾಡು ಗೆರೆಗಳು ಇವೆ, ಅವು ಟೈಲ್ ಲ್ಯಾಂಪ್ ನ ಸುತ್ತಲೂ ಹರಡಿಕೊಂಡಿದೆ. ಇದರಲ್ಲಿ ಹಿಂದಿನ ವಿಂಡೋ ಗಾಲ ಸ್ಥಳಾವಕಾಶದೊಂದಿಗೆ ಸ್ಪರ್ದಿಸುತ್ತದೆ ಮತ್ತು ವಿಂಡೋ ಲೈನ್ ಅನ್ನು ಬೇಕಾದ್ದಕ್ಕಿಂತ ಹೆಚ್ಚು ಎತ್ತರದಲ್ಲಿ ಇರಿಸಲಾಗಿದೆ ಎಂದು ಅನಿಸುತ್ತದೆ ಬಹಳಷ್ಟು ಜನರಿಗೆ. ಹಿಂಬದಿಯ ವಿಂಡೋ ಬೇಕಾದ್ದಕ್ಕಿಂತ ಸ್ವಲ್ಪ ಕಡಿಮೆ ಅಳತೆ ಹೊಂದಿದೆ ಎಂದೆನಿಸುತ್ತದೆ. ಇದರ ಹೊರತಾಗಿ ಈ ವಿಭಾಗದಲ್ಲಿ  ಸಾಮಾನ್ಯವಾಗಿರುವಂತೆ ಹುಂಡೈ ನಲ್ಲಿ ಎರೆಡು ರೂಫ್ ರೈಲ್ ಗಳನ್ನೂ ಕೊಡಲಾಗಿದೆ , ಅದು ಇಲ್ಲದಿದ್ದರೆ ಚೆನ್ನಾಗಿರುತ್ತಿರಲಿಲ್ಲ. ಆದರೆ ಇದರಿಂದಾಗಿ ಕ್ರೆಟಾ ಗೆ ಹೆಚ್ಚಿನ  mm ಗಳು ಸಿಗುತ್ತದೆ ಹಾಗು ಇದು ಹುಂಡೈ ಒಟ್ಟಾರೆ ಎತ್ತರ ಹೆಚ್ಚು ಇರುವಂತೆ ಮಾಡುತ್ತದೆ.

Hyundai Creta Review | 1.6 VTVT and 1.6 CRDi Driven!

ಇದರ ಮುಂಭಾಗ ಹೆಚ್ಚು ಆಕರ್ಷಕವಾಗಿದೆ, ದೊಡ್ಡ ಪ್ರೊಜೆಕ್ಟರ್ ಲ್ಯಾಂಪ್ ಗಳು ಇದಕ್ಕೆ ಪೂರಕವಾಗಿದೆ. ಇದರಲ್ಲಿ ಉತ್ತಮವಾದ ಡೇ ಟೈಮ್ ರನ್ನಿಂಗ್ ಲೈಟ್ ಗಳು ಇವೆ, ಹೆಡ್ ಲೈಟ್ ನ ಬೇಸ್ ನಲ್ಲಿ ಅಳವಡಿಸಲಾಗಿದೆ. ಕ್ರೆಟಾ ದಲ್ಲಿ ಹುಂಡೈ ನ ಟ್ರೇಡ್ ಮಾರ್ಕ್ ಹೆಕ್ಸಾಗೋನಾಳ್ ಗ್ರಿಲ್ ಅಳವಡಿಸಲಾಗಿದೆ, ಜೊತೆಗೆ ಅಡ್ಡಲಾಗಿರುವ ಕ್ರೋಮ್ ಸ್ಲಾಟ್ ಗಳು ಇವೆ, ಅವು ಬಾನೆಟ್ ನ ಕೊನೆಗಳಲ್ಲಿ ಸರಿಯಾಗಿ ಕೂಡುತ್ತದೆ. ಬಾನೆಟ್ ನಲ್ಲಿ ಅತಿ ಎನಿಸುವಂತಹ ಉಬ್ಬು ತಗ್ಗು ಗಳನ್ನು ಕೊಡಲಾಗಿಲ್ಲ. ಕೆಲವು ಮಂದವಾದ ಗೆರೆಗಳು ಹೆಡ್ ಲ್ಯಾಂಪ್ ನ ಕೊನೆಗಳಿಂದ ಹೊರಬರುತ್ತದೆ. ಸ್ವಲ್ಪ ದೊಡ್ಡದೆನಿಸಬಹುದಾದ ಬಂಪರ್ ನಲ್ಲಿ ಲಂಬವಾಗಿ ಅಳವಡಿಸಲಾದ ಫಾಗ್ ಲ್ಯಾಂಪ್ ಗಳನ್ನೂ 

ಟ್ರೆಪೆಜಾಯಿಡಲ್ ಕ್ಲಸ್ಟರ್ ನಲ್ಲಿ ಇರಿಸಲಾಗಿದೆ.

Hyundai Creta Review | 1.6 VTVT and 1.6 CRDi Driven!

ಹಿಂಬದಿಯು ಎಲ್ಲರಿಗು ಮೆಚ್ಚುವತಹದಾಗಿಲ್ಲದಿರಬಹುದು. ಚೆನ್ನಾಗಿ ಪ್ರಾರಂಭವಾದ ಡಿಸೈನ್ C-ಪಿಲ್ಲರ್ ನಂತರ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ. ಸ್ಪ್ಲಿಟ್ ಟೈಲ್ ಲ್ಯಾಂಪ್ ಗಳು ಕನಿಷ್ಠ ಡಿಸೈನ್ ಮತ್ತು ನೋಟವನ್ನು ಹೊಂದಿದೆ. ಸೂಕ್ಷ್ಮವಾಗಿರುವಂತಹ ಸ್ಪೋಇಲೆರ್ ಚೆನ್ನಾಗಿದೆ. ಮೆಚ್ಚುಗೆಯಾಗದಿರುವ ವಿಚಾರವೆಂದರೆ ನಂಬರ್ ಪ್ಲೇಟ್ ಮೇಲೆ ಇರುವ ಕ್ರೋಮ್ ಸ್ಟ್ರಿಪ್. ಅದು  ಟೈಲ್ ಗೇಟ್ ನ ಮೇಲೆ ಸ್ವಲ್ಪ ಸರಿಯಾಗಿ ಅಳವಡಿಸಲಾಗಿಲ್ಲ ಎಂದೆನಿಸುತ್ತದೆ, ಬಂಪರ್ ಮೇಲೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಮತ್ತು ಹೌದು, ಇದರಲ್ಲಿ  ಕಡ್ಡಾಯವಾದ ಕಪ್ಪು ಕ್ಲಾಡ್ಡಿಂಗ್ ಇದೆ, ಅದು ಕಾರ್ ನ ಕೆಳಭಾಗದ ಅರ್ಧವನ್ನು ಹಲವು ಮಂದವಾದ ಸಿಲ್ವರ್ ಸ್ಕಿಡ್ ಪ್ಲೇಟ್ ಗಳೊಂದಿಗೆ ಹೊಂದಿಕೊಂದಿದೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕೂಡ.
 

Hyundai Creta Review | 1.6 VTVT and 1.6 CRDi Driven!

ಈಗ, ಕ್ರೆಟಾ ನೋಡಲು ರೆನಾಲ್ಟ್ ಡಸ್ಟರ್ ನಷ್ಟು  ದೃಢವಾಗಿ ಇಲ್ಲದಿರಬಹುಡ್, ಆದರೆ ಅದು ಫೋರ್ಡ್ ಏಕೋ ಸ್ಪೋರ್ಟ್ ನಷ್ಟು ಮೃದುವಾಗಿಯೂ ಇಲ್ಲ.  ಕ್ರೆಟಾ  ಒಂದು ಒಮ್ಮೆಗೆ  ಸುಂದರವಾಗಿದೆ ಎಂದು ಹೇಳಬಹುದಾದಂತಹ ಕಾರ್ ಅಲ್ಲ. ಎದ್ದು ಕಾಣುವಹಾಗೆ ಇದೆ ಎಂದು ಖಂಡಿತ ಹೇಳಬಹುದು.ಇದನ್ನು ಪ್ರೀತುಸು ಅಥವಾ ದ್ವೇಷಿಸು ಎಂದು ಹೇಳುವಂತಿದೆ , ನೀವು ಡಿಸೈನ್ ಅನ್ನು ಉದಾಸೀನ ಮಾಡಲಾಗುವುದಿಲ್ಲ. ಇದು ನೋಡಲು ಸಾಂಟಾ Fe ಅನ್ನು ಚಿಕ್ಕದಾಗಿ ಮಾಡಿದ ಹಾಗೆ ಇದೆ, ಆದರೆ ಇದರ ಹೊರತಾಗಿ ಕ್ರೆಟಾ ದಲ್ಲಿ ಅದರದೇ ಆದ ಹೊಗಳಬಲ್ಲದಾದಂತಹ ವಿಶೇಷತೆಗಳು ಇವೆ.

ಆಂತರಿಕಗಳು 

Hyundai Creta Review | 1.6 VTVT and 1.6 CRDi Driven!

ಆಂತರಿಕಗಳಲ್ಲಿ ಹುಂಡೈ ನ  ಸಾಮಾನ್ಯ ಶೈಲಿ ಅಳವಡಿಸಲಾಗಿದೆ. ಆಂತರಿಕಗಳಲ್ಲಿ ಕಪ್ಪು ಬಣ್ಣ ಹೆಚ್ಚಾಗಿದೆ , ಮತ್ತು ಪ್ರೀಮಿಯಂ ಆಗಿ ಕಾಣುವಂತೆ ಮಾಡಲು ಬೀಜ್ ಅನ್ನು ಬಳಸಲಾಗಿದೆ. ನನಗೆ  ಬೀಜ್ ಬಣ್ಣವನ್ನು ಡೋರ್ ಪ್ಯಾಡ್ ನಿಂದ ಡೋರ್ ಪ್ಯಾಡ್ ನ ವರೆಗೆ ಡ್ಯಾಶ್ ಬೋರ್ಡ್ ನ ಮದ್ಯದ ಮುಕಾಂತರ ಹಾಡು ಹೋಗುವುದು ನನಗೆ ಮೆಚ್ಚುಗೆಯಾಯಿತು. ಡ್ಯಾಶ್ ಬೋರ್ಡ್ ನಲ್ಲಿಯೇ ಬಹಳಷ್ಟು ಕಟ್ ಗಳು ಮತ್ತು ಕ್ರೀಸ್ ಗಳನ್ನೂ ಮಾಡಲಾಗಿದೆ. ಆದರೆ, ದೂರಬಹುದಂತಹ ಅಮಾಸ್ಯೆಗಳು ಇಲ್ಲ,ಫಿಟ್ ಮತ್ತು ಫಿನಿಷ್ ವಿಚಾರದಲ್ಲಿ. ಕ್ರೆಟಾ ದ ಇಂಟೀರಿಯರ್ ಅನ್ನು ಪ್ರೀಮಿಯಂ ಎನ್ನಬಹುದು , ವಿಶೇಷವಾಗಿ ಡಸ್ಟರ್ ಜೊತೆಗೆ ಹೋಲಿಸಿದಾಗ. ಮತ್ತು ಅದೇ ರೀತಿ ಬಹಳಷ್ಟು ಹುಂಡೈ ಕಾರ್ ಗಲ್ಲಿ ಇದೆ, ಆಂತರಿಕಗಳನ್ನು ಬಹಳಷ್ಟು ಲೋಡ್ ಮಾಡಲಾಗಿದೆ.

  ನಾವು ಟೆಕ್ ಆನ್ ಆಫರ್ ಗೆ ಹೋಗುವ ಮುಂಚೆ ನಾವು ಹೇಳೋಣ ಕ್ರೆಟಾ ಉಪಯುಕ್ತತೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುತ್ತದೆ ಎಂದು. ಗೇರ್ ಲೀವರ್ ಮತ್ತು  ಹ್ಯಾಂಡ್ ಬ್ರೇಕ್ ಪಕ್ಕ ಇರುವ ಕಪ್ ಹೋಲ್ಡರ್ ಗಳ ಮದ್ಯೆ ಸಾಕಷ್ಟು ಜಾಗ ಇದೆ. ಸೆಂಟ್ರಲ್ ಆರ್ಮ್ ರೆಸ್ಟ್ ನಲ್ಲಿ ಬಹಳಷ್ಟು ಸ್ಟೋರೇಜ್ ಅವಕಾಶ ಇದೆ ಮತ್ತು ಡೋರ್ ಬಿನ್ ಗಳಲ್ಲಿ 1 ಬಾಟಲ್ ಮತ್ತು ಕೆಲವು ಮಡಚಿರುವ ಮ್ಯಾಗಜಿನ್ ಗಳನ್ನು ಇಡಬಹುದು. ಬಹಳಷ್ಟು ಇತರ ಉಪಯುಕ್ತ ಫೀಚರ್ ಗಳನ್ನೂ ಕೊಡಲಾಗಿದೆ,  ಸನ್ ಗ್ಲಾಸ್ ಹೋಲ್ಡರ್ ಮ್ಯಾಪ್ ಲೈಟ್ ಮತ್ತು ಹಿಂಬದಿಯ ಗ್ರಬ್ ಹೋಲ್ಡರ್ ನಲ್ಲಿ ಹುಕ್ ಗಳನ್ನೂ ಕೊಡಲಾಗಿದೆ ನಿಮ್ಮ ಕೋಟ್ ಅನ್ನು ನೇತು ಹಾಕಲು. ಹಿಂಬದಿಯಲ್ಲಿ ಆರ್ಮ್ ರೆಸ್ಟ್ ಜೊತೆ ಕಪ್ ಹೋಲ್ಡರ್ ಕೊಡಲಾಗಿದೆ , ಅದು ಎಲ್ಲ ಟ್ರಿಮ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಬೇಸ್ ವೇರಿಯೆಂಟ್ ಬಿಟ್ಟು. 60:40  ಸ್ಪ್ಲಿಟ್ ಸೀಟ್ ಹುಂಡೈ ನ ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ.

Hyundai Creta Review | 1.6 VTVT and 1.6 CRDi Driven!

ಸೆಂಟರ್ ಕನ್ಸೋಲ್ ನ ಮದ್ಯದಲ್ಲಿ ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಮ್ ಜೊತೆಗೆ ನೇವಿಗೇಶನ್ ಕೊಡಲಾಗಿದೆ ಟಾಪ್ ಸ್ಪೆಕ್ ಕ್ರೆಟಾ ದಲ್ಲಿ. ಟಚ್ ಸ್ಕ್ರೀನ್ ಯೂನಿಟ್ ಅನ್ನು 6 ಸ್ಪೀಕರ್ ಗಳಿಗೆ ಅಳವಡಿಸಲಾಗಿದೆ  (2 ಮುಂಬದಿಯಲ್ಲಿರುವ ಟ್ವಿಟರ್ ಸೇರಿ). ಬೇಸ್ ಕ್ರೆಟಾ ದಲ್ಲಿ ಸ್ಟ್ಯಾಂಡರ್ಡ್ 2DIN ಮ್ಯೂಸಿಕ್ ಸಿಸ್ಟಮ್, ಜೊತೆಗೆ CD, USB, ಮತ್ತು  AUX ಆಯ್ಕೆ ಕೊಡಲಾಗಿದೆ. ಬೇಸ್ ಟ್ರಿಮ್ ನಲ್ಲಿ ಬ್ಲೂಟೂತ್ ಕೊಡಲಾಗಿಲ್ಲ, ಟಾಪ್ ಸ್ಪೆಕ್ SX (O) ವೇರಿಯೆಂಟ್ ನಲ್ಲಿ CD ಪ್ಲೇಯರ್ ಮಿಸ್ ಆಗಿದೆ. ಟಚ್  ಸ್ಕ್ರೀನ್ ಇನ್ಪುಟ್ ಗಳಿಗೆ ಚೆನ್ನಾಗಿ ಪ್ರತಿಕ್ರಿಯಿಸುತ್ತದೆ ಮತ್ತು ನಿಮಗೆ ಸಮಸ್ಯೆ ಕೊಡುವುದಿಲ್ಲ, ನೀವು ಅಂದುಕೊಂಡಂತೆ, ಆದರೆ XUV5OO  ಮಲ್ಲಿರುವುದು ಹಾಗೆ ಮಾಡುತ್ತದೆ. ಅದು ಉಪಯೋಗಿಸಲು ಸೂಕ್ಷ್ಮವಾಗಿದೆ, ಮತ್ತು ಇದನ್ನು ಉಪಯೋಗಿಸಲು ಹೆಚ್ಚು ಬುದ್ದಿವಂತಿಕೆ ಪ್ರದರ್ಶಿಸಬೇಕಾಗಿಲ್ಲ.

Hyundai Creta Review | 1.6 VTVT and 1.6 CRDi Driven!

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಅಥವಾ FATC( ಫುಲ್ಲಿ ಆಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್) ಹುಂಡೈ ಹೇಳುವಂತೆ ಉಪಯೋಹಿಸಲು ಸುಲಭವಾಗಿದೆ, ಸ್ಪಷ್ಟವಾಗಿ ಕಾಣುತ್ತದೆ ಮತ್ತು ಪರಿಣಾಮಕಾರಿಯಾಗಿದೆ ಎಂದು ಮತ್ತೆ ಹೇಳಬೇಕಾಗಿಲ್ಲ. ನಾವು ಏರ್ ಕಾನ್ ನ ಕಾರ್ಯದಕ್ಷತೆಯನ್ನು ಹೊರಗಿನ ತಾಪಮಾನ 40 ಇರುವಾಗ ಪರೀಕ್ಷಿಸಿದೆವು . ಕ್ಯಾಬಿನ್ ಆದಷ್ಟು ಬೇಗನೆ ತಂಪಾಗುತ್ತದೆ.
 

Hyundai Creta Review | 1.6 VTVT and 1.6 CRDi Driven!

ರೇರ್ ಏರ್ ಕಂಡೀಷನಿಂಗ್ ಎಲ್ಲ  ವೇರಿಯೆಂಟ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿದೆ ಮತ್ತು ಹೋಲಿಕೆಯಲ್ಲಿ ದೊಡ್ಡದಾದ ಕ್ಯಾಬಿನ್ ಉಳ್ಳ ಕ್ರೆಟಾ ದಲ್ಲಿ ಚೆನ್ನಾಗಿ ತಂಪಾದ ವಾತಾವರಣ ಉಂಟಾಗುವಂತೆ ಮಾಡುತ್ತ್ತದೆ. ಲಂಬಾಕಾರದಲ್ಲಿರುವ ಸ್ಟಾಕ್ಕ್ದ್ ಸೆಂಟ್ರಲ್ AC ವೆಂಟ್ ಗಳು ಹುಂಡೈ ನಿಂದ ನಿರಿಕ್ಷಿಸಿರಲಿಲ್ಲ. ಸ್ಕ್ರೀನ್ ನ ಬಲಭಾಗದಲ್ಲಿರುವ ವೆಂಟ್ ಸ್ಟಿಯರಿಂಗ್ ವೀಲ್ ಅನ್ನು ತಂಪಾಗಿರಿಸುವಲ್ಲಿ ಮಾತ್ರ ಯೆಶಸ್ವಿಯಾಗಿದೆ. ಏರ್ ಫ್ಲೋ ವನ್ನು ಸ್ಟಿಯರಿಂಗ್ ನಿಂದ ಮುಂದುವರೆಸಿ ಡ್ರೈವರ್ ಗೆ ತಲುಪುವಂತೆ ಮಾಡಲು ಕಷ್ಟವಾಗಬಹುದು. ಇದರಲ್ಲಿ ಮೂಡ್ ಚೇಂಜ್ ಬಾರ್ ಸಹ ಇದೆ , ಇದು ಒಂದು ಬೆಳಕಿನ ಪಟ್ಟಿಯಾಗಿದ್ದು ಏರ್ ಕಾನ್ ಕಂಟ್ರೋಲ್ ಮೇಲೆ ಕೂಡುತ್ತದೆ ಮತ್ತು ನೀವು ತಾಪಮಾನವನ್ನು ಹೆಚ್ಚಿಸಿದಂತೆ ಅಥವಾ ತಗ್ಗಿಸಿದಂತೆ ಬಣ್ಣ ಬದಲಾವಣೆ ಆಗುತ್ತದೆ. .

 Hyundai Creta Review | 1.6 VTVT and 1.6 CRDi Driven!

ಕ್ರೆಟಾ ದ ಸೀಟ್ ಗಳಲ್ಲಿ ಮೇಲ್ಪದರಗಳು ಲೆಥರ್ರೆಟ್ಟಿ ಅಥವಾ ಫ್ಯಾಬ್ರಿಕ್ ನಿಂದ ಮಾಡಲ್ಪಟ್ಟಿರುತ್ತದೆ, ನೀವು ಆಯ್ಕೆ ಮಾಡುವ ವೇರಿಯೆಂಟ್ ಗೆ ಅನುಗುಣವಾಗಿ. ಇದರಲ್ಲಿ ಬಳಸಲಾಗಿರುವ ಲೆಥರ್ ಹೆಚ್ಚು ದುಬಾರಿ ಆಗಿರುವ ಎಲಾನ್ತ್ರ ದಂತೆ ಶ್ರೀಮಂತವಾಗಿ ಕಾಣುತ್ತದೆ. ಇದೆ ತರಹದ ವಸ್ತುಗಳು ಡೋರ್ ಪ್ಯಾಡ್ ಮತ್ತು ಆರ್ಮ್ ರೆಸ್ಟ್ ಗಳ ಮೇಲೂ ಕೊಡಲಾಗಿದೆ. ಮುಂದಿನ ಸೀಟ್ ಗಳು ರಲು ಚೆನ್ನಾಗಿದೆ. ನನಗೆ ನಿಜವಾಗಿಯೂ  ಮುಂದಿನ ಸೀಟ್ ಬಗ್ಗೆ ಯಾವುದೇ ಸಮಸ್ಯೆ ಕಾಣಲಿಲ್ಲ, ನನ್ನ 6 ಎತ್ತರದ ದೇಹಕ್ಕೆ ಸರಿಸಮನಾಗಿ ಇತ್ತು. ಹೆಡ್ ರೂಮ್ ವಿಶಾಲವಾಗಿದೆ, ಸೀಟ್  ಗಳನ್ನು ಬಹಳಷ್ಟು ಸರಿಸಬಹುದು ನಿಮಗೆ ಅನುಕೂಲವಾಗುವಂತಹ ಸ್ಥಿತಿಯಲ್ಲಿ ಕುಳಿತುಕೊಳ್ಳಲು ಅಣುವಾಗುವಂತೆ. ನಾನು ಯಾವುದಾದರು ಹಿನ್ನಡತೆ ಹೇಳಲೇಬೇಕೆಂದರೆ ಅದು ಶೌಲ್ಡರ್ ರೂಮ್ ನ ವಿಶಾಲತೆ ಸಾಮಾನ್ಯವಾಗಿದೆ ಎನ್ನಬಹುದು. 

ಸೀಟ್ ಗಳು ಹೆಚ್ಚು ಆರಾಮದಾಯಕವಾಗಿರುವ ಶ್ರೇಣಿಯಲ್ಲಿ ಒಂದು ಆಗಿದೆ ಮತ್ತು ಕುಳಿತಲ್ಲಿನಿಂದ ನೋಟವು ಚೆನ್ನಾಗಿದೆ. ಡ್ರೈವರ್ ಗೆ ಸ್ಟಿಯರಿಂಗ್ ವೀಲ್ ಫ್ಯಾಕ್ಸ್  ಲೆಥರ್ ಈ ಯೂನಿಟ್ ಎಲೈಟ್ i20 ನಲ್ಲಿರುವಂತೆಯೇ ಇದೆ. ಬೇಸ್ ಟ್ರಿಮ್ ಹೊರತು ಪಡಿಸಿ ಎಲ್ಲ ವೇರಿಯೆಂಟ್ ಗಳಲ್ಲಿ ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಮತ್ತು ಕಾಲ್ ಕಂಟ್ರೋಲ್ ಗಳು ಪಡೆದಿವೆ. ಸ್ಟಿಯರಿಂಗ್ ಹಗುರವಾಗಿದ್ದು ಸೂಕ್ಷ್ಮವಾಗಿದೆ ಮತ್ತು ಅದರಲ್ಲೂ ಸೂಕ್ಶ್ಮತೆಯೇ ಹೆಚ್ಚು ಆಗಿದೆ.

Hyundai Creta Review | 1.6 VTVT and 1.6 CRDi Driven!

 ಕ್ರೆಟಾ ದಲ್ಲಿನ ಹಿಂಬದಿಯ ಸೀಟ್ ನಲ್ಲಿ ಕುಳಿತುಕೊಳ್ಳುವವರಿಗೆ ಕ್ಲಾಸ್ಟ್ರೋಫೋಬಿಕ್ ಅನುಭವ ಆಗಬಹುದು. ಎತ್ತರದ ವಿಂಡೋ ಲೈನ್, ಜೊತೆಗೆ ದಟ್ಟವಾದ ಆಂತರಿಕಗಳು, ಕ್ಯಾಬಿನ್ ಹೆಚ್ಚು ವಿಶಾಲತೆ ಹೊಂದಿರುವಂತೆ ಕಾಣುವಂತೆ ಮಾಡುವುದಿಲ್ಲ. ವಿಶಾಲತೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದರೂ ಹಿಂಬದಿಯ ಸೀಟ್ ಗಳು ಹೆಚ್ಚು ಮೆತ್ತಗಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತದೆ. ಸೀಟ್ ಆರಾಮದಾಯಕವಾದ ಕೋನದಲ್ಲಿ ಇರುತ್ತದೆ, ಮತ್ತು ಸೆಂಟ್ರಲ್ ಆರ್ಮ್ ರೆಸ್ಟ್ ಜೊತೆಗೆ ಕಪ್ ಹೋಲ್ಡರ್ ಗಳನ್ನೂ ಸಹ ಪಡೆಯುತ್ತದೆ. ದೂರದ ಪ್ರಯಾಣಗಳಲ್ಲಿ, ಕೆಳಹಂತದ ಬೆನ್ನು ಮೂಳೆಗಳಿಗೆ ಸ್ವಲ್ಪ ಕಷ್ಟವಾಗಬಹುದು, ಆದರೆ ಹೇಳಿಕೊಳ್ಳುವಂತಹ ಸಮಸ್ಯೆಗಳು ಇಲ್ಲ.  
 

Hyundai Creta Review | 1.6 VTVT and 1.6 CRDi Driven!

ಬೂಟ್ ಸ್ಪೇಸ್ 402ಲೀಟರ್ ಇದ್ದು  ಸಾಕ್ಷ್ಟು ಇದೆ . ಲೋಡಿಂಗ್ ಏರಿಯಾ ವಿಶಾಲವಾಗದ್ದು ಚಪ್ಪಟೆಯಾಗಿದೆ, ಮತ್ತು ನೆಲದ ಮಟ್ಟದಿಂದ ಅತಿ ಎತ್ತರದಲ್ಲಿ ಇಲ್ಲ. ವೀಕ್ ಎಂಡ್ ನ ಟ್ರಿಪ್ ನಲ್ಲಿನ ಲಗೇಜ್ ಲೋಡ್ ಮಾಡಲು ಯಾವುದೇ ಸಮಸ್ಯೆ ಆಗುವುದಿಲ್ಲ. 

ಕ್ರೆಟಾ ದಲ್ಲಿ ಹುಂಡೈ ನ ಕೆಲವು ಟ್ರೇಡ್ ಮಾರ್ಕ್ ಫೀಚರ್ ಗಳನ್ನೂ ಮಿಸ್ ಮಾಡಲಾಗಿದೆ , ಅವೆಂದರೆ ತಂಪಾದ ಗ್ಲೋವ್ ಬಾಕ್ಸ್, ಆಟೋ ಹೆಡ್ ಲ್ಯಾಂಪ್ ಗಳು, ಮತ್ತು ಆಟೋ ವೈಪರ್ ಗಳು ಸಹ ಇದೆ. ಟಾಪ್ ಸ್ಪೆಕ್ ಪೆಟ್ರೋಲ್ ನಲ್ಲಿ ಬೆಲೆ ಕಡಿತ ಹೆಚ್ಚಾಗಿದೆ, ಅದರಲ್ಲಿ ಗೇರ್ ಕ್ನೋಬ್ ಅನ್ನು ಹುಂಡೈ ಗ್ರಾಂಡ್ i10  ನಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಬಹುದು ಮತ್ತು ಸ್ಟಿಯರಿಂಗ್ ವೀಲ್ ಹೆಚ್ಚಾಗಿ ಪ್ಲಾಸ್ಟಿಕ್ ಹೊಂದಿರುವಂತೆ ಅನುಭವವಾಗುತ್ತದೆ ಕೂಡ. ಹಾಗು, ಫೀಚರ್ ಗಳಾದ ಸೂಪರ್ವಿಷನ್ ಕ್ಲಸ್ಟರ್ (ಹುಂಡೈ ನಲಿ ಡ್ರೈವರ್ ಇನ್ಫೋ/MID ಇದೆ) ಅನ್ನು ಟಾಪ್ ಸ್ಪೆಕ್ ಕ್ರೆಟಾ ದಲ್ಲಿ ಕೊಡಲಾಗಿಲ್ಲ. ಟಾಪ್ ಸ್ಪೆಕ್ ಡೀಸೆಲ್ ಕ್ರೆಟಾ ನಿಮಗೆ ಯಾವುದನ್ನೂ ಕಡಿಮೆ ಮಾಡಿಲ್ಲವಾದರೂ , ಪೆಟ್ರೋಲ್ ಆವೃತ್ತಿಯಲ್ಲಿ ಸ್ವಲ್ಪ ವಿಷಯಗಳು ಮಿಸ್ ಆಗಬಹುದು. ಮೇಲೆ ಹೇಳಿರುವಂತಹ ಮಿಸ್ ಆಗಿರುವ ವಿಷಯಗಳು ನಿಮಗೆ ಡೀಲ್ ಬ್ರೇಕರ್ ಗಳಾಗಿ ಪರಿಣಮಿಸುವುದಿಲ್ಲ. , ಆದರೆ ಅವು ನೀವು ಸರಿ ಸುಮಾರು 1.5 ಮಿಲಿಯನ್ ಅಷ್ಟು ಖರ್ಚು ಮಾಡುತ್ತಿರುವಾಗ ಮಿಸ್ ಆಗಿದೆ ಎಣಿಸಬಹುದು. ಇವನ್ನು ಬಿಟ್ಟು ಕ್ರೆಟಾ ದಲ್ಲಿ ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲ.

ಡ್ರೈವ್ 

Hyundai Creta Review | 1.6 VTVT and 1.6 CRDi Driven!

ನಾವು ಎಂಜಿನ್ ಆಯ್ಕೆಗಳ ಬಗ್ಗೆ ಮುಂದುವರೆಯುವುದಕ್ಕಿಂತ ಮುಂಚೆ , ಪವರ್ ಔಟ್ ಪುಟ್ ಗಳು, ಮತ್ತು ಇತರ ವಿಷಯಗಳು , ಅಂಕೆ ಸಂಖ್ಯೆ ಗಳನ್ನು ತಿಳಿಯೋಣ - ನಾನು ನಿಜವಾಗಿಯೂ ಕ್ರೆಟಾ ದ ರೈಡ್ ಗುಣಮಟ್ಟದ ಬಗ್ಗೆ ಹೇಳಬಯಸುತ್ತೇನೆ. ಸಸ್ಪೆನ್ಷನ್ ನ ಭೂಮ್ಪ್ ಗಳನ್ನುಮತ್ತು ಪಾಟ್ ಹೋಲ್ ಗಳನ್ನೂ ನಿಭಾಯಿಸುವಿಕೆ ಕ್ರೆಟ್ ದಂತಹ ಕಾರ್ ಗಳಲ್ಲಿ ಯಾವುದೇ ಹಿನ್ನಡತೆ ಪಡೆಯುವುದಿಲ್ಲ.  ಇದು ರೈಡ್ ಗುಣಮಟ್ಟವನ್ನು ಈ ಅಳತೆಯ ಇತರ ವಾಹನಗಳಿಗೆ ಹೋಲಿಸದರೆ ಉತ್ತಮವಾಗಿದೆ. ಬಾಡಿ ರೋಲ್ ಸಹ ನಿಯಂತ್ರಣದಲ್ಲಿದೆ, ಮತ್ತು ಮುಂಭಾಗ ಯಾವುದೇ ಉಬ್ಬುಗಳಿಗೆ ಗರುಡ ಪಕ್ಷಿಯ ಕೊಕ್ಕಿನಂತೆ ತಗಲುವುದಿಲ್ಲ. ಇದು ರಸ್ತೆಯ ವೈಪರೀತ್ಯಕ್ಕೆ ತೀರಾ ಹೊಂದುಕೊಳದಿದ್ದರೂ , ನಿಮಗೆ ಒಟ್ಟಾರೆ ಅಸಮಾಧಾನ ಉಂಟುಮಾಡುವುದಿಲ್ಲ ನೀವು ಇದನ್ನು ಕೊಂಡರೆ.

Hyundai Creta Review | 1.6 VTVT and 1.6 CRDi Driven!

ಸ್ಟಿಯರಿಂಗ್ ನ ಪ್ರತಿಕ್ರಿಯೆ ನಿಜವಾಗಿಯೂ ಚೆನ್ನಾಗಿದೆ. ಇದು ಇತರ  ಮಾರ್ಕೆಟ್ ನಲ್ಲಿರುವ ಯಾವುದೇ ಹುಂಡೈ ಗೆ ಹೋಲಿಸಿದರೆ ಚೆನ್ನಾಗಿದೆ. ಇಡೀ ಈಗಲೂ ಸಹ ಕಡಿಮೆ ವೇಗಗಗಳಲ್ಲಿ ಮೃದುವಾಗಿದೆ ಮತ್ತು ವೇಗಗತಿ ಹೆಚ್ಚಾದಂತೆ ದೃಢತೆ ಹೆಚ್ಚುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಸೂಕ್ಷ್ಮವಾದ ಸ್ಟಿಯರಿಂಗ್ ಮುಂಬೈ ಟ್ರಾಫಿಕ್ ನಲ್ಲಿ ವರದಂತಾಗಿದೆ ಇಲ್ಲಿ ನಾನು ದಿನದ ದಣಿವಿನಿಂದ ಕೆಲಸ ಮುಗಿದ ಮೇಲೆ ಕಷ್ಟ ಪಟ್ಟು ಡ್ರೈವ್ ಮಾಡುವುದನ್ನು ಇಷ್ಟಪಡುವುದಿಲ್ಲ. ಸೂಕ್ಷ್ಮವಾದ ಸ್ಟಿಯರಿಂಗ್ ಕ್ರೆಟಾ ವನ್ನು ಪಾರ್ಕ್ ಮಾಡುವಾಗ ಸಹ ಸಹಾಯಕ್ಕೆ ಬರುತ್ತದೆ. ಚಿಕ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಲು ಮತ್ತು ಹೊರ ತೆಗೆಯಲು ಅಷ್ಟೇನು ಕಷ್ಟಪಡಬೇಕಾಗಿಲ್ಲ. ಹೆಚ್ಚಿನ ವೇಗಗಳಲ್ಲಿ ಸ್ಟಿಯರಿಂಗ್ ಅಷ್ಟೇನು ತೂಕವನ್ನು ಪಡೆಯುವುದಿಲ್ಲ , ನನಗೆ ಇಷ್ಟವಾಗುವಂತೆ. ಒಟ್ಟಾರೆ ನಾವು ಹೇಳಬಹುದು ಹುಂಡೈ ಸ್ಟಿಯರಿಂಗ್ ಪ್ರತಿಕ್ರಿಯೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಮುಖ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು.

ಕ್ರೆಟಾ ಮೂರು ಎಂಜಿನ್ ಆಯ್ಕೆ ಗಳಲ್ಲಿ ಬರುತ್ತದೆ. ಎಲ್ಲ ಎಂಜಿನ್ ಗಳನ್ನೂ ಹುಂಡೈ ವೆರ್ನಾ ಸೆಡಾನ್ ನಿಂದ ತೆಗೆದುಕೊಳ್ಳಲಾಗಿದೆ. ಈಗ ಇರುವತಹುದು  1.6 ಲೀಟರ್ ಪೆಟ್ರೋಲ್ ಮತ್ತು 1.6 ಲೀಟರ್ ಡೀಸೆಲ್ ಹಾಗು ಒಂದು  1.4 ಲೀಟರ್ ಡೀಸೆಲ್. 1.6ಲೀಟರ್ ಡೀಸೆಲ್ ನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಆಗಿ ಸಿಗುತ್ತದೆ, ಆದರೆ ಇತರ ಆವೃತ್ತಿಗಳಲ್ಲಿ 6 - ಸ್ಪೀಡ್ ಗೇರ್ ಬಾಕ್ಸ್ ಮಾತ್ರ ಲಭ್ಯವಿದೆ. ನನಗೆ ಡ್ರೈವ್ ಮಾಡಲು  ಟಾಪ್ ಸ್ಪೆಕ್ 1.6 ಡೀಸೆಲ್ ಮತ್ತು ಪೆಟ್ರೋಲ್ ಗಳು ಸಿಕ್ಕಿದವು. ನಾವು ಡೀಸೆಲ್ ನೊಂದಿಗೆ ಪ್ರಾರಂಭಿಸೋಣ, ಹಾಗೆ ಮಾಡೋಣವೇ?

1.6 CRDi

Hyundai Creta Review | 1.6 VTVT and 1.6 CRDi Driven!

ಪ್ರಾರಂಭದಲ್ಲಿ,  ಡೀಸೆಲ್ ಕ್ರೆಟಾ ದಲ್ಲಿನ NVH ಮಟ್ಟವು ಒಂದು ಉತ್ತಮ ಆಶ್ಚರ್ಯವಾಗಿ ದೊರೆತಿದೆ. ಎಂಜಿನ್ ಕ್ರಾಂಕ್ ಮಡಿದ ನಂತರ  ಇಡ್ಲಿನ್ಗ್ ನಲ್ಲಿ ಸರಿ ಹೊಂದಿಕೊಂಡಿರುತ್ತದೆ  ಮತ್ತು ಸಾಕಷ್ಟು  ಮಟ್ಟಿಗೆ ನಿಶಬ್ದವಾಗಿರುತ್ತದೆ. ನವೀಕರಣದ ಗುಣಮಟ್ಟ ವಿಶೇಷವಾಗಿ ಮೆಚ್ಚುವಂತಿದೆ. ಕಡಿಮೆ NVH ಇರುವುದರಿಂದ ಕ್ರೆಟಾ ಗೆ ಡಸ್ಟರ್ ನಂತಹ ಪ್ರತಿಸ್ಪರ್ದಿಗಳಿಗಿಂತ ಭಿನ್ನವಾಗಿರುತ್ತದೆ, ಅದರ ಡೀಸೆಲ್ ಎಂಜಿನ್ ಶಬ್ದ ಕೆಲವೊಮ್ಮೆ ಅಸಹಿಷ್ಣುತೆ ಉಂಟು ಮಾಡುತ್ತದೆ. ಇದರ ಮೋಟಾರ್ 128PS ಪವರ್ ಅನ್ನು ಮತ್ತು ಉತ್ತಮವಾದ 260Nm ಟಾರ್ಕ್ ಅನ್ನು ಹೊರಸೂಸುತ್ತದೆ.

ವೆರ್ನಾ ದಿಂದ ತರಲಾದ ಮೋಟಾರ್ ಬೇಗನೆ ಕ್ರೆಟಾ ದ ಹೆಚ್ಚಾದ ಬಾರವನ್ನು ಕಾಣದಂತೆ ಮಾಡುತ್ತದೆ, ನೀವು ಬಲಗಾಲನ್ನು ನಿರ್ದಿಷ್ಟವಾಗಿ ಒತ್ತಿದಾಗ. ಇತರ ಬಹಳಷ್ಟು ಹುಂಡೈ ಗಳಂತೆ, ಟರ್ಬೊ ಲ್ಯಾಗ್  1900rpm ತನಕ ಮುಂದುವರೆಯುತ್ತದೆ ಅಲ್ಲಿ ಪವರ್ ನ ಡೆಲಿವೆರಿ ಚೆನ್ನಾಗಿರುತ್ತದೆ. ಹೆಚ್ಚಾದ ಟಾರ್ಕ್ ಸಿಗುವುದರಿಂದ ನಿಮಗೆ ಹೆಚ್ಚು ಕಷ್ಟಪಡದೆ ಒಂದು ಹೆಚ್ಚಿನ ಗೇರ್ ನಲ್ಲಿ ಡ್ರೈವ್ ಮಾಡಲು ಸಹಕರಿಸುತ್ತದೆ. ಕ್ರೆಟಾ ಒಂದು ಸೂಕ್ಷ್ಮವಾಗಿ ಹೆಚ್ಚು ಡೌನ್ ಶಿಫ್ಟ್ ಮಾಡಬೇಕಾಗಿಲ್ಲದೆ ಡ್ರೈವ್ ಮಾಡಬಹುದಾದ ಕಾರ್ ಆಗಿದೆ. ಉದಾಹರಣೆಗೆ, ನೀವು ಸ್ಪೀಡ್ ಬ್ರೇಕರ್ ಗಳ  ಮೇಲೆ ಹಾರುವಂತೆ ಇರುತ್ತದೆ 15km/h ನಲ್ಲಿ  2nd ಗೇರ್ ನಲ್ಲಿ ಸುಲಭವಾಗಿ, ಎಂಜಿನ್ ಹೆಚ್ಚಾಗಿ ಪರಿಶ್ರಮಪಡದೆ. ಹಾಗು, ಕಡಿಮೆ ವೇಗಗಳಲ್ಲಿ ಡೀಸೆಲ್ ಮೋಟಾರ್ ನ ಪವರ್ ಮೆಚ್ಚಬಹುದಾಗದೆ.

ಕ್ಲಚ್ ಚೆನ್ನಾಗಿದೆ ಮತ್ತು ಸೂಕ್ಷ್ಮವಾಗಿದೆ, ಆದರೆ ಉದ್ದನೆಯ ಅಳವಡಿಕೆ ಇದೆ. ಕ್ಲಚ್ ಅನ್ನು ಪುಶ್ ಮಾಡುವುದು ಮತ್ತು ರಿಲೀಸ್ ಮಾಡುವುದು ಅಷ್ಟೇನು ಕಷ್ಟವಾಗುವುದಿಲ್ಲ. ಆದರೆ ಉದ್ದನೆಯ ಅಳವಡಿಕೆ ಬಂಪರ್ ನಿಂದ ಬಂಪರ್ ನ ಟ್ರಾಫಿಕ್ ನಲ್ಲಿ ಸಮಸ್ಯೆ ಆಗಬಹುದು. ಸಿಟಿ ಒಳಗಿನ ಡ್ರೈವ್ ನಲ್ಲಿ ಇದು ನಿಮಗೆ ಇರಿಟೇಟ್ ಮಾಡಬಹುದು, ನಿಮಗೆ ವಾಹನ ದಟ್ಟಣೆಯಲ್ಲಿ ದೊರೆಯಬಹುದಾದ ಚಿಕ್ಕ ಅಂತರಗಳನ್ನು ಉಪಯೋಗಿಸಿಕೊಳ್ಳಲು ಕಷ್ಟವಾಗಬಹುದು. ನೀವು ಡೀಸೆಲ್ ಕ್ರೆಟಾ ಜೊತೆಗೆ ಸಿಟಿ ಲಿಮಿಟ್ ಗಳಲ್ಲಿ ತಾಳ್ಮೆಯಿಂದ ಇರಬೇಕಾಗಬಹುದು.

Hyundai Creta Review | 1.6 VTVT and 1.6 CRDi Driven!

 ಇದು ಹೇಳಿದ ನಂತರ ಹೈ ವೆ ಗಳಲ್ಲಿ ಕ್ರೆಟಾ ಡೀಸೆಲ್ ನಿಜವಾಗಿಯೂ ಹೆಚ್ಚು ಚೆನ್ನಾಗಿ ವರ್ತಿಸುತ್ತದೆ. ಇದು ಮೂರು ಸಂಖ್ಯೆ ಯಾ ವೇಗಗಳನ್ನು ದಿನ ಪೂರ್ತಿ ನಿಭಾಯಿಸಬಹುದು, ಇದು ನಿಜವಾಗಿಯೂ ಹಾಗೆ ಮಾಡುತ್ತದೆ. ಕಾರ್ ಗಳಾದ ಎಲಾನ್ತ್ರ ಮತ್ತು ವೆರ್ನಾ ಗಳು ಕೂಡ ಇಂತಹ ವೇಗಗಳನ್ನು ಪಡೆಯಬಹುದು, ಆದರೆ ಅವು ಡ್ರೈವರ್ ನಲ್ಲಿ ಇಂತಹ ವಿಶ್ವಾಸವನ್ನು ಮೂಡಿಸಿರಲಿಲ್ಲ.  ಆದರೂ ಕ್ರೆಟಾ ದೃಢವಾಗಿದ್ದು ಸ್ವಲ್ಪ ಎಳೆದಂತೆ ಇರುತ್ತದೆ.

1.6 VTVT

ಕ್ರೆಟಾ ಪೆಟ್ರೋಲ್ ನ ಟಾಪ್ ಸ್ಪೆಕ್ ವೇರಿಯೆಂಟ್ SX+ ಆಗಿದೆ. ಇನ್ನು ಪರಿಗಣಿಸಿರದವರಿಗೆ, ಇದು ಒಂದು ಟ್ರಿಮ್ ಕೆಳಗೆ ಇದೆ ಟಾಪ್ ಸ್ಪೆಕ್ SX (O) ಡೀಸೆಲ್ ಕ್ರೆಟಾ ಗೆ ಹೋಲಿಸಿದರೆ. ಆರಾಮದಾಯಕಗಳಲ್ಲಿ ಬಹಳಷ್ಟು ಬಿಡಲಾಗಿದ್ದರೂ ಸಹ , ಸಸ್ಪೆನ್ಷನ್ ಗುಣಮಟ್ಟ್ಟ ಡೀಸೆಲ್ ನಂತೆಯೇ ಇದೆ. ಹಾಗಾಗಿ, ನಾವು ಬಾನೆಟ್ ಒಳಗಡೆ ಇರುವುದರ ಬಗ್ಗೆ ಹೆಚ್ಚು ಗಮನ ಹರಿಸೋಣ.

1.6 ಲೀಟರ್ ಪಟ್ರೋಲ್ 123PS  ಪವರ್ ಹಾಗು 151Nm ಟಾರ್ಕ್ ಅನ್ನು ಬಿಡುಗಡೆ ಮಾಡುತ್ತದೆ. ಆದರೆ, ಹೆಚ್ಚಿನ ಪವರ್ ಹೆಚ್ಚಿನ ವೇಗಗತಿ ವ್ಯಾಪ್ತಿಯಲ್ಲಿ ದೊರೆಯುತ್ತದೆ. ನಿಮಗೆ ಬೇಕಾಗಿರುವ ಪವರ್ ಅಣು ಪಡೆಯಲು ಸಾದಾರಣವಾಗಿ ಒಂದು ಗೇರ್ ಕಡಿಮೆಯಲ್ಲಿಯೇ ಹೆಚ್ಚು ಪ್ರಯತ್ನಿಸಬೇಕಾಗುತ್ತದೆ. ಇದರ ಎಂಜಿನ್ ಸ್ವಲ್ಪ ಎಳೆದಂತೆ ಭಾಸವಾಗುತ್ತದೆ. ಇದು 1500rpm ಗಿಂತಲೂ ಕಡಿಮೆಯಲ್ಲಿ ಕಷ್ಟಪಡುತ್ತದೆ , ಮತ್ತು ನೀವು ಆಗಾಗ ಬಲಗಾಲನ್ನು ಹೆಚ್ಚು ಒತ್ತಬೇಕಾಗುತ್ತದೆ. ಒವೆರ್ಟಾಕ್ ಮಾಡಲು ಇಚ್ಛಿಸಿದರೆ ಎಂಜಿನ್ ಹೆಚ್ಚು ವೇಗವಾಗಿಇರಬೇಕಾದರೆ ಮಾತ್ರ ಪ್ರಯತ್ನ ಪಡಬಹುದು , ಅದರಲ್ಲೂ ಒಂದು ಅಥವಾ ಎರೆಡು ಗೇರ್ ಕೆಳಕ್ಕೆ ಮಾಡಿದ ನಂತರ. ನಿಮ್ಮ ಲೇನ್ ಅನ್ನು ಬಿಟ್ಟು ನಂತರ ಬಲಗಾಲನ್ನು ಹೆಚ್ಚು ಒತ್ತುವುದು ನಿಮಗೆ ಸರಿಬರುವುದಿಲ್ಲ. ಹೆಚ್ಚು ವೇಗಗಗಳಲ್ಲಿ ಎಂಜಿನ್ ನ ಶಬ್ದ ಕ್ಯಾಬಿನ್ ಒಳಗೆ ನುಸುಳುವುದುಂಟು , ವಿಶೇಷವಾಗಿ 3500 rpm ಮೇಲೆ. ಬಾನೆಟ್ ಒಳಗಡೆ ನಿರೋಧಕಗಳು  ಕಡಿಮೆ ಇರುವುದರಿಂದ ಹೀಗೆ ಆಗಿದೆ ಎಂದು ಹೇಳಬಹುದು. ಆದರೆ, ಈ ಶಬ್ದ ಬಹಳಷ್ಟು ಚೆನ್ನಾಗಿದ್ದು ಕೆಲವೊಮ್ಮೆ ಆನಂದವುಂಟುಮಾಡುತ್ತದೆ ಕೂಡ. ಇದನ್ನು ಬಿಟ್ಟು , ಕ್ರೆಟಾ ಪೆಟ್ರೋಲ್ ಅತಿ ಉತ್ತಮ ಎಂದು ಹೇಳಲಾಗುವುದಿಲ್ಲ, ಮೈಲೇಜ್ ವಿಚಾರಕ್ಕೆ ಬಂದಾಗ. ಇದು ನಮಗೆ 11 km/l ಕೊಟ್ಟಿತು ಟೆಸ್ಟ್ ಮಾಡುವಾಗ. ಹುಂಡೈ ನ ಅಧಿರುತವಾಗಿ ಹೇಳಲ್ಪಟ್ಟ ಮೈಲೇಜ್ ಅನ್ನು ಹೈವೇ ಗಳಲ್ಲಿ ಪಡೆಯಬಹುದು.

ಸುರಕ್ಷತೆ 

Hyundai Creta Review | 1.6 VTVT and 1.6 CRDi Driven!

ಇದರಲ್ಲಿ ಬಹಳಷ್ಟು ಸುರಕ್ಷತೆ ಫೀಚರ್ ಗಳನ್ನು ಕೊಡಲಾಗಿದೆ  ಟಾಪ್ ಸ್ಪೆಕ್ SX(O) ನಲ್ಲಿ ಆಂಟಿ ಲಾಕ್ ಬ್ರೇಕ್ ಗಳು ಇದೆ, ಆರು ಏರ್ಬ್ಯಾಗ್ ಗಳು, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್  (VSM) ಮತ್ತು ಹಿಲ್ ಸ್ಟಾರ್ಟ್ ಅಸ್ಸಿಟ್ ಗಳು ಸಹ ಕೊಡಲಾಗಿದೆ. ಇವೆಲ್ಲವೂ ಡಿಸೇಲ್ ಕ್ರೆಟಾ ಗ್ರಾಹಕರಿಗೆ ಉತ್ಸಾಹ ಉಂಟುಮಾಡುವಂತಿದೆ, ಆದರೆ ಪೆಟ್ರೋಲ್ ಕ್ರೆಟಾ ಕೊಳ್ಳಬಯಸುವ ಗ್ರಾಹಕರಿಗೆ ಇವನ್ನು ಕಡಿತ ಗೊಳಿಸಲಾಗಿದೆ, ಇದನ್ನು ಮಲತಾಯಿ ದೋರಣೆ ಎಂದು ಹೇಳಬಹುದು. ಇದರಲ್ಲಿ ಡ್ರೈವರ್ ಸಹಾಯಕಗಳು ಮಿಸ್ ಆಗಿರುವುದಲ್ಲದೆ, ಕೇವಲ ಡ್ರೈವರ್ ಮತ್ತು ಪ್ಯಾಸೆಂಜರ್ ಏರ್ಬ್ಯಾಗ್ ಗಳೊಂದಿಗೆ ನಿಭಾಯಿಸಬೇಕಾಗುತ್ತದೆ. ಪೆಟ್ರೋಲ್ SX (O) ವನ್ನು ಎಲ್ಲ ಫೀಚರ್ ಗಳೊಂದಿಗೆ ಕೊಡಬೇಕಾಗಿತ್ತು ಎಂದೆನಿಸುತ್ತದೆ.

ಒಟ್ಟಾರೆ , ನೀವು ಡ್ರೈವ್ ಮಾಡಿದಾಗ ಕ್ರೆಟಾ ನಿಮಗೆ ನಿರಾಸೆ ಉಂಟುಮಾಡುವುದಿಲ್ಲ. ಇದು ನಿಮಗೆ ನಗರಗಳಲ್ಲಿ ತಿರುಗಾಡಲು ಮತ್ತು ಆಗಾಗ್ಗೆ ಇತರ ರಾಜ್ಯಗಳಿಗೆ ಪ್ರಯಾಣ ಮಾಡಲು ಉತ್ತಮಮವಾಗಿದೆ. ಸಸ್ಪೆನ್ಷನ್ ಸೆಟ್ ಅಪ್ ನಲ್ಲಿ ಸಹ ರೈಡ್ ಗುಣಮಟ್ಟ ಯೂರೋಪಿಯನ್ ಗುಣಮಟ್ಟದ ಹಾಗೆ ಇದೆ ಮತ್ತು ಅದು ಒಂದು ಉತ್ತಮ ಸ್ವಾಗತಾರ್ಹ ವಿಷಯವಾಗಿದೆ. ನಮಗೆ ಸ್ಟಿಯರಿಂಗ್ ಪ್ರತಿಕ್ರಿಯೆ ಇನ್ನಷ್ಟು ಚೆನ್ನಾಗಿದ್ದರೆ ಒಳಿತಾಗಿರುತ್ತಿತ್ತು ಎಂದೆನಿಸುತ್ತದೆ, ಆದರೆ ಹುಂಡೈ ನವರ ಪ್ರಯತ್ನಕ್ಕೆ ಪೂರ್ಣ ಅಂಕಗಳನ್ನು  ಕೊಡುತೇವೆ.

ಅಂತಿಮ ಅನಿಸಿಕೆ 

Hyundai Creta Review | 1.6 VTVT and 1.6 CRDi Driven!

ನವ್ವು ಯಾವುದನ್ನೂ ಕೊಳ್ಳಬೇಕು? ನೀವು ಹೊಸ ಕ್ರೆಟಾ ವನ್ನು ಆಗಾಗ್ಗೆ ಉಪಯೋಗಿಸಬಯಸಿದಲ್ಲಿ, ಹೆಚ್ಚಾಗಿ ಉಪಯೋಗಿಸದಿದ್ದಲ್ಲಿ, ನಾವು ಪೆಟ್ರೋಲ್ ನೋಡಲು ಹೇಳುತ್ತೇವೆ. ಅದು ಚೆನ್ನಾಗಿರುವ ಕಾಂಪ್ಯಾಕ್ಟ್ SUV ಆಗಿದೆ ನಗರದಲ್ಲಿನ ಉಪಯೋಗಕ್ಕೆ. ನಿಮ್ಮ ಒಟ್ಟಾರೆ ಉಪಯೋಗ ಹೆಚ್ಚು ಆಗಿದ್ದಲ್ಲಿ , ಇತರ ನಗರಗಳಿಗೆ ಪ್ರಯಾಣ ಸೇರಿ, ಡೀಸೆಲ್ AT ಯನ್ನು ಕೊಳ್ಳಲು ಹೇಳುತ್ತೇವೆ. ಆದರೆ, ನಮ್ಮ ಅತಿ ಮೆಚ್ಚಿನ ಆಯ್ಕೆ ಕ್ರೆಟಾ ದ ಡೀಸೆಲ್  MT  ಹೊಂದಿರುವ SX(O) ಆಗಿದೆ. 

ಹುಂಡೈ ನವರು ಏನು ಮಾಡಿದ್ದಾರೆ ಅದನ್ನು ಮೆಚ್ಚಬಹುದು. ಎಲ್ಲ ಉಪಯೋಗಕ್ಕೆ ಮತ್ತು ಎಲ್ಲ ಅಳತೆಯೇ ವಾಲೆಟ್ ಗಳಿಗೆ ಸೂಕ್ತವಾಗಿವಂತಹ ಕ್ರೆಟಾ ಸಿಗುತ್ತದೆ. ನಾವು ಪ್ರಾರಂಭದಲ್ಲಿ ಹೇಳಿದಂತಹ ಪ್ರಶ್ನೆಗೆ ಹಿಂದಿರುಗೋಣ, ಇದು ಈ ವಿಭಾಗದ ನಿಯಮಗಳನ್ನು ಬದಲಿಸಬಲ್ಲದೆ ಮತ್ತು ಈ ವಿಭಾಗಕ್ಕೆ ಉತ್ತಮ ತಿರುವು ಕೊಡಲು ಯಶಸ್ವಿಯಾಗಬಲ್ಲದೇ? ಹುಂಡೈ ನವರು ಇಲ್ಲಿರುವ ಬೇಡಿಕೆಗಳನ್ನು ಪೂರೈಸಲು ಎಕ್ಸ್ಪೋರ್ಟ್ ಕಾರ್ಯಾಚರಣೆಯನ್ನು ಸ್ಟಾಗಿಸಗೊಳಿಸಬೇಕಾಗಿಬಂತು. ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಕಾಯಬೇಕಾದ ಸಮಯ ತಿಂಗಳುಗಳವರೆಗೆ ಮುಂದುವರೆಯಬಹುದು. ಕ್ರೆಟಾ ವು ಖಂಡಿತವಾಗಿಯೂ ಈ ವಿಭಾಗದಲ್ಲಿ ಬಹಳಷ್ಟು ಗುಲ್ಲೆಬ್ಬಿಸಿದೆ.

Published by
arun

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ವೋಲ್ವೋ XC90 2025
    ವೋಲ್ವೋ XC90 2025
    Rs.1.05 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience